ವೇದಗಳಲ್ಲಿಯು ಎಳ್ಳಿನ ಪ್ರಸ್ತಾವನೆ ಇದೆ. ಸಿಂಧೂ ಕಣಿವೆ ನಾಗರಿಕತೆ ಸಮಯದಲ್ಲಿ, ಆ ಕಾಲದ ಜನ ಎಳ್ಳಿನಿಂದ ಎಣ್ಣೆಯನ್ನು ತೆಗೆಯುವುದನ್ನು ಕಲಿತಿದ್ದರು. ತಿಲವನ್ನು ಬಳಸಿ ಆ ಕಾಲದಲ್ಲಿ ಗಾಣದಿಂದ ಎಣ್ಣೆಯನ್ನು ತೆಗೆಯುತ್ತಿದ್ದರು. ಕ್ರೀ.ಪೂ.೬೦೦ ಸಂವತ್ಸರ ಕಾಲದಲ್ಲಿ ಸಿಂಧಿ ಲೋಯದಿಂದ ಮೆಸೊಪೊಟೊಮಿಯಕ್ಕೆ ವ್ಯಾಪ್ತಿ ಹೊಂದಿದೆ. ಅಲ್ಲಿಂದ ಎಲ್ಲಾ ಕಡೆಗೆ ವ್ಯಾಪಿಸಿದೆ. ಸದ್ಯಕ್ಕೆ ಎಕ್ಸುಪೆಲ್ಲರು ಎನ್ನುವ ಯಂತ್ರಗಳನ್ನು ಬಳಸಿ ಎಣ್ಣೆಯನ್ನು ಉತ್ಪನ್ನ ಮಾಡುತ್ತಿದ್ದಾರೆ. ಹಿಂಡಿ ಯಲ್ಲಿರುವ, ಉಳಿದಿದ್ದ ಎಣ್ಣೆಯನ್ನು ಸಾಲ್ವೆಂಟ್ ಎಕ್ಸುಟ್ರಾಕ್ಸುನು ಪ್ಲಾಂಟ್ನಲ್ಲಿ ನಡಿಸಿ, ಎಣ್ಣೆಯನ್ನು ತೆಗೆಯುತ್ತಾರೆ. ಒಟ್ಟು ಎಣ್ಣೆ ತೆಗೆಸಿದ ಹಿಂಡಿಯನ್ನು ಹಸು/ಆಕಳ ಆಹಾರವಾಗಿ ಬಳಸುತ್ತಾರೆ.
ಎಳ್ಳೆಣ್ಣೆ ಸ್ನಾನಕ್ಕೆ ವಿಶೇಷವಾದ ಮಹತ್ವವಿದೆ. ಎಳ್ಳೆಣ್ಣೆಯಿಂದ ಸ್ನಾನ ಮಾಡುವುದರಿಂದ ದೇಹದ ಚರ್ಮ ನಯವಾಗಿ ಆರೋಗ್ಯಕರವಾಗಿ ಯಾವುದೇ ಕಾಲದಲ್ಲೂ ತನ್ನ ಸೌಂದರ್ಯವನ್ನು ಕಾಪಾಡಿಕೊಳ್ಳುತ್ತದೆ.
ಎಳ್ಳೆಣ್ಣೆಯನ್ನು ಎಳ್ಳು/ತಿಲದಿಂದ ತೆಗೆಯುತ್ತಾರೆ. ‘ಸೆಸಮಮ್ ಇಂಡಿಕಮ್ ‘ ಇದರ ಸಸ್ಯ ಶಾಸ್ತ್ರದ ಹೆಸರು. ಇದು ಸೆಸಮಮ್ ಪ್ರಜಾತಿಯ ಪೆಡಾಲಿಸಿಯೇ ಕುಟುಂಬಕ್ಕೆ ಸೇರಿದ ಗಿಡ. ಎಳ್ಳನ್ನು ಸಂಸ್ಕೃತದಲ್ಲಿ ‘ತಿಲ ಎನ್ನುತ್ತಾರೆ. ತಿಲದಿಂದ ಬಂದದ್ದು ತೈಲ ಆಗಿದೆ. ತೈಲವನ್ನು ಮೂಲ ದ್ರಾವಿಡದಲ್ಲಿ ‘ಎನ್ನ’, ‘ಎನ್ನೈ’ ಯಂತ ಕರೆಯಲಾಗುತ್ತದೆ. ಕ್ರಮೇಣ ಇದು ಕನ್ನಡದಲ್ಲಿ ಎಣ್ಣೆ ಆಗಿದೆ.
