in

ಕರ್ನಾಟಕದ ಪ್ರಮುಖ ನದಿಗಳು

ಕರ್ನಾಟಕದ ಪ್ರಮುಖ ನದಿಗಳು
ಕರ್ನಾಟಕದ ಪ್ರಮುಖ ನದಿಗಳು

ಹೆಚ್ಚು ಪ್ರಮಾಣದ ಹರಿಯುವ ನೀರಿನ ಒಂದು ಸಮೂಹಕ್ಕೆ ನದಿ ಎನ್ನಬಹುದು. ನದಿಗಳು ಸರೋವರದಲ್ಲಿ, ಬುಗ್ಗೆ ಅಥವಾ ಊಟೆಯಲ್ಲಿ ಅಥವಾ ಕೆಲವು ಚಿಕ್ಕ ಕೊಳಗಳ ಸಮ್ಮಿಲನದಲ್ಲಿ ಉದ್ಭವಿಸುತ್ತವೆ. ಉದ್ಭವದಿಂದ ಕೆಳಕ್ಕೆ ಹರಿದು ಮಹಾಸಾಗರಗಳಲ್ಲಿ ವಿಲೀನವಾಗುತ್ತವೆ. ಪುರಾತನ ಕಾಲದಿಂದಲೂ ನದಿಗಳು ಮಾನವ ನಾಗರೀಕತೆಗಳಿಗೆ ಅತ್ಯಂತ ಮುಖ್ಯವಾಗಿವೆ. ಪ್ರಪಂಚದ ಅನೇಕ ಪ್ರಮುಖ ನಗರಗಳು ನದೀತಟದಲ್ಲಿ ಸ್ಥಿತವಾಗಿವೆ.

ಕರ್ನಾಟಕದ ಕೆಲವು ನದಿಗಳ ಬಗ್ಗೆ :

ಕರ್ನಾಟಕದ ಪ್ರಮುಖ ನದಿಗಳು
ಕರ್ನಾಟಕದ ಪ್ರಮುಖ ನದಿಗಳು

ತುಂಗಾ ನದಿ
ತುಂಗಾ ನದಿ ಭಾರತದ ಕರ್ನಾಟಕ ರಾಜ್ಯದ ಒಂದು ನದಿ. ತುಂಗಾ ನದಿ ಪಶ್ಚಿಮ ಘಟ್ಟಗಳ ವರಾಹ ಪರ್ವತದಲ್ಲಿರುವ ಗಂಗಾ ಮೂಲದಲ್ಲಿ ಹುಟ್ಟುತ್ತದೆ. ಅಲ್ಲಿಂದ ಇದು ಕರ್ನಾಟಕದ ಚಿಕ್ಕಮಗಳೂರು ಮತ್ತುಶಿವಮೊಗ್ಗ ಜಿಲ್ಲೆಗಳ ಮೂಲಕ ಹರಿಯುತ್ತದೆ. ಸುಮಾರು 147 ಕಿ.ಮೀ ದೂರದವರೆಗೆ ಹರಿದು ಶಿವಮೊಗ್ಗ ಜಿಲ್ಲೆಯ ಕೂಡ್ಲಿಯಲ್ಲಿ ಭದ್ರಾ ನದಿಯೊಂದಿಗೆ ಸಂಗಮಗೊಳ್ಳುತ್ತದೆ. ಇದರ ನಂತರ ತುಂಗಭದ್ರಾ ಎಂಬ ಹೆಸರು ಪಡೆದು ಮುಂದೆ ಆಂಧ್ರ ಪ್ರದೇಶದಲ್ಲಿ ಕೃಷ್ಣಾ ನದಿಯನ್ನು ಸೇರುತ್ತದೆ.

