in ,

ಅಶ್ವತ್ಥ ಮರದ ವಿಶೇಷತೆ

ಅಶ್ವತ್ಥ ಮರ
ಅಶ್ವತ್ಥ ಮರ

ವೃಕ್ಷರಾಜ ಎನಿಸಿಕೊಂಡಿರುವ ಈ ಮರವನ್ನು ದೇವಾಲಯಗಳಲ್ಲಿ ಬೆಳೆಸುತ್ತಾರೆ. ಸಾಲುಮರಗಳಾಗಿಯೂ ಬೆಳೆಸುವುದುಂಟು. ಮರ ಬಹು ಗಟ್ಟಿಯಾಗಿದ್ದು ಮಳೆ ಗಾಳಿಗೆ ಬೀಳುವುದಿಲ್ಲ. ಸೊಂಪಾದ ನೆರಳು ಕೊಡುತ್ತದೆ. ಸಾವಿರಾರು ಹಕ್ಕಿಗಳಿಗೆ ಆಶ್ರಯ ನೀಡುತ್ತದೆ. ಹುಲ್ಲಿಗಿಂತ ಎರಡು ಮೂರು ಪಟ್ಟು ಹೆಚ್ಚು ಪ್ರೊಟಿನ್​ ಹೆಚ್ಚಾಗಿರುವ ಇದರ ಎಲೆಗಳು ದನಕರುಗಳಿಗೆ, ಆನೆಗಳಿಗೆ ಉತ್ತಮ ಮೇವು. ಮ್ಯಾನ್ಮಾರ್​ನಲ್ಲಿ ಹಕ್ಕಿಗಳು ತಿನ್ನುತ್ತವೆ.

ಅಶ್ವತ್ಥಮರ ಭಾರತೀಯರಿಗೆಲ್ಲರಿಗೂ ಪವಿತ್ರವೆಂದು ಪರಿಗಣಿತವಾದ ಮರ.ಇದು ದಕ್ಷಿಣ ಏಷಿಯಾದಲ್ಲಿ ವ್ಯಾಪಕವಾಗಿರುವ ಮರ. ಇದು ನೇಪಾಳ, ಭಾರತ, ಬಾಂಗ್ಲಾದೇಶ, ಮ್ಯಾನ್ಮಾರ್, ಪಾಕಿಸ್ತಾನ, ಶ್ರೀಲಂಕಾ, ನೈಋತ್ಯ ಚೀನಾ ಮತ್ತು ಇಂಡೋಚೈನಾ ಸ್ಥಳೀಯವಾದ ಅಂಜೂರದ ಒಂದು ಜಾತಿಯ ಮರ. ಅರಳಿಮರ ಹಿಪ್ಪುನೇರಳೆ ಕುಟುಂಬಕ್ಕೆ ಸೇರಿದೆ. ಇದು ಹಲವಾರು ಹೆಸರುಗಳಿಂದ ಕರೆಯಲ್ಪಡುತ್ತದೆ. ಭೋದಿವೃಕ್ಷ, ಪೀಪಲ್, ಅರಳಿ ಮುಂತಾಗಿ ಬೇರೆ ಬೇರೆ ಪ್ರದೇಶಗಳಲ್ಲಿ ಹೆಸರಿದೆ. ಈ ಮರದ ಕೆಳಗೆ ಕುಳಿತು ಧ್ಯಾನ ನಿರತರಾಗಿರುವಾಗಲೇ ಗೌತಮಬುದ್ಧರಿಗೆ ಜ್ಞಾನೋದಯವಾಯಿತು ಎಂದು ಪ್ರತೀತಿ. ಭಾರತದ ಎಲ್ಲಾ ಕಡೆ ಬೆಳೆಯುವುದು. ಹಳ್ಳಿಗಳ ಅಶ್ವತ್ಥಕಟ್ಟೆಯಲ್ಲಿ ಬೆಳೆದು ಶೋಭಿಸುವ ಪವಿತ್ರ ಪೂಜಾ ವೃಕ್ಷ. ಚಕ್ರವರ್ತಿ ಅಶೋಕನ ಆಳ್ವಿಕೆಯ ಕಾಲದಲ್ಲಿ ದೇಶವನ್ನು ವ್ಯಾಪಕವಾಗಿ ನೆಟ್ಟು ಬೆಳೆಸಲಾಯಿತು. ನಮ್ಮ ದೇಶದಿಂದ ಶ್ರೀಲಂಕಾ ದೇಶಕ್ಕೆ ತೆಗೆದುಕೊಂಡು ಹೋಗಿ ಅನುರಾಧಪುರದಲ್ಲಿ ನೆಡಲಾಯಿತು. 2200 ವರ್ಷಗಳ ಹಿಂದೆ ಬೋಧ ಗಯಾದ ಬೋಧಿ ವೃಕ್ಷದ ಕೊಂಬೆಯಿದು. ಇದರ ಎಲೆಗಳು ವೀಳ್ಯದೆಲೆಯನ್ನು ಹೋಲುತ್ತದೆ. ಆದರೆ ತುದಿ ಚೂಪಾಗಿ ಉದ್ದವಾಗಿರುತ್ತದೆ. ಎಲೆಗಳು ಹೊಳಪಾಗಿದ್ದು, ನರಗಳು ಸ್ವಷ್ಟವಾಗಿ ಕಾಣುತ್ತವೆ. ಎಳೆ ಎಲೆಯ ಕುಡಿಗಳು ತಿಳಿಕೆಂಪು ಬಣ್ಣವನ್ನು ಹೊಂದಿರುತ್ತವೆ. ಇದು ದೊಡ್ಡಮರ, ಕವಲುಗಳು ಅಗಲವಾಗಿ ಹರಡುತ್ತವೆ. ಕಾಯಿಗಳು ಹಸಿರಾಗಿದ್ದು, ಒಣಗಿದ ಮೇಲೆ ಕಂದು ವರ್ಣವನ್ನು ಹೊಂದುತ್ತವೆ. ಕಾಯಿಯ ತುಂಬ ಸಣ್ಣ ಸಣ್ಣ ಬೀಜಗಳಿರುತ್ತವೆ. ಈ ಕಾಯಿಗಳನ್ನು ಹಕ್ಕಿಪಕ್ಷಿಗಳು ತಿಂದು ತೃಪ್ತಿಪಡುತ್ತವೆ ಮತ್ತು ಬೀಜ ಪ್ರಸಾರದಲ್ಲಿ ನೆರವಾಗುತ್ತವೆ.

