ಅಂದಹಾಗೆ ಕೇಂದ್ರ ಆಯವ್ಯಯ ಮಂಡನೆಗೂ ಮುನ್ನ ವಿತ್ತ ಸಚಿವರೇ ಸಿಹಿ ಹಲ್ವಾ ತಯಾರಿಸಿ, ತಮ್ಮ ತಂಡಕ್ಕೆ, ಅಧಿಕಾರಿಗಳಿಗೆ ಹಂಚುವುದು ಈ ಹಿಂದಿನಿಂದಲೂ ನಡೆದು ಬಂದ ಸಂಪ್ರದಾಯ. ಹಾಗಾದ್ರೆ ಈ ಸಂಪ್ರದಾಯ ಶುರುವಾಗಿದ್ದು ಹೇಗೆ? ಇದರ ಮಹತ್ವವೇನು?
ಭಾರತದಲ್ಲಿ ಈ ಹಿಂದಿನಿಂದಲೂ ಬಜೆಟ್ ಮಂಡಿಸುವ ಮುನ್ನ ಹಲ್ವಾ ತಯಾರಿಸುವ ಸಂಪ್ರದಾಯ ನಡೆದುಕೊಂಡು ಬಂದಿದೆ. ಹಲ್ವಾ ಅಂದರೆ ಸಿಹಿ ಖಾದ್ಯ. ಭಾರತೀಯರು ಶುಭ ಕೆಲಸ ಮಾಡುವ ಮುನ್ನ ಸಿಹಿ ತಿನ್ನುವ ಸಂಪ್ರದಾಯ ಇದೆ. ಹೀಗಾಗಿಯೇ ಭಾರತದ ಆರ್ಥಿಕ, ಆರ್ಥಿಕ ಯೋಜನೆಗಳನ್ನು ರೂಪಿಸುವ ಬಜೆಟ್ ಶುಭ ಕಾರ್ಯವೆಂದೇ ಪರಿಗಣಿಸಲಾಗುತ್ತದೆ. ಹೀಗಾಗಿ ಬಜೆಟ್ ಮಂಡಿಸುವ ಮುನ್ನ ಹಲ್ವಾ ತಯಾರಿಸಿ, ತಿನ್ನುವ ಸಂಪ್ರದಾಯ ನಡೆದು ಬಂದಿದೆ.
ಬಜೆಟ್ ತಯಾರಿಕೆಯ ಆಚರಣೆಯ ಭಾಗವಾಗಿ, ‘ಹಲ್ವಾ’ ಅನ್ನು ದೊಡ್ಡ ಪಾತ್ರೆಯಲ್ಲಿ ತಯಾರಿಸಲಾಗುತ್ತದೆ ಮತ್ತು ಹಣಕಾಸು ಸಚಿವಾಲಯದ ಎಲ್ಲಾ ಸಿಬ್ಬಂದಿಗೆ ಬಡಿಸಲಾಗುತ್ತದೆ. ಇದನ್ನು ತಿನ್ನುವ ಹೆಚ್ಚಿನ ಸಂಖ್ಯೆಯ ಅಧಿಕಾರಿಗಳು ಮತ್ತು ಸಹಾಯಕ ಸಿಬ್ಬಂದಿಯಾಗಿರುತ್ತಾರೆ. ಬಜೆಟ್ ತಯಾರಿಕೆ ಮತ್ತು ಮುದ್ರಣ ಪ್ರಕ್ರಿಯೆಯೊಂದಿಗೆ ನೇರವಾಗಿ ಸಂಬಂಧ ಹೊಂದಿರುವವರಾಗಿರುತ್ತಾರೆ. ವಿಶೇಷ ಅಂದ್ರೆ ಬಜೆಟ್ ಮಂಡಿಸುವ ಕೇಂದ್ರ ಹಣಕಾಸು ಸಚಿವರೇ ಈ ಹಲ್ವಾವನ್ನು ತಮ್ಮ ತಂಡದ ಸದಸ್ಯರಿಗೆ, ತಮ್ಮ ಇಲಾಖೆ ಸಿಬ್ಬಂದಿಗೆ ನೀಡುತ್ತಾರೆ.

