in

ಕಹಿಯಾದ ಬೇವು ಆರೋಗ್ಯಕ್ಕೆ ತುಂಬಾ ಸಿಹಿ

ಹೌದು ಬೇವು ತುಂಬಾ ಕಹಿ ಯಾರು ಕೂಡ ತಿನ್ನಲು ಇಷ್ಟ ಪಡದ ವಸ್ತು. ಆದರೆ ಅದೇ ಕಹಿಯಾದ ಬೇವು ಆರೋಗ್ಯದ ವಿಷಯಕ್ಕೆ ಬಂದರೆ ಅಮೃತ ಅನ್ನಬಹುದು. ಕಹಿ ಬೇವು ತುಂಬಾ ರೋಗಗಳಿಗೆ ಉಪಯುಕ್ತವಾಗಿದೆ. ಹಿಂದೂ ಸಂಪ್ರದಾಯದಲ್ಲಿ ಬೇವಿನ ಮರವನ್ನು ಅಶ್ವತ  ಮರದೊಂದಿಗೆ ಮದುವೆ ಮಾಡುವ ಸಂಪ್ರದಾಯವಿದೆ. ಇದರಿಂದ ಅಶ್ವತ  ಮರದಲ್ಲಿ ಬೂತ ಪಿಶಾಚಿಗಳು ವಾಸಮಾಡುವುದಿಲ್ಲ ಎಂದು ನಮ್ಮ ಅಜ್ಜಿ ನಮಗೆ ಹೇಳುತ್ತಿದ್ದ ನೆನಪು. ಹಾಗಾಗಿ ನಾವು ಬೇವಿನ ಮರವನ್ನು ಪೂಜೆ ಕೂಡ ಮಾಡುತ್ತೇವೆ. ಹೊಸ ವರ್ಷ ಅಂದರೆ ಯುಗಾದಿ ನಾವು ನಮ್ಮ ಬಂದು ಭಾಂದವರೊಂದಿಗೆ ಬೇವು ಬೆಲ್ಲ ಹಂಚಿಕೊಂಡು ಬದುಕುತ್ತೇವೆ. ಕಷ್ಟ ಸುಖ ಹಂಚಿಕೊಳ್ಳೋಣ ಎಂದು ಅದರ ಅರ್ಥ. ಇದು ಇಷ್ಟು ಸಂಪ್ರದಾಯ ಆದರೆ ಕಹಿಬೇವಿನ ಉಪಯೋಗಗಳು ಹಲವು.

