in

ಮೂಳೆಗಳು ಬಲಿಷ್ಠವಾಗಿರುವುದಕ್ಕೆ ಕೆಲವೊಂದು ಆಹಾರಗಳು

ಮೂಳೆಗಳು ಬಲಿಷ್ಠವಾಗಿರುವುದಕ್ಕೆ ಆಹಾರಗಳು
ಮೂಳೆಗಳು ಬಲಿಷ್ಠವಾಗಿರುವುದಕ್ಕೆ ಆಹಾರಗಳು

ಆರೋಗ್ಯಕರ ಮೂಳೆಗಳಿಗೆ ಕ್ಯಾಲ್ಸಿಯಂ ಮಾತ್ರ ಅಗತ್ಯವಾದ ಖನಿಜವಲ್ಲ. ನಿಮ್ಮ ಮೂಳೆಯ ಆರೋಗ್ಯವನ್ನು ಕಾಪಾಡಿಕೊಳ್ಳಲು ಕ್ಯಾಲ್ಸಿಯಂ ಹೊರತುಪಡಿಸಿ, ಇತರ ಅನೇಕ ಪೋಷಕಾಂಶಗಳು ಅಷ್ಟೇ ಅವಶ್ಯಕ. ಈ ಎಲ್ಲಾ ಖನಿಜಗಳು ಒಟ್ಟಾಗಿ ನಿಮ್ಮ ಮೂಳೆಗಳ ಸಾಂದ್ರತೆಯನ್ನು ಹೆಚ್ಚಿಸುತ್ತವೆ ಮತ್ತು ವಯಸ್ಸಾದಾಗಲೂ ಅವುಗಳನ್ನು ಆರೋಗ್ಯವಾಗಿರಿಸುತ್ತವೆ. 

ದೇಹದಲ್ಲಿ ಮೂಳೆಗಳು ಬಲಿಷ್ಠವಾಗಿರುವುದು ಬಹಳ ಮುಖ್ಯ. ಮೂಳೆಗಳ ಮೇಲೆಯೇ ನಮ್ಮ ಇಡೀ ದೇಹ ನಿಂತಿರುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಚಿಕ್ಕ ವಯಸ್ಸಿನಲ್ಲೇ ಸಂಧಿವಾತ, ಮೊಣಕಾಲು ನೋವಿನಂತಹ ಸಮಸ್ಯೆಗಳು ಎದುರಾಗುತ್ತಿದೆ. ಕಳಪೆ ಆಹಾರ ಸೇವನೆಯಿಂದಲೇ ಈ ಸಮಸ್ಯೆ ಎದುರಾಗುತ್ತದೆ. ಕ್ಯಾಲ್ಸಿಯಂ ಭರಿತ ಆಹಾರಗಳನ್ನು ಸೇವಿಸಿದರೆ ಮೂಳೆಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ತಪ್ಪಿಸಬಹುದು. 

ಮೂಳೆಗಳು ಆರೋಗ್ಯವಾಗಿರಬೇಕಾದರೆ ಬರೀ ಹಾಲು ಕುಡಿದರೆ ಸಾಲದು, ನಮ್ಮ ಮೂಳೆಗಳು ಆರೋಗ್ಯಕರವಾಗಿ ಬಲಶಾಲಿಯಾಗಿರಬೇಕಾದರೆ ಬರೀ ಕ್ಯಾಲ್ಸಿಯಂ ಒಂದಿದ್ದರೆ ಸಾಲುವುದಿಲ್ಲ.

