in ,

ಆಯಾಸ, ಸುಸ್ತು ಇದ್ದರೆ ಸ್ವಲ್ಪ ಈ ಪದ್ಧತಿಗಳನ್ನು ಅನುಸರಿಸಿ

ಆಯಾಸ, ಸುಸ್ತು ಇದ್ದರೆ ಸ್ವಲ್ಪ ಈ ಪದ್ಧತಿಗಳನ್ನು ಅನುಸರಿಸಿ
ಆಯಾಸ, ಸುಸ್ತು ಇದ್ದರೆ ಸ್ವಲ್ಪ ಈ ಪದ್ಧತಿಗಳನ್ನು ಅನುಸರಿಸಿ

ಆಯಾಸವು ಅನೇಕ ದೈಹಿಕ ಮತ್ತು ಮಾನಸಿಕ ಕಾಯಿಲೆಗಳ ಲಕ್ಷಣವಾಗಿದೆ. ‘ತುಂಬಾ ಸುಸ್ತು, ಏನು ಮಾಡಲೂ ಆಗುತ್ತಿಲ್ಲ’. ಇದು ವೈದ್ಯಕೀಯ ಕ್ಷೇತ್ರದಲ್ಲಿ ರೋಗಿಗಳಿಂದ ಕೇಳಿ ಬರುವ ಅತಿ ಸಾಮಾನ್ಯ ತೊಂದರೆಗಳಲ್ಲಿ‌ ಒಂದು. 

ಜಾಸ್ತಿ ದೈಹಿಕ ವ್ಯಾಯಾಮ ಹಾಗೂ ಕೆಲವು ಜೀವನ ಕ್ರಮಗಳಾದ ತಡವಾಗಿ ನಿದ್ರೆ ಮಾಡುವುದು, ಜಾಸ್ತಿ ಕೆಫೀನ್ ಇರುವ ಪದಾರ್ಥಗಳ ಸೇವನೆ, ವಿಪರೀತ ಮದ್ಯಸೇವನೆ, ಜಾಸ್ತಿ ಸಿಹಿ ಹಾಗೂ ಕೊಬ್ಬಿನಂಶವಿರುವ ಆಹಾರಸೇವನೆಗಳಿಂದ ಸುತ್ತು ಕಾಣಿಸಿಕೊಳ್ಳಬಹುದು. ಗರ್ಭಿಣಿಯರಲ್ಲಿ ಹಾಗೂ ಎದೆಹಾಲು ಉಣಿಸುವ ತಾಯಂದಿರಲ್ಲೂ ಆಯಾಸ ಕಂಡುಬರಬಹುದು. ಇವೆಲ್ಲ ಸಂದರ್ಭಗಳಲ್ಲಿ ಉಂಟಾಗುವ ಆಯಾಸವು ವಿಶ್ರಾಂತಿಯನ್ನು ಪಡೆದ ಬಳಿಕ ಅಥವಾ ನಿದ್ರೆಯ ಬಳಿಕ ಇಲ್ಲವಾಗುತ್ತದೆ.

ಇನ್ನು ಬೇಸಿಗೆ ಸಮಯದಲ್ಲಿ ದೇಹದಿಂದ ಅತಿಹೆಚ್ಚಿನ ಪ್ರಮಾಣದಲ್ಲಿ ಬೆವರು ಹರಿದು ಬರುವುದರಿಂದ ದೇಹದಲ್ಲಿ ಎಲೆಕ್ಟ್ರೋಲೈಟ್ ಅಂಶಗಳ ಕೊರತೆ ಉಂಟಾಗುತ್ತದೆ. ಇದೇ ಕಾರಣಕ್ಕೆ ದೇಹಕ್ಕೆ ಪದೇ ಪದೇ ಸುಸ್ತು, ಆಯಾಸ, ಕೆಲವೊಮ್ಮೆ ಮೈಕೈ ನೋವು, ಮಾಂಸಖಂಡಗಳ ಸೆಳೆತ ಈ ರೀತಿಯ ಎಲ್ಲಾ ಸಮಸ್ಯೆಗಳು ಕಾಡಲು ಶುರುವಾಗಿ ಬಿಡುತ್ತದೆ.

