in ,

ಕರಿಬೇವು ಸೊಪ್ಪಿನ ಮಹತ್ವ ತಿಳಿಯಿರಿ

ಕರಿಬೇವು
ಕರಿಬೇವು

ಅಡುಗೆ ಅಂದ ಮೇಲೆ ಒಂದು ಒಗ್ಗರಣೆ ಮುಖ್ಯ, ಅಡುಗೆಯ ರುಚಿ ಇನ್ನಷ್ಟು ಜಾಸ್ತಿ ಮಾಡುತ್ತದೆ. ಆ ಒಗ್ಗರಣೆಯಲ್ಲಿ ಕರಿಬೇವಿನ ಸೊಪ್ಪು ಇಲ್ಲದೆ ಹೋದರೆ ಏಷ್ಟು ಚಂದ? ಕರಿಬೇವಿನ ಸುವಾಸನೆಯೇ ಚಂದ.

ಕರಿಬೇವು ಸಾಮಾನ್ಯವಾಗಿ ಅಡಿಗೆ ಮನೆಯ ಹಿಂದಿನ ಅಂಗಳದಲ್ಲಿ ಬೆಳೆಯುವ ಮಟ್ಟ ಮರ. ಆಗ. ತಾನೇ ಮರದಿಂದ ಕಿತ್ತು ತಂದ ಎಲೆಗಳ ಸುವಾಸನೆಯು ఎల్ల ಅಡುಗೆಗೆ ಪರಿಮಳ ನೀಡುತ್ತದೆ. ಗಿಡವನ್ನು ಸಾಮಾನ್ಯ ಕಡ್ಡಿಗಳನ್ನು ನೆಡುವುದರಿಂದ ಬೆಳಸಬಹುದು. ಅಡುಗೆಯಲ್ಲಿ ಉಪಯೋಗಿಸುವುದರಿಂದ ಇದಕ್ಕೆ ಸಂಸ್ಕೃತಿಯಲ್ಲಿ `ಕಾಲಶಾಕ’ (ಅಂದರೆ ಕಪ್ಪು ಹಸಿರು ತರಕಾರಿ) ಎಂದು ಹೆಸರು. ಕಫ, ಪಿತ್ತ ರೋಗಗಳನ್ನು ಕಡಿಮೆ ಮಾಡುವುದಾಗಿದ್ದು, ಜಠರದ ರೋಗಗಳಲ್ಲಿ, ಮೊಳೆರೋಗದಲ್ಲಿ, ಹುಳುಗಳಲ್ಲಿ, ಆಮಶಂಕೆ ಭೇದಿ ಮುಂತಾದವುಗಳಲ್ಲಿ ಉಪಯುಕ್ತ.

ಭಾರತೀಯ ಅಡುಗೆಮನೆಯಲ್ಲಿ ಕರಿಬೇವಿನಸೊಪ್ಪಿಗೆ ಅದರದ್ದೇ ಆದ ಮಹತ್ವ ಇದೆ. ಒಗ್ಗರಣೆ ಹಾಕುವಾಗ ಕರಿಬೇವಿನ ಸೊಪ್ಪು ಇಲ್ಲದೇ ಹೋದರೆ, ಅಡುಗೆ ಅಪೂರ್ಣ. ಕರಿಬೇವಿನ ಸೊಪ್ಪು ಅಡುಗೆಗೆ ನೀಡುವ ರುಚಿಯೇ ಬೇರೆ. ಆದರೆ, ಸುವಾಸನೆ ಅಡುಗೆಯ ರುಚಿಯನ್ನು ಇನ್ನೂ ಹೆಚ್ಚಿಸುತ್ತದೆ. ಆರೋಗ್ಯ ವಿಚಾರದಲ್ಲೂ ಕರಿಬೇವಿನ ಸೊಪ್ಪಿಗೆ ಸಾಕಷ್ಟು ಮಹತ್ವ ಇದೆ. ಕರಿಬೇವಿನ ಸೊಪ್ಪು ತಿಂದರೆ, ಅದು ಹೃದ್ರೋಗ, ಕ್ಯಾನ್ಸರ್ ವಿರುದ್ಧ ರಕ್ಷಾ ಕವಚವಾಗಿ ವರ್ತಿಸುತ್ತದೆ.