ಗೋದಾವರಿ ನದಿ
ಇದನ್ನು ದಕ್ಷಿಣದ ಗಂಗೆ (ದಕ್ಷಿಣಗಂಗಾ) ಎಂದು ಕರೆಯುತ್ತಾರೆ. ಇದು ಆದಿಲಾಬಾದ್ ಜಿಲ್ಲೆಯ ಬಸರಾದಲ್ಲಿ ತೆಲಂಗಾಣವನ್ನು ಪ್ರವೇಶಿಸುತ್ತದೆ. ಆಂಧ್ರ ಪ್ರದೇಶದ ಮೂಲಕ ಹಾದುಹೋಗುವಾಗ ಧರ್ಮಪುರಿಯ ಹತ್ತಿರ ಹಾದುಹೋಗುತ್ತದೆ. ಈ ಧರ್ಮಪುರಿಯು ಒಂದು ಯಾತ್ರಾಸ್ಥಳವಾಗಿದ್ದು ಇಲ್ಲಿ ಅನೇಕ ಪುರಾತನ ದೇವಸ್ಥಾನಗಳಿದ್ದು ಇಲ್ಲಿ ಗೋದಾವರಿ ನದಿಯ ಸ್ನಾನವು ಆಧ್ಯಾತ್ಮಿಕ ಮಹತ್ವವನ್ನು ಹೊಂದಿದೆ. ನಂತರ ಡೆಕ್ಕನ್ ಪ್ರಸ್ಥಭೂಮಿ ದಾಟುವ ಮತ್ತು ಹಾಗೆಯೇ ಎರಡು ಕವಲಾಗಿ ಬಂಗಾಳ ಕೊಲ್ಲಿಯನ್ನು ಸೇರುತ್ತದೆ. ಬಸರಾ ಕ್ಷೇತ್ರವು, ಆದಿಲಾಬಾದ್ ಜಿಲ್ಲೆಯಲ್ಲಿ ಗೋದಾವರಿ ತೀರದಲ್ಲಿರುವ , ಸರಸ್ವತಿಯ ಪ್ರಸಿದ್ಧ ದೇವಸ್ಥಾನವನ್ನು ಹೊಂದಿದೆ. ಇದು ಭಾರತದಲ್ಲಿ ಸರಸ್ವತಿಯ ಎರಡನೇ ದೇವಾಲಯವಾಗಿದೆ.
ರಾಜಮುಂಡ್ರಿ ಅಥವಾ ರಾಜಮಹೇಂದ್ರಿ , ಗೋದಾವರಿ ತೀರದಲ್ಲಿರುವ ಎರಡನೇ ದೊಡ್ಡ ನಗರ ಆಗಿದೆ. ರಾಜಮುಂಡ್ರಿ ನಲ್ಲಿ, ಗೋದಾವರಿ ನದಿಯು ರಾಜಮುಂಡ್ರಿ ಯಿಂದ ಇನ್ನೊಂದು ದಂಡೆಯಾದ ಕೋವೂರ್ ವರೆಗೆ ಸುಮಾರು 5 ಕಿಮೀ ಅಗಲವನ್ನು ಹೊಂದಿದೆ.

ತುಂಗಭದ್ರ ನದಿ
ತುಂಗಭದ್ರ ನದಿಯು ದಕ್ಷಿಣ ಭಾರತದ ಪ್ರಮುಖ ನದಿಗಳಲ್ಲಿ ಒಂದು. ತುಂಗಾ ನದಿ ಮತ್ತು ಭದ್ರಾ ನದಿಗಳು ಶಿವಮೊಗ್ಗ ಜಿಲ್ಲೆಯ ಕೂಡಲಿಯಲ್ಲಿ ಸೇರಿ, ಈ ನದಿಯು ಪ್ರಾರಂಭವಾಗುತ್ತದೆ. ಮುಂದೆ ಇದು ಆಂಧ್ರ ಪ್ರದೇಶದ ಕರ್ನೂಲು ಬಳಿ ಇದಕ್ಕಿಂತ ದೊಡ್ಡದಾದ ಕೃಷ್ಣಾ ನದಿಯನ್ನು ಸೇರುತ್ತದೆ. ಈ ನದಿಯ ಒಟ್ಟು ಉದ್ದ ಸುಮಾರು ೬೧೦ ಕಿ.ಮಿ.ಗಳು. ಇದರಲ್ಲಿ ೩೮೦ ಕಿ.ಮಿ.ನಷ್ಟು ಕರ್ನಾಟಕದಲ್ಲಿ ಹರಿಯುತ್ತದೆ.

ಘಟಪ್ರಭಾ ಕೃಷ್ಣಾ ನದಿಯ ಉಪನದಿ

ಕರ್ನಾಟಕದ ಪ್ರಮುಖ ನದಿಗಳು
ಘಟಪ್ರಭಾ

ಘಟಪ್ರಭಾ ನದಿಯು ಸಹ್ಯಾದ್ರಿ ಪರ್ವತಶ್ರೇಣಿಯಲ್ಲಿ, ಸಮುದ್ರ ಮಟ್ಟದಿಂದ ೮೮೪ ಮೀಟರ ಎತ್ತರದಲ್ಲಿ ಜನಿಸುತ್ತದೆ. ೨೮೩ ಕಿಮೀ ದೂರದಷ್ಟು ಹರಿದ ಬಳಿಕ ಬಾಗಲಕೋಟೆ ತಾಲೂಕಿನ ಕಲಾದಗಿ ಗ್ರಾಮದಿಂದ ಈಶಾನ್ಯ ದಿಕ್ಕಿಗೆ ೩೫ ಕಿ.ಮೀ ದೂರದಲ್ಲಿ ಕೃಷ್ಣಾ ನದಿಯನ್ನು ಸಂಗಮಿಸುತ್ತದೆ. ಘಟಪ್ರಭಾ ನದಿಯ ಜಲಾನಯನ ಪ್ರದೇಶವು ೮೮೨೯ ಚದುರು ಕಿ.ಮೀ ವಿಸ್ತಾರವಾಗಿದೆ. ಹಿರಣ್ಯಕೇಶಿ ಹಾಗು ತಾಮ್ರಪರ್ಣ ಮಾರ್ಕಂಡೇಯ ನದಿಗಳು ಘಟಪ್ರಭಾದ ಉಪನದಿಗಳಾಗಿವೆ.

