in

ಬಾಲ ನರೆ / ವಯಸ್ಸಿಗಿಂತ ಮುಂಚೆ ಬರುವ ಬಿಳಿ ಕೂದಲಿಗೆ ನೈಸರ್ಗಿಕ ಮದ್ದು

ದೇಹದಲ್ಲಿ ಮೆಲನಿನ್ ಅಂಶದ ಕೊರತೆ ಉಂಟಾಗುವುದು. ಅತಿಯಾದ ಮಾನಸಿಕ ಒತ್ತಡ, ಆಹಾರ ಶೈಲಿಯಲ್ಲಿ ಅನಾರೋಗ್ಯಕರ ಬದಲಾವಣೆ ಹೊಂದುವುದು. ರಾಸಾಯನಿಕ ಅಂಶಗಳ ಅತ್ಯಧಿಕ ಬಳಕೆ. ಪ್ರತಿದಿನ ಶಾಂಪು ಹಾಕಿ ತಲೆಸ್ನಾನ ಮಾಡುವುದು ಈ ಎಲ್ಲಾ ಕಾರಣಗಳು  ಪ್ರಾಯಕ್ಕಿಂತ ಬೇಗನೆ ಬರುವ ಬಿಳಿ ಕೂದಲಿಗೆ ಕಾರಣಗಳು ಇರಬಹುದು. ಹದಿಹರೆಯದಲ್ಲೇ ಮೆಲನಿನ್ ಉತ್ಪತ್ತಿಯು ಕಡಿಮೆಯಾದರೆ ಆಗ ಕೂದಲು ಬಿಳಿಯಾಗುವುದು ಸಹಜ.

ದಟ್ಟವಾದ ಕಪ್ಪು ಕೂದಲಿನ ಮಧ್ಯೆ ಒಂದು ಬಿಳಿ ಕೂದಲು ಕಾಣಿಸಿದರೂ ಚಿಂತೆ ಎನ್ನುವುದು ಮನುಷ್ಯನನ್ನು ಕಾಡುವುದು. ಅದರಲ್ಲೂ ಹದಿಹರೆಯದಲ್ಲೇ ಕೆಲವರಿಗೆ ಬಿಳಿ ಕೂದಲು ಬಂದುಬಿಡುವುದು. ವಯಸ್ಸಾಗುತ್ತಾ ಹೋದಂತೆ ಬಿಳಿ ಕೂದಲು ಬರುವುದು ಸಾಮಾನ್ಯ. ಆದರೆ ಹದಿಹರೆಯದಲ್ಲೇ ಇಂತಹ ಕೂದಲು ಬಂದರೆ ಅದು ತಲೆನೋವಿಗೆ ಕಾರಣವಾಗುತ್ತದೆ. ಹದಿಹರೆಯದ ಹುಡುಗಿಯರು ಹಾಗೂ ಹುಡುಗರಲ್ಲಿ ಇಂತಹ ಸಮಸ್ಯೆ ಇಂದಿನ ದಿನಗಳಲ್ಲಿ ಸಾಮಾನ್ಯವಾಗಿದೆ.

