in

ಕಾರ್ತಿಕೇಯ, ಪಾರ್ವತಿ ಪುತ್ರ ಸುಬ್ರಮಣ್ಯ

ಪಾರ್ವತಿ ಪುತ್ರ ಸುಬ್ರಮಣ್ಯ
ಪಾರ್ವತಿ ಪುತ್ರ ಸುಬ್ರಮಣ್ಯ

ಪಾರ್ವತೀಪುತ್ರನಾದ ಕುಮಾರಸ್ವಾಮಿ, ಷಣ್ಮುಖನೆಂಬ ಹೆಸರೂ ಇದೆ. ಕೃತ್ತಿಕೆಯರು ಇವನ ಸಾಕುತಾಯಿಯರು. ಇವನ ಜನ್ಮವಿಚಾರದಲ್ಲಿ ಅನೇಕ ಕಥೆಗಳಿವೆ. ಮಹಾಭಾರತದ ವನಪರ್ವದಲ್ಲಿನ ಕಾರ್ತಿಕೇಯಸ್ತವ ಇವನಿಗೆ ಐವತ್ತೊಂದು ಹೆಸರುಗಳನ್ನು ಸೂಚಿಸುತ್ತದೆ. ಈಶ್ವರನ ಅಗ್ನಿತತ್ತ್ವದಿಂದ ಸ್ಕಂದನಾಗಿ ಜನಿಸಿ ಆರು ಜನ ಮಾತೆಯರ ಹಾಲು ಕುಡಿದು ಷಾಣ್ಮುತುರನಾಗಿ ಶರವಣದಲ್ಲಿ ಬೆಳೆದವನಿವನು. ಶಕ್ತಿಧರನಾಗಿ ದೇವಸೈನಕ್ಕೆ ಅಧಿಪತಿಯಾಗಿ ಅವರಿಗಾಗಿ ರಾಕ್ಷಸ ಸಂಹಾರ ಮಾಡಿದ. ಕ್ರೌಂಚಪರ್ವತ ಧಾರಣ ಮಾಡಿದ. ನವಿಲು ಈತನ ವಾಹನ.

ಕಾರ್ತಿಕೇಯ, ಪಾರ್ವತಿ ಪುತ್ರ ಸುಬ್ರಮಣ್ಯ
ಸುಬ್ರಮಣ್ಯ

ದ್ರಾವಿಡ ದೇವತೆಗಳಲ್ಲಿ ಕುಮಾರಸ್ವಾಮಿಗೆ ಕಂದ, ಮುರುಗ, ಕುರುಂಜಿಯಾಂಡವನ್, ಸುಬ್ರಹ್ಮಣ್ಯ ಮುಂತಾದ ಹೆಸರುಗಳಿದ್ದು ಅತ್ಯುಚ್ಚಸ್ಥಾನ, ಪೂಜೆ ಸಲ್ಲುತ್ತದೆ. ಭಕ್ತಿಪಂಥಿಗಳಾದ ಆಳ್ವಾರುಗಳೂ ಇತರರೂ ತಮ್ಮ ಅನೇಕ ಹಾಡುಗಳಲ್ಲಿ ಮುರುಗ ಸ್ವಾಮಿಯನ್ನು ವಿಪುಲವಾಗಿ ಕೊಂಡಾಡಿದ್ದಾರೆ. ಸ್ಕಾಂದಪುರಾಣ, ಶಿವಮಹಾಪುರಾಣ, ಕಾಳಿದಾಸನ ಕುಮಾರಸಂಭವಗಳು ಈ ದೇವತೆಯ ಮಹಿಮಾವಿಶೇಷವನ್ನು ಸಾರುತ್ತವೆ.

ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಮಣ್ಯಕ್ಷೆತ್ರ ಕೂಡಾ ಬಹಳ ಪ್ರಸಿದ್ದಿ ಪಡೆದಿದೆ.

