in

ಮೆದುಳು ಜ್ವರದ ಲಸಿಕೆ ಅಭಿಯಾನ, ತಪ್ಪದೆ ನಿಮ್ಮ ಮಕ್ಕಳಿಗೆ ಹಾಕಿಸಿ

ಮೆದುಳು ಜ್ವರದ ಲಸಿಕೆ ಅಭಿಯಾನ
ಮೆದುಳು ಜ್ವರದ ಲಸಿಕೆ ಅಭಿಯಾನ

ಮೆದುಳಿನ ಜ್ವರವು ನರವೈಜ್ಞಾನಿಕ ಕಾಯಿಲೆಯಾಗಿದ್ದು, ಇದು ವೈರಸ್ ಅಥವಾ ಬ್ಯಾಕ್ಟೀರಿಯಾದ ನಿರ್ದಿಷ್ಟ ಒತ್ತಡವು ದೇಹದ ಮೇಲೆ ದಾಳಿ ಮಾಡಿದಾಗ ಮೆದುಳು ಮತ್ತು ಲಿಂಬಿಕ್ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ. “ಎನ್ಸೆಫಾಲಿಟಿಸ್ ಎಂಬುದು ಮೆದುಳಿನ ಅಂಗಾಂಶದ ಉರಿಯೂತವಾಗಿದೆ. ಒಮ್ಮೆ ವೈರಸ್ ರಕ್ತದೊಳಗೆ ಪ್ರವೇಶಿಸಿದಾಗ, ಅದು ಮೆದುಳಿನ ಅಂಗಾಂಶಗಳಿಗೆ ಹೋಗಲು ಪ್ರಾರಂಭಿಸುತ್ತದೆ. ಸಿಗ್ನಲ್ ನಮ್ಮ ರೋಗನಿರೋಧಕ ವ್ಯವಸ್ಥೆಗೆ ತಲುಪಿದ ತಕ್ಷಣ, ಅದು ಇದಕ್ಕೆ ಪ್ರತಿಕ್ರಿಯೆಯನ್ನು ಉಂಟುಮಾಡುತ್ತದೆ ಇದರಿಂದ ಮೆದುಳು ಉಬ್ಬುತ್ತದೆ.

ಮೆದುಳಿನ ಜ್ವರ ಎಂದು ವಿವರಿಸಬಹುದಾದ ಪರಿಸ್ಥಿತಿಗಳು ಸೇರಿವೆ :

ಎನ್ಸೆಫಾಲಿಟಿಸ್, ಮೆದುಳಿನ ತೀವ್ರವಾದ ಉರಿಯೂತ, ಸಾಮಾನ್ಯವಾಗಿ ವೈರಲ್ ಸೋಂಕಿನಿಂದ ಉಂಟಾಗುತ್ತದೆ.

ಮೆದುಳು ಜ್ವರದ ಲಸಿಕೆ ಅಭಿಯಾನ, ತಪ್ಪದೆ ನಿಮ್ಮ ಮಕ್ಕಳಿಗೆ ಹಾಕಿಸಿ
ಮೆದುಳಿನ ಜ್ವರದ ಲಕ್ಷಣಗಳು ಜ್ವರ

ಮೆನಿಂಜೈಟಿಸ್, ಮೆದುಳು ಮತ್ತು ಬೆನ್ನುಹುರಿಯನ್ನು ಆವರಿಸುವ ಪೊರೆಗಳ ಉರಿಯೂತ.

ಸೆರೆಬ್ರಿಟಿಸ್, ಸೆರೆಬ್ರಮ್ ಉರಿಯೂತ.

ಸ್ಕಾರ್ಲೆಟ್ ಜ್ವರ, ಸಾಂಕ್ರಾಮಿಕ ರೋಗ ಇದರ ಲಕ್ಷಣಗಳು ವ್ಯಾಮೋಹ ಮತ್ತು ಭ್ರಮೆಗಳನ್ನು ಒಳಗೊಂಡಿರಬಹುದು.

