in ,

ಆರೋಗ್ಯ ವಿಮೆ ಮಾಡಿಸುತ್ತಿರಾ? ಹಾಗಾದರೆ ಈ ಕೆಲವೊಂದು ಅಂಶಗಳನ್ನು ನೆನಪಿಟ್ಟುಕೊಳ್ಳಿ

ಆರೋಗ್ಯ ವಿಮೆ ಮಾಡಿಸುತ್ತಿರಾ?
ಆರೋಗ್ಯ ವಿಮೆ ಮಾಡಿಸುತ್ತಿರಾ?

ಆರೋಗ್ಯ ವಿಮೆಯು ಇತರ ವಿಮೆಗಳಂತೆಯೇ ಒಂದು ರೀತಿಯ ಸಾಮೂಹಿಕ ಸ್ವಾಮ್ಯವಾದವಾಗಿದ್ದು, ಅದರ ಮೂಲಕ ಜನರು ವೈದ್ಯಕೀಯ ಖರ್ಚು-ವೆಚ್ಚಗಳಿಗೆ ಒಳಗಾಗುವ ಅವರ ಅಪಾಯವನ್ನು ಒಟ್ಟಿಗೆ ಹಂಚಿಕೊಳ್ಳುತ್ತಾರೆ. ಈ ಸಮಷ್ಟಿಯನ್ನು ಸಾಮಾನ್ಯವಾಗಿ ಸಾರ್ವಜನಿಕರು ಹೊಂದಿರುತ್ತಾರೆ ಅಥವಾ ಸಾಮುದಾಯಿಕ ಸಂಗ್ರಹದ ಸದಸ್ಯರಿಗಾಗಿ ಲಾಭವಿಲ್ಲದ ಆಧಾರದಲ್ಲಿ ಆಯೋಜಿಸಲಾಗಿರುತ್ತದೆ.

ವಿಮೆ ಎಲ್ಲರಿಗೂ ಅಗತ್ಯ. ವಿಶೇಷವಾಗಿ ಆರೋಗ್ಯ ವಿಮೆ ಅಂತೂ ಪ್ರತಿಯೊಬ್ಬರಿಗೂ ಬೇಕೆ ಬೇಕು. ಕಂಪನಿಗಳು ಉದ್ಯೋಗಿಗಳಿಗೆ ಕಾರ್ಪೊರೇಟ್ ಆರೋಗ್ಯ ವಿಮೆಯನ್ನು ಒದಗಿಸುತ್ತವೆ. ಆದರೆ ನಿವೃತ್ತಿಯ ನಂತರ ಈ ಪ್ರಯೋಜನಗಳು ಲಭ್ಯವಿಲ್ಲ. ಅಂತಹ ಪರಿಸ್ಥಿತಿಯಲ್ಲಿ ನಿಮ್ಮ ಸ್ವಂತ ಆರೋಗ್ಯ ವಿಮೆಯನ್ನು ತೆಗೆದುಕೊಳ್ಳುವ ಅವಶ್ಯಕತೆಯಿದೆ.

ಆರೋಗ್ಯ ವಿಮೆಯ ಬಗ್ಗೆ ಈಗ ಜನರು ಜಾಗೃತರಾಗುತ್ತಿದ್ದಾರೆ. ಆದರೆ ಆರೋಗ್ಯ ವಿಮೆಯನ್ನು ಆಯ್ಕೆಮಾಡುವಾಗ, ಅದು ನಿಮ್ಮ ವೈದ್ಯಕೀಯ ವೆಚ್ಚಗಳ ಅಗತ್ಯಗಳನ್ನು ಪೂರೈಸುತ್ತದೆಯೇ ಎಂದು ಮೊದಲು ಪರಿಶೀಲಿಸಿ ನೋಡಬೇಕು.

