in

ಮಕ್ಕಳ ದಿನಾಚರಣೆ ಮತ್ತು ವಿಶ್ವ ಮಕ್ಕಳ ದಿನಾಚರಣೆಯ ವ್ಯತ್ಯಾಸ ಹೀಗಿದೆ ನೋಡಿ

ಮಕ್ಕಳ ದಿನಾಚರಣೆ
ಮಕ್ಕಳ ದಿನಾಚರಣೆ

 ಮಕ್ಕಳ ದಿನಾಚರಣೆಯು ಮಕ್ಕಳ ಗೌರವಾರ್ಥವಾಗಿ ವಾರ್ಷಿಕವಾಗಿ ಆಚರಿಸಲಾಗುವ ಸ್ಮರಣಾರ್ಥ ದಿನಾಂಕವಾಗಿದೆ, ಅವರ ಆಚರಣೆಯ ದಿನಾಂಕವು ದೇಶದಿಂದ ಬದಲಾಗುತ್ತದೆ. ೧೯೨೫ ರಲ್ಲಿ, ಜಿನೀವಾದಲ್ಲಿ ಮಕ್ಕಳ ಕಲ್ಯಾಣ ಕುರಿತ ವಿಶ್ವ ಸಮ್ಮೇಳನದಲ್ಲಿ ಅಂತರರಾಷ್ಟ್ರೀಯ ಮಕ್ಕಳ ದಿನವನ್ನು ಮೊದಲು ಘೋಷಿಸಲಾಯಿತು. ೧೯೫೦ರಿಂದ, ಹೆಚ್ಚಿನ ಕಮ್ಯುನಿಸ್ಟ್ ಮತ್ತು ನಂತರದ ಕಮ್ಯುನಿಸ್ಟ್ ದೇಶಗಳಲ್ಲಿ ಇದನ್ನು ಜೂನ್ 1 ರಂದು ಆಚರಿಸಲಾಗುತ್ತದೆ. ವಿಶ್ವ ಮಕ್ಕಳ ದಿನವನ್ನು ನವೆಂಬರ್ ೨೦,೧೯೫೯ ರಂದು UN ಜನರಲ್ ಅಸೆಂಬ್ಲಿಯಿಂದ ಮಕ್ಕಳ ಹಕ್ಕುಗಳ ಘೋಷಣೆಯ ನೆನಪಿಗಾಗಿ ನವೆಂಬರ್ 20 ರಂದು ಆಚರಿಸಲಾಗುತ್ತದೆ ಕೆಲವು ದೇಶಗಳಲ್ಲಿ, ಇದು ಮಕ್ಕಳ ವಾರ ಮತ್ತು ಮಕ್ಕಳ ದಿನವಲ್ಲ.

ಡೊನೆಟ್ಸ್ಕ್, ಉಕ್ರೇನ್, 2011 ರಲ್ಲಿ ಮಕ್ಕಳ ದಿನವು ಜೂನ್ ಎರಡನೇ ಭಾನುವಾರದಂದು ಜೂನ್ ೧೮೫೭ ರಲ್ಲಿ ಪ್ರಾರಂಭವಾಯಿತು. ರೆವರೆಂಡ್ ಡಾ. ಚಾರ್ಲ್ಸ್ ಲಿಯೊನಾರ್ಡ್, ಮ್ಯಾಸಚೂಸೆಟ್ಸ್‌ನ ಚೆಲ್ಸಿಯಾದಲ್ಲಿನ ಯುನಿವರ್ಸಲಿಸ್ಟ್ ಚರ್ಚ್ ಆಫ್ ರಿಡೀಮರ್‌ನ ಪಾದ್ರಿ: ಲಿಯೊನಾರ್ಡ್ ಮಕ್ಕಳಿಗಾಗಿ ಮತ್ತು ವಿಶೇಷ ಸೇವೆಯನ್ನು ಮೀಸಲಿಟ್ಟರು. ಲಿಯೊನಾರ್ಡ್ ಈ ದಿನವನ್ನು ರೋಸ್ ಡೇ ಎಂದು ಹೆಸರಿಸಿದರು, ಆದರೂ ಇದನ್ನು ನಂತರ ಹೂವಿನ ಭಾನುವಾರ ಎಂದು ಹೆಸರಿಸಲಾಯಿತು ಮತ್ತು ನಂತರ ಮಕ್ಕಳ ದಿನ ಎಂದು ಹೆಸರಿಸಲಾಯಿತು.

ಮಕ್ಕಳ ದಿನಾಚರಣೆ ಮತ್ತು ವಿಶ್ವ ಮಕ್ಕಳ ದಿನಾಚರಣೆಯ ವ್ಯತ್ಯಾಸ ಹೀಗಿದೆ ನೋಡಿ
ನವೆಂಬರ್ 20 ರಂದು ವಿಶ್ವ ಮಕ್ಕಳ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ

ನಾವು ನೆಹರು ಜನ್ಮದಿನವನ್ನು ಮಕ್ಕಳ ದಿನಾಚಣೆಯನ್ನಾಗಿ ಆಚರಿಸುತ್ತೇವೆ.