ಮೂಳೆಗಳು ಬಲಿಷ್ಠವಾಗಿರುವುದಕ್ಕೆ ಕೆಲವೊಂದು ಆಹಾರಗಳು
ಡೈರಿ ಮತ್ತು ಕ್ಯಾಲ್ಸಿಯಂ ಪೂರಕಗಳು

ಬಲವಾದ ಮೂಳೆಗಳು ಸರಿಯಾದ ಭಂಗಿಯಲ್ಲಿ ನಿಲ್ಲಲು ಸಹಾಯ ಮಾಡುವುದಲ್ಲದೆ, ನಿಮ್ಮ ಸೂಕ್ಷ್ಮ ಅಂಗಗಳನ್ನು ಯಾವುದೇ ರೀತಿಯ ಗಾಯದಿಂದ ರಕ್ಷಿಸಬಹುದು. ಕ್ಯಾಲ್ಸಿಯಂ ಖನಿಜವಾಗಿದ್ದು ಅದು ಮೂಳೆಯ ಸಾಂದ್ರತೆಯನ್ನು ಹೆಚ್ಚಿಸಲು ಮತ್ತು ಮೂಳೆಯನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಈ ಕಾರಣದಿಂದಲೇ ನಮ್ಮ ಪೂರ್ವಜರು ಬಾಲ್ಯದಿಂದಲೂ ಮೂಳೆಗಳನ್ನು ಬಲಪಡಿಸಲು ಕ್ಯಾಲ್ಸಿಯಂ ಭರಿತ ಆಹಾರಗಳಾದ ಡೈರಿ ಮತ್ತು ಕ್ಯಾಲ್ಸಿಯಂ ಪೂರಕಗಳನ್ನು ನೀಡುವಂತೆ ಸಲಹೆ ನೀಡುತ್ತಿದ್ದರು.

ಕ್ಯಾಲ್ಸಿಯಂ ಸೇವನೆಯನ್ನು ಹೆಚ್ಚಳಗೊಳಿಸುವ ಒಂದು ಬಹುಮುಖ್ಯ ಉಪಾಯ ಅಂದರೆ ಆಹಾರದ ಮೂಲಕ ಕ್ಯಾಲ್ಸಿಯಂ ಸೇವನೆಯನ್ನು ಹೆಚ್ಚಿಸುವುದು. ಅನೇಕ ರೀತಿಯ ಶಿಫಾರಸು ರಹಿತ ಕ್ಯಾಲ್ಸಿಯಂ ಪೂರಣಗಳು ಲಭ್ಯ ಇದ್ದು ಅವು ಮೂಳೆಗಳ ಆರೋಗ್ಯವನ್ನು ಕಾಪಾಡಿಕೊಳ್ಳಲು ಮತ್ತು ಆಸ್ಟೊಯೋಪೋರೋಸಿಸ್‌ ತೊಂದರೆಯನ್ನು ತಡೆಗಟ್ಟಲು ಸಹಾಯ ಮಾಡಬಹುದು.

*ಮೊಳಕೆ ಕಾಳು ಕೂಡ ಕ್ಯಾಲ್ಸಿಯಂನಲ್ಲಿ ಸಮೃದ್ಧವಾಗಿದೆ. ಇದನ್ನು ಸಲಾಡ್ ನಲ್ಲಿ ಸೇವಿಸಬಹುದು ಅಥವಾ ಪಲ್ಯ ಮಾಡಿ ತಿನ್ನಬಹುದು. ಇನ್ನು ಮೊಳಕೆ ಕಾಳು ಸೇವಿಸುವುದರಿಂದ ತೂಕವನ್ನು ಕಡಿಮೆ ಮಾಡಲು ಕೂಡಾ ಸಹಾಯ ಮಾಡುತ್ತದೆ.

*ಕಿವಿ ಹಣ್ಣು ಅಥವಾ ಅದರ ರಸವಿರಲಿ, ಇದರಲ್ಲಿ ಸುಮಾರು 60 ಮಿಗ್ರಾಂಗೂ ಹೆಚ್ಚಿನ ಪ್ರಮಾಣದ ಕ್ಯಾಲ್ಸಿಯಂ ಇರುತ್ತದೆ. ಇದು ಮೂಳೆಗಳ ಬಲ, ಹಲ್ಲುಗಳ ರಚನೆ ಮತ್ತು ಆಸ್ಟಿಯೊಪೋರೋಸಿಸ್ ಅನ್ನು ತಡೆಯಲು ಸಹಾಯ ಮಾಡುತ್ತದೆ.