ಎಳ್ಳಿನಿಂದ ಹಿಂಡಿ ತೆಗೆಯಲಾದ ಎಳ್ಳೆಣ್ಣೆ ಸರಿಸುಮಾರು ನೀರಿನಷ್ಟೇ ಸಾಂದ್ರತೆಯನ್ನು ಹೊಂದಿದೆ. ಎಂಬ ವೈಜ್ಞಾನಿಕ ಹೆಸರನ್ನು ಹೊಂದಿರುವ ಈ ಪುಟ್ಟ ಕಾಳುಗಳನ್ನು ಅತಿ ಪ್ರಾಚೀನ ಕಾಲದಿಂದ ಉಪಯೋಗಿಸುತ್ತಾ ಬರಲಾಗಿದೆ. ಕ್ರಿ. ಪೂ 1500 ಇಸವಿಯಲ್ಲಿ ಈಜಿಪ್ಷಿಯನ್ನರು ಎಳ್ಳನ್ನು ನೋವು ನಿವಾರಕವಾಗಿ ಬಳಸುತ್ತಿದ್ದುದಾಗಿ ಇತಿಹಾಸ ತಿಳಿಸುತ್ತದೆ. 3000ವರ್ಷಗಳಿಂದಲೂ ಚೀನಾದಲ್ಲಿ ಆಹಾರ ಮತ್ತು ಔಷಧಿಯಾಗಿ ಎಳ್ಳನ್ನು ಬಳಸಲಾಗುತ್ತಿದೆ. ಕಾಳುಗಳು ಪುಟ್ಟದಾದರೂ ಇದರ ಪೋಷಕಾಂಶಗಳು ದೊಡ್ಡವೇ ಇದೆ. ಪ್ರೋಟೀನ್, ಆಂಟಿ ಆಕ್ಸಿಡೆಂಟುಗಳು, ವಿಟಮಿನ್ ಇ, ಬಿ ಕಾಂಪ್ಲೆಕ್ಸ್ ಹಾಗೂ ಗಂಧಕ, ಮೆಗ್ನೇಶಿಯಂ ಹಾಗೂ ಕ್ಯಾಲ್ಸಿಯಂ ನಂತಹ ಖನಿಜಗಳೂ ಇವೆ.
ದಿನ ನಿತ್ಯ ಮನುಷ್ಯನ ಆರೋಗ್ಯಕ್ಕೆ ಒಳ್ಳೆಯ ಲಾಭಗಳನ್ನು ತಂದುಕೊಡುವ ಶಕ್ತಿ ಎಳ್ಳಿನ ಎಣ್ಣೆಗಿದೆ. ಇದರಲ್ಲಿರುವ ಆಂಟಿ – ಓಕ್ಸಿಡೆಂಟ್ ಅಂಶಗಳು, ಆಂಟಿ – ಇಂಪ್ಲಾಮೇಟರಿ ಗುಣ ಲಕ್ಷಣಗಳು ಹಲವು ಬಗೆಯ ದೇಹದ ಆಂತರಿಕ ರೋಗ ಲಕ್ಷಣಗಳನ್ನು ಗುಣಪಡಿಸುವುದರ ಜೊತೆಗೆ ದೀರ್ಘ ಕಾಲದ ಆರ್ಥ್ರೈಟಿಸ್ ಸಮಸ್ಯೆಯನ್ನು ಹೋಗಲಾಡಿಸುತ್ತದೆ.
