ಕಡಲೇಕಾಯಿ ಎಂದೂ ಕರೆಯಲ್ಪಡುವ ನೆಲಗಡಲೆ ಸಾಮಾನ್ಯವಾಗಿ ಅಗ್ಗವಾಗಿ ಲಭ್ಯವಿದೆ ಮತ್ತು ಆದ್ದರಿಂದ ಅವುಗಳನ್ನು ಹೆಚ್ಚು ವೆಚ್ಚವಾಗದ ಯಾವುದನ್ನೂ ಸೂಚಿಸಲು ಬಳಸಲಾಗುತ್ತದೆ. ಆದರೆ ಆರೋಗ್ಯ ಪ್ರಯೋಜನಗಳಿಗೆ ಬಂದಾಗ ಅವರು ಪಂಚ್ ಅನ್ನು ಪ್ಯಾಕ್ ಮಾಡುತ್ತಾರೆ.
ಫ್ಯಾಬೇಸೆ ಕುಟುಂಬಕ್ಕೆ ಸೇರಿರುವ ಒಂದು ಸಸ್ಯ ಪ್ರಜಾತಿ. ಮಧ್ಯ ಮತ್ತು ದಕ್ಷಿಣ ಅಮೇರಿಕಗಳ ಮೂಲದಲ್ಲಿರುವ ಈ ಗಿಡದ ಬೀಜವನ್ನು ಮುಖ್ಯವಾಗಿ ಎಣ್ಣೆ ತಯಾರಿಸಲು ಮತ್ತು ಆಹಾರದಲ್ಲಿ ಉಪಯೋಗಿಸುತ್ತಾರೆ. ಹಳ್ಳಿಗಾಡಿನ ಜನರು ಸಾಮಾನ್ಯವಾಗಿ ತಮ್ಮ ತಮ್ಮ ಹೊಲಗಳಲ್ಲಿ ತಮ್ಮ ಮನೆಗಳಿಗೆ ಬೇಕಾಗುವಷ್ಟು ಇದನ್ನು ಬೆಳೆದುಕೊಳ್ಳುತ್ತಾರೆ, ಇದು ಚಳಿಗಾಲಕ್ಕೆ ಸರಿಯಾಗಿ ತಿನ್ನಲು ಸಿಗುತ್ತದೆ. ಕಡಲೆಕಾಯಿ ಗಿಡದ ಸಸ್ಯ ಶಾಸ್ತ್ರ ಹೆಸರು ‘ಆರಾಚಿಸ್ ಹೈಪೋಜಿಯಾ ಲೆಗುಮ್’ ಕಡಲೆಕಾಯಿ ಬಿತ್ತನೆಯಲ್ಲಿ ೫೦%ಕ್ಕೆ ಹೆಚ್ಚಾಗಿ ಇರುತ್ತದೆ. ಬೀಜದಲ್ಲಿ ಪ್ರೋಟಿನ್ ೩೦% ಶೇಕಡ ಇದ್ದು, ಎಣ್ಣೆ ತೆಗೆದ ಮೇಲೆ ೫೦% ರಷ್ಟು ಇರುತ್ತದೆ. ಹಸಿ ಮಣ್ಣು ಇರುವ ನೆಲಗಳು ಇದಕ್ಕೆ ಅನುಕೂಲ. ಉಷ್ಣಮಂಡಲ ಭೂಮಿಗಳಲ್ಲಿ ಚೆನ್ನಾಗಿ ಬೆಳೆಯುತ್ತದೆ. ಇಂಡಿಯಾ, ಚೈನಾ, ದಕ್ಷಿಣ ಏಷಿಯಾ, ಆಗ್ನೇಯ ಏಷಿಯಾ ಖಂಡ/ಪ್ರದೇಶಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಾಗುವಳಿಯಲ್ಲಿದೆ.
