in

ಮೂತ್ರನಾಳದ ಸೋಂಕು

ಮೂತ್ರನಾಳದ ಸೋಂಕು
ಮೂತ್ರನಾಳದ ಸೋಂಕು

ಮೂತ್ರನಾಳದ ಸೋಂಕು ಸಾಮಾನ್ಯ ಸಮಸ್ಯೆ. ಈ ಸಮಸ್ಯೆ ಮಹಿಳೆಯರು ಮತ್ತು ಪುರುಷರಿಬ್ಬರಿಗೂ ಬರಬಹುದು. ಆದರೆ ಮಹಿಳೆಯರಲ್ಲಿ ಸಮಸ್ಯೆಗಳು ಮತ್ತು ತೊಡಕುಗಳು ಹೆಚ್ಚು ಗೋಚರಿಸುತ್ತವೆ. ಯುಟಿಐ ಇದ್ದಾಗ ಮೂತ್ರ ವಿಸರ್ಜನೆ ಮಾಡಲು ಕಷ್ಟವಾಗುತ್ತದೆ. ಯುಟಿಐ ಸೋಂಕು ಹೆಚ್ಚಾಗಿ ಇ-ಕೊಲಿ ಬ್ಯಾಕ್ಟೀರಿಯಾದಿಂದ ಉಂಟಾಗುತ್ತದೆ. ಪ್ರಪಂಚದ ಎಂಟು ಬಿಲಿಯನ್ ಜನರು ಇದರಿಂದ ಬಳಲುತ್ತಿದ್ದಾರೆ. ಮೂತ್ರದ ಸೋಂಕು ಹೊಂದಿದ ವ್ಯಕ್ತಿ ಬಹಳ ಮಾನಸಿಕ ಒತ್ತಡ ಕೂಡ ಅನುಭವಿಸಬಹುದು.

ಯುಟಿಐ ಚಿಕಿತ್ಸೆಈ ಸೋಂಕು ಚಿಕಿತ್ಸೆಯಿಲ್ಲದೆ ಕೊನೆಗೊಳ್ಳುವುದಿಲ್ಲ, ಆದ್ದರಿಂದ ರೋಗಲಕ್ಷಣಗಳು ಕಂಡು ಬಂದ ಕೂಡಲೇ ವೈದ್ಯರನ್ನು ಸಂಪರ್ಕಿಸಿ. ಪ್ರತಿಜೀವಕಗಳು ಸರಿಯಾದ ಚಿಕಿತ್ಸೆ. ಹೆಚ್ಚು ಹೆಚ್ಚು ನೀರು ಕುಡಿಯುವುದರಿಂದ ಸೋಂಕನ್ನು ದೂರ ಮಾಡಬಹುದು. ಪದೇ ಪದೇ ಮೂತ್ರ ವಿಸರ್ಜನೆಯಾಗುವುದರಿಂದ ದೂರ ಪ್ರಯಾಣ ಇವರಿಗೆ ಕಷ್ಟವಾಗುತ್ತದೆ. ಬೇರೆಯವರು ಆಡಿಕೊಳ್ಳಬಹುದೆಂಬ ಸಂಕೋಚ ಇವರನ್ನು ಕಾಡುತ್ತದೆ. ಆದರೆ ಯೂರಿನರಿ ಇನ್ಫೆಕ್ಷನ್ ಅನ್ನು ನಿರ್ಲಕ್ಷಿಸಲಾಗದು.

ಮೂತ್ರನಾಳದ ಸೋಂಕು
ಮೂತ್ರನಾಳದ ಸೋಂಕು

ಮೂತ್ರಕೋಶದ ಮೂಲಕ ದೇಹವನ್ನು ಪ್ರವೇಶಿಸಿದಾಗ ಯುಟಿಐ ಉಂಟಾಗುತ್ತದೆ ಮತ್ತು ಮೂತ್ರಕೋಶ ಮತ್ತು ಮೂತ್ರಪಿಂಡಗಳಿಗೆ ಹಾನಿಯುಂಟು ಮಾಡುತ್ತದೆ. ವಾಸ್ತವವಾಗಿ, ಮಹಿಳೆಯರ ಮೂತ್ರನಾಳ ಪುರುಷರಿಗಿಂತ ಚಿಕ್ಕದಾಗಿರುವುದರಿಂದ ಇದು ಪುರುಷರಿಗಿಂತ ಮಹಿಳೆಯರಲ್ಲಿ ಹೆಚ್ಚು ಸಾಮಾನ್ಯ. ಇದರಿಂದ ಬ್ಯಾಕ್ಟೀರಿಯಾಗಳು ಒಳಗೆ ಹೋಗಲು ಸುಲಭವಾಗುತ್ತದೆ.

