in

ಅತೀ ಹೆಚ್ಚು ಮಳೆ ಬೀಳುವ ಕಾಡುಗಳು ಮಳೆಕಾಡು

ಮಳೆಕಾಡು

ಮಳೆಕಾಡುಗಳು ಅತ್ಯಂತ ಹೆಚ್ಚು ಮಳೆ ಬೀಳುವ ಕಾಡುಗಳ ಲಕ್ಷಣಗಳಿಂದ ಕೂಡಿದ್ದು, ಸಹಜವಾದ ಕನಿಷ್ಠ ವಾರ್ಷಿಕ ಮಳೆ ಬೀಳುವ ಪ್ರಮಾಣ 1750–2000 ಮಿಮೀ (68-78 ಇಂಚುಗಳು)ಕ್ಕಿಂತ ಹೆಚ್ಚು ಎಂದು ಅರ್ಥನಿರೂಪಣೆ ಮಾಡುತ್ತದೆ. ಪರ್ಯಾಯವಾಗಿ ಅಂತರ ಉಷ್ಣವಲಯದ ಅಭಿಸರಣೆ ವಲಯವೆಂದು ಕರೆಯುವ ಮಾನ್ಸೂನ್ ಕನಿಷ್ಠ ವಾಯುಭಾರ ಪ್ರದೇಶ, ಭೂಮಿಯ ಉಷ್ಣವಲಯದ ಮಳೆ ಕಾಡುಗಳ ಸೃಷ್ಟಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಪ್ರಪಂಚದ ಆವಾಸಸ್ಥಾನಗಳ ಎಲ್ಲ ಪ್ರಭೇದಗಳು ಒಟ್ಟು 40 ರಿಂದ 75 ಪ್ರತಿಶತದವರೆಗೆ ಮಳೆಕಾಡುಗಳಿಗೆ ಸ್ಥಳೀಯವಾಗಿರುತ್ತದೆ. ಸಸ್ಯಗಳ, ಕೀಟಗಳ, ಮತ್ತು ಸೂಕ್ಷ್ಮ ಜೀವಿಗಳ ಅನೇಕ ದಶಲಕ್ಷದಷ್ಟು ಪ್ರಭೇದಗಳನ್ನು ಇನ್ನೂ ಶೋಧನೆ ಮಾಡಲಾಗಿಲ್ಲ ಎಂದು ಅಂದಾಜುಮಾಡಲಾಗಿದೆ. ಉಷ್ಣವಲಯದ ಮಳೆಕಾಡುಗಳನ್ನು “ಭೂಮಿಯ ಆಭರಣಗಳು” ಮತ್ತು “ಪ್ರಪಂಚದ ಅತ್ಯಂತ ದೊಡ್ಡ ಔಷದಶಾಲೆ”ಎಂದು ಕರೆಯಲಾಗುತ್ತದೆ. ಏಕೆಂದರೆ ನೈಸರ್ಗಿಕ ಔಷಧಿಗಳ ಕಾಲು ಭಾಗಕ್ಕಿಂತ ಹೆಚ್ಚು ಔಷಧಿಗಳನ್ನು ಅಲ್ಲಿ ಶೋಧಿಸಲಾಗಿದೆ. ಮಳೆಕಾಡುಗಳು, ಪ್ರಪಂಚದ 28% ಆಮ್ಲಜನಕದ ಪೂರೈಕೆಗೂ ಕೂಡ ಕಾರಣವಾಗಿವೆ. ಆಮ್ಲಜನಕದ ಉತ್ಪಾದನೆ ಎಂದು ಹೆಚ್ಚಾಗಿ ತಪ್ಪು ತಿಳಿದುಕೊಳ್ಳಲಾಗುತ್ತದೆ, ಇಂಗಾಲದ ಡೈಆಕ್ಸೈಡ್ ನಿಂದ ದ್ಯುತಿಸಂಶ್ಲೇಷಣೆ ಕ್ರಿಯೆಯ ಮೂಲಕ ಆಮ್ಲಜನಕವನ್ನು ಸಂಸ್ಕರಿಸುತ್ತದೆ ಹಾಗು ಬಯೋಸಿಕ್ವೆಸ್ಟ್ರೇಷನ್ ಜೈವಿಕ ಕ್ರಿಯೆಗಳ ಮೂಲಕ ಇಂಗಾಲದ ಡೈಆಕ್ಸೈಡ್ ಸಂಗ್ರಹಣೆ ಮೂಲಕ ಇಂಗಾಲವಾಗಿ ಸಂರಕ್ಷಿಸಿಡುತ್ತದೆ.