ಪಂಡಿತ್ ಜವಾಹರಲಾಲ್ ನೆಹರು (14 ನವೆಂಬರ್ 1889 – 27 ಮೇ 1964, ನವೆಂಬರ್ ೧೪, ೧೮೮೯ – ಮೇ ೨೭, ೧೯೬೪. ಒಬ್ಬ ಸ್ವಾತಂತ್ರ್ಯ ಹೋರಾಟಗಾರರು, ಭಾರತದ ಮೊದಲ ಪ್ರಧಾನಿ ಮತ್ತು ಭಾರತದ ಸ್ವಾತಂತ್ರ್ಯ ಮೊದಲು ಮತ್ತು ನಂತರ ರಾಜಕೀಯದಲ್ಲಿ ಕೇಂದ್ರ ವ್ಯಕ್ತಿ. ಅವರು ಮಹಾತ್ಮ ಗಾಂಧಿಯವರ ಮಾರ್ಗದರ್ಶನದಡಿಯಲ್ಲಿ ಭಾರತೀಯ ಸ್ವಾತಂತ್ರ್ಯ ಚಳವಳಿಯಲ್ಲಿ ಒಬ್ಬ ಶ್ರೇಷ್ಠ ನಾಯಕನಾಗಿ ಹೊರಹೊಮ್ಮಿದರು 1947ರಲ್ಲಿ ಭಾರತ ಸ್ವತಂತ್ರ ರಾಷ್ಟ್ರವಾಗಿ ಸ್ಥಾಪನೆಯಾದಂದಿನಿಂದ 1964 ರಲ್ಲಿ ಅವರ ಮರಣದವರೆಗೂ ಭಾರತದ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದರು. ಸಮಾಜವಾದ ತತ್ವದ, ಪ್ರಜಾಪ್ರಭುತ್ವ ಗಣರಾಜ್ಯದ ಮತ್ತು ಜಾತ್ಯತೀತತತ್ವದ ಸಾರ್ವಭೌಮ ಸ್ವತಂತ್ರ ಆಧುನಿಕ ಭಾರತದ ಶಿಲ್ಪಿ ಎಂದು ಅವರು ಪರಿಗಣಿಸಲ್ಪಟ್ಟಿದ್ದಾರೆ. ಕಾಶ್ಮೀರಿ ಪಂಡಿತ್ ಸಮುದಾಯದೊಂದಿಗಿನ ಅವರ ಮೂಲ ವಂಶದಿಂದಾಗಿ ಅವರು ಪಂಡಿತ್ ನೆಹರೂ ಎಂದು ಕರೆಯಲ್ಪಡುತ್ತಾರೆ, ಭಾರತೀಯ ಮಕ್ಕಳಲ್ಲಿ ಅವರು ಚಾಚಾ ನೆಹರು (“ಅಂಕಲ್ ನೆಹರು”) ಎಂದು ಪ್ರಸಿದ್ಧರಾಗಿದ್ದರು. 

ಆರಂಭಿಕ ಜೀವನ ಮತ್ತು ವೃತ್ತಿಜೀವನ (1889-1912)

ಜನನ ಮತ್ತು ಕುಟುಂಬದ ಹಿನ್ನೆಲೆ

ಜವಾಹರಲಾಲ್ ನೆಹರು ಬ್ರಿಟಿಷ್ ಭಾರತದ ಅಲಹಾಬಾದಿನಲ್ಲಿ 14 ನವೆಂಬರ್ 1889 ರಂದು ಜನಿಸಿದರು. ಅವರ ತಂದೆ ಮೋತಿಲಾಲ್ ನೆಹರೂ (1861-1931), ಕಾಶ್ಮೀರಿ ಪಂಡಿತ್ ಸಮುದಾಯಕ್ಕೆ ಸೇರಿದ ಸ್ವ-ನಿರ್ಮಿತ ಶ್ರೀಮಂತ ವಕೀಲರು, 1919 ಮತ್ತು 1928 ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್’ನ ಅಧ್ಯಕ್ಷರಾಗಿ ಎರಡು ಬಾರಿ ಸೇವೆ ಸಲ್ಲಿಸಿದರು. ಅವರ ತಾಯಿ, ಸ್ವರೂಪ್ರಣಿ ಥುಸು (1868) -1938), ಲಾಹೋರಿನಲ್ಲಿ ನೆಲೆಗೊಂಡಿದ್ದ ಪ್ರಸಿದ್ಧ ಕಾಶ್ಮೀರಿ ಬ್ರಾಹ್ಮಣ ಕುಟುಂಬದಿಂದ ಬಂದವರು, ಮೋತಿಲಾಲ್ ಅವರ ಎರಡನೆಯ ಪತ್ನಿಯಾಗಿದ್ದರು, ಮೊದಲ ಪತ್ನಿ ಮೊದಲ ಮಗುವಿನ ಜನನ ಸಮಯದಲ್ಲಿ ಮರಣ ಹೊಂದಿದ್ದರು. ಜವಾಹರ್’ಲಾಲ್ ಮೂವರು ಮಕ್ಕಳಲ್ಲಿ ಹಿರಿಯರಾಗಿದ್ದರು, ಉಳಿದ ಇಬ್ಬರು ಬಾಲಕಿಯರು. ಹಿರಿಯ ಮಗಳು, ವಿಜಯ ಲಕ್ಷ್ಮಿ ನಂತರ ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿಯ ಮೊದಲ ಮಹಿಳಾ ಅಧ್ಯಕ್ಷರಾದರು. ಕಿರಿಯ ಸಹೋದರಿ ಕೃಷ್ಣ ಹತೀಶಿಂಗ್ ಅವರು ಪ್ರಸಿದ್ಧ ಬರಹಗಾರರಾದರು ಮತ್ತು ಆಕೆಯು ತನ್ನ ಸಹೋದರನ ಮೇಲೆ ಹಲವಾರು ಪುಸ್ತಕಗಳನ್ನು ರಚಿಸಿದರು.

