ಮೆಲ್ಬೋರ್ನ್‌ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಡೇವಿಡ್ ವಾರ್ನರ್ 102 ಎಸೆತಗಳನ್ನು ಎದುರಿಸಿ 106 ರನ್ ಗಳಿಸಿದರು. ಅವರ ಇನ್ನಿಂಗ್ಸ್‌ನಲ್ಲಿ 8 ಬೌಂಡರಿ ಮತ್ತು 2 ಸಿಕ್ಸರ್‌ಗಳು ಸೇರಿದ್ದವು. ಇದು ವಾರ್ನರ್ ಅವರ ಏಕದಿನ ವೃತ್ತಿಜೀವನದ 18 ನೇ ಶತಕವಾಗಿದ್ದು, ಅವರ ಅಂತರರಾಷ್ಟ್ರೀಯ ವೃತ್ತಿಜೀವನದ 43 ನೇ ಶತಕವಾಗಿದೆ.
ಡೇವಿಡ್ ಯ್ಯಾಂಡ್ರಿವ್ ವಾರ್ನರ್ (ಜನನ : ೨೭ ಅಕ್ಟೋಬರ್ ೧೯೮೬ ) ಆಸ್ಟ್ರೇಲಿಯಾ ಕ್ರಿಕೆಟಿಗ ಹಾಗೂ ತಂಡದ ಎಲ್ಲಾ ವಿಭಾಗಗಳಲ್ಲಿ ಉಪನಾಯಕನಾಗಿದ್ದಾರೆ. ಇವರು ಆಕ್ರಮಕಾರಿ ಆರಂಭಿಕ ಎಡಗೈ ಬ್ಯಾಟ್ಸಮನ್. ವಾರ್ನರ್ ಆಸ್ಟೇಲಿಯಾ ಕ್ರಿಕೆಟಿನ ೧೩೨ ವರ್ಷಗಳಲ್ಲಿ ಫ಼ಸ್ಟ್ ಕ್ಲಾಸ್ ಕ್ರಿಕೆಟ್ ಆಡದೇ ಅನುಭವವಿಲ್ಲದೆ ತಂಡಕ್ಕೆ ಆಯ್ಕೆ ಆಗಿರುವ ಮೊದಲಿಗ. ಇವರು ಆಸ್ಟ್ರೇಲಿಯಾದ ನಿವ್ ಸವ್ತ್ ವೇಲ್ಸ್ ಮತ್ತು ಸಿಡ್ನಿ ತಂಡರ್ಸ್ ತಂಡಗಳಲ್ಲಿ ಆಡಿದ್ದಾರೆ ಅಲ್ಲದೆ ಭಾರತದ ಐಪಿಎಲ್ ನ ಡೆಲ್ಲಿ ಡೇರ್ ಡೆವಿಲ್ಸ್ ಮತ್ತು ಸನ್ ರೈಸರ್ಸ್ ಪರವಾಗಿ ಆಡಿದ್ದಾರೆ.