ಕುಕ್ಕೆ ಸುಬ್ರಹ್ಮಣ್ಯವು ‘ಧಾರಾ’ ನದಿಯ ದಂಡೆಯಲ್ಲಿದೆ. ಹಿಂದೂ ಪುರಾಣ ಗ್ರಂಥಗಳ ಪ್ರಕಾರ ದೇವಸೇನಾಪತಿ ಕುಮಾರಸ್ವಾಮಿಯು ತಾರಕ-ಶೂರಪದ್ಮಾಸುರ ಮತ್ತಿತರ ರಾಕ್ಷಸರನ್ನು ಕೊಂದು ಈ ಸ್ಥಳಕೆ ಬಂದನು. ರಕ್ತಸಿಕ್ತವಾದ ತನ್ನ ಶಕ್ತಿಯಾಯುಧವನ್ನು ಈ ನದಿಯಲ್ಲಿ ತೊಳೆದನು. ಈ ಘಟನೆಯ ಆನಂತರ ಈ ನದಿ ಕುಮಾರಧಾರೆಯೆಂದು ಪ್ರಸಿದ್ದವಾಯಿತು. ರಾಕ್ಷಸರೊಂದಿಗಿನ ಯುದ್ದಾನಂತರ ಕುಮಾರಸ್ವಾಮಿಯು ಸೋದರ ಗಣೇಶ, ವೀರಬಾಹು ಮೊದಲಾದ ಸಹಚರರೊಂದಿಗೆ ಕುಮಾರ ಪರ್ವತದ ತುದಿ ಭಾಗಕ್ಕೆ ಬಂದನು.