*ವಿಟಮಿನ್ ಕೆ ಯ ಸಮರ್ಪಕ ಸೇವನೆಯು ಹೃದ್ರೋಗ, ಮಧುಮೇಹ ಮತ್ತು ಕ್ಯಾನ್ಸರ್ ಗೆ ಯಾವಾಗಲೂ ಅಗತ್ಯ ಎಂದು ಹೇಳಲಾಗಿದೆ. ಇದಲ್ಲದೇ, ನಿಮ್ಮ ಮೂಳೆಯ ಆರೋಗ್ಯವನ್ನು ಕಾಪಾಡಿಕೊಳ್ಳಲು ವಿಟಮಿನ್ ಕೆ ಸಮೃದ್ಧವಾಗಿರುವ ಆಹಾರಗಳನ್ನು ಸೇವಿಸಲು ಇನ್ನೊಂದು ಕಾರಣವಿದೆ. ವಿಟಮಿನ್ ಕೆ ಯ ದೈನಂದಿನ ಸೇವನೆಯು ಮಹಿಳೆಯರಿಗೆ 122 ಎಂಸಿಜಿ ಮತ್ತು ಪುರುಷರಿಗೆ 138 ಎಂಸಿಜಿ. ವಿಟಮಿನ್ ಕೆ ಯ ಕೆಲವು ಸಾಮಾನ್ಯ ಮೂಲಗಳಲ್ಲಿ ಬ್ರೊಕೋಲಿ, ಪಾಲಕ್, ಎಲೆಕೋಸು ಮತ್ತು ಲೆಟಿಸ್ ಸೇರಿವೆ.

ಮೂಳೆಗಳು ಬಲಿಷ್ಠವಾಗಿರುವುದಕ್ಕೆ ಕೆಲವೊಂದು ಆಹಾರಗಳು
ಮೊಳಕೆ ಕಾಳು ಕೂಡ ಕ್ಯಾಲ್ಸಿಯಂನಲ್ಲಿ ಸಮೃದ್ಧವಾಗಿದೆ

*ಮೂಳೆಯ ಆರೋಗ್ಯವನ್ನು ಕಾಪಾಡುವಲ್ಲಿ ವಿಟಮಿನ್ ಸಿ ಕೂಡ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಲಾಗುತ್ತದೆ. ಮೂಳೆ ಬೆಳವಣಿಗೆ, ಮರುಹೀರಿಕೆ ಮತ್ತು ಆಸ್ಟಿಯೊಪೊರೋಸಿಸ್ ತಡೆಗಟ್ಟಲು ವಿಟಮಿನ್ ಸಿ ಪ್ರಯೋಜನಕಾರಿ ಎಂದು ಕಂಡುಬಂದಿದೆ.

ಬೋನ್ ಮ್ಯಾಟ್ರಿಕ್ಸ್‌ನಲ್ಲಿ ಕಾಲಜನ್ ಉತ್ಪಾದನೆಗೆ ವಿಟಮಿನ್ ಸಿ ಕಾರಣವಾಗಿದೆ. ಇದು ಮೂಳೆಗಳ ಆರೋಗ್ಯಕ್ಕೆ ಹಾನಿಕಾರಕವಾದ ಫ್ರೀ ರಾಡಿಕಲ್‌ಗಳನ್ನು ಸಹ ತೆಗೆದುಹಾಕುತ್ತದೆ. ಇದರ ಜೊತೆಯಲ್ಲಿ, ವಿಟಮಿನ್ ಸಿ ಶಕ್ತಿಯುತವಾದ ಉತ್ಕರ್ಷಣ ನಿರೋಧಕವಾಗಿದ್ದು ಅದು ರೋಗನಿರೋಧಕ ಆರೋಗ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ವಿಟಮಿನ್ ಸಿ ಯ ಸಾಮಾನ್ಯ ಡೋಸ್ ದಿನಕ್ಕೆ ಸುಮಾರು 500 ಮಿಗ್ರಾಂ ನಿಂದ 1000 ಮಿಗ್ರಾಂ, ಇದನ್ನು ಕಿತ್ತಳೆ, ಟೊಮ್ಯಾಟೊ ಮತ್ತು ಇತರ ಸಿಟ್ರಿಕ್ ಹಣ್ಣುಗಳಂತಹ ಆಹಾರಗಳನ್ನು ಸೇವಿಸುವ ಮೂಲಕ ಪೂರೈಸಬಹುದು.

