ಸೌತೆಕಾಯಿ ಬಳ್ಳಿಯು ಗಡುಸಾದ ಸಿಪ್ಪೆ ಮತ್ತು ಹೇರಳ ತಿರುಳಿರುವ ದೊಡ್ಡಕಾಯಿಯ ವಂಶವಾದ ಕ್ಯುಕರ್ಬಿಟೇಸಿಗೆ ಸೇರಿರುವ ಒಂದು ವ್ಯಾಪಕವಾಗಿ ಬೆಳೆಯಲಾಗುವ ಸಸ್ಯವಾಗಿದೆ, ಮತ್ತು ಕರ್ಬೂಜದ ರೀತಿಯಲ್ಲಿಯೇ ಅದೇ ಕುಲದಲ್ಲಿರುವ ಸಸ್ಯವಾಗಿದೆ ಕ್ಯುಕರ್ಬಿಟೇಸಿ ವಂಶವು ಕುಂಬಳದ ಗಿಡವನ್ನೂ ಒಳಗೊಂಡಿದೆ.
ಬೇಸಿಗೆಯ ಈ ಕಾಲದಲ್ಲಿ ವಂಡರ್ ಫುಡ್ ಎಂದೇ ಕರೆಸಿಕೊಳ್ಳುವ ಸೌತೆಕಾಯಿಯ ಪ್ರಯೋಜನಗಳನ್ನು ಹೆಚ್ಚು ಬಳಸಿಕೊಳ್ಳಲು ಇದು ಸರಿಯಾದ ಸಮಯ.
ಸಾಮಾನ್ಯವಾಗಿ ಮಿಡಿ ಸೌತೆಯನ್ನು ಹಸಿಯಾಗಿ ಸೇವಿಸಲು ಬಳಸಲಾಗುತ್ತದೆ. ಉಳಿದಂತೆ ಮಲೆನಾಡುಗಳಲ್ಲಿ ದೊಡ್ಡಗಾತ್ರದ ಸೌತೆಕಾಯಿಯನ್ನು ಬೆಳೆಯಲಾಗುತ್ತದೆ. ಮಿಡಿಯಾಗಿದ್ದಾಗ ಹಸಿಯಾಗಿ ಸೇವಿಸಲು ಬಳಸಿದರೆ, ಬೆಳೆದು ಹಣ್ಣಾದ ನಂತರದ ಇದನ್ನು ಮಳೆಗಾಲಕ್ಕೆ ಸಂಗ್ರಹಿಸಿಡಲಾಗುತ್ತದೆ.

ಹಿಂದಿನ ಕಾಲದಲ್ಲಿ ಮಲೆನಾಡಿನಲ್ಲಿ ಬೇಸಿಗೆಯಲ್ಲಿ ಸೌತೆಕಾಯಿಗಳನ್ನು ಬೆಳೆದು ಜೋಪಾನವಾಗಿಟ್ಟಕೊಂಡು ಮಳೆಗಾಲದಲ್ಲಿ ಬಳಸುತ್ತಿದ್ದರು. ಇದೀಗ ಅದೆಲ್ಲವೂ ಅಪರೂಪವಾಗಿದೆ. ಆದರೆ ಈ ಸೌತೆಕಾಯಿ ಹಲವು ರೀತಿಯಲ್ಲಿ ಆರೋಗ್ಯಕಾರಿ ಆಗಿರುವುದರಿಂದ ಇದರ ಬಳಕೆ ಮಾಡಿದಷ್ಟು ನಮಗೆ ಅನುಕೂಲ ಎನ್ನುವುದನ್ನು ಒಪ್ಪಿಕೊಳ್ಳಲೇ ಬೇಕಾಗುತ್ತದೆ.