ಬಿಳಿ ಕೂದಲು ಹೋಗಲಾಡಿಸಲು ನೀವು ಹಲವಾರು ಶ್ಯಾಂಪೂ, ಎಣ್ಣೆಗಳನ್ನು ಬಳಸಿರಬಹುದು. ಆದರೆ ಇದು ಕೇವಲ ನಿಮ್ಮ ಕಿಸೆ ಖಾಲಿ ಮಾಡುವುದು ಮಾತ್ರ. ಹದಿಹರೆಯದಲ್ಲೇ ಕೂದಲು ಬಿಳಿಯಾದರೆ ಕೆಲವು ಮನೆಮದ್ದುಗಳನ್ನು ಬಳಸಿ. ಇದು ತುಂಬಾ ಪರಿಣಾಮಕಾರಿ ಮತ್ತು ಅಡ್ಡಪರಿಣಾಮಗಳು ಇರುವುದಿಲ್ಲ. ಯಾವಾಗ ನಮ್ಮ ತಲೆಯಲ್ಲಿ ಒಂದೊಂದೇ ಬಿಳಿ ಕೂದಲು ಬರಲು ಪ್ರಾರಂಭವಾಗುತ್ತದೆಯೋ, ಆಗಲೇ ಎಚ್ಚೆತ್ತುಕೊಂಡರೆ ಮುಂಬರುವ ದಿನಗಳಲ್ಲಿ ಇಡೀ ತಲೆ ಬೆಳ್ಳಗಾಗುವ ಸಾಧ್ಯತೆಯನ್ನು ಆರಂಭದಲ್ಲಿಯೇ ತಡೆಯಬಹುದು.

ಆಹಾರ ಪದ್ಧತಿಯ ಮೇಲೆ ನಾವು  ಗಮನ ಹರಿಸಬೇಕು ಜೊತೆಗೆ ತಲೆ ಕೂದಲು ಆರೋಗ್ಯಕರವಾಗಿ ಬೆಳವಣಿಗೆ ಆಗುವಂತಹ ಪೂರಕಗಳ ಮೇಲೆ ಕೂಡ ಆಸಕ್ತಿ ವಹಿಸಬೇಕು. ವಯಸ್ಸಾದಂತೆ ಹೇಗೆ ನಮ್ಮ ಚರ್ಮ ತನ್ನ ಕಾಂತಿಯನ್ನು ಕಳೆದುಕೊಂಡು ಸುಕ್ಕುಗಟ್ಟಲು ಪ್ರಾರಂಭವಾಗುತ್ತದೆ ಅದೇ ರೀತಿ ನಮ್ಮ ತಲೆ ಕೂದಲು ಸಹ ನಾವು ಮಧ್ಯವಯಸ್ಸಿಗೆ ಬರಲು ಪ್ರಾರಂಭವಾಗುವ ಅವಧಿಯಿಂದ ಕ್ರಮೇಣವಾಗಿ ತನ್ನ ಕಪ್ಪುಬಣ್ಣವನ್ನು ಬಿಳಿ ಬಣ್ಣಕ್ಕೆ ತಿರುಗಿಸಿಕೊಂಡು ಬರುತ್ತದೆ.

ಈಗಿನ ಕಾಲದಲ್ಲಿ ಕೇವಲ 20 ವರ್ಷದ ಯುವಕ-ಯುವತಿಯರಿಗೆ ಈ ಸಮಸ್ಯೆ ಹೆಚ್ಚಾಗಿ ಕಾಡುತ್ತಿದ್ದು, ಹೊರಗಡೆ ನಾಲ್ಕು ಜನರ ಮಧ್ಯೆ ತಲೆಯೆತ್ತಿ ಓಡಾಡಲು ಕಷ್ಟವಾಗುವಂತ ಅನುಭವ ಉಂಟಾಗುತ್ತಿದೆ.

ಹದಿಹರೆಯದಲ್ಲೇ ಕೂದಲು ಬಿಳಿಯಾಗಿದ್ದರೆ ಇಲ್ಲಿ ಕೊಟ್ಟಿರುವ ಮನೆಮದ್ದುಗಳನ್ನು ಬಳಸಿ…ನೋಡಿ.

