in

ಹೆಣ್ಣು ಮಕ್ಕಳಿಗೆ ಸೀಮಂತ ಕಾರ್ಯಕ್ರಮ ಭ್ರೂಣವನ್ನು ರಕ್ಷಿಸಲೆಂದು ಮಾಡುವ ಲಕ್ಷ್ಮೀಯ ಆರಾಧನೆ

ಹೆಣ್ಣು ಮಕ್ಕಳಿಗೆ ಸೀಮಂತ ಕಾರ್ಯಕ್ರಮ
ಹೆಣ್ಣು ಮಕ್ಕಳಿಗೆ ಸೀಮಂತ ಕಾರ್ಯಕ್ರಮ

ಹೆಣ್ಣು ಮಕ್ಕಳಿಗೆ ಮದುವೆಯಾಗಿ ಪತಿಗೃಹಕ್ಕೆ ಹೋಗಿ ಗರ್ಭಿಣಿಯಾದ ೭ ನೇ ತಿಂಗಳಲ್ಲಿ ಸೀಮಂತ ಹಾಕುವ ಕ್ರಮವಿದೆ. ಇದು ಪತಿಯ ಮನೆಯಲ್ಲಿ ಜರಗುತ್ತದೆ.

ಸೀಮಂತ ಸಂಸ್ಕಾರವು ಗರ್ಭಿಣಿಯಲ್ಲಿ ಲಕ್ಷ್ಮೀ ಸಮಾವೇಶದ ಒಂದು ವಿಧಾನ. ಕಾರಣ ಗರ್ಭದಲ್ಲಿ ಬೆಳೆಯುತ್ತಿರುವ ಭ್ರೂಣದ ಮಾಂಸದ ಸಾರವನ್ನು ಮಾಯಾದಿ ರಕ್ಕಸರ ದುಷ್ಟಶಕ್ತಿಗಳು ಹಾನಿಮಾಡಲು ಹಾತೊರೆಯುತ್ತಿರುತ್ತವೆ. ಇಂಥ ಶಕ್ತಿಗಳನ್ನು ಮೋಹಗೊಳಿಸಿ, ಭ್ರೂಣವನ್ನು ರಕ್ಷಿಸಲೆಂದು ಮಾಡುವ ಲಕ್ಷ್ಮೀಯ ಆರಾಧನೆ.

ಹುಟ್ಟಿದ ನಂತರ ಸಾಯುವವರೆಗಿನ ಅವಧಿಯಲ್ಲಿ ಷೋಡಶ ಸಂಸ್ಕಾರಗಳನ್ನು ಮಾಡಲೇಬೇಕೆಂದು ಧರ್ಮಶಾಸ್ತ್ರಗಳು ಹೇಳುತ್ತವೆ. ಹದಿನಾರು ಸಂಸ್ಕಾರಗಳನ್ನು ಮಾಡಲು ಅಸಾಧ್ಯವಾದರೂ ನಾಮಕರಣ, ಉಪನಯನ, ಸೀಮಂತ ಎಂಬ ಕೆಲವನ್ನಾದರೂ ಮಾಡಿಯೇ ತೀರುತ್ತಾರೆ.

ಎಲ್ಲ ಶಾಸ್ತ್ರಗಳ ಪೈಕಿ “ಸೀಮಂತ’ ಶಾಸ್ತ್ರವು ಒಂದು ಭಾವನಾತ್ಮಕ ಸಂಬಂಧವನ್ನು ಹೆಣ್ಣಿನೊಂದಿಗೆ ಹೊಂದಿದೆ. ತನ್ನ ಚೊಚ್ಚಲ ಕರುಳ ಕುಡಿಯನ್ನು ಗರ್ಭದಲ್ಲಿ ಹೊತ್ತ ಒಂದು ಹೆಣ್ಣು ಅದರ ಆಗಮನದ ನಿರೀಕ್ಷೆಯಲ್ಲಿ ಪುಳಕಿತಳಾಗಿರುವಂಥ ಸಂದರ್ಭದಲ್ಲಿ ನಡೆಸುವ ಶಾಸ್ತ್ರ.

