in

ಮೊದಲ ಸ್ವಾತಂತ್ರ ಹೋರಾಟ ವೀರ ಮಹಿಳೆ ತುಳುನಾಡಿನ ಉಳ್ಳಾಲದ ರಾಣಿ ಅಬ್ಬಕ್ಕ

ರಾಣಿ ಅಬ್ಬಕ್ಕ
ರಾಣಿ ಅಬ್ಬಕ್ಕ

ಅಬ್ಬಕ್ಕ ರಾಣಿ ಅಥವಾ ‘ಅಬ್ಬಕ್ಕ ಮಹಾದೇವಿ’ ಅಂತ ಹೆಸರು, ತುಳುನಾಡಿನ ರಾಣಿಯಾಗಿದ್ದಳು. ಇವರು ೧೬ನೇ ಶತಮಾನದ ದ್ವಿತೀಯಾರ್ಧದಲ್ಲಿ ಪೋರ್ಚುಗೀಸರೊಡನೆ ಹೋರಾಡಿದವರು. ರಾಣಿಯು ದೇವಾಲಯಗಳ ನಗರಿ ಮೂಡುಬಿದಿರೆಯ ಪ್ರದೇಶವನ್ನಾಳಿದ ಚೌಟ ವಂಶಕ್ಕೆ ಸೇರಿದವರು. ಬಂದರು ನಗರಿ ಉಳ್ಳಾಲವು ರಾಜಧಾನಿಯಾಗಿದ್ದಿತು. ಆಯಕಟ್ಟಿನ ಪ್ರದೇಶವಾದ ಉಳ್ಳಾಲವನ್ನು ವಶಪಡಿಸಿಕೊಳ್ಳಲು ಪೋರ್ಚುಗೀಸರು ಅನೇಕ ಯತ್ನಗಳನ್ನು ನೆಡೆಸಿದರು. ಆದರೆ ರಾಣಿಯು ಅವರ ಪ್ರಯತ್ನವನ್ನು ನಾಲ್ಕು ದಶಕಗಳಕಾಲ ಹಿಮ್ಮೆಟ್ಟಿಸಿದಳು. ಅವಳ ಧೈರ್ಯದಿಂದಾಗಿ ಅಭಯ ರಾಣಿಎಂದು ಹೆಸರಾಗಿದ್ದಳು. ವಸಾಹಶಾಷಿಗಳ ವಿರುದ್ಧ ಹೋರಾಡಿದ ಮೊದಲ ಭಾರತೀಯರಲ್ಲಿ ಒಬ್ಬಳು ಮತ್ತು ಮೊದಲ ಮಹಿಳಾ ಸ್ವಾತಂತ್ರ್ಯ ಹೋರಾಟಗಾರ್ತಿ.

ಚೌಟರು ಅಳಿಯ ಸಂತಾನವನ್ನು ಅನುಸರಿಸುವರು. ಹೀಗಾಗಿ ಮಾವ ತಿರುಮಲರಾಯನು ಅಬ್ಬಕ್ಕನನ್ನು ರಾಣಿಯನ್ನಾಗಿ ಪಟ್ಟಕಟ್ಟಿದನು ಮತ್ತು ಮಂಗಳೂರಿನ ಪ್ರಭಲ ಅರಸನಾಗಿದ್ದ ಲಕ್ಷ್ಮಪ್ಪ ಅರಸನೊಂದಿಗೆ ವಿವಾಹ ನೆರವೇರಿಸಿದನು. ತಿರುಮಲರಾಯನು ಅಬ್ಬಕ್ಕಳಿಗೆ ಯುದ್ಧತಂತ್ರಗಳನ್ನೂ ಮತ್ತು ಸೈನಿಕ ಕೌಶಲ್ಯಗಳನ್ನೂ ಹೇಳಿಕೊಟ್ಟಿದ್ದನು. ವಿವಾಹವು ಬಹಳ ಕಾಲ ಉಳಿಯಲಿಲ್ಲ, ಅಬ್ಬಕ್ಕ ಉಳ್ಳಾಲಕ್ಕೆ ಹಿಂತಿರುಗಿದಳು. ಈ ಕಾರಣದಿಂದಾಗಿ ಮುಂದೆ ಪೋರ್ಚುಗೀಸರ ವಿರುದ್ಧದ ಅಬ್ಬಕ್ಕನ ಹೋರಾಟದಲ್ಲಿ ಪತಿಯು ಅಬ್ಬಕ್ಕನ ವಿರುದ್ಧ ಸೇಡು ತೀರಿಸಿಕೊಳ್ಳಲು ಪೋರ್ಚುಗೀಸರ ಪರ ಸೇರಿಕೊಂಡನು. ಜನವರಿ 15,2003 ರಂದು ಭಾರತ ಸರಕಾರವು ರಾಣಿ ಅಬ್ಬಕ್ಕನ ಚಿತ್ರವುಳ್ಳ ಪೋಸ್ಟಲ್ ಸ್ಟಾಂಪ್ ಬಿಡುಗಡೆ ಮಾಡಿತು.

