in

ಗುಳಿ ಗುಳಿ ಶಂಕರ ದೇವಾಲಯ: ಇಲ್ಲಿ ಚಪ್ಪಾಳೆ ತಟ್ಟಿದ್ದಲ್ಲಿ ನೀರಿನ ಗುಳ್ಳೆಗಳು ಗುಳಿ ಗುಳಿ ಎಂದು ಮೇಲೆ ಬರುವವು

ಗುಳಿ ಗುಳಿ ಶಂಕರ ದೇವಾಲಯ
ಗುಳಿ ಗುಳಿ ಶಂಕರ ದೇವಾಲಯ

ಮಲೆನಾಡಿನ ಮಡಿಲಾದ ಶಿವಮೊಗ್ಗ ಜಿಲ್ಲೆಯಲ್ಲಿ ಇಂತಹ ಪ್ರಕೃತಿ ಸೌಂದರ್ಯ ಸಂಪತ್ತನ್ನು ಹೊಂದಿರುವ ಜಿಲ್ಲೆಯಲ್ಲಿ ಪ್ರೇಕ್ಷಣಿಕ ಸ್ಥಳಗಳಿಗೆ ಕೊರತೆಯೇ ಇಲ್ಲ ಬಿಡಿ. ಹಾಗೆಯೇ ಅನೇಕ ಪ್ರಸಿದ್ದ ಪ್ರಖ್ಯಾತ ದೇವಸ್ಥಾನಗಳು ಇಲ್ಲಿ ಕಂಡುಬರುತ್ತವೆ ಎಂಬುದು ಸುಳ್ಳಲ್ಲ. ಅದೆ ರೀತಿಯಲ್ಲಿ ಇತ್ತೀಚಿನ ದಿನಗಳಲ್ಲಿ ತನ್ನ ಅಭೂತಪೂರ್ವ ಶಕ್ತಿಯಿಂದ ಎಲ್ಲೆಡೆ ಕೇಳಿಬರುತ್ತಿರುವ ಸ್ಥಳದ ಹೆಸರು ಶ್ರೀ ಕ್ಷೇತ್ರ ಗುಳಿ ಗುಳಿ ಶಂಕರ ಮಾಯಾಕೊಳದ ಬಗ್ಗೆ ಗೊತ್ತಾ?

ಮಲೆನಾಡು ವಿಸ್ಮಯಗಳ ತವರೂರು.

ಪ್ರಕೃತಿಯ ವೈವಿಧ್ಯತೆಗೆ ಸಾಕ್ಷಿ.

ನಂಬುವವರಿಗೆ ದೇವರು ಕಾಣುತ್ತಾನೆ.

ನಂಬದವರಿಗೆ ವಿಜ್ಞಾನ ಕಾಣುತ್ತದೆ, ಆದರೆ ಉತ್ತರ ಸಿಗುವುದಿಲ್ಲ.

ಅಂತಹ ಒಂದು ಪ್ರಕೃತಿಯ ವಿಚಿತ್ರ ಸೃಷ್ಟಿಯು ಮಲೆನಾಡಿನ ಕೊಡಚಾದ್ರಿಯ ತಪ್ಪಲಿನ ಸುಂದರ ಅಡಿಕೆ ತೋಟದಲ್ಲಿದೆ.

ಅದೇ ಚಪ್ಪಾಳೆ ಕೊಳ, ಗುಳಿ ಗುಳಿ ಕೊಳ, ನೀರ್ಗುಳ್ಳೆ ಕೊಳ, ಗೌರಿ ತೀರ್ಥ ಅಥವಾ ಗುಳಿ ಗುಳಿ ಶಂಕರ ದೇವಾಲಯ ಎನ್ನುವ ನಂಬಲಸಾಧ್ಯವಾದ ಪ್ರಕೃತಿಯ ಸೃಷ್ಟಿ.

ಶಿವಮೊಗ್ಗ ಜಿಲ್ಲೆ, ಹೊಸನಗರ ತಾಲೂಕಿನ ಬೆಳ್ಳೂರು ಗ್ರಾಮದಲ್ಲಿ ಈ ಚಮತ್ಕಾರಿಕ ಕೊಳ ಇದೆ.

1200 ವರ್ಷಗಳ ಹಿಂದೆ ಚಂಪಕ ಮಹರ್ಷಿಗಳು ಚಪ್ಪಾಳೆ ತಟ್ಟಿ ಸೃಷ್ಟಿಸಿದರು ಎನ್ನುವ ದಾಖಲೆಯನ್ನ ಅಲ್ಲಿ ಬರೆಯಲಾಗಿದೆ.

