in

ಏಳು ಅಡಿ ಎತ್ತರ ಇದ್ದರಂತೆ ಮಹಾರಾಣಾ ಪ್ರತಾಪ್‌ ಸಿಂಗ್​

ಮಹಾರಾಣಾ ಪ್ರತಾಪ್‌ ಸಿಂಗ್
ಮಹಾರಾಣಾ ಪ್ರತಾಪ್‌ ಸಿಂಗ್

ಮಹಾರಾಣಾ ಪ್ರತಾಪ್‌ ಅಥವಾ ಮೇವಾರದ ಪ್ರತಾಪ್‌ ಸಿಂಗ್‌ ವಾಯವ್ಯ ಭಾರತದ ರಾಜ್ಯವಾದ ಮೇವಾರವನ್ನು ಆಳುತ್ತಿದ್ದ ಹಿಂದೂ ದೊರೆಯಾಗಿದ್ದ. ಅವನು ಸೂರ್ಯವಂಶಿ ರಜಪೂತರ ಸಿಸೊದಿಯಾ ವಂಶಕ್ಕೆ ಸೇರಿದವನು. ತೀಕ್ಷ್ಣ ಸ್ವಭಾವದ ರಜಪೂತರ ಹೆಮ್ಮೆ ಮತ್ತು ಆತ್ಮಗೌರವದ ಸಾಕಾರರೂಪವಾಗಿದ್ದ ಪ್ರತಾಪ್, ಶತಮಾನಗಳವರೆಗೆ ರಜಪೂತರ ಮಹತ್ವಾಕಾಂಕ್ಷೆಯ ಗುಣಗಳಿಗೆ ದೃಷ್ಟಾಂತವಾಗಿದ್ದನು.

ಭಾರತ ಇತಿಹಾಸದಲ್ಲಿ ಮಹಾರಾಣಾ ಪ್ರತಾಪ್​ ಸಿಂಗ್​ ದೈರ್ಯಶಾಲಿಗೆ ಹೆಸರಾಗಿದ್ದವರು. 7 ಅಡಿ ಎತ್ತರ ಹಾಗೂ 81 ಕೆಜಿ ದೇಹವುಳ್ಳ ಸದೃಢ ರಾಜನೆಂದು ಹೆಸರುವಾಸಿಯಾಗಿದ್ದರು.

1950, ಮೇ 9ನೇ ತಾರೀಕಿನಂದು ರಜಪೂತರ ಕುಟುಂಬದಲ್ಲಿ ಮಹಾರಾಣಾ ಪ್ರತಾಪ್​ ಸಿಂಗ್​ ಜನಿಸಿದರು. ಇವರ ತಂದೆ ಉದಯ್​ ಸಿಂಗ್​ ಹಾಗೂ ಇವರು ಉದಯಪುರದ ಸ್ಥಾಪಕ. ಉದಯ್​ ಸಿಂಗ್​ ಅವರಿಗೆ ಹಿರಿಯ ಮಗನಾಗಿ ಪ್ರತಾಪ್​ ಸಿಂಗ್​ ಜನಸಿದರು. ಹಾಗೂ ಇವರಿಗೆ ಮೂರು ಜನ ಸಹೋದರರು ಮತ್ತು ಇಬ್ಬರು ಸಹೋದರಿಯರಿದ್ದರು.

ಮಹಾರಾಣಾ ಪ್ರತಾಪ್​ ಸಿಂಗ್​ 11 ಹೆಂಡತಿಯರು ಮತ್ತು 17 ಮಕ್ಕಳನ್ನು ಪಡೆದಿದ್ದರು. ಇವರ ಹಿರಿಯ ಮಗ ಮಹಾರಾಣ ಅಮರ್​ ಸಿಂಗ್​ ಮೇವಾರದ 14ನೇ ರಾಜನಾಗಿ ಆಡಳಿತ ನಡೆಸಿದ್ದರು.