ಸೌತೆಕಾಯಿ ಯಲ್ಲಿ ಉರಿಯೂತ ಶಮನಕಾರಿ ಫ್ಲಾವೊನೊಲ್ ಇದ್ದು, ಇದು ಮೆದುಳಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ನರಕೋಶಗಳ ಸಂರ್ಪಕವನ್ನು ಹೆಚ್ಚಿಸುವುದು. ಇದೇ ಕಾರಣಕ್ಕಾಗಿ ಪ್ರತಿನಿತ್ಯ ಸೌತೆಕಾಯಿ ಸೇವಿಸಿ. ಇದು ಕೇವಲ ನೆನಪಿನ ಶಕ್ತಿಯ ಬಗ್ಗೆ ಕಾಳಜಿ ವಹಿಸುವುದು ಮಾತ್ರವಲ್ಲದೆ ನರಕೋಶಗಳಿಗೆ ವಯಸ್ಸಾಗುವುದುನ್ನು ತಡೆಯುವುದು.
ಸೌತೆಕಾಯಿ ದೇಹಕ್ಕೆ ನಿರ್ಜಲೀಕರಣವಾಗದಂತೆ ನೋಡಿಕೊಳ್ಳುತ್ತದೆ. ಸೌತೆಕಾಯಿಯಲ್ಲಿ ಶೇ. 95 ರಷ್ಟು ನೀರಿನ ಅಂಶ ಹೊಂದಿದ್ದು, ಇದು ನಿಮ್ಮ ದೇಹದಲ್ಲಿ ಹೆಚ್ಚು ನೀರಿನಂಶ ಇರುವಂತೆ ಹಾಗೂ ನೀರಿನ ಅಂಶ ಕಡಿಮೆಯಾದರೂ ಹೆಚ್ಚು ತುಂಬಿಸುವಂತೆ ನೋಡಿಕೊಳ್ಳುತ್ತದೆ.
ಸೌತೆಕಾಯಿಯಲ್ಲಿ ಪೌಷ್ಠಿಕಾಂಶಗಳು ದಟ್ಟವಾಗಿರುತ್ತವೆ. ಅಲ್ಲದೆ, ಫೈಬರ್, ಪೊಟ್ಯಾಷಿಯಂ ಹಾಗೂ ಮೆಗ್ನೀಷಿಯಂ ಕೂಡ ಹೆಚ್ಚಾಗಿರುತ್ತದೆ. ಈ ಎಲ್ಲ ಪೌಷ್ಠಿಕಾಂಶಗಳು ರಕ್ತದೊತ್ತಡ ಕಡಿಮೆ ಮಾಡಲಷ್ಟೇ ಅಲ್ಲ ಮೂತ್ರವರ್ಧಕ ಗುಣಲಕ್ಷಣಗಳನ್ನು ಹೊಂದಿದೆ. ಜತೆಗೆ, ಪೊಟ್ಯಾಷಿಯಂ ಹಾಗೂ ನೀರಿನಂಶ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ.
ಸೌತೆಕಾಯಿ ನೈಸರ್ಗಿಕವಾಗಿ ನಿಮ್ಮ ಚರ್ಮವನ್ನು ತಕ್ಷಣ ಪುನಶ್ಚೇತನಗೊಳಿಸುತ್ತದೆ. ಸೌತೆಕಾಯಿಯಿಂದ ನಿಮ್ಮ ಚರ್ಮಕ್ಕೆ ಹೆಚ್ಚು ಫ್ರೆಶ್‌ನೆಸ್ ಬರುತ್ತದೆ. ಹೀಗಾಗಿ, ನಿಮ್ಮದು ಒಣಗಿದ ಚರ್ಮವಾಗಿದ್ದರೆ ಸೌತೆಕಾಯಿ ರಸವನ್ನು ಮುಖಕ್ಕೆ ಹಚ್ಚಿಕೊಂಡರೆ ಸಾಕು ನೀಚು ಫ್ರೆಶ್ ಆಗಿ ಕಾಣುತ್ತೀರಿ.