ಕೂದಲಿನ ಆರೋಗ್ಯಕ್ಕೆ ಮತ್ತು ದೇಹದ ಎಲ್ಲಾ ಬಗೆಯ ಆರೋಗ್ಯಕ್ಕೆ ಕಹಿ ಬೇವು

ಕಹಿಯಾದ ಬೇವು ಆರೋಗ್ಯಕ್ಕೆ ತುಂಬಾ ಸಿಹಿ

ನಾವು ಮಾರ್ಕೆಟ್ ನಲ್ಲಿ ಸಿಗುವ ಅನೇಕ  ಬಗೆಯ ಶ್ಯಾಂಪೂ, ಕಂಡೀಷನರ್ ಮುಂತಾದ ವಸ್ತುಗಳನ್ನು ಕೂದಲಿನ ಸೌಂದರ್ಯ ಹೆಚ್ಚಿಸಲು ಉಪಯೋಗ ಮಾಡುತ್ತೇವೆ. ಆದರೆ ಅದು ಸ್ವಲ್ಪ ಸಮಯ ಇದರಿಂದ ಬೇಗ ಬಿಳಿ ಕೂದಲು ಬರುವ ಸಾದ್ಯತೆಗಳು ಹೆಚ್ಚು. ನಮ್ಮ ಪೂರ್ವಜರು ಆದಷ್ಟು ಪ್ರಕೃತಿಯಲ್ಲಿ ಸಿಗುವ ವಸ್ತುಗಳಿಂದ ಆರೋಗ್ಯ ವೃದ್ಧಿಸಿಕೊಳ್ಳುತಿದ್ದರು .ಕಹಿಬೇವು ಕೂದಲಿನ ಹೊಳಪಿಗೆ, ತಲೆಹೊಟ್ಟು ಸಮಸ್ಯೆಗೆ, ಸೆಕೆ ಜಾಸ್ತಿ ಆದಾಗ ತಲೆ ತುರಿಕೆ ಆಗಿ ಸಣ್ಣ ಸಣ್ಣ ಕಜ್ಜಿಗಳು ಆಗುತ್ತವೆ. ಇದನ್ನು ಹೋಗಲಾಡಿಸಲು ಒಂದು ಒಳ್ಳೆಯ ಪರಿಹಾರ. ಇಂತಹ ಕೂದಲಿನ ಹಲವು ಸಮಸ್ಯೆಗಳಿಗೆ ಉಪಕಾರಿಯಾಗಿದೆ. ಬರೀ ಕಹಿಬೇವು ಸೊಪ್ಪನ್ನು ಚೆನ್ನಾಗಿ ಪೇಸ್ಟ್ ಮಾಡಿ  ಹಚ್ಚಿ ತಲೆಗೆ ಸ್ನಾನ ಮಾಡಿದರೆ ಸಾಕು ಕೂದಲಿನ ಆರೋಗ್ಯ ಹೆಚ್ಚುತ್ತದೆ. ಕಿವಿ ನೋವು ಕಡಿಮೆ ಮಾಡಲು ಸಹ ಈ ಕಹಿ ಬೇವು ಸಹಾಯಕ. ಕಹಿ ಬೇವಿನಿಂದ ತಯಾರಿಸಿದ ಎಣ್ಣೆಯನ್ನು, ಸ್ವಲ್ಪ ಉಗುರು ಬೆಚ್ಚಗೆ ಮಾಡಿ, 1 ರಿಂದ 2 ಹನಿ ಎಣ್ಣೆಯನ್ನು ನೋವಿರುವ ಕಿವಿಗೆ ಹಾಕುವುದರಿಂದ ಕಿವಿನೋವು ಕಡಿಮೆಯಾಗುತ್ತದೆ.

ಮಧುಮೇಹ ನಿಯಂತ್ರಣಕ್ಕೆ ಕಹಿ ಬೇವು

ಇತ್ತೀಚಿಗಂತೂ ಮೂರರಲ್ಲಿ ಒಬ್ಬರಿಗೆ ಬಿಟ್ಟೂ ಬಿಡದಂತೆ 40 ವರ್ಷ ವಯಸ್ಸಾದ ನಂತರ ಕಾಡುವ ಆರೋಗ್ಯ ಸಮಸ್ಯೆ ಎಂದರೆ ಅದು ಮಧುಮೇಹ ಅಥವಾ ಸಕ್ಕರೆ ಕಾಯಿಲೆ ಅಥವಾ ಡಯಾಬಿಟಿಸ್. ಮನುಷ್ಯನ ಜೀವನ ಶೈಲಿಯ ವಿಚಿತ್ರ ಬದಲಾವಣೆಯಿಂದ ಇಂತಹ ಸಮಸ್ಯೆಗಳು ದಿನೇ ದಿನೇ ಹೆಚ್ಚಾಗುತ್ತಿವೆ. ದೇಹದಲ್ಲಿ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಹೆಚ್ಚು ಮಾಡಿ ಮಧುಮೇಹಕ್ಕೆ ಕಾರಣವಾಗುತ್ತಿದೆ. ಸಾಮಾನ್ಯ ಜನರು ಪ್ರತಿ ದಿನ ಬೇವಿನ ಜ್ಯೂಸ್ ಕುಡಿಯುವ ಅಭ್ಯಾಸ ಮಾಡಿಕೊಂಡರೆ ದೇಹದಲ್ಲಿನ ಸಕ್ಕರೆ ಪ್ರಮಾಣ ಸೀಮಿತ ಸ್ಥಿತಿ ಕಾಯ್ದುಕೊಂಡು ಮುಂಬರುವ ದಿನಗಳಲ್ಲಿ ಡಯಾಬಿಟಿಸ್ ನಂತಹ ಆರೋಗ್ಯ ಸಮಸ್ಯೆಗಳಿಂದ ದೂರ ಉಳಿಯಬಹುದು. ಇನ್ನು ಡಯಾಬಿಟಿಸ್ ನಿಂದ ಈಗಾಗಲೇ ಬಳಲುತ್ತಿರುವವರು ಪ್ರತಿ ದಿನ ಬೇವಿನ ಜ್ಯೂಸ್ ಕುಡಿಯುವುದರಿಂದ ರಕ್ತದಲ್ಲಿ ಸಕ್ಕರೆ ಅಂಶವನ್ನು ಸಾಮಾನ್ಯ ಸ್ಥಿತಿಗೆ ತಂದು ಮಧುಮೇಹವನ್ನು ನಿಯಂತ್ರಣದಲ್ಲಿಡಬಹುದು.

