ಮಕ್ಕಳು ಬೆಳೆಯಬೇಕಾದರೆ ಪೌಷ್ಟಿಕ ಆಹಾರ ಅವಶ್ಯಕ. ಈಗೀನ ಜೀವನದಲ್ಲಿ ಅನೇಕ ಬಾರಿ ಮಕ್ಕಳ ಕಡೆಗೆ ಗಮನ ಕೊಡಲು ಅಸಾಧ್ಯವಾದಾಗ ತಾಯಂದಿರು ರೆಡಿ ಫುಡ್ಗಳನ್ನು ಕೊಡುತ್ತಾರೆ. ಇಂತಹ ರೆಡಿ ಫುಡ್ಗಳು ಮಕ್ಕಳ ಹೊಟ್ಟೆ ತುಂಬಸುತ್ತದೆ , ಹೊರತು ಆರೋಗ್ಯ ಕಾಪಾಡೋಲ್ಲ. ಈಗಿನ ಮಕ್ಕಳು ಬಿಸ್ಕೆಟ್, ಚಾಕೊಲೇಟ್, ಕರಿದ ಪದಾರ್ಥಗಳನ್ನು ತಿನ್ನುವುದರಿಂದ ಊಟ ಮಾಡಲು ಹಿಂಜರಿಯುತ್ತಾರೆ. ಕೆಲವು ಮಕ್ಕಳಿಗೆ ಊಟ ಮಾಡಿಸಬೇಕಾದರೆ ತಾಯಿಯ ಪಾಡು ಅಷ್ಟೆ. ಹಾಗಾಗಿ ಬೆಳೆಯುವ ಮಕ್ಕಳಲ್ಲಿ ಅನೇಕ ಕೊರತೆಗಳು ಕಾಣಬಹುದು.
ಸ್ಥೂಲಕಾಯದ ತೊಂದರೆ ಬರೀ ದೊಡ್ಡವರಿಗೆ ಮಾತ್ರ ಅಲ್ಲ, ಮಕ್ಕಳಲ್ಲಿ ಕೂಡಾ ಹೆಚ್ಚುತ್ತಿರುವುದನ್ನು ಕಾಣಬಹುದು. 3 ರಿಂದ 11ನೇ ವರ್ಷದವರೆಗಿನ ಮಕ್ಕಳ ಆಹಾರ ಶೈಲಿಯು ಅವರ ಭೌತಿಕ, ದೈಹಿಕ, ಮಾನಸಿಕ ಮಟ್ಟದ ಮೇಲೆ ಪ್ರಭಾವ ಬೀರುತ್ತದೆ. ಆಹಾರದ ಶೈಲಿಯು ಕೊಂಚ ವಿಭಿನ್ನವಾದರೂ ಕ್ಯಾನ್ಸರ್, ಸಕ್ಕರೆ, ಹೃದಯ ರೋಗ, ಮಧುಮೇಹ ಬರುತ್ತಿರುವುದನ್ನು ಕಾಣಬಹುದು. ಅದಕ್ಕಾಗಿ ಪೋಷಕರು ತಮ್ಮ ಮಕ್ಕಳು ಸೂಕ್ತ ಆಹಾರ ಪದ್ಧತಿ ಅನುಕರಿಸುವಂತೆ ನೋಡಿಕೊಲ್ಲುವುದೇ ಒಳ್ಳೆಯದು.
ಮೊದಲ ೬ ತಿಂಗಳು

ಮಗು ಹುಟ್ಟಿದ ದಿನದಿಂದ ಆರು ತಿಂಗಳವರೆಗೆ ತಾಯಿಯ ಹಾಲು ಬಿಟ್ಟರೆ ಬೇರೇನೂ ಆಹಾರದ ಅಗತ್ಯ ಇರುವುವುದಿಲ್ಲ, ನೀರು ಕೂಡ .ತಾಯಿ ಒಳ್ಳೆಯ ಆಹಾರ ತೆಗೆದುಕೊಂಡರೆ ಸಾಕು. ಮಗುವಿಗೆ ಬೇಕಾಗುವ ಪೋಷಕಾಂಶ ಸಿಗುತ್ತದೆ.ಯಾವುದೇ ಕಾರಣಕ್ಕೂ ಎದೆ ಹಾಲು ಮಾತ್ರ ಕೊಡದೆ ಇರಬಾರದು.ಮಗುವಿಗೆ ತಾಯಿ ಹಾಲು ಮಾತ್ರ ಅಮೃತಕ್ಕೆ ಸಮ.ತಾಯಿಯು ತನ್ನ ಶರೀರದಿಂದ ಸಾಕಷ್ಟು ಪ್ರಮಾಣದಲ್ಲಿ ಪೌಷ್ಟಿಕಾಂಶಗಳನ್ನು ಕಳೆದುಕೊಳ್ಳುವುದರಿಂದ ಹೆಚ್ಚಿನ ಆಹಾರವನ್ನು ಸೇವಿಸುವುದು ಅತ್ಯವಶ್ಯಕ.
