ಈಗಿನ ಜೀವನಶೈಲಿಯಲ್ಲಿ ಪಿಸಿಒಡಿ. ಪ್ರತಿ ಹತ್ತು ಹೆಣ್ಣುಮಕ್ಕಳಲ್ಲಿ ಅಥವಾ ಮಹಿಳೆಯರಲ್ಲಿ ಏಳು ಮಂದಿಗೆ ಈ ಡಿಸೀಸ್ ಕಾಣಬಹುದು. ಪಿಸಿಒಡಿಯ ಮೂಲಕಾರಣ ಹಾರ್ಮೋನ್ ಗಳ ಅಸಮತೋಲನ. ಅಂಡಾಂಶಗಳು ಈಸ್ಟರೊಜೆನ್, ಪ್ರೊಜೆಸ್ಟರಾನ್ ಮತ್ತು ಟೆಸ್ಟೋಸ್ಟೆರಾನ್ ಅನ್ನು ಉತ್ಪಾದಿಸುತ್ತವೆ. ಪಿಸಿಒಡಿಯಲ್ಲಿ ಆಂಡ್ರೊಜೆನ್ ಅಂಡಾಂಶಯದಿಂದ ಹೆಚ್ಚಿನ ಪ್ರಮಾಣದಲ್ಲಿ ಉತ್ಪತ್ತಿಯಾಗುತ್ತದೆ. ಇದನ್ನು ಹೈಪರಾಂಡ್ರೊಜೆನಿಸಮ್ ಎಂದು ಕರೆಯಲಾಗುತ್ತದೆ. ಗರ್ಭಾಶಯದ ಎರಡೂ ಬದಿಯಲ್ಲಿರುವ ಅಂಡಕೋಶದ ಮೇಲೆ ನೀರಿನ ಗುಳ್ಳೆಯಂತೆ ಇರುವುದನ್ನು ಪಿಸಿಒಡಿ ಎಂದು ಕರೆಯುತ್ತಾರೆ. ಇದು ಋತು ಚಕ್ರಕ್ಕೆ ತೊಂದರೆಯನ್ನು ಉಂಟು ಮಾಡುತ್ತದೆ. ರಕ್ತದಲ್ಲಿ ಇನ್ಸ್ಲಿನ್ ಅಂಶವು ಹೆಚ್ಚಾಗಿ ಟೆಸ್ಟೊಸ್ಟಿರಾನ್ ಅನ್ನುವ ಹಾರ್ಮೋನ್ ಹೆಚ್ಚಾಗುತ್ತದೆ. ಋತುಚಕ್ರದ ತೊಂದರೆ ಶುರುವಾದರೆ ಮೊದಲ ಸಮಸ್ಯೆ ಎಂದರೆ ಹೆಣ್ಣು ಗರ್ಭ ಧರಿಸಲು ತೊಂದರೆಯಾಗುತ್ತದೆ. ಪಿಸಿಒಡಿ ಮೂಲ ಲಕ್ಷಣಗಳು, ನೆತ್ತಿಯ ಕೂದಲು ಉದುರುವಿಕೆ, ಮೊಡವೆಗಳು, ಋತುಚಕ್ರ ಏರುಪೇರು, ತೂಕ ಹೆಚ್ಚಾಗುವುದು, ಮೂಡ್ ಸ್ವಿಂಗ್ಸ್, ಮುಖದ ಮೇಲಿನ ಬೇಡದ ಕೂದಲಿನ ಬೆಳವಣಿಗೆ. ಬರೀ ಇಷ್ಟೇ ಆದರೆ ಪರವಾಗಿಲ್ಲ ಆ ನೋವು ಋತುಚಕ್ರದ ಸಮಯದಲ್ಲಿ, ಅತೀವ ರಕ್ತ ಸ್ರಾವ, ಜೊತೆಗೆ ನಿತ್ಯ ಕರ್ಮಗಳು, ಯಾವ ಶತ್ರುಗೂ ಬೇಡವಾದ ಪರಿಸ್ಥಿತಿ.