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು 2014 ರಲ್ಲಿ ಅಧಿಕಾರಕ್ಕೆ ಬಂದ ನಂತರ ಬಜೆಟ್‌ನ ಹಲವಾರು ಸಾಂಪ್ರದಾಯಿಕ ಅಂಶಗಳನ್ನು ತೆಗೆದುಹಾಕಲಾಯಿತು. ಈ ಹಿಂದೆ ಪ್ರತ್ಯೇಕವಾಗಿ ರೈಲ್ವೆ ಬಜೆಟ್ ಘೋಷಿಸಲಾಗುತ್ತಿತ್ತು. ಆದರೆ ರೈಲು ಬಜೆಟ್ ಅನ್ನು ಮುಖ್ಯ ಬಜೆಟ್‌ನೊಂದಿಗೆ ವಿಲೀನಗೊಳಿಸಲಾಯಿತು, ಬಜೆಟ್ ಮಂಡನೆ ದಿನಾಂಕವನ್ನು ಫೆಬ್ರವರಿ 1ಕ್ಕೆ ಫಿಕ್ಸ್ ಮಾಡಲಾಯಿತು, ಬಜೆಟ್ ಪ್ರತಿಗಳು ಡಿಜಿಟಲ್ ಸ್ವರೂಪಕ್ಕೆ ಬದಲಾಯಿತು. ಆದರೆ ಸಂಪ್ರದಾಯದಂತೆ ‘ಹಲ್ವಾ’ ಸಮಾರಂಭವನ್ನು ಮಾತ್ರ ಉಳಿಸಿಕೊಳ್ಳಲಾಗಿದೆ.
ಸಮಾರಂಭವು ಮಹತ್ವದ್ದಾಗಿದೆ ಏಕೆಂದರೆ ಅದು ಮುಗಿದ ನಂತರ, ಬಜೆಟ್ ಸಿದ್ಧಪಡಿಸುವಲ್ಲಿ ತೊಡಗಿರುವ ಎಲ್ಲಾ ಹಣಕಾಸು ಸಚಿವಾಲಯದ ಅಧಿಕಾರಿಗಳು ಬಜೆಟ್ ಮಂಡಿಸುವವರೆಗೆ ನಾರ್ತ್ ಬ್ಲಾಕ್‌ನ ನೆಲಮಾಳಿಗೆಗೆ ತೆರಳಬೇಕು. ಮುಂದಿನ ಹಣಕಾಸು ವರ್ಷಕ್ಕೆ ಬಜೆಟ್‌ನಲ್ಲಿ ಯಾವುದೇ ಸೋರಿಕೆಯಾಗದಂತೆ ನೋಡಿಕೊಳ್ಳಲು ಇದನ್ನು ಮಾಡಲಾಗುತ್ತದೆ, ಇದನ್ನು ನೀತಿ ಆಟೊಗ್ ಮತ್ತು ಇತರ ಸಂಬಂಧಿತ ಸಚಿವಾಲಯಗಳೊಂದಿಗೆ ಸಮಾಲೋಚಿಸಿ ತಯಾರಿಸಲಾಗುತ್ತದೆ.
ಮುದ್ರಣಾಲಯದ ಉದ್ಯೋಗಿಗಳು 10 ದಿನಗಳ ಕಾಲ ನೆಲಮಾಳಿಗೆಯಲ್ಲೇ ಇರುತ್ತಾರೆ. ಬಜೆಟ್ ಪ್ರತಿ ಸಿದ್ಧಪಡಿಸಿದ ನಂತರ, ಅದರ ಮಂಡನೆಗೂ ಮೊದಲು ಹಲ್ವಾ ಸಮಾರಂಭ ನಡೆಸಲಾಗುತ್ತದೆ. ಇದಕ್ಕಾಗಿ ಸೆಕ್ರೆಟರಿಯೇಟ್ ನ ನಾರ್ತ್ ಬ್ಲಾಕ್ ನಲ್ಲಿ ದೊಡ್ಡ ಬಾಣಲೆಯಲ್ಲಿ ಹಲ್ವಾ ಮಾಡುತ್ತಾರೆ. ಹಣಕಾಸು ಸಚಿವರು ಮತ್ತು ಹಣಕಾಸು ಸಚಿವಾಲಯದ ಎಲ್ಲಾ ಅಧಿಕಾರಿಗಳು ಈ ಸಮಾರಂಭದಲ್ಲಿ ಭಾಗಿಯಾಗುತ್ತಾರೆ. ದೊಡ್ಡ ಬಾಣಲೆಯಿಂದ ಎಲ್ಲರಿಗೂ ಹಲ್ವಾ ಹಂಚಲಾಗುತ್ತದೆ. ಹಲ್ವಾ ಸಮಾರಂಭದ ನಂತರ, ಹಣಕಾಸು ಸಚಿವಾಲಯದ 100 ಕ್ಕೂ ಹೆಚ್ಚು ಉದ್ಯೋಗಿಗಳು ನಾರ್ತ್ ಬ್ಲಾಕ್‌ನ ನೆಲಮಾಳಿಗೆಯಲ್ಲಿ ಸುಮಾರು 10 ದಿನಗಳವರೆಗೆ ಲಾಕ್ ಆಗುತ್ತಾರೆ. ಇವರೆಲ್ಲರೂ ಹಣಕಾಸು ಸಚಿವರ ಬಜೆಟ್ ಭಾಷಣದ ನಂತರವೇ ಹೊರಬರುತ್ತಾರೆ. ಬಜೆಟ್‌ಗೆ ಸಂಬಂಧಿಸಿದ ಯಾವುದೇ ಮಾಹಿತಿ ಸೋರಿಕೆಯಾಗದಂತೆ ತಡೆಯಲು ಈ ಕ್ರಮ ಅನುಸರಿಸಲಾಗುತ್ತದೆ.