ದೇಹದ ಉಷ್ಣದ ಕಾರಣಕ್ಕೆ ಮೂತ್ರ ಸಮರ್ಪಕವಾಗಿ ಹೋಗದೆ ತೊಂದರೆ ಅನುಭವಿಸುವವರು ಒಂದು ಬಟ್ಟಲು ಸೌತೆ ರಸದೊಂದಿಗೆ ಒಂದು ಚಮಚ ಜೇನುತುಪ್ಪ ಹಾಗೂ ನಿಂಬೆ ರಸವನ್ನು ಹಾಕಿ ದಿನಕ್ಕೆರಡು ಬಾರಿ ಸೇವಿಸುತ್ತಾ ಬಂದರೆ ಮೂತ್ರ ವರ್ಧನೆಯಾಗಿ ಸಮಸ್ಯೆಗೆ ಪರಿಹಾರ ದೊರಕಲಿದೆ.
ಕಪ್ಪು ಕಲೆ ನಿವಾರಿಸಲು ಹಾಗೂ ಕಣ್ಣುಗಳ ಬಳಿಯ ಪಫ್ಫಿನೆಸ್ ಕಡಿಮೆ ಮಾಡಲು ಸೌತೆಕಾಯಿಯ ರಸವನ್ನು ಕಣ್ಣು ಸುತ್ತ ಹಚ್ಚಿಕೊಳ್ಳಿ. ಇನ್ನು, ಪರಿಪೂರ್ಣ ನೈಸರ್ಗಿಕ ಸೌಂದರ್ಯ ಚಿಕಿತ್ಸೆಗಾಗಿ ಸೌತೆಕಾಯಿ ಉತ್ತಮ.
ಸೌತೆಕಾಯಿಯಲ್ಲಿ ಅಧಿಕ ಜಲಾಂಶವಿದ್ದು, ಕಡಿಮೆ ಕ್ಯಾಲರಿಯನ್ನು ಒಳಗೊಂಡಿರುವುದರಿಂದ, ತೂಕ ನಷ್ಟ ವನ್ನು ಹೊಂದಲು ಬಯಸುವವರಿಗೆ ಸೌತೆಕಾಯಿಯು ವರದಾನ ವಾಗಿದೆ. ಸೌತೆಕಾಯಿಗಳನ್ನು ಸೂಪುಗಳಲ್ಲಿ ಮತ್ತು ಸಲಾಡ್ ಗಳಲ್ಲಿ ಬಳಸಿರಿ. ಒಂದು ವೇಳೆ ಸೌತೆಕಾಯಿಯು ನಿಮ್ಮ ಇಷ್ಟದ ತಿನಿಸು ಅಲ್ಲವಾದರೆ, ನೀವು ನೀವು ಸೌತೆಕಾಯಿಯ ತುಣುಕುಗಳನ್ನು ಕಡ್ಡಿಯೊಂದಕ್ಕೆ ಸಿಕ್ಕಿಸಿ, ಅವುಗಳನ್ನು ಕಡಿಮೆ ಕೊಬ್ಬಿನಾಂಶವುಳ್ಳ, ಕೆನೆಯುಳ್ಳ ಮೊಸರಿನಲ್ಲಿ ಅದ್ದಿಯೂ ಸಹ ಸೇವಿಸಬಹುದು.
ಸೌತೆಕಾಯಿಯು ಮಧುಮೇಹವನ್ನು ಗುಣಪಡಿಸುತ್ತದೆ, ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ, ಮತ್ತು ರಕ್ತ ದೊತ್ತಡವನ್ನು ನಿಯಂತ್ರಿಸುತ್ತದೆ. ಸೌತೆಕಾಯಿಯು, ಮೇದೋಜೀರಕ ಗ್ರಂಥಿಯ ಕೋಶಗಳು ಇನ್ಸುಲಿನ್ ಅನ್ನು ಉತ್ಪಾದಿಸಲು ಅಗತ್ಯವಾದ ಹಾರ್ಮೋನ್ಅನ್ನು ಹೊಂದಿದ್ದು, ಈ ಇನ್ಸುಲಿನ್, ಮಧುಮೇಹ ರೋಗಿ ಗಳಿಗೆ ಲಾಭದಾಯಕವೆಂದು ಜನಜನಿತವಾಗಿದೆ.