ಮೆದುಳು ಜ್ವರ ತಡೆಗಟ್ಟಲು ಡಿಸೆಂಬರ್ 5 ರಿಂದ 25ರ ವರೆಗೆ ನಡೆಯುವ ಅಭಿಯಾನದಲ್ಲಿ ಜಿಲ್ಲೆಯಾದ್ಯಂತ 1 ರಿಂದ 15 ವಯೋಮಾನದ ಮಕ್ಕಳಿಗೆ ತಪ್ಪದೇ ಲಸಿಕೆ ಹಾಕಿಸುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಮರೇಶ ನಾಯ್ಕ್ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಮೆದುಳು ಜ್ವರಕ್ಕೆ ಜಪಾನೀಸ್ ಎನ್‌ಸೆಫಲೈಟಿಸ್ (ಜೆಇ) ಮುಖ್ಯ ಕಾರಣವಾಗಿದ್ದು, ವೈರಾಣುವಿನಿಂದ ಉಂಟಾಗುತ್ತದೆ. ಕ್ಯೂಲೆಕ್ಸ್ ಸೊಳ್ಳೆಗಳ ಮೂಲಕ ಈ ಕಾಯಿಲೆ ಹರಡುತ್ತದೆ. ಇದಕ್ಕೆ (ಜೆಇ) ಲಸಿಕೆ ಚುಚ್ಚುಮದ್ದು ಪರಿಣಾಮಕಾರಿ ಅಸ್ತ್ರವಾಗಿರುವುದರಿಂದ ಮಕ್ಕಳಿಗೆ ಶೇ 100 ರಷ್ಟು ಲಸಿಕೆ ಹಾಕಿಸುವಂತೆ ಸೂಚನೆ ನೀಡಲಾಗಿದೆ.

ಈ ಅಭಿಯಾನದ ಅಂಗವಾಗಿ ಜಿಲ್ಲೆಯ ಎಲ್ಲಾ ಶಾಲೆ, ಅಂಗನವಾಡಿ ಕೇಂದ್ರಗಳ, ವಸತಿ ಶಾಲೆ, ವಸತಿ ನಿಲಯ ಮಕ್ಕಳಿಗೆ ತಪ್ಪದೇ ಲಸಿಕಾ ಹಾಕಿಸಬೇಕು. ಪಾಲಕರು, ಶಿಕ್ಷಕರು, ಎಸ್‌ಡಿಎಂಸಿ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿ ಲಸಿಕೆ ಮಹತ್ವದ ಕುರಿತು ತಿಳಿಹೇಳಬೇಕು. ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಹೆಚ್ಚಿನ ಗಮನ ನೀಡಬೇಕು. ಆರೋಗ್ಯ ಇಲಾಖೆ, ವಿವಿಧ ಇಲಾಖೆಗಳ ಅಧಿಕಾರಿಗಳು, ಆಶಾ, ಅಂಗನವಾಡಿ, ಆರೋಗ್ಯ ಕಾರ್ಯಕರ್ತೆಯರ ಸಮನ್ವಯತೆಯಿಂದ ಕಾರ್ಯನಿರ್ವಹಿಸಿ ಅಭಿಯಾನ ಯಶಸ್ವಿ ಗೊಳಿಸಬೇಕು.

ಮೆದುಳು ಜ್ವರದ ಲಸಿಕೆ ಅಭಿಯಾನ, ತಪ್ಪದೆ ನಿಮ್ಮ ಮಕ್ಕಳಿಗೆ ಹಾಕಿಸಿ
ಮೆದುಳು ಜ್ವರದ ಲಸಿಕೆ ಅಭಿಯಾನ

ಈ ಕಾಯಿಲೆ ಹೆಚ್ಚಾಗಿ ಕಂಡುಬರಲು ಕಾರಣವೆಂದರೆ ಪೋಷಣೆಯ ಕೊರತೆ, ಇದು ರಕ್ತದಲ್ಲಿನ ಸಕ್ಕರೆ ಮಟ್ಟದಲ್ಲಿ ಹೊಂದಾಣಿಕೆಯಾಗುವುದಿಲ್ಲ ಮತ್ತು  ರೋಗನಿರೋಧಕ ಶಕ್ತಿಯನ್ನು ಕುಗ್ಗಿಸುತ್ತದೆ.

ಮೆದುಳಿನ ಜ್ವರದ ಲಕ್ಷಣಗಳು

* ಜ್ವರ

* ತಲೆನೋವು

* ಮಗುವಿನ ತಲೆಯಲ್ಲಿ ಮೃದುವಾದ ಗುಳ್ಳೆಗಳು ಏಳುವುದು

* ಬೆಳಕಿಗೆ ಕಣ್ಣು ತೆರೆಯಲು ಸಾಧ್ಯವಾಗದಿರುವುದು

* ಕುತ್ತಿಗೆ ಬಿಗಿಯಾಗುವುದು

* ಕೋಮಾವಸ್ಥೆ

* ತ್ವಚೆಯಲ್ಲಿ ಗುಳ್ಳೆಗಳು

* ನಡೆದಾಡಲು ತೊಂದರೆ

* ಹಸಿವು ಇಲ್ಲದಿರುವುದು

* ಮಾತನಾಡುವಾಗ ತೊದಲುವುದು

* ಮೈಯಲ್ಲಿ ನಡುಕ

ಈ ಲಕ್ಷಣಗಳು ಕಂಡು ಬಂದರೆ ಸಮಯ ವ್ಯರ್ಥ ಮಾಡದೆ ಕೂಡಲೇ ಆಸ್ಪತ್ರೆಗೆ ಕೊಂಡೊಯ್ಯಿರಿ.

