in

ಕಣ್ಣಿನ ಸೌಂದರ್ಯಕ್ಕೆ ಸುಲಭ ಉಪಾಯಗಳು

ಕಣ್ಣಿನ ಸೌಂದರ್ಯ
ಕಣ್ಣಿನ ಸೌಂದರ್ಯ

ಮುಖದ ಅಂದವನ್ನು ಹೆಚ್ಚಿಸುವಲ್ಲಿ ಕಣ್ಣು ಕೂಡಾ ಮಹತ್ವದ ಪಾತ್ರ ವಹಿಸುತ್ತದೆ. ಕಣ್ಣಿನ ಸುತ್ತ ಕಪ್ಪು ಕಲೆಗಳಿದ್ದರೆ ಮುಖದಲ್ಲಿ ಕಪ್ಪು ಕಲೆಗಳೇ ಎದ್ದುಕಾಣುತ್ತವೆ.
ಮಾನವನ ದೇಹದಲ್ಲಿ ಕಣ್ಣುಗಳ ರಚನೆ ತುಂಬಾ ಸೂಕ್ಷ್ಮವಾದುದು. ಕಣ್ಣು ಎಂದರೆ ಅದರಲ್ಲಿ ಟಿ.ವಿ.ಕ್ಯಾಮೆರಾದಲ್ಲಿರುವಷ್ಟೇ ಸೂಕ್ಷ್ಮ ಜೀವ ಭಾಗಗಳಿರುತ್ತವೆ. ಎದುರಲ್ಲಿ ಪಾರದರ್ಶಕ ಮಸೂರವಿದೆ. ಅದು ದೃಷ್ಟಿಯನ್ನು ಬೇಕಾದ ವಸ್ತುವನ್ನು ನಿಲುಕಿಸಿಕೊಳ್ಳಲು ದಪ್ಪ ಹಾಗೂ ಕಿರಿದಾಗುತ್ತಿರುತ್ತದೆ.

ಕಣ್ಣಿನ ಸೌಂದರ್ಯಕ್ಕೆ ಸುಲಭ ಉಪಾಯಗಳು
ಖಿನ್ನತೆ

ಖಿನ್ನತೆ, ನಿದ್ರಾಹೀನತೆ, ಒತ್ತಡ, ಪೋಷಕಾಂಶದ ಕೊರತೆ, ಅಸಮತೋಲಿತ ಡಯೆಟ್, ಸೂರ್ಯನ ಕಿರಣಗಳು ನೇರವಾಗಿ ಬೀಳುವುದರಿಂದ, ಅತಿಯಾದ ಮಾದಕ ವಸ್ತುಗಳ ಸೇವನೆಯಿಂದ ಕಣ್ಣಿನ ಸುತ್ತ ಕಪ್ಪು ಕಲೆಗಳಾಗುತ್ತವೆ ಇದರಿಂದ ಕೂಡ ಕಣ್ಣಿನ ಸೌಂದರ್ಯಕ್ಕೆ ತೊಂದರೆಯಾಗುತ್ತದೆ.

ದೇಹದಲ್ಲಿನ ನೀರಿನಂಶವನ್ನು ಹೀರಿ ಹೊರಹಾಕುವ ಮದ್ಯ, ಕಾಫಿ, ಬಿಳಿ ಸಕ್ಕರೆ, ಕರಿದ ಪದಾರ್ಥಗಳು, ಮೈದಾ ಮತ್ತು ಉಪ್ಪಿನ ಸೇವನೆಯನ್ನು ಕಡಿಮೆ ಮಾಡಿ. ಆಗ ಚರ್ಮದ ಆರೋಗ್ಯ ಉತ್ತಮವಾಗಿರುತ್ತದೆ.

ನಿರಂತರವಾಗಿ ಕಂಪ್ಯೂಟರ್, ಟಿವಿ ಅಥವಾ ಮೊಬೈಲ್ ನೋಡುವುದು, ಅಥವಾ ನಿದ್ರೆಯ ಸಮಸ್ಯೆ, ಧೂಳು, ಹೊಗೆ ಇತ್ಯಾದಿ ಸಮಸ್ಯೆ ಗಳಿಂದಾಗಿ ಈ ರೀತಿಯ ಕಲೆಗಳು ಕಪ್ಪು ಕಲೆಗಳು ಅಥವಾ ನೆರಿಗೆಗಳು ಕಣ್ಣಿನ ಸುತ್ತ ಕಂಡುಬರುತ್ತದೆ.

ಕಣ್ಣಿನ ಸೌಂದರ್ಯ ಹೆಚ್ಚಿಸಲು ನೀವು ರಾಸಾಯನಿಕ ಬೆರೆಸಿದ ಕ್ರೀಮ್ ಗಳನ್ನೇ ಬಳಸಬೇಕಿಲ್ಲ. ನೈಸರ್ಗಿಕವಾಗಿ ಸಿಗುವ ಈ ಕೆಲವು ವಸ್ತುಗಳಿಂದಲೂ ನೀವು ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬಹುದು.