ವಾರ್ನರ್ ೦೭ ನವೆಂಬರ್ ೨೦೧೫ ರಲ್ಲಿ ಟೆಸ್ಟ್ ಕ್ರಿಕೆಟ್ ನ ಎರಡೂ ಇನಿಂಗ್ಸ್ ನಲ್ಲಿ ಮೂರುಬಾರಿ ಶತಕಗಳಿಸುವ ಮೂಲಕ ದಾಖಲೆಯನ್ನು ನಿರ್ಮಿಸಿದರು. ಈ ಹಿಂದೆ ಈ ದಾಖಲೆಯನ್ನು ಸುನಿಲ್ ಗವಾಸ್ಕರ್ ಮತ್ತೆ ರಿಕಿ ಪಾಂಟಿಂಗ್ ಮಾಡಿದ್ದರು. ವಾರ್ನರ್ ಆಸ್ಟ್ರೇಲಿಯಾದ ಟೆಸ್ಟ್ ಕ್ರಿಕೆಟ್ ನಲ್ಲಿ ವೇಗದ ನಾಲ್ಕುಸಾವಿರ ರನ್ ಮಾಡುವುದರಲ್ಲಿ ಐದನೇಯವರು. (ಡಬ್ಲಿವ್ ಎ ಸಿ ಎ ) ಕ್ರಿಡಾಂಗಣ್ದಲ್ಲಿ ಮೂರು ಶತಕಗಳಿಸಿದ ಮೊದಲಿಗ ವಾರ್ನರ್ ಅದರಲ್ಲಿ ಎರಡು ಶತಕಗಳು ವಾರ್ನರ್ ನ ಉತ್ತಮ ರನ್ನುಗಳು. ವಾರ್ನರ್ ಒಬ್ಬ ಚುರುಕಾದ ಕ್ಷೇತ್ರರಕ್ಷಕ(ಪಿಲ್ಡರ್). ಅಧಿಕೃತ ಪ್ರಕಾರ ಐ ಸಿ ಸಿ ಆಟಗಾರರ ಶ್ರೇಯಾಂಕಗಳಲ್ಲಿ ಡಿಸೆಂಬರ್ ೨೦೧೫ ರಲ್ಲಿ ಅವರು ಟಿ-೨೦ಯಲ್ಲಿ ೧೫೦೦ ರನ್ನು ಮಾಡಿದ ಆಸ್ರ್ಟೇಲಿಯಾದ ಮೊದಲಿಗ.
ವಾರ್ನರ್ ಸಿಡ್ನಿಯ ನ್ಯ್ ಸವ್ತ್ ವೇಲ್ಸ್ ನ ಪ್ಯಾಡಿಂಗ್ಟನ್ ನಲ್ಲಿ ಜನಿಸಿದರು.೧೩ರನೇ ವಯ್ಯಸ್ಸಿನಲೀ ಅವರು ಬಲಗೈ ಬ್ಯಾಟ್ಸಮನ್ ಆಗಿದ್ದರು. ನಂತರ ಅವರ ತಾಯಿ ಶೀಲಾವಾರ್ನರ್ ವಾರ್ನರ್ ಅನ್ನು ಎಡಗೈಯಿಂದ ಬ್ಯಾಟಿಂಗ್ ಆಡುವಂತೆ ಪ್ರೆರೇಪಿಸಿದರು. ಅಂಡರ್ ೧೬ ನಲ್ಲಿ ಸಿಡ್ನಿ ಕ್ರಿಕೆಟ್ ಕ್ಲಬ್ ನಲ್ಲಿ ದಾಖಲೆಯನ್ನು ಮಾಡಿದರು. ಅಂಡರ್ ೧೯ ನಲ್ಲಿ ಶ್ರೀಲಂಕ ಪ್ರವಾಸ ಕೈಗೊಂಡು ಅಲ್ಲಿಯೂ ದಾಖಲೆ ರನ್ನು ಮಾಡುವುದರ ಮುಖಾಂತರ ಆಸ್ತ್ರೇಲಿಯಾ ತಂಡಕ್ಕೆ ಆಯ್ಕೆಯಾದರು.