ಇದುವರೆಗೆ ಪಿಸಿಒಡಿಗೆ ಸಂಪೂರ್ಣ ಗುಣ ಆಗುವಂಥಹ ಮದ್ದು ವೈದ್ಯಲೋಕದಲ್ಲಿ ಇಲ್ಲ ಎನ್ನಬಹುದು. ನಿಯಮಿತ ಆಹಾರ ಪದ್ಧತಿ ಮತ್ತು ನಾವು ಏಷ್ಟು ಲವಲವಿಕೆಯಿಂದ ಇರುತ್ತೇವೆ ಅನ್ನುದರಲ್ಲಿ ಮಾತ್ರ ಪರಿಹಾರ ಇದೆ. ಕೆಲವೊಂದು ಆಯುರ್ವೇದದಲ್ಲಿ ಕೂಡ ತಡೆಗಟ್ಟಬಹುದಾದ ಮನೆಮದ್ದುಗಳು ಇವೆ. ಎಲ್ಲೋ ಕೇಳಿರುವ ನೆನಪು ಈ ಪಿಸಿಒಡಿ ಅನ್ನುವುದು ಮಗು ತಾಯಿಯ ಗರ್ಭದಲ್ಲಿ ಇರುವಾಗಲೇ ಈ ಮಗುವಿಗೆ ಪ್ರಾಯದಲ್ಲಿ ಹಾರ್ಮೋನು ಸಂಭಂದಿಸಿದ ಖಾಯಿಲೆ ಬರುತ್ತದೆ ಎಂದು ಖಚಿತವಾಗಿ ಗೊತ್ತಿಲ್ಲ. ಆದರೆ ಈಗಿನ ಆಹಾರ ಪಿಜ್ಜಾ, ಬರ್ಗರ್, ಅದರಲ್ಲಿ ಹಾಕುವ ಅತಿಯಾದ ಕೊಬ್ಬಿನ ಅಂಶ ಇರುವ ಚೀಸ್, ಜಂಕ್ ಫುಡ್ ಗಳು, ಅತಿಯಾಗಿ ಹೋಟೆಲ್ ತಿನಿಸುಗಳು, ಮಿತಿಯಿಲ್ಲದೆ ತಿಂದರೆ ಹಾರ್ಮೋನ್ ಸಮಸ್ಯೆಗಳಿಗೆ ಆಹ್ವಾನ ನೀಡಿದಂತೆ.
ನನಗೆ ತಿಳಿದಂತೆ ಸ್ವಲ್ಪ ಮಟ್ಟಿಗಾದರೂ ರಿಲಾಕ್ಸ್ ಆಗುವಂಥ ಮನೆಮದ್ದುಗಳನ್ನು ತಿಳಿಸಿಕೊಡುತ್ತೇನೆ.
೧.ಬಿಸಿ ನೀರಿನ ಶಾಕ : ಕಿಬ್ಬೊಟ್ಟೆಯ ಮೇಲೆ ಬಿಸಿ ನೀರಿನ ಪ್ಯಾಡ್ ನಿಂದ ಮಸಾಜ್ ಮಾಡಿದರೆ ನೋವು ಕಮ್ಮಿಯಾಗುತ್ತದೆ.
೨.ವಿಟಮಿನ್ ಸಿ ಸೇವನೆ : ಅನೇಕ ಹಣ್ಣುಗಳಲ್ಲಿ ವಿಟಮಿನ್ ಸಿ ಇರುತ್ತದೆ. ಅವುಗಳ ಸೇವನೆ ಸ್ವಲ್ಪ ಆರಾಮ ತರಿಸುತ್ತದೆ. ಅದರಲ್ಲಿ ಮುಖ್ಯವಾಗಿ ಲಿಂಬೆ ಹಣ್ಣು. ಲಿಂಬೆ ಹಣ್ಣಿನ ಶರ್ಭತ್ ಅದಕ್ಕೆ ಕಾಮಕಸ್ತೂರಿ ಬೀಜ ಹಾಕಿ ಕುಡಿದರೆ ಕೂಡ ಕೆಳಹೊಟ್ಟೆ ನೋವು ಕಮ್ಮಿಯಾಗುತ್ತದೆ.
೩.ಜೀರಿಗೆ : ಜೀರಿಗೆಯನ್ನು ಸ್ವಲ್ಪ ನೀರಿಗೆ ಹಾಕಿ ಸರಿಯಾಗಿ ಕುದಿಸಿ ಬೇಕಾದರೆ ಸ್ವಲ್ಪ ಕೊತ್ತಂಬರಿ ಬೀಜ ಕೂಡ ಸೇರಿಸಬಹುದು ಆ ನೀರನ್ನು ಮುಟ್ಟಿನ ಸಮಯದಲ್ಲಿ ದಿನಕ್ಕೆ ಎರಡು ಸಲ ಕುಡಿಯಬೇಕು.