ಏಳು ಅಡಿ ಎತ್ತರ ಇದ್ದರಂತೆ ಮಹಾರಾಣಾ ಪ್ರತಾಪ್‌ ಸಿಂಗ್​
ಯಾವುದೇ ಪರಿಸ್ಥಿತಿ ಬಂದರೂ ದೇಶಕ್ಕಾಗಿ ಪ್ರಾಣ ನೀಡುವೆ ಅನ್ನುವ ಧ್ಯೇಯ ಹೊಂದಿದ್ದರು

1568ರಲ್ಲಿ ಎರಡನೇ ಉದಯ್‌ ಸಿಂಗ್‌ ರಾಜ್ಯಭಾರ ಕಾಲದಲ್ಲಿಚಿತ್ತೂರನ್ನು ಮೊಘಲ್‌ ಚಕ್ರವರ್ತಿ ಅಕ್ಬರ್‌ ವಶಪಡಿಸಿಕೊಂಡಿದ್ದನು. ಉಳಿದ ಪುರುಷವರ್ಗ ಯುದ್ಧಭೂಮಿಯಲ್ಲಿ ವೀರಾವೇಶದಿಂದ ಹೋರಾಡಿ ಹಿಂಸಾತ್ಮಕ ರೀತಿಯಲ್ಲಿ ಮರಣವಪ್ಪಿದಾಗ, ಕೋಟೆಯ ಮಹಿಳೆಯರು ವೈಯಕ್ತಿಕ ಅಪಮಾನದಿಂದ ಪಾರಾಗಲು ಆಹುತಿಯಾಗುವ ವಸ್ತು(ಬೆಂಕಿ)ವಿನಲ್ಲಿ ಸುರಕ್ಷತೆಯನ್ನು ಕಾಣುವುದರೊಂದಿಗೆ ಚಿತ್ತೂರಿನ ಮೂರನೇ ಜೋಹಾರ್ ಸಂಭವಿಸಿತು.

ಮಹಾರಾಣಾ ಪ್ರತಾಪ್‌ ಅಕ್ಬರ್‌ನನ್ನು ಭಾರತದ ದೊರೆ ಎಂದು ಒಪ್ಪಿಕೊಳ್ಳಲೇ ಇಲ್ಲ. ತನ್ನ ಜೀವನ ಪೂರ್ತಿ ಅಕ್ಬರ್‌ ವಿರುದ್ದ ಹೋರಾಡುತ್ತಲೇ ಕಳೆದನು. ಮೊದಲು ಅಕ್ಬರ್‌ ಮಹಾರಾಣಾ ಪ್ರತಾಪ್‌ನನ್ನು ಗೆಲ್ಲಲು ರಾಜತಾಂತ್ರಿಕ ಮಾರ್ಗದ ಮೂಲಕ ಪ್ರಯತ್ನಿಸಿದನು. ಆದರೆ ಅದುಯಾವುದೂ ಫಲ ನೀಡಲಿಲ್ಲ. ಪ್ರತಾಪ್‌ನಿಗೆ ಅಕ್ಬರ್‌ನ ವಿರುದ್ಧ ಹೋರಾಡಲು ಯಾವುದೇ ಉದ್ದೇಶವಿರಲಿಲ್ಲ. ಆದರೆ ಅಕ್ಬರ್‌ನ ಎದುರು ತಲೆಬಾಗಿ ಅವನನ್ನು ತನ್ನ ರಾಜನೆಂದು ಒಪ್ಪಿಕೊಳ್ಳಲು ತಯಾರಿಲ್ಲವೆಂದು ಪ್ರತಿಪಾದಿಸಿದ. ಮಹಾರಾಣಾನು ಅಕ್ಬರ್‌ನ ಸ್ನೇಹಿತನಾಗಲು ಕೆಲವೊಂದು ಸಾಧ್ಯತೆಗಳಿದ್ದವು, ಆದರೆ ಚಿತ್ತೂರನ್ನು ಮುತ್ತಿಗೆ ಹಾಕಿದಾಗ, ಅಕ್ಬರ್‌ 27,000 ಜನರನ್ನು ಕೊಂದಿದ್ದನು ಎಂದು ಕೆಲವು ವಿದ್ವಾಂಸರು ವಾದಿಸುತ್ತಾರೆ. ಈ ಘಟನೆಯು ಮಹಾರಾಣಾನ ಮನಸ್ಸಿನಲ್ಲಿ ಅಳಿಸಲಾಗದ ನೋವಾಗಿ ಉಳಿಯಿತು. ಇಂತಹ ಅನ್ಯಾಯ ಮತ್ತು ಕ್ರೂರತೆಗೆ ತಲೆಬಾಗುವುದಿಲ್ಲವೆಂದು ಅವನು ನಿರ್ಧರಿಸಿದ.