ಮೊದಲ ಸ್ವಾತಂತ್ರ ಹೋರಾಟ ವೀರ ಮಹಿಳೆ ತುಳುನಾಡಿನ ಉಳ್ಳಾಲದ ರಾಣಿ ಅಬ್ಬಕ್ಕ
ರಾಣಿ ಅಬ್ಬಕ್ಕ

ಗೋವಾವನ್ನು ಆಕ್ರಮಿಸಿಕೊಂಡ ನಂತರ ಮತ್ತು ಅದರ ಮೇಲೆ ಹಿಡಿತ ಸಾಧಿಸಿದ ನಂತರ, ಪೋರ್ಚುಗೀಸರು ತಮ್ಮ ಗಮನವನ್ನು ದಕ್ಷಿಣಕ್ಕೆ ಮತ್ತು ಕರಾವಳಿಯತ್ತ ತಿರುಗಿಸಿದರು. ಅವರು ಮೊದಲು 1525ರಲ್ಲಿ ದಕ್ಷಿಣ ಕೆನರಾ ಕರಾವಳಿಯ ಮೇಲೆ ದಾಳಿ ಮಾಡಿ ಮಂಗಳೂರು ಬಂದರನ್ನು ನಾಶಪಡಿಸಿದರು. ಉಲ್ಲಾಳ ಸಮೃದ್ಧ ಬಂದರು ಮತ್ತು ಪಶ್ಚಿಮಕ್ಕೆ ಅರೇಬಿಯಾ ಮತ್ತು ಇತರ ದೇಶಗಳಿಗೆ ಮಸಾಲೆ ವ್ಯಾಪಾರದ ಕೇಂದ್ರವಾಗಿತ್ತು. ಅದು ಲಾಭದಾಯಕ ವ್ಯಾಪಾರ ಕೇಂದ್ರವಾಗಿದ್ದರಿಂದ , ಪೋರ್ಚುಗೀಸ್, ಡಚ್ ಮತ್ತು ಬ್ರಿಟಿಷರು ಈ ಪ್ರದೇಶದ ನಿಯಂತ್ರಣಕ್ಕಾಗಿ ಮತ್ತು ವ್ಯಾಪಾರ ಮಾರ್ಗಗಳಿಗಾಗಿ ಪರಸ್ಪರ ಪೈಪೋಟಿ ನಡೆಸಿದರು. ಸ್ಥಳೀಯ ಮುಖ್ಯಸ್ಥರ ಪ್ರತಿರೋಧವು ತುಂಬಾ ಪ್ರಬಲವಾಗಿದ್ದರಿಂದ ಅವರಿಗೆ ಹೆಚ್ಚು ಮುನ್ನಡೆಯಲು ಸಾಧ್ಯವಾಗಲಿಲ್ಲ. ಸ್ಥಳೀಯ ಆಡಳಿತಗಾರರು ಜಾತಿ ಮತ್ತು ಧಾರ್ಮಿಕ ಮಾರ್ಗಗಳನ್ನು ಮೀರಿ ಮೈತ್ರಿ ಮಾಡಿಕೊಂಡರು.
