in ,

ಅಣಬೆ (ಮಶ್ರೂಮ್) ಮಾಂಸಾಹಾರ ಅಥವಾ ಸಸ್ಯಾಹಾರ ಯಾವುದಕ್ಕೆ ಸೇರಿರುವುದು?

ಅಣಬೆ (ಮಶ್ರೂಮ್) ಮಾಂಸಾಹಾರ ಅಥವಾ ಸಸ್ಯಾಹಾರ ಯಾವುದಕ್ಕೆ ಸೇರಿರುವುದು?

ಅಣಬೆಯ ಪದಾರ್ಥಗಳು ಬಹಳ ರುಚಿಕರವಾಗಿದ್ದು ಮೊಟ್ಟೆ ಮಾಂಸಗಳ ರುಚಿಯನ್ನು ಮೀರಿಸಬಲ್ಲವು. ಹಾಗಾಗಿ ರೋಮನ್ ದೇಶದ ಜನರು ಅಣಬೆಗಳನ್ನು ದೇವರ ಆಹಾರವೆಂದು ವರ್ಣಿಸಿದ್ದಾರೆ. ಹೀಗೆ ಅಣಬೆಯಿಂದ ತಯಾರಿಸುವ ಪದಾರ್ಥ ರುಚಿಕರ. ಅಣಬೆಯ ಸೂಪ್ ಹಾಗೂ ಅಣಬೆಯೊಂದಿಗೆ ಹೆಸರುಕಾಳು ಹಾಕಿ ಮಾಡುವ ಪದಾರ್ಥವಂತೂ ಈಗಲೂ ಬಾಯಲ್ಲಿ ನೀರೂರಿಸುವಂತದ್ದು. ಬಾಯಿಗೆ ರುಚಿಕರ ಮಾತ್ರವಲ್ಲದೇ ಹೆಚ್ಚು ಪೌಷ್ಟಿಕಾಂಶ ಕೂಡ.

ಕೆಸುವಿನಂತೆ ಪ್ರಕೃತಿ ನೀಡಿರುವ ಕೊಡುಗೆಗಳಲ್ಲಿ ಅಣಬೆಗಳು ಕೂಡ ಒಂದು. ಮಳೆಹನಿ ಭುವಿಗೆ ಬಿದ್ದಾಗ ಕೆಸು ಹೇಗೆ ಮೇಲೆಳುತ್ತದೊ ಅದೇ ರೀತಿ ಅಣಬೆಗಳು ಸಿಡಿಲು ಮಳೆಯ ಆರ್ಭಟದ ನಡುವೆ ಭೂಮಿಯಿಂದ ಹೊರಗೆ ಬಂದು ಪಾಕ ಪ್ರವೀಣೆಯರ ಕೈಯಲ್ಲಿ ವಿವಿಧ ಹೆಸರಿನ ಖಾದ್ಯವಾಗುವ ವಸ್ತು.