ಆರು ತಿಂಗಳ ನಂತರ ಮಕ್ಕಳು ಅಂಬೆಗಾಲಿಡುತ್ತ ತೊದಲು ನುಡಿಯನ್ನು ಪ್ರಾರಂಭಿಸುವ ಕಾಲವಿದು. ಈ ಸಮಯದಲ್ಲಿ ತಾಯಿಯ ಹಾಲಿಗೆ ಹೊಂದಿಕೊಂಡು ಬೆಳೆಯುತ್ತಾರೆ. ಆದ್ದರಿಂದ ಅವರಿಗೆ ಯಾವುದೇ ಆಹಾರವನ್ನು ಅತಿ ಹೆಚ್ಚಾಗಿ ನೀಡುವ ಅವಶ್ಯಕತೆ ಇಲ್ಲ. ಮೊದಲಿಗೆ ರಾಗಿ, ದವಸ ಧಾನ್ಯಗಳನ್ನು ಪುಡಿ ಮಾಡಿ, ಬೇಯಿಸಿ ನಿಯಮಿತವಾಗಿ ತಿನಿಸಲು ಆರಂಭ ಮಾಡಬೇಕು. ಈ ವಯಸ್ಸಿನಲ್ಲಿ ಮಕ್ಕಳಲ್ಲಿ ಹಸಿವು ಹೆಚ್ಚಾಗಿರುತ್ತದೆ. ಹಲ್ಲುಗಳು ಕೂಡ ಸ್ಪಷ್ಟವಾಗಿ ಬಂದಿರುವುದಿಲ್ಲ . ಆದ್ದರಿಂದ ಗಟ್ಟಿ ಪದಾರ್ಥವನ್ನು ತಿನ್ನಿಸಿದರೆ ಅಜೀರ್ಣವಾಗುತ್ತದೆ.
ಮಕ್ಕಳಿಗೆ ಆಹಾರ ಕೊಡುವಾಗ ನೀಡಬೇಕಾದ ಕೆಲವು ಗಮನಗಳು. ಮಕ್ಕಳಿಗೆ ಆಹಾರವನ್ನು ದ್ರವ ರೂಪದಲ್ಲಿ ಮಾಡಿ ಕೊಡಬೇಕು. ಮಕ್ಕಳ ಆಹಾರ ಚೆನ್ನಾಗಿ ಬೆಂದಿರಬೇಕು. ಹಣ್ಣುಗಳನ್ನು ಕೊಡುವಾಗ ಚಿಪ್ಪೆ ತೆಗೆದು ಅದರ ಬೀಜ ತೆಗೆದು ಮೆದು ಭಾಗವನ್ನು ಮಾತ್ರ ಕೊಡಬೇಕು. ಹಣ್ಣುಗಳಿಗೆ ಉಪ್ಪು, ಸಕ್ಕರೆ, ಜೇನು ಅಂತ ಬೆರಸದೆ ನೈಸರ್ಗಿಕ ರುಚಿಯಲ್ಲಿ ತಿನ್ನಲು ಕೊಡಬೇಕು.
ಅಕ್ಕಿಯಿಂದ, ರಾಗಿಯಿಂದ ತಯಾರಿಸುವ ದ್ರವರೂಪದ ಆಹಾರ ಮಕ್ಕಳಿಗೆ ಒಳ್ಳೆಯದು.ಈ ರೀತಿ ಕೊಡುವುದರಿಂದ ಮಗುವಿಗೆ ಬೇಗ ಹೊಟ್ಟೆ ಹಸಿಯುವುದಿಲ್ಲ, ಮತ್ತು ಮಕ್ಕಳ ಬೆಳವಣಿಗೆಗೆ ಸಹ ಒಳ್ಳೆಯದು.ಮಗುವಿಗೆ 2 ವರ್ಷದ ವರೆಗೆ ಬೆಳಗ್ಗೆ ಎದ್ದ ತತ್ಕ್ಷಣ, ರಾತ್ರಿ ಮಲಗುವ ಮುಂಚೆ ಹಾಗೂ ಮಗುವಿಗೆ ಬೇಕೆನಿಸಿದಾಗೆಲ್ಲ ತಾಯಿಯ ಎದೆ ಹಾಲನ್ನು ತಪ್ಪದೇ ನೀಡಬೇಕು.