ಕಡಲೆಕಾಯಿ ಬೀಜವನ್ನು ಬಿತ್ತಿದ ಮೇಲೆ, ಅಂಕುರ ಸಮಯದಲ್ಲಿ ವಾತಾವರಣದಲ್ಲಿ ತಾಪಮಾನ ೧೪-೧೬೦C ಇರಬೇಕಾಗುತ್ತದೆ. ಕಾಯಿ ಬರುವ ಸಮಯದಲ್ಲಿ ತಾಪಮಾನ ೨೩-೨೫೦C ಇದ್ದರೆ ಒಳ್ಳೆಯದು. ಪೈಯಿರಿನ ಸಮಯದಲ್ಲಿ ವರ್ಷಪಾತ ೧೨.೫-೧೭.೫ ಸೆಂ.ಮೀ,ಇರಬೇಕು. ಇದ್ದರೆ ಫಸಲು ಹೆಚ್ಚಾಗಿ ಬರುತ್ತದೆ. ಬಿತ್ತುವ ಸಮಯದಲ್ಲಿ ೧೨.೫-೧೭.೫ ಸೆಂ.ಮೀ, ಬೆಳೆ ಸಮಯದಲ್ಲಿ ೩೭-೬೦ ಸೆಂ.ಮೀ. ಮಳೆ ಇದ್ದರೆ ಹಿತಕರವಾಗುತ್ತದೆ. ಕಡಲೆಕಾಯಿ ಪೈರನ್ನು ಎಲ್ಲಾ ಋತುಗಳಲ್ಲಿ ಸಾಗುವಳಿ ಮಾಡಬಹುದು. ಆದರೆ ಮಳೆಕಾಲದಲ್ಲಿ(ಖರೀಪ್ ಸೀಜನ್)ಹೆಚ್ಚಾಗಿ ೮೦% ವರೆಗೆ ಸಾಗುವಳಿ ಮಾಡುವುದುಂಟು. ದಕ್ಷಿಣ ಭಾರತದಲ್ಲಿ ಖರೀಫ್ ಮತ್ತು ರಬೀ ಎರಡು ಋತುಗಳಲ್ಲೀ ಸಾಗುವಳಿ ಮಾಡುತ್ತಾರೆ. ನೀರಾವರಿ ಇರುವ ಪ್ರದೇಶದಲ್ಲಿ ಜನವರಿ-ಮಾರ್ಚಿ ತಿಂಗಳುಗಳ ಮಧ್ಯ ಕಾಲದಲ್ಲಿ, ಕಡಿಮೆ ಸಮಯಕ್ಕೆ ಫಸಲಿಗೆ ಬರುವ ಜಾತಿ ಬೀಜಗಳನ್ನು ಬಿತ್ತುತ್ತಾರೆ. ಕಡಲೆಕಾಯಿ ಬೀಜದಲ್ಲಿ ಪ್ರೋಟಿನ್, ಎಣ್ಣೆ, ಕಾರ್ಬೋಹೈಡ್ರೇಟು ಮತ್ತು ವಿಟಮಿನುಗಳು ಹೆಚ್ಚಾಗಿರುತ್ತವೆ. ಆದ್ದರಿಂದ ಕಡಲೆಕಾಯಿ ಬಲವರ್ಧಕ ಆಹಾರವಾಗಿದೆ. ಕಡಲೆಕಾಯಿ ಕಾಳಿನಲ್ಲಿ ೪೫-೫೦%ಎಣ್ಣೆ, ೨೫-೩೦% ಪ್ರೋಟಿನುಗಳಿರುತ್ತವೆ. ಫಸಲು ಕಾಲ ೯೦-೧೫೦ದಿನಗಳು. ಗುಂಚೆ ತರಹೆಪಯಿರು ೯೦-೧೨೦ ದಿವಸಕ್ಕೆ, ಹರಡುವಿಕೆ ಪಯಿರು ೧೩೦-೧೫೦ ದಿವಸಕ್ಕೆ ಫಸಲು ಬರುತ್ತವೆ. ಮೇಲೆ ಹೇಳಿದ ಎರಡು ಪ್ರಭೇದಗಳನ್ನು ಮಳೆಕಾಲದಲ್ಲಿ ಸಾಗುವಳಿ ಮಾಡುತ್ತಾರೆ. ಆಗ ಸಂಕರ ಪ್ರಭೇಧ ಬೀಜಗಳನ್ನು ಸಾಗುವಳಿ ಮಾಡುವುದರಿಂದ ಹೆಚ್ಚಿನ ಫಸಲು ಬರುತ್ತದೆ. ಸಾಧಾರಣ ತರಹದಿಂದ ೫೦೦-೬೦೦ ಕೆ.ಜಿ ಎಕರೆ ಇಳುವರಿ ಆದರೆ ಹೈಬ್ರೀಡ್ ಬೀಜಗಳನ್ನು ಬಳಸುವುದರಿಂದ ಎಕರೆ ೯೦೦-೧೨೦೦ಕೆ.ಜಿ ಇಳುವರಿ ಬರುತ್ತದೆ. ಕಾಯಿಯಲ್ಲಿ ಹೊಟ್ಟು, ೨೫-೩೦%,ಕಾಳು ೭೦-೭೫% ಇರುತ್ತವೆ.