ಲಕ್ಷಣಗಳು:
ಮೂತ್ರ ವಿಸರ್ಜಿಸುವಾಗ ಉರಿ ಕಾಣಿಸಿಕೊಳ್ಳುತ್ತದೆ.
ಕಿಬ್ಬೊಟ್ಟೆಯಲ್ಲಿ ನೋವು ಉಂಟಾಗುತ್ತದೆ.
ಪೂರ್ಣವಾಗಿ ಮೂತ್ರ ವಿಸರ್ಜನೆ ಆಗದೆ ಹನಿ ಹನಿಯಾಗಿ ಆಗುತ್ತದೆ ಮತ್ತು ಪುನಃ ಪುನಃ ಹೋಗಬೇಕೆನಿಸುತ್ತದೆ.
ಮೂತ್ರವು ಕೆಂಪಾಗಿರುತ್ತದೆ ಹಾಗೂ ಹೋಗಿ ಬಂದರೆ ದೂರ್ವಾಸನೆಯುಂಟಾಗುತ್ತದೆ.

ಮೂತ್ರದ ಸೋಂಕು ಹಲವಾರು ಕಾರಣಗಳಿಂದ ಉಂಟಾಗಬಹುದು.

 1. ಬ್ಯಾಕ್ಟೀರಿಯಾಗಳು ಮೂತ್ರನಾಳ ಅಥವಾ ವಲ್ವವನ್ನು ತಲುಪಿದಾಗ.
 2. ಲೈಂಗಿಕ ಕ್ರಿಯೆಯ ಸಮಯದಲ್ಲಿ ಕೀಟಾಣುಗಳು ಮೂತ್ರನಾಳಕ್ಕೆ ಹೋದಾಗ.
 3. ಸಾರ್ವಜನಿಕ ಅಥವಾ ಕೊಳಕು ಶೌಚಾಲಯವನ್ನು ಬಳಸುವುದರಿಂದ ಸೋಂಕು ಉಂಟಾಗಬಹುದು.
 4. ಕೊಳಕು ಕೈಗಳಿಂದ ಜನನಾಂಗಗಳನ್ನು ಸ್ಪರ್ಶಿಸುವುದು.
 5. . ಶೌಚಾಲಯಗಳಲ್ಲಿ ಕೊಳಕು ನೀರು ಚಿಮ್ಮಿದಾಗ.
  6.ಸರಿಯಾಗಿ ಶುಚಿತ್ವ ಕಾಪಾಡಿಕೊಳ್ಳದಿರುವುದು ಒಂದು ಕಾರಣ. ಸಾರ್ವಜನಿಕ ಶೌಚಾಲಯ ಹೆಚ್ಚು ಉಪಯೋಗಿಸುವವರಿಗೆ ಈ ಸೋಂಕು ಬಹು ಬೇಗ ಹರಡುತ್ತದೆ.

ಮೂತ್ರದ ಸೋಂಕಿನಿಂದ ರಕ್ಷಿಸಿಕೊಳ್ಳಲು ಈ ಕೆಲವು ವಿಧಾನಗಳನ್ನು ಪ್ರಯತ್ನಿಸಭಹುದು.

1.ಮೂತ್ರವನ್ನು ನಿಲ್ಲಿಸಲು ಪ್ರಯತ್ನಿಸಬೇಡಿ.

