in ,

ಬಾಳೆಹಣ್ಣು ತಿನ್ನುವುದರಿಂದ ಆಗುವ ಲಾಭಗಳು

banana

ಎಲ್ಲಾ ಕಾಲದಲ್ಲೂ ಸಿಗುವ ಹಣ್ಣು ಬಾಳೆಹಣ್ಣು. ಚಿಕ್ಕವರಿಂದ ಹಿಡಿದು ವಯಸ್ಕರ ತನಕ ತಿನ್ನಬಹುದಾದ ಹಣ್ಣು. ಚಿಕ್ಕಮಕ್ಕಳಿಗೆ ಕೂಡಬಹುದಾದ ಮೊದಲ ಆಹಾರವೇ ಬಾಳೆಹಣ್ಣು. ಇನ್ನೂ ಹಣ್ಣು ಹಣ್ಣು ಮುದುಕರೂ ಅಷ್ಟೇ ಇಷ್ಟ ಪಡುತ್ತಾರೆ ಬಾಳೆಹಣ್ಣನ್ನು. ಇಂಥಹ ಬಾಳೆಹಣ್ಣು ತಿನ್ನುವುದರಿಂದ ಏನು ಪ್ರಯೋಜನ ಇದೆ ನೋಡೋಣ. ನಮ್ಮಲ್ಲಿ ಹೆಚ್ಚಿನವರು ಬಾಳೆಹಣ್ಣು ನಮ್ಮನ್ನು ದಪ್ಪವಾಗಿಸುತ್ತದೆ ಎಂದು ಭಾವಿಸುತ್ತಾರೆ ಮತ್ತು ಈ ಕಾಳಜಿಯಿಂದಾಗಿ, ನಾವು ಬಾಳೆಹಣ್ಣನ್ನು ಖರೀದಿಸುವುದನ್ನೂ ನಿಲ್ಲಿಸುತ್ತೇವೆ. ಆದರೆ ಬಾಳೆಹಣ್ಣು ತಿನ್ನುವುದು ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ.

ಮೂಳೆಗಳಿಗೆ ಬಾಳೆಹಣ್ಣು ತಿನ್ನುವುದರಿಂದ ಆಗುವ ಪ್ರಯೋಜನಗಳನ್ನು ನೋಡಬಹುದು. ಇದು ಕ್ಯಾಲ್ಸಿಯಂನಲ್ಲಿ ಸಮೃದ್ಧವಾಗಿದೆ ಮತ್ತು ಕ್ಯಾಲ್ಸಿಯಂ ಮೂಳೆಗಳ ಬೆಳವಣಿಗೆ ಮತ್ತು ಬಲದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದರ ಜೊತೆಯಲ್ಲಿ, ಬಾಳೆಹಣ್ಣಿನಲ್ಲಿರುವ ಮೆಗ್ನೀಸಿಯಮ್ ಮೂಳೆಗಳ ಆರೋಗ್ಯಕ್ಕೆ ಅಗತ್ಯವಾಗಿದೆ.

ಬಾಳೆಹಣ್ಣಿನಲ್ಲಿ 110 ಕ್ಯಾಲರಿ, 5 ಗ್ರಾಂ ಕೊಬ್ಬು, 27 ಗ್ರಾಂ ಕಾರ್ಬ್ರೋಹೈಡ್ರೇಟ್ಸ್, 3 ಗ್ರಾಂ ನಾರಿನಾಂಶ, 14 ಗ್ರಾಂ ಸಕ್ಕರೆ, ಶೇ.25ರಷ್ಟು ವಿಟಮಿನ್ ಬಿ6, 1 ಗ್ರಾಂ ಪ್ರೋಟೀನ್, ಶೇ. 16ರಷ್ಟು ಮ್ಯಾಂಗನೀಸ್, ಶೇ.14ರಷ್ಟು ವಿಟಮಿನ್ ಸಿ, ಶೇ. 12ರಷ್ಟು ನಾರಿನಾಂಶ, ಶೇ. 10ರಷ್ಟು ಬಿಯೊಟಿನ್, ಶೇ. 10ರಷ್ಟು ತಾಮ್ರ ಮತ್ತು ಶೇ.8ರಷ್ಟು ಮ್ಯಾಂಗನೀಸ್ ಇದೆ.

ರಕ್ತದೊತ್ತಡ ಕಡಿಮೆ ಮಾಡುವುದು ನೀವು ಕಡಿಮೆ ರಕ್ತದೊತ್ತಡದಿಂದ ಬಳಲುತ್ತಿದ್ದರೆ ಆಗ ದಿನಕ್ಕೆ ಎರಡು ಬಾಳೆಹಣ್ಣು ಸೇವಿಸಿದರೆ ರಕ್ತದೊತ್ತಡವು ಸಾಮಾನ್ಯಕ್ಕೆ ಬರುವುದು. ಇದರಲ್ಲಿ 420 ಗ್ರಾಂನಷ್ಟು ಪೊಟಾಶಿಯಂ ಇರುವುದೇ ಇದಕ್ಕೆ ಕಾರಣ. ಉಪ್ಪಿನ ನಕಾರಾತ್ಮಕ ಪರಿಣಾಮವನ್ನು ಪೊಟಾಶಿಯಂ ಸರಿದೂಗಿಸುವುದು. ಇದರಿಂದ ರಕ್ತದೊತ್ತಡ ಸಮತೋಲನಕ್ಕೆ ಬರುವುದು.

ಪ್ರತಿದಿನ 250 ಗ್ರಾಂ ಬಾಳೆಹಣ್ಣುಗಳನ್ನು ಸೇವಿಸುವುದು ಆರೋಗ್ಯಕ್ಕೆ ಸುರಕ್ಷಿತವೆಂದು ಪರಿಗಣಿಸಲಾಗಿದೆ . ಅಂತೆಯೇ ಹೆಚ್ಚು ಬಾಳೆಹಣ್ಣುಗಳನ್ನು ಸೇವಿಸುವುದರಿಂದ ಕೆಲವು ಹಾನಿಯುಂಟಾಗಬಹುದು, ಹಾಗೂ ಮೂತ್ರಕೋಶದ ಸೋಂಕನ್ನು ಕಡಿಮೆ ಮಾಡಲು, 3 ರಿಂದ 4 ಬಾಳೆಹಣ್ಣುಗಳನ್ನು ಸೇವಿಸಬಹುದು.

ಇದನ್ನು ಬೆಳಿಗ್ಗೆ ಅಥವಾ ಸಂಜೆ ಯಾವುದೇ ಸಮಯದಲ್ಲಿ ತಿನ್ನಬಹುದು.
ಮಧ್ಯಾಹ್ನ ಬಾಳೆಹಣ್ಣಿನ ಶೇಕ್ ಅನ್ನು ನೀವು ಕುಡಿಯಬಹುದು.
ಬಾಳೆಹಣ್ಣಿನ ಚಿಪ್ಸ್ ಅನ್ನು ಸಂಜೆಯ ತಿಂಡಿಗೆ ಸೇರಿಸಬಹುದು.

ನೀವು ದಿನಕ್ಕೆರಡು ಸಣ್ಣ ಬಾಳೆಹಣ್ಣು ಸೇವನೆ ಮಾಡಿದರೆ ಆಗ ಅದು ತೂಕ ಕಳೆದುಕೊಳ್ಳಲು ಸಹಕಾರಿಯಾಗಲಿದೆ. ಇದರಲ್ಲಿರುವಂತಹ ಉನ್ನತ ಮಟ್ಟದ ನಾರಿನಾಂಶವು ದೀರ್ಘಕಾಲದ ತನಕ ಹೊಟ್ಟೆ ತುಂಬಿದಂತೆ ಮಾಡುವುದು. ಇದರಲ್ಲಿರುವ ನಿರೋಧಕ ಪಿಷ್ಠವು ಹಸಿವು ತಗ್ಗಿಸುವುದು ಮತ್ತು ತೂಕ ಹೆಚ್ಚಾಗದಂತೆ ತಡೆಯುವುದು. ದಿನದ ಯಾವ ಸಮಯದಲ್ಲಿ ನೀವು ಬಾಳೆಹಣ್ಣು ತಿನ್ನುತ್ತೀರಿ ಎನ್ನುವುದರ ಮೇಲೆ ತೂಕ ಕಳೆದುಕೊಳ್ಳುವುದು ನಿರ್ಧಾರವಾಗುತ್ತದೆ.

