in ,

ಟೊಮೇಟೊ/ಗೂರೆ ಹಣ್ಣು

ಟೊಮೇಟೊ/ಗೂರೆ ಹಣ್ಣು

ಸಸ್ಯ ವಿಜ್ಞಾನ ದ ಪ್ರಕಾರ ಇದೊಂದು ರೀತಿಯ ಹಣ್ಣು. ಇದು ಬೆರ್ರಿಯಂತಹ ನಯವಾದ ಹಣ್ಣು. ಈ ಹಣ್ಣು ಅಂಡಾಶಯದಿಂದ ಬೆಳವಣಿಗೆಯಾಗುತ್ತದೆ ಮತ್ತು ಸಸ್ಯದ ಹೂವಿನಿಂದ ಬೀಜಗಳನ್ನು ಹೊಂದಿರುತ್ತದೆ. ಇದು ಮೂಲತಹ ಪಾಶ್ಚಿಮಾತ್ಯ ದೇಶ ಅಮೇರಿಕಾಕ್ಕೆ ಸೇರಿದ್ದು. ಆದರೆ ಇದನ್ನು ಮೆಕ್ಸಿಕನ್ನರು ಸಾಗುವಳಿ ಮಾಡಿದ ಹಣ್ಣಾಗಿ ಬಳಸಲಾರಂಭಿಸಿರು. ಟೊಮೆಟೊಗಳು 95% ನೀರಿನಿಂದ ಕೂಡಿರುತ್ತವೆ. ಬೇಸಿಗೆಯ ದಾಹ ತಣಿಸಲು ಇದಕ್ಕಿಂತಲೂ ಉತ್ತಮ, ಆರೋಗ್ಯಪೂರ್ಣ, ಚೈತನ್ಯದಾಯಕವಾದ ಹಣ್ಣು ಬಿಟ್ಟರೆ ಇನ್ನೊಂದಿಲ್ಲ. ಇದಕ್ಕೆ ಕೆಲವು ತುಂಡು ಸೌತೆಕಾಯಿ ಸೇರಿಸಿ ಜ್ಯೂಸ್ ಮಾಡಿಕೊಂಡು ಕುಡಿದರೆ ಈ ಅತ್ಯುತ್ತಮ ಬೇಸಿಗೆ ಪಾನೀಯ ನಿಮ್ಮ ಆರೋಗ್ಯವನ್ನು ಹೆಚ್ಚಿಸುವುದಷ್ಟೇ ಅಲ್ಲದೆ ಸಂತುಷ್ಟಗೊಳಿಸುವುದರಲ್ಲಿ ಸಂದೇಹವೇ ಇಲ್ಲ.

ಸೊಲ್ಯಾನಮ್ ಲೈಕೋಪರ್ಸಿಕಮ್) ಸೋಲನೇಸಿ ಕುಟುಂಬಕ್ಕೆ ಸೇರಿದ ಒಂದು ಗಿಡ. ಮೂಲ – ಮಧ್ಯ ಅಮೇರಿಕ ಹಾಗೂ ದಕ್ಷಿಣ ಅಮೇರಿಕ. ಇದು ಅಲ್ಪಾಯುಶಿ ಗಿಡ – ವರ್ಷಕ್ಕೊಮ್ಮೆ ಬೆಳೆಯಲಾಗುತ್ತದೆ. ೧ – ೩ ಮೀ ಎತ್ತರ ಬೆಳೆಯುವ ಈ ಗಿಡ ತೆಳು ಕಾಂಡವನ್ನು ಹೊಂದಿದ್ದು ಉಳಿದ ಗಿಡಗಳ ಮೇಲೆ ಸುಲಭವಾಗಿ ಹರಡಿಕೊಳ್ಳುತ್ತದೆ. ಇದರ ಎಲೆಗಳು ೧೦-೨೫ ಸೆ ಮೀ ಉದ್ದವಿದ್ದು, ಎಲೆಗಳ ಮಧ್ಯೆ ತೆಳು ಪದರಗಳಿದ್ದು, ೮ -೯ಸೆ ಮೀ ನಷ್ಟು ಅಗಲವುಳ್ಳ ೫ – ೯ ಎಲೆಗಳ ಗುಂಪಿನಂತೆ ಕಾಣಸಿಗುತ್ತವೆ.