ಸೌತೆ ಕಾಯಿಯು ಕೀಲುಗಳ ಆರೋಗ್ಯವನ್ನು ಸುಧಾರಿಸುತ್ತದೆ, ಕೀಲುಗಳ ಮತ್ತು ಸಂದುಗಳ ಬೇನೆಯಿಂದ (ಸಂಧಿವಾತ) ವಿಮುಕ್ತಿಗೊಳಿಸುತ್ತದೆ. ಸೌತೆಕಾಯಿಯು ಸಿಲಿಕಾದ ಒಂದು ಉತ್ತಮ ಮೂಲವಾಗಿರುವುದರಿಂದ, ಇದು ಕೀಲುಗಳ ಅಂಗಾಂಶಗಳನ್ನು ಶಕ್ತಿಯುತಗೊಳಿಸುವುದರ ಮೂಲಕ ಸಂದುಗಳ ಆರೋಗ್ಯವನ್ನು ವೃದ್ಧಿಸುತ್ತದೆ. ಇದರ ರಸವನ್ನು ಕ್ಯಾರೆಟ್ ರಸದೊಂದಿಗೆ ಸೇರಿಸಿ ಸೇವಿಸಿದರೆ, ಅದು ಶರೀರದ ಯುರಿಕ್ ಆಮ್ಲಗಳ ಮಟ್ಟವನ್ನು ತಗ್ಗಿಸುವುದರ ಮೂಲಕ ಸಂದುಗಳು (ಕಾಲುಗಳ) ಮತ್ತು ಕೀಲುಗಳ ಉರಿಯೂತ ಮತ್ತು ನೋವಿನಿಂದ ವಿಮುಕ್ತಿಗೊಳಿಸುತ್ತದೆ.

ಸೌತೆಕಾಯಿಯು ನಿಶ್ಯಕ್ತಿ ನಿವಾರಣೆ ಮಾಡುವುದು. ಉದ್ಯೋಗದಲ್ಲಿ ಹೆಚ್ಚಿನ ಒತ್ತಡವಿದ್ದಾಗ ಒತ್ತಡದಿಂದ ಕಾಣಿಸಿಕೊಳ್ಳುವಂತಹ ತಲೆನೋವು ಸಾಮಾನ್ಯ. ಇದನ್ನು ತಡೆಯುವ ಸಲುವಾಗಿ ನೀವು ಮನೆಯಲ್ಲೇ ತಯಾರಿಸಿರುವಂತಹ ಸೌತೆಕಾಯಿ ಖಾದ್ಯ ಸೇವಿಸಿ. ಸಲಾಡ್, ಜ್ಯೂಸ್ ಅಥವಾ ಸ್ಮೂಥಿ ಮಾಡಿಯೂ ಇದನ್ನು ಬಳಸಬಹುದು. ಪಾಲಿಫಿನಾಲ್ಗಳು ಮತ್ತು ಫೈಟೋನ್ಯೂಟ್ರಿಯಂಟ್ಗಳು ಇದರಲ್ಲಿರುವ ಕಾರಣದಿಂದ ಇದು ಒತ್ತಡ ನಿವಾರಿಸುವುದು.
