in

ಮಹಾಮಹಿಮ ಭೀಷ್ಮ ಪಿತಾಮಹ

ಭೀಷ್ಮ ಮಹಾಭಾರತದಲ್ಲಿ ಒಂದು ಪ್ರಮುಖ ಪಾತ್ರ.  ಶಾಂತನು ಮತ್ತು ಗಂಗೆಯರ ಪುತ್ರ. ಶಾಂತನು ಚಕ್ರವರ್ತಿಗೆ ಗಂಗೆಯಲ್ಲಿ ಜನಿಸಿದ ಎಂಟು ಪುತ್ರರಲ್ಲಿ ಕೊನೆಯವ. ದೇವವ್ರತ/ಸತ್ಯವ್ರತ ಈತನ ಮೊದಲ ಹೆಸರು. ಅಷ್ಟವಸುಗಳಲ್ಲೊಬ್ಬನಾದ ಇವನು ವಸಿಷ್ಠ ಮುನಿಯ ಶಾಪದಿಂದ ಭೂಮಿಯಲ್ಲಿ ಅವತರಿಸುತ್ತಾನೆ. ಈತನು ಶಾಸ್ತ್ರಜ್ಞಾನವನ್ನು ದೇವರ್ಷಿ ಬೃಹಸ್ಪತಿಯಿಂದ, ಶಸ್ತ್ರ ವಿದ್ಯೆಗಳನ್ನು ಋಷಿ ಭಾರದ್ವಾಜರಿಂದ ಮತ್ತು ಪರಶುರಾಮರಿಂದಲೂ ಕಲಿತನು. ತನ್ನ ತಂದೆ ಶಂತನುವಿನ ಸುಖಕ್ಕೋಸ್ಕರ ಆಜೀವನ ಬ್ರಹ್ಮಚರ್ಯ ಪಾಲಿಸುವ ಪ್ರತಿಜ್ಞೆ ಮಾಡುತ್ತಾನೆ.  ಈಗಲೂ ಯಾರಾದರೂ ಪ್ರತಿಜ್ಞೆ ಮಾಡಿ ಅದನ್ನು ತಪ್ಪದೆ ನೆರವೇರಿಸಬೇಕಾದರೆ ಅದನ್ನು ಭೀಷ್ಮ ಪ್ರತಿಜ್ಞೆ ಎಂದೇ ಹೇಳಲಾಗುತ್ತದೆ. ಭೀಷ್ಮರ ಪ್ರತಿಜ್ಞಾ ನಿಷ್ಠೆ ಅತಿ ತೀವ್ರವಾದದ್ದು ಎಂದೇ ಮಹಾಭಾರತದಲ್ಲಿ ಉಲ್ಲೇಖಿತವಾಗಿದೆ. ತನ್ನ ಸಚ್ಚಾರಿತ್ರ್ಯ ಹಾಗೂ ನಿಷ್ಠೆಯಿಂದಾಗಿ ಬಹುಶಃ ಶ್ರೀಕೃಷ್ಣನ ನಂತರ ಮಹಾಭಾರತದ ಅತ್ಯಂತ ಗೌರವಾನ್ವಿತ ವ್ಯಕ್ತಿಯೆಂದೆನಿಸಿಕೊಳ್ಳುತ್ತಾನೆ.

ಶಾಂತನು ಹಾಗೂ ಗಂಗೆಯ ಪುತ್ರನಾಗಿ ಹುಟ್ಟಿದ ಭೀಷ್ಮರ ಮೂಲ ಹೆಸರು ದೇವವ್ರತ. ಬಾಲ್ಯವನ್ನು ತಾಯಿಯೊಂದಿಗೆ ಕಳೆಯುತ್ತಾನೆ. ಶಿಕ್ಷಣ ಮುಕ್ತಾಯಗೊಳಿಸುತ್ತಿದ್ದಂತೆಯೇ, ತಾಯಿ ಗಂಗೆ ದೇವವ್ರತನನ್ನು ಮಹಾರಾಜ ಶಂತನುವಿಗೆ ಒಪ್ಪಿಸುತ್ತಾಳೆ. ಶಂತನುವಿನ ನಂತರ ದೇವವ್ರತನೇ ಹಸ್ತಿನಾಪುರದ  ಸಿಂಹಾಸನಕ್ಕೆ ಉತ್ತರಾಧಿಕಾರಿಯಾಗಬೇಕಿತ್ತು. ಸ್ವತಃ ಶಂತನು ತನ್ನ ಮಗ ದೇವವ್ರತನನ್ನು ಹಸ್ತಿನಾವತಿಯ ಉತ್ತರಾಧಿಕಾರಿ ಎಂದು ಘೋಷಿಸುತ್ತಾನೆ. ಆದರೆ ವಿಧಿಯ ಆಟವೇ ಬೇರೆ ಇರುತ್ತದೆ.