ಮಗುವಿನಲ್ಲಿ ಮುಖ್ಯವಾಗಿ ಮೊದಲ ಎರಡು ವರ್ಷಗಳಲ್ಲಿ ಉತ್ತಮವಾದ ಪೋಷಕಾಂಶ ದೊರೆತಲ್ಲಿ, ಅದು ರೋಗ ನಿರೋಧಕ ಶಕ್ತಿಯನ್ನು ಪಡೆದು ಮುಂದೆ ದೀರ್ಘಕಾಲಿಕ ವ್ಯಾಧಿಯಿಂದ ಬಳಲುವ ಸಂಭವಗಳು ಕಡಿಮೆಯಾಗುತ್ತವೆ. ಅಸಮರ್ಪಕವಾದ ಆಹಾರ ಪೋಷಣೆಯಿಂದಾಗಿ ಮಗುವಿನ ಆರೋಗ್ಯದಲ್ಲಿ ಏರುಪೇರು ಉಂಟಾಗಿ ಅನೇಕ ರೋಗಗಳಿಗೆ ತುತ್ತಾಗಲು ದಾರಿಯಾಗುತ್ತದೆ.
ಈ ಕೆಲವೊಂದು ಆಹಾರಗಳನ್ನು ನೀಡಬಹುದು.

೧.ದ್ವಿದಳ ಧಾನ್ಯಗಳು, ಬೇಳೆ ಕಾಳುಗಳುಗಳನ್ನು ಸೇರಿಸಿ ಹಾಲಿನಲ್ಲಿ ಮಾಡಿದ ಮಣ್ಣಿಯನ್ನು ತಿನ್ನಿಸಬಹುದು
೨.ಬೇಯಿಸಿದ ಆಲೂಗಡ್ಡೆ, ಕ್ಯಾರೆಟ್, ಬೀಟ್ರೂಟ್ , ಇನ್ನು ಕೆಲವು ತರಕಾರಿಗಳು, ಬಾಳೆಹಣ್ಣು, ಪಪ್ಪಾಯ, ಆ್ಯಪಲ್ ಹಣ್ಣುಗಳನ್ನು ಮೆದು ಮಾಡಿಕೊಡಬಹುದು.
೩.ಪ್ರತೀ ದಿನ ಮನೆಯಲ್ಲಿ ಮಾಡುವ ತಿಂಡಿಗಳಾದ ಇಡ್ಲಿ, ದೋಸೆ, ಉಪ್ಪಿಟ್ಟು ಪುಡಿ ಮಾಡಿ ನೀಡಬಹುದು.
೪. ಪ್ರಾರಂಭದಲ್ಲಿ ತುಂಬಾ ತೆಳುವಾದ ಆಹಾರವನ್ನು ನೀಡಬೇಕು. ನಿಧಾನವಾಗಿ ದಪ್ಪಆಹಾರವನ್ನು ಹೆಚ್ಚು ಬಾರಿ ನೀಡಬೇಕು.
೫.ಮಗುವಿನ ಮೆದುಳು ಮತ್ತು ಶರೀರದ ಬೆಳವಣಿಗೆಗ ಕಬ್ಬಿಣಾಂಶ ತುಂಬಾ ಸಹಕಾರಿಯಾಗಿದೆ. ಆದ್ದರಿಂದ ಕಬ್ಬಿಣಾಂಶ ಜಾಸ್ತಿ ಇರುವ ಹಸಿರು ಸೊಪ್ಪು ತರಕಾರಿಗಳು, ಮೊಳಕೆ ಬರಿಸಿದ ಕಾಳುಗಳು, ಮೊಟ್ಟೆ, ಮಾಂಸ ಇವುಗಳನ್ನು ನೀಡಬಹುದು.
೬.ಆಹಾರದಲ್ಲಿ ಕಬ್ಬಿಣಾಂಶವನ್ನು ಜೀರ್ಣಿಸಿಕೊಳ್ಳುವ ಸಲುವಾಗಿ ವಿಟಮಿನ್ ಸಿ ಹೇರಳವಾಗಿರುವ ಕಿತ್ತಳೆ, ಮಾವು, ಕಲ್ಲಂಗಡಿ, ಟೊಮೆಟೊ, ನಿಂಬೆ ನೀಡಬೇಕು.
೭.ಶಕ್ತಿವರ್ಧನೆಗಾಗಿಕ್ಕೆ ತುಪ್ಪ ಅಥವಾ ತೆಂಗಿನ ಎಣ್ಣೆ ಸೇರಿಸುವುದು ಉತ್ತಮ.