ಸೌತೆ ಕಾಯಿಯಲ್ಲಿ ಸ್ಟೀರೋಲ್ಸ್ ಎಂಬ ಸಂಯುಕ್ತ ವಸ್ತುವೊಂದಿದ್ದು, ಇದು ಶರೀರದಲ್ಲಿ ಕೊಲೆಸ್ಟ್ರಾಲ್ ಮಟ್ಟವನ್ನು ತಗ್ಗಿಸಲು ಸಹಕಾರಿಯಾಗಿದೆ ಎಂಬುದನ್ನು ಸಂಶೋಧಕರು ಕಂಡುಕೊಂಡಿದ್ದಾರೆ. ಸೌತೆಕಾಯಿಗಳು ಬಹಳಷ್ಟು ನಾರು, ಪೊಟ್ಯಾಸಿಯಂ, ಮತ್ತು ಮೆಗ್ನೀಷಿಯಂ ಅನ್ನು ಒಳಗೊಂಡಿವೆ. ಈ ಪೋಷಕಾಂಶಗಳು ರಕ್ತದೊತ್ತ ಡವನ್ನು ಪರಿಣಾಮಕಾರಿಯಾಗಿ ನಿಭಾಯಿಸುವತ್ತ ಕಾರ್ಯ ನಿರ್ವಹಿಸುತ್ತವೆ. ಈ ಕಾರಣದಿಂದಲೇ, ಸೌತೆಕಾಯಿಯು ಅಧಿಕ ರಕ್ತದೊತ್ತಡ ಮತ್ತು ಕಡಿಮೆ ರಕ್ತದೊತ್ತಡ ಇವೆರಡಕ್ಕೂ ಚಿಕಿತ್ಸೆ ನೀಡಲು ಉತ್ತಮವಾಗಿದೆ.
ಸೌತೆಕಾಯಿಯಲ್ಲಿ ಉನ್ನತ ಮಟ್ಟದ ಪೊಟಾಶಿಯಂ ಇದ್ದು, ರಕ್ತದೊತ್ತಡವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಇದು ತುಂಬಾ ಪರಿಣಾಮಕಾರಿ. ಪೊಟಾಶಿಯಂ ವಿದ್ಯುದ್ವಿಚ್ಛೇಧಕಗಳಂತೆ ಕೆಲಸ ಮಾಡಿ ನರಗಳ ಕಾರ್ಯನಿರ್ವಹಣೆಗೆ ನೆರವಾಗುವುದು. ನರ ವ್ಯವಸ್ಥೆ ಬಗ್ಗೆ ಕಾಳಜಿ, ಸ್ನಾಯುಗಳ ಸಂಕೋಚನ ಮತ್ತು ಹೃದಯದ ಕಾರ್ಯನಿರ್ವಹಣೆಗೆ ನೆರವಾಗುವುದು. ಸೌತೆಕಾಯಿಯಲ್ಲಿ ನಾರಿನಾಂಶವಿದ್ದು, ಅಪಧಮನಿಗಳಲ್ಲಿ ಕೊಲೆಸ್ಟ್ರಾಲ್ ಶೇಖರಣೆಯಾಗದಂತೆ ತಡೆಯುವುದು ಮತ್ತು ಹೃದಯದ ತಡೆ ನಿವಾರಿಸುವುದು.
ಸೌತೆಕಾಯಿಯಲ್ಲಿ ವಿಟಮಿನ್ ಬಿ ಸಂಕೀರ್ಣದ ಸಹಿತ ಹಲವಾರು ವಿಟಮಿನ್ಗಳು ಇವೆ. ವಿಟಮಿನ್ ಬಿ1, ವಿಟಮಿನ್ ಬಿ5 ಮತ್ತು ವಿಟಮಿನ್ ಬಿ7. ವಿಟಮಿನ್ ಬಿ7 ಎನ್ನು ಬಿಯೊಟಿನ್ ಎಂದು ಕರೆಯುವರು. ಇದು ನರಕೋಶದ ವ್ಯವಸ್ಥೆಗೆ ಆರಾಮ ನೀಡುವುದು ಮತ್ತು ಒತ್ತಡ ಹಾಗೂ ಆತಂಕದಿಂದ ಶಮನ ನೀಡುವುದು
ದೇಹದಲ್ಲಿ ವಿಷಕಾರಿ ಅಂಶಗಳು ಜಮೆ ಯಾದರೆ ಅದರಿಂದ ಫ್ರೀ ರ್ಯಾಡಿಕಲ್ ಉಂಟಾಗಿ ಸಾಮಾನ್ಯವಾಗಿ ದೀರ್ಘಕಾಲದ ಅನಾರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವುದು. ಫ್ರಿ ರ್ಯಾಡಿಕಲ್ ನಿಂದಾಗಿ ಕ್ಯಾನ್ಸರ್, ಹೃದಯ, ಶ್ವಾಸಕೋಶ ಮತ್ತು ಪ್ರತಿರೋಧಕ ವ್ಯವಸ್ಥೆಗೆ ಸಂಬಂಧಿಸಿದ ಅನಾರೋಗ್ಯ ಕಾಣಿಸುವುದು. ಸೌತೆಕಾಯಿಯು ಆ್ಯಂಟಿ ಆಕ್ಸಿಡೆಂಟ್ ನಿಂದ ಸಮೃದ್ಧವಾಗಿದ್ದು, ಇದು ರೋಗಗಳ ಅಪಾಯ ಕಡಿಮೆ ಮಾಡುವುದು.

