in

ರೇಷ್ಮೆ ಬೆಳೆ ಬೆಳೆಯುವ ವಿಧಾನಗಳು

ರೇಷ್ಮೆ ಹುಳು
ರೇಷ್ಮೆ ಹುಳು

ರೇಷ್ಮೆ ಉದ್ಯಮ,’ ಭಾರತದ ದೇಶದ ಅತಿ ಪುರಾತನ ಪ್ರಮುಖ ‘ವಸ್ತ್ರೌದ್ಯೋಗ’ದ ಒಂದು ಭಾಗವಾಗಿದೆ. ಇಲ್ಲಿ ಸುಮಾರು ೬ ಮಿಲಿಯನ್ ಕೆಲಸಗಾರರು ಪ್ರತ್ಯಕ್ಷವಾಗಿ ಇಲ್ಲವೇ ಪರೋಕ್ಷವಾಗಿ ಕೆಲಸಮಾಡುತ್ತಿದ್ದಾರೆ. ಕಾರ್ಖಾನೆಗಳ ಕೆಲಸಗಾರರು, ಮಾರುಕಟ್ಟೆಯ ವ್ಯಾಪಾರಿಗಳು, ಕಾಲೇಜ್ ನ ಬೋಧಕರು, ಸಂಶೋಧಕರು, ಉಡುಪುಗಳ ಮಾರಾಟಗಾರರು, ಉದ್ಯಮಿಗಳು, ಮತ್ತು ಹೆಚ್ಚಾಗಿ, ರೈತಾಪಿಕೆಲಸದಲ್ಲಿ ತೊಡಗಿಯೂ ಬಿಡುವಿನ ವೇಳೆಯಲ್ಲಿ ರೇಷ್ಮೆ ಉತ್ಪಾದಿಸುವವರ್ಗದ ಕಾರ್ಮಿಕರು ಕಾಣಿಸಿಕೊಳ್ಳುತ್ತಾರೆ.

ರೇಷ್ಮೆ ಹುಳು ವಾಸ್ತವವಾಗಿ ರೇಷ್ಮೆ ಹುಳುವಿನ ಪತಂಗದ ಜೀವನ ಚಕ್ರದಲ್ಲಿ ಲಾರ್ವಾ ಅಥವಾ ಕ್ಯಾಟರ್ಪಿಲ್ಲರ್ ಹಂತವಾಗಿದೆ. ಪ್ಯೂಪಾದಿಂದ ಅಭಿವೃದ್ಧಿ ಹೊಂದಲು ಅನುಮತಿಸಿದರೆ ಮತ್ತು ಚಕ್ರದಲ್ಲಿ ಈ ಹಂತದಲ್ಲಿ ನಾಶವಾಗದಿದ್ದರೆ ರೇಷ್ಮೆಯನ್ನು ರಚಿಸಬಹುದು, ಕ್ಯಾಟರ್ಪಿಲ್ಲರ್ ಕಂದು ಬಣ್ಣದ ಮಾದರಿಯ ಕೆನೆ ಬಿಳಿ ಪತಂಗವಾಗಿ ಬೆಳೆಯುತ್ತದೆ – ವೈಜ್ಞಾನಿಕವಾಗಿ ಬಾಂಬಿಕ್ಸ್ ಮೋರಿ ಎಂದು ಹೆಸರಿಸಲಾಗಿದೆ. ದೇಶೀಯ ರೇಷ್ಮೆ ಹುಳು ಇನ್ನು ಮುಂದೆ ಕಾಡಿನಲ್ಲಿ ಕಂಡುಬರುವುದಿಲ್ಲ, ಆದರೆ ಕಾಡು ರೇಷ್ಮೆ ಹುಳು ಮತ್ತು ಇತರ ರೇಷ್ಮೆ-ನೂಲುವ ಸಂಬಂಧಿಗಳು ಪಳಗಿಸದೆ ಉಳಿದಿವೆ. ಸಾಕುಪ್ರಾಣಿಯಾಗಿ, ವಯಸ್ಕ ಪತಂಗವು ಆಹಾರವನ್ನು ಹುಡುಕುವ ಮತ್ತು ಪರಭಕ್ಷಕಗಳ ವಿರುದ್ಧ ತನ್ನನ್ನು ರಕ್ಷಿಸಿಕೊಳ್ಳುವ ಸಾಮರ್ಥ್ಯವನ್ನು ಒಳಗೊಂಡಂತೆ ಅದು ಒಮ್ಮೆ ಹೊಂದಿದ್ದ ಅನೇಕ ಸಾಮರ್ಥ್ಯಗಳನ್ನು ಕಳೆದುಕೊಂಡಿದೆ. ಜೊತೆಗೆ, ರೇಷ್ಮೆ ಹುಳು ಪತಂಗವು ಕೇವಲ ಹಾರಬಲ್ಲದು.