ಇಲ್ಲಿನ ವಿಶೇಷವೆಂದರೆ ಕೊಳದ ದಡದಲ್ಲಿ ನಿಂತು ಚಪ್ಪಾಳೆ ಹೊಡೆದರೆ ಕೊಳದ ನೀರು ಗುಳ್ಳೆ ಗುಳ್ಳೆಯಾಗಿ ಮೇಲಕ್ಕೆ ಬರುತ್ತದೆ.

ಈ ಕೊಳದಲ್ಲಿ ಎಲೆಗಳನ್ನ ಹಾಕಿದರೆ ಸಾಮಾನ್ಯವಾಗಿ ಎಲ್ಲ ಕೊಳಗಳಂತೆಯೇ ಎಲೆಗಳು ತೇಲುತ್ತವೆ. ಆದರೆ, ಬಿಲ್ವಪತ್ರೆಯನ್ನ ಹಾಕಿದರೆ ಅದು ಮುಳುಗುತ್ತದೆ ಮತ್ತು ಸುಮಾರು ಇಪ್ಪತ್ತು ನಿಮಿಷಗಳ ನಂತರ ಮೇಲಕ್ಕೆ ಬರುತ್ತದೆ.

ಕೊಳದ ಮೂಲೆಯಲ್ಲಿರುವ ಶಿವಲಿಂಗವೇ ಈ ಚಮತ್ಕಾರಕ್ಕೆ ಕಾರಣ ಎನ್ನಲಾಗುತ್ತದೆ.

ನಮ್ಮ ಮನಸ್ಸಿನ ಆಸೆಗಳನ್ನ ಭಕ್ತಿಯಿಂದ ಬೇಡಿಕೊಂಡರೆ ಖಂಡಿತವಾಗಿ ನೆರವೇರುತ್ತದೆ ಎನ್ನುವ ಬಲವಾದ ನಂಬುಗೆ ಭಕ್ತರಲ್ಲಿದೆ.

ಈ ಕೊಳದ ನೀರನ್ನ ಕುಡಿದು ಚರ್ಮ ರೋಗಗಳನ್ನ ವಾಸಿಮಾಡಿಕೊಂಡ ಭಕ್ತರು ಕೂಡಾ ಇದ್ದಾರೆ.

ಕೊಳದ ತುಂಬ ತುಂಬಿರುವ ಹಸಿರು ಪಾಚಿಗಳನ್ನ ಶಿವನ ಜಡೆ ಎಂದು ನಂಬಲಾಗುತ್ತದೆ.

ಗುಳಿ ಗುಳಿ ಶಂಕರ ದೇವಾಲಯ: ಇಲ್ಲಿ ಚಪ್ಪಾಳೆ ತಟ್ಟಿದ್ದಲ್ಲಿ ನೀರಿನ ಗುಳ್ಳೆಗಳು ಗುಳಿ ಗುಳಿ ಎಂದು ಮೇಲೆ ಬರುವವು
ಚಮತ್ಕಾರಿಕ ಕೊಳ

ಪ್ರಕೃತಿಯ ಸೌಂರ್ದಯ ನೋಡಿದರೂ ಮತ್ತೆ ಸುತ್ತ ನೋಡಬೇಕೆನಿಸುವ ಕೇಳಬೇಕೆನಿಸುವ ಕಲರವ ಪ್ರಕೃತಿಯ ತವರು ಸಹ್ಯಾದ್ರಿಯ ಸಿರಿಯು ಹಚ್ಚ ಹಸಿರಿನ ಸಿರಿತನ ಇದೆಲ್ಲಾ ಕಂಡು ಬರುವುದು ಮಲೆನಾಡಿನ ಮಡಿಲಾದ ಶಿವಮೊಗ್ಗ ಜಿಲ್ಲೆಯಲ್ಲಿ ಎನ್ನಬಹುದು.

ಈ ಕೊಳ ಕಂಡುಬರುವುದು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಗುಬ್ಬಿಗ ಎಂಬ ಗ್ರಾಮದಲ್ಲಿ ಈ ಕೊಳ ಕಂಡುಬರುತ್ತದೆ ಕೊಳದಲ್ಲಿ ಅನೇಕ ವಿಶೇಷತೆಗಳು ಕೂಡ ಇದೆ ಈ ಕೊಳದ ಸುತ್ತ ನೀರು ಇದೆ ಮತ್ತು ಅಲ್ಲೇ ಹತ್ತಿರದಲ್ಲಿ ಗುಳಿ ಶಂಕರ ದೇವಸ್ಥಾನವನ್ನು ಕೂಡ ನಿರ್ಮಾಣ ಮಾಡಲಾಗಿದೆ ಅಡಿಕೆ ತೋಟಗಳ ಮಧ್ಯೆ ಈ ಕೊಳ ಇದೆ ನೋಡಲು ತುಂಬಾ ಚೆನ್ನಾಗಿದೆ ಹಾಗೂ ಅನೇಕ ಪವಾಡಗಳು ಕೂಡ ನಡೆಯುತ್ತದೆ.