ಟೊಮೆಟೋ ಹಣ್ಣಿನಲ್ಲಿ ನೈಸರ್ಗಿಕ ವಿಟಮಿನ್ಗಳು ಮತ್ತು ಖನಿಜಗಳಾದ ಎ, ಸಿ, ಕೆ, ಬಿ 1, ಬಿ 3, ಬಿ 5, ಬಿ 6 ಮತ್ತು ಬಿ 7 ಇರುತ್ತದೆ. ಇದು ಫೋಲೇಟ್, ಕಬ್ಬಿಣ, ಪೊಟ್ಯಾಸಿಯಮ್, ಮೆಗ್ನೀಸಿಯಮ್, ಕ್ರೋಮಿಯಂ, ಕೋಲೀನ್, ಸತು ಮತ್ತು ರಂಜಕವನ್ನು ಸಹ ಒಳಗೊಂಡಿದೆ. ಟೊಮೆಟೊಗಳನ್ನು ಅತ್ಯಂತ ಶಕ್ತಿಶಾಲಿ ಹಣ್ಣು ಎಂದು ಪರಿಗಣಿಸಲಾಗುತ್ತದೆ. ಇವುಗಳನ್ನು ಬೇಯಿಸಿ ಅಥವಾ ಹಾಗೆಯೇ ಹಸಿಯಾಗಿ ಸೇವಿಸಬಹುದು. ಈ ಜೀವಸತ್ವಗಳು ಮತ್ತು ಖನಿಜಗಳು ನಮ್ಮ ಆರೋಗ್ಯಕ್ಕೆ ಬಹಳ ಒಳ್ಳೆಯದು. ಟೊಮೆಟೋ ಹಣ್ಣಿನಲ್ಲಿ ಫೈಟೊಕೆಮಿಕಲ್ಸ್ ಅಧಿಕವಾಗಿದೆ. ಇನ್ನೊಂದು ಮುಖ್ಯವಾದ ವಿಷಯವೆಂದರೆ ಸಿಪ್ಪೆ ಸುಲಿದ ಟೊಮೆಟೋ ಹಣ್ಣನ್ನು ತಿನ್ನುವುದು ತುಂಬಾ ಒಳ್ಳೆಯದು.

ಮುಖದ ಅಂದ ಹೆಚ್ಚಿಸಲು ಟೊಮೊಟೋ ಹೇಗೆ ಸಹಾಯ ಮಾಡುತ್ತದೆ ಗೊತ್ತಾ?

ಟೊಮೇಟೊ/ಗೂರೆ ಹಣ್ಣು

ಟೊಮ್ಯಾಟೋ ಯಾವುದೇ ಅಡುಗೆಮನೆಯಲ್ಲಿ ಇರಬೇಕಾದ ಅಗತ್ಯ ತರಕಾರಿ. ಇದನ್ನು ಹಲವಾರು ಅಡುಗೆಗಳಲ್ಲಿ ಬಳಕೆ ಮಾಡಲಾಗುತ್ತದೆ. ಅಡುಗೆಯಲ್ಲಿ ಬಳಸುವ ಈ ತರಕಾರಿ ನಿಮ್ಮ ತ್ವಚೆಯ ಅಂದವನ್ನು ಕಾಪಾಡುವಲ್ಲಿ ಸಹಾಯ ಮಾಡುತ್ತದೆ ಎಂಬುದು ನಿಮಗೆ ಗೊತ್ತಾ? ತ್ವಚೆಗೆ ಟೊಮೊಟೋ ಉಪಯೋಗಿಸುವುದು ಸರಿನಾ? ಎಂಬ ಪ್ರಶ್ನೆಗಳು ನಿಮ್ಮಲ್ಲಿ ಮೂಡುತ್ತವೆ. ಆದರೆ ಅವು ನಿಜವಾಗಿಯೂ ಎಷ್ಟು ಪ್ರಯೋಜನಕಾರಿ ಎಂಬುದು ತಿಳಿದರೆ ಆಶ್ಚರ್ಯವಾಗುತ್ತದೆ.
ಟೊಮ್ಯಾಟೋಸ್ ವಿಟಮಿನ್ ಎ, ಸಿ, ಮತ್ತು ಕೆ ಅನ್ನು ಹೊಂದಿರುತ್ತದೆ ಮತ್ತು ಆಮ್ಲೀಯ ಗುಣಗಳನ್ನು ಹೊಂದಿದ್ದು ಅದು ನಿಮ್ಮ ಚರ್ಮಕ್ಕೆ ಸರಿಯಾದ ಪಿಹೆಚ್ ಮಟ್ಟವನ್ನು ಕಾಯ್ದುಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಆಳವಾದ ಶುದ್ಧೀಕರಣ ಗುಣಗಳನ್ನು ಹೊಂದಿರುತ್ತದೆ.
ನೀವು ವಾಸಿಸುವ ಸ್ಥಳದಲ್ಲಿ ಬಿಸಿಲು ಹೆಚ್ಚಿದ್ದರೆ, ನೀವು ಮನೆಯಿಂದ ಹೊರಬಂದಾಗಲೆಲ್ಲಾ ನೀವು ಸನ್ಸ್ಕ್ರೀನ್ ಹಚ್ಚುವುದು ಕಡ್ಡಾಯ. ಚರ್ಮದ ಮೇಲೆ ಬಿಸಿಲು ಹೆಚ್ಚು ಬಿದ್ದಾಗ ಹಲವಾರು ತೊಂದರೆಗಳಿಗೆ ಕಾರಣವಾಗುತ್ತದೆ. ಟೊಮ್ಯಾಟೋ ಲೈಕೋಪೀನ್ ಎಂಬ ಅಂಶವನ್ನು ಹೊಂದಿದ್ದು ಅದು ಯುವಿ ಕಿರಣಗಳ ಹಾನಿಕಾರಕ ಪರಿಣಾಮಗಳಿಂದ ನಿಮ್ಮನ್ನು ರಕ್ಷಿಸುತ್ತದೆ. ನಿಮ್ಮ ಸಾಮಾನ್ಯ ಸನ್ಸ್ಕ್ರೀನ್ನೊಂದಿಗೆ ನೀವು ಟೊಮೆಟೊಗಳನ್ನು ಬದಲಿಸಲು ಸಾಧ್ಯವಿಲ್ಲ ಆದರೆ ಮುಖಕ್ಕೆ ಟೊಮೊಟೋ ಹಚ್ಚುವುದು ಇನ್ನು ಹೆಚ್ಚಿನ ಪ್ರಯೋಜನ ನೀಡುತ್ತದೆ.