ಬಾಳೆಹಣ್ಣು ಗರ್ಭಾವಸ್ಥೆಯಲ್ಲಿ ಅಗತ್ಯ

ಬಾಳೆಹಣ್ಣು ತಿನ್ನುವುದರಿಂದ ಆಗುವ ಲಾಭಗಳು


ಬಾಳೆಹಣ್ಣು ಗರ್ಭಿಣಿಯಾಗಿರುವ ಮಹಿಳೆಯರ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಬಾಳೆಹಣ್ಣಿನಲ್ಲಿರುವ ಫೋಲಿಕ್ ಆಮ್ಲವು ಹುಟ್ಟಲಿರುವ ಮಗುವಿನ ಯಾವುದೇ ದೋಷಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.

ಬಾಳೆಹಣ್ಣು ಒತ್ತಡದ ಮಟ್ಟ ಕಡಿಮೆ ಮಾಡುವುದು ಮತ್ತು ನಿಮ್ಮ ಮನಸ್ಥಿತಿ ಸುಧಾರಿಸುವುದು. ಯಾಕೆಂದರೆ ಇರಲ್ಲಿರುವ ಟ್ರಿಪ್ಟೊಫಾನ್ ಎನ್ನುವ ಅಂಶವು ದೇಹದಲ್ಲಿ ಸಂತಸದ ಹಾರ್ಮೋನು ಸೆರೊಟೊನಿನ್ ಉತ್ಪತ್ತಿ ಮಾಡಲು ನೆರವಾಗುವುದು. ಬಾಳೆಹಣ್ಣಿನಲ್ಲಿ 27 ಮಿ.ಗ್ರಾಂ. ಮ್ಯಾಂಗನೀಶ್ ಇದ್ದು, ಇದು ನಿದ್ರೆಯ ಗುಣಮಟ್ಟ ಸುಧಾರಿಸುವುದು.

ತಲೆನೋವಿನ ಪರಿಹಾರ ಈ ಬಾಳೆ ಹಣ್ಣು

ಬಾಳೆಹಣ್ಣು ತಿನ್ನುವುದರಿಂದ ಆಗುವ ಲಾಭಗಳು
ತಲೆನೋವು


ತಲೆನೋವು ಮತ್ತು ಮೈಗ್ರೇನ್ ನಿವಾರಿಸಲು ಬಾಳೆಹಣ್ಣು ತುಂಬಾ ಸಹಾಯಕಾರಿ. ಬಾಳೆಹಣ್ಣಿನಲ್ಲಿರುವ ಮೆಗ್ನೀಸಿಯಮ್ ತಲೆನೋವನ್ನು ನಿವಾರಿಸುವಲ್ಲಿ ಪರಿಣಾಮಕಾರಿ. ಹಾಗಾಗಿ ನಿಮಗೆ ಯಾವಾಗಲಾದರೂ ತಲೆನೋವಾಗಿದ್ದರೆ ಖಂಡಿತವಾಗಿಯೂ ಬಾಳೆಹಣ್ಣನ್ನು ತಿನ್ನಿರಿ.

ಬಾಳೆಹಣ್ಣಿನ ಔಷಧೀಯ ಗುಣಗಳು ಅತಿಸಾರದ ಸಂದರ್ಭದಲ್ಲಿ ಸಹಾಯಕವಾಗಬಹುದು. ಪೆಕ್ಟಿನ್ ಇದರಲ್ಲಿ ಕಂಡುಬರುತ್ತದೆ ಎಂದು ಸಂಶೋಧನೆಯು ಸೂಚಿಸುತ್ತದೆ, ಇದು ಒಂದು ರೀತಿಯ ಫೈಬರ್ ಆಗಿದೆ. ಇದು ಫೈಬರ್ ಕರುಳಿನ ಚಲನೆಯನ್ನು ನಿಯಂತ್ರಿಸುವ ಮೂಲಕ ಅತಿಸಾರವನ್ನು ತೊಡೆದುಹಾಕಲು ಕೆಲಸ ಮಾಡಬಹುದು.

ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆದ್ದರಿಂದ, ಮಹಿಳೆಯರು ಪ್ರತಿದಿನ ಒಂದು ಬಾಳೆಹಣ್ಣನ್ನು ಸೇವಿಸುವುದು ಹೆಚ್ಚು ಮುಖ್ಯವಾಗಿದೆ.