ಟೋಡ್ಸ್‌ರವರ ಅನಲ್ಸ್‌ ಆಂಡ್‌ ಆಂಟಿಕ್ವೀಟೀಸ್‌ ಆಫ್‌ ರಾಜಸ್ಥಾನ ದಲ್ಲಿ ಬರೆದಂತೆ, ಪ್ರತಾಪ್‌ ಮೊಘಲ್‌ರಿಗೆ ರಜಪೂತರ ಹೆಣ್ಣು ಮಕ್ಕಳನ್ನು ಮದುವೆ ಮಾಡಿಕೊಡುವ ರಜಪೂತರ ಶಿಷ್ಟಾಚಾರವನ್ನು ನಿಲ್ಲಿಸಿದನು.

1584 ರಲ್ಲಿ ರಾಣಾ ಪ್ರತಾಪ್ ಪಂಜಾಬ್‌ನಲ್ಲಿ ನಿರತರಾಗಿದ್ದ ಅಕ್ಬರನ ರಾಯಭಾರಿಗಳನ್ನು ಮತ್ತೊಮ್ಮೆ ನಿರಾಕರಿಸಿದರು. ಅದರಂತೆ, ರಾಣಾ ಪ್ರತಾಪ್ ತನ್ನ ಹೆಚ್ಚಿನ ಭದ್ರಕೋಟೆಗಳನ್ನು ಚೇತರಿಸಿಕೊಳ್ಳಲು ಸಾಧ್ಯವಾಯಿತು ಮತ್ತು ತನ್ನ ಜನರಿಗೆ ವೀರನಾದ. ಅವನ ನಂತರ ಅವನ ಮಗ ಅಮರ್ ಸಿಂಗ್, 1614 ರಲ್ಲಿ ಅಕ್ಬರನ ಮಗ ಚಕ್ರವರ್ತಿ ಜಹಾಂಗೀರ್ಗೆ ಸಲ್ಲಿಸಿದ.

ಏಳು ಅಡಿ ಎತ್ತರ ಇದ್ದರಂತೆ ಮಹಾರಾಣಾ ಪ್ರತಾಪ್‌ ಸಿಂಗ್​
ಮಹಾರಾಣಾ ಪ್ರತಾಪ ಹಾಗೂ ಚೇತಕ್

ಪ್ರತಾಪ್‌ನ ಪೂರ್ವಿಕರ ಜನ್ಮಭೂಮಿಯಾದ ಚಿತ್ತೂರ್‌ಘಢ್‌ ಮೊಘಲ್‌ರ ಸ್ವಾಧೀನದಲ್ಲಿತ್ತು. ತಲೆತಪ್ಪಿಸಿಕೊಂಡು ಜೀವನ ನಡೆಸುತ್ತಾ, ಚಿತ್ತೂರನ್ನು ಮರುವಶಕ್ಕೆ ತೆಗೆದುಕೊಳ್ಳುವ ಕನಸನ್ನು ಪ್ರತಾಪ್ ಕಂಡ ಹಾಗೂ ಅವನ ಮುಂದಿನ ಪ್ರಯತ್ನಗಳು ಈ ಗುರಿಯತ್ತ ಕೇಂದ್ರೀಕೃತವಾಯಿತು. ಮೂಲಭೂತವಾಗಿ ಪ್ರತಾಪ್‌ ಕೇವಲ ಕಾಗದದಲ್ಲಿ ಮಾತ್ರ ರಾಜನಾಗಿದ್ದ, ಅವನ ಜೀವಮಾನದಲ್ಲಿ ಯಾವುದೇ ಭೂಮಿಯನ್ನು ಆಳಲಿಲ್ಲ.

