in

ಅಲೋವೆರಾ (ಲೋಳೆ ರಸ) ಒಂದು ಮನೆಯಲ್ಲಿದ್ದರೆ ಆರೋಗ್ಯಕ್ಕೆ ಒಳ್ಳೆಯದು, ಅಲ್ಲದೆ ವಾಸ್ತು ಪ್ರಕಾರನೂ ಒಳಿತು.

 ಅಲೋವೆರಾ ಸೂರ್ಯನ ಕಿರಣಗಳಿಂದ ರಕ್ಷಿಸಿಕೊಳ್ಳಲು ಹೆಚ್ಚಾಗಿ ಬಳಸಲಾಗುತ್ತಿದೆ. ಆದರೆ ಅಲೋವೆರಾ ಗಿಡದ ಒಳಗಿನ ಲೋಳೆ ವಿವಿಧ ಕಾಯಿಲೆಗಳಿಗೆ ಬಳಸಬಹುದು ಎಂದು ನಿಮಗೆ ತಿಳಿದಿದೆಯೇ…? ಹೌದು ಅಲೋವೆರಾವನ್ನು ರಸದ ರೂಪದಲ್ಲಿ ಸೇವಿಸಬಹುದು, ಔಷಧೀಯ ರೂಪದಲ್ಲಿ ಬಳಸಬಹುದು ಮತ್ತು ಚರ್ಮದ ಮೇಲೆ ಲೇಪಿಸಿಕೊಳ್ಳಬಹುದು. ಅಲೋವೆರಾವನ್ನು ಸುಮಾರು  ಭಾರಿ ನೀರಿನಿಂದ ತೊಳೆಯಬೇಕು ಅದರ ಮೇಲಿನ ಹಳದಿ ಬಣ್ಣ ಹೋದ ನಂತರ ಅದನ್ನು ಸೇವಿಸಬಹುದು. ಅಲೋವೆರಾದ ಲೋಳೆ ರಸವನ್ನು ಮಾಯಿಶ್ಚರೈಸರ್ ಆಗಿ ಬಳಸಬಹುದಾಗಿದೆ. ಜೀರ್ಣಕ್ರಿಯೆ ಮತ್ತು ಇತರ ಆಂತರಿಕ ಆರೋಗ್ಯ ಪ್ರಯೋಜನಗಳಿಗಾಗಿ ಅಲೋವೆರಾವನ್ನು ಜ್ಯೂಸ್ ರೀತಿಯಲ್ಲಿ ತಯಾರಿಸಿ ಸೇವಿಸಬಹುದಾಗಿದೆ.

 ಇತ್ತೀಚಿಗಿನ ದಿನಗಳಲ್ಲಿ ಸೌಂದರ್ಯವರ್ಧಕವಾಗಿ ಅಲೋವೆರಾವನ್ನು ಬಳಸದೆ ಇರುವವರು ತುಂಬಾ ಕಡಿಮೆ. ಯಾಕೆಂದರೆ ಅಲೋವೆರಾದಲ್ಲಿ ಇರುವಂತಹ ಸೌಂದರ್ಯವರ್ಧಕ ಗುಣಗಳು ಬೇರೆ ಯಾವುದೇ ರೀತಿಯ ಸಾಮಗ್ರಿಗಳಲ್ಲೂ ನಿಮಗೆ ಸಿಗಲಾರದು. ಹೀಗಾಗಿ ಅಲೋವೆರಾವು ತುಂಬಾ ಪರಿಣಮಕಾರಿಯಾಗಿ ಸೌಂದರ್ಯವರ್ಧಕ ಉತ್ಪನ್ನಗಳಲ್ಲೂ ಬಳಕೆ ಮಾಡಲಾಗುತ್ತಾ ಇದೆ.

ಮೊಡವೆಗೆ

ಅಲೋವೆರಾ (ಲೋಳೆ ರಸ) ಒಂದು ಮನೆಯಲ್ಲಿದ್ದರೆ ಆರೋಗ್ಯಕ್ಕೆ ಒಳ್ಳೆಯದು, ಅಲ್ಲದೆ ವಾಸ್ತು ಪ್ರಕಾರನೂ ಒಳಿತು.