ಮೊದಲು ವಿರಾಟ್ ಕೊಹ್ಲಿ ಈಗ ಡೇವಿಡ್ ವಾರ್ನರ್. ಪ್ರಸ್ತುತ ಯುಗದ ಈ ಇಬ್ಬರೂ ಸ್ಟಾರ್ ಬ್ಯಾಟ್ಸ್‌ಮನ್‌ಗಳಿಗೆ ಒಂದೇ ಒಂದು ಸಮಸ್ಯೆ ಇತ್ತು. ಅದೆನೆಂದರೆ ಈ ಇಬ್ಬರ ಬ್ಯಾಟ್ ಬಹಳ ದಿನಗಳಿಂದ ಶತಕದ ಬರ ಎದುರಿಸುತ್ತಿತ್ತು. ಈ ಇಬ್ಬರೂ ಅರ್ಧಶತಕದ ಇನ್ನಿಂಗ್ಸ್ ಆಡುತ್ತಿದ್ದರಾದರೂ, ಅದನ್ನು ಶತಕವನ್ನಾಗಿ ಪರಿವರ್ತಿಸುವಲ್ಲಿ ವಿಫಲರಾಗುತ್ತಿದ್ದರು. ಆದರೆ ಕೆಲವು ತಿಂಗಳ ಹಿಂದೆ ವಿರಾಟ್ ಕೊಹ್ಲಿಯ ಅಂತಾರಾಷ್ಟ್ರೀಯ ಶತಕದ ನಿರೀಕ್ಷೆ ಎರಡೂವರೆ ವರ್ಷಗಳ ನಂತರ ಕೊನೆಗೊಂಡಿತು. ಅಂತೆಯೇ ಇದೀಗ 2 ವರ್ಷ 10 ದಿನಗಳ ನಂತರ ಅಂದರೆ ಒಟ್ಟಾರೆ 1043 ದಿನಗಳ ನಂತರ ಡೇವಿಡ್ ವಾರ್ನರ್ ಅವರ ಅಂತರಾಷ್ಟ್ರೀಯ ಶತಕದ ನಿರೀಕ್ಷೆಯೂ ಅಂತ್ಯಗೊಂಡಿದೆ. ಮೆಲ್ಬೋರ್ನ್‌ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಡೇವಿಡ್ ವಾರ್ನರ್ ಅದ್ಭುತ ಶತಕ ಸಿಡಿಸಿ ಮಿಂಚಿದ್ದಾರೆ.
ವಾರ್ನರ್ ವೃತ್ತಿ ಜೀವನ :
ವಾರ್ನರ್ ಆಕ್ರಮನಕಾರಿ ಆರಂಭಿಕ ಎಡಗೈ ಬ್ಯಾಟ್ಸಮನ್ ಮತ್ತು ಸ್ವಿಟ್ಚ್ ಹಿಟ್ ಹೊಡೆಯುವ ಸಾಮರ್ಥ್ಯವನ್ನುಲ್ಲವರು. ಅವರು ಚುರುಕಾದ ಅರ್ಥಲೆಟಿಕ್ ಕ್ಷೇತ್ರರಕ್ಷಕ ಮತ್ತು ಸಹ ಸ್ಪಿನ್ನರ್. ಇವರು ಆಪ್ ಸ್ಪಿನ್ ಮತ್ತು ಲೆಗ್ ಸ್ಪಿನ್ ಮಾಡಬಲ್ಲರು. ಇವರು ಆಸ್ತ್ರೇಲಿಯಾ ಡೊಮೆಸ್ಟಿಕ್ ಕ್ರಿಕೆಟ್ ನಲ್ಲಿ ತಸ್ಮಾನಿಯಾ ತಂಡದ ವಿರುದ್ದ (ಒ ಡಿ ಐ) ನಲ್ಲಿ ೧೬೫ ರನ್ನುಗಳಿಸಿದರು. ಈ ಹಿಂದೆ ಯಾರೂ ಇಷ್ಟು ರನ್ನು ಹೊಡೆದಿರಲಿಲ್ಲ. ಅಲ್ಲದೆ ನಂತರ ಪಂದ್ಯದಲ್ಲಿ ೫೪ ಎಸೆತಗಳಲ್ಲಿ ೯೭ ರನ್ನುಗಳಿಸಿದರು, ಆದರೆ ಅವರು ವೇಗದ ಶತಕ ಮಾಡುವುದರಲ್ಲಿ ವಿಫಲರಾದರು. ಆಸ್ತ್ರೇಲಿಯಾ ಡೊಮೆಸ್ಟಿಕ್ ನಲ್ಲಿ ಚೆನ್ನಾಗಿ ಆಡುದುದರಿಂದ ವಾರ್ನರ್ ರವರನ್ನು ೧೧ ನವೆಂಬರ್ ೨೦೦೯ರಲ್ಲಿ ಸವ್ತ್ ಆಪ್ರಿಕಾ ವಿರುದ್ದ ಮೆಲ್ ಬೋರ್ನ್ ಕ್ರಿಡಾಂಗನದಲ್ಲಿ ಟಿ-೨೦ ಇಂಟರ್ ನ್ಯಾಶನಲ್ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿಸಿದರು. ಪಾದರ್ಪಣೇ ಮ್ಯಾಚ್ ನಲ್ಲೇ ೮೯ರನ್ನುಗಳಿಸಿದರು. ೨೦೧೦ರಲ್ಲಿ ವೆಸ್ಟ್ ಇಂಡಿಸ್ ವಿರುದ್ದ ೧೮ಎಸೆತಗಳಲ್ಲಿ ಅರ್ಧಶತಕ ಮಾಡುವ ಮೂಲಕ ವಾರ್ನರ್ ವೇಗದ ಅರ್ಧಶತಕದ ದಾಖಲೆಯನ್ನು ಮಾಡಿದ್ದರು. ಈ ಹಿಂದೆ ಈ ದಾಖಲೆ ಭಾರತದ ಯುವರಾಜ್ ಸಿಂಗ್ ಹೆಸರಲ್ಲಿತ್ತು, ಅವರು ೧೯ ಎಸೆತಗಳಲ್ಲಿ ಅರ್ಧಶತಕವನ್ನು ಪೂರೈಸಿದ್ದರು.ವಾರ್ನರ್ ೦೭ ಆಕ್ಟೋಬರ್ ೨೦೧೧ ರಲ್ಲಿ ಚಾಂಪಿಯನ್ ಲೀಗ್ ನಲ್ಲಿ ಭಾರತದ ಚೆನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ದ ಶತಕಗಳನ್ನು ಗಳಿಸಿದರು. ಈ ರೀತಿ ಎರಡೂ ಟಿ-೨೦ ಮ್ಯಾಚ್ ನಲ್ಲಿ ಶತಕಗಳಿಸಿದ ಮೊದಲಿಗ, ಈ ದಾಖಲೆಯೂ ಅವರ ಹೆಸರಿನಲ್ಲಿದೆ. ವಾರ್ನರ್ ಟೆಸ್ಟ್ ಕ್ರಿಕೆಟ್ ಗೆ ೧ ಡಿಸೆಂಬರ್ ೨೦೧೧ ರಂದು ಬ್ರಿಸ್ನೆನ್ ಕ್ರೀಡಾಂಗನದಲ್ಲಿ ನ್ಯೂಜಿಲ್ಯಾಂಡ್ ವಿರುದ್ದ ಪಾದಾರ್ಪಣೆ ಮಾಡಿದರು.