ಅರ್ಕಾವತಿ ನದಿ
ಅರ್ಕಾವತಿ ಭಾರತದ ನದಿಗಳಲ್ಲೊಂದು. ಕರ್ನಾಟಕ ರಾಜ್ಯದ ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಬೆಟ್ಟದಲ್ಲಿ ಉಗಮಿಸುವ ಇದು ಕಾವೇರಿ ನದಿಯ ಉಪನದಿಯಾಗಿದೆ. ಕೋಲಾರ, ರಾಮನಗರ ಮತ್ತು ಬೆಂಗಳೂರು ಗ್ರಾಮೀಣ ಜಿಲ್ಲೆಗಳ ಮೂಲಕ ಹರಿದು ಇದು ಕನಕಪುರದಿಂದ ಸುಮಾರು ೪೫ ಕಿ.ಮೀ ದೂರವಿರುವ ಸಂಗಮದಲ್ಲಿ ಕಾವೇರಿ ನದಿಯನ್ನು ಸಂಗಮಿಸುತ್ತದೆ. ಅರ್ಕಾವತಿ ಕಾವೇರಿಯ ಮುಖ್ಯ ಉಪನದಿಗಳಲ್ಲೊಂದು. ಚಿಕ್ಕಬಳ್ಳಾಪುರ ಸಮೀಪದ ನಂದಿದುರ್ಗದಲ್ಲಿ ಹುಟ್ಟಿ ಬೆಂಗಳೂರು ಜಿಲ್ಲೆಯಲ್ಲಿ ಉತ್ತರದಿಂದ ದಕ್ಷಿಣಕ್ಕೆ ಹರಿಯುತ್ತದೆ. 161 ಕಿಮೀ ಉದ್ದವಿದೆ. ಜಲಾನಯನ ಪ್ರದೇಶ 4,359 ಚ.ಕಿಮೀ. ನೆಲಮಂಗಲದ ದಕ್ಷಿಣದ ಕಡೆಯಿಂದ ಬರುವ ಕುಮುದ್ವತಿ, ಬೆಂಗಳೂರಿನ ಕಡೆಯಿಂದ ಬರುವ ವೃಷಭಾವತಿಗಳು ಇದರ ಉಪನದಿಗಳು. ಸಾವನದುರ್ಗ, ರಾಮಗಿರಿ, ಶಿವಗಿರಿ ಮೊದಲಾದ ಬೆಟ್ಟಗುಡ್ಡ ಪ್ರದೇಶ ಮತ್ತು ಸಾಧಾರಣ ಕಾಡುಪ್ರದೇಶಗಳ ಮೂಲಕ ದಕ್ಷಿಣಕ್ಕೆ ಹರಿಯುವುದರಿಂದ ನೀರಾವರಿಗೆ ಹೆಚ್ಚು ಪ್ರಯೋಜನಕಾರಿಯಾಗಿಲ್ಲ. ಆದರೂ ಮೇಲ್ಕಣಿವೆಯಲ್ಲಿ ಹೆಸರುಘಟ್ಟ ಮೊದಲಾದ ದೊಡ್ಡ ಕೆರೆಗಳಿಗೂ ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ದೊಡ್ಡಬಳ್ಳಾಪುರ, ಕಾಕೋಳು ಮುಂತಾದ ಕೆರೆಗಳಿಗೂ ನೀರನ್ನೊದಗಿಸುತ್ತದೆ. ಮುಂದುವರಿದು ನೆಲಮಂಗಲ, ಮಾಗಡಿ, ರಾಮನಗರ ಮತ್ತು ಕನಕಪುರ ತಾಲ್ಲೂಕುಗಳ ಮೂಲಕ ಹರಿದು ಕನಕಪುರದ ಹತ್ತಿರ ಕಾವೇರಿವನ್ನು ಸಂಗಮದ ಬಳಿ ಸೇರುತ್ತದೆ. ಮಳೆ ಕಡಿಮೆ ಬೀಳುವ ಪ್ರದೇಶದಲ್ಲಿರುವುದ ರಿಂದ ಬೇಸಗೆಯಲ್ಲಿ ಬಹುಮಟ್ಟಿಗೆ ಇದರ ಪಾತ್ರ ಒಣ ಮರಳಿನಿಂದ ತುಂಬಿರುತ್ತದೆ. ಆದರೂ ಸಂಪೂರ್ಣವಾಗಿ ಬತ್ತಿಹೋಗದೆ ನೀರು ಸಣ್ಣ ಪ್ರಮಾಣದಲ್ಲಿ ಹರಿಯುತ್ತಿರುತ್ತದೆ. ಮಳೆಗಾಲದಲ್ಲಿ ಅನೇಕ ಉಪನದಿಗಳ ನೀರು ಒದಗುವುದರಿಂದ ತುಂಬಿ ಹರಿಯುತ್ತದೆ. ಒಮ್ಮೊಮ್ಮೆ ಪ್ರವಾಹಗಳೂ ಕಾಣಿಸಿಕೊಳ್ಳುತ್ತವೆ. ಪ್ರವಾಹದ ಚಲನೆ 3500 ರಿಂದ 5000 ಕ್ಯೂಸೆಕ್ಸ್ ವರೆಗಿರುವುದು. ನೆಲಮಂಗಲ, ಮಾಗಡಿ ಮತ್ತು ರಾಮನಗರಗಳಿಂದ ಬೆಂಗಳೂರಿಗೆ ಹೋಗುವ ಮಾರ್ಗಗಳಲ್ಲಿ ನದಿಗೆ ಅಡ್ಡಲಾಗಿ ದೊಡ್ಡ ಸೇತುವೆಗಳನ್ನು ನಿರ್ಮಿಸಿದ್ದಾರೆ. ನದಿಯ ನೀರನ್ನು ನೀರಾವರಿಗೆ ಉಪಯೋಗಿಸಿಕೊಳ್ಳಲು ಯೋಜನಾರೂಪವಾದ ಪ್ರಯತ್ನ ನಡೆಯುತ್ತಿದೆ.