ಬೀಜದಿಂದ ತೆಗೆಯುವ ಎಣ್ಣೆಯನ್ನು ಅಡುಗೆ ಎಣ್ಣೆಯಾಗಿ ಬಳಸುತ್ತಾರೆ.
ಈ ಎಣ್ಣೆಯನ್ನು ಡಾಲ್ಡಾ/ವನಸ್ಪತಿ ತಯಾರು ಮಾಡುವುದರಲ್ಲಿ ಉಪಯೋಗಿಸುತ್ತಾರೆ.
ಎಣ್ಣೆಯನ್ನು ಮೈ ಸಾಬೂನುಗಳ ತಯಾರಿಕೆಯಲ್ಲಿ ಉಪಯೋಗಿಸುವರು.
ಕಾನ್ಮೆಟಿಕ್ಸ್ ತಯಾರಿಯಲ್ಲಿಯು ಇದನ್ನು ಬಳಸುತ್ತಾರೆ.
ಬೀಜಗಳನ್ನು ಆಹಾರ ಪದಾರ್ಥಗಳಲ್ಲಿ ಮಿಳಿತ ಮಾಡಿ ಉಪಯೋಗಿಸುತ್ತಾರೆ.
ಎಣ್ಣೆ ತೆಗೆದ ಹಿಂಡಿಯನ್ನು ಹಕ್ಕಿ ಆಹಾರವಾಗಿ, ಹಸುಗಳ ಮೇವು ತಯಾರು ಮಾಡುವುದರಲ್ಲಿ ಬಳಸುತ್ತಾರೆ ಮತ್ತು ಹೊಲದಲ್ಲಿ ಎರುಬು ಆಗಿಯು ಉಪಯೋಗಿಸುತ್ತಾರೆ.
ಶೇಂಗಾವನ್ನು ಬ್ರೈನ್ ಫುಡ್ ಎಂದು ಕರೆಯಬಹುದು. ಯಾಕೆಂದರೆ ಇದು ಸ್ಮರಣ ಶಕ್ತಿಯನ್ನು ಹೆಚ್ಚಿಸಲು ಸಹಕಾರಿಯಾಗಿದೆ. ಇದರಲ್ಲಿ ವಿಟಮಿನ್ ಬಿ3 ಅಥವಾ ನಿಯಾಸಿನ್ ಎಂಬ ಅಂಶ ಇದ್ದು ಇದು ಮೆದುಳನ್ನು ಚುರುಕಾಗಿಸುತ್ತದೆ. ಇದು ರಕ್ತದಲ್ಲಿರುವ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಲು ಕೂಡಾ ಸಹಕಾರಿಯಾಗಿದೆ. ಇದರಲ್ಲಿರುವ ತಾಮ್ರದಂಶ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೊಗೊಳಿಸುತ್ತದೆ. ಶೇಂಗಾವನ್ನು ನಿಯಮಿತವಾಗಿ ಸೇವಿಸುತ್ತಿದ್ದರೆ ಹೃದಯದ ಆರೋಗ್ಯವೂ ಉತ್ತಮವಾಗಿರುತ್ತದೆ.