ಎಲ್ಲಕ್ಕಿಂತ ಮುಖ್ಯವಾಗಿ ಸಾಮಾನ್ಯ ಶೀತ, ಕೆಮ್ಮಿಗೂ ಸಾಸಿವೆ ಎಣ್ಣೆ ಉಪಕಾರಿ. ಮೂಗು ಕಟ್ಟಿದ್ದರೆ, ಸೈನಸ್ ಸಮಸ್ಯೆಯಿದ್ದರೆ ಎಳ್ಳೆಣ್ಣೆಯನ್ನು ಹಚ್ಚಿಕೊಳ್ಳುವುದು ಉತ್ತಮ.
ಎಣ್ಣೆ ಆರೋಗ್ಯಕರ ಎಣ್ಣೆಯಾಗಿದ್ದು ಸೇವಿಸಲು ಹಾಗೂ ಅಡುಗೆಗೆ ಬಳಸಲು ಸುರಕ್ಷಿತವಾಗಿದೆ. ಎಣ್ಣೆಯನ್ನು ಮಸಾಜ್ ಮಾಡಲೂ ಬಳಸಬಹುದು. ಇದೇ ಕಾರಣಕ್ಕೆ ಆಯುರ್ವೇದದಲ್ಲಿ ಇದನ್ನು ಪ್ರಮುಖವಾಗಿ ಮಸಾಜ್ ಮೂಲಕ ನೋವು ಕಡಿಮೆ ಮಾಡುವ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ. ಇದು ಆಮ್ಲೀಯವೂ ಅಲ್ಲದ, ಕ್ಷಾರೀಯವೂ ಅಲ್ಲದ ಗುಣ ಹೊಂದಿರುವ ಕಾರಣಕ್ಕೇ ಇದಕ್ಕೆ ‘ಎಣ್ಣೆಗಳ ರಾಣಿ’ ಎಂಬ ಬಿರುದನ್ನು ನೀಡಲಾಗಿದೆ.
ಎಳ್ಳೆಣ್ಣೆಯಿಂದ ಮಸಾಜ್ ಮಾಡುವುದರಿಂದ ಮನುಷ್ಯನ ದೇಹದ ತಾಪಮಾನವನ್ನು ಹೊರಗಿನ ತಾಪಮಾನಕ್ಕೆ ಹೊಂದಿಕೊಳ್ಳುವಂತೆ ಅಡ್ಜಸ್ಟ್ ಮಾಡುತ್ತದೆ. ಇದರಿಂದ ಅನೇಕ ಕಾಯಿಲೆಗಳಿಗೆ ಗುರಿಯಾಗುವುದು ತಪ್ಪುತ್ತದೆ ಮತ್ತು ಕೆಲವೊಂದು ಸೋಂಕುಗಳಿಂದ ಸಹ ರಕ್ಷಣೆ ಸಿಗುತ್ತದೆ.
ಎಳ್ಳೆಣ್ಣೆಯಲ್ಲಿರುವ ಕ್ಯಾಲ್ಸಿಯಂ ಮೂಳೆಗಳು ದೃಢಗೊಳ್ಳಲು ಅಗತ್ಯವಾದ ಖನಿಜವಾಗಿದೆ. ಅಲ್ಲದೇ ಜೊತೆಗೆ ತಾಮ್ರ, ಸತು ಮತ್ತು ಮೆಗ್ನೀಶಿಯಂಗಳೂ ಮೂಳೆಗಳ ದೃಢತೆ ಹೆಚ್ಚಿಸಲು ನೆರವಾಗುತ್ತವೆ. ಇದೇ ಕಾರಣಕ್ಕೆ ಆಯುರ್ವೇದ ಮೂಳೆಗಳ ದೃಢತೆಗೆ ಬಲಸಲಾಗುವ ಮಸಾಜ್ ಎಣ್ಣೆಯಾಗಿ ಎಳ್ಳೆಣ್ಣೆಯನ್ನು ಬಳಸುತ್ತದೆ. ಮೂಳೆಗಳ ಮೇಲೆ ಮಾಡಿದ ಎಳ್ಳೆಣ್ಣೆಯ ಮಸಾಜ್ ಮೂಳೆಗಳನ್ನು ಗಟ್ಟಿಗೊಳಿಸುವುದರ ಜೊತೆಗೇ ಬಹಳ ಹಳೆಯ ಮೂಳೆಯ ಶಿಥಿಲತೆಯನ್ನೂ ಸರಿಪಡಿಸಲು ನೆರವಾಗುತ್ತದೆ.