ಮೆದುಳು ಜ್ವರ ಚಿಕಿತ್ಸೆಯ ನಂತರ ಏನು ಮಾಡಬೇಕು?

ಚಿಕಿತ್ಸೆಯ ನಂತರ ಮಕ್ಕಳು ಗುಣಮುಖವಾದರೂ ಕೆಲವೊಂದು ಮಕ್ಕಳಿಗೆ ನರಗಳಲ್ಲಿ ತೊಂದರೆ ಉಂಟಾಗಿರುತ್ತದೆ. ಅಂಥ ಮಕ್ಕಳಿಗೆ ಸ್ಪೀಚ್‌ ಥೆರಪಿ, ದೈಹಿಕ ವ್ಯಾಯಾಮ ಇವುಗಳ ಅಗತ್ಯ ಬೀಳಬಹುದು.

ಇದರಿಂದ ಪಾರಾಗುವುದು ಹೇಗೆ?

ಸೊಳ್ಳೆಯಿಂದ ಹರಡುವ ರೋಗವನ್ನು ತಡೆಯಲು ಮೊದಲು ಮಾಡಬೇಕಾದದ್ದು ನಿಮ್ಮ ಸುತ್ತಮುತ್ತಲಿನ ಪ್ರದೇಶಗಳನ್ನು ಸ್ವಚ್ಛ ಗೊಳಿಸುವುದು ಮತ್ತು ಸೊಳ್ಳೆಗಳ ಸಂತಾನೋತ್ಪತ್ತಿಯನ್ನು ನಿಲ್ಲಿಸುವುದು. ಅಲ್ಲದೆ ಸಾಕಷ್ಟು ನೀರು ಕುಡಿಯುವುದು.

 ನಾಯಿಗಳಲ್ಲಿ ಕೂಡ  ಮೆದುಳು ಜ್ವರ ಕಂಡುಬರುತ್ತದೆ

ಮೆದುಳು ಜ್ವರದ ಲಸಿಕೆ ಅಭಿಯಾನ, ತಪ್ಪದೆ ನಿಮ್ಮ ಮಕ್ಕಳಿಗೆ ಹಾಕಿಸಿ
ನಾಯಿಗಳಲ್ಲಿ ಕೂಡ  ಮೆದುಳು ಜ್ವರ ಕಂಡುಬರುತ್ತದೆ

ನಾಯಿಗಳಿಗೆ ಕೂಡ ಲಸಿಕೆ ಲಭ್ಯವಿದೆ. ವರ್ಷದ ಯಾವ ಸಮಯ ದಲ್ಲಿಯೂ ಈ ರೋಗ ನಾಯಿಗಳಿಗೆ ತಗಲಬಹುದು. ಪ್ರಾರಂಭದಲ್ಲಿ ಆಂಟಿ ಬಯೋಟಿಕ್‌ ಚಿಕಿತ್ಸೆಯ ಮೂಲಕ ರೋಗ ಬಾರದಂತೆ ತಡೆಯಬಹುದು. ವಾಂತಿ ಭೇದಿ ಆರಂಭವಾದಲ್ಲಿ ನಾಯಿಗಳು ಬೇಗನೆ ಸಾವಿಗೀಡಾಗುತ್ತವೆ. ನರ ದೌರ್ಬಲ್ಯ ಲಕ್ಷಣವಿರುವ ನಾಯಿಯನ್ನು ಪ್ರಾರಂಭಿಕ ಹಂತದಲ್ಲಿ ಸೂಕ್ತ ಚಿಕಿತ್ಸೆ ನೀಡಿ ರಕ್ಷಿಸಬಹುದು.

ರೋಗ ಬಾರದಂತೆ ಆರಂಭದಲ್ಲಿ 60 ದಿನಗಳ ಮರಿಗಳಿಗೆ ಡಿಸ್ಟೆಂಪರ್‌ ಲಸಿಕೆ ನೀಡಬೇಕಾಗುತ್ತದೆ. 90 ದಿನಗಳ ಬಳಿಕ ಚುಚ್ಚುಮದ್ದು ನೀಡಿ ಅನಂತರ ಪ್ರತೀ ವರ್ಷಕ್ಕೊಮ್ಮೆ ರೋಗ ನಿರೋಧಕ ಚುಚ್ಚು ಮದ್ದು ನೀಡಿದರೆ ಮೆದುಳು ಜ್ವರದಿಂದ ನಾಯಿಗಳನ್ನು ರಕ್ಷಿಸಬಹುದು ಎನ್ನುತ್ತಾರೆ ತಜ್ಞರು.