ಆರೋಗ್ಯ ವಿಮೆ ಮಾಡಿಸುತ್ತಿರಾ? ಹಾಗಾದರೆ ಈ ಕೆಲವೊಂದು ಅಂಶಗಳನ್ನು ನೆನಪಿಟ್ಟುಕೊಳ್ಳಿ
ಆರೋಗ್ಯ ವಿಮೆಯನ್ನು ತೆಗೆದುಕೊಳ್ಳುವ ಅವಶ್ಯಕತೆಯಿದೆ

ಕೆಲವು ರಾಷ್ಟ್ರಗಳಲ್ಲಿ ಆರೋಗ್ಯ ವಿಮೆಯನ್ನು ಲಾಭದ-ಉದ್ಧೇಶವಿರುವ ಕಂಪೆನಿಗಳು ನಿರ್ವಹಿಸುತ್ತವೆ. ಇದನ್ನು ಕೆಲವೊಮ್ಮೆ ವಿಮೆಯಿಂದ ರಕ್ಷಿಸಲ್ಪಡುವ ಅಸಾಮರ್ಥ್ಯ ಅಥವಾ ದೀರ್ಘಕಾಲದ ಶುಶ್ರೂಷೆ ಅಥವಾ ಪಾಲನೆ ಮಾಡುವ ಅವಶ್ಯಕತೆಗಳನ್ನು ಒಳಗೊಳ್ಳಲು ಹೆಚ್ಚು ವ್ಯಾಪಕವಾಗಿ ಬಳಸಲಾಗುತ್ತದೆ. ಇದನ್ನು ಸರಕಾರ-ಪ್ರಾಯೋಜಿತ ಸಾಮಾಜಿಕ ವಿಮಾ ಯೋಜನೆಯಿಂದ ಅಥವಾ ಖಾಸಗಿ ವಿಮೆ ಕಂಪೆನಿಗಳಿಂದ ಒದಗಿಸಲಾಗುತ್ತದೆ.

ಆರೋಗ್ಯ ವಿಮಾ ಕಂಪೆನಿಯಿಂದ ರಕ್ಷಣೆ ಕೊಡಲ್ಪಡುವ ಆರೋಗ್ಯ ಸಂಬಂಧಿತ ಖರ್ಚುವೆಚ್ಚಗಳ ಪ್ರಕಾರ ಮತ್ತು ಮೊತ್ತವನ್ನು ಮೊದಲೇ, ಸದಸ್ಯರ ಒಪ್ಪಂದದಲ್ಲಿ ಅಥವಾ “ವಿಮಾ ರಕ್ಷಣೆಯ ಸಾಕ್ಷ್ಯ”ದ ಕಿರು ಪುಸ್ತಕದಲ್ಲಿ ನಿರ್ದಿಷ್ಟಪಡಿಸಲಾಗುತ್ತದೆ. ವಿಮೆ ಮಾಡಿದ ವ್ಯಕ್ತಿಯು ಅನೇಕ ಜವಾಬ್ದಾರಿಯನ್ನು ಹೊಂದಿರುತ್ತಾನೆ.

ಹೆಸರಿಗೊಂದು ಆರೋಗ್ಯ ವಿಮೆ ಖರೀದಿಸಿದರೆ ಸಾಕಾಗುವುದಿಲ್ಲ. ಸೂಕ್ತ ವಿಮಾ ರಕ್ಷಣೆ ಪಡೆಯಲು ನೀವು ಕವರೇಜ್ ಕಡೆ ಗಮನ ಕೊಡಬೇಕು ಹಾಗೂ ಪಾಲಿಸಿಯಲ್ಲಿನ ಅಶ್ಯೂರ್ಡ್ ಮೊತ್ತದ ಕಡೆ ಗಮನ ಕೊಡಬೇಕು. ನೀವು ಆಯ್ಕೆ ಮಾಡುವ ಪಾಲಿಸಿ ನಿಮಗೆ ಹಲವು ಕಾಯಿಲೆಗಳ ವಿರುದ್ಧ ವಿಮಾ ರಕ್ಷಣೆ ನೀಡಬಹುದು. ಆದರೆ, ನೀವು ಸರಿಯಾದ ವಿಮಾ ಮೊತ್ತ ಆಯ್ದುಕೊಳ್ಳದಿದ್ದಲ್ಲಿ ಆ ಪಾಲಿಸಿಯೇ ನಿಷ್ಪ್ರಯೋಜಕ ಆಗಬಹುದು.