ಹೃದಯಾಘಾತ ಇತ್ಯಾದಿ ಸಮಸ್ಯೆಗಳನ್ನೂ ತಪ್ಪಿಸಬಹುದು. ಆದ್ದರಿಂದ ವಾರಕ್ಕೆ ನಾಲ್ಕು ದಿನ ಒಂದು ಹಿಡಿ ಶೇಂಗಾ ಬೀಜವನ್ನು ತಿನ್ನುವ ಅಭ್ಯಾಸವನ್ನು ರೂಢಿಸಿಕೊಳ್ಳಿ. ಕೆಲವು ಸಂಶೋಧನೆಗಳ ಪ್ರಕಾರ ಶೇಂಗಾವನ್ನು ಸೇವಿಸುತ್ತಿದ್ದರೆ ಆಲ್‌ಜೈಮರ್ ಮುಂತಾದ ಸಮಸ್ಯೆಯನ್ನೂ ತಡೆಗಟ್ಟಬಹುದು. ಇದರಲ್ಲಿರುವ ನಿಯಾಸಿನ್ ಅಂಶವೇ ಇದಕ್ಕೆ ಕಾರಣ.
ಇಷ್ಟು ಮಾತ್ರವಲ್ಲ, ಶೇಂಗಾ ಸೇವನೆಯಿಂದ ಕ್ಯಾನ್ಸರ್ ಬರುವ ಸಾಧ್ಯತೆಯನ್ನೂ ಕಡಿಮೆ ಮಾಡಿಕೊಳ್ಳಬಹುದು.
ಕಡಲೆಬೀಜದಲ್ಲಿ ಹೆಚ್ಚಿನ ಮಟ್ಟದಲ್ಲಿ ಪಾಲಿಫೆನಾಲ್ ಆಂಟಿಯಾಕ್ಸಿಡಂಟ್ ಇದೆ. ಕಪ್ಪು ದ್ರಾಕ್ಷಿ ಮತ್ತು ಸ್ಟ್ರಾಬೆರಿ ಹಣ್ಣುಗಳಲ್ಲಿರುವ ಆಂಟಿಯಾಕ್ಸಿಡಂಟ್ ಕಡಲೆ ಬೀಜದಲ್ಲೂ ದೊರೆಯುತ್ತೆ. ಸೇಬು, ಕ್ಯಾರೆಟ್ ಮತ್ತು ಬೀಟ್‌ರೂಟ್‌ಗಿಂತ ಕಡಲೆ ಕಾಯಿಯಿಂದಲೇ ಹೆಚ್ಚಿನ ಉಪಯೋಗ ಪಡೆಯಬಹುದು. ಉಪ್ಪು ಬೆರೆಸದಿರುವ ಕಡಲೆ ಬೀಜ ರಕ್ತನಾಳಕ್ಕೆ ತುಂಬಾ ಒಳ್ಳೆಯದು. ಇದರಲ್ಲಿ ಮೋನೊಸಾಚುರೇಟೆಡ್ ಫ್ಯಾಟ್ ರಕ್ತದಲ್ಲಿನ ಕೊಬ್ಬನ್ನು ಕಡಿಮೆ ಮಾಡುತ್ತದೆ

ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ
ಇದರಲ್ಲಿ ಕೊಬ್ಬಿನ ಅಂಶ ಇರುವ ಕಾರಣಕ್ಕೇ ಶೇಂಗಾಬೀಜವನ್ನು ಕೆಲವೊಮ್ಮೆ ಕಡೆಗಣಿಸಲಾಗುತ್ತದೆ. ಆದರೆ ವಾಸ್ತವಾಗಿ ಇದರಲ್ಲಿ ಒಳ್ಳೆಯ ಹಾಗೂ ಕೆಟ್ಟ ಎರಡೂ ಬಗೆಯ ಕೊಬ್ಬುಗಳಿವೆ. ಒಟ್ಟಾರೆಯಾಗಿ ಇವು ಹೃದಯಕ್ಕೆ ಉಪಯುಕ್ತವೇ ಆಗಿವೆ. ಅಲ್ಲದೇ ರಕ್ತದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ರಕ್ತನಾಳಗಳ ಒಳಗೆ ಅಂಟಿಕೊಳ್ಳದಂತೆ ತಡೆಯುವ ಮೂಲಕ ಹೃದಯದ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ.
