in ,

ಸಿಗಡಿ ಕೃಷಿ: ಜಲಚರಗಳನ್ನು ಸಾಕುವ ಉದ್ಯಮ

ಸಿಗಡಿ ಕೃಷಿ
ಸಿಗಡಿ ಕೃಷಿ

ಸಿಗಡಿ ಕೃಷಿಯು ಜಲಚರಗಳನ್ನು ಸಾಕುವ ಉದ್ಯಮವಾಗಿದ್ದು ಇದರಲ್ಲಿ ಸಮುದ್ರದ ಸಿಗಡಿಯನ್ನು ಅಥವಾ ಸಿಹಿನೀರಿನ ಸಿಗಡಿಗಳನ್ನು ಮನುಷ್ಯನ ಆಹಾರಕ್ಕಾಗಿ ಸಾಕುತ್ತಾರೆ. ೧೯೭೧ರ ದಶಕದಲ್ಲಿ ವಾಣಿಜ್ಯಕ ಸಿಗಡಿ ಸಾಕಣೆ ಆರಂಭವಾಯಿತು ಮತ್ತು ತೀವ್ರವಾಗಿ ಅದರ ಉತ್ಪಾದನೆ ಹೆಚ್ಚಿತು. ನಿರ್ದಿಷ್ಟವಾಗಿ ಅಮೆರಿಕ ಸಂಯುಕ್ತ ಸಂಸ್ಥಾನ, ಜಪಾನ್ ಮತ್ತು ಪಶ್ಚಿಮ ಯುರೋಪ್ಗಳಿಗೆ ಸೇವೆಯನ್ನು ಒದಗಿಸುವುದು ಇದರ ಉದ್ದೇಶ. ಕೃಷಿ ಮಾಡಿದ ಸಿಗಡಿಯ ಜಾಗತಿಕ ಉತ್ಪಾದನೆ ೨೦೦೩ರಲ್ಲಿ ೧.೬ ದಶಲಕ್ಷ ಟನ್ ಗಳಿಗೂ ಹೆಚ್ಚಿಗೆ ಆಗಿತ್ತು. ಇದರ ಮೌಲ್ಯ ಸುಮಾರು 9 ಶತಕೋಟಿ ಅಮೆರಿಕದ ಡಾಲರ್‌ಗಳು. ಕೃಷಿ ಮಾಡಿದ ಸಿಗಡಿಗಳ ಪೈಕಿ ೭೫% ರಷ್ಟು ಭಾಗವು ಏಷ್ಯಾದಲ್ಲಿ, ಅದರಲ್ಲೂ ನಿರ್ದಿಷ್ಟವಾಗಿ ಚೀನಾ ಹಾಗೂ ಥೈಲೆಂಡ್ನಲ್ಲಿ ಉತ್ಪಾದನೆಯಾಗುತ್ತದೆ. ಉಳಿದ ಶೇ.೨೫ ಭಾಗವು ಲ್ಯಾಟಿನ್ ಅಮೆರಿಕದಿಂದ ಬರುವುದು. ಇದರಲ್ಲಿ ಬ್ರಾಝಿಲ್ ಅತಿ ಹೆಚ್ಚು ಉತ್ಪಾದಕ ದೇಶವಾಗಿದೆ. ಥೈಲ್ಯಾಂಡ್ ಅತಿ ದೊಡ್ಡ ರಫ್ತು ಮಾಡುವ ದೇಶವಾಗಿದೆ.