ಆಯಾಸ, ಸುಸ್ತು ಇದ್ದರೆ ಸ್ವಲ್ಪ ಈ ಪದ್ಧತಿಗಳನ್ನು ಅನುಸರಿಸಿ
ಈರುಳ್ಳಿಯ ಹೂವು

ಈರುಳ್ಳಿಯ ಹೂವಿನಲ್ಲಿ ಆರೋಗ್ಯಕ್ಕೆ ಅಗತ್ಯ ಪ್ರಮಾಣದ ವಿಟಮಿನ್ ಅಂಶಗಳು ಮತ್ತು ಖನಿಜಾಂಶಗಳು ಹೇರಳವಾಗಿ ಸಿಗುತ್ತದೆ .ಉದಾಹರಣೆಗೆ ಥಯಾಮಿನ್, ಪಾಸ್ಪರಸ್, ವಿಟಮಿನ್ ಎ, ವಿಟಮಿನ್ ಸಿ, ವಿಟಮಿನ್ ಬಿ2, ಮೆಗ್ನೀಷಿಯಂ ಮತ್ತು ಪೊಟಾಶಿಯಂ ಅಂಶಗಳ ಪ್ರಮಾಣ, ಹೆಚ್ಚಿನ ಪ್ರಮಾಣದಲ್ಲಿ ಸಿಗುತ್ತದೆ. ಹೀಗಾಗಿ ಬೇಸಿಗೆಯಲ್ಲಿ ತಯಾರು ಮಾಡುವ ಯಾವುದಾದರೂ ಸಲಾಡ್ ಗಳಿಗೆ ಈರುಳ್ಳಿ ಹೂವನ್ನು ಸೇರಿಸಿ ಸೇವನೆ ಮಾಡುವ ಅಭ್ಯಾಸ ಇಟ್ಟುಕೊಳ್ಳಿ.

ಕಮಲದ ಬೀಜದಲ್ಲಿ ಅಧಿಕ ಕ್ಯಾಲ್ಶಿಯಂ ಇರುತ್ತದೇ. ಇದರ ಪರಿಚಯ ಜಾಸ್ತಿ ಜನರಿಗೆ ತಿಳಿದಿಲ್ಲ ಆದರೂ ಔಷಧೀಯ ಗುಣ ಮಾತ್ರ ಉತ್ತಮವಾಗಿದೆ. ಇದರಲ್ಲಿ ಇನ್ಫಲುಮೆಟರಿ ಪ್ರಾಪರ್ಟಿ ಇರುವುದರಿಂದ ಚರ್ಮದ ಆರೈಕೆಗೆ ಒಳ್ಳೆಯದು. ಇದು ವಯಸ್ಸಿಗೆ ಮುಂಚೆಯೇ ಚರ್ಮ ಸುಕ್ಕು ಗಟ್ಟುವುದನ್ನ ತಡೆದು ಚರ್ಮದ ಕಾಂತಿಯನ್ನು ಹೆಚ್ಚಿಸುತ್ತೆ. ಇದರಲ್ಲಿ ಸೋಡಿಯಂ ನ ಪ್ರಮಾಣ ಕಡಿಮೆ ಇದ್ದು ಪೊಟ್ಯಾಶಿಯಂ ಹೆಚ್ಚು ಇರತ್ತೆ. ಇದರಲ್ಲಿ ಅಧಿಕ ರಕ್ತದೊತ್ತಡ ಇಯುವವರಿಗೆ ತುಂಬಾ ಉತ್ತಮವಾದದ್ದು. ದೇಹದಲ್ಲಿ ನೀರಿನ ಪ್ರಮಾಣವನ್ನು ಕಾಪಾಡಿ ದೇಹ ಹೆಚ್ಚು ಚಟುವಟಿಕೆಯಿಂದ ಇರಲು ಸಹಾಯ ಮಾಡುತ್ತದೆ. ಇದರಲ್ಲಿ ಕ್ಯಾಲ್ಶಿಯಂ ಹೆಚ್ಚಾಗಿ ಇರುವುದರಿಂದ ಮೂಳೆಗಳನ್ನು ಹಾಗೂ ಹಲ್ಲುಗಳನ್ನು ಗಟ್ಟಿಗೊಳಿಸತ್ತೆ.