ರೇಷ್ಮೆ ಬೆಳೆ ಬೆಳೆಯುವ ವಿಧಾನಗಳು
ರೇಷ್ಮೆ ಹುಳು

ರೇಷ್ಮೆಯು ರೇಷ್ಮೆ ಹುಳುಗಳು ಉತ್ಪಾದಿಸುವ ಒಂದು ಪ್ರೊಟೀನ್ ನಾರು. ರೇಷ್ಮೆ ಬಟ್ಟೆಗಳು ತೊಟ್ಟ ಹೆಂಗಸರ, ಮಕ್ಕಳ, ಮತ್ತು ಎಲ್ಲ ವಯೋಮಾನದ ಜನರ ಸಂಭ್ರಮಗಳನ್ನು ನೋಡುವುದು ಕಣ್ಣಿಗೆ ಹಬ್ಬ.

ಮೃದುವಾಗಿ ಹಗುರವಾದ ರೇಷ್ಮೆಯ ಶಿಫಾರಸು ಮಾಡಲು ಕಾರಣವಿಲ್ಲದಿಲ್ಲ. ಅದಕ್ಕೆ ದೈವದತ್ತವಾದ ಹಲವಾರು ಶ್ರೇಷ್ಟ ಗುಣಗಳು ಇರುವುದೇ ಕಾರಣವಾಗಿದೆ. ಉಕ್ಕಿನತಂತಿಗಿಂತ ಹೆಚ್ಚು ಬಲಯುತವಾದ ಗುಣ ಕಲ್ಪನೆಗೆ ಮೀರಿದ್ದು. ತೇವವನ್ನು ಹೀರಿಕೊಳ್ಳುವ ಗುಣ, ಉಡುವವರ ಮೈನ ಬೆವರನ್ನು ನಿಯಂತ್ರಿಸುವಲ್ಲಿ ಸಹಾಯಕವಾಗುತ್ತದೆ. ಆದರೆ ಉಷ್ಣಾಂಷವನ್ನು ಹೀರಿಕೊಳ್ಳುವ ಗುಣವಿಲ್ಲ. ಬೇಸಿಗೆಯಲ್ಲಿ ತಂಪು, ಚಳಿಗಾಗಾಲದಲ್ಲಿ ಬೆಚ್ಚಗಿನ ಅನುಭವನೀಡುವ ವಿಶಿಷ್ಟವಸ್ತ್ರಗಳು ರೇಷ್ಮೆಯಿಂದ ಸಾಧ್ಯ. ಇವನ್ನೆಲ್ಲಾ ಒಟ್ಟಾರೆ ಮೇಳೈಸುವ ಸಾಧ್ಯತೆ ರೇಷ್ಮೆಹುಳುಗಳ ಚಾಣಾಕ್ಷತನದಿಂದ ಹೊರಸೂಸುವ ‘ಪ್ರೋಟೀನ್ ಯುಕ್ತ’ ಎಳೆಗಳಿಂದ ಸಾಧ್ಯವಾಗಿದೆ ಎನ್ನುವುದನ್ನು ಕಲ್ಪನಾತೀತ. ನೈಸರ್ಗಿಕ ರೇಷ್ಮೆಯಲ್ಲಿ ಪ್ರಮುಖವಾಗಿ ನಾಲ್ಕುವಿಧಗಳನ್ನು ಕಾಣಬಹುದು. ಸುಮಾರಾಗಿ ರೇಷ್ಮೆ ಉತ್ಪಾದಿಸುವ ವಿಶ್ವದ ಪ್ರಮುಖ ದೇಶಗಳೆಲ್ಲಾ ಹಿಪ್ಪುನೇರಳೆ ಸೊಪ್ಪನ್ನು ಉಣ್ಣುವ ರೇಷ್ಮೆಯನ್ನೇ ಹೆಚ್ಚಾಗಿ ಬಳಸುತ್ತಾರೆ.ದೇಶದ ಒಟ್ಟಾರೆ ರೇಷ್ಮೆ ಉತ್ಪಾದನೆ, ೧೭,೩೦೦ ಟನ್ ಗಳು.