ಆಗ್ನೇಯ ಏಷಿಯಾದಲ್ಲಿ ಸಿಗಡಿ ಕೃಷಿಯು ಸಾಂಪ್ರದಾಯಿಕ ಸಣ್ಣ ಪ್ರಮಾಣದ ಉದ್ದಿಮೆಯಾಗಿ ಆರಂಭವಾಗಿ ಜಾಗತಿಕ ಉದ್ದಿಮೆಯೆನ್ನುವ ಮಟ್ಟಕ್ಕೆ ಬೆಳೆದಿದೆ. ತಾಂತ್ರಿಕ ಮುನ್ನಡೆಗಳು ಸಿಗಡಿ ಬೆಳೆಯುವುದನ್ನು ಹೊಸ ಎತ್ತರಕ್ಕೆ ಮುಟ್ಟಿಸಿವೆ. ಮರಿಗಳ ಸಂಗ್ರಹಗಳನ್ನು ಜಗತ್ತಿನ ಎಲ್ಲೆಡೆ ಸಮುದ್ರಮಾರ್ಗದಲ್ಲಿ ಕಳುಹಿಸುತ್ತಾರೆ. ವಸ್ತುತಃ ಕೃಷಿ ಮಾಡಿದ ಎಲ್ಲ ಸಿಗಡಿಗಳು ಪೆನೇಯೀಡ್ಗಳಾಗಿವೆ ಅಂದರೆ, ಪೆನೇಯೀಡೇ ವಂಶಕ್ಕೆ ಸೇರಿದ ಸೀಗಡಿಗಳಾಗಿವೆ ಮತ್ತು ಸಿಗಡಿಯ ಕೇವಲ ಎರಡು ಜಾತಿಗಳು ಅಂದರೆ ಪೆನೇಯಸ್‌ ವನ್ನಾಮೀ ಪೆಸಿಫಿಕ್‌ ಬಿಳಿ ಸಿಗಡಿ ಹಾಗೂ ಪೆನೇಯಸ್‌ ಮೊನೊಡಾನ್‌, ದೈತ್ಯ ಹುಲಿ ಸಿಗಡಿ ಸಾಕಲ್ಪಟ್ಟ ಉಳಿದೆಲ್ಲಾ ಸಿಗಡಿಗಳ ಪೈಕಿ ಸ್ಥೂಲವಾಗಿ ಇದು ೮೦%ನಷ್ಟು ಭಾಗವನ್ನು ಆಕ್ರಮಿಸಿಕೊಳ್ಳುತ್ತವೆ. ಈ ಔದ್ಯಮಿಕ ಏಕ ಫಸಲಿನವು ರೋಗಗಳಿಗೆ ತುತ್ತಾಗುವುದು ಬೇಗ. ಇದು ಸಾಕಿದ ಸಿಗಡಿಯ ಪ್ರಮಾಣದಲ್ಲಿ ಅನೇಕ ಪ್ರಾದೇಶಿಕ ಸಮೂಹ ನಾಶಕ್ಕೆ ಕಾರಣವಾಗಿದೆ. ಹೆಚ್ಚುತ್ತಲೇ ಇರುವ ಪಾರಿಸರಿಕ ಸಮಸ್ಯೆಗಳು,ಮೇಲಿಂದಮೇಲೆ ಬಂದ ರೋಗಗಳು ಮತ್ತು ಒತ್ತಡವಷ್ಟೇ ಅಲ್ಲದೇ NGOಗಳು ಮತ್ತು ಬಳಕೆದಾರ ದೇಶಗಳಿಂದ ಬರುವ ಟೀಕೆಯು ೧೯೯೦ರ ದಶಕದ ಅಂತ್ಯದ ವೇಳೆಗೆ ಉದ್ಯಮದಲ್ಲಿನ ಬದಲಾವಣೆಗಳಿಗೆ ಮತ್ತು ಸರ್ಕಾರವು ಕಠಿಣವಾದ ನಿಯಮಗಳನ್ನು ರೂಪಿಸುವುದಕ್ಕೆ ಕಾರಣವಾದವು. ೧೯೯೯ರಲ್ಲಿ ಹೆಚ್ಚುಕಾಲ ತಾಳಿಕೆ ಬರುವ ಸಾಕಾಣಿಕೆ ಪದ್ಧತಿಯನ್ನು ಪ್ರಾರಂಭಿಸುವುದನ್ನು ಅಭಿವೃದ್ಧಿಪಡಿಸಲು ಮತ್ತು ಪ್ರೋತ್ಸಾಹಿಸಲು ಸರ್ಕಾರದ ಸಂಸ್ಥೆಗಳು, ಉದ್ಯಮಗಳ ಪ್ರತಿನಿಧಿಗಳು ಮತ್ತು ಪರಿಸರ ಸಂಘಟನೆಗಳು ಕ್ರಮಗಳನ್ನು ಆರಂಭಿಸಿದವು.