ಸಾಕಷ್ಟು ವಿಶೇಷವಾಗಿದೆ ಈ ಹೊಂಡ. ಇದರ ಶಕ್ತಿಯಂತೂ ಹೇಳ ತೀರದಷ್ಟು. ಅನೇಕ ಪವಾಡಗಳು ಇದರ ಮಹಿಮೆಯಿಂದ ಜರುಗಿದೆ ಹಾಗೂ ಇಂದಿಗೂ ಜರಗುತ್ತಲಿವೆ ಎನ್ನಲಾಗಿದೆ. ಮುಂಜಾವಿನ ಹಾಗೂ ಮುಸ್ಸಂಜೆಯ ಸೂರ್ಯನ ಕಿರಣಗಳು ಈ ಹೊಂಡದ ಮೇಲೆ ಬಿದ್ದಾಗ, ಹೊಂಡವು ಬಂಗಾರದಂತೆ ಹೊಳಪು ಪಡೆಯುತ್ತದೆ. ಈ ನೋಟ ಎಂಥವರನ್ನೂ ಬೆರುಗುಗೊಳಿಸದೆ ಇರಲಾರದು.

ಗುಳಿಗುಳಿ ಶಂಕೇಶ್ವರ ದೇವಸ್ಥಾನ ಶಿವನ ಮುಖ್ಯ ದೇವತೆಯಾಗಿ ಮತ್ತು ಚೌಡೇಶ್ವರಿ ದೇವಿಯು ನಿಗೂಢ ಭಗವಂತ ಶಿವನ ದೇವಾಲಯ ಮತ್ತು ಪವಿತ್ರ ಕೊಳವಾಗಿದೆ. ನಗರದ ಅವ್ಯವಸ್ಥೆಯಿಂದ ದೂರವಿರುವ ಶಾಂತ ಮತ್ತು ಶಾಂತಿಯುತ ಸ್ಥಳದಲ್ಲಿ ಶಂಕರನಿಗೆ ಸಮರ್ಪಿತವಾದ ದೇವಾಲಯವನ್ನು ನೋಡಬಹುದು. ಈ ದೇವಾಲಯವನ್ನು ವಿಶೇಷವಾಗಿ ಜಾಥಾ ತೀರ್ಥ ಎಂದು ಕರೆಯಲಾಗುತ್ತದೆ.

ಇದು ಒಂದು ಮಯಾಕೊಳವಾಗಿದೆ. ಶಿವನ ಮುಖ್ಯ ದೇವತೆಯಾಗಿ ಮತ್ತು ಚೌಡೇಶ್ವರಿ ದೇವಿಯು ನಿಗೂಢ ಭಗವಂತ ಶಿವನ ದೇವಾಲಯ ಮತ್ತು ಪವಿತ್ರ ಕೊಳವಾಗಿದೆ. ನೀವು ಕೊಳದ ಬಳಿ ಶಬ್ದ ಮಾಡಿದರೆ ಅದು ಪ್ರತಿಕ್ರಿಯಿಸುತ್ತದೆ. ಕೆಲವು ಗುಳ್ಳೆಗಳು ಕೊಳದ ಕೆಳಗೆ ಬರುತ್ತವೆ. ಕೊಳಕ್ಕೆ ಯಾವುದೇ ನೀರಿನ ಮೂಲವಿಲ್ಲ. ಇಲ್ಲಿ ಗಂಗೆಯು ಸದಾ ಕಾಲ ಹರಿಯುವಳು ಆ ಚಿಲುಮೆಯಲ್ಲಿ ನಾವು ಅದರ ಬಳಿ ಚಪ್ಪಾಳೆ ತಟ್ಟಿದ್ದಲ್ಲಿ ನೀರಿನ ಗುಳ್ಳೆಗಳು ಗುಳಿ ಗುಳಿ ಎಂದು ಮೇಲೆ ಬರುವವು.