*ಕಿತ್ತಳೆ ಹಣ್ಣು ಅನೇಕ ಜನರಲ್ಲಿ ಅಚ್ಚುಮೆಚ್ಚಿನದ್ದಾಗಿರುತ್ತದೆ. ಕಿತ್ತಳೆ ರಸವು ದೇಹಕ್ಕೆ ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಎರಡನ್ನೂ ಒದಗಿಸುತ್ತದೆ. ಇದರಿಂದಾಗಿ ಮೂಳೆಯು ಹೆಚ್ಚೆಚ್ಚು ಬಲವಾಗುತ್ತದೆ. ಕಿತ್ತಳೆ ರಸವನ್ನು ನಿಯಮಿತವಾಗಿ ಸೇವಿಸುವುದರಿಂದ ಆಸ್ಟಿಯೊಪೋರೋಸಿಸ್ ಅನ್ನು ತಡೆಯಬಹುದು.

ಮೂಳೆಗಳು ಬಲಿಷ್ಠವಾಗಿರುವುದಕ್ಕೆ ಕೆಲವೊಂದು ಆಹಾರಗಳು
ಹಸಿರು ಎಲೆ ತರಕಾರಿಗಳು ಕ್ಯಾಲ್ಸಿಯಂ ಹೊಂದಿರುತ್ತದೆ

*ಹಸಿರು ಎಲೆ ತರಕಾರಿಗಳು ಬಹಳಷ್ಟು ಕ್ಯಾಲ್ಸಿಯಂ ಹೊಂದಿರುತ್ತದೆ. ಇದು ಮೂಳೆ ಮತ್ತು ಹಲ್ಲುಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಒಂದು ಕಪ್ ಬೇಯಿಸಿದ ಪಾಲಕ್ ಸೊಪ್ಪು ದೇಹಕ್ಕೆ ಒಂದು ದಿನಕ್ಕೆ ಸುಮಾರು 25 ಪ್ರತಿಶತದಷ್ಟು ಕ್ಯಾಲ್ಸಿಯಂ ಅನ್ನು ಒದಗಿಸುತ್ತದೆ. ನಾರಿನಂಶವಿರುವ ಎಲೆಗಳು ವಿಟಮಿನ್ ಎ ಮತ್ತು ಕಬ್ಬಿಣವನ್ನು ಹೇರಳವಾಗಿ ಹೊಂದಿರುತ್ತವೆ.

*ಪಪ್ಪಾಯ ಹಣ್ಣಿನಲ್ಲಿ ಉಷ್ಣಾಂಶ ಹೆಚ್ಚಾಗಿದ್ದು, ಅಪಾರ ಪ್ರಮಾಣದ ಕ್ಯಾಲ್ಸಿಯಂ ಇದೆ. 100 ಗ್ರಾಂ ಪಪ್ಪಾಯಿಯ ಸೇವನೆಯಲ್ಲಿ ನೀವು 20 ಮಿಗ್ರಾಂ ಕ್ಯಾಲ್ಸಿಯಂ ಅನ್ನು ಕಾಣಬಹುದು ಎಂದು ಹೇಳಲಾಗುತ್ತದೆ. ಡಯಟ್ ಮಾಡುವವರು ಪಪ್ಪಾಯವನ್ನು ನಿರಂತರವಾಗಿ ಆಹಾರದಲ್ಲಿ ತೆಗೆದುಕೊಳ್ಳಬಹುದು.