ಮಕ್ಕಳ ದಿನಾಚರಣೆ ಮತ್ತು ವಿಶ್ವ ಮಕ್ಕಳ ದಿನಾಚರಣೆಯ ವ್ಯತ್ಯಾಸ ಹೀಗಿದೆ ನೋಡಿ
ಪಂಡಿತ್ ಜವಾಹರಲಾಲ್ ನೆಹರು

ನೆಹರೂ ಅವರ ಬಾಲ್ಯವನ್ನು “ಆಶ್ರಯ ಮತ್ತು ಸ್ವಾಭಾವಿಕವಾದುದು” ಎಂದು ಬಣ್ಣಿಸಿದ್ದಾರೆ. ಶ್ರೀಮಂತ ಮನೆಗಳಲ್ಲಿ ಆನಂದ್ ಭವನ ಎಂಬ ಹೆಸರಿನ ಅರಮನೆಯ ಎಸ್ಟೇಟ್ ಸೇರಿದಂತೆ ಅವರು ಸವಲತ್ತುಗಳ ವಾತಾವರಣದಲ್ಲಿ ಬೆಳೆದರು. ಅವರ ತಂದೆ ಅವರು ಖಾಸಗಿ ಗವರ್ನೆಸ್ ಮತ್ತು ಬೋಧಕರಿಂದ ಮನೆಯಲ್ಲಿ ಶಿಕ್ಷಣ ಕೊಡಿಸಿದ್ದರು. ಅವರಲ್ಲಿ ಒಬ್ಬ ಬೋಧಕ ಫರ್ಡಿನ್ಯಾಂಡ್ ಟಿ. ಬ್ರೂಕ್ಸ್ ನ ಪ್ರಭಾವದ ಅಡಿಯಲ್ಲಿ, ಅವರು ವಿಜ್ಞಾನ ಮತ್ತು ತತ್ವಶಾಸ್ತ್ರದಲ್ಲಿ ಆಸಕ್ತಿ ಹೊಂದಿದ್ದರು. ತರುವಾಯ ಅವರು ಥಿಯಾಸಾಫಿಕಲ್ ಸೊಸೈಟಿಯಲ್ಲಿ ಹದಿಮೂರನೇ ವಯಸ್ಸಿನಲ್ಲಿ ಕುಟುಂಬ ಸ್ನೇಹಿತೆ ಅನ್ನಿ ಬೆಸೆಂಟ್ ಅವರಿಂದ ಬೋಧಿಸಲ್ಪಟ್ಟರು. ಆದಾಗ್ಯೂ, ಥಿಯಾಸಾಫಿಕಲ್ ಸೊಸೈಟಿಯ ತತ್ವಶಾಸ್ತ್ರದ ಬಗೆಗಿನ ಅವರ ಆಸಕ್ತಿಯು ಶಾಶ್ವತವಾಗಿ ಉಳಿಯಲಿಲ್ಲ. ಬ್ರೂಕ್ಸ್ ತನ್ನ ಬೋಧಕನಾಗಿ ಹೊರಟು ಸ್ವಲ್ಪ ಸಮಯದ ನಂತರ ನೆಹರು ಥಿಯಾಸಾಫಿಕಲ್ ಸಮಾಜವನ್ನು ತೊರೆದನು. ಅವರು ಹೀಗೆ ಬರೆದಿದ್ದ್ದಾರೆ: “ಸುಮಾರು ಮೂರು ವರ್ಷಗಳ ಕಾಲ ನನ್ನೊಂದಿಗೆ ಇದ್ದರು ಮತ್ತು ಅನೇಕ ವಿಧಗಳಲ್ಲಿ ಅವರು ನನ್ನ ಮೆಲೆಹೆಚ್ಚು ಪ್ರಭಾವ ಬೀರಿದರು”.