ಕೆಲವೊಮ್ಮೆ ಹೊಟ್ಟೆಯಲ್ಲಿ ಅಜೀರ್ಣವಾದ ಕಾರಣ ಹಲವು ಅನಿಲಗಳು ಉತ್ಪತ್ತಿಯಾಗಿ ಹೊಟ್ಟೆ ಮತ್ತು ಎದೆಯಲ್ಲಿ ಭಯಂಕರ ಉರಿ ತರಿಸುತ್ತವೆ. ಹುಳಿತೇಗು, ವಾಂತಿ ಮೊದಲಾದ ತೊಂದರೆಗಳು ಪ್ರಾರಂಭವಾಗುತ್ತವೆ. ಅಪಾನವಾಯುವಿನ ಪ್ರಕೋಪ ಹೆಚ್ಚುತ್ತದೆ. ಈ ಸಮಯದಲ್ಲಿ ಕರಿಬೇವುಗಳನ್ನು ಮಿಕ್ಸಿಯಲ್ಲಿ ಗೊಟಾಯಿಸಿ ತಯಾರಿಸಿದ ಒಂದು ಲೋಟ ಜ್ಯೂಸ್ ಕುಡಿದರೆ ತಕ್ಷಣ ಆರಾಮವಾಗುತ್ತದೆ. ಅಜೀರ್ಣವಾಗಿದ್ದ ಆಹಾರ ಜೀರ್ಣವಾಗಿ ಪಚನಕ್ರಿಯೆ ಸರಾಗವಾಗುತ್ತದೆ.

ಕರಿಬೇವು ಸೊಪ್ಪಿನ ಮಹತ್ವ ತಿಳಿಯಿರಿ
ಕರಿಬೇವು

ಎಲೆಗಳನ್ನು (10-15) ನೀರಿನಲ್ಲಿ ಚೆನ್ನಾಗಿ ಅರೆದು ಎಳೆನೀರಿನೊಂದಿಗೆ ಸೇವಿಸಿದರೆ (60-100 మి.లి.) ಕಾಮಾಲೆ ರೋಗ ತಡೆಯಬಹುದು.

ಕರಿಬೇವಿನ ಸೊಪ್ಪಿನ ರಸದಲ್ಲಿ ಕೊಲೆಸ್ಟರಾಲ್ ಮತ್ತು ಟ್ರೈಗ್ಲಿಸರೈಡ್ ಕಡಿಮೆ ಮಾಡುವ ಸಾಮರ್ಥ್ಯ ಇದೆ. ಹಾಗಾಗಿ, ಹೃದ್ರೋಗಿಗಳು ಊಟ ತಿಂಡಿಗಳಲ್ಲಿ ಕರಿಬೇವಿನ ಸೊಪ್ಪು ಹೆಚ್ಚು ತಿಂದರೆ ಒಳ್ಳೆಯದು.

ನಿತ್ಯ ಖಾಲಿ ಹೊಟ್ಟೆಯಲ್ಲಿ ಅಥವಾ ಉಪಹಾರ ಸೇವಿಸುವ ಮೊದಲು ಬೆರಳೆಣಿಕೆಯ ಕರಿಬೇವಿನ ಎಲೆಯನ್ನು ಜಗಿಯಬೇಕು. ಇದರಿಂದ ದೇಹದಲ್ಲಿ ಇರುವ ವಿಷಕಾರಿ ಅಂಶಗಳನ್ನು ಶುದ್ಧಿಕರಿಸಬಹುದು.ದೇಹದಲ್ಲಿ ಶೇಖರಣೆಯಾದ ಅನಗತ್ಯ ಕೊಬ್ಬುಗಳು ಕರಗುತ್ತವೆ. ಇದು ತೂಕ ಸಹ ಇಳಿಕೆಯಾಗಲಿದೆ. ಇದರಲ್ಲಿ ಇರುವ ಆಲ್ಕಲಾಯ್ಡ್ ದೇಹದಲ್ಲಿರುವ ಅನಗತ್ಯ ಬೊಜ್ಜು ಕರಗಿಸಲು ಸಹಾಯ ಮಾಡುವದು.