ಅಬ್ಬಕ್ಕನ ಆಡಳಿತವನ್ನು ಜೈನರು, ಹಿಂದೂಗಳು ಮತ್ತು ಮುಸ್ಲಿಮರು ಚೆನ್ನಾಗಿ ಪ್ರತಿನಿಧಿಸುತ್ತಿದ್ದರು. ಐತಿಹಾಸಿಕ ಸಂಶೋಧನೆಯು ೧೬ ನೇ ಶತಮಾನದಲ್ಲಿ ತನ್ನ ಆಳ್ವಿಕೆಯಲ್ಲಿ, ಬ್ಯಾರಿ ಪುರುಷರು ನೌಕಾಪಡೆಯಾಗಿ ಸೇವೆ ಸಲ್ಲಿಸಿದ್ದರು ಎಂದು ತಿಳಿಸುತ್ತದೆ. ರಾಣಿ ಅಬ್ಬಕ್ಕ ಅವರು ಮಲಾಲಿಯಲ್ಲಿ ಅಣೆಕಟ್ಟು ನಿರ್ಮಾಣವನ್ನು ವೈಯಕ್ತಿಕವಾಗಿ ನೋಡಿಕೊಳ್ಳುತ್ತಿದ್ದರು. ಅವರು ಬೌಲ್ಡರ್ ಕೆಲಸಕ್ಕಾಗಿ ಬ್ಯಾರಿಯವರನ್ನು ನೇಮಿಸಿದ್ದರು. ಅವರ ಸೈನ್ಯವು ಎಲ್ಲಾ ಪಂಗಡಗಳು ಮತ್ತು ಜಾತಿಗಳ ಜನರನ್ನು ಒಳಗೊಂಡಿತ್ತು. ಅವರು ಕ್ಯಾಲಿಕಟ್ ಮೊನ ಜಮೋರಿನ್ ನ ಜೊತೆ ಮೈತ್ರಿ ಮಾಡಿಕೊಂಡರು. ಒಟ್ಟಾಗಿ, ಅವರು ಪೋರ್ಚುಗೀಸರನ್ನು ಕೊಲ್ಲಿಯಲ್ಲಿ ಇಟ್ಟುಕೊಂಡರು. ನೆರೆಯ ಬಂಗಾ ರಾಜವಂಶದೊಂದಿಗಿನ ವೈವಾಹಿಕ ಸಂಬಂಧವು ಸ್ಥಳೀಯ ಆಡಳಿತಗಾರರ ಮೈತ್ರಿಗೆ ಮತ್ತಷ್ಟು ಬಲವನ್ನು ನೀಡಿತು. ಅವರು ಬಿಂದೂರ್ ನ ಪ್ರಬಲ ರಾಜ ವೆಂಕಟಪ್ಪನಾಯಕರಿಂದ ಬೆಂಬಲವನ್ನು ಪಡೆದರು ಮತ್ತು ಪೋರ್ಚುಗೀಸ್ ಪಡೆಗಳ ಬೆದರಿಕೆಯನ್ನು ನಿರ್ಲಕ್ಷಿಸಿದರು.

ಅಬ್ಬಕ್ಕನ ಸಾಹಸ
ವಿಜಯನಗರ ಸಾಮ್ರಾಜ್ಯದ ಪ್ರಾಬಲ್ಯ ಕ್ಷಿಣಿಸುತ್ತಿದ್ದಂತೆ ದಕ್ಷಿಣ ಕನ್ನಡದ ಪ್ರಮುಖ ಪಟ್ಟಣಗಳು ಹೊನ್ನಾವರ, ಭಟ್ಕಳ, ಮಂಗಳೂರು ,ಅಂತರಾಷ್ಟ್ರಿಯ ರೇವುಪಟ್ಟಣಗಳು,ಕೆಳದಿಯ ನಾಯಕರ ಹಿಡಿತಕ್ಕೆ ಸೇರಿತು. ಇದೇ ಸಮಯದಲ್ಲಿ ಪೋರ್ಚುಗೀಸರು ಕಡಲಗಳ್ಳರು ಅರಬ್ಬೀ ಸಮುದ್ರ ಮಾರ್ಗವಾಗಿ ಹೊರಟ ಹಾಗೂ ಬರುವ ವ್ಯಾಪಾರಿ ನೌಕೆಗಳನ್ನು ಕೊಳ್ಳೆ ಹೊಡೆಯಲಾರಂಭಿಸಿದ್ದರು. ಸ್ಪೇನ್ ಮತ್ತು ಪೋರ್ಚುಗಲ್ ಜೊತೆಗೂಡಿ ದಕ್ಷಿಣ ಭಾರತದ ನೌಕಾ ವ್ಯಾಪಾರ ಮಾರ್ಗವನ್ನು ಸಂಪೂರ್ಣ ಹಿಡಿತದಲ್ಲಿಟ್ಟುಕೊಂಡಿದ್ದರು. ಸಮುದ್ರ ಮಾರ್ಗವನ್ನು ಬಳಸಲು ಅನಿಮಿತ ಕಪ್ಪಾ ವಸೂಲಿಯನ್ನು ನಿರ್ದಾಕ್ಷಿಣ್ಯವಾಗಿ ಮಾಡಲಾರಂಭಿಸಿದ್ದರು.ಅಬ್ಬಕ್ಕಳಿಗೆ ಈ ದಂಧೆಯ ಏಕಸಾಮತ್ಯದಿಂದ ಆಗುತ್ತಿದ್ದ ಆರ್ಥಿಕ ಶೋಷಣೆ ತಿಳಿದು ತೀವ್ರ ವಿರೋಧ ವ್ಯಕ್ತಪಡಿಸಿದಳು. ಮುಂದೆ, ಕೆಳದಿ ನಾಯಕರ ನೆರವಿನಿಂದ ಅವಳು ಮಧ್ಯ-ಪ್ರಾಚ್ಯ ದೇಶಗಳೊಂದಿಗೆ ವ್ಯಾಪಾರವನ್ನು ಕ್ಯಾಲಿಕಟ್-ನ ಬಂದರುಗಳಿಂದ ಪ್ರಾರಂಭಿಸಿದಳು. ಆದರೆ ಪೋರ್ಚುಗೀಸರು ಇವಳ ನೌಕೆಗಳನ್ನು ಮಾರ್ಗ ಮಧ್ಯದಲ್ಲೆ ಸೆರೆ ಹಿಡಿದರು. ಇದರಿಂದ ಕುಪಿತಗೊಂಡ ಅಬ್ಬಕ್ಕ ಪೋರ್ಚುಗೀಸರ ,ಮಂಗಳೂರು ಕೋಟೆಯ ಮೇಲೆ ದಾಳಿ ಮಾಡಿದಳು. ಅಲ್ಲಿದ್ದ ಅವರ ಕಾರ್ಖಾನೆಯನ್ನು ಧ್ವಂಸಗೊಳಿಸಿದಳು. ಇದಕ್ಕೆ ಪ್ರತಿಯಾಗಿ ಉಲ್ಲಾಳದ ಮೇಲೆ ದಾಳಿ ಎಸೆಯಲು ಪೋರ್ಚುಗೀಸರು ಹೊಂಚು ಹಾಕಿದರು. ಒಳ್ಳೆಯ ಕಾಲಾವಕಾಶಕ್ಕಾಗಿ ಕಾದು ಕುಳಿತರು.
ಕೆಳದಿಯ ನಾಯಕ ಮಂಗಳೂರನ್ನು ವಶಪಡಿಸಕೊಳ್ಳಲು ಸೈನ್ಯದೊಂದಿಗೆ ಹೋದಾಗ, ಉಲ್ಲಾಳ ಹಾಗೂ ಅದರ ಸುತ್ತಮುತ್ತಲಿನ ಪ್ರದೇಶವು ಅಸುರಕ್ಷಿತವಾಗಿದೆಯೆಂದು ಭಾವಿಸಿ ಪೋರ್ಚುಗೀಸರು ತಮ್ಮ ನೌಕಾ ಪಡೆಯನ್ನು ಉಲ್ಲಾಳ ಬಂದರನ್ನು ಸುತ್ತುಗಟ್ಟುತ್ತಾರೆ. ಮರುದಿನ ದಾಳಿ ಮಾಡಲು ಎಲ್ಲ ಸಿದ್ಧತೆಯನ್ನು ಮಾಡಿಕೊಂಡಿದ್ದಾರೆಂದು ಅಬ್ಬಕ್ಕನಿಗೆ ತಿಳಿಯುತ್ತದೆ. ಎದುರಿಗಿರುವ ವಿಪತ್ತಿನ ಪರಿಸ್ಥಿಯನ್ನು ಅರಿತುಕೊಳ್ಳುತ್ತಾಳೆ.

