ಚಳಿಗಾಲದಲ್ಲಿ ಮೈ ಬೆಚ್ಚಗೆ ಇರುವಂತೆ ಏನಾದರೂ ತಿನ್ನಬೇಕು ಎನಿಸುತ್ತದೆ. ಎಣ್ಣೆಯಲ್ಲಿ ಕರಿದ ಆಹಾರ ಪದಾರ್ಥಗಳನ್ನು ಹೆಚ್ಚು ತಿನ್ನುತ್ತಾ ಹೋದರೆ ಅದರಿಂದ ಹೃದಯದ ಆರೋಗ್ಯಕ್ಕೆ ತೊಂದರೆ ಕಟ್ಟಿಟ್ಟ ಬುತ್ತಿ. ಚಳಿಗಾಲದಲ್ಲಿ ಕೇವಲ ತಂಪಾದ ಆಹಾರ ಪದಾರ್ಥಗಳನ್ನು ಹೆಚ್ಚಾಗಿ ತಿಂದುಕೊಂಡು ಇರಲು ಸಾಧ್ಯವಿಲ್ಲ. ಆರೋಗ್ಯಕರವಾದ ಆಹಾರ ಪದ್ಧತಿಯನ್ನು ಅನುಸರಿಸಿ, ದೇಹಕ್ಕೆ ಉತ್ತಮ ವ್ಯಾಯಾಮವನ್ನು ನೀಡಿ ತೂಕವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದರ ಜೊತೆಗೆ, ಜೀರ್ಣಾಂಗ ವ್ಯವಸ್ಥೆಯ ಹಲವು ತೊಂದರೆಗಳು, ಚಳಿಗಾಲದಲ್ಲಿ ಎದುರಾಗುವ ಕೀಲು ನೋವುಗಳು ಇತ್ಯಾದಿಗಳಿಂದ ಮುಕ್ತಿ ಪಡೆದುಕೊಳ್ಳಬಹುದು.
ರೋಗ ನಿರೋಧಕ ಶಕ್ತಿಯನ್ನು ಹೆಚ್ಚು ಮಾಡುವಂತಹ ಮತ್ತು ಸಂಪೂರ್ಣ ಆರೋಗ್ಯವನ್ನು ಕಾಪಾಡುವ ವಿಶೇಷವಾಗಿ ಚಳಿಗಾಲದಲ್ಲಿ ನಮ್ಮ ತಾಪಮಾನವನ್ನು ಹೆಚ್ಚು ಮಾಡುವಂತಹ ಕೆಲವು ಆಹಾರಗಳ ಬಗ್ಗೆತಿಳಿಯೋಣ ಬನ್ನಿ.
ಸೀಸನಲ್ ಹಣ್ಣುಗಳು ಸೀತಾಫಲ, ಪೇರಳೆ ಹಣ್ಣು, ಸೇಬು ಹಣ್ಣು ಇವುಗಳು ನಮ್ಮ ಚರ್ಮದ ಆರೋಗ್ಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರಿನ ಅಂಶವನ್ನು ಒದಗಿಸುತ್ತದೆ ಮತ್ತು ಇವುಗಳಲ್ಲಿ ನಾರಿನ ಅಂಶ ಕೂಡ ಹೆಚ್ಚಾಗಿ ಸಿಗುತ್ತದೆ. ಅಪಾರ ಪ್ರಮಾಣದ ಪೌಷ್ಟಿಕ ಸತ್ವಗಳನ್ನು ಒಳಗೊಂಡಿರುವ ಇವುಗಳನ್ನು ಚಳಿಗಾಲದಲ್ಲಿ ಆರಾಮದಾಯಕವಾಗಿ ಸೇವನೆ ಮಾಡಬಹುದು. ಚಳಿಗಾಲಕ್ಕೆ ಹೊಂದುವ ಹಣ್ಣುಗಳು :
ಸೀತಾಫಲ :
ಸೀತಾಫಲ ಹಣ್ಣಿನಲ್ಲಿ ಪೊಟ್ಯಾಶಿಯಂ, ಫೈಬರ್ ಮತ್ತು ವಿಟಮಿನ್ ಅಧಿಕವಾಗಿರುತ್ತದೆ. ಜತೆಗೆ ಸೀತಾಫಲ ಹಣ್ಣು ಅನೇಕ ಆರೋಗ್ಯ ಸಮಸ್ಯೆಗಳನ್ನು ನಿವಾರಿಸುತ್ತದೆ. ಹೀಗಿರುವಾಗ ಮನೆಯಲ್ಲಿಯೇ ಬೆಳೆದ ಸೀತಾಫಲ ಹಣ್ಣನ್ನು ಸೇವಿಸುವ ಮೂಲಕ ಹೆಚ್ಚಿನ ಪ್ರಯೋಜನಗಳನ್ನು ಪಡೆಯಬಹುದು.ತೂಕ ಹೆಚ್ಚಿಸಿಕೊಳ್ಳಬೇಕು ಎನ್ನುವವರು ದಿನಾ ಸೀತಾಫಲ ತಿನ್ನಬಹುದು.
ಸೇಬುಹಣ್ಣು:
ಸೇಬಿನಲ್ಲಿ ಅತಿ ಹೆಚ್ಚಿನ ಮಟ್ಟದ ಫೈಬರ್ ಮತ್ತು ವಿಟಮಿನ್, ಖನಿಜಾಂಶಗಳಿವೆ. ಇದು ಪೆಕ್ಟಿನ್ ಎಂಬ ಅಂಶವನ್ನು ಒಳಗೊಂಡಿದ್ದು, ಕರುಳಿನ ಆರೋಗ್ಯವನ್ನು ಉತ್ತೇಜಿಸುವ ಕೆಲಸ ಮಾಡುತ್ತದೆ.
ಅನಾನಸ್ :
ಅನಾನಸ್ ಒಂದು ಉತ್ತಮ ಆಯ್ಕೆಯಾಗಿದೆ, ಆದರೆ ಚಳಿಗಾಲದಲ್ಲಿ ಮಿತವಾಗಿ ಇದ್ದರೆ ಒಳ್ಳೆಯದು. ಅನಾನಸ್ ಹಣ್ಣಿನಲ್ಲಿ ವಿಶೇಷವಾಗಿರುವ ಬ್ರೋಮಿಲೈನ್ ಎಂಬ ಕಿಣ್ವ ಆಹಾರವನ್ನು ಸುಲಭವಾಗಿ ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ. ದೇಹದಲ್ಲಿ ಸಂಗ್ರಹವಾಗಿದ್ದ ವಿಷಕಾರಿ ವಸ್ತುಗಳನ್ನು ನಿವಾರಿಸಲು ನೆರವಾಗುತ್ತದೆ ಮತ್ತು ರಕ್ತದ ಶುದ್ಧೀಕರಣ, ಮೂತ್ರಪಿಂಡಗಳ ಕ್ಷಮತೆ ಹೆಚ್ಚಿಸಲು, ಚರ್ಮದ ಕಾಂತಿ ಹೆಚ್ಚಿಸಲು ನೆರವಾಗುತ್ತದೆ. ಇದರಲ್ಲಿರುವ ವಿಟಮಿನ್ ಸಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಜೊತೆಗೇ ಚರ್ಮದ ತೊಂದರೆಗಳನ್ನೂ ನಿವಾರಿಸುತ್ತದೆ. ಅಲ್ಲದೇ ನಿತ್ಯ ಕೆಲವು ತುಂಡುಗಳನ್ನು ಸೇವಿಸುತ್ತಾ ಬಂದವರಲ್ಲಿ ತೂಕ ಸಹಾ ಕಡಿಮೆಯಾಗಿರುವುದು ಕಂಡುಬಂದಿದೆ.
ಕಿತ್ತಳೆ ಹಣ್ಣು :
ನಿಯಮಿತವಾಗಿ ಕಿತ್ತಳೆ ಹಣ್ಣನ್ನು ಸೇವಿಸುವ ಅಭ್ಯಾಸದಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ. ಇದರಿಂದ ದೇಹದಲ್ಲಿ ರಕ್ತದೊತ್ತಡವನ್ನು ನಿಯಂತ್ರಿಸಿಕೊಳ್ಳಬಹುದು. ಜತೆಗೆ ಮಲಬದ್ಧತೆ ಸಮಸ್ಯೆ ಇರುವವರು ಕಿತ್ತಳೆ ಹಣ್ಣು ಸೇವನೆಯಿಂದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ. ಈ ಹಣ್ಣಿನಲ್ಲಿ ವಿಟಮಿನ್ ಸಿ ಇರುವುದರಿಂದ ಇದು ನಿಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು.