೪.ಅನಾನಸು : ರಕ್ತಸ್ರಾವ ಜಾಸ್ತಿ ಇದ್ದರೆ ಅನಾನಸು ಜ್ಯೂಸ್ ತೆಗೆದು ನೀರು ಸೇರಿಸಬಾರದು ,ಅದಕ್ಕೆ ಲಿಂಬೆ ರಸ ಹಾಕಿ ಕುಡಿಯಬೇಕು. ರಕ್ತ ಸ್ರಾವ ಸ್ವಲ್ಪ ಮಟ್ಟಿಗೆ ಕಮ್ಮಿಯಾಗುತ್ತದೆ .ಆದರೆ ಇದು ದೇಹಕ್ಕೆ ತುಂಬಾ ಉಷ್ಣ. ಸರಿಹೊಂದಿಲ್ಲ ಅಂದರೆ ಮಾಡಲು ಹೋಗಬೇಡಿ.
೫.ಹಾಲು ಮತ್ತು ಬೆಲ್ಲ : ಋತುಚಕ್ರದ ಸಮಯದಲ್ಲಿ ಅಥವಾ ಮುಂಚಿನಿಂದಲೂ ಹಾಲಿಗೆ ಸ್ವಲ್ಪ ಬೆಲ್ಲ ಸೇರಿಸಿ ಕುಡಿಯಬೇಕು.
೬.ಈoದಿನ ಪುಡಿ(ಈಚಲು ಮರದ ಪುಡಿ) : ಸಾಮನ್ಯವಾಗಿ ಇದು ಕರಾವಳಿ ಅಂದರೆ ದಕ್ಷಿಣ ಕನ್ನಡ ಜಿಲ್ಲೆಯ ಭಾಗದಲ್ಲಿ ಆಯುರ್ವೇದ ಅಂಗಡಿಗಳಲ್ಲಿ ಸಿಗುತ್ತದೆ. ಬೇರೆ ಊರುಗಳಲ್ಲಿ ಸಿಗುವುದು ಕಮ್ಮಿ. ದೇಹಕ್ಕೆ ತುಂಬಾ ತಂಪು. ಇದು ಕೂಡ ಋತಸ್ರಾವದ ಸಮಯದಲ್ಲಿ ಒಳ್ಳೆಯದು.
೭.ದಾಲ್ಚಿನ್ನಿ : 1 ಕಪ್ ಬೆಚ್ಚಗಿನ ನೀರಿಗೆ 1 ಟೀ ಸ್ಪೂನ್ ಚಕ್ಕೆ ಅಥವಾ ದಾಲ್ಚಿನ್ನಿ ಪುಡಿ ಬೆರೆಸಿ ನಿತ್ಯ ಸೇವಿಸಬೇಕು. ಇದರಿಂದ ಮುಟ್ಟು ಕ್ರಮ ಪ್ರಕಾರವಾಗಿ ಉಂಟಾಗಿ ಅಂಡಕೋಶದ ನೀರ್ಗುಳ್ಳೆ ಕರಗುತ್ತದೆ. ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ನಡೆದ ಸಂಶೋಧನೆಯಿಂದ ಇದು ಕಂಡು ಬಂದ ಪ್ರಯೋಗವಾಗಿದೆ.
೮.ಮೆಂತ್ಯೆ : ಒಂದು ಚಮಚ ಮೆಂತ್ಯೆಯನ್ನು ಆರು ಗಂಟೆ ಮೊದಲು ನೀರಲ್ಲಿ ನೆನೆಸಿಡಬೇಕು. 1 ಚಮಚದಂತೆ ಬೆಳಗ್ಗೆ, ಮಧ್ಯಾಹ್ನ ಹಾಗೂ ರಾತ್ರಿ ಆಹಾರಕ್ಕೆ ಮೊದಲು ಅರೆದು ಚಿಟಿಕೆ ಬೆಲ್ಲ ಅಥವಾ ಉಪ್ಪು ಬೆರೆಸಿ ನಿತ್ಯ ಸೇವಿಸಬೇಕು. ಮೆಂತ್ಯೆ ಸೊಪ್ಪು, ಮೊಳಕೆ ಬರಿಸಿದ ಮೆಂತ್ಯೆ ಕಾಳಿನ ಕೋಸುಂಬರಿ ಆಹಾರದಲ್ಲಿ ನಿತ್ಯ ಬಳಸಿದರೆ ಪರಿಣಾಮಕಾರಿ.