ತಲೆ ನೋವು ಬಂದಾಗ ಸಹ ನೆತ್ತಿಯ ಭಾಗವನ್ನು ಎಳ್ಳಿನ ಎಣ್ಣೆಯಿಂದ ಮಸಾಜ್ ಮಾಡಿದರೆ ಬಹಳ ಬೇಗನೆ ತಲೆ ನೋವು ಮಾಯವಾಗಿ ಮಾನಸಿಕ ಸಮಸ್ಯೆ ದೂರವಾಗುತ್ತದೆ.
ಎಳ್ಳು ಮನುಷ್ಯನ ದೇಹಕ್ಕೆ ಹಲವಾರು ಆರೋಗ್ಯ ಪ್ರಯೋಜನಗಳನ್ನು ತಂದುಕೊಡುತ್ತದೆ. ಎಳ್ಳಿನ ಎಣ್ಣೆಯಿಂದ ಮಸಾಜ್ ಮಾಡಿ ಸ್ನಾನ ಮಾಡುವುದರಿಂದ ದೇಹದ ಉಷ್ಣಾಂಶ ತಗ್ಗುತ್ತದೆ.
ಪ್ರತಿ ವರ್ಷ ಕಾಲ ಬದಲಾದಂತೆ ಅಂದರೆ ಮಳೆಗಾಲದಿಂದ ಚಳಿಗಾಲ, ಚಳಿಗಾಲದಿಂದ ಬೇಸಿಗೆ ಕಾಲ ಬರಲು ಪ್ರಾರಂಭವಾದರೆ ಮನುಷ್ಯನ ದೇಹದ ಚರ್ಮದ ಮೇಲಿನ ಪದರ ಒಣಗಲು ಶುರುವಾಗುತ್ತದೆ. ಇದಕ್ಕೆ ಒಣಚರ್ಮದ ಸಮಸ್ಯೆ ಎಂದು ಕರೆಯುತ್ತಾರೆ.
ಇದು ಹೆಚ್ಚಾದಂತೆ ಒಣಗಿದ ಜಾಗದಲ್ಲಿ ಅಲ್ಲಲ್ಲಿ ಕಲೆಗಳು ಮೂಡಿ ಬರಲು ಕಾರಣವಾಗುತ್ತದೆ. ಇಂತಹ ಸಮಯದಲ್ಲಿ ಎಳ್ಳಿನ ಎಣ್ಣೆಯಿಂದ ಪ್ರತಿ ದಿನ ಬೆಳಗ್ಗೆ ಮತ್ತು ಸಂಜೆ ಮಸಾಜ್ ಮಾಡುತ್ತಾ ಬಂದರೆ ಚರ್ಮದ ಒಣಗುವಿಕೆ ಮಾಯವಾಗಿ ಚರ್ಮದಲ್ಲಿ ತೇವಾಂಶ ಹೆಚ್ಚಾಗಿ ಇಡೀ ವರ್ಷ ಚರ್ಮ ಯಾವುದೇ ಬಗೆಯ ಸೋಂಕುಗಳಿಗೆ ಒಳಗಾಗದಂತೆ ನುಣುಪಾಗಿ ಆರೋಗ್ಯಕರವಾಗಿರುತ್ತದೆ.
