ಒಂದೇ ಹೂಡಿಕೆ ಉದ್ದೇಶವನ್ನು ಹೊಂದಿರುವ ಹಲವು ಹೂಡಿಕೆದಾರರು ಸಂಗ್ರಹಿಸುವ ಒಂದು ಟ್ರಸ್ಟ್ ಇದು. ನಂತರ, ಇದು ಈಕ್ವಿಟಿ, ಬಾಂಡ್‌ಗಳು, ಹಣದ ಮಾರ್ಕೆಟ್ ಸಲಕರಣೆಗಳು ಮತ್ತು/ಅಥವಾ ಇತರ ಸೆಕ್ಯುರಿಟಿಗಳಲ್ಲಿ ಹೂಡಿಕೆ ಮಾಡುತ್ತದೆ. ಪ್ರತಿ ಹೂಡಿಕೆದಾರರೂ ತಮ್ಮ ಹಣದ ಭಾಗವನ್ನು ಪ್ರತಿನಿಧಿಸುವ ಯೂನಿಟ್‌ಗಳನ್ನು ಹೊಂದಿರುತ್ತಾರೆ. ಈ ಸಂಚಿತ ಹೂಡಿಕೆಯಿಂದ ಪಡೆದ ಅದಾಯ/ಗಳಿಕೆಯನ್ನು ನಿರ್ದಿಷ್ಟ ವೆಚ್ಚವನ್ನು ಕಡಿತಗೊಳಿಸಿಕೊಂಡ ನಂತರ ಹೂಡಿಕೆದಾರರಲ್ಲಿ ಸಮಾನ ಪ್ರಮಾಣದಲ್ಲಿ ಹಂಚಿಕೊಳ್ಳಲಾಗುತ್ತದೆ ಮತ್ತು ಇಲ್ಲಿ ಸ್ಕೀಮ್‌ನ ನಿವ್ವಳ ಸ್ವತ್ತು ಮೌಲ್ಯ ಅಥವಾ ಎನ್‌ಎವಿ ಅನ್ನು ಲೆಕ್ಕ ಮಾಡಲಾಗಿರುತ್ತದೆ.
ಸರಳವಾಗಿ ಹೇಳುವುದಾದರೆ, ಮ್ಯೂಚುವಲ್ ಫಂಡ್‌ಗಳು ಜನಸಾಮಾನ್ಯರಿಗೆ ಅತ್ಯಂತ ಅನುಕೂಲಕರ ಆಯ್ಕೆಯಾಗಿವೆ. ಇದು ವೈವಿಧ್ಯಮಯ, ವೈಯಕ್ತಿಕವಾಗಿ ನಿರ್ವಹಿಸಿದ ಸೆಕ್ಯುರಿಟಿಗಳ ಬಾಸ್ಕೆಟ್‌ನಲ್ಲಿ ಅತಿ ಕಡಿಮೆ ವೆಚ್ಚದಲ್ಲಿ ಹೂಡಿಕೆ ಮಾಡುತ್ತದೆ.

ಮ್ಯೂಚುವಲ್ ಫಂಡ್‌ಗಳ ವಿಧಗಳು :
ಸ್ವತ್ತುಗಳ ವರ್ಗ ಮತ್ತು ರಚನೆಯ ಆಧಾರದ ಮೇಲೆ ನಾವು ಮ್ಯೂಚುವಲ್ ಫಂಡ್‌ಗಳನ್ನು ವಿಂಗಡಿಸಬಹುದು. ಈ ರೀತಿಯ ಮ್ಯೂಚುವಲ್ ಫಂಡ್ಗಳಲ್ಲಿ ಒಂದು ಅಥವಾ ಹೆಚ್ಚಿನ ಸ್ವತ್ತುಗಳ ಮೇಲೆ ಹೂಡಿಕೆ ಮಾಡಲಾಗುತ್ತದೆ. ಅಂದರೆ, ನೀವು ಮ್ಯೂಚುವಲ್ ಫಂಡ್‌ಗಳಲ್ಲಿ ಠೇವಣಿ ಮಾಡಿದ ಹಣವನ್ನು ಯಾವುದಾದರೂ ಒಂದು ಅಥವಾ ಹೆಚ್ಚಿನ ಸ್ಥಳಗಳಲ್ಲಿ ಹೂಡಿಕೆ ಮಾಡಲಾಗುತ್ತದೆ. ಆಸ್ತಿ ವರ್ಗದ ಆಧಾರದ ಮೇಲೆ ನಾವು ಮ್ಯೂಚುವಲ್ ಫಂಡ್‌ಗಳನ್ನು ಹಲವಾರು ಭಾಗಗಳಾಗಿ ವಿಂಗಡಿಸಬಹುದು.