ನೆಹರೂ ಅವರ ತತ್ವಶಾಸ್ತ್ರದ ಈ ಆಸಕ್ತಿಗಳು ಅವರನ್ನು ಬೌದ್ಧ ಮತ್ತು ಹಿಂದೂ ಧರ್ಮಗ್ರಂಥಗಳ ಅಧ್ಯಯನಕ್ಕೆ ಪ್ರೇರೇಪಿಸಿದವು. ಬಾಲ ರಾಮ್ ನಂದರ ಪ್ರಕಾರ, ಈ ಗ್ರಂಥಗಳು ನೆಹರೂರವರಿಗೆ “ಭಾರತದ ಧಾರ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯ ಮೊದಲ ಪರಿಚಯ ಮಾಡಿಕೊಡುವುವಾಗಿತ್ತು. ನೆಹರೂ ಅವರ ಬೌದ್ಧಿಕ ಶೋಧನೆಗೆ ಪ್ರಾರಂಭಿಕ ಉದ್ವೇಗವನ್ನು ಒದಗಿಸಿತು. ಇದು ನಂತರ ಅವರು ಬರೆದ ‘ದಿ ಡಿಸ್ಕವರಿ ಆಫ್ ಇಂಡಿಯಾ” ದಲ್ಲಿ ಪರಿಪಾಕವಾಗಿ ಹೊಮ್ಮಿತು.

ನೆಹರೂ ತನ್ನ ಯೌವನದಲ್ಲಿ ತೀವ್ರವಾದ ರಾಷ್ಟ್ರೀಯತಾವಾದಿಯಾಗಿದ್ದರು. ಎರಡನೇ ಬೋಯರ್ ಯುದ್ಧ ಮತ್ತು ರುಸ್ಸೋ-ಜಪಾನೀಸ್ ಯುದ್ಧವು ಅವರ ಭಾವನೆಗಳನ್ನು ತೀವ್ರಗೊಳಿಸಿತು. ಎರಡನೆಯದರ ಬಗ್ಗೆ ಅವರು ಹೀಗೆ ಬರೆದಿದ್ದಾರೆ, “ಜಪಾನೀಯರ ಗೆಲುವುಗಳು ನನ್ನ ಉತ್ಸಾಹಕ್ಕೆ ಸಂಚಲನೆ ನೀಡಿದೆ … ರಾಷ್ಟ್ರೀಯತಾವಾದಿ ವಿಚಾರಗಳು ನನ್ನ ಮನಸ್ಸನ್ನು ತುಂಬಿವೆ … ನಾನು ಭಾರತೀಯ ಸ್ವಾತಂತ್ರ್ಯ ಮತ್ತು ಯುರೋಪಿನ ಅಧೀನತೆಯಿಂದ ಏಷ್ಯಾ ಸ್ವಾತಂತ್ರ್ಯದ ಬಗ್ಗೆ ಯೋಚಿಸಿದೆ”. ಅವರು 1905 ರಲ್ಲಿ ಇಂಗ್ಲೆಂಡಿನ ಪ್ರಮುಖ ಶಾಲೆಯಾದ ಹ್ಯಾರೋನಲ್ಲಿ ತಮ್ಮ ಸಾಂಸ್ಥಿಕ ಶಿಕ್ಷಣವನ್ನು ಪ್ರಾರಂಭಿಸಿದರು, ಅವರು ಜಿಎಂ ಟ್ರೆವೆಲಿಯನ್’ನ ಗರಿಬಾಲ್ಡಿ ಪುಸ್ತಕಗಳಿಂದ ಪ್ರಭಾವಿತರಾಗಿದ್ದರು, ಅವರು ಶೈಕ್ಷಣಿಕ ಅರ್ಹತೆಗಾಗಿ ಬಹುಮಾನ ಪಡೆದಿದ್ದರು. ಅವರು ಗರಿಬಾಲ್ಡಿಯನ್ನು ಕ್ರಾಂತಿಕಾರಕ ನಾಯಕ ಎಂಬ ದೃಷ್ಠಿಯಿಂದ ನೋಡಿದರು. ಅವರು ಹೀಗೆ ಬರೆದಿದ್ದಾರೆ: “ಭಾರತದ ಸ್ವಾತಂತ್ರ್ಯಕ್ಕಾಗಿ ನನ್ನ ಧೈರ್ಯದ ಹೋರಾಟ ಮತ್ತು ನನ್ನ ಮನದಲ್ಲಿ ಭಾರತದ ಮತ್ತು ಇಟಲಿಯ ವಿಚಿತ್ರವಾದ ಮಿಶ್ರಣವನ್ನು ಪಡೆಯಿತು” ಎಂದು. (ಭಾರತದಲ್ಲಿ ಇದೇ ರೀತಿಯ ಕಾರ್ಯಗಳ ಕನಸುಗಳು ಬಂದವು). 

ಮಕ್ಕಳ ದಿನಾಚರಣೆ ಮತ್ತು ವಿಶ್ವ ಮಕ್ಕಳ ದಿನಾಚರಣೆಯ ವ್ಯತ್ಯಾಸ ಹೀಗಿದೆ ನೋಡಿ
ಅಲಹಾಬಾದಿನಲ್ಲಿರುವ ನೆಹರೂ ವಂಶದ ಮನೆ