ಅಣಬೆ (ಅಥವಾ ನಾಯಿಕೊಡೆ) ಸಾಮಾನ್ಯವಾಗಿ ನೆಲದ ಮೇಲುಗಡೆ ಮಣ್ಣಿನ ಮೇಲೆ ಅಥವಾ ಅದರ ಆಹಾರ ಮೂಲದ ಮೇಲೆ ಫಲಬಿಡುವ ಶಿಲೀಂಧ್ರದ ತಿರುಳಿನಿಂದ ಕೂಡಿದ, ಬೀಜಕಗಳನ್ನು ಹೊರುವ ಹಣ್ಣಿನಂಥ ಕಾಯ. ಅಣಬೆ ಪದವನ್ನು ಬಹುತೇಕ ಹಲವುವೇಳೆ ಕಾಂಡ (ತೊಟ್ಟು), ಶಿರಹೊದಿಕೆ (ಪೈಲಿಯಸ್), ಮತ್ತು ಶಿರಹೊದಿಕೆಯ ಕೆಳಭಾಗದ ಮೇಲೆ ಕಿವಿರುಗಳನ್ನು (ಪಟಲ) ಹೊಂದಿರುವ ಶಿಲೀಂಧ್ರಗಳಿಗೆ (ಬಸಿಡೀಯೊಮೈಕೋಟಾ, ಅಗ್ಯಾರಿಕೊಮೈಸೀಟೀಸ್) ಅನ್ವಯಿಸಲಾಗುತ್ತದೆ. ಈ ಕಿವಿರುಗಳು ನೆಲ ಅಥವಾ ಅದರ ನಿವಾಸಿ ಮೇಲ್ಮೈ ಮೇಲೆ ಹರಡಲು ಶಿಲೀಂಧ್ರಕ್ಕೆ ಸಹಾಯ ಮಾಡುವ ಸೂಕ್ಷ್ಮ ಬೀಜಕಗಳನ್ನು ಉತ್ಪಾದಿಸುತ್ತವೆ. ಅಗ್ಯಾರಿಕೇಲಿಸ್ ವಿಭಾಗದಲ್ಲಿ ಬರುವ ಬೆಸಿಡಿಯೋ ಬೀಜಾಣು ವರ್ಗಕ್ಕೆ ಸೇರಿವೆ.ಇದರಲ್ಲಿ ಸುಮಾರು ೧೨೫ ಜಾತಿಗಳೂ ೪೦೦೦ ಪ್ರಭೇಧಗಳೂ ಇದ್ದು ಎಲ್ಲೆಡೆಯೂ ಪಸರಿಸಿವೆ. ಇವು ಹೆಚ್ಚು ತೇವಾಂಶ ಮತ್ತು ಆದ್ರತೆಯಿರುವ ವಾತಾವರಣದಲ್ಲಿ ಹುಲುಸಾಗಿ ಬೆಳೆಯುತ್ತವೆ. ಅಣಬೆಗಳು ಸಸ್ಯಗಳಂತೆ ಸಾವಯವಯುತ ಮಣ್ಣು ಮತ್ತು ಸತ್ತೆಗಳ ಮೇಲೆ ಬೆಳೆಯುತ್ತವೆ. ಅವುಗಳಿಗೆ ಸಸ್ಯಗಳಂತೆ ಹರಿತ್ತಿರುವುದಿಲ್ಲ. ಅಣಬೆಗಳ ರಚನಾಂಗಗಳು ಬಹಳ ಸರಳವಾಗಿದ್ದು ಸಸ್ಯಗಳಿಗಿಂತ ಭಿನ್ನವಾಗಿರುತ್ತವೆ.

ಪ್ರಶ್ನೆ ಅಣಬೆ ಸಸ್ಯಹಾರವೋ ಅಥವಾ ಮಾಂಸಹಾರವೋ?

ಅಣಬೆ (ಮಶ್ರೂಮ್) ಮಾಂಸಾಹಾರ ಅಥವಾ ಸಸ್ಯಾಹಾರ ಯಾವುದಕ್ಕೆ ಸೇರಿರುವುದು?


ಸಸ್ಯಾಹಾರಿ ಎಂದರೆ ಸಸ್ಯ ಆಧಾರಿತ ಆಹಾರವನ್ನು ಸೇವಿಸುವವನು. ಮಶ್ರೂಮ್ ಸಸ್ಯದ ವ್ಯಾಖ್ಯಾನಗಳಿಗೆ ಹೊಂದಿಕೆಯಾಗುವುದಿಲ್ಲ. ಇದು ತನ್ನದೇ ಆದ ಆಹಾರವನ್ನು ಮಾಡುವುದಿಲ್ಲ, ಕಟ್ಟುನಿಟ್ಟಾದ ಅರ್ಥದಲ್ಲಿ ಎಲೆಗಳು ಅಥವಾ ಬೇರುಗಳನ್ನು ಹೊಂದಿರುವುದಿಲ್ಲ. ಮತ್ತು ಎಲ್ಲಕ್ಕಿಂತ ಕೆಟ್ಟದಾಗಿ, ಇದು ಸತ್ತ ಸಸ್ಯ ಅಥವಾ ಪ್ರಾಣಿಗಳ ಮೇಲೆ ಆಹಾರವನ್ನು ನೀಡುತ್ತದೆ.

