ಮೂಸಂಬಿಯು ನಿಂಬೆ ಪ್ರಜಾತಿಯ ಒಂದು ಜಾತಿ. ಅದು ಎತ್ತರದಲ್ಲಿ ೮ ಮಿ. ಮುಟ್ಟಬಹುದಾದ ಒಂದು ಚಿಕ್ಕ ಮರ. ಮೂಸಂಬಿಯು ಅಸಮ ರೂಪದ ಶಾಖೆಗಳು, ಮತ್ತು ತುಲನಾತ್ಮಕವಾಗಿ ನಯವಾದ, ಕಂದು-ಬೂದು ಮಿಶ್ರಿತ ತೊಗಟೆಯನ್ನು ಹೊಂದಿರುತ್ತದೆ.
ಮೂಸಂಬಿಯಲ್ಲಿ ಇರುವಂತಹ ಫ್ಲಾವನಾಯ್ಡ್‌ಗಳು ಜೀರ್ಣಕ್ರಿಯೆ ರಸ, ಆಮ್ಲ ಮತ್ತು ಪಿತ್ತರಸ ಸ್ರವಿಸುವಿಕೆ ಉತ್ತೇಜಿಸುವುದು. ಇದರ ಪರಿಣಾಮವಾಗಿ ಜೀರ್ಣಕ್ರಿಯೆ ಸುಧಾರಣೆ ಹಾಗುವುದು ಮತ್ತು ಕರುಳಿನ ಕ್ರಿಯೆಗಳು ಸರಾಗವಾಗುವುದು ಮತ್ತು ಆಮ್ಲದ ಸ್ರವಿಸುವಿಕೆ ತಟಸ್ಥಗೊಳಿಸುವ ಕಾರಣದಿಂದಾಗಿ ವಿಷಕಾರಿ ಅಂಶವನ್ನು ಹೊರಗೆ ಹಾಕುವುದು. ಅತಿಸಾರ, ವಾಂತಿ ಮತ್ತು ವಾಕರಿಕೆಯಿಂದ ಬಳಲುತ್ತಿದ್ದರೆ ಆಗ ಈ ಹಣ್ಣು ತುಂಬಾ ಪರಿಣಾಮಕಾರಿ.
ಮೂಸಂಬಿಯನ್ನು ಪೇಸ್ಟ್ ಮಾಡಿ ಅದಕ್ಕೆ ಅರಿಶಿನ ಮತ್ತು 1 ಚಮಚ ಜೇನು ಬೆರೆಸಿ. ಈಗ ಈ ಪೇಸ್ಟನ್ನು ಮುಖದ ಮೇಲೆ ಹಚ್ಚಿ. 5-10 ನಿಮಿಷದ ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ.
ವಿಟಮಿನ್ ಸಿ ಕೊರತೆಯಿಂದಾಗಿ ಸ್ಕರ್ವಿ ಕಾಣಿಸಿಕೊಳ್ಳುವುದು. ಒಸಡುಗಳು ಊದಿಕೊಳ್ಳುವುದು, ಶೀತ ಮತ್ತು ಜ್ವರ ಪದೇ ಪದೇ ಬರುವುದು ಮತ್ತು ಬಾಯಿ ಹಾಗೂ ನಾಲಗೆಯಲ್ಲಿ ಹುಣ್ಣು ಕಾಣಿಸಿಕೊಳ್ಳುವುದು. ರಕ್ತಸ್ರಾವವಾಗುವಂತಹ ಒಸಡುಗಳ ಸಮಸ್ಯೆಯನ್ನು ಮೂಸಂಬಿಯು ನಿವಾರಣೆ ಮಾಡುವುದು.
ಮೊಸಂಬಿ ರಸದಲ್ಲಿ ತಾಮ್ರವಿದೆ. ಈ ಖನಿಜವು ಮೆಲನಿನ್ ಎಂಬ ವರ್ಣದ್ರವ್ಯದ ರಚನೆಯಲ್ಲಿ ತೊಡಗಿರುತ್ತದೆ, ಇದು ಕೂದಲಿಗೆ ಬಣ್ಣವನ್ನು ನೀಡಲು ಕಾರಣವಾಗಿದೆ.
