in

ಕ್ಷಯ: ಮಾನವನಿಗೆ ಮತ್ತು ಪ್ರಾಣಿಗಳಿಗೆ ಬರುವ ಒಂದು ಮಾರಕ ರೋಗ

ಕ್ಷಯ
ಕ್ಷಯ

ಕ್ಷಯ ಮಾನವನಿಗೆ ಮತ್ತು ಹಲವು ಪ್ರಾಣಿಗಳಿಗೆ ಬರುವ ಒಂದು ಮಾರಕ ರೋಗ. ಈ ರೋಗವು ಮೈಕೊಬ್ಯಾಕ್ಟೀರಿಯಂ ಜಾತಿಯ ಹಲವು ಬ್ಯಾಕ್ಟೀರಿಯಗಳಿಂದ ಬರುತ್ತದೆ. ಪ್ರಮುಖವಾಗಿ ಪುಪ್ಪಸಗಳಿಗೆ ಹಾನಿ ಮಾಡುವ ಈ ರೋಗ ಮುಂದೆ ದೇಹದ ಹಲವು ಅಂಗಾಂಗಗಳ ಮೇಲೆ ತನ್ನ ದುಷ್ಪರಿಣಾಮ ಬೀರುತ್ತದೆ.

ಕ್ಷಯ’ ಮಾನವನಿಗೆ ಅದೇ ರೀತಿ ಹಲವು ಪ್ರಾಣಿಗಳಿಗೆ ಬರುವ ಒಂದು ಮಾರಕ ರೋಗ. ಈ ರೋಗವು ಮೈಕೊ ‘ಬ್ಯಾಕ್ಟೀರಿಯಂ ಟ್ಯೂಬರ್‌ಕ್ಯುಲೋಸಿಸ್’ ಎಂಬ ಬ್ಯಾಕ್ಟೀರಿಯಾದಿಂದ ಉಂಟಾಗುತ್ತದೆ. ಪ್ರಮುಖವಾಗಿ ಪುಪ್ಪಸಗಳಿಗೆ ಹಾನಿ ಮಾಡುವ ಈ ರೋಗವು ದೇಹದ ಅಂಗಾಂಗಗಳ ಮೇಲೆ ಹಲವು ದುಷ್ಪರಿಣಾಮ ಬೀರುತ್ತದೆ.

ಕ್ಷಯ ರೋಗಕ್ಕೆ ಸಮಾರು ನೂರು ವರ್ಷಗಳ ಇತಿಹಾಸವಿದೆ. ಇದು ಸಂಪೂರ್ಣವಾಗಿ ಗುಣಪಡಿಸುಬಹುದಾದ ಕಾಯಿಲೆಯಾಗಿದೆ. ರೋಗಿಯೊಬ್ಬ ಕೆಮ್ಮಿದಾಗ ಕಫದಲ್ಲಿರುವ ರೋಗಾಣುವಿನಿಂದ ಈ ರೋಗ ಹರಡುತ್ತದೆ. ಕಾಯಿಲೆ ಇರುವವರು ಕೆಮ್ಮಿದಾಗ, ಸೀನಿದಾಗ ಅಥವಾ ಉಗುಳಿದಾಗ ತುಂತುರು ಹನಿಗಳ ಮೂಲಕ ಬೇರೊಬ್ಬ ವ್ಯಕ್ತಿಗೆ ರೋಗ ಹರಡಲು ಕಾರಣವಾಗುತ್ತದೆ. ಹೀಗಾಗಿ ಇದು ಗಾಳಿಯ ಮೂಲಕವೂ ಹರಡುತ್ತವೆ.