ಸಿಗಡಿ ಕೃಷಿ: ಜಲಚರಗಳನ್ನು ಸಾಕುವ ಉದ್ಯಮ
ಸಿಗಡಿ ಕೃಷಿ

ಕಡಿಮೆ ಸಾಂದ್ರತೆಯ ಸಾಂಪ್ರದಾಯಿಕ ಪದ್ಧತಿಯನ್ನು ಬಳಸುವ ಮೂಲಕ ಇಂಡೋನೇಶಿಯಾದವರು ಮತ್ತು ಇತರರು ಶತಮಾನಗಳಿಂದ ಸಿಗಡಿ ಕೃಷಿಯನ್ನು ಮಾಡುತ್ತ ಬಂದಿದ್ದಾರೆ. ತಂಬಾಕ್ಸ್ ಎಂದು ಕರೆಯಲಾಗುವ ಇಂಡೋನೇಶಿಯಾದ ಉಪ್ಪುನೀರಿನ ಹೊಂಡಗಳನ್ನು ೧೫ನೆ ಶತಮಾನದಷ್ಟು ಹಿಂದೆಯೇ ಗುರುತಿಸಬಹುದು. ಅವರು ಸಣ್ಣ ಪ್ರಮಾಣದ ಹೊಂಡಗಳನ್ನು ಏಕಫಸಲಿಗೆ ಅಥವಾ ಬಹು ಫಸಲಿಗೆ ಮಿಲ್ಕ್ಶ್ ಮೊದಲಾದ ಜಾತಿಗಳ ಜೊತೆಯಲ್ಲಿ ಬಳಸುತ್ತಿದ್ದರು. ಅಥವಾ ಬತ್ತದ ಜೊತೆ ಆವರ್ತದಲ್ಲಿ ಒಣ ಶ್ರಾಯದಲ್ಲಿ ಸಿಗಡಿ ಕೃಷಿಗೆ ಬತ್ತದ ಗಿಡಗಳನ್ನು ಬಳಸಿಕೊಳ್ಳುತ್ತಿದ್ದರು. ರೊನ್ಬಾಕ್, ಇಂಥ ಕೃಷಿಯು ಕರಾವಳಿ ಪ್ರದೇಶದಲ್ಲಿ ಅಥವಾ ನದಿ ದಂಡೆಯಲ್ಲಿ ಹೆಚ್ಚಾಗಿ ಕಾಣಬರುತ್ತಿದ್ದವು. ಮ್ಯಾಂಗ್ರೋವ್ ಪ್ರದೇಶವು ಹೇಳಿಮಾಡಿಸಿದಂತಿತ್ತು. ಮತ್ತು ದೊಡ್ಡ ಪ್ರಮಾಣದಲ್ಲಿ ಲಭ್ಯ ವಿರುವ ಕಾರಣಕ್ಕಾಗಿ ನೈಸರ್ಗಿಕ ಸಿಗಡಿಗೆ ಅನುಕೂಲವಾಗಿತ್ತು. ನೈಸರ್ಗಿಕವಾಗಿ ಲಭ್ಯವಿದ್ದ ಎಳೆಯ ಸಿಗಡಿಯನ್ನು ಹೊಂಡಗಳಲ್ಲಿ ಹಿಡಿಯುತ್ತಾರೆ ಮತ್ತು ನೈಸರ್ಗಿಕವಾಗಿ ಸಾವಯವರೂಪದಲ್ಲಿ ಸಿದ್ಧಗೊಂಡ ನೀರಿನಲ್ಲಿ ಅವು ನಾವು ಕೃಷಿಗೆ ಉದ್ದೇಶಪಟ್ಟ ಪ್ರಮಾಣದಲ್ಲಿ ಬೆಳೆಯುವವರೆಗೆ ಬಿಡುತ್ತಾರೆ.