ಮಾಂಸಾಹಾರಿ ಎಂದರೆ ಸಸ್ಯಾಧಾರಿತ ಆಹಾರದ ಜೊತೆಗೆ ಮಾಂಸವನ್ನು ತಿನ್ನಲು ಮನಸ್ಸಿಲ್ಲದವನು. ಮಶ್ರೂಮ್ ಮಾಂಸವಲ್ಲ ಏಕೆಂದರೆ ಅದು ಪ್ರಾಣಿಯಲ್ಲ.

ಆದರೆ ಮಶ್ರೂಮ್ ಆಹಾರವಾಗಿದೆ ಮತ್ತು ರುಚಿ ತುಂಬಾ ಒಳ್ಳೆಯದು. ತಾಜಾ ತರಕಾರಿಯಲ್ಲಿರುವ ಪೌಷ್ಟಿಕಾಂಶಗಳು ಅಣಬೆಯಲ್ಲಿ ಇವೆ. ಕೆಲವು ಜಾತಿಯ ಅಣಬೆಗಳಲ್ಲಿ ಫೋಲಿಕ್ ಆಮ್ಲ ಹೆಚ್ಚಾಗಿರುವುದೆಂದು ತಿಳಿದುಬಂದಿದೆ. ಈ ಆಮ್ಲವನ್ನು ರಕ್ತ ಕ್ಷಯದಿಂದ ನರಳುವ ರೋಗಿಗಳಿಗೆ ಕೊಡುತ್ತಾರೆ. ೧೦೦-೨೦೦ಗ್ರಾಂ ಒಣಗಿದ ಅಣಬೆಗಳಲ್ಲಿ ಒಬ್ಬ ಆರೋಗ್ಯವಂತನಿಗೆ ಬೇಕಾಗುವಷ್ಟು ಪೌಷ್ಟಿಕಾಂಶವಿರುವುದೆಂದು (ಸುಮಾರು ೭೨%-೮೨% ಸಾರಜನಕ ಪ್ರೋಟೀನ್ ರೂಪದಲ್ಲಿದೆ) ಪ್ರಯೋಗಗಳಿಂದ ತಿಳಿದು ಬಂದಿದೆ.

ಅಣಬೆಗಳಲ್ಲಿ ಇರುವ ವಿಧಗಳು ಎರಡು.

ಅಣಬೆ (ಮಶ್ರೂಮ್) ಮಾಂಸಾಹಾರ ಅಥವಾ ಸಸ್ಯಾಹಾರ ಯಾವುದಕ್ಕೆ ಸೇರಿರುವುದು?

ಅಣಬೆಗಳಲ್ಲಿ ಖಾದ್ಯ ಅಣಬೆಗಳು ಮತ್ತು ವಿಷ ಅಣಬೆಗಳು ಎಂಬ ಎರಡು ವಿಧಗಳಿವೆ. ವಿಷ ಅಣಬೆಗಳು ತಿನ್ನಲು ಯೋಗ್ಯವಿರುವುದಿಲ್ಲ. ಅನೇಕ ಜಾತಿಯ ವಿಷ ಅಣಬೆಗಳು ಜೀವಕ್ಕೆ ಮಾರಕವಾಗಿವೆ. ಆದರೆ, ಖಾದ್ಯ ಅಣಬೆಗಳು ಪುಷ್ಟಿಕರ ಆಹಾರಾಂಶವನ್ನು ಹೊಂದಿದ್ದು, ರುಚಿಕರ ಮತ್ತು ಆರೋಗ್ಯಕರ ಭೋಜನಕ್ಕೆ ಅಮೂಲ್ಯ ತರಕಾರಿಗಳಾಗಿವೆ. ಮಳೆಗಾಲದ ದಿನಗಳಲ್ಲಿ ಕಾಡುಮೇಡುಗಳು ಮತ್ತು ಹೊಲಗದ್ದೆಗಳ ಬದುಗಳಲ್ಲಿ ಬೆಳೆಯುವ ಖಾದ್ಯ ಅಣಬೆಗಳನ್ನು ಪತ್ತೆ ಹಚ್ಚಿ ತಂದು ತರಕಾರಿಗಳಂತೆ ಉಪಯೋಗಿಸುವುದನ್ನು ಈಗಲೂ ಸಹ ನಮ್ಮ ರೈತ ಮಹಿಳೆಯರಲ್ಲಿ ವಾಡಿಕೆಯಲ್ಲಿದೆ. ಪ್ರತಿವರ್ಷ ಅಣಬೆಗಳು ಮೂಡುತ್ತಿದ್ದ ಜಾಗಕ್ಕೆ ಹೋಗಿ ಅಣಬೆಗಳನ್ನು ಹುಡುಕುವುದು ಇಂದಿಗೂ ರೂಡಿಯಲ್ಲಿದೆ.