ಸೌತೆ ಕಾಯಿ ದಿನನಿತ್ಯ ಸೇವನೆ ಮಾಡಿದರೆ ಅದರಿಂದ ಕರುಳಿನ ಕ್ರಿಯೆಯು ಸರಾಗವಾಗಿ ಆಗುವುದು. ಸೌತೆಕಾಯಿಯಲ್ಲಿ ಉನ್ನತ ಮಟ್ಟದ ನೀರು ಮತ್ತು ಹೀರಿಕೊಳ್ಳುವ ನಾರಿನಾಂಶವಿದೆ. ಇದರಿಂದ ಮಲಬದ್ಧತೆ ಸಮಸ್ಯೆ ಕಡಿಮೆಯಾಗುವುದು ಮತ್ತು ನಿಯಮಿತವಾಗಿ ಮಲ ವಿಸರ್ಜನೆಯಾಗುವುದು. ಹೊಟ್ಟೆಯ ಕೆಲವು ಲಾಭಕಾರಿ ಬ್ಯಾಕ್ಟೀರಿಯಾಗಳಿಗೆ ಪೋಷಣೆ ನೀಡಿ, ಕರುಳಿನ ಕ್ರಿಯೆ ಸರಾಗವಾಗುವಂತೆ ಮಾಡುವುದು.
ಮುಖದಲ್ಲಿ ಕಪ್ಪಗಿನ ಕಲೆಗಳು ಇದ್ದರೆ ಸೌತೆಕಾಯಿ ಸಿಪ್ಪೆಯೊಂದಿಗೆ ನಿಂಬೆ ಹಣ್ಣಿನ ರಸವನ್ನು ಬೆರೆಸಿ ನುಣ್ಣಗೆ ಅರೆದು ಅದನ್ನು ಲೇಪಿಸುತ್ತಾ ಬಂದರೆ ಕಲೆ ಮಾಯವಾಗುತ್ತದೆ. ಇದಲ್ಲದೆ ಸೌತೆಕಾಯಿಯ ತಿರುಳನ್ನು ಹಚ್ಚಿ ಅಂಗೈ ಮತ್ತು ಪಾದಗಳಿಗೆ ಮೃದುವಾಗಿ ಮಾಲೀಶ್ ಮಾಡಿದರೆ ದೇಹ ತಂಪಾಗಿ ನಿದ್ದೆ ಬರಲು ಸಾಧ್ಯವಾಗುತ್ತದೆ. ಸೌತೆಕಾಯಿಯನ್ನು ಚಕ್ರದಾಕಾರವಾಗಿ ಕತ್ತರಿಸಿ ಕಣ್ಣಿಗೆ ಇಟ್ಟುಕೊಂಡರೆ ಕಣ್ಣಿನ ಉರಿ ಕಡಿಮೆಯಾಗುತ್ತದೆ.
ಧನ್ಯವಾದಗಳು.
GIPHY App Key not set. Please check settings