*ಸೋಯಾಬೀನ್ ಕೂಡ ಕ್ಯಾಲ್ಸಿಯಂನ ಉತ್ತಮ ಮೂಲವಾಗಿದೆ. ವಿಟಮಿನ್ ಬಿ, ವಿಟಮಿನ್ ಡಿ ಮತ್ತು ಕ್ಯಾಲ್ಸಿಯಂ ಇದರಲ್ಲಿ ಹೇರಳವಾಗಿ ಕಂಡುಬರುತ್ತದೆ. 

*ವಿಟಮಿನ್ ಡಿ, ಸೂರ್ಯನ ಬೆಳಕು ಪೌಷ್ಟಿಕಾಂಶ ಎಂದೂ ಕರೆಯಲ್ಪಡುತ್ತದೆ, ಮೂಳೆ ಸಾಂದ್ರತೆಯನ್ನು ಹೆಚ್ಚಿಸಲು ಮತ್ತು ಮೂಳೆಯ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹ ಇದು ಅವಶ್ಯಕವಾಗಿದೆ. ಜೀವಕೋಶಗಳಲ್ಲಿ ಸಂಗ್ರಹವಾಗಿರುವ ಕೊಲೆಸ್ಟ್ರಾಲ್ ಅನ್ನು ಒಡೆಯುವ ಮೂಲಕ ನಮ್ಮ ಚರ್ಮವು ಸೂರ್ಯನ ಬೆಳಕಿಗೆ ಒಡ್ಡಿಕೊಂಡಾಗ ದೇಹದಲ್ಲಿ ಕೊಬ್ಬಿನಲ್ಲಿ ಕರಗುವ ವಿಟಮಿನ್ ಗಳು ಉತ್ಪತ್ತಿಯಾಗುತ್ತವೆ. ವಿಟಮಿನ್ ಡಿ ಕ್ಯಾಲ್ಸಿಯಂ ಹೀರಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ರಕ್ತದಲ್ಲಿ ಸಾಕಷ್ಟು ಪ್ರಮಾಣದ ಪೋಷಕಾಂಶಗಳನ್ನು ನಿರ್ವಹಿಸುತ್ತದೆ. ನಿಮ್ಮ ರಕ್ತದಲ್ಲಿ ಕ್ಯಾಲ್ಸಿಯಂ ಮಟ್ಟ ಕಡಿಮೆಯಾದಾಗ, ನೀವು ಸೇವಿಸುವ ಆಹಾರವನ್ನು ಮೂಳೆಗಳಿಂದ ಎಳೆಯುವ ಮೂಲಕ ಈ ಪೋಷಕಾಂಶವು ಅದನ್ನು ಹೀರಿಕೊಳ್ಳಲು ಆರಂಭಿಸುತ್ತದೆ.

*ಬಾಳೆಹಣ್ಣು ಜೀರ್ಣಕ್ರಿಯೆಗೆ ಸಹಾಯ ಮಾಡುವುದರ ಜೊತೆಗೆ, ಮೆಗ್ನೀಷಿಯಂನ ಉತ್ತಮ ಆಗರವಾಗಿದೆ. ಇದು ಪೋಷಕಾಂಶದ ಅವಿಭಾಜ್ಯ ಅಂಗವಾಗಿದ್ದು, ಮೂಳೆ ಮತ್ತು ಹಲ್ಲುಗಳ ರಚನೆಯ ಬೆಳವಣಿಗೆಯಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಆದ್ದರಿಂದ, ಮೂಳೆಗಳ ಆರೋಗ್ಯಕ್ಕೆ ದಿನಕ್ಕೊಂದಾದರೂ ಬಾಳೆಹಣ್ಣು ಸೇವಿಸುವುದು ಉತ್ತಮ.