ವಿವಿಧ ಗಾತ್ರ, ಬಣ್ಣ, ಆಕಾರಗಳಲ್ಲಿ ಕಾಣಸಿಗುವ ಅಣಬೆಯಲ್ಲಿ ಆಹಾರಕ್ಕಾಗಿ, ಔಷಧಿಗಾಗಿ ಬಳಸಬಹುದಾದ್ದು ಮತ್ತು ವಿಷಕಾರಿ ಹೀಗೆ ಮೂರು ವಿಧಗಳಿವೆ. ಅಣಬೆಯ ವೈಜ್ಞಾನಿಕ ಹೆಸರು ಅಗಾರಿಕಸ್. ಸುಮಾರು 14,000 ಕ್ಕಿಂತಲೂ ಅಧಿಕ ಸಂಖ್ಯೆಯಲ್ಲಿರುವ ಅಣಬೆಯ ಪ್ರಭೇದಗಳಲ್ಲಿ ಸುಮಾರು 5000 ಅಣಬೆ ಪ್ರಬೇಧಗಳನ್ನು ಆಹಾರಕ್ಕಾಗಿ ಬಳಸಬಹುದು. ಆದರೂ 31ವಿಭಾಗಗಳಲ್ಲಿ ಹರಿದು ಹಂಚಿಹೋಗಿರುವ ಅವುಗಳಲ್ಲಿ 2000 ಪ್ರಭೇದಗಳು ಮಾತ್ರ ತಿನ್ನಲು ಯೋಗ್ಯವಾಗಿವೆ.
ತಿನ್ನಲು ಯೋಗ್ಯವಾಗಿರುವ ಅಣಬೆ ಪ್ರಭೇದಗಳಲ್ಲಿ 100 ಪ್ರಬೇಧಗಳನ್ನು ಪ್ರಾಯೋಗಿಕವಾಗಿ, 50 ಪ್ರಭೇದಗಳನ್ನು ಖರ್ಚು ವೆಚ್ಚವಿಲ್ಲದೆ, 30 ಪ್ರಭೇದಗಳನ್ನು ವಾಣಿಜ್ಯೋದ್ಯಮ ಉದ್ದೇಶದಿಂದ ಮತ್ತು ಕೇವಲ 6 ಪ್ರಭೇದಗಳನ್ನು ಮಾತ್ರ ಹಲವಾರು ದೇಶಗಳಲ್ಲಿ ಆಹಾರ ಉತ್ಪಾದನಾ ಕೈಗಾರಿಕೆಗಳಿಗಾಗಿ ಬೆಳೆಯಲಾಗುತ್ತದೆ. ಬಟನ್, ಓಯಿಸ್ಟರ್, ಮಿಲ್ಕಿ, ಸೀಟೆಕ್, ಪ್ಯಾಡಿ ಸ್ಟ್ರೇವ್, ಜ್ವೆಸ್ ಇಯರ್, ಸಿಲ್ವರ್ ಇಯರ್, ಮೈಟೆಕ್, ಟರ್ಕಿ ಟೈಲ್, ರೀಶಿ ಇವು ವಾಣಿಜ್ಯ ಉದ್ದೇಶಕ್ಕಾಗಿ ಬೆಳೆಯುವ ಪ್ರಮುಖ ಅಣಬೆ ಪ್ರಭೇದಗಳು.