ಮಲ್ಬರ್ರಿ ರೇಷ್ಮೆ
ಟಸ್ಸಾ ‘ರೇಷ್ಮೆ’
ಈರಿ ‘ರೇಷ್ಮೆ’
ಮುಗಾ ‘ರೇಷ್ಮೆ’
ಬಾಂಬಿಕ್ಸ್ ತಳಿಯ ‘ರೇಷ್ಮೆ ಹುಳುಗಳು ‘ಹಿಪ್ಪುನೇರಳೆಗಿಡದ ಸೊಪ್ಪನ್ನು’ ತಿಂದು ‘ರೇಷ್ಮೆ’ ಎಳೆಗಳನ್ನು ಹೊರಸೂಸುತ್ತವೆ. ‘ಗೃಹೋದ್ಯೋಗ’ವೆಂದು ಕರೆಯಲಾಗುವ ‘ಸೆರಿಕಲ್ಚರ್ ‘ನಲ್ಲಿ ರೇಷ್ಮೆ ಹುಳುಗಳ ಪಾತ್ರ ಅತಿಮುಖ್ಯ. ಈ ಹುಳುಗಳನ್ನು ಮನೆಯ ಒಳ ಆಂಗಣದಲ್ಲೇ ಸಾಕಲಾಗುತ್ತದೆ.

ರೇಷ್ಮೆ ಉತ್ಪಾದಿಸುವ ರಾಜ್ಯಗಳು
ಕರ್ನಾಟಕ,
ಆಂಧ್ರ ಪ್ರದೇಶ
ಪಶ್ಚಿಮ ಬಂಗಾಳ
ತಮಿಳುನಾಡು
ಜಾರ್ ಖಂಡ್,
ಛತ್ತೀಸ್ ಘರ್,
ಒಡಿಶಾ,
ಜಮ್ಮು ಮತ್ತು ಕಾಶ್ಮೀರ

‘ರೇಷ್ಮೆ’ ಯಂತಹ ಸುಂದರ ಹಾಗೂ ಕೀಟಗಳಿಂದ ಲಭ್ಯವಾಗುವ ‘ಫೈಬರ್ ‘ನ ಉತ್ಪಾದನೆಯ ವಿಧಿ-ವಿಧಾನಗಳು ಅತ್ಯಂತ ರೋಚಕ. ರೇಷ್ಮೆ ಹುಳುಗಳ ಜೀವನದ ೪ ಹಂತಗಳು ಹೀಗಿವೆ.
ಮೊಟ್ಟೆ,
ಲಾರ್ವ,
ಪ್ಯೂಪಾ, ಮತ್ತು
ವಯಸ್ಕ ಚಿಟ್ಟೆ.

೪ ನೆಯ ಜ್ವರ’ದ ನಂತರ, ಅಂದರೆ ಮೊಟ್ಟೆಯೊಡೆದು ‘ಲಾರ್ವ’ ಹೊರಬಂದ ೨೮-೩೦ ದಿನಗಳಲ್ಲಿ ರೇಷ್ಮೆ ಸ್ವಲ್ಪ ‘ಹಳದಿಬಣ್ಣ’ಕ್ಕೆ ತಿರುಗಿ ದೇಹ ಸ್ವಲ್ಪಮಟ್ಟಿಗೆ ಪಾರದರ್ಶಕವಾಗುತ್ತದೆ. ಹುಳುಗಳ ಬಾಯಿನಿಂದ ಸೂಕ್ಷ್ಮ ವಾದ ರೇಷ್ಮೆ ಎಳೆಗಳು ಬರಲು ಪ್ರಾರಂಭವಾಗುತ್ತದೆ. ಈ ಪ್ರಕ್ರಿಯೆಯನ್ನು ಸ್ಥಳೀಯ ‘ರೇಷ್ಮೆ ಕೃಷಿಕರು, ’ಹುಳು ಹಣ್ಣಾಗುವುದು’ ಎನ್ನುತ್ತಾರೆ. ಆ ಸಮಯದಲ್ಲಿ ಹುಳುಗಳನ್ನು ‘ಬಿದಿರಿನ ಚಂದ್ರಿಕೆ’ಗೆ ವರ್ಗಾಯಿಸಬೇಕು. ಅಂದರೆ ಅದಕ್ಕೆ ‘ಗೂಡು ನಿರ್ಮಿಸಲು ಆಧಾರ’ ಒದಗಿಸಬೇಕು. ಸುಮಾರು ೨೪-೩೬ ಗಂಟೇಗಳಲ್ಲಿ ೫೦೦-೯೦೦ ಮೀಟರ್ ಉದ್ದವಿರುವ ಎಳೆಯಿಂದ ಈಗೂಡು ಸಿದ್ಧವಾಗಿ ಒಳಗಡೆ ಪ್ಯೂಪಾ ಅವಸ್ಥೆಯಲ್ಲಿರುವ ಹುಳು ಇರುತ್ತದೆ. ೧ ಪೌಂಡ್ ರೇಷ್ಮೆ ನೂಲು ತೆಗೆಯಲು ೨,೦೦೦-೩,೦೦೦ ಗೂಡುಗಳ ಅವಶ್ಯಕತೆಯಿದೆ. ಹೀಗೆ, ‘ಪತಂಗ’ದಿಂದ ‘ರೇಷ್ಮೆ’ಯ ತನಕದ ದೀರ್ಘ ಪಯಣ.