ಈ ಸೋಂಕು ತಗುಲಿದ ವ್ಯಕ್ತಿಯು ಒಂದು ವರ್ಷದಲ್ಲಿ ಹತ್ತು ಜನರಿಗೆ ಸೋಂಕು ತಗಲಿಸಬಹುದು. ಇದು ಸಾಮಾನ್ಯವಾಗಿ 15ರಿಂದ 45 ವರ್ಷದೊಳಗಿನವರಿಗೆ ಹೆಚ್ಚಾಗಿ ತಗಲುತ್ತವೆ. ಕ್ಷಯರೋಗದ ಪ್ರಮುಖ ಲಕ್ಷ್ಮಣಗಳು- ಕೆಮ್ಮು, ಜ್ವರ, ತೂಕ ಕಡಿಮೆಯಾಗುವುದು, ಅಶಕ್ತತೆ, ಕಫದಲ್ಲಿ ರಕ್ತ, ರಾತ್ರಿಯಲ್ಲಿ ಬೆವರು, ಎದೆನೋವು, ಹಸಿವಾಗದಿರುವುದು. ಎಚ್‌ಐವಿ, ಏಡ್ಸ್ ಮತ್ತು ಮಧುಮೇಹ ರೋಗಿಗಳಿಗೂ ಬೇಗನೇ ಸೋಂಕು ತಗಲುವ ಸಾಧ್ಯತೆ ಹೆಚ್ಚಿವೆ.

ಕ್ಷಯ (ಟಿ.ಬಿ) ರೋಗದ ಹಿನ್ನೆಲೆ :
ಅದು ಮೈಕೊಬ್ಯಾಕ್ಟೀರಿಯಂ ಟುಬರ್ಕುಲೊಸಿಸ್ ಎಂಬ ಏಕಾಣು ಜೀವಿಯಿಂದ ಬರುತ್ತದೆ. ಪದೇಪದೇ ಕೆಮ್ಮು, ಕಫದಲ್ಲಿ ಆಗಾಗ ರಕ್ತ, ತೂಕದ ಸತತ ಇಳಿತ, ಆಗಾಗ ಜ್ವರ, ನಿರಂತರ ಅಶಕ್ತತೆ ಇವು ಅದರ ಮುಖ್ಯ ಲಕ್ಷಣಗಳು. ಹೆಚ್ಚಿನ ರೋಗಿಗಳಿಗೆ ಶ್ವಾಸಕೋಶದ ಟಿ.ಬಿ ಇರುತ್ತದೆ. ಅಪರೂಪಕ್ಕೆ ಮೂಳೆ ಟಿ.ಬಿ, ಸ್ನಾಯು ಟಿ.ಬಿ, ಹಾಲ್ರಸನಾಳದ ಟಿ.ಬಿ ಕೂಡ ಬರಬಹುದು. ಎದೆಯ ಎಕ್ಸ್-ರೇ ಮತ್ತು ಕಫದ ಪರೀಕ್ಷೆಯ ಮೂಲಕ ಶ್ವಾಸಕೋಶದ ಟಿ.ಬಿಯನ್ನು ಸುಲಭವಾಗಿ ಪತ್ತೆ ಮಾಡಬಹುದು. ದಿನಕ್ಕೆ ಮೂರು ಬಾರಿಯಂತೆ ಅತ್ಯಂತ ಕಟ್ಟುನಿಟ್ಟಾಗಿ ಆರುತಿಂಗಳ ಕಾಲ ಔಷಧ ಸೇವಿಸಬೇಕು. ಮಧ್ಯೆ ಒಮ್ಮೆ ತಪ್ಪಿದರೆ ಮತ್ತೆ ಆರಂಭದಿಂದ ಮಾತ್ರೆಗಳ ಸೇವನೆ ಮಾಡಬೇಕು.