ಶಂತನು ಬೇಟೆಗೆ ತೆರಳಿದ್ದಾಗ ದೋಣಿ ಚಾಲನೆ ಮಾಡುತ್ತಿದ್ದ ಸತ್ಯವತಿ ಎಂಬ ಯುವತಿಯನ್ನು ನೋಡುತ್ತಾನೆ, ಆಕೆಯ ಸೌಂದರ್ಯಕ್ಕೆ ಆಕರ್ಷಿತನಾದ ಶಂತನು ಸತ್ಯವತಿಯನ್ನು ವಿವಾಹವಾಗಲು ಬಯಸುತ್ತಾನೆ . ಸತ್ಯವತಿಯ ತಂದೆಯನ್ನು ಭೇಟಿ ಮಾಡಿ ತನ್ನ ಆಸೆಯನ್ನು ತಿಳಿಸುತ್ತಾನೆ. ಆದರೆ “ತನ್ನ ಮಗಳನ್ನು ವಿವಾಹವಾಗಬೇಕಾದರೆ ಅವಳ ಮಕ್ಕಳಿಗೇ ಹಸ್ತಿನಾವತಿಯ ಸಿಂಹಾಸನ ಸಿಗಬೇಕು” ಎಂದು ಸತ್ಯವತಿಯ ತಂದೆ ಷರತ್ತು ವಿಧಿಸುತ್ತಾನೆ. ಆದರೆ ದೇವವ್ರತನನ್ನು ಅದಾಗಲೇ ಹಸ್ತಿನಾವತಿಯ ಸಿಂಹಾಸನದ ಉತ್ತರಾಧಿಕಾರಿಯನ್ನಾಗಿ ಘೋಷಿಸಿದ್ದ ರಾಜ ಶಂತನು ಸತ್ಯವತಿ ತಂದೆ ವಿಧಿಸಿದ ಷರತ್ತನ್ನು ಒಪ್ಪಲು ನಿರಾಕರಿಸುತ್ತಾನಾದರೂ ಸತ್ಯವತಿಯನ್ನು ಮರೆಯುವುದಕ್ಕೆ ಸಾಧ್ಯವಾಗದೇ ದ್ವಂದ್ವದಲ್ಲಿ ಸಿಲುಕುತ್ತಾನೆ.

ಇತ್ತ ದೇವವ್ರತನಿಗೆ ಈ ಎಲ್ಲಾ ವಿಷಯಗಳೂ ತಿಳಿಯುತ್ತದೆ. ತಂದೆಯ ದ್ವಂದ್ವವನ್ನು ಹೋಗಲಾಡಿಸಲು ನಿರ್ಧರಿಸಿ ಹಸ್ತಿನಾವತಿಯ ಸಿಂಹಾಸನವನ್ನು ತಾನು ಅಲಂಕರಿಸುವುದಿಲ್ಲ, ಸತ್ಯವತಿ-ಶಂತನುವಿನ ಮಕ್ಕಳಿಗೇ ಸಿಂಹಾಸನ ಸಿಗಲಿದೆ ಎಂದು ಸತ್ಯವತಿಯ ತಂದೆಗೆ ಮನವರಿಕೆ ಮಾಡಿ ತಾನು ಆಜನ್ಮ ಬ್ರಹ್ಮಚಾರಿಯಾಗಿ ಉಳಿಯುತ್ತೇನೆಂದು ಪ್ರತಿಜ್ಞೆ ಮಾಡುತ್ತಾರೆ. ಅಷ್ಟೇ ಅಲ್ಲದೇ ಮುಂದೆ ರಾಜರಾಗುವ ಶಂತನುವಿನ ಮಕ್ಕಳಿಗೆ ತಾನು ನಿಷ್ಠನಾಗಿರುವುದಾಗಿಯೂ ಶಪಥ ಮಾಡುತ್ತಾರೆ. ದೇವವ್ರತ ಈ ರೀತಿ ಶಪಥ ಮಾಡಿದ್ದರಿಂದಲೇ ಅವರಿಗೆ ಭೀಷ್ಮ ಎಂಬ ಹೆಸರು ಬಂದಿರುವುದು, ಹಾಗಾಗಿಯೇ ಶಪಥವನ್ನು ಭೀಷ್ಮ ಪ್ರತಿಜ್ಞೆ ಎನ್ನುತ್ತಾರೆ. ಹೀಗೆ ಹಸ್ತಿನಾಪುರದ ಸೇವಕನಾಗಿ ಇರುತ್ತಾನೆ.