*ಸಾಲ ನಿಧಿಗಳು
ಸಾಲ ನಿಧಿಗಳು ಸ್ಥಿರ ಆದಾಯ ನೀಡುವ ನಿಧಿಗಳಾಗಿವೆ. ಸಾಲ ನಿಧಿಗಳು ವಾಣಿಜ್ಯ ಪತ್ರ, ಖಜಾನೆ ಬಿಲ್‌ಗಳು, ಕಾರ್ಪೊರೇಟ್ ಬಾಂಡ್‌ಗಳು ಮತ್ತು ಇತರ ಅನೇಕ ಹಣ ಮಾರುಕಟ್ಟೆ ಸಾಧನಗಳಲ್ಲಿ ಹೂಡಿಕೆ ಮಾಡುತ್ತವೆ.
*ಗಿಲ್ಟ್ ಫಂಡ್
ಗಿಲ್ಟ್ ಫಂಡ್‌ಗಳು ತಮ್ಮ ಹಣವನ್ನು ಸರ್ಕಾರಿ ಭದ್ರತೆಗಳಲ್ಲಿ ಮಾತ್ರ ಹೂಡಿಕೆ ಮಾಡುತ್ತವೆ. ಸರ್ಕಾರಕ್ಕೆ ಹಣ ನೀಡುವುದರಿಂದ, ಈ ರೀತಿಯ ಸಾಲ ನಿಧಿಯಲ್ಲಿ ಯಾವುದೇ ರಿಸ್ಕ್ ಇರುವುದಿಲ್ಲ.
*ಲಿಕ್ವಿಡ್ ಫಂಡ್
ಲಿಕ್ವಿಡ್ ಫಂಡ್‌ಗಳು ಮ್ಯೂಚುವಲ್ ಫಂಡ್‌ಗಳಾಗಿದ್ದು ಅದನ್ನು ಯಾವುದೇ ಸಮಯದಲ್ಲಿ ರಿಡೀಮ್ ಮಾಡಬಹುದು. ವಿಮೋಚನೆಗಾಗಿ ಅರ್ಜಿ ಸಲ್ಲಿಸಿದ 24 ಗಂಟೆಗಳ ಒಳಗೆ ಹಣವನ್ನು ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. ಲಿಕ್ವಿಡ್ ಫಂಡ್‌ಗಳು ಸಾಲ ನಿಧಿ ವಿಭಾಗದಲ್ಲಿ ಕಡಿಮೆ ಆದಾಯ ನೀಡುತ್ತವೆ ಆದರೆ ಹೆಚ್ಚು ಸುರಕ್ಷಿತವಾಗಿರುತ್ತವೆ.
ನೀವು ಕನಿಷ್ಟ 3 ದಿನಗಳ ಅವಧಿಗೆ ಲಿಕ್ವಿಡ್ ಫಂಡ್‌ಗಳಲ್ಲಿ ಹೂಡಿಕೆ ಮಾಡಬಹುದು. ಲಿಕ್ವಿಡ್ ಫಂಡ್‌ಗಳು ಹೂಡಿಕೆ ಮಾಡುವ ಸೆಕ್ಯುರಿಟಿಗಳು 91 ದಿನಗಳವರೆಗೆ ಮುಕ್ತಾಯವನ್ನು ಹೊಂದಿರುತ್ತವೆ. ಲಿಕ್ವಿಡ್ ಫಂಡ್‌ಗಳು ಉಳಿತಾಯ ಖಾತೆಗಳು ಮತ್ತು ಬ್ಯಾಂಕ್ ಎಫ್‌ಡಿಗಳಿಗೆ ಉತ್ತಮ ಪರ್ಯಾಯವಾಗಿದೆ.