ಹೆಣ್ಣು ಮಕ್ಕಳಿಗೆ ಸೀಮಂತ ಕಾರ್ಯಕ್ರಮ ಭ್ರೂಣವನ್ನು ರಕ್ಷಿಸಲೆಂದು ಮಾಡುವ ಲಕ್ಷ್ಮೀಯ ಆರಾಧನೆ
ಸಿಹಿತಿಂಡಿಗಳನ್ನು ಬಡಿಸುತ್ತಾರೆ

ಗರ್ಭ ಧರಿಸಿದ ಮೂರನೇ ತಿಂಗಳಲ್ಲಿ “ಪುಂಸವನ’, “ಅನವಲೋಭನ’ ಎಂಬ ಸಂಸ್ಕಾರಗಳನ್ನು ನಡೆಸಲಾಗುವುದು. ಈ ಕಾಲದಲ್ಲಿ ಹೆಣ್ಣಿಗೆ ಆಹಾರ ರುಚಿಸದಿರುವುದು, ವಾಂತಿಯಾಗುವುದು ಎಲ್ಲ ಸಾಮಾನ್ಯ. ಆಗ ಪುಣ್ಯಾಹ ಮಾಡಿ ನಾಂದಿದೇವತೆಗಳನ್ನು ಪ್ರಾರ್ಥಿಸಿ ಪ್ರಜಾಪತಿಗೆ ಚರುದ್ರವ್ಯ ಆಹುತಿ ನೀಡುತ್ತಾರೆ. ಬಳಿಕ ಪತಿಯು ಪತ್ನಿಯ ಅಂಗೈಗೆ ಎರಡು ಉದ್ದಿನಕಾಳು, ಒಂದು ಗೋಧಿಯನ್ನು ಇಡಬೇಕು. ಅವಳು ಕಡೆದ ಮಜ್ಜಿಗೆಯೊಂದಿಗೆ ಪ್ರಾಶನ ಮಾಡಬೇಕು. ಶಾಸ್ತ್ರದ ಪ್ರಕಾರ ಉದ್ದು ಅಂಡದ ರೂಪವಾದರೆ, ಗೋಧಿ ಲಿಂಗರೂಪದ ಸಂಕೇತ. ಬಳಿಕ ದುಷ್ಟ ಶಕ್ತಿಯನ್ನು ನಿವಾರಿಸಲು ಅಶ್ವಗಂಧದ ರಸವನ್ನು ಪತ್ನಿಯ ಬಲ ಮೂಗಿಗೆ ಹಾಕಬೇಕು. ಇದರ ಉದ್ದೇಶ ಗರ್ಭಪಾತವನ್ನು ತಡೆಯುವುದು.

೭ನೇ ತಿಂಗಳು ಪ್ರಾರಂಭವಾದಾಗ ಪುರೋಹಿತರು ಇದ್ದಲ್ಲಿಗೆ ಹೋಗಿ ಸೀಮಂತ ದಿನ ಮುಹೂರ್ತವನ್ನು ನಿಶ್ಚಯ ಮಾಡಬೇಕು. ಸೀಮಂತಕ್ಕೆ ಬೇಕಾಗುವ ಸೀರೆ, ಚಿನ್ನ ಆಭರಣಗಳನ್ನು ಸಿದ್ಧತೆ ಮಾಡಬೇಕು. ಹೆಣ್ಣಿನ ತಂದೆ ತಾಯಿ ಕುಟುಂಸಬಸ್ಥರಿಗೆ ನಾವು ನಿಶ್ಚಯ ಮಾಡಿದ ದಿನವನ್ನು ಹೇಳಬೇಕು. ನಮ್ಮ ಬಂಧು ಬಳಗದವರಿಗೂ ಆ ದಿನವನ್ನು ತಿಳಿಸಬೇಕು. ಗರ್ಭಿಣಿಯಾಗುವುದು ಒಂದು ನೈಸರ್ಗಿಕ ಕ್ರಿಯೆ. ಗರ್ಭಿಣಿಗೆ ಏನೇನೋ ಆಸೆಗಳು ಉಂಟಾಗುತ್ತದೆ. ಅವುಗಳಲ್ಲಿ ವಿವಿಧ ಭಕ್ಷ್ಯಗಳನ್ನು ತಿನ್ನುವ ಆಸೆಯೇ ಮುಖ್ಯವಾದುದು. ಗಂಡನ ಮನೆಯಲ್ಲಿ ಗರ್ಭಿಣಿಗೆ ವಿವಿಧ ಭಕ್ಷ್ಯಗಳನ್ನು ಮಾಡಿ ಬಡಿಸುತ್ತಾರೆ.ಬಡಿಸಲು ಬೇಕಾದ ಭಕ್ಷ್ಯಗಳನ್ನು (ಚಕ್ಕುಲಿ, ಲಾಡು, ಹೋಳಿಗೆ ಎಲ್ಲಪ್ಪ ಮುಂತಾದುವು) ಸಿದ್ಧತೆಪಡಿಸಬೇಕು. ಪುರೋಹಿತರು ಹೇಳಿದ ದಿವಸ ಹುಡುಗಿ ಬೆಳಿಗ್ಗೆ ಸ್ನಾನ ಮಾಡಿ ನಿತ್ಯದ ಉಡುಪಿನಲ್ಲಿ ಇರಬೇಕು. ಹಣೆಗೆ ಕುಂಕುಮದ ತಿಲಕ ಇಟ್ಟು ತಲೆಗೆ ಒಂದು ಚೆಂಡು ಮಲ್ಲಿಗೆ ಇಡಬೇಕು.