ಭೀಷ್ಮ ಮತ್ತು ಅಂಬಾ

ಭೀಷ್ಮ ಮತ್ತು ಅಂಬಾ
ಭೀಷ್ಮ ಮತ್ತು ಅಂಬಾ

ಭೀಷ್ಮ ಪಿತಾಮನು ಎಷ್ಟು ಶಕ್ತಿಶಾಲಿಯಾಗಿದ್ದನೆಂದರೆ, ಅವರನ್ನು ಸೋಲಿಸುವುದು ಅಸಾಧ್ಯವಾದ ಮಾತಾಗಿತ್ತು. ಭೀಷ್ಮನು ತನ್ನ ತಾಯಿ ಸತ್ಯವತಿಗೆ ತಾನು ಎಂದಿಗೂ ಹಸ್ತಿನಾಪುರದ ಸಿಂಹಾಸನದ ಮೇಲೆ ಕುಳಿತುಕೊಳ್ಳುವುದಿಲ್ಲ ಮತ್ತು ಜೀವನ ಪರಿಯಂಥ ಸಿಂಹಾಸನಕ್ಕೆ ನಿಷ್ಠನಾಗಿರುತ್ತೇನೆ ಎಂದು ಭರವಸೆ ನೀಡಿದ್ದನು. ತನ್ನ ಮಗನನ್ನು ಸಿಂಹಾಸನದ ಮೇಲೆ ಕೂರಿಸುವಂತೆ ಸತ್ಯವತಿ ಭರವಸೆಯನ್ನು ಬೀಷ್ಮರಿಂದ ತೆಗದುಕೊಂಡಿದ್ದಳು. ಸತ್ಯವತಿ ಮತ್ತು ಶಾಂತನುಗೆ ಚಿತ್ತರಂಗದ ಮತ್ತು ವಿಚಿತ್ರವೀರ್ಯ ಎಂಬ ಇಬ್ಬರು ಗಂಡು ಮಕ್ಕಳಿದ್ದರು. ಪುತ್ರರ ಜನನದ ನಂತರ ಶಾಂತನು ನಿಧನರಾದರು ಮತ್ತು ಸಿಂಹಾಸನವು ಖಾಲಿಯಾಯಿತು.

ರಾಜಕುಮಾರರು ಚಿಕ್ಕವರಾಗಿದ್ದರು, ಆದ್ದರಿಂದ ಭೀಷ್ಮನು ರಾಜನಾಗದೆ ಸಾಮ್ರಾಜ್ಯದ ಉಸ್ತುವಾರಿ ವಹಿಸಿಕೊಂಡನು. ನಂತರ ಚಿತ್ತರಂಗದನನ್ನು ಹಸ್ತಿನಾಪುರದ ರಾಜನನ್ನಾಗಿ ಮಾಡಲಾಯಿತು, ಆದರೆ ಅವನು ಮತ್ತೊಬ್ಬ ರಾಜನಿಂದ  ಕೊಲ್ಲಲ್ಪಟ್ಟನು. ವಿಚಿತ್ರವಿರ್ಯನಿಗೆ ರಾಜನಾಗಲು ಯಾವುದೇ ಗುಣಗಳಿರಲಿಲ್ಲ, ಮದ್ಯಪಾನಕ್ಕೆ ಶರಣಾಗಿದ್ದ, ಆದರೆ ಅವನನ್ನು ಹೊರತುಪಡಿಸಿ ಬೇರೆ ಯಾರೂ ರಾಜನಾಗಲು ಸಾಧ್ಯವಿರಲಿಲ್ಲ, ಆದ್ದರಿಂದ ಅವನನ್ನು ಸಿಂಹಾಸನದ ಮೇಲೆ ಇರಿಸಲಾಯಿತು. ಅದೇ ಸಮಯದಲ್ಲಿ ಕಾಶಿ ರಾಜನು ತನ್ನ ಮೂವರು ಹೆಣ್ಣುಮಕ್ಕಳಿಗೆ ಸ್ವಯಂವರ ಆಯೋಜಿಸಿದನು, ಆದರ ಸಂದೇಶವನ್ನು ಹಸ್ತಿನಾಪುರಕ್ಕೆ ಕಳುಹಿಸಲಾಗಿಲ್ಲ, ಏಕೆಂದರೆ ಪ್ರತಿಯೊಬ್ಬರೂ ವಿಚಿತ್ರವೀರ್ಯನ ಸ್ವಭಾವವನ್ನು ತಿಳಿದಿದ್ದರು.