ಮೊದಲ ಸ್ವಾತಂತ್ರ ಹೋರಾಟ ವೀರ ಮಹಿಳೆ ತುಳುನಾಡಿನ ಉಳ್ಳಾಲದ ರಾಣಿ ಅಬ್ಬಕ್ಕ
ರಾಣಿ ಅಬ್ಬಕ್ಕ


ಅಂದು ಅಮವಾಸ್ಯೆಯ ರಾತ್ರಿಯಾಗಿತ್ತು. ಅಬ್ಬಕ್ಕಾಳು ಅಂದೇ ರಾತ್ರಿ ಹಠಾತ್ ದಾಳಿ ಮಾಡ ಬೇಕೆಂದು ನಿರ್ಧರಿಸಿ ತನ್ನ ಸೇನಾಪಡೆಯ ವೀರ ಮೊಗೇರ್ ಮತ್ತು ಬೆಸ್ತರ ಸೈನಿಕರನ್ನು ನಿರ್ದೇಶಿಸಿ ಕಳುಹಿಸುತ್ತಾಳೆ. ಇವರೆಲ್ಲಾ ಕೆಲವು ಕಿರುನೌಕೆಗಳಲ್ಲಿ ಕುಳಿತು ಪೋರ್ಚುಗೀಸರ ಯುದ್ಧ ನೌಕೆಗಳನ್ನು ಸಂದೇಹ ಬರದಹಾಗೆ ಸಮೀಪಿಸಿ, ಅಬ್ಬಕ್ಕಳ ಸೂಚನೆಯಂತೆ, ನೂರಾರು ಒಣ ತೆಂಗಿನ ನಾರು ಮತ್ತು ಗರಿಗಳಿಗೆ ಬೆಂಕಿ ಹೊತ್ತಿಸಿ ವೈರಿ ನೌಕೆಗಳ ಮೇಲೆ ಒಂದೇ ಸಮನೆ ಎಸೆಯುತ್ತಾರೆ. ಇದರಿಂದ ನೌಕಾಪಟಗಳಿಗೆ ಬೆಂಕಿ ತಾಗಿ ಪೂರಾ ನೌಕೆಯನ್ನು ಬೆಂಕಿ ಆವರಿಸುತ್ತದೆ. ಪ್ರಾಣ ಉಳಿಸಿಕೊಳ್ಳಲು ಸಮುದ್ರಕ್ಕೆ ಹಾರಿ ತೀರಕ್ಕೆ ಈಜು ಬಂದವರನ್ನು ಅಬ್ಬಕ್ಕಳ ಸೈನ್ಯದಳವು ಕೊಚ್ಚಿ ಕೊಲ್ಲುತ್ತಾರೆ. ಪೋರ್ಚುಗೀಯರ ಮೂಲಗಳ ಪ್ರಕಾರ ಅಂದು ಇನ್ನೂರು ಸೈನಿಕರು ಸಾವಿಗೀಡಾಗಿ, ಎರಡು ಯುದ್ಧನೌಕೆಗಳು ಸುಟ್ಟು ತಳ ಸೇರಿದ್ದವು. ಪೋರ್ಚುಗೀಯರು ಭಾರಿ ನಷ್ಟ ಅನುಭವಿಸಿದರು.
ಈ ಹೀನಾಯ ಸೋಲಿನಿಂದ ರೊಚ್ಚಿಗೆದ್ದ ಪೋರ್ಚುಗೀಸರು ಗೋವಾದಿಂದ (ರಾಜಧಾನಿ) ಇನ್ನೂ ದೊಡ್ಡ ಸೈನ್ಯಬಲದಿಂದ ಎರಡನೆ ಬಾರಿ ಉಲ್ಲಾಳನ್ನು ಆಕ್ರಮಿಸುತ್ತಾರೆ. ಈ ಸಲ ಉಲ್ಲಾಳದ ತಂಗು ಪ್ರದೇಶವನ್ನು ಲೂಟಿ ಮಾಡುತ್ತಾರೆ. ಆದರೆ, ಅಬ್ಬಕ್ಕಳು ತನ್ನ ಕುಶಲ ರಾಜತಂತ್ರದಿಂದ ಕ್ಯಾಲಿಕಟ್-ನ ಝಾಮೊರಿನ್, ಅರಬ್-ದ ಮೂರ್-ರು, ಮೊಪ್ಲಾ ಜನಾಂಗ ಮತ್ತು ಕೆಳದಿ ನಾಯಕರೆಲ್ಲರನ್ನು ಒಟ್ಟುಗೂಡಿಸಿ ವೈರಿಗಳಿಗೆ ತಕ್ಕ ವಿರೋಧವನ್ನು ಒಡ್ಡುತ್ತಾಳೆ. ಯುದ್ಧತಂತ್ರವನ್ನು ಸ್ವತಃ ಅಬ್ಬಕ್ಕಳೇ ಮಾಡುತ್ತಾಳೆ. ಇವಳ ಚಾಕಚಕ್ಯತೆಯುಳ್ಳ ಸೇನಾ ನಿಯಂತ್ರಣದಿಂದ ಈ ಬಾರಿಯೂ ಪೋರ್ಚುಗೀಯರ ಮುಖಭಂಗವಾಗುತ್ತದೆ. ಕಾಲಾನಂತರ, ಯುದ್ಧದಲ್ಲಿ ಸೋತ ಪೋರ್ಚುಗೀಯರು, ಅವರನ್ನು ಹಾಗೂ ಅವರ ಭಾರಿ ನೌಕಾ ಶಕ್ತಿಯನ್ನೂ ಧಿಕ್ಕರಿಸಿ ಅಬ್ಬಕ್ಕಳ ಸಮುದ್ರ ವ್ಯಾಪಾರ ತೀವ್ರಗತಿಯಲ್ಲಿ ಬೆಳೆದುದನ್ನು ಕಂಡು ದಿಗಿಲುಗೊಳ್ಳುತ್ತಾರೆ. 