ಅಶ್ವತ್ಥ ಮರದ ವಿಶೇಷತೆ
ಅಶ್ವತ್ಥ ಮರ

ಶನಿಗೆ ಸಂಭಂಧಿಸಿದ ಸಮಸ್ಯೆಗಳ ನಿವಾರಣೆಗೆ ಅಶ್ವತ್ಥ ಮರ ಬೆಳೆದು ಅದಕ್ಕೆ ನೀರನ್ನು ಅರ್ಪಿಸಲು ಹೇಳಲಾಗುತ್ತದೆ. ಈ ಮರ ಹಗಲು ಮತ್ತು ರಾತ್ರಿ ಆಕ್ಸಿಜನ್ ನೀಡುವ ಮರವಾಗಿದೆ. ಈ ಮರದ ಬುಡಕ್ಕೆ ಎಷ್ಟು ನೀರು ಹಾಕಲಾಗುವುದೋ, ಇದು ಅಷ್ಟೇ ಆಕ್ಸಿಜನ್ ಹೊರಹಾಕುತ್ತದೆ. ಇದೆ ಕಾರಣದಿಂದ ಈ ಗಿಡಕ್ಕೆ ನೀರನ್ನು ಅರ್ಪಿಸುವುದು ಶುಭ ಎಂದು ಹೇಳಲಾಗುತ್ತದೆ. ಇದು ಪ್ರಕೃತಿ ದೃಷ್ಟಿಯಿಂದಲೂ ಕೂಡ ಉತ್ತಮ. ಈ ಮರಕ್ಕೆ ನೀರು ಅರ್ಪಿಸುವ ವ್ಯಕ್ತಿಯ ಜನ್ಮ-ಜನ್ಮಗಳ ಪಾಪಗಳು ನಿವಾರಣೆಯಾಗುತ್ತವೆ ಎಂದು ಹೇಳಲಾಗಿದೆ.