ಹಾಗೆಯೇ ಆ ನೀರಿನಲ್ಲಿ ಸ್ನಾನ ಮಾಡಿದರೆ ರೋಗ ನಿರೋಧಕ ಶಕ್ತಿ ಇರುವುದರಿಂದ ಯಾವುದೇ ರೋಗಗಳು ಬರುವುದಿಲ್ಲ ಎಂಬ ಖ್ಯಾತಿಯನ್ನು ಪಡೆದಿದೆ ಹಾಗೆಯೇ ಮನಸಲ್ಲಿ ನಮಗೆ ಅಗಬೇಕಿರುವ ಕೆಲಸ ಅಥವಾ ಎನಾದರು ಕೋರಿಕೆಗಳು ಇದ್ದರೆ ಒಳ್ಳೆಯ ಮನಸ್ಸಿನಿಂದ ಪ್ರಾರ್ಥಿಸಿ ಬಿಲ್ವ ಪತ್ರೆಯ ಎಲೆಯನ್ನು ಮೂರು ಬಾರಿ ಮುಳುಗಿಸಿ ನಂತರ ಆ ಚಿಲುಮೆಯಲ್ಲಿ ಬಿಡಬೇಕು ಆ ಬಿಲ್ವಪತ್ರೆಯು ಕೆಳಗೆ ಹೋಗಿ ನಂತರ ಮೇಲೆ ಬರುವುದು ಅದು ಕೆಳಗೆ ಹೋಗಿ ಬೇಗ ಮೇಲೆ ಬಂದರೆ ನಾವು ಅಂದುಕೊಂಡ ಕೆಲಸ ಬೇಗ ಸಿದ್ಧಿಸುವುದು ಎಂದಾಗಿದೆ.

ಇದರ ಸ್ಥಳ ಪುರಾಣ ಗಮನಿಸಿದಾಗ ತಿಳಿದು ಬರುವ ವಿಷಯವೆಂದರೆ, ಹಿಂದೆ ಬೇಲೂರು-ಹಳೇಬೀಡು ಸ್ಥಳಗಳಿಗೆ ಶತ್ರುಗಳು ಆಕ್ರಮಣ ಮಾಡಿದಾಗ ಅಲ್ಲಿ ವಾಸವಿದ್ದ ಅನೇಕ ಜನರು ಬೇರೆಡೆ ವಲಸೆ ಹೋದರು. ಅಂತಹ ಒಂದು ಸಂದರ್ಭದಲ್ಲಿ ಹೊಯ್ಸಳರ ಒಂದು ಕುಟುಂಬವು ಈ ಹೊಂಡವಿರುವ ಪ್ರದೇಶಕ್ಕೆ ಬಂದು ನೆಲೆಸಿದರು.

ಗುಳಿ ಗುಳಿ ಶಂಕರ ದೇವಾಲಯ: ಇಲ್ಲಿ ಚಪ್ಪಾಳೆ ತಟ್ಟಿದ್ದಲ್ಲಿ ನೀರಿನ ಗುಳ್ಳೆಗಳು ಗುಳಿ ಗುಳಿ ಎಂದು ಮೇಲೆ ಬರುವವು
ಗುಳಿ ಗುಳಿ ಶಂಕರ ದೇವಾಲಯ

ಹಾಗೆ ಬಂದು ನೆಲೆಸಿದವರು ಶಿವನ ಪರಮ ಭಕ್ತರಾಗಿದ್ದು, ಶಿವನಿಗೆ ಮುಡಿಪಾದ ಐದು ದೇವಾಲಯಗಳನ್ನು ಮತ್ತೆ ವಿವಿಧೆಡೆ ನಿರ್ಮಿಸಿದರು. ಅವುಗಳನ್ನು ಪಂಚಶಂಕರ ಎಂದು ಕರೆಯಲಾಗಿದೆ. ಹಾಗೆ ಪಂಚ ಶಂಕರಗಳಲ್ಲಿ ಒಬ್ಬನಾಗಿದ್ದಾನೆ ಈ ಗುಳಿ ಗುಳಿ ಶಂಕರ. ಗುಳಿ ಗುಳಿ ಶಂಕರ ಲಿಂಗವು ಪ್ರತಿಷ್ಠಾಪಿತವಾದ ಜಾಗದ ಕುರಿತು ತಿಳಿದಾಗ ಒಂದು ಕ್ಷಣ ಅಚ್ಚರಿಯಾಗದೆ ಇರಲಾರದು.