ಬಾಳೆಹಣ್ಣು :
ಬಾಳೆಹಣ್ಣು ಜೀರ್ಣಕ್ರಿಯೆ ಸಮಸ್ಯೆಗೆ ಒಳ್ಳೆಯದು. ಜೀರ್ಣಕ್ರಿಯೆಯನ್ನು ಸುಧಾರಿಸಲು ಬಾಳೆಹಣ್ಣು ತಿನ್ನುವುದಾಗಿ ತಜ್ಞರು ಸಲಹೆ ನೀಡುತ್ತಾರೆ. ಅದಕ್ಕಾಗಿಯೇ ಊಟವಾದ ತಕ್ಷಣ ಒಂದು ಬಾಳೆಹಣ್ಣು ತಿನ್ನುವಂತೆ ಸಲಹೆ ನೀಡುವುದು. ಬಾಳೆಹಣ್ಣು ಸೇವಿಸುವ ಮೂಲಕ ರೋಗ ನಿರೋಧಕ ಶಕ್ತಿ ಹೆಚ್ಚಸಿಕೊಳ್ಳಬಹುದು.ಬಾಳೆಹಣ್ಣು ತೂಕ ಇಳಿಸಲು ಮತ್ತು ಬೊಜ್ಜು ನಿವಾರಣೆ ಮಾಡಲು ನೆರವಾಗುವುದು. ಬಾಳೆಹಣ್ಣು 100ಗ್ರಾಂ ನಲ್ಲಿ ಸುಮಾರು 90 ಕೆ ಕ್ಯಾಲರಿ ನೀಡುವುದು ಮತ್ತು ಇದರಿಂದ ಹೊಟ್ಟೆ ತುಂಬಿದಂತೆ ಮಾಡುವುದು. ಇದರಲ್ಲಿರುವ ನಾರಿನಾಂಶವು ನೈಸರ್ಗಿಕವಾಗಿ ಹೀರಿಕೊಳ್ಳುವಂತದ್ದಾಗಿದೆ ಮತ್ತು ಜೀರ್ಣಕ್ರಿಯೆಗೆ ವೇಗ ನೀಡುವುದು ಮತ್ತು ಹೊಟ್ಟೆ ತುಂಬಿದಂತೆ ಮಾಡುವುದು. ಇದರಿಂದ ಹೆಚ್ಚಿನ ತೂಕ ಇಳಿಸಲು ನೆರವಾಗುವುದು. ಇನ್ನೊಂದು ಕಡೆಯಲ್ಲಿ ಬಾಳೆಹಣ್ಣು ತೂಕ ಹೆಚ್ಚಿಸಿಕೊಳ್ಳಲು ಕೂಡ ನೆರವಾಗುವುದು.
ಕಿವಿ ಹಣ್ಣು :
ಕ್ಯಾನ್ಸರ್ ರೋಗವನ್ನು ತಡೆಯುವ ಆಂಟಿ ಆಕ್ಸಿಡಂಟ್ ಸತ್ವವೂ ಕಿವಿ ಹಣ್ಣನಲ್ಲಿದೆ. ಫೈಬರ್ ಮತ್ತು ಆಂಟಿ ಆಕ್ಸಿಡೆಂಟ್ಗಳ ಮೂಲವೆಂದು ಪರಿಗಣಿಸಲಾಗುವ ಕಿವಿ ಹಣ್ಣಿನ ಸೇವನೆಯಿಂದ ಡಿಎನ್ಎ ಉತ್ತಮಗೊಳಿಸಬಹುದು.
ಸೀಬೆಹಣ್ಣು :
ವಿಟಮಿನ್ ಎ, ಕಾಪರ್, ಮತ್ತು ನಾರಿನಂಶವಿದೆ. ಚಳಿಗಾಲದಲ್ಲಿ ಸೀಬೆ ಹಣ್ಣನ್ನು ತಿನ್ನುವುದರಿಂದ ಜೀವಕೋಶದ ಹಾನಿ ಮತ್ತು ಉರಿಯೂತವನ್ನು ತಡೆಯುತ್ತದೆ, ಜೀರ್ಣಕ್ರಿಯೆಯನ್ನು ಉತ್ತೇಜಿಸುತ್ತದೆ.
ಸಪೋಟ :
ಈ ಹಣ್ಣಿನಲ್ಲಿ ವಿಟಮಿನ್ ಸಿ, ಎ, ನಿಯಾಸಿನ್, ಫಾಲಟೆ ಮತ್ತು ಖನಿಜಾಂಶ ಗಳಾಗಿರುವಂತಹ ಕಬ್ಬಿನಾಂಶ, ಪೊಟಾಶಿಯಂ ಮತ್ತು ತಾಮ್ರವಿದೆ. ಆಂಟಿಆಕ್ಸಿಡೆಂಟ್, ಉರಿಯೂತ ಶಮನಕಾರಿ, ವೈರಲ್ ವಿರೋಧಿ, ಬ್ಯಾಕ್ಟೀರಿಯಾ ವಿರೋಧಿ ಮತ್ತು ನಂಜುನಿರೋಧಕ ಗುಣಗಳು ಕೂಡ ಇದರಲ್ಲಿ ಇದೆ.ಗ್ಯಾಸ್ಟ್ರಿಕ್ ಹಾಗೂ ಹೊಟ್ಟೆಯ ಇತರ ಸಮಸ್ಯೆಗಳನ್ನು ಇದು ನಿವಾರಿಸುವುದು. ನಾರಿನಾಂಶವು ಅಧಿಕವಾಗಿ ಇರುವ ಕಾರಣದಿಂದಾಗಿ ಜೀರ್ಣಕ್ರಿಯೆಗೆ ಇದು ಸಹಕಾರಿ ಮತ್ತು ಮಲಬದ್ಧತೆ ಇರುವವರಿಗೆ ವಿರೇಚಕವಾಗಿ ವರ್ತಿಸುವುದು. ಇದು ಹೊಟ್ಟೆಯ ಸೋಂಕನ್ನು ತಗ್ಗಿಸುವುದು.