*ಕ್ಯಾಲ್ಸಿಯಂ, ನಮ್ಮ ಶರೀರದಲ್ಲಿರುವ ಒಟ್ಟು ಕ್ಯಾಲ್ಸಿಯಂನ 99.5% ಪ್ರಮಾಣ ನಮ್ಮ ಮೂಳೆಗಳಲ್ಲಿ ಇರುತ್ತದೆ. ಅನೇಕ ಜನರು ತಾವು ಸೇವಿಸುವ ಆಹಾರದ ಮೂಲಕ ಸಾಕಷ್ಟು ಕ್ಯಾಲ್ಸಿಯಂ ಅನ್ನು ಪಡೆಯುತ್ತಾರೆ. 

ಕ್ಯಾಲ್ಸಿಯಂ ಅನ್ನು ಒಳಗೊಂಡಿರುವ ಉತ್ತಮ ಆಹಾರ ಮೂಲಗಳು ಅಂದರೆ : 

ಬೆಣ್ಣೆ  

ಮೊಸರು  

ಹಾಲು 

ಮೀನುಗಳು 

ಬಸಳೆ, ಟರ್ನಿಪ್‌ ಗಡ್ಡೆಯಂತಹ ದಟ್ಟ ಹಸುರು ಬಣ್ಣದ ಸೊಪ್ಪು ತರಕಾರಿಗಳು

ಪುಷ್ಟೀಕರಿಸಿದ ಕಾರ್ನ್ ಫ್ಲೇಕ್ಸ್‌  

ಪುಷ್ಟೀಕರಿಸಿದ ಕಿತ್ತಲೆ ರಸ.

ಸೋಯಾಬೀನ್ಸ್‌

ಪುಷ್ಟೀಕರಿಸಿದ ಬ್ರೆಡ್‌ ಮತ್ತು ಕಾಳುಗಳು

*ಬೆರ್ರಿಗಳು ಸಂಪೂರ್ಣ ಆರೋಗ್ಯ ಪ್ರಯೋಜನಗಳನ್ನು ಹೊಂದಿವೆ. ಅವು ಕ್ಯಾಲ್ಸಿಯಂ, ಮ್ಯಾಂಗನೀಸ್, ಪೊಟ್ಯಾಶಿಯಂ, ವಿಟಮಿನ್ ಕೆ ಮತ್ತು ವಿಟಮಿನ್ ಸಿ ಯಂತಹ ಪೋಷಕಾಂಶಗಳಿಂದ ತುಂಬಿರುತ್ತವೆ, ಇದು ಮೂಳೆ ರಚನೆಗೆ ಸಹಾಯ ಮಾಡುತ್ತದೆ.

*ಮೂಳೆಗಳ ಆರೋಗ್ಯಕ್ಕೆ ಮೊಟ್ಟೆ ತುಂಬಾ ಪ್ರಯೋಜನಕಾರಿಯಾಗಿದೆ. ಹೌದು, ಮೂಳೆಗಳ ಆರೋಗ್ಯಕ್ಕೆ ಬಹಳ ಮುಖ್ಯವಾಗಿರುವ ವಿಟಮಿನ್ ಡಿ ಮೊಟ್ಟೆಯಲ್ಲಿ ಹೇರಳವಾಗಿ ಕಂಡುಬರುತ್ತದೆ. ಬೆಳಗಿನ ಉಪಹಾರಕ್ಕಾಗಿ ಪ್ರತಿದಿನ ಬೇಯಿಸಿದ ಮೊಟ್ಟೆ ಅಥವಾ ಆಮ್ಲೆಟ್ ಮಾಡಿ ತಿನ್ನುತ್ತಾ ಬಂದರೆ ದೇಹದಲ್ಲಿ ಕ್ಯಾಲ್ಸಿಯಂ ಕೊರತೆ ನೀಗುತ್ತದೆ. 