ಔದ್ಯಮಿಕ ಸಿಗಡಿ ಕೃಷಿಯು ೧೯೩೦ರ ಸುಮಾರಿಗೆ ಕಂಡು ಬಂದಿದೆ. ಆಗ ಜಪಾನ ದೇಶದ ಕೃಷಿಕರು ಕುರುಮ ಸಿಗಡಿ, ಪೆನಾಯಸ್ ಜಪೋನಿಕಾಸ್ ್ಗಳನ್ನು ಮೊದಲಬಾರಿಗೆ ಬೆಳೆದರು. 1960ರ ವೇಳೆಗೆ ಜಪಾನದಲ್ಲಿ ಒಂದು ಚಿಕ್ಕ ಉದ್ದಿಮೆ ಬೆಳೆಯಿತು. ವಾಣಿಜ್ಯಕ ಸಿಗಡಿ ಕೃಷಿ ೧೯೬೦ರ ದಶಕದ ಕೊನೆಯಲ್ಲಿ ಮತ್ತು ೧೯೭೦ರ ದಶಕದ ಆರಂಭದಲ್ಲಿ ತ್ವರಿತವಾಗಿ ಬೆಳವಣಿಗೆ ಕಂಡಿತು. ತಂತ್ರಜ್ಞಾನದಲ್ಲಿ ಆದ ಬೆಳವಣಿಗೆಯು ಅಧಿಕೋತ್ಪತ್ತಿಯ ಸ್ವರೂಪದ ಕೃಷಿಗೆ ದಾರಿ ಮಾಡಿತು.

ಮಾರುಕಟ್ಟೆಯಲ್ಲಿಯ ಬೇಡಿಕೆಯು ಜಗತ್ತಿನಾದ್ಯಂತ ಸಿಗಡಿ ಕೃಷಿ ಪ್ರಸಾರಗೊಳ್ಳುವುದಕ್ಕೆ ಕಾರಣವಾಯಿತು. ಇದು ಉಷ್ಣವಲಯ ಮತ್ತು ಸಮಶೀತೋಷ್ಣ ವಲಯದಲ್ಲಿ ಕೇಂದ್ರೀಕೃತವಾಯಿತು. 1980ರ ದಶಕದ ಆರಂಭದಲ್ಲಿ ವನ್ಯಜೀವಿಗಳನ್ನು ಹಿಡಿಯುವುದಕ್ಕೆ ತಡೆಯಾದಾಗ ಸಿಗಡಿಗೆ ಗ್ರಾಹಕರ ಬೇಡಿಕೆಯು ಹೆಚ್ಚಿದ್ದರಿಂದ ಉದ್ಯಮದಲ್ಲಿ ಏಳಿಗೆ ಉಂಟಾಯಿತು. ತೈವಾನ್ ಇದನ್ನು ಮೊದಲು ಸ್ವೀಕರಿಸಿದ್ದು ಮತ್ತು 1980ರ ದಶಕದಲ್ಲಿ ಅದು ಉತ್ಪಾದಕ ದೇಶವಾಗಿತ್ತು; ಇದರ ಉತ್ಪಾದನೆ 1988ರಲ್ಲಿ ಕುಸಿಯಿತು. ಇದಕ್ಕೆ ಕಾರಣ ಕಳಪೆ ನಿರ್ವಹಣೆ ಪದ್ಧತಿಗಳು ಮತ್ತು ರೋಗಗಳು.

ಥೈಲ್ಯಾಂಡಿನಲ್ಲಿ, ದೊಡ್ಡ ಪ್ರಮಾಣದ ಉತ್ಪಾದನೆಯನ್ನು 1985ರಿಂದ ತ್ವರಿತವಾಗಿ ವಿಸ್ತರಿಸಲಾಯಿತು. ದಕ್ಷಿಣ ಅಮೆರಿಕದಲ್ಲಿ, ಈಕ್ವೆಡೋರ್ ಸಿಗಡಿ ಕೃಷಿಯಲ್ಲಿ ಮುಂಚೂಣಿಯಲ್ಲಿದೆ. ಇದು 1978ರಿಂದ ನಾಟಕೀಯವೆನ್ನುವಂತೆ ವಿಸ್ತರಣೆಯಾಯಿತು. ಬ್ರೆಝಿಲ್ 1974ರಿಂದ ಸಿಗಡಿ ಕೃಷಿಯಲ್ಲಿ ಸಕ್ರಿಯವಾಗಿದೆ. ಆದರೆ ಅಲ್ಲಿ ವ್ಯಾಪಾರವು ಉಚ್ಛ್ರಾಯಕ್ಕೆ ಬಂದದ್ದು 1990ರ ದಶಕದಲ್ಲಿಯೇ. ಕೆಲವೇ ವರ್ಷಗಳಲ್ಲಿಯೇ ಅದು ಪ್ರಮುಖ ಸಿಗಡಿ ಉತ್ಪಾದಕ ರಾಷ್ಟ್ರವಾಯಿತು. ಇಂದು ಐವತ್ತಕ್ಕೂ ಹೆಚ್ಚು ದೇಶಗಳಲ್ಲಿ ಸಮುದ್ರ ಸಿಗಡಿ ಕೃಷಿಯು ಇದೆ.