ಮೆಂತ್ಯೆ ಕಾಳುಗಳು ದೇಹದಲ್ಲಿ ಗ್ಲೂಕೋಸ್ ಸಹಿಷ್ಣುತೆಯನ್ನು ಸುಧಾರಣೆ ಮಾಡುವುದು, ಇದರಿಂದಾಗಿ ತೂಕ ಕಳೆದುಕೊಳ್ಳಲು ಇದು ಸಹಕಾರಿ ಆಗಿದೆ. ಮೆಂತ್ಯೆ ಕಾಳುಗಳನ್ನು ರಾತ್ರಿಯಿಡಿ ನೀರಿನಲ್ಲಿ ನೆನೆಸಿಡಿ ಮತ್ತು ದಿನದಲ್ಲಿ ಮೂರು ಸಲ ಖಾಲಿ ಹೊಟ್ಟೆಯಲ್ಲಿ ಇದನ್ನು ಸೇವಿಸಿ. ಬೆಳಗ್ಗೆ ಎದ್ದ ಬಳಿಕ ಖಾಲಿ ಹೊಟ್ಟೆಯಲ್ಲಿ, ಮಧ್ಯಾಹ್ನ ಊಟಕ್ಕೆ ಐದು ನಿಮಿಷ ಮೊದಲು ಮತ್ತು ರಾತ್ರಿ ಊಟಕ್ಕೆ ಮೊದಲು ನೀವು ಇದನ್ನು ಸೇವಿಸಿ. ಬೇಯಿಸಿ ಮೆಂತೆ ಸೊಪ್ಪನ್ನು ಕೂಡ ಸೇವಿಸಬಹುದು.
೯.ಅಗಸೆ ಬೀಜಗಳು : ಈ ಬೀಜಗಳಲ್ಲಿ ಉನ್ನತ ಮಟ್ಟದ ನಾರಿನಾಂಶ, ಒಮೆಗಾ-3 ಮತ್ತು ಒಮೆಗಾ-6 ಕೊಬ್ಬಿನಾಮ್ಲಗಳು ಇವೆ. ಇದರೊಂದಿಗೆ ಲಿಗ್ನನ್ಸ್ ಎನ್ನುವ ಪ್ರೋಟೀನ್ ಇದ್ದು, ದೇಹದಲ್ಲಿ ಸಿಗುವಂತಹ ಟೆಸ್ಟೋಸ್ಟೆರಾನ್ ಪ್ರಮಾಣವನ್ನು ಇದು ಕಡಿಮೆ ಮಾಡುವುದು. ಅಗಸೆ ಬೀಜಗಳು ಗ್ಲೂಕೋಸ್ ಮತ್ತು ಇನ್ಸುಲಿನ್ ನ್ನು ಸರಿಯಾಗಿ ಉಪಯೋಗಿಸಿಕೊಳ್ಳಲು ನೆರವಾಗುವುದು ಮತ್ತು ಪಿಸಿಒಎಸ್ ನ ಅಡ್ಡಪರಿಣಾಮಗಳನ್ನು ಇದು ತಡೆಯುವುದು.