*ಇಕ್ವಿಟಿ ಫಂಡ್‌ಗಳು
ಮ್ಯೂಚುವಲ್ ಫಂಡ್‌ಗಳಲ್ಲಿ ಈಕ್ವಿಟಿ ಫಂಡ್ ಅತ್ಯಂತ ಜನಪ್ರಿಯ ನಿಧಿಯಾಗಿದೆ. ಇದು ಷೇರು ಮಾರುಕಟ್ಟೆ ಆಧಾರಿತ ಹೂಡಿಕೆ ಆಗಿರುವುದರಿಂದ ಇಲ್ಲಿ ರಿಸ್ಕ್ ಹೆಚ್ಚಿರುತ್ತದೆ. ಜನರು ಹೆಚ್ಚಿನ ರಿಸ್ಕ್ ತೆಗೆದುಕೊಳ್ಳುವ ಮೂಲಕ ಹೆಚ್ಚಿನ ಆದಾಯಕ್ಕಾಗಿ ಈಕ್ವಿಟಿ ಫಂಡ್‌ಗಳಲ್ಲಿ ಹೂಡಿಕೆ ಮಾಡುತ್ತಾರೆ. ಈಕ್ವಿಟಿ ಮ್ಯೂಚುವಲ್ ಫಂಡ್‌ಗಳಲ್ಲಿ, ಫಂಡ್ ಮ್ಯಾನೇಜರ್ ಸಂಪೂರ್ಣ ಹೂಡಿಕೆಯನ್ನು ಷೇರು ಮಾರುಕಟ್ಟೆಯಲ್ಲಿ ಮಾಡುತ್ತಾನೆ.

ಈಕ್ವಿಟಿ ಮ್ಯೂಚುವಲ್ ಫಂಡ್‌ಗಳನ್ನು ಲಾರ್ಜ್ ಕ್ಯಾಪ್ (ಬೃಹತ್ ಬಂಡವಾಳ), ಮಿಡ್ ಕ್ಯಾಪ್ (ಮಧ್ಯಮ ಬಂಡವಾಳ), ಮಲ್ಟಿಕ್ಯಾಪ್ (ಬಹು ಬಂಡವಾಳ) ಮತ್ತು ಸ್ಮಾಲ್ ಕ್ಯಾಪ್ (ಸಣ್ಣ ಬಂಡವಾಳ) ನಿಧಿಗಳಾಗಿ ವಿಂಗಡಿಸಲಾಗಿದೆ.
*ಲಾರ್ಜ್ ಕ್ಯಾಪ್ ಫಂಡ್‌ಗಳು
ಲಾರ್ಜ್ ಕ್ಯಾಪ್ ಮ್ಯೂಚುಯಲ್ ಫಂಡ್‌ಗಳು ಬೃಹತ್ ಮಾರುಕಟ್ಟೆ ಬಂಡವಾಳ ಹೊಂದಿರುವ ಕಂಪನಿಯಲ್ಲಿ ತಮ್ಮ ಹಣವನ್ನು ಹೂಡಿಕೆ ಮಾಡುತ್ತವೆ. ಲಾರ್ಜ್ ಕ್ಯಾಪ್ ಕಂಪನಿಯು ಈಗಾಗಲೇ ತನ್ನ ಬೆಳವಣಿಗೆ ಸಾಧಿಸಿರುತ್ತದೆ. ಹಾಗಾಗಿ ಇಲ್ಲಿ ರಿಟರ್ನ್ಸ್ ಕಡಿಮೆ ಆದರೆ, ರಿಟರ್ನ್ಸ್ ಸ್ಥಿರವಾಗಿರುತ್ತದೆ. ಸಣ್ಣ ಮತ್ತು ಮಿಡ್‌ಕ್ಯಾಪ್ ಫಂಡ್‌ಗಳಿಗಿಂತ ಲಾರ್ಜ್ ಕ್ಯಾಪ್ ಫಂಡ್‌ಗಳು ಕಡಿಮೆ ರಿಸ್ಕ್ ಹೊಂದಿರುತ್ತವೆ.