ಭೀಷ್ಮನು ಈ ಅವಮಾನವನ್ನು ಕಂಡು ಕಾಶಿಗೆ ಹೋಗಿ ಆಕ್ರೋಶವನ್ನು ಸೃಷ್ಟಿಸಿ ಮೂವರು ರಾಜಕುಮಾರಿಯರನ್ನು ಗೆದ್ದು ವಿಚಿತ್ರವೀರ್ಯನೊಂದಿಗೆ ವಿವಾಹವನ್ನು ಏರ್ಪಡಿಸಿದನು. ರಾಜಕುಮಾರಿ ಅಂಬಾ ಇದನ್ನು ವಿರೋಧಿಸಿದಳು, ನಾನು ಮಹಾರಾಜ ಶಾಲ್ವಾ ಅವರನ್ನು ನನ್ನ ಜೀವನ ಸಂಗಾತಿಯಾಗಿ ಆಯ್ಕೆ ಮಾಡಿದ್ದೇನೆ ಎಂದು ಹೇಳಿದರು, ಆದರೆ ನಿಮ್ಮ ಈ ಕೃತ್ಯವು ನನ್ನ ಹಕ್ಕುಗಳನ್ನು ಕಸಿದುಕೊಂಡಿದೆ, ಆದ್ದರಿಂದ ನೀವು ನನ್ನನ್ನು ಅಪಹರಿಸಿದ್ದರಿಂದ ನಾನು ಈಗ ನಿಮ್ಮನು ಮಾತ್ರ ಮದುವೆಯಾಗುತ್ತೇನೆ.

ಆಗ ಭೀಷ್ಮನು ಅವಳಿಗೆ ಕ್ಷಮೆಯಾಚಿಸಿ, ಓ ದೇವತೆ, ನಾನು ಬ್ರಹ್ಮಚಾರಿಯಾಗಿದ್ದೇನೆ ಮತ್ತು ನಾನು ನನ್ನ ಮಾತನ್ನು ಮುರಿಯಲು ಸಾಧ್ಯವಿಲ್ಲ ಎಂದು ಹೇಳಿದನು. ನನ್ನ ಸಹೋದರ ವಿಚಿತ್ರವೀರ್ಯಗಾಗಿ ನಾನು ನಿನ್ನನ್ನು ಇಲ್ಲಿಗೆ ಕರೆದು ತಂದಿದ್ದೇನೆ. ನೀನು ನಿನ್ನ ಇಷ್ಟದ ಪ್ರಕಾರ ಮಹಾರಾಜ ಶಾಲ್ವಾ ನನ್ನು ಮದುವೆಯಾಗುವಂತೆ ಹೇಳುತ್ತಾನೆ. ಅದರೆ ಶಾಲ್ವ ನನ್ನನ್ನು ತಿರಸ್ಕರಿಸಿದ ಎಂದು ಅಂಬ ಹೇಳುತ್ತಾಳೆ. ಆದರೆ ನಾನು ನಿನ್ನನ್ನು ಮದುವೆಯಾಗಲು ಸಾಧ್ಯವಿಲ್ಲ ಎಂದು ಭೀಷ್ಮರು ಹೇಳಿದಾಗ , ಕೋಪಗೊಂಡ ಅಂಬಾ ಶಿವನಿಗೆ ತಪಸ್ಸು ಮಾಡಿ ತನ್ನ ನ್ಯಾಯವನ್ನು ಕೇಳುತ್ತಾಳೆ. ಆಗ ನಿನ್ನ ಮುಂದಿನ ಜನ್ಮದಲ್ಲಿ ಭೀಷ್ಮನ ಸಾವಿಗೆ ನೀನೇ ಕಾರಣ ಆಗುತ್ತಿ ಎಂದು ಶಿವನು ಅವಳಿಗೆ ಭರವಸೆ ನೀಡುತ್ತಾನೆ. ಇದರ ನಂತರ ಅಂಬಾ ತನ್ನ ಅಂಬಾ ರೂಪವನ್ನು ತ್ಯಜಿಸಿ ಮಹಾರಾಜ ದ್ರುಪದನಿಗೆ ಶಿಖಂಡಿನಿ ರೂಪದಲ್ಲಿ ಜನ್ಮ ತಾಳುತ್ತಾಳೆ. ಅವಳ ಜೀವನದ  ಗುರಿ ಒಂದೇ ಆಗಿರುತ್ತದೆ ಅದು ಭೀಷ್ಮರ ಸಾವು.