ಪಪ್ಪಾಯ :
ನಮ್ಮ ದೇಹದಲ್ಲಿ ಕೊಬ್ಬಿನ ಪ್ರಮಾಣವನ್ನು ನಿಯಂತ್ರಿಸುವ ಪಪ್ಪಾಯಿ ಉತ್ತಮವಾದ ಫೈಬರ್ಗಳ ಮೂಲವಾಗಿದೆ. ಪಪ್ಪಾಯಿ ಸೇವಿಸುವ ಮೂಲಕ ನಮ್ಮ ದೇಹದ ರೋಗ ನಿರೋಧಕ ವ್ಯವಸ್ಥೆ ಹೆಚ್ಚಾಗುತ್ತದೆ. ಪಪ್ಪಾಯದಲ್ಲಿ ಮಿಟಮಿನ್ ಸಿ ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.ಹಣ್ಣುಗಳಲ್ಲಿ ಕಂಡುಬರುವ ನೈಸರ್ಗಿಕವಾದ ಸಕ್ಕರೆ ಅಂಶ ಮಧುಮೇಹಿ ರೋಗಿಗಳಿಗೆ ತುಂಬಾ ಒಳ್ಳೆಯದು. ಪರಂಗಿ ಹಣ್ಣು ನಿಮ್ಮ ಅತ್ಯದ್ಭುತ ಆಯ್ಕೆಗಳಲ್ಲಿ ಒಂದಾಗಿದ್ದರೆ ನಿಮ್ಮ ಆರೋಗ್ಯ ಬಹಳಷ್ಟು ಸುಧಾರಿಸುತ್ತದೆ. ಪರಂಗಿ ಹಣ್ಣು ಸೇವನೆಯಿಂದ ನಿಮ್ಮ ದೇಹಕ್ಕೆ ಫೈಟೋನ್ಯೂಟ್ರಿಯೆಂಟ್ಸ್ ಅಂಶಗಳು ಮತ್ತು ವಿಟಮಿನ್ ಅಂಶಗಳು ಸಾಕಷ್ಟು ಸಿಗುವಂತಾಗಿ ಹೃದಯದ ಕಾಯಿಲೆಗಳಿಂದ ನಿಮ್ಮನ್ನು ದೂರ ಇರಿಸುತ್ತದೆ.
ಪೇರಳೆ ಹಣ್ಣು:
ಪೇರಳೆ ಹಣ್ಣು ಕಡಿಮೆ ಕ್ಯಲೋರಿ ಹಾಗೂ ಕಡಿಮೆ ಪ್ರಮಾಣದ ನೈಸರ್ಗಿಕ ಸಕ್ಕರೆಯನ್ನು ಹೊಂದಿರುತ್ತದೆ. ಅನಗತ್ಯವಾದ ತೂಕವನ್ನು ಇಳಿಸಲು ಈ ಹಣ್ಣು ಉತ್ತಮ ಆಯ್ಕೆ ಆಗುವುದು. ಇದನ್ನು ಸವಿಯುವುದರಿಂದ ದೀರ್ಘ ಸಮಯಗಳ ಕಾಲ ಹಸಿವನ್ನು ತಡೆಯಬಹುದು.ಮೂಲವ್ಯಾಧಿ, ಕಾನ್ಸ್ಟಿಪೇಶನ್ ತೊಂದರೆ ಇದ್ದಲ್ಲಿ ಅಧಿಕ ನಾರಿನಂಶದ ಅವಶ್ಯಕತೆ ಇದೆ. ತೂಕ ಕಡಿಮೆ ಮಾಡಿಕೊಳ್ಳುವ ಪಥ್ಯದ ಆಹಾರದಲ್ಲಿ ಉತ್ತಮ ನಾರಿನಂಶ ಇದ್ದಲ್ಲಿ ಕೊಬ್ಬು ಕರಗಿಸಲು ಬಹಳ ಸುಲಭ.
GIPHY App Key not set. Please check settings