ಕ್ಷಯ: ಮಾನವನಿಗೆ ಮತ್ತು ಪ್ರಾಣಿಗಳಿಗೆ ಬರುವ ಒಂದು ಮಾರಕ ರೋಗ
ಕ್ಷಯರೋಗ

ಆದರೂ ಕ್ಷಯರೋಗ ನಿರ್ಮೂಲನೆಯ ಪ್ರಶ್ನೆ ಬಂದಾಗ ಎನ್‌ಡಿಎ ಸರ್ಕಾರಕ್ಕೆ ಬಹುದೊಡ್ಡ ಸವಾಲು ಎದುರಾಗಲಿದೆ. ದನಗಳ ಮೇಲೆ ಪೂಜನೀಯ ಭಾವ, ಕರುಣೆ, ದಯೆದಾಕ್ಷಿಣ್ಯ ಇದ್ದಷ್ಟು ಕಾಲ ಕ್ಷಯರೋಗ ನಿರ್ಮೂಲನ ಸಾಧ್ಯವಿಲ್ಲ. ಏಕೆಂದರೆ ದನಗಳಿಗೆ ಬರುವ ಕ್ಷಯವೇ ಹಾಲಿನ ಡೇರಿಯ ಕೆಲಸಗಾರರಿಗೆ, ಆ ಮೂಲಕ ಮನೆಯವರಿಗೆ, ಅವರ ಮೂಲಕ ಸಮಾಜದ ಇತರರಿಗೆ ಬರುತ್ತದೆ ಎಂಬುದು ಎಂದೋ ಪ್ರಮಾಣಿತವಾಗಿದೆ.

ನಮ್ಮ ಬಹುತೇಕ ಎಲ್ಲರ ಶರೀರದಲ್ಲೂ ಕ್ಷಯದ ಏಕಾಣುಜೀವಿ ಇರುತ್ತದೆ. ಆದರೆ ರೋಗನಿರೋಧಕ ಶಕ್ತಿ ಗಟ್ಟಿ ಇದ್ದರೆ ಆ ರೋಗಾಣುವಿನ ಸುತ್ತ ಪೊರೆ ಕಟ್ಟಿ ಬಂಧಿತವಾಗಿರುತ್ತದೆ. ಬಂಧ ಗಟ್ಟಿಯಾಗಿದ್ದಷ್ಟು ದಿನ ರೋಗದ ಭಯವಿಲ್ಲ. ಸತತ ಧೂಮಪಾನ, ಏಡ್ಸ್ ಅಥವಾ ಕೆಲವರಿಗೆ ಸಕ್ಕರೆ ಕಾಯಿಲೆ ಇದ್ದರೂ ಬಂಧನ ಸಡಿಲವಾಗಿ ರೋಗ ಶರೀರಕ್ಕೆ ಹರಡುತ್ತದೆ. ಶ್ವಾಸದ ಮೂಲಕ, ದೇಹದ್ರವಗಳ ಮೂಲಕ ಆಸುಪಾಸಿನ ಇತರರಿಗೆ ಹರಡುತ್ತದೆ. ನಮ್ಮಲ್ಲಿ ರೋಗದ ಬಗೆಗಿನ ಅಜ್ಞಾನ, ಔಷಧ ಸೇವನೆಯಲ್ಲಿ ಅಶಿಸ್ತು, ಕಂಡಲ್ಲಿ ಉಗುಳುವ ಅಭ್ಯಾಸ ಈ ಎಲ್ಲ ಕಾರಣದಿಂದಾಗಿ ರೋಗನಿಯಂತ್ರಣ ದುಸ್ತರವಾಗಿದೆ. ಅಂದಾಜಿನ ಪ್ರಕಾರ, ಸುಮಾರು 22 ಲಕ್ಷ ರೋಗಿಗಳು ನಮ್ಮಲ್ಲಿದ್ದು ಪ್ರತಿ ದಿನವೂ ಸರಾಸರಿ 960 ಜನರು, ಪ್ರತಿ ಗಂಟೆಗೆ 90 ಜನ ಈ ಕಾಯಿಲೆಯಿಂದ ಸಾಯುತ್ತಿದ್ದಾರೆ. ಯಾವ ಔಷಧವೂ ನಾಟದಂಥ ಹೊಸ ಹೊಸ ಕ್ಷಯತಳಿಗಳು ಸೃಷ್ಟಿ ಆಗುತ್ತಿರುವುದರಿಂದ ರೋಗ ನಿಯಂತ್ರಣ ವರ್ಷವರ್ಷಕ್ಕೆ ಕಠಿಣವಾಗುತ್ತ ಹೋಗುತ್ತಿದೆ.