ಜನವರಿ ೧೩ ೨೦೧೨ ರಲ್ಲಿ ಭಾರತದ ವಿರುದ್ದ ೬೯ಎಸೆತಗಳಲ್ಲಿ ಶತಕಗಳಿಸಿದರು. ಇದು ಐದನೇ ವೇಗದ ಶತಕವಾಗಿತ್ತು. ವಾರ್ನರ್ (ಒ ಡಿ ಐ) ಕ್ರಿಕೆಟ್ ಗೆ ೧೮ ಜನವರಿ ೨೦೦೯ ರಲ್ಲಿ ಪಾದರ್ಪಣೆ ಮಾಡಿದರು. ಐಸಿಸಿ ವಿಶ್ವಕಪ್ ೨೦೧೫ ರಲ್ಲಿ ವಾರ್ನರ್ ಆಪ್ಗಾನಿಸ್ತಾನ್ ವಿರುದ್ದ ೧೭೪ರನ್ನುಗಳಿಸಿದರು ಇದು ಅವರ ಒಡಿಐನ ಹೆಚ್ಚು ವ್ಯೆಯಿಕ್ತಿಕ ರನ್ನುಗಳು. ಒಟ್ಟಾರೆ ವಿಶ್ವಕಪ್ ನಲ್ಲಿ ೩೪೫ ರನ್ನು ಗಳಿಸಿದರು ಅಲ್ಲದೇ ವಿಶ್ವಕಪ್ ನ ಎಲ್ಲರ ವ್ಯೇಯಿಕ್ತಿಕ ರನ್ನುಗಳಲ್ಲಿ ಇವರು ಹನೋಂದನೇಯವರು. ವಾರ್ನರ್ ರವರು ೨೦೧೫ರಲ್ಲಿ ನಡೆದ ಯ್ಯಾಷಶ್ ಟೆಸ್ಟ್ ಕ್ರಿಕೆಟ್ ನಲ್ಲಿ ೪೧೮ರನ್ನುಗಳಿಸಿದರು ಅಲ್ಲದೆ ಆ ಟೂರ್ನಿಯಲ್ಲಿ ಹೆಚ್ಚುರನ್ನುಗಳಿಸಿದವರಲ್ಲಿ ವಾರ್ನರ್ ನಾಲ್ಕನೇಯವರು.
ಐ.ಪಿ.ಎಲ್ (ಇಂಡಿಯನ್ ಪ್ರೈಮರ್ ಲೀಗ್)
ಐ.ಪಿ.ಎಲ್ ನ ಎರಡನೇ ಅವದಿಯಲ್ಲಿ ವಾರ್ನರ್ ಡೆಲ್ಲಿ ಡೇರ್ ಡೆವಿಲ್ಸ್ ತಂಡದ ಪರ ಆಡಿದರು. ನಾಲ್ಕನೇ ಅವದಿಯಲ್ಲಿ ತನ್ನ ಮೊದಲ ಐ.ಪಿ.ಎಲ್ ಶತಕವನ್ನುಗಳಿಸಿದರು. ೨೦೧೪ರಲ್ಲಿ ವಾರ್ನರನ್ನು ಸನ್ ರೈಸರ್ಸ್ ಹೈದ್ರಾಬಾದ್ ತಮ್ಮ ತಂಡಕ್ಕೆ ತೆಗೆದುಕೊಂಡರು ಅಲ್ಲದೆ ೨೦೧೫ರಲ್ಲಿ ಅವರನ್ನು ತಂಡದ ನಾಯಕನಾಗಿ ಮಾಡಿದರು. ೨೦೧೬ರಲ್ಲಿ ವಾರ್ನರ್ ನ ಅದ್ಬುತ ಬ್ಯಾಟಿಂಗ್ ನಿಂದಾಗಿ ಹೈದ್ರಾಬಾದ್ ತಂಡವು ೨೦೧೬ ಐ.ಪಿ.ಎಲ್ ಚಾಂಪಿಯನ್ನಾಯಿತು(ವಿಜೇತರಾದರು). 2021ರ ಐ ಪಿ ಎಲ್ ನಲ್ಲಿ ಫಾರ್ಮ್ ಕಳೆದುಕೊಂಡು ನಾಯಕತ್ವದಿಂದ ಇಳಿಯಲ್ಪಟ್ಟರು.