ಎಲ್ಲಕ್ಕಿಂತ ಹೆಚ್ಚಾಗಿ ಕ್ಯಾನ್ಸರ್ ನಿವಾರಿಸುವ ಗುಣವನ್ನೂ ಹೊಂದಿದೆ. ಇದು ವಿವಿಧ ರೀತಿಯ ಕ್ಯಾನ್ಸರ್ ತಡೆಗಟ್ಟುವ ಗುಣವನ್ನು ಹೊಂದಿದೆ ಎಂದು ಹಲವು ಅಧ್ಯಯನಗಳಿಂದ ತಿಳಿದುಬಂದಿದೆ. ಅಲ್ಲದೆ ಬೆನ್ನು, ಕೈ ಕಾಲು ನೋವಿಗೂ ಸಾಸಿವೆ ಎಣ್ಣೆ ಉಪಯುಕ್ತ.
ಕೂದಲಿಗೆ ಸಂಬಂಧ ಪಟ್ಟ ಸಮಸ್ಯೆ ಇದ್ದೇ ಇರುತ್ತದೆ. ಇದಕ್ಕೆ ಒಳ್ಳೆಯ ಪರಿಹಾರವೆಂದರೆ ಶುದ್ಧವಾದ ಎಳ್ಳಿನ ಎಣ್ಣೆಯನ್ನು ತಲೆಗೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡುವುದು. ಎಳ್ಳಿನ ಎಣ್ಣೆಯಲ್ಲಿ ನೆತ್ತಿಯ ಭಾಗಕ್ಕೆ ಮತ್ತು ಕೂದಲಿನ ಬೇರುಗಳಿಗೆ ಬೇಕಾದ ಅಗತ್ಯ ಪೌಷ್ಟಿಕ ಸತ್ವಗಳು ಅಡಗಿರುತ್ತವೆ.
ಕೂದಲು ಉದುರುವುದು, ಕೂದಲು ಬೆಳ್ಳಗಾಗುವುದು, ಕೂದಲು ಅರ್ಧಕ್ಕೆ ಮುರಿದು ಬೀಳುವುದು, ತಲೆ ಹೊಟ್ಟು ಇತ್ಯಾದಿ ಸಮಸ್ಯೆಗಳು ಇಲ್ಲವಾಗುತ್ತವೆ. ಇನ್ನು ಪುಟ್ಟ ಮಕ್ಕಳಲ್ಲಿ ಚಿಕ್ಕ ವಯಸ್ಸಿಗೆ ಕೂದಲು ನೆರೆಯುವ ಸಮಸ್ಯೆ ಕೆಲವರಿಗೆ ಇರುತ್ತದೆ. ಅಂತಹವರಿಗೂ ಸಹ ಎಳ್ಳಿನ ಎಣ್ಣೆಯನ್ನು ಹಾಕಿ ಚೆನ್ನಾಗಿ ಮಸಾಜ್ ಮಾಡುವುದರಿಂದ ಮಕ್ಕಳಲ್ಲಿ ಬಾಲನೆರೆ ಸಮಸ್ಯೆಯನ್ನು ಸುಲಭವಾಗಿ ತಪ್ಪಿಸಬಹುದು.
ಮಸಾಜ್ ಪ್ರಕ್ರಿಯೆಗೆ ಎಳ್ಳಿನ ಎಣ್ಣೆಯನ್ನು ಬಳಸಿಕೊಂಡರೆ ಸೂಕ್ತ. ಕಣ್ಣುಗಳು ಉರಿಯುತ್ತಿದ್ದರೆ ಸ್ವಲ್ಪ ಉಗುರು ಬೆಚ್ಚಗಿನ ಎಳ್ಳಿನ ಎಣ್ಣೆಯನ್ನು ಕಣ್ಣು ಹುಬ್ಬು ಮತ್ತು ಕಣ್ಣಿನ ಕೆಳ ಭಾಗದಲ್ಲಿ ಎರಡು ಬೆರಳುಗಳ ಸಹಾಯದಿಂದ ನಯವಾಗಿ ಮಸಾಜ್ ಮಾಡುವುದರಿಂದ ಕಣ್ಣಿನ ಉರಿ ಮಾಯವಾಗುತ್ತದೆ.