ಹೊಸ ರಾಜಧಾನಿ ಉದಯಪುರಕ್ಕಾಗಿ ಮಹಾರಾಣಾ ಉದಯ್‌ ಸಿಂಗ್‌ 1565ರಲ್ಲಿ ಉದಯ್‌ ಸಾಗರ್‌ ಎನ್ನುವ ಜಲಾಶಯವನ್ನು ಕಟ್ಟಿದನು.

1527ರಲ್ಲಿ ಮಹಾರಾಣಾ ಪ್ರತಾಪ್‌ನ ಅಜ್ಜ ರಾಣಾ ಸಂಗಾ‌ ಮತ್ತು ಅಕ್ಬರ್‌ ನ ಅಜ್ಜ ಮೊಘಲ್‌ ಬಾಬರ್‌ ನಡುವೆ ನಡೆದ ಎರಡನೇ ಖಣ್ವಾ ಕದನದ ನಂತರ ಹಲ್ಢಿಘಾಟ್‌ ಕದನವು ಮೊಘಲ್‌ರ ವಿರುದ್ಧ ರಜಪೂತರ ಪ್ರಥಮ ಪ್ರಮುಖ ಶತ್ರುಸೈನ ಭೇದಿಸಿದ ಯುದ್ಧವೆನಿಸಿತು.

ಯುದ್ಧದಲ್ಲಿ ಮೊಘಲ್‌ ಸೇನೆಯ ಮೇಲೆ ಉಂಟಾದ ಪರಿಣಾಮ ಕೂಡ ಗಮನಾರ್ಹವಾಗಿತ್ತು. ಮೊಘಲ್‌ ಸೈನಿಕರ ಸಾವುನೋವಿಗೆ ಸಂಬಂಧಪಟ್ಟಂತೆ ಭಾರಿ ನಷ್ಟಗಳನ್ನು ಅನುಭವಿಸಿತು. ಸುತ್ತುಮುತ್ತಲಿನ ಪರ್ವತಪ್ರದೇಶದ ಪ್ರತಾಪ್‌ನ ಪರ ಹೋರಾಡಿದ ಭಿಲ್‌ಬುಡಕಟ್ಟು ಜನಾಂಗದ ಜನರ ಬಾಣಗಳ ತೀವ್ರ ಸುರಿಮಳೆಯಿಂದ ಮೊಘಲ್ ಸೇನೆ ನಷ್ಟಗಳಿಗೆ ಗುರಿಯಾಗಿತ್ತು. ಅವರ ಕೊಡುಗೆಯನ್ನು ಗೌರವಿಸಿ, ಮೇವಾರದ ರಾಜಲಾಂಛನದಲ್ಲಿ ಪ್ರತಾಪನ ಪಕ್ಕದಲ್ಲಿ ಭಿಲ್‌ ಯೋಧನ ಚಿತ್ರವನ್ನು ಇರಿಸಲಾಗಿದೆ.

ಭೀಕರ ಅಪಘಾತದಲ್ಲಿ ಗಾಯಗೊಂಡ ಮಹಾರಾಣಾ ಪ್ರತಾಪ್​ ಸಿಂಗ್​ ತಮ್ಮ 56ನೇ ವಯಸ್ಸಿನಲ್ಲಿ, 1597 ಜನವರಿ 19ರಂದು ಕೊನೆಯುಸಿರೆಳೆದರು.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಎಳ್ಳೆಣ್ಣೆ ಉಪಯೋಗ

ಸಿಂಧೂ ಕಣಿವೆ ನಾಗರಿಕತೆ ಸಮಯದಲ್ಲೆ ಎಳ್ಳೆಣ್ಣೆ ಉಪಯೋಗ ಕಂಡುಕೊಂಡಿದ್ದರು

ನೌಕಾಪಡೆಯ ದಿನ

ನೌಕಾಪಡೆಯ ದಿನ : ಭಾರತೀಯ ನೌಕಾಪಡೆಗೆ ಗೌರವ ಸಲ್ಲಿಸೋಣ