 1. ಇದನ್ನು ತಪ್ಪಿಸಲು ಸಾಕಷ್ಟು ನೀರನ್ನು ಕುಡಿಯಿರಿ.
 2. ಸೆಕ್ಸ್ ನಂತರ ಗುಪ್ತಾಂಗಗಳನ್ನು ಸ್ವಚ್ಛಗೊಳಿಸಿ.
 3. ಪ್ರತಿ ಬಾರಿ ಮೂತ್ರ ಅಥವಾ ಮಲ ವಿಸರ್ಜನೆ ಬಳಿಕ ಚೆನ್ನಾಗಿ ತೊಳೆಯಿರಿ.
 4. ಯಾವಾಗಲೂ ಸ್ವಚ್ಛ ಮತ್ತು ಆರಾಮದಾಯಕ ಒಳಉಡುಪುಗಳನ್ನು ಧರಿಸಿ.

ಕೆಲವು ಮನೆಮದ್ದುಗಳು:

ಮೂತ್ರನಾಳದ ಸೋಂಕು
ತಾಜಾ ಜ್ಯೂಸ್ ಗಳು

1.ದಿನಕ್ಕೆ ಒಂದು ಕಪ್ ಅನಾನಸ್ ಹಣ್ಣನ್ನು ತಿನ್ನುವ ಮೂಲಕ ಯುಟಿಐ ಅನ್ನು ತಡೆಗಟ್ಟಬಹುದು. ತಾಜಾ ಜ್ಯೂಸ್ ಗಳನ್ನೂ ಕುಡಿಯಬಹುದು.

2.ಮನೆಮದ್ದುಗಳು ಆಪಲ್ ವಿನೆಗರ್ ಸಿಡರ್ ನಲ್ಲಿ ಪೊಟಾಶಿಯಂ ಮತ್ತು ಇತರ ಲಾಭದಾಯಕ ಖನಿಜಾಂಶಗಳು ಸಮೃದ್ಧವಾಗಿದೆ. ಮೂತ್ರನಾಳದ ಸೋಂಕುಗಳನ್ನು ಉಂಟುಮಾಡುವ ಬ್ಯಾಕ್ಟೀರಿಯಾಗಳಿಂದ ರಕ್ಷಿಸುತ್ತದೆ. ನಿಂಬೆ ರಸ ಮತ್ತು ಜೇನುತುಪ್ಪವನ್ನು ಸೇರಿಸಿಕೊಳ್ಳಬಹುದು.

3.ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಸಮೃದ್ಧವಾಗಿದ್ದು ಬ್ಯಾಕ್ಟೀರಿಯಾಗಳು ಬೆಳೆಯದಂತೆ ತಡೆಯುತ್ತದೆ. ನೆಲ್ಲಿಕಾಯಿ ಜ್ಯೂಸ್ ಅನ್ನು ದಿನಕ್ಕೆ 4-5 ಬಾರಿ ಕುಡಿಯಿರಿ.

4.ಸರಿಯಾದ ಪ್ರಮಾಣದಲ್ಲಿ ನೀರು ಕುಡಿಯದಿರವುದು.
ರೋಗ ನಿರೋಧಕ ಶಕ್ತಿಯ ಕೊರತೆ ಎಲ್ಲಕ್ಕಿಂತ ಮುಖ್ಯವಾದ ಕಾರಣವಾಗಿದೆ.

5.ಮೊಸರಿಗೆ ಸಕ್ಕರೆ ಬೆರೆಸಿ ತೆಗೆದುಕೊಳ್ಳಬಹುದು. ಮೊಸರಿನಲ್ಲಿನ ಆಂಟಿ ಬ್ಯಾಕ್ಟೀರಿಯಲ್ ಗುಣ, ಬ್ಯಾಕ್ಟೀರಿಯಾದೊಂದಿಗೆ ಹೋರಾಡಲು ಉತ್ತಮ ಎದುರಾಳಿ.

6.ನೆಲ್ಲಿಕಾಯಿಯ ಶರಬತ್ತು, ಸೊಗದೆ ಬೇರಿನ ಶರಬತ್ತು ಇವು ಮೂತ್ರ ಸೋಂಕಿಗೆ ಬಹು ಉತ್ತಮ ಮನೆ ಮದ್ದಾಗಿದೆ.