*ಮಿಡ್ ಕ್ಯಾಪ್ ಫಂಡ್‌ಗಳು
ಮಿಡ್ ಕ್ಯಾಪ್ ಕಂಪನಿಯು ಮಧ್ಯಮ ಬಂಡವಾಳ ಹೊಂದಿರುವ ಕಂಪನಿಯಾಗಿದೆ. ಈ ಕಂಪನಿಗಳು ತಮ್ಮ ವ್ಯವಹಾರವನ್ನು ಆರಂಭಿಸಿ, ಈಗಷ್ಟೇ ಪ್ರಗತಿಯತ್ತ ಹೆಜ್ಜೆ ಹಾಕುತ್ತಿರುತ್ತವೆ. ಹೀಗಾಗಿ ಮಿಡ್ ಕ್ಯಾಪ್ ಫಂಡ್‌ಗಳು ಲಾರ್ಜ್ ಕ್ಯಾಪ್ ಫಂಡ್‌ಗಳಿಗಿಂತ ಹೆಚ್ಚಿನ ಆದಾಯ ನೀಡುವ ಸಾಮರ್ಥ್ಯ ಹೊಂದಿವೆ.
*ಸ್ಮಾಲ್ ಕ್ಯಾಪ್ ಫಂಡ್‌ಗಳು
ಸ್ಮಾಲ್ ಕ್ಯಾಪ್ ಕಂಪನಿಗಳು ಮಾರುಕಟ್ಟೆಯಲ್ಲಿ ಹೊಸ ವ್ಯವಹಾರ ಆರಂಭಿಸಿ ತಮ್ಮನ್ನು ತಾವು ಸ್ಥಾಪಿಸಿಕೊಳ್ಳಲು ಪ್ರಯತ್ನಿಸುತ್ತಿರುತ್ತವೆ. ಇವುಗಳಲ್ಲಿ ಆದಾಯ ಉತ್ತಮವಾಗಿದೆ ಆದರೆ ಅದಕ್ಕೆ ತಕ್ಕಂತೆ ರಿಸ್ಕ್ ಕೂಡ ಹೆಚ್ಚು.
*ಮಲ್ಟಿ ಕ್ಯಾಪ್ ಫಂಡ್‌ಗಳು
ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಲು ಈ ವರ್ಗವು ಬಹಳ ಜನಪ್ರಿಯವಾಗಿದೆ. ಈ ನಿಧಿಯು ಲಾರ್ಜ್ ಕ್ಯಾಪ್, ಮಿಡ್ ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್ ಕಂಪನಿಗಳಲ್ಲಿ ಸ್ಥಿರ ಅನುಪಾತದಲ್ಲಿ ಹೂಡಿಕೆ ಮಾಡುತ್ತದೆ.
ಇವುಗಳ ಹೊರತಾಗಿ, ಫ್ಲೆಕ್ಸಿ ಕ್ಯಾಪ್ ಫಂಡ್‌ಗಳು, ಇಕ್ವಿಟಿ ಲಿಂಕ್ಡ್ ಸೇವಿಂಗ್ಸ್ ಸ್ಕೀಮ್‌ಗಳು ಮತ್ತು ಹೈಬ್ರಿಡ್ ಫಂಡ್‌ಗಳು ಇತ್ಯಾದಿ ಮ್ಯೂಚುವಲ್ ಫಂಡ್‌ಗಳಿವೆ.

ಸೂಕ್ತ ಮ್ಯೂಚುವಲ್ ಫಂಡ್ ಆಯ್ಕೆ ಸುಲಭ:
ದೀರ್ಘಾವಧಿ ಹೂಡಿಕೆ: ದೀರ್ಘಾವಧಿ ಹೂಡಿಕೆಗೆ ಈಕ್ವಿಟಿ ಅಥವಾ ಬ್ಯಾಲೆನ್ಸ್ಡ್ ಫಂಡ್ ಹೆಚ್ಚು ಸೂಕ್ತ. 5 ವರ್ಷ, 10 ವರ್ಷ ಮೇಲ್ಪಟ್ಟು ಹೂಡಿಕೆ ಮಾಡಬೇಕು ಎನ್ನುವವರಿಗೆ ಅಥವಾ ನಿವೃತ್ತಿ ಯೋಜನೆ ರೂಪಿಸಿಕೊಳ್ಳಬೇಕು ಎನ್ನುವವರಿಗೆ ಈ ಫಂಡ್‌ಗಳು ಹೆಚ್ಚು ಸೂಕ್ತ.