ದೇವೇಂದ್ರನೇ ಮೊದಲಾದವರು ಆತನನ್ನು ಸ್ವಾಗತಿಸಿದರು. ರಾಕ್ಷಸರೊಂದಿಗಿನ ಯುದ್ದದಲ್ಲಿ ಗೆದ್ದ ಸಂತೋಷಕ್ಕಾಗಿ ದೇವೇಂದ್ರನು ತನ್ನ ಮಗಳು ದೇವಸೇನೆಯನ್ನು ಮದುವೆಯಾಗುವಂತೆ ಯಾಚಿಸಿದರು. ಸ್ವಾಮಿಯು ಈ ಯಾಚನೆಯನ್ನು ಮನ್ನಿಸಿದನು. ಈ ಮದುವೆಯೂ ಮಾರ್ಗಶಿರ ಮಾಸದ ಶುಧ್ದ ಷಷ್ಠಿಯಂದು ಸಂಪನ್ನಗೊಂಡಿತು. ಈ ಸ್ಥಳದಲ್ಲಿ ತಪಸ್ಸನ್ನು ಮಾಡಿಕೊಂಡಿದ್ದ ನಾಗರಾಜನಾದ ವಾಸುಕಿಗೆ ಶ್ರೀ ಸ್ವಾಮಿಯ ದರ್ಶನ ನೀಡಿದನು ಹಾಗು ಇಲ್ಲಿ ಆತನೊಂದಿಗೆ ಶಾಶ್ವತವಾಗಿ ನೆಲೆಸಲು ತಿಳಿಸಿ, ಆನೇಕ ವಿಧವಾದ ವರಗಳನ್ನು ನೀಡಿದನು.
ಆ ಸಮಯದಿಂದ ಸ್ವಾಮಿಯು ತನ್ನ ಆಧ್ಯಾತ್ಮಿಕ ಶಕ್ತಿಯೊಂದಿಗೆ(ದೈವಿಕ) ಹಾಗು ಪತ್ನಿ ದೇವಸೇನೆ ಮತ್ತು ವಾಸುಕಿಯೊಂದಿಗೆ ನೆಲೆಸಿರುವನೆಂದು ನಂಬಲಾಗಿದೆ. ಪ್ರತಿ ವರ್ಷ ಇಲ್ಲಿ ಪ್ರಸಿಧ್ದವಾದ ವಾರ್ಷಿಕ ರಥೋತ್ಸವವು ವಿಶೇಷ ಪೂಜೆಯೊಂದಿಗೆ ಮಾರ್ಗಶಿರ ಮಾಸದ ಶುಧ್ದ ಷಷ್ಠಿಯಂದು ‘ಚಂಪಾ ಷಷ್ಠಿ’ ಎಂಬ ಹೆಸರಿನಲ್ಲಿ ಜರಗುತ್ತಿರುವುದು. ಇನ್ನೊಂದು ಪುರಾಣ ಹೇಳಿಕೆಯಂತೆ ತಾರಕ-ಶೂರಪದ್ಮಾಸುರ ಮತ್ತಿತರ ರಾಕ್ಷಸರನ್ನು ಅವರ ಅನುಯಾಯಿಗಳನ್ನು ಯುದ್ದದಲ್ಲಿ ಕೊಂದು ನಂತರ ಷಣ್ಮುಖ ಸ್ವಾಮಿಯು ತನ್ನ ಸೋದರ ಗಣೇಶ ಹಾಗು ಮತ್ತಿತರೊಂದಿಗೆ ಕುಮಾರ ಪರ್ವತಕ್ಕೆ ಬಂದನು.
ಅಲ್ಲಿ ದೇವೇಂದ್ರ ಹಾಗು ಇತರರಿಂದ ಸ್ವಾಗತಿಸಲ್ಪಟ್ಟನು. ಬಹು ಸಂತೋಷನಾದ ದೇವೇಂದ್ರನು ತನ್ನ ಮಗಳು ದೇವಸೇನೆಯನ್ನು ವಿವಾಹವಾಗಿ ಸ್ವೀಕರಿಸಬೇಕೆಂದು ಬೇಡಿಕೊಂಡನು. ಆಗ ಸ್ವಾಮಿಯು ಸಂತೋಷನಾಗಿ ಒಪ್ಪಿದನು. ಈ ದೈವಿಕ ವಿವಾಹವು ಮಾರ್ಗಶಿರ ಮಾಸದ ಶುಧ್ದ ಷಷ್ಠಿಯಂದು ಕುಮಾರ ಪರ್ವತದಲ್ಲಿ ನೆರೆವೇರಿತು. ಬ್ರಹ್ಮ, ವಿಷ್ಣು, ಮಹೆಶ್ವರರೇ ಮೊದಲಾದ ದೇವತೆಗಳು ಈ ವಿವಾಹ ಹಾಗು ಸಿಂಹಾಸನಾರೋಹಣ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಈ ಕಾರ್ಯಕ್ರಮಕ್ಕೆ ವಿವಿಧ ನದಿಗಳ ಜಲಗಳನ್ನು ತರಲಾಗಿತ್ತು.

ಮಹಾವೈಷಿಷ್ಟ್ಯದ ಈ ಪವಿತ್ರ ಜಲ ಕೆಳಗೆ ಹರಿದು ನದಿಯ ರೂಪ ತಾಳಿತು ಮತ್ತು ಅದು ‘ಕುಮಾರಧಾರಾ’ ನದಿಯೆಂಬ ಹೆಸರಿನಿಂದ ಪ್ರಸಿದ್ದವಾಯಿತು. ಮಹಾಶಿವ ಭಕ್ತ ಹಾಗು ನಾಗರಾಜನಾದ ವಾಸುಕಿಯು ಕುಕ್ಕೆ ಸುಬ್ರಹ್ಮಣ್ಯದ ಬಿಲ್ವದ್ವಾರಾ ಎಂಬ ಗುಹೆಯಲ್ಲಿ ಗರುಡನ ದಾಳಿಯಿಂದ ಪಾರಾಗಲು ಆನೇಕ ವರ್ಷಗಳಿಂದ ತಪಸ್ಸನ್ನು ಮಾಡಿ ಬರುತ್ತಿದನು. ಸ್ವಾಮಿ ಶಂಕರನ ಆಶ್ವಾಸನೆಯಂತೆ ಷಣ್ಮುಖನು ವಾಸುಕಿಗೆ ದರ್ಶನ ನೀಡಿದನು ಮತ್ತು ತನ್ನ ಪರಮ ಭಕ್ತನಾದ ಆತನೊಂದಿಗೆ ಶಾಶ್ವತವಾಗಿ ನೆಲೆನಿಲ್ಲುವುದಾಗಿ ಆಭಯ ನೀಡಿದನು. ಹಾಗಾಗಿ ವಾಸುಕಿಗೆ ಸಲ್ಲಿಸುವ ಸೇವೆ, ಪೂಜಾದಿಗಳಲ್ಲಿ ಆದು ಬೇರೆಯಲ್ಲದೆ ಸ್ವಾಮಿ ಸುಬ್ರಹ್ಮಣ್ಯನಿಗೆ ಸಲ್ಲಿಸುವ ಸೇವೆಗಳೇ ಆಗಿದೆ.