ಸಿಗಡಿ ಕೃಷಿಯು ಹೆಚ್ಚುತ್ತಿರುವ ಬೇಡಿಕೆಯನ್ನು ತಣಿಸುವ ಪ್ರಮಾಣಕ್ಕೆ ಬೆಳೆದು ನಿಂತಾಗ ನೈಸರ್ಗಿಕವಾಗಿ ದೊರೆಯುವ ಮೀನುಗಳ ಸಾಮರ್ಥ್ಯವನ್ನು ದಾಟಿ ಅದು ಮುನ್ನಡೆಯಿತು. ಜಾಗತಿಕ ಮಾರುಕಟ್ಟೆಗೆ ಸೇವೆಯನ್ನು ಒದಗಿಸಲು ಹಳೆಯದಾದ ಜೀವಮಾತ್ರ ಹಿಡಿದುಕೊಂಡಿದ್ದ ಸಾಕಾಣಿಕೆ ಪದ್ಧತಿಯು ಬದಲಾಗಿ ಆಧುನಿಕವಾದ ಹೆಚ್ಚು ಉತ್ಪಾದಕತೆಯ ಪದ್ಧತಿಯು ಅಗತ್ಯವಾಯಿತು. ಔದ್ಯಮಿಕ ಸಾಕಾಣಿಕೆಯು ಮೊದಲು ಸಾಂಪ್ರದಾಯಿಕ ಪದ್ಧತಿಗಳನ್ನೇ ಅನುಸರಿಸಿತು. ಅದನ್ನೇ “ಅತ್ಯಧಿಕ” ಸಾಕಣೆ ಕೇಂದ್ರಗಳು ಎನ್ನುವುದು. ಇದರಲ್ಲಿ ದೊಡ್ಡ ಪ್ರಮಾಣದ ಹೊಂಡಗಳಲ್ಲಿ ಕಡಿಮೆ ಸಾಂದ್ರತೆಯ ಸಾಕಾಣಿಕೆ; ಕೆಲವೇ ಹೆಕ್ಟೇರುಗಳ ಹೊಂಡಗಳ ಬದಲಿಗೆ ಹೊಂಡಗಳ ಪ್ರಮಾಣ ದೊಡ್ಡದಾಯಿತು. ಕೆಲವು ಪ್ರದೇಶಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಮ್ಯಾಂಗ್ರೋವಗಳನ್ನು ತೆಗೆದುಹಾಕಲಾಯಿತು.

