in

ದೇಹಕ್ಕೆ ತಂಪಾದ ಬಾಯಿಗೆ ರುಚಿಯಾದ ಕುಚ್ಚಲಕ್ಕಿ

ಈ ಅಕ್ಕಿಯನ್ನು ಕುಸುಬಲಕ್ಕಿ/ಕುಚ್ಚಲಕ್ಕಿ/ರೆಡ್ ರೈಸ್/ಇಂತಹ ಹಲವು ಹೆಸರುಗಳಲ್ಲಿ ಕರೆಯುತ್ತಾರೆ. ಮಾರುಕಟ್ಟೆಯಲ್ಲಿ ವಿವಿಧ ತಳಿಯ ಅಕ್ಕಿಗಳು ಸಿಗುತ್ತವೆ. ನೋಡಲು ಬಹು ಸುಂದರವಾಗಿರುತ್ತದೆ. ವಿವಿಧ ಬಗೆಯ ಅಡುಗೆಗಳನ್ನು ಮಾಡಿ ತಿನ್ನಬಹುದು. ಕುಚ್ಚಲಕ್ಕಿ ಬಾಯಿಗೂ ರುಚಿ ದೇಹಕ್ಕೂ ತಂಪು, ಆರೋಗ್ಯಕ್ಕೂ ಉತ್ತಮ. ಪಲ್ಯ ಸಾಂಬಾರ್ ಏನೂ ಬೇಡ ಕುಚ್ಚಲಕ್ಕಿ ಗಂಜಿ ಜೊತೆಗೆ ಅನ್ನ ತಿನ್ನಲೆಬಾರದು ಅನ್ನೋ ಕಾಲ ಇದು. ಆದರೆ ನಮಗೆ ಅನ್ನ ತಿಂದರೇನೆ ತೃಪ್ತಿ. ಹಾಗಾದರೆ ಕುಚ್ಚಲಕ್ಕಿ ಉಪಯೋಗ ಏನು ತಿಳಿಯೋಣ.

ದೇಹಕ್ಕೆ ತಂಪಾದ ಬಾಯಿಗೆ ರುಚಿಯಾದ ಕುಚ್ಚಲಕ್ಕಿ

ಕುಚ್ಚಲಕ್ಕಿಯಲ್ಲಿರುವ ಪೌಷ್ಟಿಕಾಂಶಗಳು ಒಂದಾ ಎರಡಾ? ದೇಹಕ್ಕೆ ಅತ್ಯಗತ್ಯವಾದ ಖನಿಜಾಂಶಗಳಾದ ಮ್ಯಾಂಗನೀಸ್, ಐರನ್, ಝಿಂಕ್, ಫಾಸ್ಫರಸ್, ಕ್ಯಾಲ್ಸಿಯಂ, ಸೆಲೆನಿಯಮ್, ಮೆಗ್ನೇಷಿಯಂ ಹಾಗೂ ಪೊಟ್ಯಾಷಿಂ ಇದರಲ್ಲಿವೆ. ವಿಟಮಿನ್ ಬಿ1, ಬಿ2, ಬಿ3, ಬಿ6, ವಿಟಮಿನ್ ಇ, ವಿಟಮಿನ್ ಕೆ ಕೂಡ ಕುಚ್ಚಲಕ್ಕಿಯಲ್ಲಿವೆ. ಇದು ಪ್ರೋಟೀನ್, ಫೈಬರ್ ಹಾಗೂ ಫ್ಯಾಟಿ ಆಸಿಡ್‍ಗಳ ಆಗರವೂ ಆಗಿದೆ.