ಪ್ರತಿದಿನವೂ ಕನಿಷ್ಟ 6-8 ಗಂಟೆ ನಿದ್ದೆ ಮಾಡಿ. ಸಾಕಷ್ಟು ನೀರು ಕುಡಿಯಿರಿ.

ಪಪ್ಪಾಯ ಹಣ್ಣನ್ನು ಕಣ್ಣಿನ ಸುತ್ತಹಚ್ಚಿಕೊಳ್ಳುವುದರಿಂದಲೂ ಕಲೆ ಕಡಿಮೆಯಾಗುತ್ತದೆ.

ಕಣ್ಣಿನ ಸೌಂದರ್ಯಕ್ಕೆ ಸುಲಭ ಉಪಾಯಗಳು

ಡ್ರೈಫ್ರುಟ್ ಗಳು ದೇಹದ ಆರೋಗ್ಯವನ್ನು ಕಾಪಾಡುವ ಜೊತೆಗೆ ಕಣ್ಣಿನ ರೆಪ್ಪೆಗಳ, ಅದರ ಬೇರುಗಳ ಬೆಳವಣಿಗೆಗೂ ನೆರವಾಗುತ್ತದೆ. ಬೀನ್ಸ್ ಬೀಜದಲ್ಲಿ ಹೆಚ್ಚಿನ ಪ್ರಮಾಣದ ಪೋಲಿಕ್ ಆಮ್ಲ ಮತ್ತು ವಿಟಮಿನ್ ಎಚ್ ಇದ್ದು ಇದು ಕೂಡ ರೆಪ್ಪೆಯ ಕೂದಲಿನ ಬೆಳವಣಿಗೆಯನ್ನು ಪ್ರೋತ್ಸಾಹಿಸುತ್ತವೆ.

ಮುಳ್ಳು ಸೌತೆಯಲ್ಲಿ ನೀರಿನಾಂಶ ಹೆಚ್ಚಿರುವುದರಿಂದ ಇದು ಕಣ್ಣಿನ ಆರೋಗ್ಯವನ್ನು ಕಾಪಾಡುವುದಲ್ಲದೆ ಕಣ್ಣಿನ ಸುತ್ತ ಇರುವ ನೆರಿಗೆಗಳನ್ನು ವಾಸಿ ಮಾಡುತ್ತದೆ. ಜೊತೆಗೆ ಸೌತೆಕಾಯಿಯಲ್ಲಿ ಪೊಟಾಷಿಯಂ ಮತ್ತು ವಿಟಮಿನ್ ಇ ಇರುತ್ತದೆ. ಹಾಗಾಗಿ ಇದು ತಕ್ಷಣವೇ ಕಣ್ಣಿನ ಸುತ್ತ ಇರುವ ನೆರಿಗೆಗಳನ್ನು ವಾಸಿ ಮಾಡಲು ಸಹಾಯವಾಗುತ್ತದೆ.

ಅಲೋವೆರಾ ಜೆಲ್‌ನಲ್ಲಿಯೂ ಅತ್ಯಧಿಕವಾದ ಔಷಧೀಯ ಗುಣ ಗಳಿರುವುದರಿಂದ ಕಣ್ಣಿಗೆ ತಂಪನ್ನು ಒದಗಿಸುತ್ತದೆ ಹಾಗೂ ಕಣ್ಣಿನ ಸುತ್ತ ಇರುವ ಕಪ್ಪು ವರ್ತುಲವನ್ನು ನಿವಾರಿಸುತ್ತದೆ. ಇಷ್ಟೇ ಅಲ್ಲದೇ ಕಣ್ಣಿನ‌ ಸುತ್ತ ರಕ್ತ ಸಂಚಾರಕ್ಕೆ ಸಹಾಯವಾಗುತ್ತದೆ ಮತ್ತು ಹೊಸ ಕೋಶಗಳನ್ನು ಉತ್ಪತ್ತಿ ಮಾಡಲು ಸಹಕಾರಿಯಾಗುತ್ತದೆ

ಒಂದು ಟೀ ಸ್ಪೂನ್ ಟೊಮಾಟೋ ಜ್ಯೂಸ್, ಅರ್ಧ ಸ್ಪೂನ್ ನಿಂಬೆ ರಸ, ಸ್ವಲ್ಪ ಅರಿಶಿಣ ಪೌಡರ್, ಸ್ವಲ್ಪ ಕಡ್ಲೆ ಹಿಟ್ಟು ಬಳಸಿ ಪೇಸ್ಟ್ ಮಾಡಿ ಕಪ್ಪು ಕಲೆಗಳಿರುವ ಜಾಗಕ್ಕೆ ಹಚ್ಚಿಕೊಳ್ಳಿ. ಹತ್ತು ನಿಮಿಷ ಹಾಗೇ ಬಿಟ್ಟು ತೊಳೆದುಕೊಳ್ಳಿ.