ಆಯಾಸ ದೂರ ಮಾಡುತ್ತೆ ಸ್ಟ್ರಾಬೆರಿ

ಆಯಾಸ, ಸುಸ್ತು ಇದ್ದರೆ ಸ್ವಲ್ಪ ಈ ಪದ್ಧತಿಗಳನ್ನು ಅನುಸರಿಸಿ
ಸ್ಟ್ರಾಬೆರಿ

ಸ್ಟ್ರಾಬೆರಿ ಹಣ್ಣು ಹಲವಾರು ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಇದು ಹಲವಾರು ಬಗೆಯಲ್ಲಿ ಆರೋಗ್ಯವನ್ನು ವೃದ್ಧಿಸುತ್ತದೆ. ಹುಳಿಮಿಶ್ರಿತ ಸಿಹಿ ಇರುವ ಸ್ಟ್ರಾಬೆರಿ ಹಣ್ಣುಗಳು ಆಂಟಿ ಆಕ್ಸಿಡೆಂಟುಗಳು ಮತ್ತು ಇತರ ಪೋಷಕಾಂಶಗಳೊಂದಿಗೆ ಸಮೃದ್ಧವಾಗಿವೆ. ಇದರಿಂದ ಆರೋಗ್ಯಕ್ಕೆ ಅದ್ಭುತವಾದ ಪ್ರಯೋಜನಗಳು ಸಿಗಲಿವೆ. ಇದರಲ್ಲಿ ಆರೋಗ್ಯಕ್ಕೆ ಅವಶ್ಯವದ ಖನಿಜಗಳು ಮತ್ತು ವಿಟಮಿನ್ನುಗಳು ಉತ್ತಮ ಪ್ರಮಾಣದಲ್ಲಿವೆ. ಇವುಗಳಲ್ಲಿ ಸಿಗುವ ಪೌಷ್ಟಿಕ ಸತ್ವಗಳು ಅಪಾರ ಪ್ರಮಾಣದಲ್ಲಿ ಕಂಡುಬರುತ್ತವೆ. ಸ್ಟ್ರಾಬೆರಿ ಹಣ್ಣುಗಳಿಂದ ಇಷ್ಟೆಲ್ಲಾ ಲಾಭಗಳು ದೇಹಕ್ಕೆ ಸಿಗಲಿವೆ. ಇದರಿಂದ ಆಯಾಸ ಅಷ್ಟೇ ಅಲ್ಲ, ಅನೇಕ ಸಮಸ್ಯೆಗಳು ದೂರಾಗಲಿವೆ.

ಅತಿಯಾದ ಮದ್ಯಪಾನ ಸೇವನೆ ನಿಮ್ಮ ದೇಹ ದೈನಂದಿನ ಚಟುವಟಿಕೆಗಳಲ್ಲಿ ಚುರುಕುತದಿಂದಿರಲು ಅಡ್ಡಿಪಡಿಸುತ್ತದೆ. ಹಾಗೂ ಯಾವುದೇ ರೋಗದ ವಿರುದ್ಧ ಹೋರಾಡುವ ನಿಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಕೂಡ ಕಡಿಮೆಗೊಳಿಸುತ್ತದೆ.