ಬಾಳೆಹಣ್ಣು ಸೇವಿಸಿ ರಕ್ತಹೀನತೆಯನ್ನು ತೆಗೆದುಹಾಕಿ
ಬಾಳೆಹಣ್ಣಿನಲ್ಲಿ ಕಬ್ಬಿಣದ ಪ್ರಮಾಣವು ತುಂಬಾ ಹೆಚ್ಚಾಗಿದೆ. ಬಾಳೆಹಣ್ಣನ್ನು ಸೇವಿಸುವುದರಿಂದ ದೇಹದಲ್ಲಿ ಕಬ್ಬಿಣದ ಕೊರತೆಯನ್ನು ತೆಗೆದುಹಾಕುತ್ತದೆ ಮತ್ತು ರಕ್ತಹೀನತೆಯ ಸಮಸ್ಯೆಯೂ ದೂರವಾಗುತ್ತದೆ.

ಬಾಳೆಹಣ್ಣನ್ನು ತಿನ್ನುವುದರಿಂದ ಹೃದಯದ ಆರೋಗ್ಯಕ್ಕೂ ಪ್ರಯೋಜನಗಳಿವೆ. ಬಾಳೆಹಣ್ಣಿನಲ್ಲಿ ಉತ್ತಮ ಪ್ರಮಾಣದ ಪೊಟ್ಯಾಶಿಯಂ ಇದ್ದು, ಇದು ರಕ್ತದೊತ್ತಡವನ್ನು ಸಾಮಾನ್ಯವಾಗಿಸಲು ಮತ್ತು ಹೃದಯದ ಕಾರ್ಯಗಳನ್ನು ಸರಿಯಾಗಿ ನಿರ್ವಹಿಸಲು ಸಹಾಯ ಮಾಡುತ್ತದೆ.

ಬಾಳೆಹಣ್ಣಿನ ಗುಣಗಳನ್ನು ಮಧುಮೇಹಕ್ಕೂ ಅನ್ವಹಿಸಲಾಗಿದೆ. ವೈದ್ಯಕೀಯ ಸಂಶೋಧನೆಯ ಪ್ರಕಾರ, ಬಾಳೆಹಣ್ಣನ್ನು ಮಧುಮೇಹದ ಚಿಕಿತ್ಸೆಗಾಗಿ ಸಾಂಪ್ರದಾಯಿಕ ಔಷಧಿಯಾಗಿ ಬಳಸಬಹುದು. ಇದರೊಂದಿಗೆ, ಬಾಳೆಹಣ್ಣಿನ (ಕಾಂಡ) ಮತ್ತು ಅದರ ಹೂವುಗಳು ಮಧುಮೇಹದ ಸ್ಥಿತಿಯಲ್ಲಿ ಪರಿಹಾರವನ್ನು ನೀಡಬಹುದು.

ಬಾಳೆಹಣ್ಣುಗಳು ಮೆದುಳಿನ ಆರೋಗ್ಯಕ್ಕೂ ಪ್ರಯೋಜನಗಳನ್ನು ಹೊಂದಿವೆ. ಅಧ್ಯಯನದ ಪ್ರಕಾರ, ವಿಟಮಿನ್-ಬಿ 6 ಕೊರತೆಯು ವಯಸ್ಕರ ಮೆದುಳಿನ ಕಾರ್ಯವನ್ನು ದುರ್ಬಲಗೊಳಿಸುತ್ತದೆ. ಈ ವಿಟಮಿನ್-ಬಿ 6 ಬಾಳೆಹಣ್ಣಿನಲ್ಲಿರುತ್ತದೆ.

ಬಾಳೆಹಣ್ಣಿನಲ್ಲಿರುವ ಔಷಧೀಯ ಗುಣಗಳು ಕಣ್ಣಿಗೆ ಪ್ರಯೋಜನಕಾರಿ. ವಾಸ್ತವವಾಗಿ, ಬಾಳೆಹಣ್ಣುಗಳು ಕ್ಯಾರೊಟಿನಾಯ್ಡ್ಗಳಿಂದ ಸಮೃದ್ಧವಾಗಿವೆ, ಇವುಗಳು ಒಂದು ರೀತಿಯ ವಿಟಮಿನ್ ಎ, ಇತರ ಅಗತ್ಯ ಪೋಷಕಾಂಶಗಳ ಜೊತೆಗೆ ಕಣ್ಣಿನ ರೆಟಿನಾದ ವರ್ಣದ್ರವ್ಯವನ್ನು ಹೆಚ್ಚಿಸುತ್ತದೆ. ಇದರ ಜೊತೆಯಲ್ಲಿ, ವಿಟಮಿನ್ ಎ ರಾತ್ರಿ ಕುರುಡುತನದಿಂದ ರಕ್ಷಿಸುತ್ತದೆ