ಫಾಲ್ಗುಣಿ ನದಿ
ಫಾಲ್ಗುಣಿ ಎಂದೂ ಕರೆಯಲ್ಪಡುವ ಗುರುಪುರ ನದಿಯು ದಕ್ಷಿಣ ಕನ್ನಡ ಜಿಲ್ಲೆಯ ನದಿಗಳಲ್ಲೊಂದು. ಇದು ಪಶ್ಚಿಮ ಘಟ್ಟಗಳಲ್ಲಿ ಹುಟ್ಟಿ, ಪಶ್ಚಿಮಾಭಿಮುಖವಾಗಿ ಹರಿದು ಮಂಗಳೂರಿನ ಸಮೀಪ ಅರಬ್ಬಿ ಸಮುದ್ರವನ್ನು ಸೇರುತ್ತದೆ. ಇದು ಮಂಗಳೂರು ನಗರದ ಈಶಾನ್ಯ ಭಾಗದಲ್ಲಿರುವ ಗುರುಪುರ ಎಂಬ ಪಟ್ಟಣದ ದಕ್ಷಿಣ ಭಾಗದಲ್ಲಿ ಪಶ್ಚಿಮಕ್ಕೆ ಹರಿದು ಹಾದುಹೋಗುವ ಕಾರಣ “ಗುರುಪುರ” ಹೆಸರನ್ನು ಪಡೆಯುತ್ತದೆ. ಈ ಊರು ಬೆಂಗಳೂರಿನಿಂದ ಪಶ್ಚಿಮದ ದಿಕ್ಕಿನಲ್ಲಿ ೩೪೫ ಕಿಲೋಮೀಟರ್ ದೂರದಲ್ಲಿ ಇದೆ. ನವ ಮಂಗಳೂರು ಬಂದರ ಮತ್ತು ಮಂಗಳೂರು ರಸಗೊಬ್ಬರ ಕಾರ್ಖಾನೆಗಳು ಗುರುಪುರ ನದಿಯ ಉತ್ತರ ತೀರದಲ್ಲಿ ಇವೆ. ಒಂದಾನೊಂದು ಕಾಲದಲ್ಲಿ ನೇತ್ರಾವತಿ ನದಿಯು ಮಂಗಳೂರು ನಗರದ ದಕ್ಷಿಣ ಗಡಿಯಾಗಿ ಮತ್ತು ಈ ಗುರುಪುರ ನದಿಯು ಮಂಗಳೂರು ನಗರದ ಉತ್ತರದ ಗಡಿಯಾಗಿ ಹರಿಯುತ್ತಿದ್ದವು.ಈಗ ಮಂಗಳೂರು ನಗರ ಈ ಎರಡು ನದಿಗಳ ಗಡಿ ದಾಟಿ ಬೆಳೆದಿದೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಮೂತ್ರನಾಳದ ಸೋಂಕು

ಮೂತ್ರನಾಳದ ಸೋಂಕು

ಹೊಯ್ಸಳ ಸಾಮ್ರಾಜ್ಯ

ಹೊಯ್ಸಳ ಸಾಮ್ರಾಜ್ಯ