1568ರಲ್ಲಿ ಮತ್ತೊಮ್ಮೆ ಅವಳ ಮೇಲೆ ಯುದ್ಧ ಸಾರುತ್ತಾರೆ. ಈ ಬಾರಿ ಉಲ್ಲಾಳ ನಗರವನ್ನು ಅತಿಕ್ರಮಿಸಿ ಅರಮನೆಯನ್ನೇ ನುಗ್ಗುತ್ತಾರೆ. ಆದರೆ ಅಬ್ಬಕ್ಕ ಕೋಟೆಯಿಂದ ನುಣುಚಿಕೊಂಡು ಒಂದು ಮಸೀದಿಯಲ್ಲಿ ಆಶ್ರಯ ಪಡೆಯುತ್ತಾಳೆ. ಅದೇ ರಾತ್ರಿ, ಅವಳು ಸುಮಾರು ಇನ್ನೂರು ಸೈನಿಕರನ್ನು ಒಟ್ಟುಗೂಡಿಸಿ ಪೋರ್ಚುಗೀಯರ ಮೇಲೆ ಎಗುರುತ್ತಾಳೆ. ಈ ಕಾಳಗದಲ್ಲಿ ಅಬ್ಬಕ್ಕ ವೈರಿಯ ಸೇನಾಧಿಕಾರಿಯನ್ನು ಕೊಲ್ಲಲು ಯಶಸ್ವಿಯಾಗುತ್ತಾಳೆ. ಹಾಗೆ ಕೋಟೆಯೊಳಗಿದ್ದ ಸೈನ್ಯವನ್ನು ವೀರಾವೇಶದಿಂದ ಹೋರಾಡಿ, ಬಡಿದೋಡಿಸಿ, ಅಲ್ಲೇ ನೆಲೆಸಿದ್ದ ಪೋರ್ಚುಗೀಸರ ನೌಕಾ ಸೇನೆಯ ಉನ್ನತ್ತಾಧಿಕಾರಿಯನ್ನೂ ಕೊಲ್ಲುತ್ತಾಳೆ.ಇವಳ ಧೈರ್ಯದ ಎದುರು ನಿಬ್ಬೆರಗಾಗಿ ಹೋದ ಪೋರ್ಚುಗೀಯರು ಅವಳನ್ನು ತಡೆಗಟ್ಟಲು ೧೫೬೯ರಲ್ಲಿ ಮುಖಾಮುಖಿ ಯುದ್ಧ ಬಿಟ್ಟು ಕಪಟತನ ವಂಚನೆಯಿಂದ ಸದೆ ಬಡಿಯಲು ಮುಂದಾಗುತ್ತಾರೆ. ಆಕೆಯ ಗಂಡನನ್ನು ಅವಳಿಂದ ದೂರ ಮಾಡುತ್ತಾರೆ. ಅವನ ರಾಜ್ಯವನ್ನು ಮೋಸದಿಂದ ಕಬಳಿಸಲು ಆತನ ಸೋದರ ಅಳಿಯನಿಗೆ ಗುಪ್ತವಾಗಿ ನೆರೆವು ನೀಡುತ್ತಾರೆ. ಹಾಗೆಯೇ ಕುಂದಾಪುರವನ್ನು ಲಪಟಾಯಿಸುತ್ತಾರೆ. ಇವರೆಡು ಸೈನ್ಯದ ನೆರವಿನಿಂದ ಮತ್ತೆ ಉಲ್ಲಾಳನ್ನು ಮುತ್ತಿಗೆ ಹಾಕುತ್ತಾರೆ. ಈ ಬಾರಿಯೂ ಅಬ್ಬಕ್ಕ ಧೈರ್ಯದಿಂದ ಕಾದಾಡುತ್ತಾಳೆ. ಆದರೆ ಯುದ್ಧವು ಯಾರ ಪರವಾಗಿಯೂ ನಿರ್ಣಯವಾಗದಾದಾಗ ಶಾಂತಿಯ ಒಡಂಬಡಿಕೆಗೆ ಬರುತ್ತಾರೆ. ಇದರ ಪರಿಣಾಮವಾಗಿ ಅಬ್ಬಕ್ಕಳು ಇಂತಿಷ್ಟು ದೇಣಿಗೆಯನ್ನು ಪೋರ್ಚುಗೀಯರಿಗೆ ಕೊಡಬೇಕೆಂದು ನಿರ್ಧರಿಸುತ್ತಾರೆ.