ಟಮೋಟ ಬಳಸಿ ಕಪ್ಪು ಕಲೆ ಹೇಗೆ ತೆಗೆಯಬೇಕು ತಿಳಿಯೋಣ ಬನ್ನಿ :
ಒಂದು ಮಧ್ಯಮ ಗಾತ್ರದ ಟೊಮ್ಯಾತೋವನ್ನು ತೆಗೆದುಕೊಂಡು ಅದರ ರಸವನ್ನು ಹಿಂಡಿಕೊಳ್ಳಿ. ನಂತರ ಆ ರಸಕ್ಕೆ ಒಂದು ಚಮಚೆ ನಿಂಬೆಹಣ್ಣಿನ ರಸವನ್ನು ಬೆರೆಸಿ ಚೆನ್ನಾಗಿ ಕಲಸಿ. ಅದನ್ನು ಮುಖಕ್ಕೆ ಹಚ್ಚಿಕೊಂಡು ಇಪ್ಪತ್ತು ನಿಮಿಷಗಳ ನಂತರ ಬೆಚ್ಚಗಿನ ನೀರಿನಲ್ಲಿ ಮುಖ ತೊಳೆದುಕೊಳ್ಳಿರಿ.

ಟೊಮೆಟೊ ಸೇವನೆಯಿಂದ ಅನುಕೂಲಗಳು :

ಟೊಮೇಟೊ/ಗೂರೆ ಹಣ್ಣು

1.ಕ್ಯಾನ್ಸರ್ ತಡೆಗಟ್ಟುವಲ್ಲಿ ಸಹಕರಿಸುತ್ತದೆ.
2.ಜೀರ್ಣಕ್ರಿಯೆಗೆ ಸಹಕರಿಸುತ್ತದೆ.
3.ಟೊಮಾಟೋ ಜ್ಯೂಸ್ ಸೇವನೆಯಿಂದ ಕೊಲೆಸ್ಟ್ರಾಲ್ ಮಟ್ಟ ತಗ್ಗುತ್ತದೆ.
4.ಹೃದಯದ ತೊಂದರೆಗಳಿಂದ ರಕ್ಷಣೆ ಒದಗಿಸುತ್ತದೆ.
5.ಟೊಮಾಟೋ ರಕ್ತ ಹೆಪ್ಪುಗಟ್ಟುವಿಕೆಯನ್ನು ತಡೆಯಬಹುದು.
6.ಇದು ಮೂಳೆಗಳಿಗೂ ಒಳ್ಳೆಯದು.
7.ಇದು ತ್ವಚೆಗೂ ಒಳ್ಳೆಯದು.
8.ಟೊಮಾಟೋದಲ್ಲಿರುವ ಜೀರ್ಣರಸಗಳು ಕಲ್ಮಶಗಳನ್ನು ನಿವಾರಿಸುತ್ತವೆ.
9.ಕಣ್ಣಿನ ದೃಷ್ಟಿ ಉತ್ತಮಗೊಳ್ಳುತ್ತದೆ.
10.ಟೊಮೆಟೊದಲ್ಲಿರುವ ಲೈಕೋಪೀನ್ ಹೃದಯಸ್ತಂಭನವನ್ನು ತಪ್ಪಿಸಬಲ್ಲುದು.
11.ವ್ಯಾಯಾಮದ ಆಯಾಸವನ್ನು ಕ್ಷಿಪ್ರವಾಗಿ ನಿವಾರಿಸುತ್ತದೆ.