ಬಾಳೆಹಣ್ಣಿನ ಸಿಪ್ಪೆಯನ್ನು ತೆಗೆದುಕೊಂಡು ಅದರ ಒಳ ಭಾಗವನ್ನು ಪೀಡಿತ ಪ್ರದೇಶದ ಮೇಲೆ ಕೆಲವು ನಿಮಿಷಗಳ ಕಾಲ ನಿಧಾನವಾಗಿ ಉಜ್ಜಿಕೊಳ್ಳಿ.
ಸುಮಾರು 2 ರಿಂದ 3 ನಿಮಿಷಗಳ ನಂತರ ಮುಖವನ್ನು ಶುದ್ಧ ನೀರಿನಿಂದ ತೊಳೆಯಿರಿ.

ಬಾಳೆಹಣ್ಣಿನಿಂದ ಕೂದಲಿಗೆ ಹಲವು ಪ್ರಯೋಜನಗಳಿವೆ. ಸರಿಯಾದ ಪೋಷಣೆಯ ಕೊರತೆಯಿಂದಾಗಿ, ಕೂದಲು ಬೆಳವಣಿಗೆ ನಿಲ್ಲಬಹುದು ಮತ್ತು ಅವು ಅಕಾಲಿಕವಾಗಿ ಬೀಳಬಹುದು. ಒಂದು ವರದಿಯ ಪ್ರಕಾರ, ಬಾಳೆಹಣ್ಣಿನ ರಸದಿಂದ ನೆತ್ತಿಗೆ ಮಸಾಜ್ ಮಾಡುವುದರಿಂದ ಕೂದಲು ಬೆಳವಣಿಗೆಯನ್ನು ಉತ್ತೇಜಿಸಬಹುದು. ಅಲ್ಲದೆ , ಕೂದಲು ಉದುರುವ ಸಮಸ್ಯೆಯನ್ನು ಕಡಿಮೆ ಮಾಡಬಹುದು.

ರಕ್ತಹೀನತೆಯು ಮಾರಣಾಂತಿಕ ಕಾಯಿಲೆಯಾಗಿದ್ದು, ಇದು ದೇಹದಲ್ಲಿ ಕೆಂಪು ರಕ್ತ ಕಣಗಳ ಕೊರತೆಯಿಂದ ಉಂಟಾಗುತ್ತದೆ. ಕೆಂಪು ರಕ್ತ ಕಣಗಳ ರಚನೆಯಲ್ಲಿ ಫೋಲೇಟ್ ಪ್ರಮುಖ ಪಾತ್ರ ವಹಿಸುತ್ತದೆ, ಆದ್ದರಿಂದ ಫೋಲೇಟ್ ಕೊರತೆಯು ರಕ್ತಹೀನತೆಗೆ ಕಾರಣವಾಗುತ್ತದೆ. ಈ ಸಮಸ್ಯೆಯಲ್ಲಿ ಬಾಳೆಹಣ್ಣು ತಿನ್ನುವುದು ಸಹ ಪ್ರಯೋಜನಕಾರಿಯಾಗಿದೆ.

ಬಾಳೆಹಣ್ಣನ್ನು ತಿನ್ನುವುದರಿಂದ ಅನುಕೂಲಗಳು ಮತ್ತು ಅನಾನುಕೂಲಗಳು ಇವೆ, ಆದರೆ ಬಾಳೆಹಣ್ಣು ಪ್ರಯೋಜನಕಾರಿ ಹಣ್ಣು ಎಂಬುದರಲ್ಲಿ ಸಂದೇಹವಿಲ್ಲ, ಆದರೆ ಅದರ ಅತಿಯಾದ ಸೇವನೆಯು ಕೂಡ ಒಳ್ಳೆಯದಲ್ಲ. ಅತಿಯಾದರೆ ಅಮೃತ ಕೂಡಾ ವಿಷವಾಗುತ್ತದೆ ಅನ್ನುತ್ತಾರೆ.ಹಾಗೆ ಬಾಳೆಹಣ್ಣಿನ ಕೆಲವು ಅಡ್ಡಪರಿಣಾಮಗಳನ್ನು ಹೊಂದಿದೆ.