ಭೀಷ್ಮ ಪಿತಾಮಹರ ಸಾವು :

ಭೀಷ್ಮ ಪಿತಾಮಹರ ಸಾವು
ಭೀಷ್ಮ ಪಿತಾಮಹರ ಸಾವು

ಕೌರವರು ಮತ್ತು ಪಾಂಡವರ ನಡುವೆ ಯುದ್ಧ ಪ್ರಾರಂಭವಾದಾಗ, ಪಿತಾಮಹ ಭೀಷ್ಮನ ಮುಂದೆ ಪಾಂಡವ ಸೈನ್ಯವು ಬದುಕುವುದು ಬಹಳ ಕಷ್ಟಕರವಾಗಿತ್ತು. ಏಕೆಂದರೆ ಆ ಇಳಿ ವಯಸ್ಸಿನಲ್ಲೂ ಊಟ ನಿದ್ದೆ ಇಲ್ಲದೆ ಪಾಂಡವ ಸೈನ್ಯವನ್ನು ಚಿದ್ರ ಚಿದ್ರ ಗೊಳಿಸಿದ್ದರು. ಭೀಷ್ಮನ ಸಾವು  ಮಾತ್ರ ಅವರ ವಿಜಯವನ್ನು ಖಚಿತಪಡಿಸಿಕೊಳ್ಳಲು ಅಗತ್ಯವಾಗಿತ್ತು, ಅಂಬಾ ಅಂದರೆ ಶಿಖಂಡಿನಿ ಯಾವಾಗ ಯುದ್ಧಭೂಮಿಯಲ್ಲಿ ತನ್ನ ಎದುರು ಬಂದು ನಿಲ್ಲುವಳೊ ಆಗ ಮಾತ್ರ ತನ್ನ ಶಸ್ತ್ರ ತ್ಯಾಗ ಮಾಡುತ್ತೇನೆ ಎಂದು ಅಂಬಾ ಗೆ ಮಾತು ಕೊಟ್ಟಿರುತ್ತಾರೆ ಭೀಷ್ಮರು. ಆಗ ಭಗವಾನ್ ಕೃಷ್ಣನು ಈ ಸಮಸ್ಯೆಗೆ ಪರಿಹಾರವನ್ನು ಸೂಚಿಸುತ್ತಾನೆ ಮತ್ತು ಅರ್ಜುನನ ರಥದಲ್ಲಿ, ಅಂಬಾ ಎಂದರೆ ಶಿಖಂಡಿಯನ್ನು ಜೊತೆಗಿರಿಸುತ್ತಾನೆ. ಈ ರೀತಿಯಾಗಿ ಶಿಖಂಡಿ ಅರ್ಜುನನ ಗುರಾಣಿಯಾಗುತ್ತಾನೆ ಮತ್ತು ಅರ್ಜುನನು ಪಿತಾಮಹ ಭೀಷ್ಮನ ಮೇಲೆ ಬಾಣಗಳ ಮಳೆ ಸುರಿಸಿ ಬಾಣಗಳ ಹಾಸಿಗೆಯ ಮೇಲೆ ಮಲಗಿಸುವಂತೆ ಮಾಡುತ್ತಾನೆ ಮತ್ತು ಹೀಗೆ ಅಂಬಾ ಸೇಡು ಕೂಡ ಪೂರ್ಣಗೊಳ್ಳುತ್ತದೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಋತುಚಕ್ರ ಸಮಸ್ಯೆ

ಮುಟ್ಟಿನ ಹಲವಾರು ತೊಂದರೆಗಳು ಮತ್ತು ಕೆಲವೊಂದು ಮನೆಮದ್ದುಗಳು

ಸರ್ದಾರ್ ಉಧಮ್ ಸಿಂಗ್

ಸರ್ದಾರ್ ಉಧಮ್ ಸಿಂಗ್