ಒಂದು ರೇಷ್ಮೆ ಗೂಡು ೩೬೦೦ ಅಡಿ ಉದ್ದದ ಒಂದೇ ಎಳೆಯಿಂದ ಮಾಡಲ್ಪಟ್ಟಿರುತ್ತದೆ. ಒಂದು ಉಪಯುಕ್ತ ದಾರವನ್ನು ತಯಾರಿಸಲು ಅಂತಹ ೮ ಎಳೆಗಳು ಬೇಕು. ಈ ರೀತಿ ಸುಮಾರು ೪೦,೦೦೦ ರೇಷ್ಮೆ ಹುಳುಗಳಿಂದ ೩೬೦೦ ಅಡಿ ಉದ್ದದ ೫೦೦೦ ದಾರಗಳನ್ನು ತಯಾರಿಸಬಹುದು.
ಒಂದು ಇಂಚುಗೆ ೨೦೦ ದಾರಗಳ ಲೆಕ್ಕದಲ್ಲಿ (ಒಂದು ಚದುರ ಇಂಚಿಗೆ ೪೦೦ ಇಂಚು ದಾರ) ೮ ಹುಳಗಳಿಂದ ೧೦೮ ಚದುರ ಇಂಚುಗಳ ಬಟ್ಟೆ ತಯಾರಾಗುತ್ತದೆ. ಆದ್ದರಿಂದ ೪೦,೦೦೦ ಹುಳಗಳಿಂದ ೩,೭೫೦ ಚದುರ ಅಡಿಗಳ ಬಟ್ಟೆ ತಯಾರಾಗುತ್ತದೆ.

ರೇಷ್ಮೆ ಬೆಳೆ ಬೆಳೆಯುವ ವಿಧಾನಗಳು
ರೇಷ್ಮೆ ಗೂಡು

ನಂತರ ಗೂಡುಗಳನ್ನು ನೀರಿನಲ್ಲಿ ಬೇಯಿಸಿ, ಒಳಗಿರುವ ‘ಪ್ಯೂಪಾ’ವನ್ನು ಕೊಲ್ಲಲಾಗುತ್ತದೆ. ಇದು ಅತ್ಯವಶ್ಯಕ. ಇಲ್ಲವಾದರೆ, ‘ಪ್ಯೂಪಾ ಚಿಟ್ಟೆಯಾಗಿ ಮಾರ್ಪಟ್ಟು ಗೂಡು ಹರಿದುಕೊಂಡು ಹೊರಬರುತ್ತದೆ. ಇದರಿಂದ ಆಗಲೇ ತಯಾರಾಗಿರುವ ‘ರೇಷ್ಮೆ’ ಎಳೆಗಳು ತುಂಡಾಗಿ ಹಾಳಾಗುತ್ತವೆ. ಅಂತಹ ರೇಷ್ಮೆಯಿಂದ ಅತ್ಯುತ್ತಮ ಬೆಲೆಬಾಳುವ ವಸ್ತ್ರಗಳನ್ನು ಮಾಡಲು ಅಸಾಧ್ಯ. ಬಿಸಿನೀರಿನಲ್ಲಿ ಬೇಯಿಸುವ ಸಮಯದಲ್ಲಿ ಗೂಡಿನಿಂದ ಎಳೆಗಳನ್ನು ತೆಗೆದು ಸರಾಗವಾಗಿ ಎಳೆಗಳನ್ನು ಸುತ್ತಿಡಬಹುದು.

ಕ್ರಿ.ಶ. 400 ರಲ್ಲಿ ಚೀನಾದ ರಾಜಕುಮಾರಿಯು ಭಾರತೀಯ ರಾಜನನ್ನು ವಿವಾಹವಾದಾಗ, ತನ್ನ ದೇಶವನ್ನು ತೊರೆದು ರಹಸ್ಯವಾಗಿ ರೇಷ್ಮೆ ಹುಳುಗಳ ಮೊಟ್ಟೆಗಳನ್ನು ತನ್ನೊಂದಿಗೆ ತೆಗೆದುಕೊಂಡಾಗ ಚೀನಾವು ರೇಷ್ಮೆ ಉತ್ಪಾದನೆಯಲ್ಲಿ ತನ್ನ ಏಕಸ್ವಾಮ್ಯವನ್ನು ಕಳೆದುಕೊಂಡಿತು ಎಂದು ದಂತಕಥೆ ಹೇಳುತ್ತದೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಬಸ್ಮಾಸುರನ ಕಥೆ

ಮೋಹಿನಿ-ಭಸ್ಮಾಸುರನ ಕಥೆ

ಪಾರ್ವತಿ ಪುತ್ರ ಗಣೇಶ

ಪಾರ್ವತಿ ಪುತ್ರ ಗಣೇಶ