ಕರಿಬೇವು ಮತ್ತು ಶುದ್ಧ ತೆಂಗಿನ ಎಣ್ಣೆ: ಕರಿಬೇವಿನ ಎಲೆಗಳನ್ನು ತೆಗೆದುಕೊಂಡು ಅದನ್ನು ನೀರಿನಲ್ಲಿ ನೆನಸಿಡಿ. ನೀರಿನಿಂದ ತೆಗೆದ ಬಳಿಕ ಬಿಸಿಲಿನಲ್ಲಿ ಅದು ಕಂದು ಬಣ್ಣಕ್ಕೆ ಬರುವ ತನಕ ಮತ್ತು ಗರಿಗರಿ ಆಗುವ ತನಕ ಒಣಗಿಸಿ. ಒಣಗಿದ ಎಲೆಗಳನ್ನು ಸರಿಯಾಗಿ ಹುಡಿ ಮಾಡಿಕೊಳ್ಳಿ. ಸಣ್ಣ ಬಾಣಲೆಯಲ್ಲಿ ತೆಂಗಿನ ಎಣ್ಣೆಯನ್ನು ಬಿಸಿ ಮಾಡಿಕೊಳ್ಳಿ. ಅದಕ್ಕೆ ನಾಲ್ಕು ಚಮಚ ಕರಿಬೇವಿನ ಹುಡಿಯನ್ನು ಹಾಕಿ. ಎಣ್ಣೆ ಸರಿಯಾಗಿ ಕುದಿಯಲಿ. ಎಣ್ಣೆಯನ್ನು ತಣ್ಣಗಾಗಲು ಬಿಡಿ. ಇದನ್ನು ಒಂದು ಬಾಟಲಿಗೆ ಹಾಕಿ ಗಟ್ಟಿಯಾಗಿ ಮುಚ್ಚಳ ಮುಚ್ಚಿಡಿ. ಇದನ್ನು ಬೇಕಾದಾಗ ತೆಗೆದು ಬಳಸಿಕೊಳ್ಳಿ. ಕರಿಬೇವಿನ ಸೊಪ್ಪು ಕೂದಲಿನ ಕಪ್ಪು ಬಣ್ಣಕ್ಕೆ ಒಳ್ಳೆಯದು. ಎಣ್ಣೆ ಮಾತ್ರ ಘಮ ಘಮ  ಸುವಾಸನೆ ಇಂದ ಇರುತ್ತದೆ.

ತೆಂಗಿನೆಣ್ಣೆ ಮತ್ತು ನಿಂಬೆ ರಸ: ಒಂದು ಬೌಲ್ನಲ್ಲಿ ಒಂದು ಚಮಚ ತೆಂಗಿನೆಣ್ಣೆ , ಅದಕ್ಕೆ ಅರ್ಧ ನಿಂಬೆ  ರಸವನ್ನು ಸೇರಿಸಿ ಚೆನ್ನಾಗಿ ಮಿಶ್ರಗೊಳಿಸಿ,  ಕೂದಲಿಗೆ ಹಚ್ಚಿ , 20-30 ನಿಮಿಷಗಳ ಕಾಲ ಬಿಟ್ಟು, ಶ್ಯಾಂಪೂವಿನಿಂದ ಸ್ವಚ್ಛಗೊಳಿಸಿ. ವಾರಕ್ಕೊಮ್ಮೆ ಈ ಕ್ರಮವನ್ನು ಅನುಸರಿಸಿ.

ಅಕ್ರೋಟದ ಸಿಪ್ಪೆ: ಕೂದಲನ್ನು ಕಪ್ಪು ಮಾಡಲು ಅಕ್ರೋಟದ ಸಿಪ್ಪೆಯು ತುಂಬಾ ಲಾಭಕಾರಿ. ಅಕ್ರೋಟ ಕೂಡ ಆರೋಗ್ಯಕ್ಕೆ ಒಳ್ಳೆಯದು. ಅಕ್ರೋಟದ ಸಿಪ್ಪೆಯನ್ನು ಪುಡಿ ಮಾಡಿ,  ಕುದಿಯುವ ನೀರಿಗೆ ಹಾಕಿ ಹಾಗೂ ಅರ್ಧ ಗಂಟೆ ಕಾಲ ಕುದಿಸಿ. ಬಳಿಕ ನೀರನ್ನು ತಣ್ಣಗೆ ಮಾಡಿ ಸೋಸಿಕೊಂಡು ಕೂದಲಿಗೆ ಹಚ್ಚಿಕೊಳ್ಳಿ. ಒಂದು ಗಂಟೆ ಕಾಲ ಹಾಗೆ ಇದನ್ನು ಕೂದಲಿನಲ್ಲಿ ಬಿಡಿ ಮತ್ತು ಇದರ ಬಳಿಕ ಶ್ಯಾಂಪೂ ಹಾಕಿ ತೊಳೆಯಿರಿ. ಬಿಸಿ ನೀರಿನಿಂದ ತೊಳೆದರೆ ಅಷ್ಟು ಪರಿಣಾಮಕಾರಿ ಇರುವುದಿಲ್ಲ.