ಬಹುದಿನಗಳ ಪರಿಶ್ರಮಕ್ಕೆ ತಕ್ಕ ಫಲ ದೊರೆಯುತ್ತದೆ. ಭಾರತೀಯ ಸಂಪ್ರದಾಯದಲ್ಲಿ, ಯಾವುದೇ ಒಳ್ಳೆಯ ಕೆಲಸದ ನಂತರ ಅಥವಾ ಯಾವುದೇ ಶುಭ ಕಾರ್ಯದ ಮೊದಲು ಸಿಹಿ ಹಂಚಿಕೆ ಮಾಡಲಾಗುತ್ತದೆ. ಹಣಕಾಸು ಸಚಿವಾಲಯದ ನೌಕರರು ಹಲವು ತಿಂಗಳಿಂದ ಬಜೆಟ್ ರಚನೆಯ ಕಾರ್ಯದಲ್ಲಿ ತೊಡಗಿರುತ್ತಾರೆ. ಬಜೆಟ್ ಸಿದ್ಧಪಡಿಸಿದಾಗ ಅವರ ಶ್ರಮಕ್ಕೆ ಮೆಚ್ಚುಗೆ ಸೂಚಿಸುವ ಸೂಚಕವಾಗಿ ಅವರಿಗೆ ಸಿಹಿ (ಹಲ್ವಾ) ವಿತರಿಸಲಾಗುತ್ತದೆ.
ಸಮಾರಂಭದಲ್ಲಿ ಹಣಕಾಸು ಸಚಿವರು, ಸಚಿವಾಲಯದ ಕಾರ್ಯದರ್ಶಿಗಳು, ಬಜೆಟ್ ವಿಭಾಗದ ಅಧಿಕಾರಿಗಳು ಮತ್ತು ಇಬ್ಬರು ತೆರಿಗೆ ವಿಭಾಗಗಳು ಮತ್ತು ಸಿಬ್ಬಂದಿಗಳು ಭಾಗವಹಿಸುತ್ತಾರೆ. ವಿಶೇಷ ಅಂದ್ರೆ ಕೇಂದ್ರ ಸಚಿವರು ಬಜೆಟ್ ಮಂಡಿಸುವವರೆಗೂ ಬಜೆಟ್ ಮುದ್ರಣಾಲಯದೊಳಗೆ ಬೀಗ ಹಾಕಿರುತ್ತಾರೆ. ಸಿಬ್ಬಂದಿ ಹೊರತಾಗಿ ಅವರ ಕುಟುಂಬದ ಸದಸ್ಯರಿಗೂ ಪ್ರವೇಶ ಇರುವುದಿಲ್ಲ.
ಇಂಟೆಲಿಜೆನ್ಸ್ ಬ್ಯುರೋ (ಐಬಿ) ಬಜೆಟ್ ತಯಾರಿ ಪ್ರಕ್ರಿಯೆಯಲ್ಲಿ ಭಾಗಿಯಾದ ಯಾವುದೇ ವ್ಯಕ್ತಿಯು ನೇರವಾಗಿ ಯಾರ ಸಂಪರ್ಕಕ್ಕೂ ಬಾರದಂತೆ ನೋಡುತ್ತದೆ. ಫೋನ್ ಕಾಲ್‌ಗಳ ಮೇಲೆ ನಿಗ್ರಹ ಇರಿಸುತ್ತದೆ, ಸಿಸಿಟಿವಿ ಕಂಗಾವಲು ಇರುತ್ತದೆ, ಯಾವುದೇ ಮಾಹಿತಿ ಲೀಕ್ ಆಗುವುದನ್ನು ತಡೆಯಲು ಎಲೆಕ್ಟ್ರಾನಿಕ್ ಜಾಮರ್ ಅಳವಡಿಸಲಾಗಿರುತ್ತದೆ, ಸೈಬರ್ ಸೆಕ್ಯೂರಿಟಿ ಇರುತ್ತದೆ, ಹಣಕಾಸು ಸಚಿವರಿಗೆ ಮಾತ್ರ ಒಳಗೆ, ಹೊರಗೆ ಹೋಗಲು ಅವಕಾಶವಿದೆ. ಆದರೆ ಯಾವುದೇ ಸಚಿವರುಗಳಿಗೂ ಮೊಬೈಲ್ ಫೋನ್ ಬಳಕೆಯಲ್ಲಿ ನಿರ್ಬಂಧವಿದೆ. 1950 ರವರೆಗೆ ರಾಷ್ಟ್ರಪತಿ ಭವನದಲ್ಲಿ ಬಜೆಟ್ ಪ್ರತಿಯನ್ನು ಪ್ರಿಂಟ್ ಮಾಡಲಾಗುತ್ತಿತ್ತು.
ಧನ್ಯವಾದಗಳು.
GIPHY App Key not set. Please check settings