ಅತೀ ಹೆಚ್ಚು ಮಳೆ ಬೀಳುವ ಕಾಡುಗಳು ಮಳೆಕಾಡು
ಮಳೆಕಾಡು

ಮಳೆಕಾಡುಗಳ ಅನೇಕ ಪ್ರದೇಶಗಳಲ್ಲಿ ನೆಲದಮಟ್ಟದವರೆಗೆ ಸೂರ್ಯನ ಬೆಳಕು ಬೀಳುವುದಿಲ್ಲವಾದ್ದರಿಂದ, ಇಲ್ಲಿ ದಟ್ಟ ಕುರುಚಲು ಗಿಡಗಳನ್ನು ನಿರ್ಬಂಧಿಸುತ್ತದೆ. ಇದರಿಂದಾಗಿ ಕಾಡಿನಲ್ಲಿ ಸಂಚರಿಸಲು ಸಾಧ್ಯವಾಗುತ್ತದೆ. ಒಂದು ವೇಳೆ ಎಲೆಯ ಮೇಲಾವರಣವು ನಾಶವಾದಲ್ಲಿ ಅಥವಾ ಉದುರಿ ಹೋದಲ್ಲಿ, ಕಾಡಿನ ನೆಲಭಾಗವು ಬಳ್ಳಿಗಳ, ಪೊದೆಗಳ, ಕಾಡು ಎಂದು ಕರೆಯುವ ಸಣ್ಣ ಸಣ್ಣ ಮರಗಳ ಅಧಿಕ ಬೆಳವಣಿಗೆಯಿಂದಾಗಿ ತುಂಬಿಹೋಗುತ್ತದೆ. ಎರಡು ರೀತಿಯ ಮಳೆಕಾಡುಗಳಿವೆ ಅವುಗಳೆಂದರೆ: ಉಷ್ಣವಲಯದ ಮಳೆಕಾಡು ಮತ್ತು ಸಮಶೀತೋಷ್ಣ ಮಳೆಕಾಡು.

ಪ್ರಪಂಚದ ಸಸ್ಯಗಳ ಮತ್ತು ಪ್ರಾಣಿಗಳ ಜಾತಿಗಳಲ್ಲೇ ಅರ್ಧದಷ್ಟು ಜಾತಿಗಳು ಮಳೆಕಾಡಿನಲ್ಲಿ ಕಂಡುಬರುತ್ತವೆ. ಮಳೆಕಾಡುಗಳು, ಸಸ್ತನಿಗಳು, ಸರೀಸೃಪಗಳು, ಪಕ್ಷಿಗಳು ಮತ್ತು ಅಕಶೇರುಕಗಳನ್ನು ಒಳಗೊಂಡಂತೆ ಪ್ರಾಣಿಸಂಕುಲದ ಅತಿ ದೊಡ್ಡ ಸರಣಿಯನ್ನು ಪೋಷಿಸುತ್ತದೆ. ಸಸ್ತನಿಗಳು, ಪ್ರೈಮೇಟ್, ಫೀಲಿಡ್, ಮತ್ತು ಇತರ ವಂಶಳನ್ನು ಒಳಗೊಳ್ಳಬಹುದು. ಸರೀಸೃಪಗಳು, ಹಾವುಗಳನ್ನು, ಟರ್ಟಲ್ ಅಂದರೆ ಕಡಲಾಮೆಗಳನ್ನು, ಗೋಸುಂಬೆಗಳನ್ನು, ಮತ್ತು ಇತರ ವಂಶಗಳನ್ನು ಒಳಗೊಂಡರೆ, ಪಕ್ಷಿಗಳು ವಾಂಗಿಡೇ ಮತ್ತು ಕುಕ್ಯುಲಿಡೇಯಂತಹ ವಂಶಗಳನ್ನು ಒಳಗೊಳ್ಳುತ್ತವೆ. ಮಳೆಕಾಡುಗಳಲ್ಲಿ ಅಕಶೇರುಕಗಳ ಡಜನ್ ಗಟ್ಟಲೆ ಕುಟುಂಬಗಳು ಕಂಡುಬರುತ್ತವೆ. ಶಿಲೀಂಧ್ರಗಳು ಕೂಡ ಮಳೆಕಾಡಿನ ಪ್ರದೇಶಗಳಲ್ಲಿ ಅತೀ ಸಾಮಾನ್ಯವಾಗಿ ಕಂಡುಬರುತ್ತವೆ. ಏಕೆಂದರೆ ಅವು ಸಸ್ಯಗಳ ಮತ್ತು ಪ್ರಾಣಿಗಳ ಕೊಳೆತ ಅವಶೇಷಗಳನ್ನು ತಿಂದು ಬದುಕಬಲ್ಲವು. ಈ ಜಾತಿಗಳು, ಅರಣ್ಯ ನಾಶದಿಂದಾಗಿ, ಆವಾಸ ಸ್ಥಾನದ ಕೊರತೆಯಿಂದಾಗಿ ಹಾಗು ವಾಯುಮಂಡಲಕ್ಕೆ ಜೀವ ರಾಸಾಯನಿಕದ ಬಿಡುಗಡೆಯಿಂದಾಗಿ ತೀವ್ರಗತಿಯಲ್ಲಿ ಕಣ್ಮರೆಯಾಗುತ್ತಿವೆ.