ಬಾದಾಮಿ ಎಣ್ಣೆ: ತೆಂಗಿನೆಣ್ಣೆಯ ನಂತರ, ನಿಮ್ಮ ಕೂದಲಿಗೆ ಬಳಸಬಹುದಾದ ಉತ್ತಮ ಎಣ್ಣೆ ಎಂದರೆ ಅದು ಬಾದಾಮಿ ಎಣ್ಣೆಯಾಗಿದೆ. ಈ ಎಣ್ಣೆಯನ್ನು ಬಳಸಿ ಕೂದಲಿನ ಬುಡ ಮತ್ತು ಕೂದಲಿನ ತುದಿಗೆ ಚೆನ್ನಾಗಿ ಮಸಾಜ್ ಮಾಡಿ. ಬಾದಾಮಿ ಎಣ್ಣೆಯನ್ನು ಬಿಸಿ ಮಾಡಿ ನಂತರ ಹಚ್ಚಿಕೊಳ್ಳುವುದರಿಂದ ಕೂಡ ಹೆಚ್ಚಿನ ಫಲಿತಾಂಶ ನಿಮಗೆ ದೊರೆಯಲಿದೆ. ವಿಟಮಿನ್ ಇ, ಈ ಎಣ್ಣೆಯಲ್ಲಿದ್ದು ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸುತ್ತದೆ. ಜೊತೆಗೆ ದಪ್ಪನೆಯ ಕಪ್ಪು ಕೂದಲನ್ನು ನೀಡುತ್ತದೆ.

ತೆಂಗಿನಎಣ್ಣೆ,ದಾಸವಾಳದ ಹೂವುಗಳು,ಕರ್ಪೂರ: ಒಂದು  ಸ್ಟೀಲ್ ಬೌಲ್ ತೆಗೆದುಕೊಂಡು ಅದಕ್ಕೆ ಸ್ವಲ್ಪ ತೆಂಗಿನ ಎಣ್ಣೆ ಹಾಕಿ ಸ್ವಲ್ಪ ಹೊತ್ತು ಕುದಿಸಿ. ಇದಕ್ಕೆ ದಾಸವಾಳದ ಹೂವುಗಳನ್ನು ಹಾಕಿ ಎಣ್ಣೆ ಬಿಸಿ ಇರುವಾಗ ಚೆನ್ನಾಗಿ ತಿರುಗಿಸಿ ಸುಮಾರು ಒಂದು ನಿಮಿಷ ಆದಮೇಲೆ ಗ್ಯಾಸ್ ಸ್ಟವ್ ಆಫ್ ಮಾಡಿ. ಈಗ ಕರ್ಪೂರದ ಮಾತ್ರೆಗಳನ್ನು ಹಾಕಿ ಸ್ವಲ್ಪ ಹೊತ್ತು ಈ ಮಿಶ್ರಣ ತಣ್ಣಗಾಗಲು ಬಿಡಿ. ಈ ಎಣ್ಣೆಯನ್ನು ನಿಮ್ಮ ತಲೆಗೆ ಹಚ್ಚಿ ನಯವಾಗಿ ಮಸಾಜ್ ಮಾಡಿ. ಪ್ರತಿದಿನವೂ ಈ ಪ್ರಕ್ರಿಯೆಯನ್ನು ಅನುಸರಿಸುವುದರಿಂದ ನಿಧಾನವಾಗಿ ನಿಮ್ಮ ತಲೆ ಕೂದಲು ಕಪ್ಪು ಬಣ್ಣಕ್ಕೆ ತಿರುಗುತ್ತದೆ.