ಅಬ್ಬಕ್ಕ ಇದನ್ನು ಅನುಸರಿಸುವುದಿಲ್ಲಾ. ಬದಲಾಗಿ ಆಕೆಯು ಅವರ ಮೇಲೆ ಇದರ ಪ್ರತಿಯಾಗಿ ದಂಡೆತ್ತಿ ಹೋಗುತ್ತಾಳೆ. ೧೫೭೦ರಲ್ಲಿ ಆಕೆ ವಿಜಾಪುರದ ಸುಲ್ತಾನ ಮತ್ತು ಕ್ಯಾಲಿಕಟ್-ನ ಝಾಮೊರಿನ್-ರೊಂದಿಗೆ ಜೊತೆಗೂಡಿ ಮಂಗಳೂರಿನಲ್ಲಿ ಹೊಸದಾಗಿ ಕಟ್ಟಿದ ಪೋರ್ಚುಗೀಯರ ಕೋಟೆಯ ಮೇಲೆ ದಾಳಿ ಮಾಡಿ ಅದನ್ನು ನಾಶ ಮಾಡುತ್ತಾಳೆ. ಪೋರ್ಚುಗೀಯರು ಇದರಿಂದ ತಲ್ಲಣಗೊಳ್ಳುತ್ತಾರೆ. ಅವಳ ಸತತ ಭೀತಿ ಅವರ ಗುಂಡಿಗೆಯನ್ನೇ ಛಿದ್ರಗೊಳಿಸುತ್ತದೆ.ಆದರೆ ದುರ್ದೈವಶಾತ್ ಮಂಗಳೂರಿನಲ್ಲಿ ಕೋಟೆಯನ್ನು ನಾಶ ಮಾಡಿ ಬರುವಾಗ ದಾರಿ ಮಧ್ಯದಲ್ಲಿ ಕ್ಯಾಲಿಕಟ್-ನಿಂದ ಬಂದ ಸೇನಾದಳದ ಅಧಿಕಾರಿಯನ್ನು ಪೋರ್ಚುಗೀಯ ಸೈನಿಕರು ಕೊಲ್ಲುತ್ತಾರೆ. ಮತ್ತು ಇನ್ನೊಂದಡೆ ಅಬ್ಬಕ್ಕಳ ಗಂಡನನ್ನು ಸೆರೆಯಾಳಗಿಸುತ್ತಾರೆ. ಅವಳಿಗೆ ನೆರೆರಾಜ್ಯದ ಬೆಂಬಲ ಸಿಗದಂತೆ ಚಾಲೂಗಿರಿಯಿಂದ ಅವಳನ್ನು ಸೋಲಿಸುವ ತಂತ್ರವನ್ನು ಹೂಡುತ್ತಾರೆ. ೧೫೮೧ರ ಒಂದು ಮುಂಜಾವಿನಲ್ಲಿ ಗೋವಾದ ವೈಸ್ರಾಯಿ ತನ್ನ ೩೦೦೦ ಜನ ಸೇನಾ ಬಲದಿಂದ ಹಾಗೂ ಅನೇಕ ಯುದ್ಧ ನೌಕೆಗಳೊಂದಿಗೆ ಉಲ್ಲಾಳ ಬಂದರು ಮೇಲೆ ಅಪ್ಪಳಿಸುತ್ತಾನೆ. ಇದನ್ನು ನಿರೀಕ್ಷೆಯೆ ಮಾಡದ ಅಬ್ಬಕ್ಕ ಅಂದು ತನ್ನ ಮನೆದೇವರಾದ ಸೋಮನಾಥೇಶ್ವರನ ಗುಡಿಯಿಂದ ಮರಳಿ ಬರುತ್ತಿರುತ್ತಾಳೆ. ಆದರೂ ಆಕ್ರಮಣದ ಸುದ್ದಿ ತಿಳಿದೊಡನೆಯೇ ಯುದ್ಧ ಉಡಪನ್ನು