ಕಾರ್ತಿಕೇಯನು ಹಿಂದೂಗಳಲ್ಲಿ ಜನಪ್ರಿಯನಾಗಿರುವ ಒಬ್ಬ ಹಿಂದೂ ದೇವತೆ, ಮತ್ತು ವಿಶೇಷವಾಗಿ ದಕ್ಷಿಣ ಭಾರತ , ಸಿಂಗಾಪೂರ್, ಶ್ರೀಲಂಕಾ, ಮಲೇಷ್ಯಾ ಹಾಗೂ ಮಾರೀಷಸ್‌ಗಳಲ್ಲಿ. ಆದರೆ ಶ್ರೀಲಂಕಾದಲ್ಲಿ, ಹಿಂದೂಗಳು ಮತ್ತು ಬೌದ್ಧ ಧರ್ಮೀಯರು ಇಬ್ಬರೂ ಕಾರ್ತಿಕೇಯನಿಗೆ ಮುಡುಪಾಗಿರುವ ಮತ್ತು ದೇಶದ ದಕ್ಷಿಣದಲ್ಲಿರುವ ಒಂದು ಅತ್ಯಂತ ಪವಿತ್ರ ಬೌದ್ಧ ಮತ್ತು ಹಿಂದೂ ಕ್ಷೇತ್ರವಾದ ಕತರಗಾಮಾ ದೇವಸ್ಥಾನವನ್ನು ಪೂಜ್ಯಭಾವದಿಂದ ಕಾಣುತ್ತಾರೆ. ಹಾಗೆಯೆ ಮಲೇಷ್ಯಾದ ಪಿನಾಂಗ್, ಕ್ವಾಲಾಲಂಪೂರ್‌ನ ಚೀನೀ ಜನರೂ ಸಹ ಮುರುಗನ್‌ನನ್ನು ತಾಯ್ಪೂಸಾಮ್‌ನ ಅವಧಿಯಲ್ಲಿ ಪೂಜಿಸುತ್ತಾರೆ.

ಕುಕ್ಕೆ ಸುಬ್ರಮಣ್ಯ ಇತಿಹಾಸ :