ಹಾಗಲಕಾಯಿ ಮಾಸ್ಕ್: ತೆಂಗಿನ ಎಣ್ಣೆಯೊಂದಿಗೆ ಹಾಗಲಕಾಯಿಯನ್ನು ಬೇಯಿಸಿಕೊಳ್ಳಿ ಬೆಂದ ನಂತರ ಅದನ್ನು ಎಣ್ಣೆಯೊಂದಿಗೆ ಹಿಸುಕಿಕೊಳ್ಳಿ ಈ ಮಿಶ್ರಣವನ್ನು ಕೂದಲಿಗೆ ಹಚ್ಚಿಕೊಳ್ಳಿ. ಐದು ಬಾರಿ ಪ್ರಯೋಗ ಮಾಡಿದ ನಂತರ ನೀವು ಅದ್ಭುತ ಪ್ರಯೋಜನವನ್ನು ಪಡೆದುಕೊಳ್ಳುವುದು ಖಂಡಿತ.

ಬೇವಿನ ಎಲೆಗಳು: ಚಿಕ್ಕ ಉರಿಯಲ್ಲಿ ಕೊಬ್ಬರಿ ಎಣ್ಣೆಯನ್ನು ಬಿಸಿಮಾಡಿ ಕೆಲವು ಬೇವಿನ ಎಲೆಗಳನ್ನು ಬೇಯಿಸಬೇಕು. ತಣ್ಣಗಾದ ಬಳಿಕ ಈ ಎಣ್ಣೆಯನ್ನು ಕೂದಲ ಬುಡಕ್ಕೆ ನಯವಾಗಿ ಮಸಾಜ್ ಮಾಡುವುದರಿಂದ ಬಿಳಿ ಕೂದಲು ಕಪ್ಪಗಾಗತೊಡಗುತ್ತದೆ.