ಅಕ್ಟೋಬರ್ 1907 ರಲ್ಲಿ ಕೇಂಬ್ರಿಡ್ಜ್ನ ಟ್ರಿನಿಟಿ ಕಾಲೇಜ್’ಗೆ ನೆಹರು ಸೇರಿದರು ಮತ್ತು 1910 ರಲ್ಲಿ ನೈಸರ್ಗಿಕ ವಿಜ್ಞಾನದಲ್ಲಿ ಗೌರವ (ಆನರ್ಸ್) ಪದವಿ ಪಡೆದರು. ಈ ಅವಧಿಯಲ್ಲಿ ಅವರು ರಾಜಕಾರಣ, ಅರ್ಥಶಾಸ್ತ್ರ, ಇತಿಹಾಸ ಮತ್ತು ಸಾಹಿತ್ಯವನ್ನು ಶ್ರದ್ಧಾಪೂರ್ವಕವಾಗಿ ಅಧ್ಯಯನ ಮಾಡಿದರು. ಬರ್ನಾರ್ಡ್ ಷಾ, ಎಚ್.ಜಿ.ವೆಲ್ಸ್, ಜೆ.ಎಂ. ಕೀನ್ಸ್, ಬರ್ಟ್ರಾಂಡ್ ರಸ್ಸೆಲ್, ಲೋವೆಸ್ ಡಿಕಿನ್ಸನ್ ಮತ್ತು ಮೆರೆಡಿತ್ ಟೌನ್ಸೆಂಡ್ ಅವರ ಬರಹಗಳು ಅವರ ರಾಜಕೀಯ ಮತ್ತು ಆರ್ಥಿಕ ಚಿಂತನೆಯಿಂದಾಗಿ ರೂಪಿಸಲ್ಪಟ್ಟವು.

1910 ರಲ್ಲಿ ಪದವಿಯನ್ನು ಪೂರ್ಣಗೊಳಿಸಿದ ನಂತರ, ನೆಹರು ಲಂಡನ್ನಿಗೆ ತೆರಳಿ ಇನ್ನರ್ ಟೆಂಪಲ್–ಇನ್’ನಲ್ಲಿ ಕಾನೂನು ಅಧ್ಯಯನ ಮಾಡಿದರು. ಈ ಸಮಯದಲ್ಲಿ, ಅವರು ಬೀಟ್ರಿಸ್ ವೆಬ್ ಸೇರಿದಂತೆ ಫ್ಯಾಬಿಯನ್ ಸೊಸೈಟಿಯ ವಿದ್ವಾಂಸರ ಅಧ್ಯಯನವನ್ನು ಮುಂದುವರೆಸಿದರು. ಅವರನ್ನು 1912 ರಲ್ಲಿ ಬಾರ್’ಗೆ (ನ್ಯಾಯವಾದಿಯಾಗಿ) ಕರೆದರು.

ಅಡ್ವೊಕೇಟ್ ಪದವಿ ಅಭ್ಯಾಸ

ಆಗಸ್ಟ್ 1912 ರಲ್ಲಿ ಭಾರತಕ್ಕೆ ಹಿಂದಿರುಗಿದ ನಂತರ, ನೆಹರು ಅಲಹಾಬಾದ್ ಹೈಕೋರ್ಟಇನಲ್ಲಿ ವಕೀಲರಾಗಿ ಸೇರಿಕೊಂಡರು ಮತ್ತು ನ್ಯಾಯವಾದಿಯಾಗಿ ನೆಲೆಸಲು ಪ್ರಯತ್ನಿಸಿದರು. ಆದರೆ, ಅವರ ತಂದೆಗಿಂತ ಭಿನ್ನವಾಗಿ, ಅವರ ವೃತ್ತಿಜೀವನದಲ್ಲಿ ಅವರು ಶ್ರದ್ಧೆಯುಳ್ಳ ಆಸಕ್ತಿಯನ್ನು ಹೊಂದಿರಲಿಲ್ಲ ಮತ್ತು ಕಾನೂನಿನ ಅಭ್ಯಾಸ ಅಥವಾ ವಕೀಲರ ಕಂಪನಿಯನ್ನು ಆನಂದಿಸಲಿಲ್ಲ. ಅವರು ಹೀಗೆ ಬರೆದಿದ್ದಾರೆ: “ವಾತಾವರಣವು ಬೌದ್ಧಿಕವಾಗಿ ಉತ್ತೇಜಿಸುವಂತಿಲ್ಲ ಮತ್ತು ಜೀವನದ ಸಂಪೂರ್ಣ ಜಡತೆಯ ರ್ಥಹೀನ ಒಂದು ಭಾವ ನನ್ನ ಮೇಲೆ ಆವರಿಸಿತು.” ರಾಷ್ಟ್ರೀಯತೆಯ ರಾಜಕೀಯದಲ್ಲಿ ಅವರ ಒಳಗೊಳ್ಳುವಿಕೆಯು ಅವರ ನ್ಯಾಯವಾದಿ ಉದ್ಯೋಗವನ್ನು ಮುಂಬರುವ ವರ್ಷಗಳಲ್ಲಿ ಕ್ರಮೇಣ ಬದಲಾಯಿಸಿತು. 