ಅತೀ ಹೆಚ್ಚು ಮಳೆ ಬೀಳುವ ಕಾಡುಗಳು ಮಳೆಕಾಡು
ಉಷ್ಣವಲಯದ ಮಳೆಕಾಡು

ಉಷ್ಣವಲಯದ ಮಳೆಕಾಡುಗಳು, ಮರದ ದಿಮ್ಮಿಗಳನ್ನು ಹಾಗು ಮಾಂಸ ಮತ್ತು ಚರ್ಮದಂತಹ ಪ್ರಾಣಿಯ ಉತ್ಪನ್ನಗಳನ್ನು ಒದಗಿಸುತ್ತವೆ. ಮಳೆಕಾಡುಗಳು ಪ್ರವಾಸಿ ಸ್ಥಳಗಳಾಗಿಯೂ ಹಾಗು ಪರಿಸರ ವ್ಯವಸ್ಥೆಯ ಸೇವೆಯನ್ನು ನೀಡುವಲ್ಲಿಯೂ ಮೌಲ್ಯವನ್ನು ಹೊಂದಿದೆ. ಅನೇಕ ಆಹಾರಗಳು ಮೂಲತಃ ಉಷ್ಣವಲಯದ ಕಾಡುಗಳಿಂದ ಬರುತ್ತವೆ. ಅಲ್ಲದೇ ಅವುಗಳನ್ನು ಬಹುಶಃ ಮುಂಚೆ ಪ್ರಮುಖ ಕಾಡುಗಳಾಗಿದ್ದ ಪ್ರದೇಶಗಳ ಜಮೀನಿನಲ್ಲಿ ಬೆಳೆದಿರಬಹುದು.ಅಲ್ಲದೇ ಸಸ್ಯಗಳಿಂದ ಪಡೆಯಲಾದ ಔಷಧಿಗಳನ್ನು ಜ್ವರ, ಶಿಲೀಂಧ್ರ ಸೊಂಕು, ಸುಟ್ಟಗಾಯ, ಹೊಟ್ಟೆ ಮತ್ತು ಕರುಳಿನ ಸಮಸ್ಯೆಗಳು, ನೋವು, ಉಸಿರಾಟದ ಸಮಸ್ಯೆ ಮತ್ತು ಗಾಯಗಳ ಚಿಕಿತ್ಸೆಯಲ್ಲಿ ಸಾಮಾನ್ಯವಾಗಿ ಬಳಸಲಾಗುತ್ತದೆ.

ಮಧ್ಯ ಆಫ್ರಿಕನ್ ಮಳೆಕಾಡು, ಎಂಬುಟಿ ಪಿಗ್ಮಿಗಳ ನೆಲೆಬೀಡಾಗಿದೆ. ಸಮಭಾಜಕ ವೃತ್ತದ ಮಳೆಕಾಡುಗಳಲ್ಲಿರುವ ಬೇಟೆಗಾರ ಜನಾಂಗಗಳಲ್ಲಿ ಇವರು ಒಬ್ಬರು. ಇವರು ಕುಳ್ಳಗಿನ ಲಕ್ಷಣಗಳಿಂದ ಕೂಡಿದ್ದಾರೆ ಒಂದುವರೆ ಮೀಟರ್ ಗಳಿಗಿಂತ ಗಿಡ್ಡವಿರುತ್ತಾರೆ ಅಥವಾ ಸರಿಸುಮಾರು 59 ಇಂಚುಗಳಷ್ಟಿರುತ್ತಾರೆ. ಇವರು ಕಾಲಿನ್ ಟರ್ನ್ ಬುಲ್ ರ ಅಧ್ಯಯನದ ವಿಷಯವಾಗಿದ್ದರು. ಇವರು 1962 ರಲ್ಲಿ ದಿ ಫಾರೆಸ್ಟ್ ಪಿಪಲ್ ಎಂಬ ಪುಸ್ತಕ ಬರೆದರು. ಉಳಿದವರಲ್ಲಿ ಆಗ್ನೇಯ ಏಷ್ಯಾದಲ್ಲಿ ವಾಸಿಸುತ್ತಿರುವ ಪಿಗ್ಮಿಗಳನ್ನು “ನಿಗ್ರೀಟೋ ಎಂದು ಕರೆಯಲಾಗುತ್ತದೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

12 Comments

ತುಪ್ಪ

ಕೌರವರು ಕೂಡಾ ತುಪ್ಪದ ಮಡಿಕೆಯಲ್ಲಿ ಜನಿಸಿದರಂತೆ ಅಂತಹ ತುಪ್ಪದ ವಿಷಯ

ನಾಥೂರಾಮ್ ಗೋಡ್ಸೆ

ನಾಥೂರಾಮ್ ಗೋಡ್ಸೆ