ನೆಲ್ಲಿಕಾಯಿ: ಬಿಳಿ ಕೂದಲನ್ನು ನಿವಾರಿಸಲು ನೆಲ್ಲಿಕಾಯಿಗಿಂತ ಇನ್ನೊಂದು ಮದ್ದಿಲ್ಲ. ಕೆಲವು ನೆಲ್ಲಿಕಾಯಿಗಳನ್ನು ಕೊಬ್ಬರಿ ಎಣ್ಣೆಯಲ್ಲಿ ನಿಧಾನವಾದ ಉರಿಯಲ್ಲಿ ಕಪ್ಪಗಾಗುವವರೆಗೆ ಕುದಿಸಬೇಕು. ಎಣ್ಣೆಯನ್ನು ತಣ್ಣಗಾಗಲು ಬಿಟ್ಟು ಬಿಳಿಯಾಗಿರುವ ಕೂದಲಿಗೆ ಮಾಲಿಷ್ ಮಾಡಬೇಕು. ಇದು ಇತ್ತೀಚೆಗೆ ನೆರೆದಿರುವ ಕೂದಲಿಗೆ ಮತ್ತೆ ನೈಸರ್ಗಿಕ ಕಪ್ಪುಬಣ್ಣವನ್ನು ನೀಡುತ್ತದೆ. ಕೊಬ್ಬರಿ ಎಣ್ಣೆಯಲ್ಲಿ ಕುದಿಸುವ ಬದಲಿಗೆ ನೆಲ್ಲಿಕಾಯಿಯನ್ನು ಅರೆದು ಅಥವಾ ಎಣ್ಣೆ ತೆಗೆದು ಸಹಾ ಬಳಸಬಹುದು. ಶೀಘ್ರ ಪರಿಣಾಮ ಬೀರಲು ನೆಲ್ಲಿಕಾಯಿಯ ಕಷಾಯವನ್ನು ಉಪಯೋಗಿಸಬಹುದು. ಕಷಾಯ ತಯಾರಿಸಲು ಕೆಲವು ನೆಲ್ಲಿಕಾಯಿಗಳನ್ನು ನೀರಿನಲ್ಲಿ ಕೆಲವು ಗಂಟೆಗಳ ಕಾಲ ನೆನೆಸಿದ ಬಳಿಕ ಒಂದು ಚಮಚ ನೀಲಗಿರಿ ಎಣ್ಣೆಯನ್ನು ಹಾಕಿ ಗಾಳಿಯಾಡದ ಗಾಜಿನ ಜಾಡಿಯಲ್ಲಿ ಒಂದು ರಾತ್ರಿ ನೆನೆಸಿಡಬೇಕು. ಬೆಳಿಗ್ಗೆ ಈ ದ್ರಾವಣವನ್ನು ಒಂದು ಮೊಟ್ಟೆ, ಒಂದು ಲಿಂಬೆಯ ರಸ ಹಾಗೂ ಸ್ವಲ್ಪ ಮೊಸರಿನೊಂದಿಗೆ ಮಿಶ್ರ ಮಾಡಿಕೊಂಡು ಕೂದಲಿಗೆ ಹಚ್ಚಿಕೊಂಡು ಒಂದೆರಡು ಘಂಟೆಗಳ ಬಳಿಕ ಸ್ನಾನ ಮಾಡಬೇಕು. ನೆಲ್ಲಿಕಾಯಿಯ ರಸವನ್ನು ಸೇವಿಸುವುದರಿಂದ ಅಥವಾ ಹಸಿಯಾಗಿ ತಿನ್ನುವುದರಿಂದ ಕೂದಲ ಆರೋಗ್ಯ ಹೆಚ್ಚುವುದು ಹಾಗೂ ದೇಹದ ಇನ್ನೂ ಹಲವು ತೊಂದರೆಗಳಿಗೆ ಪರಿಹಾರ ದೊರಕುತ್ತದೆ

ಈರುಳ್ಳಿ : ಈರುಳ್ಳಿಯು ಕೇವಲ ಖಾದ್ಯಗಳ ರುಚಿ ಹೆಚ್ಚಿಸುವುದು ಮಾತ್ರವಲ್ಲ, ಇದು ಬಿಳಿ ಕೂದಲನ್ನು ಕಪ್ಪು ಮಾಡುವುದು. ಮೊದಲು ಈರುಳ್ಳಿ ಜಜ್ಜಿಕೊಂಡು ಅದರ ರಸ ತೆಗೆಯಿರಿ. ಇದನ್ನು ಕೂದಲಿಗೆ ಹಚ್ಚಿಕೊಳ್ಳಿ. ವಾರದಲ್ಲಿ ಎರಡು ಸಲ ಹೀಗೆ ಮಾಡಿದರೆ ಫಲಿತಾಂಶ ಖಚಿತ. ಕೂದಲು ಉದುರುವ ಸಮಸ್ಯೆ ಗೆ ಕೂಡ ಒಳ್ಳೆಯದು.ಹೊಸ ಕೂದಲು ಹುಟ್ಟಲು ಸಹಾಯವಾಗುತ್ತದೆ.