ಅಲ್ಪಾವಧಿ ಹೂಡಿಕೆ:ನಿಮ್ಮ ಬಳಿ ಸದ್ಯಕ್ಕೆ ದೊಡ್ಡ ಮೊತ್ತದ ಹಣವಿದೆ. ಆದರೆ ಕೆಲ ತಿಂಗಳಲ್ಲೇ ಅದನ್ನು ಮಗಳ ಮದುವೆ ಖರ್ಚಿಗಾಗಿ ವಾಪಸ್ ತೆಗೆಯಬೇಕು ಅಥವಾ ತುರ್ತು ಸಂದರ್ಭಗಳಿಗೆ ಆ ಹಣ ಅಗತ್ಯ ಎಂದಾದರೆ ಲಿಕ್ವಿಡ್ ಫಂಡ್‌ನಲ್ಲಿ ಹಣ ತೊಡಗಿಸುವುದು ಸರಿಯಾದ ಆಯ್ಕೆ.
ನಿರ್ದಿಷ್ಟ ಆದಾಯ ಗಳಿಸಲು: ನೀವು ಮ್ಯೂಚುವಲ್ ಫಂಡ್‌ನಲ್ಲಿ ಹಣ ತೊಡಗಿಸಿ ಕಾಲಕಾಲಕ್ಕೆ ನಿರ್ದಿಷ್ಟ ಆದಾಯ ಗಳಿಸಬೇಕು ಎಂದು ನಿರ್ಧರಿಸಿದ್ದಲ್ಲಿ ಮಾಸಿಕ ಆದಾಯ ಯೋಜನೆ (ಮಂತ್ಲಿ ಇನ್‌ಕಂ ಪ್ಲ್ಯಾನ್) ಅಥವಾ ಆದಾಯ ನಿಧಿ (ಇನ್‌ಕಂ ಫಂಡ್) ಯೋಜನೆಯನ್ನು ಪರಿಗಣಿಸಬಹುದು.
ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆ ಮಾಡಬೇಕು ಎಂದು ನಿರ್ಧರಿಸಿದ ಬಳಿಕ, ಮ್ಯೂಚುವಲ್ ಫಂಡ್ ಕಂಪನಿಯನ್ನು ಆಯ್ಕೆ ಮಾಡಬೇಕು. ನಂತರದಲ್ಲಿ ಆ ಕಂಪನಿಯ ಸ್ಕೀಂ ಬಗ್ಗೆ ಪೂರ್ಣ ಮಾಹಿತಿ ಪಡೆದುಕೊಳ್ಳಬೇಕು.
ಪ್ರತಿ ತಿಂಗಳ ವೇತನದಿಂದ ನಿರ್ದಿಷ್ಟ ಹಣವನ್ನು ಹೂಡಿಕೆ ಮಾಡುತ್ತ ದೊಡ್ಡ ಮೊತ್ತವನ್ನು ಪೇರಿಸಲು ‘ಸಿಪ್’ ಸೂಕ್ತ ಆಯ್ಕೆ. ನಿಮ್ಮ ಬಳಿ ಬೋನಸ್, ಆಸ್ತಿ ಮಾರಾಟ, ಅಥವಾ ನಿವೃತ್ತಿಯಿಂದ ಬಂದಿರುವ ಹೆಚ್ಚುವರಿ ಹಣ ಇದ್ದು, ಅದನ್ನು ಹೇಗೆ ಸದುಪಯೋಗ ಮಾಡಿಕೊಳ್ಳಬೇಕು ಎಂಬ ಪ್ರಶ್ನೆ ಇದಲ್ಲಿ, ಅದನ್ನು ಡೆಟ್ ಅಥವಾ ಲಿಕ್ವಿಡ್ ಫಂಡ್‌ಗಳಲ್ಲಿ ತೊಡಗಿಸಬಹುದು.