ಸೀಮಂತಕ್ಕೆ ಹಾಕುವಾಗ ಒಳ್ಳೆಯ ಸೀರೆ ಮತ್ತು ಆಭರಣವನ್ನು ಗಂಡನ ಮನೆಯವರು ಕೊಡುತ್ತಾರೆ. ಅದಕ್ಕೆ ಹೂ ಸೀರೆ ಕೊಡುವುದು ಎನ್ನುತ್ತಾರೆ. ಹೂವು ಸೀರೆ ಕೊಡುವ ಮುಹೂರ್ತದಲ್ಲಿ ಹುಡುಗಿಯ ತಾಯಿ ಅಕ್ಕ ತಂಗಿ ಕುಟುಂಬಸ್ಥರನ್ನು ಕರೆದು ಅವರ ಸಮಕ್ಷಮದಲ್ಲಿ ಕೊಡುತ್ತಾರೆ.

ಹೆಣ್ಣು ಮಕ್ಕಳಿಗೆ ಸೀಮಂತ ಕಾರ್ಯಕ್ರಮ ಭ್ರೂಣವನ್ನು ರಕ್ಷಿಸಲೆಂದು ಮಾಡುವ ಲಕ್ಷ್ಮೀಯ ಆರಾಧನೆ
ಆರತಿ ಎತ್ತಿ ಶೋಬಾನ ಹಾಡುತ್ತಾರೆ

ಗರ್ಭ ಧರಿಸಿದ ಎಂಟನೆಯ ತಿಂಗಳಲ್ಲಿ, ಇಲ್ಲವೇ 7ನೇ ತಿಂಗಳಲ್ಲಿ ಸೀಮಂತ ಕಾರ್ಯಕ್ರಮವನ್ನು ನಡೆಸುತ್ತಾರೆ. ಒಂದೊಂದು ಭಾಗಗಳಲ್ಲಿ, ಒಂದೊಂದು ಧರ್ಮಗಳಲ್ಲಿ ವಿಭಿನ್ನ ರೀತಿಯಲ್ಲಿ ಸೀಮಂತವು ನಡೆಯುತ್ತದೆ. ತುಂಬು ಗರ್ಭಿಣಿಗೆ ಮುತ್ತೈದೆಯರು ಹಸಿರುಬಳೆ, ಹಸಿರು ಸೀರೆ ತೊಡಿಸಿ, ಹೂಮುಡಿಸಿ ಬಗೆಬಗೆ ತಿಂಡಿ-ತಿನಿಸುಗಳಿಂದ ಸಂತೋಷಪಡಿಸುತ್ತಾರೆ. ಇದನ್ನು “ಬಳೆ ತೊಡಿಸುವುದು’ ಎಂದು ಕರೆಯುತ್ತಾರೆ.