ಬೇವಿನಿಂದ ಮಲೇರಿಯಾ ದೂರ

ಬೇವಿನ ಸೊಪ್ಪು, ಬೇವಿನ ಹೂವು,  ಎಣ್ಣೆ, ಬೇವಿನ ತೊಗಟೆಯಲ್ಲಿ ಹಲವು ರೋಗ ನಿವಾರಕ ಅಂಶಗಳಿದ್ದು, ಇವುಗಳಿಂದ ಔಷಧ ತಯಾರಿಸಲಾಗುತ್ತದೆ. ಚರ್ಮ ರೋಗನಿವಾರಣೆಗೆ ಬೇವು ಸಿದ್ಧ ಔಷಧ. ಬೇವಿನ ತಾಜಾ ಸೊಪ್ಪನ್ನು ಹಿಂಡಿ ಸೇವಿಸಿದರೆ ಶಾರೀರಿಕ ದೋಷ ಕೂಡ ನಿವಾರಣೆ ಆಗುತ್ತವೆ ಎಂಬುದು ತಜ್ಞರ ಅಂಬೋಣ.ಬೇವಿನ ಮರದ ಬುಡದಲ್ಲಿನ ತೊಗಟೆಯನ್ನು ಕೆತ್ತಿ ತೆಗೆದು ಅದರಲ್ಲಿ ಕಷಾಯ ತಯಾರಿಸಿ ಸೇವಿಸುವುದರಿಂದ ಕುಷ್ಟ ರೋಗಾದಿ ಚರ್ಮ ರೋಗಗಳು ನಿವಾರಣೆಯಾಗುವುವು. ಮಧುಮೇಹ, ನಿಶ್ಯಕ್ತಿ, ವಾಕರಿಕೆ, ಬಾಯಾರಿಕೆ, ಗಡುವಿನ ಜ್ವರ ಸೇರಿದಂತೆ ಅನೇಕ ದೋಷಗಳಿಗೆ ಬೇವು ರಾಮಬಾಣ.ಮಲೇರಿಯಾ ಜ್ವರದಲ್ಲಿ 2 ಅಥವಾ 3 ಗ್ರಾಂ ಬೇವಿನ ಎಲೆಗಳ ಚೂರ್ಣವನ್ನಾಗಲೀ, ತೊಗಟೆಯ ಚೂರ್ಣವನ್ನಾಗಲಿ ಬಿಸಿ ನೀರಿನೊಂದಿಗೆ ಸೇವಿಸುವುದರಿಂದ ಆರೋಗ್ಯ ವೃಧ್ಧಿಸುತ್ತದೆ.