ಇದರಲ್ಲಿ ಹೆಚ್ಚಿನ ಪ್ರಮಾಣದ ಒಳ್ಳೆಯ ಕೊಲೆಸ್ಟ್ರಾಲ್ ಅಥವಾ HDL ಇದ್ದು ಜೊತೆಗೇ ಹೃದಯಕ್ಕೆ ಸಹಕಾರಿಯಾಗುವ ಒಮೆಗಾ 3 ಕೊಬ್ಬಿನ ಆಮ್ಲಗಳೂ ಇವೆ. ಇವು ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆಗೊಳಿಸಲು ನೆರವಾಗುತ್ತವೆ ಹಾಗೂ ರಕ್ತನಾಳಗಳು ಒಳಗಿನಿಂದ ಶುದ್ಧವಾಗಿರುವಂತೆ ನೋಡಿಕೊಳ್ಳುತ್ತವೆ. ಆದರೆ ಶೇಂಗಾಬೀಜದಲ್ಲಿ ಉಪ್ಪಿಲ್ಲದಂತೆ ನೋಡಿಕೊಳ್ಳುವುದು ಅಗತ್ಯ.
ಒಂದು ವೇಳೆ ಪಿತ್ತಕೋಶದಲ್ಲಿ ಕಲ್ಲುಗಳಾಗುವ ಸಂಭವವನ್ನು ಶೇಂಗಾಬೀಜದಲ್ಲಿರುವ ಪೋಷಕಾಂಶಗಳು ಕಡಿಮೆ ಮಾಡುತ್ತವೆ. ಇತ್ತೀಚೆಗೆ ಪಿತ್ತಕೋಶದಲ್ಲಿ ಕಲ್ಲುಗಳಾಗುವುದು ಹೆಚ್ಚಾಗಿ ಕಂಡುಬರುತ್ತಿದ್ದು ಹೆಚ್ಚಿನವರಿಗೆ ಈ ಬಗ್ಗೆ ಅರಿವೇ ಇರುವುದಿಲ್ಲ. ಆದರೆ ಈ ಕಲ್ಲುಗಳು ದೊಡ್ಡದಾದ ಬಳಿಕವೇ ನೋವು ಕೊಡುವ ಕಾರಣ ತಡವಾಗಿ ಇದು ಬೆಳಕಿಗೆ ಬರುತ್ತದೆ. ಇದನ್ನು ನಿವಾರಿಸಲು ಹೆಚ್ಚಿನ ಚಿಕಿತ್ಸೆಯ ಅಗತ್ಯವಿದೆ. ಶೇಂಗಾಬೀಜಗಳನ್ನು ಸೇವಿಸುತ್ತ್ತಾ ಬಂದವರಲ್ಲಿ ಈ ಕಲ್ಲುಗಳಾಗುವ ಸಂಭವ ಕಡಿಮೆ ಇರುತ್ತದೆ. ಸಾಮಾನ್ಯವಾಗಿ ಕೊಬ್ಬು ಮತ್ತು ಕೊಲೆಸ್ಟ್ರಾಲ್ ಈ ಕಲ್ಲುಗಳಿಗೆ ಮೂಲವಾಗಿದ್ದು ಶೇಂಗಾದಲ್ಲಿರುವ ಪೋಷಕಾಂಶಗಳು ಕೊಲೆಸ್ಟ್ರಾಲ್ ನಿವಾರಿಸುವ ಮೂಲಕ ಪಿತ್ತಕೋಶದ ಕಾಯಿಲೆಗಳಿಂದ ರಕ್ಷಿಸುತ್ತದೆ.
ಧನ್ಯವಾದಗಳು.
GIPHY App Key not set. Please check settings