ನಟ್ಸ್ ಹಾಗೂ ಮೊಟ್ಟೆಗಳ ಸೇವನೆಯು ಆಯಾಸದಂತಹ ಸಮಸ್ಯೆಯನ್ನು ದೂರ ಮಾಡುತ್ತವೆ. ಆಯಾಸವೆನಿಸಿದಾಗ ನಟ್ಸ್ ಸೇವಿಸಬೇಕು. ಇವು ತ್ವರಿತ ಶಕ್ತಿ ವರ್ಧಕವಾಗಿ ಕಾರ್ಯನಿರ್ವಹಿಸುತ್ತವೆ. ಒಂದು ಕಪ್ ನಟ್ಸ್ ಗಳು ಪ್ರೋಟೀನ್ಗಳು, ಜೈವಿಕ ಸಕ್ರಿಯ ಸಂಯುಕ್ತಗಳು ಮತ್ತು ಕೊಬ್ಬಿನಾಮ್ಲಗಳ ಸಮೃದ್ಧ ಮೂಲವಾಗಿದೆ. ಹೀಗಾಗಿ ಇವುಗಳ ಸೇವನೆ ಸ್ನಾಯುಗಳ ಶಕ್ತಿ ವೃದ್ಧಿಗೆ ಸಹಾಯ ಮಾಡಿ, ಆಯಾಸವನ್ನು ದೂರ ಮಾಡುತ್ತದೆ. ಇನ್ನು ಮೊಟ್ಟೆಗಳು 

ಉತ್ತಮ ಗುಣಮಟ್ಟದ ಪ್ರೋಟೀನ್‌ನ ಸಮೃದ್ಧ ಮೂಲವಾಗಿದೆ. ಮೊಟ್ಟೆಯ ಸೇವನೆಯಿಂದ ಶಕ್ತಿಯು ಹೆಚ್ಚುತ್ತದೆ. ಇದರಿಂದ ಆಯಾಸದಂತಹ ಸಮಸ್ಯೆ ಬರುವುದು ಕಡಿಮೆ.

ಬೇಸಿಗೆ ಸಮಯದಲ್ಲಿ ಎಲ್ಲಾ ಕಡೆ ಸಿಗುವ ಸೇಬು ಹಣ್ಣು ಮತ್ತು ಬಾಳೆ ಹಣ್ಣಿನ ಜೊತೆಗೆ ಸ್ಟ್ರಾಬೆರಿ ಹಣ್ಣುಗಳನ್ನು ಸಹ ಸೇರಿಸಿಕೊಂಡು ಸೇವನೆ ಮಾಡುತ್ತ ಬಂದರೆ ನಿಮ್ಮ ದೇಹದಲ್ಲಿ ಶೇಖರಣೆಯಾಗಿರುವ ಬೊಜ್ಜಿನ ಅಂಶದ ಪ್ರಮಾಣ ಕಡಿಮೆಯಾಗುತ್ತದೆ. ದೇಹದ ತೂಕ ಕಡಿಮೆ ಮಾಡಿಕೊಳ್ಳಬೇಕು ಎನ್ನುವವರಿಗೆ ಇದೊಂದು ಅತ್ಯದ್ಭುತ ಫಲಹಾರ ಎಂದು ಹೇಳಬಹುದು.

 ಪೌಷ್ಠಿಕಾಂಶ ಹೆಚ್ಚಿರುವ ಆಹಾರ ಸೇವಿಸಿ

ಆಯಾಸ, ಸುಸ್ತು ಇದ್ದರೆ ಸ್ವಲ್ಪ ಈ ಪದ್ಧತಿಗಳನ್ನು ಅನುಸರಿಸಿ
ಪೌಷ್ಠಿಕಾಂಶ ಹೆಚ್ಚಿರುವ ಆಹಾರದ ಸೇವನೆ ಅತಿ ಮುಖ್ಯ