ಎಲ್ಲರೂ ಕೂಡಿ ಸಾನಾದಿಗೆಯಲ್ಲಿ ದೀಪ ಬೆಳಗಿಸಬೇಕು. ದೇವರ ಫೋಟೋಗೆ ಹೂವು ಹಾಕಿ ಹುಡುಗಿಯ ಅತ್ತೆ ಇಲ್ಲವೆ ನಾದಿನಿ ಹರಿವಾಣದಲ್ಲಿ ಸೀಮಂತಕ್ಕೆ ತಂದ ಎರಡು ಸೀರೆ( ಅದರಲ್ಲಿ ಒಂದು ಬೆಳೆ ಬಾಳುವ ಸೀರೆ ಮತ್ತೊಂದು ಸಾಮನ್ಯವಾದುದು) ಸೀಮಂತಕ್ಕೆ ಮಾಡಿದ ಚಿನ್ನಾಭಾರಣ, ಒಂದು ಅಟ್ಟೆ ಮಲ್ಲಿಗೆ. ಒಂದು ಹಾಳೆ ಕರೆದು ದೇವರಿಗೆ ಕೈ ಮುಗಿಯಬೇಕು. ತುಂಬು ಗರ್ಭಿಣಿಯಾದ ನಮ್ಮ ಈ ಮಗಳಿಗೆ ಒಳ್ಳೆಯ ರೀತಿಯಲ್ಲಿ ಹೆರಿಗೆಯಾಗಬೇಕು. ತಾಯಿ ಮಗು ಇಬ್ಬರು ಕೂಡ ಆರೋಗ್ಯವಂತರಾಗಿ ಇರಲಿ ಎಂದು ಮನೆಯ ದೈವಗಳಿಗೂ ಊರಿನ ದೇವರಿಗೂ ಏನಾದರೂ ಹರಕೆ ಹೇಳಬೇಕು. ಅತ್ತೆ ಈ ಹರಿವಾಣದಲ್ಲಿ ಇದ್ದ ಕುಂಕುಮವನ್ನು ಹೆಣ್ಣಿನ ಹಣೆಗೆ ಇಟ್ಟು ಎಲೆ ಅಡಿಕೆಯನ್ನು ಅವಳ ಕೈಗೆ ಕೊಟ್ಟು ( ಈ ಎಲೆ ಅಡಿಕೆ ಎಲ್ಲ ಕಾರ್ಯಕ್ರಮ ಆಗುವ ತನಕ ಅವಳ ಕೈಯಲ್ಲಿ ಇರಬೇಕು). ಹರಿವಾಣವನ್ನು ಹೆಣ್ಣಿನ ಕೈಗೆ ಕೊಡಬೇಕು. ಅವಳು ಆ ಹರಿವಾಣವನ್ನು ಅವಳ ತಾಯಿ ಅಥವಾ ಸಂಬಂಧದವರ ಕೈಗೆ ಕೊಟ್ಟು ಅತ್ತೆಯ ಕಾಲಿಗೆ ನಮಸ್ಕರಿಸಬೇಕು. ಅನಂತರ ಅವರು ಕೊಟ್ಟ ಒಳ್ಳೆಯ ಸೀರೆ, ಆಭರಣ, ಹೂವುಗಳಿಂದಾವಳನ್ನು ಮದುಮಗಳಂತೆ ಸಿಂಗರಿಸಬೇಕು.

ಸ್ತ್ರೀಯ ಬೈತಲೆ ಪ್ರದೇಶ ಅಂದರೆ ಹಣೆಯ ಮೇಲ್ಭಾಗದ ಕೂದಲು ಪ್ರಾರಂಭದ ಮಧ್ಯಭಾಗವನ್ನು “ಸೀಮಂತಿನಿ ರೇಖಾ’ ಪ್ರದೇಶವೆಂದೂ, ಅಲ್ಲಿ ಲಕ್ಷ್ಮಿಯ ಸನ್ನಿಧಾನ ವಿಶೇಷವಿದೆಯೆಂದೂ ನಂಬಿರುವ ಕಾರಣ ಆ ಪ್ರದೇಶವನ್ನು ಕೂದಲು ಮುಚ್ಚದಂತೆ ಬಾಚಿಕೊಳ್ಳಬೇಕೆಂದು ಶಾಸ್ತ್ರ ಹೇಳುತ್ತದೆ. ಗರ್ಭಿಣಿ ಸ್ತ್ರೀಗೆ ಪತಿಯು ಸುಮುಹೂರ್ತದಲ್ಲಿ ಈ ರೇಖೆಯನ್ನು ಸಮಂತ್ರವಾಗಿ ಮೂರು ದರ್ಭಾಗ್ರಗಳಿಂದಲೂ, ಕಪ್ಪು , ಬಿಳಿ, ಕಂದು ವರ್ಣಗಳುಳ್ಳ ಶಲಿಲೀ ಮೃಗದ ಮುಳ್ಳಿನಿಂದಲೂ ಪಾದದಿಂದ ಹಿಡಿದು ನಡುನೆತ್ತಿ ತನಕ ತಲೆಗೆ ನೋವಾಗದಂತೆ ಗೆರೆ ಎಳೆಯುವುದೇ ಸೀಮಂತ-ಉನ್ನಯನ ಸಂಸ್ಕಾರ. ಈ ಸಮಯದಲ್ಲಿ ಪುರುಷನು ಪತ್ನಿಯ ಎದುರಿನಲ್ಲಿ ಆಸೀನನಾಗಿರಬೇಕು.