ಅಣಬೆ ಸೇವನೆಯಿಂದ ದೇಹಕ್ಕೆ ಕಬ್ಬಿಣ ಅಂಶ ದೊರೆತು ಹಿಮೋಗ್ಲೋಬಿನ್, ಕೆಂಪು ರಕ್ತ ಕಣಗಳು ಹೆಚ್ಚಾಗುತ್ತದೆ. ಅಣಬೆಯು ದೇಹದ ಎಲ್ಲಾ ಭಾಗಗಳಿಗೆ ಆಮ್ಲಜನಕ ದೊರೆಯುವಂತೆ ಮಾಡುತ್ತದೆ. ಅಲ್ಲದೇ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ. ಅಣಬೆಯಲ್ಲಿ ವಿಟಮಿನ್ ಬಿ ಇರುವುದರಿಂದ ದೇಹಕ್ಕೆ ಶಕ್ತಿ ಕೊಡುತ್ತದೆ. ಅಲ್ಲದೇ ದೇಹದ ಅಂಗಾಂಗಗಳು ಆಕ್ಟೀವ್ ಆಗಿ ಕೆಲಸ ಮಾಡುವಂತೆ ಮಾಡುತ್ತದೆ. ಬಿಳಿ ಅಣಬೆಗಳು ಕ್ಯಾಲ್ಶಿಯಂ ಹೊಂದಿರುವುದರಿಂದ ಮೂಳೆಗಳ ಆರೋಗ್ಯವನ್ನು ಹೆಚ್ಚಿಸುತ್ತದೆ. ನಿಯಮಿತವಾಗಿ ಅಣಬೆಯನ್ನು ಸೇವಿಸುತ್ತಾ ಬಂದರೆ ಮೂಳೆಗೆ ಸಂಬಂಧಿಸಿದ ಸಮಸ್ಯೆ ದೂರವಾಗುತ್ತದೆ. ಬಿಳಿ ಅಣಬೆಗಳು ರಕ್ತದಲ್ಲಿ ಸಕ್ಕರೆಯ ಪ್ರಮಾಣವನ್ನು ನಿಯಂತ್ರಣದಲ್ಲಿಟ್ಟು ಮಧುಮೇಹವನ್ನು ನಿಯಂತ್ರಿಸುತ್ತದೆ.


ಅಣಬೆಯಲ್ಲಿರುವ ಎರಿಥ್ರೋಡೆನಿನ್ ಮತ್ತು ಬೀಟಾ-ಗ್ಲುಕಾನ್​ಗಳು ಹೈಪೋಲಿಪಿಡೆಮಿಕ್ ಗುಣಗಳನ್ನು ಹೊಂದಿದ್ದು, ಇದು ಬೊಜ್ಜು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹಾಗೆಯೇ ಬೀಟಾ-ಗ್ಲುಕನ್‌ಗಳು ಹೊಟ್ಟೆ ತುಂಬಿದಂತೆ ಮಾಡುತ್ತದೆ ಮತ್ತು ನೀವು ಕಡಿಮೆ ತಿನ್ನುವಂತೆ ಮಾಡುತ್ತದೆ. ಆ ಮೂಲಕ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಲು ಇದು ಸಹಾಯ ಮಾಡುತ್ತದೆ.

ಒಟ್ಟಿನಲ್ಲಿ ರುಚಿಯಾಗಿದೆ, ರುಚಿಯಾದ ಖಾದ್ಯಗಳನ್ನು ತಯಾರಿಸಬಹುದು. ಆರೋಗ್ಯಕ್ಕೂ ಒಳ್ಳೆಯದು.ಇನ್ನೇನು ಬೇಕು?

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಲಕ್ಷಿ ದೇವಿ ಜನಿಸಿದ್ದು ಹೇಗೆ? ಸಮುದ್ರ ಮಂಥನದಲ್ಲಿ ಲಕ್ಷ್ಮೀದೇವಿಯ ಜನನ ಹೇಗಾಯಿತು?

ಲಕ್ಷಿ ದೇವಿ ಜನಿಸಿದ್ದು ಹೇಗೆ? ಸಮುದ್ರ ಮಂಥನದಲ್ಲಿ ಲಕ್ಷ್ಮೀದೇವಿಯ ಜನನ ಹೇಗಾಯಿತು?

ಬಾದಾಮಿಯ ಸೇವನೆಯಿಂದ ಪಡೆಯಬಹುದಾದ ಆರೋಗ್ಯಕರ ಪ್ರಯೋಜನಗಳು

ಬಾದಾಮಿಯ ಸೇವನೆಯಿಂದ ಪಡೆಯಬಹುದಾದ ಆರೋಗ್ಯಕರ ಪ್ರಯೋಜನಗಳು