ಕೊಬ್ಬರಿ ಎಣ್ಣೆ : ಕೊಬ್ಬರಿ ಎಣ್ಣೆ  ಕೂದಲಿನ ಆರೈಕೆಗೆ  ಅತ್ಯುತ್ತಮ ಆಯ್ಕೆಯಾಗಿದೆ. ಕೂದಲ ಬೆಳವಣಿಗೆಯನ್ನು ಹೆಚ್ಚಿಸಲು ಕೊಂಚ ಈರುಳ್ಳಿ ರಸವನ್ನು ಬಿಸಿಮಾಡಿದ ಕೊಬ್ಬರಿ ಎಣ್ಣೆಯೊಂದಿಗೆ ಮಿಶ್ರಣ ಮಾಡಿ ಬಳಿಕ ತಲೆಗೆ ಹಚ್ಚಿಕೊಳ್ಳಿ. ತಲೆಗೂದಲ ಬುಡದಿಂದ ತುದಿಯವರೆಗೆ ಇದು ಆವರಿಸುವಂತೆ ನೋಡಿಕೊಳ್ಳಿ. ಸುಮಾರು ಒಂದು ಗಂಟೆ ಹಾಗೇ ಬಿಟ್ಟು ಬಳಿಕ ಉಗುರುಬೆಚ್ಚನೆಯ ನೀರು ಮತ್ತು  ಶ್ಯಾಂಪೂ ಬಳಸಿ ತೊಳೆದುಕೊಳ್ಳಿ.

ಮದರಂಗಿ ಮತ್ತು ಮೆಂತೆ ಪ್ಯಾಕ್ : ಮದರಂಗಿ ಹುಡಿ ಮತ್ತು ಮೆಂತೆಯ ಪೇಸ್ಟ್ ಇದಕ್ಕೆ ಮಜ್ಜಿಗೆ ಮತ್ತು ಸ್ವಲ್ಪ ತೆಂಗಿನೆಣ್ಣೆ ಹಾಕಿಕೊಂಡು ದಪ್ಪಗಿನ ಪೇಸ್ಟ್ ಮಾಡಿ,ಇದನ್ನು ತಲೆಬುರುಡೆ ಮತ್ತು ಕೂದಲಿಗೆ ಸರಿಯಾಗಿ ಮಸಾಜ್ ಮಾಡಿ. ಸಂಗ್ರಹಿಸಿ ಇಟ್ಟು ಉಪಯೋಗಿಸಬಹುದು.

ನೆಲ್ಲಿಕಾಯಿ ಮತ್ತು ದಾಸವಾಳದ ಹೂವು : ನೆಲ್ಲಿಕಾಯಿ ಮತ್ತು ದಾಸವಾಳದ ಹೂವಿನ ಪೇಸ್ಟ್ ಮಾಡಿಕೊಂಡು ಇದಕ್ಕೆ ಒಂದು ಚಮಚ ಎಳ್ಳೆಣ್ಣೆ ಮತ್ತು ತೆಂಗಿನೆಣ್ಣೆ ಮಿಶ್ರಣ ಮಾಡಿ. ಇದನ್ನು ಕೂದಲಿಗೆ ಮಸಾಜ್ ಮಾಡಿ 20 ನಿಮಿಷ ಕಾಲ ಹಾಗೆ ಬಿಡಿ. ವಾರದಲ್ಲಿ ಮೂರು ಸಲ ಹೀಗೆ ಮಾಡಿದರೆ ನಿಮಗೆ ಒಳ್ಳೆಯ ಫಲಿತಾಂಶ ಕಂಡುಬರುವುದು.

ಆಲೂಗಡ್ಡೆಯ ಮಾಸ್ಕ್: ನಿಮ್ಮ ಬಿಳಿಕೂದಲನ್ನು ಕಪ್ಪಗಾಗಿಸಲು, ಹಸಿ ಆಲೂಗಡ್ಡೆಯನ್ನು ಬೇಯಿಸಿಕೊಳ್ಳಿ ನಂತರ ಆ ನೀರಿನಿಂದ ಕೂದಲನ್ನು ತೊಳೆದುಕೊಳ್ಳಿ. ಒಣಗಿದ ನಂತರ ಕೂದಲಿಗೆ ಮೊಸರಿನ ಮಾಸ್ಕ್ ಅನ್ನು ಹಚ್ಚಿಕೊಳ್ಳಿ ಹತ್ತು ನಿಮಿಷಗಳ ನಂತರ ಕೂದಲನ್ನು ತೊಳೆದುಕೊಳ್ಳಿ. ಮೊಸರು ಕಂಡೀಷನರ್ ತರ ಕೆಲಸ ಮಾಡುತ್ತದೆ.