ಮಕ್ಕಳ ದಿನಾಚರಣೆ ಮತ್ತು ವಿಶ್ವ ಮಕ್ಕಳ ದಿನಾಚರಣೆಯ ವ್ಯತ್ಯಾಸ ಹೀಗಿದೆ ನೋಡಿ
ನೆಹರು ಇಂಗ್ಲೆಂಡಿನ ಹ್ಯಾರೋ ಶಾಲೆಯಲ್ಲಿ ಕೆಡೆಟ್ ಸಮವಸ್ತ್ರದಲ್ಲಿ

ಎಡ್ವಿನಾ ಮೌಂಟ್ಬ್ಯಾಟನ್‍ರೊಂದಿಗೆ ನೆಹರು

ನೆಹರೂ ಕಮಲಾ ಕೌಲ್’ರನ್ನು 1916 ರಲ್ಲಿ ವಿವಾಹವಾದರು. ಅವರ ಏಕೈಕ ಪುತ್ರಿ ಇಂದಿರಾ 1917 ರಲ್ಲಿ ಒಂದು ವರ್ಷದ ನಂತರ ಜನಿಸಿದಳು. ಕಮಲಾ ನವೆಂಬರ್ 1924 ರಲ್ಲಿ ಗಂಡುಮಗುವಿಗೆ ಜನ್ಮ ನೀಡಿದರು, ಆದರೆ ಅದು ಕೇವಲ ಒಂದು ವಾರದವರೆಗೆ ಮಾತ್ರಾ ಜೀವಿಸಿತ್ತು. 1942 ರಲ್ಲಿ ಇಂದಿರಾ ಫಿರೋಜ್ ಗಾಂಧಿಯವರನ್ನು ಮದುವೆಯಾದರು. ಅವರಿಗೆ ರಾಜೀವ್ (1944) ಮತ್ತು ಸಂಜಯ್ (1946) ಇಬ್ಬರು ಪುತ್ರರು ಇದ್ದರು. 

ಕಮಲಾರ ಮರಣದ ನಂತರ, ನೆಹರು, ವಿಧುರನಾಗಿ ಉಳಿದರು, ಅವರು ಕೆಲವು ಮಹಿಳೆಯರೊಂದಿಗೆ ಸಂಬಂಧ ಹೊಂದಿದ್ದನೆಂದು ಆರೋಪಿಸಲಾಯಿತು. ಇವುಗಳಲ್ಲಿ ಶ್ರದ್ಧಾ ಮಾತಾ, ಪದ್ಮಜಾ ನಾಯ್ಡು ಮತ್ತು ಎಡ್ವಿನಾ ಮೌಂಟ್ಬ್ಯಾಟನ್ ಸೇರಿದ್ದಾರೆ. ಎಡ್ವಿನಾ ಅವರ ಪುತ್ರಿ ಪಮೇಲಾ ಎಡ್ವಿನಾದೊಂದಿಗೆ ನೆಹರುರ ಪ್ಲ್ಯಾಟೋನಿಕ್ (ದೈಹಿಕ ಸಂಬಂಧವಿಲ್ಲದ ಪ್ರೇಮ) ಸಂಬಂಧವನ್ನು ಒಪ್ಪಿಕೊಂಡರು. 1960 ರಲ್ಲಿ ಎಡ್ವಿನಾ ಮೌಂಟ್ಬ್ಯಾಟನ್ ಸಮುದ್ರದ ಸಮಾಧಿಗೆ ಭಾರತೀಯ ನೌಕಾದಳದ ಸೈನ್ಯವನ್ನು ಕಳುಹಿಸಲು ವೈಯಕ್ತಿಕ ನಿರ್ಧಾರವನ್ನು ನೆಹರೂ ತೆಗೆದುಕೊಂಡರು.

ನೆಹರೂ ಅವರ ಸಹೋದರಿ ವಿಜಯ ಲಕ್ಷ್ಮಿ ಪಂಡಿತ್ ಇಂದಿರಾ ಗಾಂಧಿಯವರ ಸ್ನೇಹಿತ ಮತ್ತು ಜೀವನಚರಿತ್ರೆಕಾರ ಪಪುಲ್ ಜಯಕರ್ ಅವರಿಗೆ ಸರೋಜಿನಿ ನಾಯ್ಡು ಮಗಳು ಸ್ವಾತಂತ್ರ ಹೋರಾಟಗಾರ್ತಿ ಕಾಂಗ್ರೆಸ್ ಕಾರ್ಯಕರ್ತೆ, ನೆಹರೂ ಅಭಿಮಾನಿಯಾದ ಪದ್ಮಜಾ ನಾಯ್ಡು ಅನೇಕ ವರ್ಷಗಳ ಕಾಲ ನೆಹರೂ ಇದ್ದ ತೀನ್ ಮೂರ್ತಿ ಭವನದ ಹೊರಗೃಹದಲ್ಲಿ ವಾಸಿಸುತ್ತಿದ್ದರು ಎಂದು ತಿಳಿಸಿದರು. ನೆಹರು ಅವರು ತಾಯಿಯನ್ನು ಕಳೆದುಕೊಂಡ ಮಗಳು ಇಂದಿರಾ ಮನಸ್ಸಿಗೆ ನೋವಾಗುವುದೆಂದು ಎರಡನೇ ಮದುವೆಗೆ ಮನಸ್ಸು ಮಾಡಲಿಲ್ಲ.