ಪಳ ಪಳನೆ ಹೊಳೆಯುವ ಮುಖ ಎಲ್ಲರಿಗೂ ಇಷ್ಟವಾಗುತ್ತದೆ. ಕುಚ್ಚಲಕ್ಕಿಯಲ್ಲಿರುವ ಸೆಲೆನಿಯಮ್ ಚರ್ಮದ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮುಖ ಕಾಂತಿಯುತವಾಗಲು ಕುಚ್ಚಲಕ್ಕಿಯಿಂದ ಫೇಸ್ ಪ್ಯಾಕ್ ಸಿದ್ಧಪಡಿಸಬೇಕು. ಇದಕ್ಕೆ 2 ಚಮಚ ಕುಚ್ಚಲಕ್ಕಿ ಮತ್ತು ಒಂದು ಚಮಚ ಮೊಸರು ಬೇಕಾಗುತ್ತದೆ. ಮೊದಲು ಅಕ್ಕಿಯನ್ನು ನುಣ್ಣಗೆ ರುಬ್ಬಿಕೊಳ್ಳಿ. ಇದಕ್ಕೆ ಮೊಸರನ್ನು ಮಿಶ್ರಣ ಮಾಡಿ. ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿ. ಸುಮಾರು 10 ನಿಮಿಷಗಳ ಕಾಲ ಬಿಡಿ. ನಂತರ ತಣ್ಣೀರಿನಿಂದ ತೊಳೆಯಿರಿ. ಇದನ್ನು ವಾರಕ್ಕೆ ಎರಡು ಬಾರಿ ಮಾಡಬಹುದು.

ಒಂದು ಕಪ್ ಕುಚ್ಚಲಕ್ಕಿಯಲ್ಲಿ ನಮ್ಮ ದೇಹಕ್ಕೆ ಅಗತ್ಯವಾದ ಶೇ. 80 ರಷ್ಟು ಮ್ಯಾಂಗನೀಸ್ ಇರುತ್ತದೆ. ಇದು ನಮ್ಮ ದೇಹದಲ್ಲಿರುವ ಕೊಬ್ಬನ್ನು ಕರಗಿಸುತ್ತದೆ. ನಂತರ ಇದರಲ್ಲಿರುವ ಕಾರ್ಬೋಹೈಡ್ರೇಟ್‍ಗಳಿಂದ ನಮ್ಮ ದೇಹದಲ್ಲಿ ಕೊಬ್ಬು ಸಂಗ್ರಹಗೊಳ್ಳುವುದು ತಪ್ಪುತ್ತದೆ.

ಕೂದಲಿನ ಆರೋಗ್ಯ ಕಾಪಾಡಲು ಬ್ರೌನ್ ರೈಸ್ ಒಳ್ಳೆಯದು. ಕುಚ್ಚಲಕ್ಕಿ ವಿಟಮಿನ್ ಬಿ 1, ವಿಟಮಿನ್ ಬಿ 3, ವಿಟಮಿನ್ ಬಿ 6, ವಿಟಮಿನ್ ಇ, ಫೋಲಾಸಿನ್, ಪೊಟ್ಯಾಸಿಯಮ್ ಮತ್ತು ಫೈಬರ್ ಇರುತ್ತದೆ. ಆರೋಗ್ಯಕರ ಕೂದಲಿಗೆ ಇವೆಲ್ಲವೂ ಅವಶ್ಯಕ. ಕುಚ್ಚಲಕ್ಕಿ ಪೋಷಕಾಂಶಗಳ ಶಕ್ತಿ ಕೇಂದ್ರವಾಗಿದೆ. ಹೀಗಾಗಿ ಕೂದಲಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಇದು ನಿವಾರಿಸುತ್ತದೆ.