೮.ಮೊಸರು ಇದು ಜೀರ್ಣಕ್ರಿಯೆಗೆ ಒಳ್ಳೆಯದು ಅಲ್ಲದೆ ಹಸಿವನ್ನು ಹೆಚ್ಚಿಸುತ್ತದೆ.
೯.ಮಾಂಸಾಹಾರಿಗಳಾದರೆ ಚಿಕನ್ ಕೂಡ ಒಳ್ಳೆಯದು. ಆಹಾರದಲ್ಲಿದ್ದರೆ ಬೆಳವಣಿಗೆಗೆ ಮುಖ್ಯವಾಗಿದೆ. ಇದರಲ್ಲಿ ಹೆಚ್ಚಿನ ಪ್ರೋಟೀನ್ ಅಂಶವಿದೆ. ಇದು ಮಕ್ಕಳ ಬೆಳವಣಿಗೆಗೆ ಮತ್ತು ಆರೋಗ್ಯಕ್ಕೆ ಉತ್ತಮ.
೧೦.ಓಮ ಇದು ಮಕ್ಕಳಿಗೆ ಗ್ಯಾಸ್ಟ್ರಿಕ್ ಆಗದ ಹಾಗೆ ಮಾಡಿ ಹಸಿವನ್ನು ಹೆಚ್ಚಿಸುತ್ತದೆ. ಇದನ್ನು ಆಹಾರದಲ್ಲಿ ಸೇರಿಸಿ ಕೊಡಿ.
ಪೂರಕ ಆಹಾರದೊಂದಿಗೆ ವಯಸ್ಸಿಗನುಗುಣವಾಗಿ ಸರಿಯಾದ ಸಮಯಕ್ಕೆ ನೀಡುವ ಚುಚ್ಚುಮದ್ದು, ಲಸಿಕೆಗಳನ್ನು ತಪ್ಪದೇ ನೀಡಬೇಕು.
ಬೇಡದ ಆಹಾರಗಳು :
ಅತಿಯಾದ ಚಾಕೋಲೇಟ್ಗಳು ಬೇಡ.
ಜಂಕ್ ಫುಡ್,ಅತಿ ತಂಪಾದ, ಅತಿ ಬಿಸಿಯಾದ ಆಹಾರವನ್ನು ನೀಡಬೇಡಿ.ಕಾಫಿ, ಟೀ ಸೇವನೆಯ ಅಭ್ಯಾಸವನ್ನು ಮಾಡಿಸಬೇಡಿರಿ. ಅತಿಯಾದ ತರಕಾರಿ,ಬೆಳೆಗಳು ಕೂಡ ಬೇಡ.
ಬೇಕಾಗಿರುವ ಆಹಾರಗಳು :
ಹಾಲು,ಹಣ್ಣಿನ ರಸಗಳು,ರಾಗಿ, ದವಸ ಧಾನ್ಯಗಳಿಂದ ಪುಡಿ ಮಾಡಿದ ಹಿಟ್ಟನ್ನು ಮಾಡಿ ತಿನ್ನಿಸಿದರೆ ಶಕ್ತಿ ಬರುತ್ತದೆ. ನೀರು ಕುಡಿಸುವುದನ್ನು ಮರೆಯಬೇಡಿ. ಮೊಸರು, ಬೆಣ್ಣೆ, ಹಾಲಿನ ಉತ್ಪನ್ನಗಳನ್ನು ಅತಿ ಹೆಚ್ಚಾಗಿ ಸೇವನೆ ಮಾಡಲು ಪ್ರೋತ್ಸಾಹಿಸಿ.ಮನೆ ಊಟ ಅಭ್ಯಾಸ ಒಳ್ಳೆಯದು.
ಮಕ್ಕಳಿಗೆ ಚಿಕ್ಕ ವಯಸ್ಸಿನಿಂದಲೇ ಅತಿಯಾಗಿ ತಿನ್ನಿಸುವುದನ್ನು ಕಲಿಸಿದರೆ ಬೊಜ್ಜು ತನ್ನಿಂದ ತಾನಾಗಿಯೇ ಬರುತ್ತದೆ. ಈಗಿನಿಂದಲೆ ಪೋಷಕರು ಮಕ್ಕಳಿಗೆ ಒಳ್ಳೆಯ ಆಹಾರ ಪದ್ಧತಿಯನ್ನು ಅನುಕರಿಸಿದರೆ ಆರೋಗ್ಯ ಮತ್ತು ಸುಂದರ ದೇಹವನ್ನು ಹೊಂದಿದ ಮಕ್ಕಳು ನಿಮ್ಮದಾಗುತ್ತಾರ
ಧನ್ಯವಾದಗಳು.