 ಬೇಸಿಗೆ ಸಮಯದಲ್ಲಿ ಹೆಚ್ಚಿನ ಜನರಲ್ಲಿ ಮೊಡವೆ ಹಾಗೂ ಬೊಕ್ಕೆಗಳು ಕಾಣಿಸಿಕೊಳ್ಳುವುದು ಸಾಮಾನ್ಯ ಸಂಗತಿಯಾಗಿದೆ. ಯಾಕೆಂದರೆ ಗಾಳಿಯಲ್ಲಿ ಹೆಚ್ಚಿನ ಪ್ರಮಾಣ ಮೊಶ್ಚಿರೈಸರ್ ಇರುವ ಕಾರಣದಿಂದಾಗಿ ಹೀಗೆ ಆಗುವುದು ಇದೆ. ಮೊಡವೆಗಳು ಕೆಲವೊಂದು ಸಂದರ್ಭದಲ್ಲಿ ತುಂಬಾ ನೋವುಂಟು ಮಾಡುವುದು. ಇದರಿಂದ ಅಲೋವೆರಾವನ್ನು ಹಚ್ಚಿಕೊಂಡರೆ ಆಗ ಮೊಡವೆಗಳಿಂದ ಆಗುವಂತಹ ನೋವು ಹಾಗೂ ಕಿರಿಕಿರಿಗೆ ಪರಿಹಾರ ಒದಗಿಸುವುದು.

ತಲೆಹೊಟ್ಟು

ಅಲೋವೆರಾ (ಲೋಳೆ ರಸ) ಒಂದು ಮನೆಯಲ್ಲಿದ್ದರೆ ಆರೋಗ್ಯಕ್ಕೆ ಒಳ್ಳೆಯದು, ಅಲ್ಲದೆ ವಾಸ್ತು ಪ್ರಕಾರನೂ ಒಳಿತು.

 ತಲೆಹೊಟ್ಟು ಎನ್ನುವುದು ಚರ್ಮದ ಸಮಸ್ಯೆ ಅಲ್ಲದೆ ಇದ್ದರೂ ಇದು ತಲೆಬುರುಡೆಯ ಸಮಸ್ಯೆಯಾಗಿರುವುದು. ಹೀಗಾಗಿ ಇದು ಚರ್ಮದ ಮೇಲೆ ಪರಿಣಾಮ ಬೀರುವುದು. ಇದರಿಂದ ಅಲೋವೆರಾ ಹಚ್ಚಿಕೊಂಡರೆ ಅದು ತಲೆಹೊಟ್ಟು ನಿವಾರಣೆ ಮಾಡುವುದು.  

ಸುಟ್ಟ ಗಾಯಗಳಿಗೆ ಅಲೋವೆರಾ ರಾಮಬಾಣ

 ಚರ್ಮ ಸುಟ್ಟು ಹೋಗಿದ್ದರೆ ಅದರಿಂದ ಸಾಕಷ್ಟು ಉರಿ ಮತ್ತು ನೋವನ್ನು ಅನುಭವಿಸಬೇಕಾಗುತ್ತದೆ. ಆದರೆ ಅಲೋವೆರಾ ಹೆಚ್ಚು ತಂಪಿನ ಪ್ರಭಾವವನ್ನು ಚರ್ಮದ ಮೇಲೆ ಉಂಟುಮಾಡುವುದರಿಂದ ನೋವು ಉಪಶಮನವಾಗಿ ನಿಮ್ಮ ಚರ್ಮ ಬಹಳ ಬೇಗನೆ ಸುಟ್ಟ ಪ್ರಭಾವದಿಂದ ವಾಸಿಯಾಗುತ್ತದೆ.