ತಂತ್ರಜ್ಞಾನ ಮುಂದುವರಿಕೆಯು ಹೆಚ್ಚು ತೀವ್ರವಾದ ಪದ್ಧತಿಗಳನ್ನು ಸಾಧ್ಯವಾಗಿಸಿ ಪ್ರತಿ ಕ್ಷೇತ್ರದ ಇಳುವರಿ ಪ್ರಮಾಣವನ್ನು ಹೆಚ್ಚಿಸಿದವು, ಇದರಿಂದ ಹೆಚ್ಚು ಭೂಮಿಯನ್ನು ಪರಿವರ್ತಿಸಬೇಕಾದ ಒತ್ತಡವನ್ನು ಕಡಿಮೆ ಮಾಡುವುದಕ್ಕೆ ಸಹಕಾರಿಯಾಯಿತು. ಅರೆ-ತೀವ್ರತೆಯ ಮತ್ತು ತೀವ್ರತೆಯ ಸಾಕಣೆ ಕೇಂದ್ರಗಳು ತಲೆಎತ್ತಿದವು. ಅಲ್ಲಿ ಸಿಗಡಿಯನ್ನು ಕೃತಕ ಆಹಾರವನ್ನು ನೀಡಿ ಬೆಳೆಸಲಾಯಿತು ಮತ್ತು ಹೊಂಡಗಳನ್ನು ಕ್ರಿಯಾಶೀಲವಾಗಿ ನಿರ್ವಹಿಸಲಾಯಿತು. ಹೀಗಿದ್ದರೂ ಅನೇಕ ದೊಡ್ಡ ಪ್ರಮಾಣದ ಸಾಕಣೆ ಕೇಂದ್ರಗಳು ಉಳಿದುಬಿಟ್ಟವು, ಹೊಸ ಸಾಕಣೆ ಕೇಂದ್ರಗಳು ಅರೆ ತೀವ್ರತೆಯ ಮಾದರಿಯಲ್ಲಿ ಇದ್ದವು.

1980ರ ದಶಕದ ಮಧ್ಯದ ವೇಳೆಗೆ ಬಹುತೇಕ ಸಾಕಣೆ ಕೇಂದ್ರಗಳು ‘ಪೋಸ್ಟ್್ಲಾರ್ವೆ’ ಎಂದು ಕರೆಯಲಾಗುವ ಯುವ ನಿಸರ್ಗಸಹಜವಾದ ಸೀಗಡಿಗಳಿಂದ ತುಂಬಿಕೊಂಡಿತು. ಇದು ಸ್ಥಳೀಯವಾಗಿಯೇ ಹಿಡಿದವುಗಳ ಮಾದರಿಯಲ್ಲಿದ್ದವು. ಪೋಸ್ಟ್ ನಾರ್ವೆ ಮೀನುಗಾರಿಕೆಯು ಅನೇಕ ದೇಶಗಳಲ್ಲಿ ಒಂದು ಮಹತ್ವದ ಆರ್ಥಿಕ ವಿಭಾಗವಾಗಿಬಿಟ್ಟಿದೆ. ಮೀನುಗಾರಿಕೆಯ ನೆಲೆಗಳು ಬರಿದಾಗುವುದನ್ನು ತಡೆಯುವ ಕ್ರಮವಾಗಿ ಮತ್ತು ಬಲಿಷ್ಠವಾದ ಸಿಗಡಿಗಳ ಪೂರೈಕೆ ನಿರಂತವಾಗಿರುವುದನ್ನು ಖಚಿತಪಡಿಸುವುದಕ್ಕಾಗಿ ಉದ್ಯಮವು ಸಿಗಡಿಯ ಮರಿಗಳ ತಯಾರಿಕೆಯನ್ನು ಮೊಟ್ಟೆಕೇಂದ್ರಗಳಲ್ಲಿ ಮಾಡಿದವು.