ಎಲೆಗಳನ್ನು ಅರೆದು ಕುರು, ಗಾಯಗಳಿಗೆ ಸ್ವಲ್ಪ ಅರಿಶಿನದೊಂದಿಗೆ ಹಚ್ಚಬಹುದು. ಪ್ರತಿದಿನ ಕರಿಬೇವಿನ ಎಲೆಗಳನ್ನು ಆಹಾರದ ಮೂಲಕ ಸೇವಿಸುವುದರಿಂದ ಮಧುಮೇಹವನ್ನು ನಿಯಂತ್ರಣದಲ್ಲಿರಿಸಲು ಸಾಧ್ಯವಾಗುತ್ತದೆ. ಇದರಿಂದ ರಕ್ತದಲ್ಲಿನ ಸಕ್ಕರೆ ಅಂಶ ಗಮನಾರ್ಹ ಪ್ರಮಾಣದಲ್ಲಿ ಕಡಿಮೆಯಾಗುತ್ತದೆ.

ಚಮಚೆಯಷ್ಟು ಎಲೆಯ ರಸವನ್ನು, 1 ಟೀ ಚಮಚ ನಿಂಬೆ ರಸವನ್ನು ಮತ್ತು ಸಕ್ಕರೆಯನ್ನು ಬೆರೆಸಿ ಸೇವಿಸುವುದರಿಂದ ಮುಂಜಾನೆ ಬರುವ ವಾಂತಿ, ಅಜೀರ್ಣ, ಅತಿಯಾಗಿ ಜಿಡ್ಡು ಪದಾರ್ಥ ಸೇವನೆಯಿಂದುಂಟಾದ ತೊಂದರೆ, ಮೂಳೆ ಸರಿಯಾಗಿ ಬೆಳೆಯದಿರುವಿಕೆ, ಮಕ್ಕಳ ಹಲ್ಲುಟ್ಟುವ ತೊಂದರೆಗಳಲ್ಲಿ ಉಪಯುಕ್ತ.

ಬೊಜ್ಜು ಕರಗಿಸಬೇಕೆನ್ನುವವರಿಗೆ ಸುಲಭೋಪಾಯ- ಪ್ರತಿದಿನ ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಕರಿಬೇವಿನ ಎಲೆ(10ರಿಂದ 20) ತಿನ್ನಬೇಕು. ದಿನವೂ ಕರಿಬೇವಿನ ಎಲೆ ತಿಂದರೆ ದೇಹದ ತೂಕ ಕಡಿಮೆಯಾಗುವುದು. ಮೂಲವ್ಯಾಧಿಯಿಂದ ಬಳಲುವವರು ಕರಿಬೇವಿನ ಚಿಗುರು ಎಲೆಗಳನ್ನು ಜೇನುತುಪ್ಪದಲ್ಲಿ ಅದ್ದಿ ತಿನ್ನಬೇಕು.