ಮೂಳೆಗಳು ಬಲಿಷ್ಠವಾಗಿರುವುದಕ್ಕೆ ಕೆಲವೊಂದು ಆಹಾರಗಳು
ಮೂಳೆಗಳ ಆರೋಗ್ಯಕ್ಕೆ ಮೊಟ್ಟೆ ತುಂಬಾ ಪ್ರಯೋಜನ

*ಜೀವಕೋಶದ ಬೆಳವಣಿಗೆ ಮತ್ತು ಜೀವಕೋಶದ ಪುನರುತ್ಪಾದನೆಗೆ ಪ್ರೋಟೀನ್ ಅಗತ್ಯ ಎಂದು ಹೆಚ್ಚಿನ ಜನರಿಗೆ ತಿಳಿದಿದೆ. ಪ್ರೋಟೀನ್ ಭರಿತ ಆಹಾರಗಳು ಮೂಳೆ ಮತ್ತು ಸ್ನಾಯುಗಳನ್ನು ಸಂರಕ್ಷಿಸುತ್ತವೆ. ಹೆಚ್ಚಿನ ಪ್ರೋಟೀನ್ ಆಹಾರವು ಮೂಳೆ ಖನಿಜ ಸಾಂದ್ರತೆಯನ್ನು ಹೆಚ್ಚಿಸುತ್ತದೆ ಮತ್ತು ಮೂಳೆ ನಷ್ಟದ ಪ್ರಮಾಣವನ್ನು ನಿಧಾನಗೊಳಿಸುತ್ತದೆ ಎಂದು ಅಧ್ಯಯನಗಳು ತಿಳಿಸಿವೆ. ಪ್ರೋಟೀನ್‌ನ ಸಮರ್ಪಕ ಸೇವನೆಯು ಮೂಳೆ ಮುರಿತಗಳು ಮತ್ತು ಮೂಳೆ ನಷ್ಟದ ಅಪಾಯವನ್ನು ಕಡಿಮೆ ಮಾಡುತ್ತದೆ. ಸಂಪೂರ್ಣ ಪ್ರೋಟೀನ್‌ನ ಮೂಲಗಳು ಮಸೂರ, ದ್ವಿದಳ ಧಾನ್ಯಗಳು, ಬೀನ್ಸ್ ಮತ್ತು ಡೈರಿ ಉತ್ಪನ್ನಗಳನ್ನು ಸೇವಿಸುವುದರಿಂದ ನೀವು ಪ್ರೋಟೀನ್‌ ಅನ್ನು ಪಡೆಯಬಹುದು.

*ಅನಾನಸ್ ಹಣ್ಣು ವಿಟಮಿನ್ ಡಿ ಮತ್ತು ಕ್ಯಾಲ್ಸಿಯಂ ಅನ್ನು ನೇರವಾಗಿ ದೇಹಕ್ಕೆ ನೀಡುವುದಿಲ್ಲ. ಬದಲಾಗಿ, ಇದು ಪೊಟ್ಯಾಶಿಯಂ ಮೂಲವಾಗಿದ್ದು ಅದು ದೇಹದಲ್ಲಿ ಆ್ಯಸಿಡ್ ಲೋಡ್ ಅನ್ನು ತಟಸ್ಥಗೊಳಿಸುತ್ತದೆ ಮತ್ತು ಕ್ಯಾಲ್ಸಿಯಂ ನಷ್ಟವನ್ನು ತಡೆಯುತ್ತದೆ. ಇದು ವಿಟಮಿನ್ ಎ ನ ಉತ್ತಮ ಮೂಲವಾಗಿದೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಮೆದುಳು ಜ್ವರದ ಲಸಿಕೆ ಅಭಿಯಾನ

ಮೆದುಳು ಜ್ವರದ ಲಸಿಕೆ ಅಭಿಯಾನ, ತಪ್ಪದೆ ನಿಮ್ಮ ಮಕ್ಕಳಿಗೆ ಹಾಕಿಸಿ

ಬೋರೆಹಣ್ಣು

ಬಡವರ ಸೇಬು ಬೋರೆಹಣ್ಣು