ಕಾರ್ತಿಕೇಯ, ಪಾರ್ವತಿ ಪುತ್ರ ಸುಬ್ರಮಣ್ಯ
ಕುಕ್ಕೆ ಸುಬ್ರಮಣ್ಯ

ಸಂತ ಪರಶುರಾಮ ರಚಿಸಿದ ಏಳು ಪವಿತ್ರ ಸ್ಥಳಗಳಲ್ಲಿ ಕುಕ್ಕೆ ಸುಬ್ರಮಣ್ಯ ಕೂಡ ಒಂದಾಗಿದೆ. ದೈವಿಕ ಸರ್ಪ ವಾಸುಕಿ ಗರುಡ (ಪೌರಾಣಿಕ ಪಕ್ಷಿ ಮತ್ತು ವಿಷ್ಣುವಿನ ಅಧಿಕೃತ ವಾಹನ) ಬೇಟೆಯಿಂದ ತಪ್ಪಿಸಿಕೊಳ್ಳಲು ಕುಕ್ಕೆ ಸುಬ್ರಮಣ್ಯದಲ್ಲಿ ಆಶ್ರಯ ಪಡೆದಿದ್ದನೆಂದು ನಂಬಲಾಗಿದೆ. ಕುಕ್ಕೇ ಸುಬ್ರಮಣ್ಯ ಬಳಿಯ ಕುಮಾರ ಪರ್ವತದಲ್ಲಿ ಭಗವಾನ್ ಕುಮಾರಸ್ವಾಮಿ ಮತ್ತು ಅವರ ಸಹೋದರ ಗಣೇಶ ರಾಕ್ಷಸರಾದ ತಾರಕ ಮತ್ತು ಶೂರಪದ್ಮಾಸುರರನ್ನು ಸಂಹರಿಸಿದ್ದಾರೆ ಎನ್ನಲಾಗಿದೆ. ವಿಜಯದ ನಂತರ, ಭಗವಾನ್ ಕುಮಾರಸ್ವಾಮಿ ಇಂದ್ರನ ಮಗಳು ದೇವಸೇನಳನ್ನು ವಿವಾಹವಾದ ಸ್ಥಳ ಕುಕ್ಕೆ ಸುಬ್ರಮಣ್ಯಕ್ಕೆ ಹತ್ತಿರದ ಕುಮಾರ ಪರ್ವತವಾಗಿದೆ. ಎಲ್ಲಾ ಪ್ರಮುಖ ದೇವರುಗಳು ಈ ವಿವಾಹಕ್ಕೆ ಸಾಕ್ಷಿಯಾಗಿ ಈ ಸ್ಥಳಕ್ಕೆ ದೈವಿಕ ಶಕ್ತಿಯನ್ನು ನೀಡಿದರು ಎಂದು ನಂಬಲಾಗಿದೆ.

ಜನಪ್ರಿಯ ಆಚರಣೆಗಳು: ಕುಕ್ಕೆ ಸುಬ್ರಮಣ್ಯ ದೇವಸ್ಥಾನದಲ್ಲಿ ನಡೆಸಿಕೊಡುವ ಎರಡು ಜನಪ್ರಿಯ ಪೂಜಾ ವಿಧಿಗಳೆಂದರೆ ಆಶ್ಲೇಷ ಬಲಿ (ಕರಿನಾಗನಿಂದ ರಕ್ಷಣೆ ಕೋರುವ ಪೂಜಾವಿಧಿಗಳು) ಮತ್ತು ಸರ್ಪ ದೋಶ ಪರಿಹಾರ (ನಾಗದೇವರ ಯಾವುದೇ ಶಾಪ ನಿವಾರಣೆಗಾಗಿ ನಡೆಸುವ ಪೂಜಾ ವಿಧಿ). ಈ ಆಚರಣೆಗಳನ್ನು ಆನ್‌ಲೈನ್‌ನಲ್ಲಿಯೂ ಕಾಯ್ದಿರಿಸಬಹುದಾಗಿದೆ. ಕುಕ್ಕೆ ಸುಬ್ರಮಣ್ಯ ಬಳಿಯ ಕುಮಾರ ಪರ್ವತವು ಜನಪ್ರಿಯ ಚಾರಣ ತಾಣವಾಗಿದೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಶ್ರೀ ಕನಕದಾಸರು

ಉಡುಪಿಯ ಕೃಷ್ಣನ ಮಂದಿರದಲ್ಲಿ ಕನಕನ ಕಿಂಡಿ

ಸಪೋಟ ಹಣ್ಣು

ಸಪೋಟ ಹಣ್ಣು/ಚಿಕ್ಕು ಹಣ್ಣಿನ ಮಹತ್ವ