ಡ್ರೈ ಸ್ಕಿನ್

 ಚಿಟಿಕೆ ಅರಿಶಿನ, ಒಂದು ಚಮಚ ಜೇನುಹನಿ, ಒಂದು ಚಮಚ ಹಾಲು, ರೋಸ್ ವಾಟರ್  ಹನಿಗಳನ್ನು ಅಲೋವೆರಾ ಪೇಸ್ಟ್ಗೆ ಬೆರೆಸಿ, ಮೈಗೆ ಹಚ್ಚಿಕೊಂಡರೆ, ಡ್ರೈ ಸ್ಕಿನ್ ನಿವಾರಣೆ ಆಗುತ್ತದೆ.

ಅಜೀರ್ಣ ಸಮಸ್ಯೆ

 ಅಜೀರ್ಣ ಸಂಬಂಧೀ ಸಮಸ್ಯೆಗಳಾದ ಮಲಬದ್ಧತೆ, ಅಸಿಡಿಟಿ ಅಥವಾ ಗ್ಯಾಸ್ಟ್ರಿಕ್ ಸಮಸ್ಯೆಗಳಿಗೆ ಅಲೋವೆರಾ ಜ್ಯೂಸ್ ಪ್ರತಿನಿತ್ಯ ಕುಡಿಯುವುದರಿಂದ ಪರಿಹಾರ ಸಿಗುವುದು.

ರಕ್ತಹೀನತೆಗೆ

 ಅಜೀರ್ಣ ಸಮಸ್ಯೆಯ ಜತೆಗೆ, ರಕ್ತಹೀನತೆ, ಹಳದಿ ರೋಗ ಮುಂತಾದ ಸಮಸ್ಯೆಗಳಿಗೂ ಪ್ರತಿನಿತ್ಯ ಅಲ್ಯುವೀರಾ ಜ್ಯೂಸ್ ಕುಡಿಯುವುದು ಒಳ್ಳೆಯದು ಎಂದು ಆಯುರ್ವೇದ ಹೇಳುತ್ತದೆ.

 

ಬಿಸಿಲಿನ ಕಲೆಗಳಿಗೆ

 ಬಿಸಿಲಿಗೆ ಹೊರಗಡೆ ಹೋದರೆ ಆಗ ಚರ್ಮದ ಮೇಲೆ ಕಪ್ಪು ಕಲೆಗಳು ಮೂಡುವುದು ಖಚಿತ. ಬಿಸಿಲಿನಿಂದಾಗಿ ಚರ್ಮದ ಬಣ್ಣವು ಕುಂದುವುದು. ಬಿಸಿಲಿನಿಂದ ಚರ್ಮದ ಬಣ್ಣ ಕುಂದಿರುವ ಸಮಸ್ಯೆ ನಿವಾರಣೆ ಮಾಡಲು ಅರ್ಧ ಲಿಂಬೆ ರಸಕ್ಕೆ ಒಂದು ಚಮಚ ಅಲೋವೆರಾ ಲೋಳೆರಸ ಹಾಕಿಕೊಂಡು ಸರಿಯಾಗಿ ಅದನ್ನು ಮಿಶ್ರಣ ಮಾಡಿ. ಇದರ ಬಳಿಕ ಮುಖಕ್ಕೆ ಹಚ್ಚಿಕೊಳ್ಳಿ. ಲಿಂಬೆಯಲ್ಲಿ ನೈಸರ್ಗಿಕವಾಗಿ ಬ್ಲೀಚಿಂಗ್ ಗುಣಗಳು ಇವೆ ಮತ್ತು ಅಲೋವೆರಾವು ಮೂಲ ಮಾಸ್ಕ್ ಆಗಿ ಕೆಲಸ ಮಾಡುವುದು. ಇದು ಚರ್ಮಕ್ಕೆ ತೇವಾಂಶ ನೀಡುವುದು. ಲಿಂಬೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿನ ಸಿಟ್ರಿಕ್ ಆಮ್ಲವು ಇರುವ ಪರಿಣಾಮವಾಗಿ ಕೆಲವೊಂದು ಸಲ ನೇರವಾಗಿ ಲಿಂಬೆಯನ್ನು ಹಚ್ಚಿಕೊಂಡರೆ ಅದರಿಂದ ಸಮಸ್ಯೆಯಾಗಬಹುದು. ಹೀಗಾಗಿ ಅಲೋವೆರಾದ ಜತೆಗೆ ಸೇರಿಸಿಕೊಂಡು ಹಚ್ಚಿದರೆ ಅದು ಆಮ್ಲವನ್ನು ಸಮತೋಲನದಲ್ಲಿ ಇಡುವುದು. ಹೀಗಾಗಿ ತುಂಬಾ ಸೂಕ್ಷ್ಮವಾದ ಚರ್ಮಕ್ಕೂ ಇದು ನೆರವಾಗುವುದು.