ಚರ್ಮದ ಕಾಂತಿಗೆ ಕಹಿಬೇವು

ಹೌದು ಸೋಪು, ಫೇಸ್ ವಾಶ್, ಸ್ಕ್ರಬ್ಬರ್ ಅಂತ ಉಪಯೋಗಿಸುತ್ತೇವೆ. ಆದ್ರೆ ಕಹಿಬೇವಿನ ಸೊಪ್ಪಿನ ಪೇಸ್ಟ್ ಉಪಯೋಗಿಸಿ ಚರ್ಮದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಿಂದ ಇನ್ನೊಂದು ಉಪಯೋಗ ಅಂದರೆ ನೀವು ಕಹಿಬೇವಿನ ಪೇಸ್ಟ್ ನಿಂದ  ಸ್ನಾನ ಮಾಡಿದರೆ ಸೊಳ್ಳೆ ಯ ಕಡಿತದಿಂದ  ಪಾರಾಗಬಹುದು.  ಕಹಿ ಬೇವು, ಮೊಡವೆಗಳು ಕಡಿಮೆಯಾದ ಬಳಿಕ ಉಳಿಯುವ ಕಲೆಗಳನ್ನು ತೆಗೆದುಹಾಕುತ್ತವೆ. ಮತ್ತು ಮೊಡವೆಗಳು ಆಗದಂತೆ ತಡೆಯುತ್ತವೆ. ಕಹಿ ಬೇವಿನ ಎಲೆಯನ್ನು ಪೆಸ್ಟ್ ಮಾಡಿ ಮುಖಕ್ಕೆ ವಾರಕೊಮ್ಮೆ ಹಚ್ಚುವುದರಿಂದ ಮೊಡವೆಗಳು ಕಡಿಮೆಯಾಗುತ್ತವೆ. ಬಿಸಿ ನೀರು ಕಾಯಿಸಿ ಅದಕ್ಕೆ ಕಹಿ ಬೇವಿನ ಎಲೆಗಳನ್ನು ಹಾಕಿ ಅದರಿಂದ ಬರುವ ಉಗಿಯನ್ನು ಮಖಕ್ಕೆ ತೆಗೆದುಕೊಳ್ಳುವುದರಿಂದ ಮುಖದಲ್ಲಿ ಕಲೆಗಳು ನಿವಾರಣೆಯಾಗಿ ಮುಖದ ಕಾಂತಿಯು ಹೆಚ್ಚುತ್ತದೆ. ಇನ್ನು ಚಿಕ್ಕಮಕ್ಕಳಿಗೆ ಚಿಕನ್ ಪಾಕ್ಸ್  (chicken pox), ಅಮ್ಮ ಏಳುವುದು (small pox)  ಅಂತಹ ಕೆಲವು ಕಾಯಿಲೆಗಳು ಸಾಮಾನ್ಯ ಒಂದು ವಾರ ಬೇಕು ಪೂರ್ತಿ ಕಡಿಮೆ ಆಗಲು ಆದರೆ ಅದು ತುಂಬಾ ತುರಿಕೆ, ಮತ್ತು ತುಂಬಾ ಕಿರಿಕಿರಿ ಮಾಡುತ್ತವೆ. ಸೋಪು ಬದಲು ಕಹಿಬೇವು  ಎಲೆ ರುಬ್ಬಿ ಹಚ್ಚಬೇಕು. ತುರಿಕೆ ಕಮ್ಮಿ ಆಗಿ ಆದಷ್ಟು ಬೇಗ ಗುಣ ಆಗುತ್ತಾರೆ. ಮಕ್ಕಳಲ್ಲಿ ಜಂತುಹುಳದ ನಿವಾರಣೆಗೆ ಕಷಾಯ ಮಾಡಿ ಕುಡಿಸಬಹುದು. ಇನ್ನು ಮನೆಯಲ್ಲಿ ಸೊಳ್ಳೆಗಳ ಸಮಸ್ಯೆ ಜಾಸ್ತಿ ಇದ್ದರೆ ಕಹಿಬೇವಿನ ಎಣ್ಣೆಯಲ್ಲಿ ದೀಪಹಚ್ಚಿಡಬೇಕು. ನೈಸರ್ಗಿಕವಾದ ಸೊಳ್ಳೆ ಬತ್ತಿಯ ರೀತಿ ಕೆಲಸ ಮಾಡುತ್ತದೆ. ಒಟ್ಟಿನಲ್ಲಿ ಈ ರೀತಿಯಾಗಿ ನಾವು ಕಹಿ ಬೇವಿನಿಂದ ಅನೇಕ ಉಪಯೋಗಗಳನ್ನು ಪಡೆದ್ದುಕೊಳ್ಳಬಹುದು. ಕಹಿಬೇವಿನಲ್ಲಿ ರೋಗನಿರೋಧ ಶಕ್ತಿ ಅತಿ ಹೆಚ್ಚಾಗಿರುವುದರಿಂದ ಆದಷ್ಟು ಮನೆಯ ಸುತ್ತ-ಮುತ್ತಲೂ ಕಹಿಬೇವಿನ ಮರಗಳನ್ನು ಬೆಳೆಸುವುದು ಉತ್ತಮ ಇದರಿಂದ ಆರೋಗ್ಯಕರವಾದ ಗಾಳಿ  ಕೂಡ ನಮಗೆ ಸಿಗುತ್ತದೆ.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

One Comment

ಭಗವಂತ ಶ್ರೀಕೃಷ್ಣನಿಗೆ ಇದೆ 108 ಹೆಸರುಗಳು ಹದಿನಾರು ಸಾವಿರ ಹೆಂಡತಿಯರು ಇದು ನಿಜಾನಾ?

ದೇಹಕ್ಕೆ ತಂಪಾದ ಬಾಯಿಗೆ ರುಚಿಯಾದ ಕುಚ್ಚಲಕ್ಕಿ