ಹೆಣ್ಣು ಮಕ್ಕಳಿಗೆ ಸೀಮಂತ ಕಾರ್ಯಕ್ರಮ ಭ್ರೂಣವನ್ನು ರಕ್ಷಿಸಲೆಂದು ಮಾಡುವ ಲಕ್ಷ್ಮೀಯ ಆರಾಧನೆ
ಸೌಭಾಗ್ಯವತಿಯಾಗಿ ಸಂತಾನ ಲಕ್ಶ್ಮಿಯಾಗಿ ಬಾಳು ಎಂದು ಆಶೀರ್ವಾದವನ್ನು ಮಾಡುತ್ತಾರೆ

ಮಧ್ಯಾಹ್ನ ೧೧-೧೨ ಗಂಟೆಯ ಒಳಗೆ ಅವಳ ನಾದಿನಿ ಕೈ ಹಿಡಿದುಕೊಂಡು ಸಭೆಗೆ ಕರೆದುಕೊಂಡು ಬರಲಿ, ಮೂಡು ದಿಕ್ಕಿಗೆ ಮುಖಮಾಡಿ ಕುಳಿತುಕೊಳ್ಳುವಂತೆ ಅವಳನ್ನು ಕುಳ್ಲಿರಿಸಬೇಕು. ಎದುರು ಕಡೆಗೆ ದೊಡ್ಡ ಹರಿವಾಣವನ್ನು ತಂದು ಅದರ ಮೇಲೆ ಇಟ್ಟು ಎರಡು ಬಾಳೆಯ ಎಲೆಯನ್ನು ಹಾಕಿ ಸ್ವಲ್ಪ ನೀರಿನಿಂದ ಅದನ್ನು ಸ್ವಚ್ಛ ಮಾಡಬೇಕು. ಅತ್ತೆ ಬಂದು ಮೊದಲು ಬೇಯಿಸಿದ ಕೋಳಿ ಮೊಟ್ಟೆ ಸೊಪ್ಪಿನ ಪಲ್ಯ ಒಟ್ಟಿಗೆ ಐದು ಸಲ ಎಲೆಯ ಮುಂಭಾಗಕ್ಕೆ ಬಡಿಸಬೇಕು. ಹುರಿದ ಅಕ್ಕಿ ಪುಡಿ ಎಲೆಯ ಮಧ್ಯಭಾಗಕ್ಕೆ ಹಾಕಬೇಕು. ಹುರಿ ಅಕ್ಕಿ, ಅವಲಕ್ಕಿಯನ್ನು ಬೆರೆಸಿ ಅಕ್ಕಿ ಪುಡಿಯ ಮೇಲೆ ಹಾಕಿ ಎಲ್ಲಪ್ಪ, ಚಕ್ಕುಲಿ, ಲಾಡು ಹೋಳಿಗೆ ಹೀಗೆ ನಾನಾ ತರದ ಭಕ್ಷ್ಯಗಳನ್ನು ಅದರ ಸುತ್ತ ಎತ್ತರಕ್ಕೆ ಬರುವಂತೆ ಇಡಬೇಕು. ಪ್ರತಿಯೊಂದು ತರದ ತಿಂಡಿಗಳನ್ನು ೫ ಇಲ್ಲವೆ ೭,೯ ರ ಸಂಖ್ಯೆಯಲ್ಲಿ ಇಡಬೇಕು. ನಂತರ ಎರಡು ತುಂಡು ಬೆಲ್ಲ ಒಂದು ಪೆನ್ನೆ ಬಾಳೆಹಣ್ಣು ಅದರ ಮೇಲೆ ಇಡಬೇಕು. ಲೋಟೆಯಲ್ಲಿ ತುಪ್ಪ ತೆಗೆದುಕೊಂಡು ಚಮಚದಲ್ಲಿ ೫ ಸಲ ಎಲ್ಲ ಭಕ್ಯಗಳ ಮೇಲೆ ಹಾಕಬೇಕು. ನಂತರ ಹುಡುಗಿಯ ಗಂಡನನ್ನು ಕರೆದು ಹೂವು ಸೀರೆ ಕೊಟ್ಟು ಪಿಂಗಾರವನ್ನು ತರಿಸಿ ಅದರ ಮಧ್ಯಭಾಗದ ಪಿಂಗಾರವನ್ನು ತೆಗೆದು ಹುದುಗಿಯ ಮುಡಿಗೆ ಅವಳ ಗಂಡ ಮುಡಿಸಬೇಕು. ೫ ಜನ ಹೆಂಗಸರನ್ನು ಕರೆದು ಆರತಿ ಬೆಳಗಿಸಬೇಕು. ಆರತಿ ಬೆಳಗುವಾಗ ಶೋಭಾನೆ ಹಾಡಬೇಕು. ನಂತರ ಮೊದಲು ಬಡಿಸಿದ ಸೊಪ್ಪು ಮತ್ತು ಒಂದು ಮೊಟ್ಟೆಯನ್ನು ಹುಡುಗಿಯ ಕೈಯಲ್ಲಿ ಕೊಡಬೇಕು. ಅವಳು ಅದನ್ನು ಎಡ ಕೈಯಲ್ಲಿ ಹಿಡಿದುಕೊಂಡು ಬಲ ಕೈಗೆ ಹಾಕಿ ಅದರಿಂದ ಸ್ವಲ್ಪ ಸ್ವಲ್ಪ ಮೊಟ್ಟೆ ಮತ್ತು ಸೊಪ್ಪನ್ನು ಚಿಕ್ಕ ಮಕ್ಕಳನ್ನು ಕರೆದು ಅವರಿಗೆ ತಿನ್ನಿಸಬೇಕು. ಹೀಗೆ ೩,೫,೭ ಗಂಡು ಮತ್ತು ಹೆಣ್ಣು ಮಕ್ಕಳಿಗೆ ತಿನ್ನಿಸಬೇಕು. ಬಂದವರೆಲ್ಲರು ಅವಳಿಗೆ ಸೌಭಾಗ್ಯವತಿಯಾಗಿ ಸಂತಾನ ಲಕ್ಶ್ಮಿಯಾಗಿ ಬಾಳು ಎಂದು ಆಶೀರ್ವಾದವನ್ನು ಮಾಡಿದ ಮೇಲೆ ಎಲ್ಲರು ಊಟ ಉಪಚಾರ ಸ್ವೀಕರಿಸುತ್ತಾರೆ.