ರೋಗನಿರೋಧಕ ಶಕ್ತಿ

 ಅಲೋವೆರಾದಲ್ಲಿ ವಿಟಮಿನ್ ಮತ್ತು ಮಿನರಲ್ಸ್ ಗಳು ಅಧಿಕವಿರುತ್ತವೆ. ಇದರ ಲೋಳೆ ಸೇವನೆಯಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಅಲೋವೆರಾದ ಜೆಲ್ಅನ್ನು ಪ್ರತಿನಿತ್ಯ ಒಂದರಿಂದ ಮೂರು ಔನ್ಸಗಳಷ್ಟು ಸೇವಿಸುವುದರಿಂದ ಜೀರ್ಣಕ್ರಿಯೆ ಮತ್ತು ಪಚನಶಕ್ತಿಯು ಸುಧಾರಿಸುತ್ತದೆ.

ಮಲಬದ್ಧತೆ ದೂರ

 ಅಲೋವೆರಾ ಜ್ಯೂಸನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಮಲಬದ್ಧತೆ ದೂರವಾಗುತ್ತದೆ. ಕರುಳಿನ ಸಮಸ್ಯೆಯೂ ಬರುವುದಿಲ್ಲ. ನಿತ್ಯ ಒಂದು ಗ್ಲಾಸ್ ಅಲೋವೆರಾ ಜ್ಯೂಸನ್ನು ಸೇವಿಸುವುದರಿಂದ ಬೊಜ್ಜು ಕಡಿಮೆಯಾಗುತ್ತದೆ. ಹಸಿವು ಕಡಿಮೆಯಾಗಿ ಆಹಾರ ನಿಯಂತ್ರಣ ಸಾಧ್ಯವಾಗುತ್ತದೆ

ಜೀರ್ಣಕ್ರಿಯೆಗೆ ಬಲು ಸಹಕಾರಿ

 ಅಲೋವೆರಾ ವಿರೇಚಕ ಗುಣಗಳನ್ನು ಹೊಂದಿದೆ ಮತ್ತು ಇದನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸಿದಾಗ ಜೀರ್ಣ ಕ್ರಿಯೆಗೆ ಸಹಾಯ ಮಾಡುತ್ತದೆ. ಅನಾರೋಗ್ಯಕರ ಕರುಳು ಅಥವಾ ಸದಾ ಅಜೀರ್ಣತೆಯ ಆರೋಗ್ಯವು ಸಾಮಾನ್ಯವಾಗಿ ಮನುಷ್ಯನ ದೇಹದ ತೂಕ ಹೆಚ್ಚಾಗುವುದಕ್ಕೆ ಸಂಬಂಧ ಹೊಂದಿದೆ. ಆರೋಗ್ಯಕರ ಜೀರ್ಣಾಂಗ ವ್ಯವಸ್ಥೆಯು ಆಹಾರದ ಸರಿಯಾದ ಚಯಾಪಚಯ ಕ್ರಿಯೆ ನಡೆಸಿ ಮತ್ತು ದೇಹದಿಂದ ಬೇಡದ ತ್ಯಾಜ್ಯವನ್ನು ಉತ್ತಮವಾಗಿ ಹೊರ ಹಾಕಲು ಸಹಕರಿಸುತ್ತದೆ. ಇದು ತೂಕ ನಷ್ಟಕ್ಕೆ ಕೂಡ ಸಹಾಯ ಮಾಡುತ್ತದೆ.