ಆರೋಗ್ಯ ವಿಮಾ ಪಾಲಿಸಿ ದಾಖಲೆಗಳನ್ನು ಅರ್ಥಮಾಡಿಕೊಳ್ಳುವುದು ಕಷ್ಟ. ಏಕೆಂದರೆ ನಿಯಮಗಳು ತುಂಬಾ ಕನ್ಫೂಸ್​ ರೀತಿಯಲ್ಲಿ ಇರುತ್ತವೆ.ಹಾಗಾಗಿ ಕೆಲವು ರೋಗಗಳು ಆರೋಗ್ಯ ವಿಮೆಯಿಂದ ರಕ್ಷಣೆ ಪಡೆಯದಿದ್ದರೆ, ನೀವು ಅಂತಹ ವೈದ್ಯಕೀಯ ಬಿಲ್‌ಗಳನ್ನು ಪಾವತಿಸಬೇಕಾಗಬಹುದು. ಆರೋಗ್ಯ ವಿಮಾ ಪಾಲಿಸಿಯಿಂದ ಹೊರಗಿಡಲಾದ ರೋಗಗಳ ನಿರ್ದಿಷ್ಟ ಪಟ್ಟಿಗಾಗಿ ವಿಮಾ ಕಂಪನಿಯು ನಿಮ್ಮ ಕ್ಲೈಮ್ ಅನ್ನು ತಿರಸ್ಕರಿಸಬಹುದು.

ವಯಸ್ಸು ಜಾಸ್ತಿ ಇದ್ದಷ್ಟೂ ನಿಮ್ಮ ಚಿಕಿತ್ಸೆಯ ವೆಚ್ಚಗಳು ಜಾಸ್ತಿಯಾಗುತ್ತವೆ. ಹೀಗಾಗಿ, ನೀವು ಮುಂಚಿನಿಂದಲೇ ಸರಿಯಾದ ಇನ್ಶೂರ್ಡ್ ಮೊತ್ತ ಆಯ್ಕೆ ಮಾಡಬೇಕು. ನೀವು ಯುವಕರಾಗಿರುವಾಗ, ನಿಮ್ಮ ಪಾಲಿಸಿಯ ಮೇಲಿನ ಪ್ರೀಮಿಯಂ ಕಡಿಮೆಯಾಗಿರುವುದಷ್ಟೇ ಅಲ್ಲದೆ, ನೀವು ವಿಮಾ ಮೊತ್ತ ಕ್ಲೇಮ್ ಮಾಡುವ ಸಾಧ್ಯತೆಗಳೂ ಕಡಿಮೆ ಇರುತ್ತವೆ. ಪಾಲಿಸಿಯ ನವೀಕರಣದ ವೇಳೆ ನಿಮಗೆ ನೋ-ಕ್ಲೇಮ್ ಬೋನಸ್ ಕೂಡ ಸಿಗುತ್ತದೆ. ಆ ಮೂಲಕ ನಿಮ್ಮ ಇನ್ಶೂರ್ಡ್ ಮೊತ್ತ ಹೆಚ್ಚಾಗುತ್ತದೆ.