ಶ್ರದ್ಧಾ ಮಾತಾ ಸನ್ಯಾಸಿಯಾಗಿದ್ದು ಹಿಂದೂ ಧರ್ಮದ ಬಗೆಗೆ ಅವರು ಉತ್ತಮ ಪ್ರವಚನ ಮಾಡುತ್ತಿದ್ದರು. ನೆಹರು ಮಂತ್ರಿಮಂಡಲದಲ್ಲಿ ಭಾರತದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವರಾಗಿದ್ದ ಶ್ಯಾಮ್ ಪ್ರಸಾದ್ ಮುಖರ್ಜಿಯವರು ತಮಗೆ ಆಪ್ತರಾಗಿದ್ದ ಮತ್ತು ದೆಹಲಿಗೆ ಬಂದಾಗ ಅವರಲ್ಲಿ ಉಳಿಯುತ್ತಿದ್ದ,ಮತ್ತು ತಮ್ಮ ಆಭಿಮಾನಿಯಾಗಿದ್ದ ಸಂನ್ಯಾಸಿನಿ ಶ್ರದ್ಧಾ ಮಾತಾರನ್ನು ಭೇಟಿಮಾಡಲು ಮತ್ತು ಹಿಂದೂಧರ್ಮದ ಬಗ್ಗೆ ಒಂದು ವಾರ ಅವರ ಪ್ರವಚನ ಕೇಳಲು, ನೆಹರೂ ಬಿಡುವಿಲ್ಲವೆಂದರೂ ಅವರನ್ನು ಮುಖರ್ಜಿ ಬಹಳ ಒತ್ತಾಯಿಸಿದರು. ಅದಕ್ಕೆ ಮಣಿದು ಅವರನ್ನು ಭೇಟಿಮಾಡಲು ನೆಹರೂ ಒಪ್ಪ್ಪಿದರು. ಹಾಗೆ ಆದ ಒಂದು ವಾರದ ನಂತರ ಪಟೇಲರು ಸನ್ಯಾಸಿನಿಯ ಭೇಟಿಯ ವದಂತಿಯ ಬಗೆಗೆ ನೆಹರೂ ಅವರಿಗೆ ಪತ್ರ ಬರೆದು ವಿಚಾರಿಸಿದಾಗ, ಸಂನ್ಯಾಸಿನಿಯು ತಮ್ಮ ಧಾರ್ಮಿಕ ಸಿದ್ದಾಂತವನ್ನು ತಮಗೆ ಹೇಳುತ್ತಿದ್ದಾರೆ – ಮತ್ತು ತಾವು ತಮ್ಮ ಸಿದ್ದಾಂತವನ್ನು ಅವರಿಗೆ ಹೇಳುತ್ತಿದ್ದೇನೆ – ಅಷ್ಟೆ ಎಂದು ಪಟೆಲರಿಗೆ ಪತ್ರ ಬರೆದರು. ಅದು ನಂತರ ಗಾಸಿಪ್ ಆಯಿತು. ಆದರೆ ನೆಹರು ತಮ್ಮ ಜೀವನದಲ್ಲಿ ಯಾವುದನ್ನೂ ಮುಚ್ಚಿಡಲು ಪ್ರಯತ್ನಿಸಲಿಲ್ಲ. ಆ ಸಂಬಂಧ ಎಲ್ಲಾ ಪತ್ರಗಳನ್ನು ದಾಖಲೆ ವಿಭಾಗಕ್ಕೆ ಕಳಿಸಿದರು.

ನೆಹರು ಪ್ರಧಾನಿಯಾಗಿದ್ದ ಬಹಳಷ್ಟು ಅವಧಿಯಲ್ಲಿ ಇಂದಿರಾ ತಮ್ಮ ತಂದೆಗೆ ಅನಧಿಕೃತವಾಗಿ ವೈಯಕ್ತಿಕ ಸಹಾಯಕರಾಗಿ ಸೇವೆ ಸಲ್ಲಿಸಿದರು. 1950 ರ ಅಂತ್ಯದ ವೇಳೆಗೆ ಇಂದಿರಾ ಗಾಂಧಿ ಕಾಂಗ್ರೆಸ್‍ನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಆ ಅಧಿಕಾರದಲ್ಲಿ, 1959 ರಲ್ಲಿ ಕಮ್ಯುನಿಸ್ಟ್ ನೇತೃತ್ವದ ಕೇರಳ ರಾಜ್ಯ ಸರ್ಕಾರವನ್ನು ವಜಾಮಾಡುವುದರಲ್ಲಿ ಅವರು ಪ್ರಮುಖ ಪಾತ್ರ ವಹಿಸಿದರು.