೧೦.ನೆಲ್ಲಿಕಾಯಿ : ನೆಲ್ಲಿಕಾಯಿಯು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿ ಇಡುವಲ್ಲಿ ತುಂಬಾ ಪ್ರಾಮುಖ್ಯತೆ ವಹಿಸುವುದು ಮತ್ತು ಇದು ಮಹಿಳೆಯರಲ್ಲಿ ಫಲವತ್ತತೆ ಹೆಚ್ಚು ಮಾಡುವುದು. ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಮತ್ತು ಆಂಟಿಆಕ್ಸಿಡೆಂಟ್ ಸಮೃದ್ಧವಾಗಿದೆ. ಅನುಶಾ ಅವರು ಹೇಳುವ ಪ್ರಕಾರ, ಇದು ದೇಹವನ್ನು ಅದ್ಭುತವಾಗಿ ಶುದ್ಧೀಕರಿಸುವುದು. ದೇಹದಲ್ಲಿ ಇರುವಂತಹ ವಿಷಕಾರಿ ಅಂಶವನ್ನು ಹೊರಗೆ ಹಾಕುವುದು ಮತ್ತು ಇದರಿಂದಾಗಿ ತೂಕ ಕಡಿಮೆ ಮಾಡಿಕೊಳ್ಳಬಹುದು. ಒಂದು ನೆಲ್ಲಿಕಾಯಿ ತೆಗೆದುಕೊಳ್ಳಿ ಮತ್ತು ಇದರ ಜ್ಯೂಸ್ ತೆಗೆಯಿರಿ. ಇದಕ್ಕೆ ಉಗುರುಬೆಚ್ಚಗಿನ ನೀರು ಹಾಕಿ ಸೇವಿಸಿ.
ಇದೆಲ್ಲ ಉಪಯೋಗಿಸಿ ಪರಿಣಾಮಕಾರಿಯಾಗಿ ಕೆಲಸ ಮಾಡಿರುವ ಮನೆಮದ್ದುಗಳು. ಬೇರೆ ಬೇರೆ ತರಹ ಮದ್ದುಗಳನ್ನು ಉಪಯೋಗಿಸಿ ಇರುವವರು ಇದನ್ನು ಒಮ್ಮೆ ಉಪಯೋಗಿಸಿ ನೋಡಿ. ಅಡ್ಡ ಪರಿಣಾಮ ಮಾತ್ರ ಆಗುವುದಿಲ್ಲ .ಯಾಕೆಂದರೆ ಎಲ್ಲ ವಸ್ತುಗಳು ನಾವು ನಮ್ಮ ಮನೆಯಲ್ಲಿ ದಿನನಿತ್ಯ ಉಪಯೋಗಿಸುವ ವಸ್ತುಗಳು. ಇಂಗ್ಲಿಷ್ ಮದ್ದು ಉಪಯೋಗಿಸುವ ಬದಲು ಇದೆ ಒಳ್ಳೆಯದು. ಇನ್ನೊಂದು ಎಂದರೆ ಹೆಚ್ಚಾಗಿರುವ ದೇಹದ ತೂಕದಲ್ಲಿ ಹತ್ತು ಪರ್ಸೆಂಟ್ ಆದರೂ ಕಮ್ಮಿ ಮಾಡಿಕೊಂಡರೆ ಪಿಸಿಒಡಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಯೋಗಾಭ್ಯಾಸ ತುಂಬಾ ಸಹಕಾರಿಯಾಗಿದೆ. ಮಂತ್ರ, ಕೆಲವೊಂದು ಆಸನಗಳು ಮೂಡ್ ಸ್ವಿಂಗ್ ಆಗುದಕ್ಕೆ ಉಪಯೋಗವಾಗುತ್ತದೆ.
ಧನ್ಯವಾದಗಳು.
Подробнее здесь [url=https://kraken20ati.ru]Kraken20.at[/url]
веб-сайт [url=https://kraken19at-t.ru]Kraken19.at[/url]
pop over to this website [url=https://tronlink.pro/]tronlink pro download[/url]
подробнее [url=https://kraken20ati.ru]Kraken20.at[/url]
узнать больше https://kp-inform.ru/catalog/hdd_and_ssd/zhestkiy_disk_ibm_2_gbps_fc_146_8_gb_10k_e_ddm_39m4593
проверить сайт https://zelenka.guru/articles/
Узнать больше https://zelenka.guru/articles/
Продолжение https://blacksprutx.com/
посетить сайт https://omgomgonion.com/
find more info http://nguyentiencuong277.blognhansu.com/2024/09/21/page-272-2/
нажмите, чтобы подробнее [url=https://meqa.fo/]мега даркнет[/url] – mega onion как зайти, сайт мега
каталог [url=https://meqa.fo/]мега маркетплейс[/url] – mega вход зеркало, megaweb 10 at
в этом разделе [url=https://meqa.fo/]megaweb 10 at[/url] – megaweb 10 at, как зайти на мегу через телефон
browse around these guys https://spy-casino.com/casinos-rating/milkyway-casino
their website https://casinomira.com/casinos-rating/no-deposit-casinos/