ಬಾಳೆಹಣ್ಣಿನಲ್ಲಿ ಕಾರ್ಬೋಹೈಡ್ರೇಟ್ ಮತ್ತು ಟ್ರಿಪ್ಟೊಫಾನ್ ಅಧಿಕವಾಗಿರುತ್ತದೆ. ಇದು ವ್ಯಕ್ತಿಯು ಹೆಚ್ಚು ನಿದ್ರೆ ಮಾಡಲು ಕಾರಣವಾಗಬಹುದು. ಇಂತಹ ಪರಿಸ್ಥಿತಿಯಲ್ಲಿ, ಹೆಚ್ಚು ಬಾಳೆಹಣ್ಣುಗಳನ್ನು ಸೇವಿಸಿದ ನಂತರ ಚಾಲನೆ ಮಾಡುವುದರಿಂದ ಅಪಘಾತ ಸಂಭವಿಸುವ ಸಾಧ್ಯತೆಯಿದೆ.
ಮದ್ಯ ಸೇವಿಸಿದ ನಂತರ ಬಾಳೆಹಣ್ಣು ತಿನ್ನುವುದರಿಂದ ತಲೆನೋವು ಉಂಟಾಗಬಹುದು.
ಕೆಲವರಿಗೆ ಬಾಳೆಹಣ್ಣಿನ ಸೇವನೆಯಿಂದ ಅಲರ್ಜಿ ಉಂಟಾಗಬಹುದು.
ಅತಿಯಾದ ಫೈಬರ್ ದೇಹದಲ್ಲಿ ಕಬ್ಬಿಣ, ಸತು, ಮೆಗ್ನೀಸಿಯಮ್ ಮತ್ತು ಕ್ಯಾಲ್ಸಿಯಂ ಹೀರಿಕೊಳ್ಳುವಿಕೆಯನ್ನು ತಡೆಯುತ್ತದೆ. ವಾಸ್ತವವಾಗಿ, ಬಾಳೆಹಣ್ಣಿನಲ್ಲಿ ಫೈಬರ್ ಇರುತ್ತದೆ, ಆದ್ದರಿಂದ ಅದರ ಅತಿಯಾದ ಸೇವನೆಯಿಂದಾಗಿ ಈ ಸ್ಥಿತಿ ಉಂಟಾಗಬಹುದು.
ಬಾಳೆಹಣ್ಣುಗಳು ಪೊಟ್ಯಾಸಿಯಮ್‌ನ ಉತ್ತಮ ಮೂಲವಾಗಿದೆ, ಯಾರಾದರೂ ಪೊಟ್ಯಾಸಿಯಮ್ ಪೂರಕಗಳೊಂದಿಗೆ ಬಾಳೆಹಣ್ಣನ್ನು ಅಧಿಕವಾಗಿ ಸೇವಿಸುತ್ತಿದ್ದರೆ, ಆತನ ದೇಹದಲ್ಲಿ ಅಧಿಕ ಪೊಟ್ಯಾಸಿಯಮ್ (ಹೈಪರ್‌ಕಲೇಮಿಯಾ) ಇರಬಹುದು.
ಬಾಳೆಹಣ್ಣು ನಾರಿನ ಉತ್ತಮ ಮೂಲವಾಗಿದೆ ಮತ್ತು ಫೈಬರ್ ಅನ್ನು ಅಧಿಕವಾಗಿ ಸೇವಿಸುವುದರಿಂದ ಗ್ಯಾಸ್, ಕಿಬ್ಬೊಟ್ಟೆಯ ಸೆಳೆತ ಮತ್ತು ವಾಯು ಉಂಟಾಗಬಹುದು.

ಹಾಗಾಗಿ ಪ್ರತಿಯೊಂದು ಆಹಾರದಲ್ಲಿ ಅದರದೇ ಆದ ವಿಶೇಷತೆ ಇದೆ. ಯಾವುದು ಕೂಡ ಕೆಟ್ಟದ್ದು ಅನ್ನುವಷ್ಟು ಇಲ್ಲ. ಅತಿಯಾದರೆ ಎಲ್ಲವೂ ಕೆಟ್ಟದ್ದೇ,ಮಿತಿಯಾದರೆ ಎಲ್ಲವೂ ಒಳ್ಳೆಯದೇ.


ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

3 Comments

fiber food

ನಾರಿನ (ಫೈಬರ್) ಅಂಶವನ್ನು ಹೊಂದಿರುವ ಆಹಾರ ಪದಾರ್ಥಗಳು

ಕಲ್ಲಿನ-ರಥ-ಹಂಪಿ

ವಿಜಯನಗರ ಸಾಮ್ರಾಜ್ಯ ಹಂಪಿಯ ಇತಿಹಾಸ