 ನಾಯಿಗಳಲ್ಲಿ ರೋಗ ಲಕ್ಷಣ : ರೋಗ ಪೀಡಿತ ನಾಯಿ ವಿಪರೀತ ಜ್ವರಕ್ಕೆ ಈಡಾಗುತ್ತದೆ. ತಲೆ ಮೇಲೆತ್ತಲು ಆಗದ ಸ್ಥಿತಿಗೆ ತಲುಪುತ್ತದೆ. ಎರಡು ಕೈಗಳ ಮಧ್ಯದಲ್ಲಿ ತಲೆಯನ್ನಿರಿಸಿ ನರಳಾಡುತ್ತದೆ. ಆಹಾರ ಸೇವನೆಯನ್ನು ತ್ಯಜಿಸಿ ಕ್ಷೀಣವಾಗುತ್ತದೆ. ವಾಂತಿ ಭೇದಿ, ನರ ದೌರ್ಬಲ್ಯ, ಕಣ್ಣಿನ ಪೊರೆ ಸಮಸ್ಯೆ ಈ ರೋಗದ ಮೂರು ಲಕ್ಷಣಗಳು. ನಾಯಿ ಎದ್ದು ಕುಳಿತುಕೊಳ್ಳಲು, ಓಡಾಡಲು ಅಸಾಧ್ಯ ಎನ್ನುವ ಹಂತಕ್ಕೆ ತಲುಪುತ್ತದೆ. ರೋಗ ಪೀಡಿತ ನಾಯಿ ಆಹಾರ ಸೇವನೆ ಕಡಿಮೆ ಮಾಡಿ ಕೊನೆಗೆ ನೀರನ್ನು ಮಾತ್ರ ಸೇವಿಸುತ್ತದೆ. ಬಳಿಕ ಆಹಾರವನ್ನೂ ತ್ಯಜಿಸುತ್ತದೆ.

ಪ್ರಾರಂಭದಲ್ಲಿ ಲಕ್ಷಣ ಇಲ್ಲ, ಸೋಂಕು ತಗುಲಿದರೂ ಮೊದಲ ಮೂರು ತಿಂಗಳ ಕಾಲ ನಾಯಿಗಳಲ್ಲಿ ಯಾವುದೇ ಲಕ್ಷಣ ಕಂಡುಬರುವುದಿಲ್ಲ. ಕೊನೆಯ ಎರಡು ವಾರಗಳಲ್ಲಿ ರೋಗ ಉಲ್ಬಣಿಸಿ ನಾಯಿ ಸಾವನ್ನಪುತ್ತವೆ. ಸೋಂಕಿಗೆ ತುತ್ತಾದ ನಾಯಿಗಳು ರೇಬಿಸ್‌ ರೋಗ ಲಕ್ಷಣಗಳನ್ನೂ ಪ್ರದರ್ಶಿಸುವುದು ಕಂಡುಬಂದಿದ್ದು, ಉಳಿದ ನಾಯಿ ಮೇಲೆ ದಾಳಿ ಮಾಡುತ್ತವೆ. ರೋಗ ಈ ಮೂಲಕವೂ ಹರಡುತ್ತದೆ. ಕೆಲವು ನಾಯಿಗಳಿಗೆ ಜ್ವರ ಹೆಚ್ಚಾಗಿ ಹುಚ್ಚು ನಾಯಿಯಂತೆ ವರ್ತಿಸುತ್ತವೆ. ಮೂಗು-ಬಾಯಿಯಿಂದ ಕೀವು ಬರಲು ಆರಂಭವಾಗುತ್ತದೆ. ಅದನ್ನು ಇತರ ನಾಯಿಗಳು ಸ್ಪರ್ಶಿಸಿದಾಗಲೂ ರೋಗ ಹರಡುತ್ತದೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ತುಟಿಯ ಬಣ್ಣಕ್ಕಾಗಿ ನೈಸರ್ಗಿಕ ಮನೆ ಮದ್ದು

ಸುಂದರವಾದ ತುಟಿಯ ಬಣ್ಣಕ್ಕಾಗಿ ನೈಸರ್ಗಿಕ ಮನೆ ಮದ್ದುಗಳು

ಮೂಳೆಗಳು ಬಲಿಷ್ಠವಾಗಿರುವುದಕ್ಕೆ ಆಹಾರಗಳು

ಮೂಳೆಗಳು ಬಲಿಷ್ಠವಾಗಿರುವುದಕ್ಕೆ ಕೆಲವೊಂದು ಆಹಾರಗಳು