43ನೇ ಶತಕಕ್ಕಾಗಿ 1043 ದಿನ ಕಾಯಬೇಕಾಯಿತು :
ಆದಾಗ್ಯೂ ಡೇವಿಡ್ ವಾರ್ನರ್ ತಮ್ಮ 43ನೇ ಅಂತಾರಾಷ್ಟ್ರೀಯ ಶತಕಕ್ಕಾಗಿ ಬಹಳ ಸಮಯ ಕಾಯಬೇಕಾಯಿತು. 1043 ದಿನಗಳ ನಂತರ ಅವರ ಬ್ಯಾಟ್‌ನಿಂದ ಈ ಶತಕ ಹೊರಹೊಮ್ಮಿತು. ಅವರು ತಮ್ಮ ಕೊನೆಯ ಶತಕವನ್ನು 14 ಜನವರಿ 2020 ರಂದು ಭಾರತದ ವಿರುದ್ಧ ವಾಂಖೆಡೆಯಲ್ಲಿ ಗಳಿಸಿದರು. ಅಂದಿನಿಂದ ಇಂದಿನವರೆಗೂ ವಾರ್ನರ್ ಅವರ ಬ್ಯಾಟ್ ಶತಕದ ಬರ ಎದುರಿಸುತ್ತಿತ್ತು ಆದರೆ, ಅವರು ಮೆಲ್ಬೋರ್ನ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಶತಕ ಸಿಡಿಸಿದ್ದಲ್ಲದೆ, ತಮ್ಮ ಆರಂಭಿಕ ಪಾಲುದಾರ ಟ್ರೆವಿಡ್ ಹೆಡ್ ಅವರೊಂದಿಗೆ ದಾಖಲೆಯ ಪಾಲುದಾರಿಕೆಯನ್ನು ಮಾಡಿದ್ದು, ಇದು 20 ವರ್ಷಗಳ ಹಳೆಯ ದಾಖಲೆಯನ್ನು ಮುರಿದಿದೆ.
20 ವರ್ಷಗಳ ಹಳೆಯ ದಾಖಲೆ ಉಡೀಸ್
ಡೇವಿಡ್ ವಾರ್ನರ್ ಜೊತೆಗೆ ಟ್ರಾವಿಸ್ ಹೆಡ್ ಕೂಡ ಇನ್ನೊಂದು ತುದಿಯಿಂದ ಶತಕ ಬಾರಿಸಿದರು. ವಾರ್ನರ್ 106 ರನ್ ಗಳಿಸಿದರೆ, ಹೆಡ್ 130 ಎಸೆತಗಳಲ್ಲಿ 152 ರನ್ ಗಳಿಸಿದರು. ಇವರಿಬ್ಬರ ನಡುವೆ 269 ರನ್‌ಗಳ ಜೊತೆಯಾಟವಿತ್ತು. ಇದು ಮೆಲ್ಬೋರ್ನ್‌ನಲ್ಲಿ ನಡೆದ ಪುರುಷರ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಅತಿ ದೊಡ್ಡ ಜೊತೆಯಾಟವಾಗಿದೆ. ಇದಕ್ಕೂ ಮುನ್ನ ಈ ದಾಖಲೆ ಆಸ್ಟ್ರೇಲಿಯಾದ ಆಡಮ್ ಗಿಲ್‌ಕ್ರಿಸ್ಟ್ ಮತ್ತು ರಿಕಿ ಪಾಂಟಿಂಗ್ ಹೆಸರಿನಲ್ಲಿತ್ತು. 2002 ರಲ್ಲಿ ಇಂಗ್ಲೆಂಡ್ ವಿರುದ್ಧ ಇಬ್ಬರೂ 225 ರನ್‌ಗಳ ಜೊತೆಯಾಟವನ್ನು ಆಡಿದ್ದರು. ಈ ಮೂಲಕ ಹೆಡ್ ಮತ್ತು ವಾರ್ನರ್ ಎಂಸಿಜಿಯಲ್ಲಿ ಅತಿದೊಡ್ಡ ಜೊತೆಯಾಟದ ದಾಖಲೆಯನ್ನು ಮುರಿದಿದ್ದಾರೆ.
ಧನ್ಯವಾದಗಳು.
GIPHY App Key not set. Please check settings