ಕ್ಷಯರೋಗದ ಲಕ್ಷ್ಮಣಗಳು ಕಂಡುಬಂದಲ್ಲಿ ತಾತ್ಸಾರ ಮಾಡದೆ ಕೂಡಲೇ ಅರ್ಹ ವೈದ್ಯರಿಂದ ಚಿಕಿತ್ಸೆ ಪಡೆಯಬೇಕು. ಸೂಕ್ತ ಚಿಕಿತ್ಸೆ ಪಡೆಯದಿದ್ದಲ್ಲಿ ರೋಗ ಮತ್ತಷ್ಟು ಮಾರಕವಾಗುವ ಸಾಧ್ಯತೆ ಹೆಚ್ಚಿದೆ. ಸರಿಯಾದ ಚಿಕಿತ್ಸೆ ಪಡೆಯದಿದ್ದರೆ ಶ್ವಾಸಕೋಶ, ಮೆದುಳು, ಬೆನ್ನಮೂಳೆ ಭಾಗಗಳಿಗೆ ಹಾನಿಕಾರಕವಾಗುತ್ತದೆ. ಹಾಗಾಗಿ ರೋಗವನ್ನು ಯಾವುದೇ ಹಂತದಲ್ಲಿಯೂ ಕಡೆಗಣಿಸಬಾರದು.

ಕ್ಷಯ: ಮಾನವನಿಗೆ ಮತ್ತು ಪ್ರಾಣಿಗಳಿಗೆ ಬರುವ ಒಂದು ಮಾರಕ ರೋಗ
ಎದೆಯ ಎಕ್ಸ್‌ರೇ

ಪೌಷ್ಠಿಕ ಆಹಾರ ಕೊರತೆಯಿಂದಾಗಿ ದೇಹದ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತದೆ. ಇದ್ದರಿಂದ ರೋಗಾಣುಗಳು ಬೇಗನೇ ದೇಹವನ್ನು ಆಕ್ರಮಿಸುಕೊಳ್ಳುತ್ತವೆ.

ಕೆಮ್ಮು, ಜ್ವರ, ತೂಕ ಕಡಿಮೆಯಾಗುವುದು, ಅಶಕ್ತತೆ, ಕಫದಲ್ಲಿ ರಕ್ತ, ರಾತ್ರಿಯಲ್ಲಿ ಬೆವರು, ಎದೆನೋವು, ಹಸಿವಾಗದಿರುವುದು.

ಕಫ ಪರೀಕ್ಷೆ, ಎಕ್ಸ್‌ರೇ ಮತ್ತು ರಕ್ತ ಪರೀಕ್ಷೆಯಿಂದಲೂ ರೋಗವನ್ನು ನಿರ್ಧರಿಸಬಹುದಾಗಿದೆ.

ರೋಗ ಪರಿಹಾರಕ್ಕಾಗಿ ಔಷಧಿಗಳು :
ರಿಫಾಂಪಿಸಿಸ್, ಇತ್ಯಾಂಬ್ಯುಟಾಲ್ ಮತ್ತು ಐಸೊನೆಕ್ಸ್‌ಗಳಂತಹ ಔಷಧಗಳಿಂದ ಈ ರೋಗ ವಾಸಿಯಾಗುತ್ತದೆ. ಈಗ ಡಾಟ್ಸ್ ಚಿಕಿತ್ಸಾ ವಿಧಾನದಲ್ಲಿ ಪರಿಣಾಮಕಾರಿ ಐದು ಔಷಧಿಗಳಿದ್ದು, ಕನಿಷ್ಠ 6 ತಿಂಗಳು ತಪ್ಪದೆ ಸೇವಿಸಬೇಕು.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಚಿಪ್ಕೊ ಚಳುವಳಿ

ಚಿಪ್ಕೊ ಚಳುವಳಿ/ ಅಪ್ಪಿಕೋ ಚಳುವಳಿ

ಅರಿಸ್ಟಾಟಲ್‌

ಅಲೆಕ್ಸಾಂಡರ್ನ ಗುರುವಾಗಿದ್ದ ಅರಿಸ್ಟಾಟಲ್‌