ಕೂದಲು ಹಾಗೂ ಚರ್ಮದ ಆರೋಗ್ಯಕ್ಕೆ ಮೂಸಂಬಿಯ ರಸವು ತುಂಬಾ ಪರಿಣಾಮವಾರಿ. ಮೂಸಂಬಿಯಲ್ಲಿ ಇರುವಂತಹ ನಂಜುನಿರೋಧಕ ಹಾಗೂ ಬ್ಯಾಕ್ಟೀರಿಯಾ ವಿರೋಧಿ ಗುಣಗಳೇ ಇದಕ್ಕೆ ಕಾರಣವಾಗಿದೆ. ಇದರಲ್ಲಿನ ವಿಟಮಿನ್ ಗಳು ಕೂದಲನ್ನು ಬಲಪಡಿಸುವುದು ಮತ್ತು ತಲೆಹೊಟ್ಟು ಮತ್ತು ಕೂದಲು ತುಂಡಾಗುವುದನ್ನು ತಡೆಯುವುದು.

ಮೂಸಂಬಿಯಲ್ಲಿ ವಿಟಮಿನ್ ಸಿ ಯಥೇಚ್ಛವಾಗಿರುತ್ತದೆ. ಇದರಲ್ಲಿರುವ ಸಿಟ್ರಿಕ್ ಜ್ಯೂಸ್ ಸ್ಕಿನ್ ಕ್ಲೀನ್ ಮಾಡಲು ಸಹಾಯ ಮಾಡುತ್ತದೆ. ಅದಕ್ಕಾಗಿ ಮೂಸಂಬಿಯನ್ನು ಮಧ್ಯದಿಂದ ಕತ್ತರಿಸಿ ಎರಡು ಭಾಗ ಮಾಡಿ ಅದರಿಂದ ಮುಖವನ್ನು 7-8 ನಿಮಿಷ ಮಸಾಜ್ ಮಾಡಬೇಕು.
ಮೂಸಂಬಿ ರಸ ಜೀರ್ಣಕಾರಿ ಚಟುವಟಿಕೆಗೆ ತುಂಬಾ ಪ್ರಯೋಜನಕಾರಿ. ಇದರಲ್ಲಿರುವ ಆಮ್ಲ ಅಂಶವು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಹಾಗೆಯೇ ಹೊಟ್ಟೆಯ ಅನೇಕ ಸಮಸ್ಯೆಗಳನ್ನು ನಿವಾರಿಸುತ್ತದೆ.
ಮೂಸಂಬಿಯಲ್ಲಿ ಪೊಟ್ಯಾಶಿಯಂ ಸಮೃದ್ಧವಾಗಿದ್ದು ಇದು ಸೋಂಕನ್ನು ಗುಣಪಡಿಸಲು ಸಹಾಯ ಮಾಡುತ್ತವೆ. ಜತೆಗೆ ಮೂತ್ರಪಿಂಡ ಆರೋಗ್ಯವನ್ನು ಕಾಪಾಡುತ್ತದೆ. ನಿಮ್ಮ ಯಕೃತ್ತಿನ ವ್ಯವಸ್ಥೆಯನ್ನು ಸುಧಾರಿಸುತ್ತದೆ ಮತ್ತು ಕಾಮಾಲೆ ಸಮಸ್ಯೆಗೆ ಚಿಕಿತ್ಸೆ ನೀಡುತ್ತದೆ.
ಮೂಸಂಬಿ ರಸಕ್ಕೆ ಸ್ವಲ್ಪ ಕಪ್ಪು ಉಪ್ಪು ಹಾಕಿಕೊಂಡು ರಕ್ತಸ್ರಾವವಾಗುತ್ತಿರುವ ಒಸಡಿನ ಮೇಲೆ ಹಚ್ಚಿಕೊಳ್ಳಬೇಕು. ಬಾಯಿ ದುರ್ವಾಸನೆಯನ್ನು ಮೂಸಂಬಿ ಜ್ಯೂಸ್ ಸೇವನೆ ಅಥವಾ ಅದರ ಸಿಪ್ಪೆ ಜಗಿಯುವುದರಿಂದ ಕಡಿಮೆ ಮಾಡಬಹುದು.
ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ
ಮೂಸಂಬಿ ರಸವನ್ನು ನಿಯಮಿತವಾಗಿ ಸೇವಿಸುವುದರಿಂದ ಒಟ್ಟಾರೆ ಆರೋಗ್ಯ ಸುಧಾರಿಸುತ್ತದೆ. ಮೊಸಂಬಿಯಲ್ಲಿ ವಿಟಮಿನ್ ಸಿ ಸಮೃದ್ಧವಾಗಿದ್ದು ನಿಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಉಸಿರಾಟ ಸಮಸ್ಯೆಗೆ ಪರಿಹಾರ ನೀಡುತ್ತದೆ
ಮೂಸಂಬಿಯಲ್ಲಿ ಶೀತ, ನೆಗಡಿ ಮತ್ತು ಕೆಮ್ಮಿನಂತಹ ಸಮಸ್ಯೆಗೆ ಪರಿಹಾರ ಒದಗಿಸುತ್ತದೆ. ಜತೆಗೆ ತೂಕ ಇಳಿಸಿಕೊಳ್ಳಲು ಸಹಾಯಕವಾಗಿದೆ. ಮೂಸಂಬಿ ಜ್ಯೂಸ್ ಜತೆಗೆ ಜೇನುತುಪ್ಪ ಮತ್ತು ನೀರು ಸೇರಿಸಿ ಬೆಳಿಗ್ಗೆ ಸೇವಿಸುವ ಅಭ್ಯಾಸ ಮಾಡಿಕೊಳ್ಳುವುದು ಆರೋಗ್ಯಕ್ಕೆ ಹೆಚ್ಚು ಉಪಕಾರಿ.

ಮೂಸಂಬಿ ಹಣ್ಣಿನಲ್ಲಿರುವ ವಿಟಮಿನ್ ಸಿ ಮತ್ತು ಎ ರಕ್ತದಲ್ಲಿರುವ ಬಿಳಿ ಜೀವಕೋಶಗಳನ್ನು ಉತ್ಪಾದಿಸಲು ಉತ್ತೇಜಿಸುತ್ತದೆ. ಇದರಿಂದ ದೇಹದ ಪ್ರತಿರಕ್ಷಣಾ ವ್ಯವಸ್ಥೆ ಸುಧಾರಿಸುತ್ತದೆ. ಹಾಗೆಯೇ ದೇಹದಲ್ಲಿ ಕಬ್ಬಿಣಾಂಶವನ್ನು ಹೆಚ್ಚಿಸಲು ಮೂಸಂಬಿ ಹಣ್ಣಿನ ಸೇವನೆ ಉತ್ತಮ.
ಇದು ಒಣ ಚರ್ಮ ಸುಧಾರಿಸುವುದು, ಚರ್ಮದ ಬಣ್ಣ ಮತ್ತು ಕಾಂತಿ ಹೆಚ್ಚಿಸುವುದು ಹಾಗೂ ನೈಸರ್ಗಿಕ ಮೊಶ್ಚಿರೈಸರ್ ಆಗಿ ಕೆಲಸ ಮಾಡುವುದು.
ಮೂಸಂಬಿ ರಸವನ್ನು ಕುಡಿಯುವುದರಿಂದ, ರಕ್ತ ಪರಿಚಲನೆ ಸರಿಯಾಗಿ ನಡೆಯುತ್ತದೆ. ಹಾಗೆಯೇ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಪ್ರತಿನಿತ್ಯ ಮೂಸಂಬಿ ರಸವನ್ನು ಕುಡಿಯುವುದರಿಂದ ದೇಹಕ್ಕೆ ರೋಗಗಳ ವಿರುದ್ಧ ಹೋರಾಡುವ ಶಕ್ತಿಯನ್ನು ನೀಡುತ್ತದೆ.
ರಕ್ತದ ಜೀವಕೋಶಗಳಲ್ಲಿ ಎಲೆಕ್ಟ್ರೋಲೈಟ್ ಸಮತೋಲನ ಕಾಪಾಡಿಕೊಳ್ಳುವಲ್ಲಿ ಈ ಅಂಶಗಳು ಸಹಾಯಕವಾಗಿದೆ. ಈ ಹಣ್ಣಿನಲ್ಲಿರುವ ಪೊಟಾಶಿಯಂ ಮೆದುಳಿಗೆ ಆಮ್ಲಜನಕವನ್ನು ಪೂರೈಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.
ಇದರಲ್ಲಿ ಇರುವಂತಹ ಮಿತವಾದ ಬ್ಲೀಚಿಂಗ್ ಗುಣಗಳು ಮೊಡವೆ, ಬೊಕ್ಕೆ ಇತ್ಯಾದಿ ಸಮಸ್ಯೆಗಳನ್ನು ನಿವಾರಣೆ ಮಾಡಿ ಚರ್ಮಕ್ಕೆ ಕಾಂತಿ ನೀಡುವಲ್ಲಿ ಪ್ರಮುಖ ಪಾತ್ರ ವಹಿಸುವುದು.
ಧನ್ಯವಾದಗಳು.
GIPHY App Key not set. Please check settings