ಕರಿಬೇವಿನ ಎಲೆಯನ್ನು ನಿತ್ಯ ಸೇವಿಸುವದರಿಂದ ನೆನಪಿನ ಶಕ್ತಿ ವೃದ್ಧಿಯಾಗುವದು. ಅಲ್ಲದೆ ಮೆದುಳಿಗೆ ಬೇಕಾದ ಪೋಷಕಾಂಶವನ್ನು ನೀಡುವದು. ವೃದ್ಧರಿಗೆ ಹಾಗೂ ಮಕ್ಕಳಿಗೆ ಈ ಎಲೆಯನ್ನು ನೀಡುವದರಿಂದ ನೆನಪಿನ ಶಕ್ತಿ ಸುಧಾರಿಸಬಹುದು. ಈ ಎಲೆಯಲ್ಲಿರುವ ಆರೋಗ್ಯಕರ ಆಂಶವು ಅಲ್ಝಮೈರ್ ಅರಳು ಮರಳಿನ ಸಮಸ್ಯೆಯನ್ನು ನಿವಾರಿಸುವದು.

ಹೊಟ್ಟೆಯ ಸಮಸ್ಯೆ, ವಾಂತಿ, ಮೂಲವ್ಯಾಧಿ ಇತ್ಯಾದಿ ಕಾಯಿಲೆಗಳನ್ನು ಗುಣಪಡಿಸಲು ಕರಿಬೇವಿನ ಸೊಪ್ಪನ್ನು ಬಳಸಲಾಗುತ್ತದೆ. ಇದು ಅನೇಕ ರೀತಿಯ ಬ್ಯಾಕ್ಟೀರಿಯಾಗಳಿಂದಲೂ ರಕ್ಷಿಸುತ್ತದೆ.

ಎಳೆಯದಾದ ಎಲೆಗಳನ್ನು ಜೇನಿನೊಂದಿಗೆ ನೀಡುವುದರಿಂದ ಬೇವು ಆಮಶಂಕೆ ಮತ್ತು ಮೂಳೆ ರೋಗದಲ್ಲಿ ಉತ್ತಮ. ಅಂತೆಯೇ ಎಲೆಗಳನ್ನು ಚೆನ್ನಾಗಿ ಅರೆದು ಮಜ್ಜಿಗೆಯೊಂದಿಗೆ ನೀಡಲು ಉಪಯುಕ್ತ. ಅದರೊಂದಿಗೆ ಶುಂಠಿ ಸೇರಿಸಬೇಕು.

ಹಣ್ಣುಗಳನ್ನು ಅರೆದು ಸಮ ಪ್ರಮಾಣ ನಿಂಬೆ ರಸದಲ್ಲಿ ಬೆರೆಸಿ ಹಚ್ಚಲು ಸೊಳ್ಳೆ, ಇರುವೆ ಮುಂತಾದ ಕೀಟಗಳ ಕಚ್ಚುವಿಕೆಯನ್ನು ನಿವಾರಿಸಬಹುದು.

ಪ್ರತಿದಿನ ನಮ್ಮ ಆಹಾರದಲ್ಲಿ ಕರಿಬೇರು ಇರುವಂತೆ ನೋಡಿಕೊಳ್ಳುವ ಮೂಲಕ ನಮ್ಮ ಮೂತ್ರಪಿಂಡಗಳಲ್ಲಿ ಕಲ್ಲುಗಳಾಗದಂತೆ ತಡೆಯಬಹುದು. ಹೆಚ್ಚಿನ ತೊಂದರೆ ಕಂಡುಬಂದಲ್ಲಿ ಕರಿಬೇವಿನ ಎಲೆಗಳನ್ನು ಮಿಕ್ಸಿಯಲ್ಲಿ ಗೊಟಾಯಿಸಿ ಮಾಡಿದ ಜ್ಯೂಸ್ ಕುಡಿಯುವ ಮೂಲಕ ಉತ್ತಮ ಪರಿಹಾರ ದೊರಕುತ್ತದೆ.