ಮೆಹಂದಿ ಪುಡಿ, ಆಮ್ಲ ಎಲೆ ಪುಡಿ , ಲವಂಗ ಎಣ್ಣೆ, ನೀಲಗಿರಿ ಎಣ್ಣೆ : ಮೊದಲನೇ ದಿನ ಮೆಹಂದಿ ಹಚ್ಚಿಕೊಳ್ಳಿ. ಮೆಹಂದಿ ಕಲಸುವಾಗ ಒಂದೊಂದು ಹನಿ ಲವಂಗ ಮತ್ತು ನೀಲಗಿರಿ ಎಣ್ಣೆ ಹಾಕಿ. ಮೆಹಂದಿ ಬರೀ ನೀರಿನಲ್ಲಿ ತೊಳೆದುಕೊಳ್ಳಬೇಕು. ಮರುದಿನ ಆಮ್ಲ ಎಲೆ ಪುಡಿ ಉಗುರು ಬೆಚ್ಚಗಿನ ನೀರಿನಲ್ಲಿ ಕಲಸಿ ಹಚ್ಚಿಕೊಳ್ಳಬೇಕು. ಇಂಡಿಗೋ ಪುಡಿ ಕೂದಲನ್ನು ಕಪ್ಪಾಗಿಸುತ್ತದೆ. ಹಚ್ಚಿಕೊಳ್ಳುವ ಮೊದಲು ಕೈಗೆ ಗ್ಲೌಸ್ ಹಾಕಿಕೊಳ್ಳಿ.

ಬಾಳೆ ಎಲೆ: ವಯಸ್ಸಾದಂತೆಲ್ಲ ಕೂದಲುಗಳು ಬೆಳ್ಳಗಾಗುವುದು ಸಹಜ. ಆದರೆ ಸಣ್ಣವಯಸ್ಸಿನಲ್ಲಿಯೇ ಬಿಳಿಕೂದಲು ಸಮಸ್ಯೆ ಕಾಣಿಸಿಕೊಳ್ಳುವುದು ಪೋಷಕಾಂಶಗಳ ಕೊರತೆಯ ಸಂಕೇತ. ಬಾಳೆಎಲೆಯಲ್ಲಿ ಇಂತಹ ಪೋಷಕಾಂಶಗಳು ದಟ್ಟವಾಗಿದ್ದು ಚಿಕ್ಕ ವಯಸ್ಸಿನಲ್ಲಿಯೇ ಬಿಳಿಕೂದಲ ಸಮಸ್ಯೆಯನ್ನು ನಿವಾರಿಸುತ್ತದೆ. ಬಾಳೆ ಎಲೆಯಲ್ಲಿ ಪ್ರತಿದಿನ ಊಟ ಮಾಡುವುದರಿಂದ ಬೆಳ್ಳಗಾಗಿರುವ ಕೂದಲು ಹೊಳಪು ಪಡೆದು ಕಪ್ಪುಬಣ್ಣಕ್ಕೆ ತಿರುಗುತ್ತದೆಯಂತೆ.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಸೂರ್ಯನ ಪುತ್ರ ಶನಿ /ಛಾಯಾ ಪುತ್ರ

ಬೆಲ್ಲದ ಅರೋಗ್ಯ ಗುಣ ತಿಳಿದರೆ ನೀವು ಕೂಡ ದಿನ ಸೇವಿಸುವಿರಿ

ಬೆಲ್ಲದ ಅರೋಗ್ಯ ಗುಣ ತಿಳಿದರೆ ನೀವು ಕೂಡ ದಿನ ಸೇವಿಸುವಿರಿ