ಮಕ್ಕಳ ದಿನಾಚರಣೆ ಮತ್ತು ವಿಶ್ವ ಮಕ್ಕಳ ದಿನಾಚರಣೆಯ ವ್ಯತ್ಯಾಸ ಹೀಗಿದೆ ನೋಡಿ
ನೆಹರು ಬ್ಯಾರಿಸ್ಟರ್ -ಅಲಹಾಬಾದ್ ಹೈಕೋರ್ಟಿನಲ್ಲಿ

ಧರ್ಮ ಮತ್ತು ವೈಯಕ್ತಿಕ ನಂಬಿಕೆಗಳು

ಹಿಂದೂ ಅಗ್ನೊಸ್ಟಿಕ್ ಎಂದು ವರ್ಣಿಸಲ್ಪಟ್ಟ, ಮತ್ತು “ವೈಜ್ಞಾನಿಕ ಮಾನವತಾವಾದಿ” ಎಂದು ನೆಹರು ಅವರ ವ್ಯಕ್ತ್ತಿತ್ವ-ಸ್ವಭಾವವನ್ನು ಹೇಳಬಹುದು. ಧಾರ್ಮಿಕ ನಿಷೇಧದ ನಿಯಮಗಳು ಗಳು ಭಾರತವನ್ನು ಮುಂದೆ ಅಭಿವೃದ್ಧಿಯತ್ತ ಸಾಗಲು ಮತ್ತು ಆಧುನಿಕ ಪರಿಸ್ಥಿತಿಗಳಿಗೆ ಅಳವಡಿಸಿಕೊಳ್ಳುವುದನ್ನು ತಡೆಗಟ್ಟುತ್ತವೆ ಎಂದು ನೆಹರೂ ಅಭಿಪ್ರಾಯಪಟ್ಟರು: “ಯಾವುದೇ ತತ್ತ್ವಗಳಿಗೆ ಮತ್ತು ಧರ್ಮಪ್ರಜ್ಞೆಗೆ ಗುಲಾಮರಲ್ಲದ ಮನಸ್ಥಿತಿಯ ದೇಶ ಅಥವಾ ಜನರು ಪ್ರಗತಿ ಸಾಧಿಸಬಹುದು ಮತ್ತು ನಮ್ಮ ದೇಶ ಮತ್ತು ಜನರು ಬೇಸರಪಡುವಷ್ಟು ಅಸಾಧಾರಣವಾದ ತಾತ್ವಿಕ ಕಟ್ಟಾನಂಬಿಗೆಯವರೂ ಮತ್ತು ಸಂಕುಚಿತ ಮನಸ್ಸಿನವರಾಗಿದ್ದಾರೆ.” 

ಧರ್ಮವೆಂದು ಕರೆಯಲ್ಪಡುವ ಅಥವಾ ಆ ಬಗೆಯ ನಂಬುಗೆ ಯಾವುದೇ ಪ್ರಮಾಣದಲ್ಲಿರಲಿ, ಭಾರತದಲ್ಲಿ ಮತ್ತು ಬೇರೆಡೆಯಲ್ಲಿ, ಸಂಘಟಿತ ಧರ್ಮದ ಚಿತ್ರಣವು ಭೀತಿಯಿಂದ ತುಂಬಿದೆ ಮತ್ತು ನಾನು ಆಗಾಗ್ಗೆ ಅದನ್ನು ಖಂಡಿಸಿದ್ದೇನೆ. ಅದನ್ನು ಶುದ್ಧವಾಗಿ ಮಾಡಲು ಗುಡಿಸಿ ಶುದ್ಧಮಾಡಲು ಬಯಸುತ್ತೇನೆ. ಬಹುಮಟ್ಟಿಗೆ ಅದು ಯಾವಾಗಲೂ ಕುರುಡು ನಂಬಿಕೆ ಮತ್ತು ಪ್ರತಿಭಟನೆಯ ಪ್ರತಿಕ್ರಿಯೆ, ಧರ್ಮಾಂಧತೆ ಮತ್ತು ಹುಸಿ ಧರ್ಮನಿರತೆ, ಮೂಢನಂಬಿಕೆ, ಶೋಷಣೆ ಮತ್ತು ಕೆಲವರ ಹಿತಾಸಕ್ತಿಗಳ ಸಂರಕ್ಷಣೆಗಾಗಿ ನಿಂತಿದೆ.

ಅವರ ಆತ್ಮಚರಿತ್ರೆಯಲ್ಲಿ, ಅವರು ಕ್ರಿಶ್ಚಿಯನ್ ಧರ್ಮ ಮತ್ತು ಇಸ್ಲಾಂ, ಮತ್ತು ಭಾರತದಲ್ಲಿ ಅವುಗಳ ಪ್ರಭಾವವನ್ನು ವಿಶ್ಲೇಷಿಸಿದ್ದಾರೆ. ಅವರು ಭಾರತವನ್ನು ಜಾತ್ಯತೀತ ರಾಷ್ಟ್ರವೆಂದು ರೂಪಿಸಲು ಬಯಸಿದ್ದರು; ಅವರ ಜಾತ್ಯತೀತ ನೀತಿಗಳು ಚರ್ಚೆಯ ವಿಷಯವಾಗಿ ಉಳಿದಿವೆ. 

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಚಿಟ್ಟೆಗಳ ವಿಧ

ಚಿಟ್ಟೆಗಳ ವಿಧಗಳು

ಅಮೆಜಾನ್‍ನ ಪಕ್ಷಿಗಳ ಅವನತಿ

ಅಮೆಜಾನ್‍ನ ಪಕ್ಷಿಗಳ ಅವನತಿಗೆ ಕಾರಣಗಳು