ಕರಿಬೇವು ಸೊಪ್ಪಿನ ಮಹತ್ವ ತಿಳಿಯಿರಿ
ತಲೆ ಕೂದಲು

ಕರಿಬೇವಿನ ಸೊಪ್ಪಿನಿಂದ ತಲೆ ಕೂದಲು ನಯವಾಗಿ , ಉದ್ದವಾಗಿ ಮತ್ತು ಸೊಂಪಾಗಿ ಬೆಳೆಯುತ್ತದೆ . ಏಕೆಂದರೆ ಕರಿಬೇವಿನ ಸೊಪ್ಪಿನಲ್ಲಿ ಬಹಳವೇ ಜಾಸ್ತಿ ಕೂದಲಿಗೆ ಉಪಯೋಗವಾಗುವಂತಹ ಪೋಷಕಾಂಶಗಳು ಅಡಗಿವೆ . ವಿಟಮಿನ್ ‘ ಸಿ ‘ , ಫೋಸ್ಫೋರ್ಸ್ , ಐರನ್ , ಕ್ಯಾಲ್ಸಿಯಂ ಮತ್ತು ನಿಕೊಟಿನಿಕ್ ಆಸಿಡ್ಗಳು ಕರಿಬೇವಿನಲ್ಲಿದೆ.

ಮಧುಮೇಹ ಹೊಂದಿದ ಜನರಲ್ಲಿ ಶೇಕಡ 45 ರಷ್ಟು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡುವಲ್ಲಿ ಕರಿಬೇವಿನ ಸೊಪ್ಪು ಉಪಯುಕ್ತವಾಗಿದೆ.ಇದರಿಂದ ಟೈಪ್ -2 ಮಧುಮೇಹವನ್ನು ನಿಯಂತ್ರಣ ಮಾಡುವಲ್ಲಿ ಕರಿಬೇವಿನ ಸೊಪ್ಪಿನ ಯಶಸ್ವಿ ದಾಖಲಾಗಿದೆ. ಕರಿಬೇವಿನ ಸೊಪ್ಪು ರಕ್ತದಲ್ಲಿನ ಗ್ಲೂಕೋಸ್ ಅಂಶವನ್ನು ಸ್ಥಿರಗೊಳಿಸಿ ಮಧುಮೇಹವನ್ನು ನಿಯಂತ್ರಣದಲ್ಲಿ ಇಡುವ ಕೆಲಸ ಮಾಡುತ್ತದೆ.

ಕರಿಬೇವಿನ ತಾಜಾ ಎಲೆಗಳಿಂದ ತೆಗೆದ ಶುದ್ಧ ರಸವನ್ನು ಕಣ್ಣಲ್ಲಿ ಹಾಕಿದರೆ ಕಣ್ಣಿನ ಪೊರೆ ಬರುವುದನ್ನು ತಡೆಯಬಹುದು. ಆಮಶಂಕೆ ಭೇದಿಯಾಗುತ್ತಿದ್ದರೆ ಕರಿಬೇವಿನ ಕಷಾಯ ಉತ್ತಮ. ರಕ್ತಭೇದಿಯ ಬಾಧೆ ಇದ್ದವರು ಕರಿಬೇವಿನ ಚಟ್ನಿ ತಿನ್ನಬೇಕು. ಕರಿಬೇವಿನ ಎಣ್ಣೆ ಬಳಸಿದರೆ ತಲೆಗೂದಲು ಉದುರುವಿಕೆ ನಿಲ್ಲುತ್ತದೆ, ಕೂದಲು ಕಪ್ಪಾಗಿ, ಸೊಂಪಾಗಿ ಬೆಳೆಯುತ್ತವೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಅಪ್ರತಿಮ ದೇಶಭಕ್ತ ಭಾರತಮಾತೆಯ ವೀರ ಪುತ್ರ ಭಗತ್ ಸಿಂಗ್

ಅಪ್ರತಿಮ ದೇಶಭಕ್ತ ಭಾರತಮಾತೆಯ ವೀರ ಪುತ್ರ ಭಗತ್ ಸಿಂಗ್

ಸಿಡುಬು

ಸಾಮಾನ್ಯವಾಗಿ ಮಕ್ಕಳಲ್ಲಿ ಕಂಡುಬರುವ ಸಿಡುಬು ರೋಗ