ಸಾಮಾನ್ಯರಿಗೆ ತಿಳಿದಿಲ್ಲದ ಮ್ಯೂಚುವಲ್ ಫಂಡ್ ಉದ್ಯಮದ ರಹಸ್ಯಗಳು ಯಾವುವು?
ಪ್ರತಿ ತಿಂಗಳು ನೀವು ಹಾಕಿದ ಹಣದಿಂದ ಮ್ಯೂಚುಯಲ್ ಫಂಡ್ ನಡೆಸುವ ಕಂಪನಿಗೆ ಎರಡುವರೆಯಿಂದ 5% ಹಣ ಕಡಿತಗೊಳ್ಳುತ್ತೆ.
ಪ್ರತ್ಯಕ್ಷವಾಗಿ ಮ್ಯೂಚುಯಲ್ ಫಂಡ್ ನಲ್ಲಿ ಹಣ ತೊಡಗಿಸುತ್ತಿದ್ದರೆ ನೀವು ಯಾವ ಬ್ರೋಕರೇಜ್ ಫೀ ಕೊಡುವ ಅಗತ್ಯ ಇಲ್ಲ.
ಆದರೆ ರೆಗ್ಯುಲರ್ ಪ್ಲಾನ್ ಬ್ರೋಕರ್ಗಳಿಂದ ನೀವು ಮ್ಯೂಚುಯಲ್ ಫಂಡ್ ಖರೀದಿಸಿದರೆ ಬ್ರೋಕರೇಜ್ ಫೀಸ್ ಅಂತ 10% ನಿಮ್ಮ ಮ್ಯೂಚುಯಲ್ ಫಂಡ್ ನಲ್ಲಿ ಪ್ರತಿ ತಿಂಗಳು ಕಡಿತಗೊಳಿಸ್ತಾರೆ.
ಒಂದು ವರ್ಷದ ಒಳಗೆ ನಿಮ್ಮ ಮ್ಯೂಚುಯಲ್ ಫಂಡ್ Redeem ಮಾಡಿದರೆ ನಿಮಗೆ ಒಂದು ಪರ್ಸೆಂಟ್ ಎಕ್ಸಿಟ್ ಲೋಡ್ ಅಂತ ಕೊಡುವ ಹಣದಿಂದ ಕಡಿತ ಗೊಳಿಸುತ್ತಾರೆ.
ಒಂದು ವರ್ಷದ ಕಮ್ಮಿಯ ಅವಧಿಯಲ್ಲಿ ಮ್ಯೂಚುಯಲ್ ಫಂಡ್ ತೆಗೆದರೆ ನಿಮಗೆ ಹದಿನೈದು ಪರ್ಸೆಂಟ್ ಟಿಡಿಎಸ್ ಕಡಿತಗೊಳ್ಳುತ್ತೆ.
ಇಂದೆಕ್ಸ್ ಫಂಡ್ ನಲ್ಲಿ ನೀವು ನಿವೇಶನ ಮಾಡಿದರೆ ಮೆಂಟೇನೆನ್ಸ್ ಫೀಸ್ ಕೇವಲ ಒಂದು ಪರ್ಸೆಂಟ್ ಗಿಂತ ಕಮ್ಮಿ ನಿಮಗೆ ವರ್ಷಕ್ಕೆ ಕಡಿತುಕೊಳ್ಳುತ್ತದೆ.
ಪ್ರತಿ ಬಾರಿ ನೀವು ಮ್ಯೂಚುಯಲ್ ಫಂಡ್ ತೆಗೆಯುವಾಗ ಎಸ್ ಟಿ ಟಿ ಅಂದರೆ ಸೆಕ್ಯೂರಿಟಿ ಟ್ರಾನ್ಸ್ಯಾಕ್ಷನ್ ಟ್ಯಾಕ್ಸ್ ಅಂತ 0.5% ಕಡಿತಗೊಳಿಸುತ್ತಾರೆ.