ಟೊಮೆಟೊ ಸೇವನೆಯಿಂದ ಅನಾನುಕೂಲಗಳು :
ಪ್ರತಿದಿನ ಹೆಚ್ಚಿನ ಪ್ರಮಾಣದಲ್ಲಿ ಟೊಮೆಟೊ ತಿನ್ನುವುದರಿಂದ ಮೂತ್ರಪಿಂಡದಲ್ಲಿ ಕಲ್ಲು ಉಂಟಾಗಬಹುದು. ವಾಸ್ತವವಾಗಿ, ಟೊಮೆಟೊದಲ್ಲಿ ಕ್ಯಾಲ್ಸಿಯಂ ಮತ್ತು ಆಕ್ಸಲೇಟ್ ಸಮೃದ್ಧವಾಗಿದೆ, ಇದು ದೇಹದಲ್ಲಿ ದೊಡ್ಡ ಪ್ರಮಾಣದಲ್ಲಿರುತ್ತದೆ. ಅವುಗಳನ್ನು ಸುಲಭವಾಗಿ ಚಯಾಪಚಯಗೊಳಿಸಲಾಗುವುದಿಲ್ಲ ಅಥವಾ ದೇಹದಿಂದ ಹೊರತೆಗೆಯಲಾಗುವುದಿಲ್ಲ. ಈ ಅಂಶಗಳು ದೇಹದಲ್ಲಿ ಸಂಗ್ರಹಗೊಳ್ಳಲು ಪ್ರಾರಂಭಿಸುತ್ತವೆ, ಈ ಕಾರಣದಿಂದಾಗಿ ಕಿಡ್ನಿಯಲ್ಲಿ ಸ್ಟೋನ್ ರೂಪುಗೊಳ್ಳಲು ಪ್ರಾರಂಭಿಸುತ್ತದೆ.
ಟೊಮೆಟೊದಲ್ಲಿ ಸಾಲ್ಮೊನೆಲ್ಲಾ ಎಂಬ ಬ್ಯಾಕ್ಟೀರಿಯಾ ಇರುತ್ತದೆ. ಇದು ದೇಹಕ್ಕೆ ಪ್ರವೇಶಿಸಿದಾಗ, ಇದು ಅತಿಸಾರಕ್ಕೂ ಕಾರಣವಾಗಬಹುದು.

ಕೀಲು ನೋವು :
ಪ್ರತಿದಿನ 75 ಮಿಗ್ರಾಂ ಟೊಮೆಟೊ ಸೇವಿಸುವುದನ್ನು ಹಾನಿಕಾರಕವೆಂದು ಪರಿಗಣಿಸಲಾಗುತ್ತದೆ. ಟೊಮ್ಯಾಟೊವನ್ನು ಹೆಚ್ಚು ಸೇವಿಸುವುದರಿಂದ ಕೀಲುಗಳ ಊತ ಮತ್ತು ನೋವು ಉಂಟಾಗುತ್ತದೆ. ಅದರಲ್ಲಿ ಸೋಲೆನಿನ್ ಎಂಬ ಕ್ಷಾರ ಕಂಡುಬರುತ್ತದೆ. ಈ ಸಂಯುಕ್ತವು ಅಂಗಾಂಶಗಳಲ್ಲಿ ಕ್ಯಾಲ್ಸಿಯಂ ಅನ್ನು ಉತ್ಪಾದಿಸುತ್ತದೆ. ಇದು ಕೀಲು ನೋವು ಮತ್ತು ಊತಕ್ಕೆ ಕಾರಣವಾಗುತ್ತದೆ.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಬಾದಾಮಿಯ ಸೇವನೆಯಿಂದ ಪಡೆಯಬಹುದಾದ ಆರೋಗ್ಯಕರ ಪ್ರಯೋಜನಗಳು

ಬಾದಾಮಿಯ ಸೇವನೆಯಿಂದ ಪಡೆಯಬಹುದಾದ ಆರೋಗ್ಯಕರ ಪ್ರಯೋಜನಗಳು

ಅಳಿದು ಹೋಗಿರುವ ಕೆಲವೊಂದು ಹಳ್ಳಿ ಆಟಗಳು

ಅಳಿದು ಹೋಗಿರುವ ಕೆಲವೊಂದು ಹಳ್ಳಿ ಆಟಗಳು