ಒಂದು ಸಣ್ಣ ಕಪ್ ಗೆ ಎರಡು ಚಮಚದಷ್ಟು ಅಲೋವೆರಾ ಜೆಲ್ ನ‌ ಹಾಕಿ ನಂತರ ಅದಕ್ಕೆ ಎರಡು ಚಮಚದಷ್ಟು ಗುಲಾಬಿ ವಾಟರ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.ಎರಡೂ ಮಿಶ್ರಣವನ್ನು ಚೆನ್ನಾಗಿ ಮಿಕ್ಸ್ ಮಾಡಿ ಪೇಸ್ಟ್ ರೀತಿಯಲ್ಲಿ ರೆಡಿ ಮಾಡಿ ಇಟ್ಟುಕೊಳ್ಳಿ.ಎರಡು ಮುಳ್ಳುಸೌತೆಯ ತುಂಡುಗಳನ್ನು ತೆಗೆದುಕೊಂಡು ಕಣ್ಣಿನ ಸುತ್ತ ಇಡಿ.ನಂತರ ಹತ್ತು ನಿಮಿಷ ಆದ ನಂತರ ಮುಳ್ಳು ಸೌತೆಯನ್ನು ತೆಗೆದು ಈ ಮೊದಲೇ ತಯಾರಿಸಿಟ್ಟ ಅಲೋವೆರಾ ಹಾಗೂ ರೋಸ್ ವಾಟರ್‌ ನ ಮಿಶ್ರಣವನ್ನು ನೀಟಾಗಿ ಕಣ್ಣಿನ ಕೆಳಭಾಗ ಹಾಗೂ ಮೇಲಿನ ಭಾಗಕ್ಕೆ ಹಚ್ಚಬೇಕು.

ಹತ್ತಿಯನ್ನು ಸೌತೆಕಾಯಿ ರಸದಲ್ಲಿ ಮುಳುಗಿಸಿ ಕಪ್ಪು ಕಲೆಗಳಿರುವ ಭಾಗಕ್ಕೆ ದಿನಕ್ಕೆ ಎರಡು ಬಾರಿ ಹಚ್ಚಿಕೊಳ್ಳಬಹುದು.ಪುದೀನಾ, ನಿಂಬೆ ರಸ, ಟೊಮ್ಯಾಟೋ ಜ್ಯೂಸ್ ಕುಡಿಯುವುದನ್ನು ರೂಢಿ ಮಾಡಿಕೊಳ್ಳಿ.

ಹೊರಗಡೆ ಹೋಗುವಾಗ ಸನ್‌ಗ್ಲಾಸ್ ಬಳಸಿ.ಪೈನಾಫಲ್ ಮತ್ತು ಅರಿಶಿಣ ಪೌಡರ್‌ನ್ನು ಮಿಕ್ಸ್ ಮಾಡಿ ಹಚ್ಚಿಕೊಳ್ಳಿ. ಕಣ್ಣಿನ ಸುತ್ತ ಎದ್ದಿರುವ ಕಪ್ಪು ಕಲೆಗೆ ಬಾದಾಮಿ ಎಣ್ಣೆ ಹಚ್ಚಿಕೊಳ್ಳಿ.

ಉಪ್ಪು ತಿನ್ನುವುದನ್ನು ಕಡಿಮೆ ಮಾಡಿ. ಹೆಚ್ಚು ಬಾಳೆಹಣ್ಣು. ಆಸ್ಪರಾಗಸ್, ಹಸಿರು ತರಕಾರಿಗಳನ್ನು ಸೇವಿಸಿ. ಇವು ಕಣ್ಣ ಸುತ್ತಲಿನ ಕಪ್ಪು ವರ್ತುಲಗಳನ್ನು ಒಳಗಿನಿಂದ ಕ್ಲಿಯರ್ ಮಾಡುತ್ತವೆ. ಜೊತೆಗೆ ಆರೋಗ್ಯಕರ ಚರ್ಮದ ಬೆಳವಣಿಗೆಗೂ ಸಹಾಯ ಮಾಡುತ್ತವೆ. ನೀರಿಗೆ ಸೌತೆಕಾಯಿ, ನಿಂಬೆಹಣ್ಣು, ಕಿತ್ತಳೆ ತುಂಡುಗಳನ್ನು ಹಾಕಿ ಅದನ್ನು ಕುಡಿಯುವ ಅಭ್ಯಾಸ ರೂಢಿಸಿಕೊಳ್ಳಿ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.

ಅಲೆಕ್ಸಾಂಡರ್

ಅಲೆಕ್ಸಾಂಡರ್ ದಿ ಗ್ರೇಟ್ ಗ್ರೀಸ್ ದೇಶದ ದಂಡನಾಯಕ

ನಾಗಾರಾಧನೆ ಕ್ರಮ

ನಾಗಾರಾಧನೆ ಕ್ರಮ ಬರಲು ಕಾರಣವೇನು?