ಹಿಂದಿನ ಕಾಲದಲ್ಲಿ ಅಶ್ವತ್ಥ ಮರವು ಯಮ ದೇವರೊಂದಿಗೆ ಸಂಬಂಧವನ್ನು ಪಡೆದುಕೊಂಡಿದೆ ಎಂದು ನಂಬಿದ್ದರು. ಇದರ ಗಿಡವನ್ನು ಹಳ್ಳಿಯ ಹೊರ ವಲಯದಲ್ಲಿ ಹಾಗೂ ಸ್ಮಶಾನದ ಬಳಿ ಇಡಲಾಗುತ್ತಿತ್ತು. ಈ ಮರದ ಕೆಳಗೆ ಹುಲ್ಲು ಅಥವಾ ಕಳೆಯಂತಹ ಸಸ್ಯಗಳು ಬೆಳೆಯುವುದಿಲ್ಲ. ಹೀಗಾಗಿ ಅಶ್ವತ್ಥ ಮರವು ಪುನರ್ ಜನ್ಮ ಮತ್ತು ನವೀಕರಣಕ್ಕೆ ಅವಕಾಶ ನೀಡುವುದಿಲ್ಲ. ಈ ಮರವು ಸೂರ್ಯನ ಕಿರಣವನ್ನು ಪಡೆದರೂ ಯಾವುದೇ ಆಹಾರವನ್ನು ತಯಾರಿಸುವುದಿಲ್ಲ ಎಂದು ಸಹ ಹೇಳಲಾಗುತ್ತದೆ. ಹಾಗಾಗಿಯೇ ಇದರ ಎಲೆ, ಹಣ್ಣುಗಳನ್ನು ಯಾವುದೇ ಶುಭ ಕಾರ್ಯಗಳಿಗೆ ಬಳಸುವುದಿಲ್ಲ.

ವಾಸ್ತು ಪ್ರಕಾರ ಮನೆಯ ಪೂರ್ವ ದಿಕ್ಕಿನಲ್ಲಿ ಅರಳಿಮರ ಇರಬಾರದು. ಅಕಸ್ಮಾತ್ ಮನೆಯ ಬಳಿ ಅರಳಿಮರ ಬೆಳೆದಿದ್ದರೆ ಅದನ್ನು ಕಿತ್ತು ಬೇರೆ ಕಡೆ ನೆಡಬೇಕು ಅಂದರೆ ಅದನ್ನು ದೇವಸ್ಥಾನಗಳ ಬಳಿ ನೆಡಬೇಕು. ಅದಕ್ಕೂ ಮುನ್ನ ಭಕ್ತಿಭಾವದಿಂದ ಪೂಜೆ ನೆರವೇರಿಸಬೇಕು. ಇಲ್ಲವಾದಲ್ಲಿ ಮನೆಯಲ್ಲಿ ಹಿರಿಯ ಜೀವಗಳಿಗೆ ಆಪತ್ತು ಉಂಟಾಗುತ್ತದೆ.

ಅರಳೀ ಮರದ ಬೇರುಗಳಲ್ಲಿ ಬ್ರಹ್ಮ ವಾಸಿಸುತ್ತಾನೆ. ಈತ ಹುಟ್ಟು ಸಾವಿಲ್ಲದವ. ಅಲ್ಲದೆ, ಎಲ್ಲ ಆತ್ಮಗಳೂ ಕಡೆಯಲ್ಲಿ ಬ್ರಹ್ಮನಲ್ಲೇ ಲೀನವಾಗುತ್ತವೆ ಎಂಬ ನಂಬಿಕೆ ಇದ. ಇದೇ ಕಾರಣಕ್ಕೆ ಸತ್ತವರ ಅಂತ್ಯಕ್ರಿಯೆಗಳನ್ನು ಅಶ್ವತ್ಥ ವೃಕ್ಷದ ಕೆಳಗೆ ನಡೆಸಲಾಗುತ್ತದೆ.

ಅಶ್ವತ್ಥ ಮರದ ಕೆಳಗೆ ಅನೇಕ ಋಷಿ ಮುನಿಗಳು ಜಪ-ತಪಗಳನ್ನು ನಡೆಸಿದ್ದಾರೆ. ಅಂತೆಯೇ ಜ್ಞಾನವನ್ನು ಪಡೆದುಕೊಂಡಿದ್ದಾರೆ. ಸದಾ ಸಕಾರಾತ್ಮಕ ಶಕ್ತಿಯನ್ನು ಆಕರ್ಷಿಸುವ ಈ ಮರವನ್ನು ಪೂಜಿಸುವುದರ ಮೂಲಕ ಸಾಕಷ್ಟು ಅನುಕೂಲವನ್ನು ಪಡೆದುಕೊಳ್ಳಬಹುದು. ದೈವ ಶಕ್ತಿ ಹಾಗೂ ಔಷಧೀಯ ಗುಣವನ್ನು ಹೊಂದಿರುವ ಈ ಮರದ ಪೂಜೆ ಮಾಡುವುದರ ಮೂಲಕ ಸಾಕಷ್ಟು ಪುಣ್ಯವನ್ನು ಪಡೆದುಕೊಳ್ಳಬಹುದು.