ಸಿಗಡಿ ಕೃಷಿ: ಜಲಚರಗಳನ್ನು ಸಾಕುವ ಉದ್ಯಮ
ಸೀಗಡಿಗಳು

ಸಿಗಡಿಗಳು ಬೆಳೆಯುವುದು ಮತ್ತು ಮರಿಯಾಗುವುದು ಸಮುದ್ರದ ಸಹಜ ವಾಸಸ್ಥಳದಲ್ಲಿ ಮಾತ್ರ. ಹೆಣ್ಣು ಸೀಗಡಿಗಳು 50,000 ದಿಂದ ಹತ್ತು ಲಕ್ಷ ಮೊಟ್ಟೆಗಳನ್ನು ಇಡುತ್ತವೆ. ಇವು 24 ಗಂಟೆಗಳಲ್ಲಿಯೇ ಚಿಕಣಿಯಾಕಾರದ ನುಪ್ಲೀಗಳಾಗುತ್ತವೆ. ಈ ನುಪ್ಲೀಗಳು ತಮ್ಮ ಶರೀರದೊಳಗಿರುವ ಮೊಟ್ಟೆಯೊಳಗಿನ ಹಳದಿ ಲೋಳೆ ಸಂಗ್ರಹವನ್ನು ಆಹಾರವನ್ನಾಗಿ ಪಡೆಯುತ್ತವೆ. ಮತ್ತು ನಂತರ ಅವು ಝೋಯೆಗಳಾಗಿ ರೂಪಾಂತರಗೊಳ್ಳುತ್ತವೆ. ಸಿಗಡಿಯು ತನ್ನ ಈ ಎರಡನೆ ಲಾರ್ವಾ ಹಂತದಲ್ಲಿ ಅಳಗೆಯಲ್ಲಿ ನಿಸರ್ಗಸಹಜವಾಗಿಯೇ ಆಹಾರವನ್ನು ಪಡೆಯುತ್ತದೆ ಮತ್ತು ಕೆಲವು ದಿನಗಳ ಬಳಿಕ ಮೀಸೆಸ್್ಗಳಾಗಿ ರೂಪಾಂತರವನ್ನು ಹೊಂದುತ್ತವೆ. ಈ ಮೀಸೆಸ್ಗಳು ಚಿಕಣಿ ಸಿಗಡಿಗಳ ರೀತಿಯೇ ಇರುತ್ತವೆ.

ಅಳಗೆಯಲ್ಲಿ ಮತ್ತು ಝೂಪ್ಲಾಂಕ್ಟಾನ್ನಲ್ಲಿ ಅದು ಪೋಷಣೆಯನ್ನು ಪಡೆಯುತ್ತದೆ. ಇನ್ನೊಂದು ಮೂರು ನಾಲ್ಕು ದಿನಗಳಲ್ಲಿ ಅವು ಲಾರ್ವಾ ನಂತರದ ಸ್ಥಿತಿಗೆ ರೂಪಾಂತರವನ್ನು ಪಡೆಯುತ್ತವೆ. ಮರಿ ಸಿಗಡಿಯು ದೊಡ್ಡದ್ದರ ಎಲ್ಲ ಲಕ್ಷಣಗಳನ್ನು ಹೊಂದಿರುತ್ತದೆ. ಮೊಟ್ಟೆಯು ಮರಿಯಾಗುವ ಒಟ್ಟೂ ಪ್ರಕ್ರಿಯೆಯು ಸುಮಾರು 12 ದಿನಗಳನ್ನು ತೆಗೆದುಕೊಳ್ಳುತ್ತದೆ. ನೈಸರ್ಗಿಕವಾಗಿ, ಲಾರ್ವಾ ನಂತರದ ಸ್ಥಿತಿಯಲ್ಲಿ ನದೀಮುಖ ಪ್ರದೇಶಕ್ಕೆ ವಲಸೆ ಹೋಗುತ್ತವೆ. ಇವು ಪೋಷಕಾಂಶದಲ್ಲಿ ಸಮೃದ್ಧವಾಗಿರುತ್ತವೆ ಮತ್ತು ಲವಣಾಂಶ ಇಲ್ಲಿ ಕಡಿಮೆ ಇರುತ್ತದೆ. ಬೆಳವಣಿಗೆಯ ಬಳಿಕ ಅವು ಮುಕ್ತ ನೀರಿಗೆ ವಲಸೆ ಹೋಗುತ್ತವೆ. ಪ್ರಾಯದ ಸಿಗಡಿಗಳು ಜಲತಳ ಜೀವಿ ಪ್ರಾಣಿಗಳು, ಮುಖ್ಯವಾಗಿ ಇವು ಸಾಗರದ ತಳದಲ್ಲಿ ಇರುತ್ತವೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಭಗವತಿ ಚರಣ್ ವೋಹ್ರಾ

ಭಾರತೀಯ ಮಾರ್ಕ್ಸ್‌ವಾದಿ ಕ್ರಾಂತಿಕಾರಿ : ಭಗವತಿ ಚರಣ್ ವೋಹ್ರಾ

ಪೂತನಿ

ಹಿಂದಿನ ಜನ್ಮದಲ್ಲಿ ರಾಕ್ಷಸ ರಾಜ ಬಲಿಯ ಮಗಳಾಗಿದ್ದಳು ಪೂತನಿ