ನೀವು ಗ್ರೋಥ್ ಫಂಡ್ ನಲ್ಲಿ ಹಣ ತೊಡಗಿಸಿದ್ರೆ ಫಂಡ್ ನಲ್ಲಿರುವ ಶೇರುಗಳು ಮೇಲೆ ಹೋದಷ್ಟು ನಿಮಗೆ ಹಣ ಜಾಸ್ತಿ ಆಗ್ತಾ ಹೋಗುತ್ತೆ.
ಆದರೆ ನೀವು ಡಿವಿಡೆಂಡ್ ಫಂಡ್ ನಲ್ಲಿ ಇನ್ವೆಸ್ಟ್ ಮಾಡಿದ್ರೆ ನಿಮಗೆ ಕಂಪನಿಗಳ ಶೇರುಗಳನ್ನು ಕೊಂಡುಕೊಂಡು ಎಷ್ಟು ಡಿವಿಡೆಂಟ್ ಬಂದಿದೆ ಅಷ್ಟು ಮಾತ್ರ ನಿಮ್ಮ ಅಕೌಂಟಿಗೆ ಹಣ ಬರುತ್ತೆ.
ಮ್ಯೂಚುವಲ್ ಫಂಡ್ ನಲ್ಲಿ ಇಕ್ವಿಟೀಸ್ ಫಂಡ್ ಬ್ಯಾಲೆನ್ಸ್ ಫಂಡ್ ಹಾಗೂ Debt ಫಂಡ್ ಅಂತ ಇರುತ್ತೆ.
ಇಕ್ವಿಟೀಸ್ ಫಂಡ್ ಅಂದ್ರೆ ಅದು ನೂರುಕ್ಕೆ 100 ಪಟ್ಟು ಪೂರ್ಣವಾಗಿ ಕಂಪನಿಯ ಸ್ಟಾಕ್ಗಳಲ್ಲಿ ನಿವೇಶನ ಮಾಡುತ್ತದೆ. ಇದರಲ್ಲಿ ಮತ್ತೆ ಲಾರ್ಜ್ ಕ್ಯಾಂಪ್ ಮಿಡ್ ಕ್ಯಾಪ್ ಫಂಡ್ ಹಾಗೂ ಸ್ಮಾಲ್ ಕ್ಯಾಪ್ ಫಂಡ್ ಅಂತ ಇರುತ್ತೆ.
ಬ್ಯಾಲೆನ್ಸ್ಡ್ ಫಂಡ್ ಅಂದ್ರೆ ಅದು ಐವತ್ತು ಪರ್ಸೆಂಟ್ ಕಂಪನಿಯ ಶೇರುಗಳಲ್ಲಿ ಹಾಗೂ 50% ಅಂದರೆ ಸಾಲಗಳಲ್ಲಿ ಅದರ ಹೂಡಿಕೆ ಮಾಡುತ್ತೆ.
Debt fund ಅಂದ್ರೆ ಅದು ಪೂರ್ಣವಾಗಿ ಸಾಲಗಳಲ್ಲಿ ನಿಮ್ಮ ಹಣವನ್ನು ನಿವೇಶನ ಮಾಡುತ್ತೆ.
ಮ್ಯೂಚುವಲ್ ಫಂಡ್ ನಲ್ಲಿ ನಿವೇಶನ ಮಾಡಬೇಕು ಅಂದ್ರೆ ನಿಮ್ಮ ವಯಸ್ಸನ್ನು 100ರಿಂದ ಕಡಿತಗೊಳಿಸಿ.
ನಿಮಗೆ 40 ವರ್ಷವಾದರೆ 100–40 = 60. ಅರವತ್ತು ಪರ್ಸೆಂಟ್ ನಷ್ಟು ಹಣವನ್ನು ಇಕ್ವಿಟೀಸ್ ಗ್ರೋಥ್ ಫಂಡನಲ್ಲಿ ಹಾಗೂ 40% ನಷ್ಟು ಹಣವನ್ನು ಡೆಡ್ ಫಂಡ್ ನಲ್ಲಿ ಇನ್ವೆಸ್ಟ್ ಮಾಡುವುದು ನಿಯಮ.
ಧನ್ಯವಾದಗಳು.
GIPHY App Key not set. Please check settings