ಅಶ್ವತ್ಥ ಮರದ ವಿಶೇಷತೆ
ಅಶ್ವತ್ಥ ಮರದ ವಿಶೇಷತೆ

ಸತಿ ಸಾವಿತ್ರಿ ಅಶ್ವಥ ಪೂಜೆ :
ಸಾವಿತ್ರಿಯು ವಿವಾಹವಾಗಿ ಒಂದು ವರ್ಷದಲ್ಲಿಯೇ ಅಶ್ವತ್ಥ ಮರದ ಹತ್ತಿರ ಬಳಿ ಸಾವಿತ್ರಿಯ ಪತಿ ಸತ್ಯವಾನನು ಸಾಯುತ್ತಾನೆ. ಆಗ ತನ್ನ ಬುದ್ಧಿವಂತಿಕೆ ಹಾಗೂ ದೃಢವಾದ ದೈವ ಭಕ್ತಿಯ ಮೂಲಕ ಗಂಡನಿಗೆ ಜೀವ ಬರುವಂತೆ ಮಾಡುತ್ತಾಳೆ ಸಾವಿತ್ರಿ. ಈ ಹಿನ್ನೆಲೆಯಲ್ಲಿಯೇ ಇಂದಿಗೂ ಮಹಿಳೆಯರು ತಮ್ಮ ಸೌಭಾಗ್ಯವನ್ನು ಗಟ್ಟಿಗೊಳಿಸಲು, ಪತಿಯ ಆಯುಷ್ಯದ ವೃದ್ಧಿಗೆ, ಕುಟುಂಬದ ಏಳಿಗೆಗೆ, ಅವಿವಾಹಿತರು ವಿವಾಹ ಆಗಲು, ಕೆಲಸವನ್ನು ಪಡೆದುಕೊಳ್ಳಲು ಹಾಗೂ ಆರೋಗ್ಯ ಸುಧಾರಣೆ ಹೀಗೆ ಅನೇಕ ವಿಷಯಗಳಿಗಾಗಿ ಅಶ್ವತ್ಥ ಮರದ ಪ್ರದಕ್ಷಿಣೆ, ದೀಪ ಬೆಳಗುವುದು, ಪವಿತ್ರ ಧಾರ ಸುತ್ತುವುದು, ವ್ರತ ಕೈಗೊಳ್ಳುವುದು ಹಾಗೂ ಪೂಜೆ ಸಲ್ಲಿಸುವುದರ ಮೂಲಕ ಇಷ್ಟಾರ್ಥಗಳನ್ನು ಪೂರೈಸಿಕೊಳ್ಳುತ್ತಾರೆ.

ಅರಳಿಮರದ ಔಷಧಿ ಗುಣ :
ಅರಳಿ ಮರದ ತೊಗಟೆಯು ಬಾಯಿಹುಣ್ಣು, ಆಮಶಂಕೆ, ಮೇಹರೋಗಗಳಿಗೆ ಔಷಧವಾಗಿದೆ. ಎಲೆಯ ಬೂದಿಯನ್ನು ಸುಟ್ಟಗಾಯಕ್ಕೆ ಎಣ್ಣೆಯೊಂದಿಗೆ ಲೇಪನ ಮಾಡುತ್ತಾರೆ. ಒಣ ಎಲೆಯ ನಾರಿನಿಂದ ದೇಹದ ಮೇಲೆ ಸುಂದರ ಚಿತ್ರಗಳನ್ನು ಬರೆಯುತ್ತಾರೆ. ಇದರ ತೊಗಟೆಯ ಕಷಾಯವನ್ನು ಕಜ್ಜಿ ಹುಣ್ಣುಗಳಿಗೆ ಔಷಧವಾಗಿ ಬಳಸುವುದುಂಟು. ಅರಳಿಮರಗಳನ್ನು ತೋಟಗಳಲ್ಲೂ, ದೇವಸ್ಥಾನಗಳ ಪರಿಸರದಲ್ಲೂ ಹೆದ್ದಾರಿಯ ಇಬ್ಬದಿಗಳಲ್ಲೂ ನೆರಳಿಗಾಗಿ ಬೆಳೆಸುತ್ತಾರೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಕವಿ ರತ್ನ ಕಾಳಿದಾಸ

ಕವಿ ರತ್ನ ಕಾಳಿದಾಸ

ಹಿಮ್ಮಡಿ ನೋವು

ಹಿಮ್ಮಡಿ ನೋವು ಈಗ ಸಾಮಾನ್ಯವಾಗಿದೆ. ಕಾಡುವ ಹಿಮ್ಮಡಿ ನೋವು ಶಮನಕ್ಕೆ ಇಲ್ಲಿದೆ ಮನೆಮದ್ದು ಪರಿಹಾರ