ಸೇವನೆ ಅಧಿಕ ರಕ್ತದೊತ್ತಡವನ್ನು ಆರೋಗ್ಯಕರ ಮಟ್ಟಕ್ಕೆ ಇಳಿಸಲು ಸಹಾಯ ಮಾಡುತ್ತದೆ. ಅಧಿಕ ರಕ್ತದೊತ್ತಡವನ್ನು ಇಳಿಸಲು ಇದೊಂದು ನೈಸರ್ಗಿಕ ವಿಧಾನವೂ ಆಗಿದೆ.
ಇದರಲ್ಲಿರುವ ಮೆಗ್ನೀಶಿಯಂ ರಕ್ತದಲ್ಲಿನ ಅಧಿಕ ಸಕ್ಕರೆಯ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಅಲ್ಲದೇ ವಿಟಮಿನ್ ಇ ಹಾಗೂ ವಿವಿಧ ಆಂಟಿ ಆಕ್ಸಿಡೆಂಟುಗಳು ರಕ್ತದಲ್ಲಿ ಸಕ್ಕರೆಯ ಮಟ್ಟ ನಿಯಂತ್ರಣದಲ್ಲಿರಲು ನೆರವಾಗುತ್ತದೆ. ಕೆಲವು ಅಧ್ಯಯನಗಳಲ್ಲಿ ಕಂಡುಕೊಂಡಂತೆ ಈ ತೈಲದಿಂದ ತಯಾರಾದ ಆಹಾರವನ್ನು ಮಧುಮೇಹಿಗಳಿಗೆ ಒದಗಿಸಿದಾಗ ಅವರ ರಕ್ತದೊತ್ತಡದ ಮಟ್ಟದಲ್ಲಿ ಗಣನೀಯ ಪ್ರಮಾಣದ ಇಳಿಕೆ ಕಂಡುಬಂದಿದೆ.
ಹಲ್ಲುಗಳ ತೊಂದರೆಯನ್ನು ಸರಿಪಡಿಸುತ್ತದೆ
ಬಾಯಿಯ ಮತ್ತು ಹಲ್ಲುಗಳ ಸ್ವಚ್ಛತೆಗೆ ಎಳ್ಳೆಣ್ಣೆಯನ್ನು ಬಹಳ ಹಿಂದಿನಿಂದಲೂ ಬಳಸಲಾಗುತ್ತಾ ಬರಲಾಗಿದೆ. ಬಾಯಿಯಲ್ಲಿ ಕೊಂಚ ಎಳ್ಳೆಣ್ಣೆಯನ್ನು ಹಾಕಿ ಕೊಂಚ ಹೊತ್ತು ಮುಕ್ಕಳಿಸಿಕೊಳ್ಳುವ ಮೂಲಕ ಬಾಯಿಯ ಸ್ವಚ್ಛತೆ ಹೆಚ್ಚುವುದಲ್ಲದೇ ಹಲ್ಲುಗಳ ನಡುವೆ ಸಿಲುಕಿಕೊಂಡಿದ್ದ ಆಹಾರಕಣಗಳನ್ನು ಸೆಳೆದು ಸ್ವಚ್ಛಗೊಳಿಸಲು ಸಾಧ್ಯವಾಗುತ್ತದೆ. ಹಲ್ಲುಗಳು ದೃಢವಾಗುತ್ತದೆ ಹಾಗೂ ಒಟ್ಟಾರೆ ಬಾಯಿಯ ಆರೋಗ್ಯವೂ ಉತ್ತಮಗೊಳ್ಳುತ್ತದೆ.
ಧನ್ಯವಾದಗಳು.
Abrone.jobs https://abrone.jobs is the gateway to careers at Abrone, a leader in AI, data, and analytics. Join a dynamic team driving innovation with cutting-edge tech. Enjoy remote work, competitive benefits, and career growth. If you’re passionate about AI or analytics, Abrone is where you’ll thrive!