ದೇಹಕ್ಕೆ ತಂಪಾದ ಬಾಯಿಗೆ ರುಚಿಯಾದ ಕುಚ್ಚಲಕ್ಕಿ

ಬಾಣಂತಿಯರಿಗೆ ಬರುವ ಸೊಂಟ ನೋವು ಬೆನ್ನು ನೋವಿಗೆ ಕುಚ್ಚಲಕ್ಕಿ ಗಂಜಿ ರಾಮಬಾಣವಾಗಿದೆ. ಬಿಳಿ ಅಕ್ಕಿಯ ಜೊತೆ ತೂಗಿಸಿ ನೋಡಿದರೆ ಕೆಂಪು ಅಕ್ಕಿಯಲ್ಲಿ ಕಬ್ಬಿಣಾಂಶ ಮತ್ತು ಕ್ಯಾಲ್ಸಿಯಂ ಜಾಸ್ತಿ ಇರುತ್ತದೆ. ಕಾರ್ಬೋಹೈಡ್ರೇಟ್ ಕಮ್ಮಿ, ಫೈಬರ್ ಅಂಶ ಜಾಸ್ತಿ , ಪ್ರೋಟಿನ್ ಕೂಡ ಇರುವುದರಿಂದ ಆರೋಗ್ಯಕ್ಕೆ ಉತ್ತಮವಾದ ಆಹಾರ. ಮಧುಮೇಹ/ಸಕ್ಕರೆಕಾಯಿಲೆ ಇರುವವರು ಅನ್ನ ತಿನ್ನಲೇ ಬಾರದು ಅಂತ ಹೇಳುತ್ತಾರೆ. ಕುಚ್ಚಲಕ್ಕಿ ಅನ್ನವನ್ನು ಊಟ ಮಾಡುದರಿಂದ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಣದಲ್ಲಿಡಬಹುದು. ಅಮೇರಿಕಾದ ಡಯಾಬಿಟಿಸ್ ಅಸೋಸಿಯೇಷನ್ ಕೂಡ ಸಕ್ಕರೆ ಕಾಯಿಲೆ ಇರುವವರು ಬಿಳಿ ಅಕ್ಕಿಗಿಂತ ಕುಚ್ಚಲಕ್ಕಿ ಅನ್ನವನ್ನು ಸೇವಿಸುವುದು ಉತ್ತಮ ಎಂದು ಹೇಳಿದ್ದಾರೆ.

ಹೃದಯದ ಆರೋಗ್ಯವನ್ನು ಕಾಪಾಡುತ್ತದೆ. ಕುಚ್ಚಲಕ್ಕಿ ಈಗಿನ ಕಾಲದಲ್ಲಿ ಬೊಜ್ಜು ಅನ್ನುವುದು ಅತಿ ದೊಡ್ಡ ಕೊಡುಗೆ. ಮಕ್ಕಳಿಂದ ಹಿಡಿದು ವಯಸ್ಕರ ತನಕ . ಕುಚ್ಚಲಕ್ಕಿ ಬಳಸುವುದರಿಂದ ತೂಕವನ್ನು ನಿಯಂತ್ರಣದಲ್ಲಿಡಬಹುದು. ಜೀರ್ಣಕ್ರಿಯೆ ಉತ್ತಮವಾಗಿ ಇರುತ್ತದೆ. ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿಡಲು ಸಾಯಾಯಕವಾಗಿದೆ. ಕ್ಯಾನ್ಸರ್ ನಿರೋಧಕವಾಗಿ ಕೆಲಸ ಮಾಡುತ್ತದೆ. ಒಂದು ಹೊತ್ತು ಆದರೂ ಸರಿ ಕುಚ್ಚಲಕ್ಕಿ ಗಂಜಿ ಕೊಟ್ಟು ನೋಡಿ ಆರೋಗ್ಯ ಹೇಗೆ ಸುಧಾರಿಸುತ್ತದೆ ಎಂದು. ಒಳ್ಳೆಯ ಆಹಾರ ಕ್ರಮ ಅನುಸರಿಸುವುದರಿಂದ  ಆರೋಗ್ಯ, ಮನಸ್ಸು, ನೆಮ್ಮದಿ ಎಲ್ಲವೂ ಸುದಾರಿಸುವುದರಲ್ಲಿ ಅನುಮಾನವೇ ಇಲ್ಲ. ಉಪಯೋಗಿಸಿ  ಖಂಡಿತಾ ಇದು ಸ್ವಂತ ಅನುಭವದಿಂದ ತಿಳಿಸಲು ಇಚ್ಛಿಸುತ್ತೇನೆ.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಕಹಿಯಾದ ಬೇವು ಆರೋಗ್ಯಕ್ಕೆ ತುಂಬಾ ಸಿಹಿ

ಅಡುಗೆ ಮನೆಯಲ್ಲಿ ಸಿಗುವ ಔಷಧಿಗಳು