ಮನೆಯಲ್ಲಿ ಅಲೋವೆರಾ ಎಣ್ಣೆಯ ತಯಾರಿಕೆ

ಅಲೋವೆರಾ (ಲೋಳೆ ರಸ) ಒಂದು ಮನೆಯಲ್ಲಿದ್ದರೆ ಆರೋಗ್ಯಕ್ಕೆ ಒಳ್ಳೆಯದು, ಅಲ್ಲದೆ ವಾಸ್ತು ಪ್ರಕಾರನೂ ಒಳಿತು.

 ಈ ಎಣ್ಣೆಯನ್ನು ತಯಾರಿಸಲು ಅಲೋವೆರಾ ಜೆಲ್ ಮತ್ತು ತೆಂಗಿನ ಎಣ್ಣೆ ಬೇಕಾಗುತ್ತದೆ. ಮೊದಲು ಅಲೋವೆರಾ ಗಿಡವನ್ನು ತೆಗೆದುಕೊಂಡು ಅಲೋವೆರಾ ಜೆಲ್ ತೆಗೆಯಿರಿ. ಮಿಕ್ಸರ್ ಗ್ರೈಂಡರ್ನಲ್ಲಿ ಅಲೋವೆರಾ ತಿರುಳನ್ನು ಹಾಕಿ. ನಂತರ ಅಲೋವೆರಾವನ್ನು ತೆಗೆದುಕೊಂಡು ಅದನ್ನು ಪಕ್ಕಕ್ಕೆ ಇರಿಸಿ. ಬಾಣಲೆಯಲ್ಲಿ ತೆಂಗಿನ ಎಣ್ಣೆ ಮತ್ತು ಅಲೋವೆರಾ ಹಾಕಿ. ತೈಲ ಕ್ರಮೇಣ ಕಂದು ಬಣ್ಣಕ್ಕೆ ತಿರುಗುತ್ತದೆ. ಎಣ್ಣೆಯನ್ನು ತಣ್ಣಗಾಗಲು ಬಿಡಿ ಮತ್ತು ನಂತರ ಫಿಲ್ಟರ್ ಮಾಡಿದರೆ ಅಲೋವೆರಾ ಎಣ್ಣೆ ಸಿದ್ಧವಾಗುತ್ತದೆ.

ರಕ್ತದೊತ್ತಡ(BP) ಕಡಿಮೆ ಇದ್ದರೆ, ಅಲೋವೆರಾವನ್ನು ಬಳಸಬೇಡಿ

 ರಕ್ತದೊತ್ತಡ ಕಡಿಮೆಯಾಗುತ್ತಿದ್ದರೆ ಅಲೋವೆರಾ ಬಳಸುವುದನ್ನು ತಪ್ಪಿಸಿ. ಅಲೋವೆರಾ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ, ರಕ್ತದೊತ್ತಡ ಕಡಿಮೆಯಾಗಿದ್ದರೆ, ಅದನ್ನು ಸೇವಿಸುವುದರಿಂದ ಹಾನಿಯಾಗಬಹುದು.

ನಿರ್ಜಲೀಕರಣ ಅಥವಾ ಅತಿಸಾರವನ್ನು ತಪ್ಪಿಸಿ

ನಿರ್ಜಲೀಕರಣ ಅಥವಾ ಅತಿಸಾರವಿದ್ದಾಗ ಅಲೋವೆರಾದ ಬಳಕೆ ಅತ್ಯಂತ ಅಪಾಯಕಾರಿ. ಅಲೋವೆರಾ ಜೆಲ್ ತಿನ್ನುವುದು ಅಥವಾ ಅದರ ರಸವನ್ನು ಕುಡಿಯುವುದು ಎರಡೂ ಅಸ್ವಸ್ಥತೆಗಳನ್ನು ಹೆಚ್ಚಿಸಬಹುದು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಸಕ್ಕರೆ ಬಳಸದೆ ಆರೋಗ್ಯಕರವಾದ ಜ್ಯೂಸ್ ಗಳು

ಹಿತ್ತಲ ಗಿಡಗಳ ಔಷಧಿ ಗುಣಗಳು

ಹಿತ್ತಲ ಗಿಡಗಳ ಔಷಧಿ ಗುಣಗಳು