ಇನ್ನೂ ಈ ಹೊಂಡದ ಕುರಿತು ಸಾಕಷ್ಟು ರೋಚಕವಾದ ಸಂಗತಿಗಳಿವೆ. ಪ್ರಪ್ರಥಮವಾಗಿ ಈ ಹೊಂಡದಲ್ಲಿನ ನೀರು ಸಾಕಷ್ಟು ವಿಶೇಷ ಹಾಗೂ ಪವಾಡಮಯ ಎನ್ನಲಾಗಿದೆ. ಇದನ್ನು ವೈಜ್ಞಾನಿಕವಾಗಿ ಪರೀಕ್ಷಿಸಲಾಗಿದ್ದು ಇದರಲ್ಲಿ ಸಾಮಾನ್ಯವಾಗಿ ದೊರಕುವ ಕುಡಿಯುವ ನೀರಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಹಾಗೂ ಕೆಲವು ವಿಶೇಷವಾದ ಖನಿಜಾಂಶಗಳು ಇರುವುದು ಪತ್ತೆಯಾಗಿದೆಯಂತೆ.

ಇಲ್ಲಿನ ಮಾಯಾಕೊಳ ವಿಶಿಷ್ಟವಾಗಿದೆ ಇದು ಪವಾಡಗಳು ಇದರ ಮಹಿಮೆಯಿಂದ ಜರುಗಿದೆ ಹಾಗೂ ಇಂದಿಗೂ ಜರಗುತ್ತಲಿವೆ ಎನ್ನಲಾಗಿದೆ. ಮುಂಜಾವಿನ ಹಾಗೂ ಮುಸ್ಸಂಜೆಯ ಸೂರ್ಯನ ಕಿರಣಗಳು ಈ ಹೊಂಡದ ಮೇಲೆ ಬಿದ್ದಾಗ ಹೊಂಡವು ಬಂಗಾರದಂತೆ ಹೊಳಪು ಪಡೆಯುತ್ತದೆ. ಈ ನೋಟ ಎಂಥವರನ್ನೂ ಬೆರುಗುಗೊಳಿಸದೆ ಇರಲಾರದು.

ಈ ಹೊಳದ ನೀರು ಸದಾಕಾಲ ಉಕ್ಕಿ ಹರಿಯುತ್ತಲೆ ಇರುತ್ತದೆ. ಸಾಮಾನ್ಯವಾಗಿ ನೀರಿನಲ್ಲಿ ಎಲೆಗಳನ್ನು ಹಾಕಿದಾಗ ಅವು ತೇಲುತ್ತವೆ. ಆದರೆ ಶಿವನಿಗೆ ಪ್ರೀಯವಾದ ಬಿಲ್ವ ಪತ್ರೆಯನ್ನು ಹಾಕಿದಾಗ ನಿಮ್ಮ ಭಕ್ತಿ ಶಕ್ತಿಗನುಗುಣವಾಗಿ ಅದು ಮುಳುಗುತ್ತದೆ.

ಈ ಹೊಂಡಕ್ಕೆ ಬೇರೆ ಯಾವ ಬಾಹ್ಯ ನೀರಿನ ಮೂಲಗಳಿಲ್ಲ. ಆದರೂ ಇದರಲ್ಲಿನ ನೀರು ಕಡು ಬೇಸಿಗೆಯ ಸಮಯದಲ್ಲೂ ಸದಾ ಉಕ್ಕಿ ಹರಿಯುತ್ತಿರುತ್ತದೆ. ಇದಕ್ಕೆ ಕಾರಣ ಈ ಹೊಂಡದ ತಳದಲ್ಲಿರುವ ನೀರಿನ ಅಗಾಧ ಚಿಲುಮೆ. ಇದು ಸದಾ ನೀರನ್ನು ರಭಸದಿಂದ ಹೊರದಬ್ಬುತ್ತಿರುತ್ತದೆ. ಹಾಗಾಗಿ ನೀರಿನ ಗುಳ್ಳಿಗಳು ಈ ಹೊಂಡದಲ್ಲಿ ಜಿನುಗುತ್ತಿರುತ್ತವೆ. ಸಾಧ್ಯವಾದರೆ ಒಮ್ಮೆ ಈ ಪುಣ್ಯ ಕ್ಷೇತ್ರಕ್ಕೆ ಭೇಟಿ ಕೊಡಿ .

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಕೆಲವು ಬ್ರಾಹ್ಮಣರು ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಏಕೆ ತಿನ್ನುವುದಿಲ್ಲ?

ಕೆಲವು ಬ್ರಾಹ್ಮಣರು ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಏಕೆ ತಿನ್ನುವುದಿಲ್ಲ?

ಹೋಳಿ ದಹನ

ಈ ವರ್ಷ ಮಾರ್ಚ್ 7 ರಂದು ಹೋಳಿ ದಹನ ಆಚರಿಸಲಾಗುತ್ತದೆ