ಆರೋಗ್ಯ ವಿಮೆ ಮಾಡಿಸುತ್ತಿರಾ? ಹಾಗಾದರೆ ಈ ಕೆಲವೊಂದು ಅಂಶಗಳನ್ನು ನೆನಪಿಟ್ಟುಕೊಳ್ಳಿ
ವಿಮಾ ಪಾಲಿಸಿಗಳಲ್ಲಿ ಸೌಂದರ್ಯವರ್ಧಕ ಶಸ್ತ್ರ ಚಿಕಿತ್ಸೆಯನ್ನು ಒಳಗೊಂಡಿರುವುದಿಲ್ಲ

ಆರೋಗ್ಯ ವಿಮಾ ಪಾಲಿಸಿಯನ್ನು ತೆಗೆದುಕೊಳ್ಳುವ ಮೊದಲು ಕಾಯಿಲೆಯಿಂದ ಬಳಲುತ್ತಿರುವ ಜನರು ಆ ಕಾಯಿಲೆಗೆ ರಕ್ಷಣೆ ಪಡೆಯಲು ಸಾಧ್ಯವಿಲ್ಲ ಎಂದು ವಿಮಾ ವಲಯದ ತಜ್ಞರು ಹೇಳುತ್ತಾರೆ. ಆದಾಗ್ಯೂ, ಈ ಸ್ಥಿತಿ ಮತ್ತು ಸಂಬಂಧಿತ ಕಾಯುವ ಅವಧಿಯು ವಿಮಾ ಕಂಪನಿಯಿಂದ ವಿಮಾ ಕಂಪನಿಗೆ ಬದಲಾಗುತ್ತದೆ.

ಆರೋಗ್ಯ ವಿಮೆ ಅತ್ಯಗತ್ಯ. ಆದರೆ ನಿಮ್ಮ ನಿವೃತ್ತಿ ಸಮೀಪಿಸುತ್ತಿದ್ದಂತೆ, ಈ ವಿಮೆಯು ಹೆಚ್ಚು ಮುಖ್ಯವಾಗುತ್ತದೆ. ಏಕೆಂದರೆ ವಯಸ್ಸಾದಂತೆ ವೈದ್ಯಕೀಯ ಸಮಸ್ಯೆಗಳಾಗುವ ಸಾಧ್ಯತೆಗಳು ಹೆಚ್ಚಾಗುತ್ತವೆ. ನಂತರ ನಿಮಗೆ ಸಾಕಷ್ಟು ವಿಮಾ ರಕ್ಷಣೆಯ ಅಗತ್ಯವಿರುತ್ತದೆ ಆದ್ದರಿಂದ ನಿಮ್ಮ ಉಳಿತಾಯವು ಆಸ್ಪತ್ರೆಯ ವೆಚ್ಚಗಳನ್ನು ಪೂರೈಸಲು ಖಾಲಿಯಾಗುವುದಿಲ್ಲ.

ವಿಮಾ ಕಂಪನಿಗಳ ಆರೋಗ್ಯ ವಿಮಾ ಪಾಲಿಸಿಗಳಲ್ಲಿ ಸೌಂದರ್ಯವರ್ಧಕ ಶಸ್ತ್ರ ಚಿಕಿತ್ಸೆಯನ್ನು ಒಳಗೊಂಡಿರುವುದಿಲ್ಲ. ಉದಾಹರಣೆಗೆ, ಬೊಟೊಕ್ಸ್, ನಿಮ್ಮ ಮುಖ, ಹಣೆ, ಕಣ್ಣುಗಳ ಕೆಳಗೆ ಇರುವ ಕಪ್ಪು ಗೆರೆಗಳು ಮತ್ತು ಸುಕ್ಕುಗಳನ್ನು ತೆಗಿಸಲು ಮಾಡಿಸವ ಸರ್ಜರಿಗಳಿಗೆ ಇನ್ಶೂರೆನ್ಸ್​ ಕ್ಲೈಮ್ ಆಗುವುದಿಲ್ಲ.ಇದು ಆರೋಗ್ಯ ವಿಮಾ ಪಾಲಿಸಿಗಳಿಗೆ ಒಳಪಡುವುದಿಲ್ಲ. ಅಂತೆಯೇ, ದೇಹದ ವಿವಿಧ ಭಾಗಗಳಿಂದ ಹೆಚ್ಚುವರಿ ಕೊಬ್ಬನ್ನು ತೆಗೆದುಹಾಕುವ ಶಸ್ತ್ರಚಿಕಿತ್ಸೆಯಾದ ಲಿಪೊಸಕ್ಷನ್ ಅನ್ನು ಪಟ್ಟಿಯಲ್ಲಿ ಸೇರಿಸಲಾಗಿಲ್ಲ. ಇಂಪ್ಲಾಂಟ್‌ಗಳು ಮತ್ತು ಅಂತಹುದೇ ಶಸ್ತ್ರಚಿಕಿತ್ಸೆಗಳಂತಹ ಕಾರ್ಯವಿಧಾನಗಳನ್ನು ಸಹ ಕ್ಲೈಮ್ ಮಾಡಲಾಗುವುದಿಲ್ಲ.