ಧರಿಸಿ, ಕುದುರೆ ಏರಿ, ವೈರಿಗಳನ್ನು ಒದ್ದೊಡಿಸಲು ಮುಂದಾಗುತ್ತಾಳೆ. ಈ ಸಲವೂ ಘೋರ ವಿರೋಧವನ್ನು ನೀಡುತ್ತಾಳೆ. “ತಾಯ್ನಾಡನ್ನು ರಕ್ಷಿಸಿ, ವೈರಿಗಳನ್ನು ನೆಲದ ಮೇಲಾಗಲಿ ಸಮುದ್ರದಲ್ಲಾಗಲಿ ಹೋರಾಡಿ ನಮ್ಮ ದಡದಿಂದಾಚೆ ಓಡಿಸಿ” ಹೇಳುತ್ತಾ, ಸೈನ್ಯವನ್ನು ಹುರಿದುಂಬಿಸುತ್ತಾ ಶತ್ರುಪಡೆಯನ್ನು ಎದುರಿಸುತ್ತಾಳೆ. ಆದರೆ ಆ ಯುದ್ಧವೆ ಅಬ್ಬಕ್ಕಳ ಕಡೆಯ ಕದನವಾಯಿತು. ಈ ಯುದ್ಧದಲ್ಲಿ ಅಬ್ಬಕ್ಕಳ ಮೇಲೆ ಗುಂಡಿನ ಮಳೆಯನ್ನೇ ಹಾರಿಸಿದರು. ಗಾಯಗೊಂಡು ಬಿದ್ದ ಇವಳನ್ನು ರಣರಂಗದಿಂದ ದೂರ ತರುತ್ತಾರೆ. ಕೊನೆಯ ಉಸಿರು ಎಳೆಯುತ್ತಿದ್ದರೂ ತನ್ನ ಸೈನಿಕರಿಗೆ ನಾಡಿನ ಸ್ವಾತಂತ್ರಕ್ಕಾಗಿ ಪ್ರಾಣಭಯವನ್ನೂ ಬಿಟ್ಟು ಹೋರಾಡಿ ಎಂದು ಘರ್ಜಿಸುತ್ತಾ, ಉತ್ತೇಜಿಸುತ್ತಾನೇ ವೀರಮರಣ ಹೊಂದಿದಳು.ಅಬ್ಬಕ್ಕ ರಾಣಿ ಆಳ್ವಿಕೆಯ ಅನೇಕ ಕುರುಹುಗಳು,ಅವಳು ಪ್ರಾರ್ಥನೆ ಸಲ್ಲಿಸುತ್ತಿದ್ದ ಜೈನ ಬಸದಿ,ದೇವಾಲಯಗಳು ಇಂದಿಗೂ ಮಂಗಳೂರಿನ ಉಳ್ಳಾಲದಲ್ಲಿ ಕಾಣಬಹುದು. ಪ್ರತೀ ವರ್ಷ ಅಬ್ಬಕ್ಕ ರಾಣಿ ನೆನಪಿನಲ್ಲಿ ಅಬ್ಬಕ್ಕ ಉತ್ಸವವನ್ನು ಉಳ್ಳಾಲದಲ್ಲಿ ಆಚರಿಸುತ್ತಾರೆ.


ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಪಿಸಿಒಡಿ

ಪಿಸಿಒಡಿ ಡಿಸೀಸ್ ಬಗೆಗಿನ ಕೆಲವೊಂದು ವಿಷಯ ಹಾಗೂ ಮನೆ ಮದ್ದು

ಎ.ಪಿ.ಜೆ. ಅಬ್ದುಲ್ ಕಲಾಂ

ಎ.ಪಿ.ಜೆ. ಅಬ್ದುಲ್ ಕಲಾಂ