ಆಯಾಸ ಕಡಿಮೆಯಾಗಲು ಪೌಷ್ಠಿಕಾಂಶ ಹೆಚ್ಚಿರುವ ಆಹಾರದ ಸೇವನೆ ಅತಿ ಮುಖ್ಯ. ಪೌಷ್ಟಿಕ ಆಹಾರವನ್ನು ಸೇವಿಸುವುದರಿಂದ ದೇಹಕ್ಕೆ ಜೀವಸತ್ವಗಳು ಮತ್ತು ಖನಿಜಗಳ ಪೂರೈಕೆಯಾಗುತ್ತದೆ. ಹಾಗೂ ದೇಹದಲ್ಲಿ ಶಕ್ತಿಯ ಮಟ್ಟ ಹೆಚ್ಚುತ್ತದೆ. ನಿತ್ಯ ಹಣ್ಣುಗಳು, ತರಕಾರಿಗಳು, ಧಾನ್ಯಗಳು, ಪ್ರೋಟೀನ್ ಮತ್ತು ಡೈರಿ ಉತ್ಪನ್ನಗಳನ್ನು ಸೇವಿಸಬೇಕು.

ವಯಸ್ಸು, ತೂಕ ಮತ್ತು ಚಟುವಟಿಕೆಗೆ ಸರಿಯಾಗಿ ಕ್ಯಾಲೊರಿ ಸೇವಿಸಿ. ಮುಖ್ಯವಾಗಿ ದಿನಕ್ಕೆ ಮೂರು ಹೊತ್ತು ಊಟ ಮಾಡಿ, ಸಾಕಷ್ಟು ನೀರು ಕುಡಿಯಿರಿ. ಸರಿಯಾದ ಪ್ರಮಾಣದ ನೀರನ್ನು ಕುಡಿಯದಿರುವುದು ಮೆದುಳಿನ ಕಾರ್ಯ, ಶಕ್ತಿಯ ಮಟ್ಟ ಮತ್ತು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ದೇಹಕ್ಕೆ ಸರಿಯಾದ ಪ್ರಮಾಣದಲ್ಲಿ ನೀರು ಸಿಗಬೇಕು. ಇದು ಆಯಾಸವನ್ನು ತಡೆಯುತ್ತದೆ.

ಟೇಬಲ್ ಚಮಚ ಸೋಂಪು ಕಾಳುಗಳನ್ನು ಸೇವನೆ ಮಾಡುವ ಅಭ್ಯಾಸ ಇಟ್ಟುಕೊಂಡರೆ, ಹೊಟ್ಟೆ ಉಬ್ಬರ, ಹೊಟ್ಟೆ ಸೆಳೆತ ಸುಲಭವಾಗಿ ದೂರವಾಗುತ್ತದೆ. ಹಾಗಾಗಿ ಬೇಸಿಗೆ ಸಮಯದಲ್ಲಿ ನಿಯಮಿತವಾಗಿ ಸೋಂಪು ಕಾಳುಗಳನ್ನು ಆಹಾರಪದ್ಧತಿಯಲ್ಲಿ ಸೇರಿಸಬೇಕು.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಜನವರಿ 16, ರಾಷ್ಟ್ರೀಯ ಸ್ಟಾರ್ಟ್ ಅಪ್ ದಿನವಾಗಿ ಆಚರಣೆ

ಜನವರಿ 16, ರಾಷ್ಟ್ರೀಯ ಸ್ಟಾರ್ಟ್ ಅಪ್ ದಿನವಾಗಿ ಆಚರಣೆ

ಅಮರಶಿಲ್ಪಿ ಜಕಣಾಚಾರಿ

ಅಮರಶಿಲ್ಪಿ ಜಕಣಾಚಾರಿ ನಾಡಿನ ಐತಿಹಾಸಿಕ ವಾಸ್ತು ಶಿಲ್ಪ ಪರಂಪರೆಗೆ ಶಿಲ್ಪಗಳ ಕೊಡುಗೆಗಳನ್ನು ನೀಡಿದವರು