ಹಲ್ಲಿನ ಚಿಕಿತ್ಸೆಯು ಸಾಮಾನ್ಯವಾಗಿ ಆಸ್ಪತ್ರೆಗೆ ಅಗತ್ಯವಿರುವುದಿಲ್ಲ, ಆದ್ದರಿಂದ ಇದು ಆರೋಗ್ಯ ವಿಮೆ ಒಳಗೊಳ್ಳುವುದಿಲ್ಲ. ಆದರೆ ಆಕಸ್ಮಿಕವಾಗಿ ಗಾಯಗೊಂಡರೆ, ಹಲ್ಲಿನ ವೆಚ್ಚವನ್ನು ವಿಮಾ ಪಾಲಿಸಿಯಲ್ಲಿ ಒಳಗೊಂಡಿರುತ್ತದೆ. ಹೀಗೆ ಕೆಲವೊಂದು ನಿಯಮಗಳನ್ನು ಸರಿಯಾಗಿ ಪರಿಶೀಲಿಸಿ ಆರೋಗ್ಯ ವಿಮೆ ಮಾಡಿಸಿ. ಇಲ್ಲದೇ ಹೋದಲ್ಲಿ ಸಂಕಷ್ಟಕ್ಕೆ ಎದುರಾಗಬಹುದು.

ಆರೋಗ್ಯ ವಿಮೆ ಎಂಬುದು ಅನಿವಾರ್ಯ. ಮೇಲೆ ಹೇಳಿದ ಅಂಶಗಳನ್ನು ನೀವು ಗಮನಕ್ಕೆ ತೆಗೆದುಕೊಂಡರೆ ಸಾಕಷ್ಟು ವಿಮಾ ರಕ್ಷಣೆ ಪಡೆದುಕೊಳ್ಳುವಿರಿ ಮತ್ತು ವೈದ್ಯಕೀಯ ತುರ್ತು ಸ್ಥಿತಿ ಎದುರಾದಾಗ, ಅದನ್ನು ನಿಭಾಯಿಸಲು ಶಕ್ತರಾಗಿರುತ್ತೀರಿ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

36 Comments

ಮನೆಯಲ್ಲಿ ಸಿಗುವ ವಸ್ತುಗಳಲ್ಲಿ ತಯಾರಿಸಿ ಫೇಸ್ ಸ್ಕ್ರಬ್ಬರ್

ಮನೆಯಲ್ಲಿ ಸಿಗುವ ವಸ್ತುಗಳಲ್ಲಿ ತಯಾರಿಸಿ ಫೇಸ್ ಸ್ಕ್ರಬ್ಬರ್

ದುರ್ಗಾ ಭಾಗವತ್ ಅವರ ಜನ್ಮದಿನ 

ಫೆಬ್ರವರಿ 10ರಂದು, ಭಾರತೀಯ ವಿದ್ವಾಂಸರು, ಸಮಾಜವಾದಿ ಮತ್ತು ಬರಹಗಾರಾದ ದುರ್ಗಾ ಭಾಗವತ್ ಅವರ ಜನ್ಮದಿನ