ನಂತರ ಗರ್ಭಿಣಿಯನ್ನು ತಾಯಿ ಮನೆಗೆ ಕಳುಹಿಸಿಕೊಡುವ ಸಮಯ, ಸಾಮಾನ್ಯವಾಗಿ ಗೋಧೋಳಿ ಲಗ್ನದಲ್ಲಿ ಗರ್ಭಿಣಿಯನ್ನು ತವರು ಮನೆಗೆ ಕಳುಹಿಸಿಕೊಡುತ್ತಾರೆ. ಅದು ಸಾಯಂಕಾಲ ಸೂರ್ಯಾಸ್ಥಮಾನವಾಗುವ ಸಮಯ, ಹಕ್ಕಿಗಳು ಗೂಡು ಸೇರುವ ಸಮಯ, ದನಕರುಗಳು ಕೊಟ್ಟಿಗೆಗೆ ಬಂದು ಸೇರುವ ಸಮಯ. ಆ ಸಮಯದಲ್ಲಿ ಮಗಳು ಬಂದು ತಾಯಿ ಮನೆಗೆ ಸೇರಬೇಕಂತೆ. ಇದು ಸಂಪ್ರದಾಯ. ಅಲ್ಲಿ ಅದನ್ನು ಮನೆ ಹತ್ತಿರದವರಿಗೆ ಹಂಚಿದರೆ ಮತ್ತಷ್ಟು ಉತ್ತಮ. ಅದರ ಪುಣ್ಯ ಫಲ ನಮ್ಮ ಗರ್ಭಿಣಿ ಹುಡುಗಿಗೆ ಸಿಗುತ್ತದೆ ಎಂಬ ನಂಬಿಕೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಕನ್ನಡದ ಪ್ರಮುಖ ಪತ್ರಿಕೆಗಳು

ಕನ್ನಡದ ಪ್ರಮುಖ ಪತ್ರಿಕೆಗಳು

‘ಪ್ರಬಂಧ‘ ಬರೆಯುವಾಗ ನೆನಪಿಡಬೇಕಾದ ಮುಖ್ಯ ಅಂಶಗಳು

‘ಪ್ರಬಂಧ‘ ಬರೆಯುವಾಗ ನೆನಪಿಡಬೇಕಾದ ಮುಖ್ಯ ಅಂಶಗಳು