7.ಪ್ರತಿದಿನ ಅರ್ಧ ಲೋಟ ಕ್ಯಾನ್ ಬೆರಿ ಜ್ಯೂಸ್ ಕುಡಿಯುವುದರಿಂದ ಮೂತ್ರದ ಸೋಂಕು ನಿವಾರಣೆಯಾಗಿ ಬ್ಯಾಕ್ಟೀರಿಯಾಗಳು ಬೆಳೆಯದಂತೆ ತಡೆಯುತ್ತದೆ.

8.ಶೀತಲಿ ಪ್ರಾಣಾಯಾಮ ಬಹು ಸಹಕಾರಿ. ಇದು ದೇಹಕ್ಕೆ ಬೇಕಾದ ತಂಪನ್ನು ಕೊಡುತ್ತದೆ ಹಾಗೂ 30-40ನಿಮಿಷಗಳು ವ್ಯಾಯಾಮ ಮಾಡಬೇಕಾಗುತ್ತದೆ.
ಆಗಾಗ ಹರಳೆಣ್ಣೆಯಿಂದ ದೇಹಾಭ್ಯಂಗ ಮಾಡಿಕೊಂಡರೆ ಬಹು ಉಪಯೋಗಿ.

9.ಅಡುಗೆ ಸೋಡಾ ಮೂತ್ರದ ಆಮ್ಲವನ್ನು ಸಮತೋಲನದಲ್ಲಿರಿಸುತ್ತದೆ ಮತ್ತು ನೋವು ನಿವಾರಣೆ ಮಾಡುತ್ತದೆ.

10.ಪ್ರತಿದಿನ ಬಿಸಿ ನೀರು ಮೂತ್ರಕೋಶದ ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಸೋಂಕಿನಿಂದ ನೋವನ್ನು ನಿವಾರಿಸುತ್ತದೆ.

11.ಎಳನೀರು ಬಹಳ ಉತ್ತಮವಾದ ಮೂತ್ರ ಶೋಧಕ,ಹಾಗಾಗಿ ಎಳನೀರಿಗೆ ಕೆಂಪು ಕಲ್ಲು ಸಕ್ಕರೆ ಸೇರಿಸಿ ಕುಡಿದರೆ ಅತ್ಯಂತ ಪರಿಣಾಮಕಾರಿಯಾಗಿರುತ್ತದೆ.

12.ಧನಿಯಾ ಕಷಾಯ,ಕಿತ್ತಳೆ ಸೇವನೆ,ಜೀರ್ಣಕ್ರಿಯೆಗೆ ಬಹು ಸಹಕಾರಿಯಾಗಿದೆ

13.ನಿಂಬೆಯ ಶರಬತ್ತು,ಗ್ರ್ಯಾನ್ ಬೆರ್ರಿ ಶರಬತ್ತು ಕೂಡ ಬಹಳ ಸಹಕಾರಿಯಾಗಿದೆ.
ದಿನಕ್ಕೆ ಮೂರರಿಂದ ನಾಲ್ಕು 3-4 ಲೀಟರ್ ನಷ್ಟು ನೀರನ್ನು ಕುಡಿದರೆ ಬಹಳ ಪ್ರಯೋಜನಕಾರಿಯಾಗುತ್ತದೆ. ಮೂತ್ರ ಹೆಚ್ಚು ವಿಸರ್ಜನೆ ಆಗುವುದರಿಂದ, ಆ ಮೂಲಕ ಬ್ಯಾಕ್ಟೀರಿಯಾ ಕೂಡ ಹೊರ ಹೋಗಲು ಸಹಕಾರಿಯಾಗುತ್ತದೆ.

14.ಬಾರ್ಲಿ ನೀರು,ಅಕ್ಕಿ ತೊಳೆದು ನೀರು ಇದನ್ನೆಲ್ಲಾ ತೆಗೆದುಕೊಂಡರೆ ರೋಗಾಣುವಿನ ವಿರುದ್ಧ ಹೋರಾಡುವ ಶಕ್ತಿ ವೃದ್ದಿಸುತ್ತದೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಜನಪದ ನೃತ್ಯ

ಕರ್ನಾಟಕದ ಕೆಲವೊಂದು ಜನಪದ ನೃತ್ಯಗಳು

ಕರ್ನಾಟಕದ ಪ್ರಮುಖ ನದಿಗಳು

ಕರ್ನಾಟಕದ ಪ್ರಮುಖ ನದಿಗಳು