ಇನ್ನಮುಂದೆ ಜನವರಿ 16 ಅನ್ನು ರಾಷ್ಟ್ರೀಯ ಸ್ಟಾರ್ಟ್‌ಅಪ್ ದಿನವನ್ನಾಗಿ ಆಚರಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಸ್ಟಾರ್ಟ್‌ಅಪ್‌ಗಳು ಭಾರತದ ಹಳ್ಳಿಗಳು, ಪಟ್ಟಣಗಳಿಗೆ ವ್ಯಾಪಿಸುತ್ತಿವೆ. ಕಳೆದ ಕೆಲವು ವರ್ಷಗಳಲ್ಲಿ ಹೊಸ ಉದ್ಯಮಗಳ ಸಂಖ್ಯೆಯಲ್ಲಿ ಗಮನಾರ್ಹ ಏರಿಕೆ ಕಾಣುತ್ತಿದೆ. ಆದ್ದರಿಂದ ಜನವರಿ 16 ಅನ್ನು ರಾಷ್ಟ್ರೀಯ ನವೋದ್ಯಮ ದಿನವನ್ನಾಗಿ ಆಚರಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
“ಸ್ಟಾರ್ಟ್‌ಅಪ್‌ಗಳ ಸಂಸ್ಕೃತಿಯನ್ನು ದೇಶದ ದೂರದ ಭಾಗಗಳಿಗೆ ತಲುಪಿಸುವ ಉದ್ದೇಶವಾಗಿದೆ. ಭಾರತದ ಸ್ಟಾರ್ಟ್ ಅಪ್ ವಲಯಕ್ಕೆ 2022 ಹೆಚ್ಚು ಹೊಸ ಅವಕಾಶಗಳನ್ನು ತಂದಿದೆ ಮತ್ತು ಭಾರತದ ಸ್ವಾತಂತ್ರ್ಯದ 75 ನೇ ವರ್ಷದಲ್ಲಿ ಸ್ಟಾರ್ಟ್-ಅಪ್ ಇಂಡಿಯಾ ಇನ್ನೋವೇಶನ್ ವೀಕ್ ಅನ್ನು ಆಯೋಜಿಸುವುದು ಸಹ ಮುಖ್ಯವಾಗಿದೆ.
ಆಜಾದಿ ಕಾ ಅಮೃತ್ ಮಹೋತ್ಸವದ ಅಂಗವಾಗಿ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ 150 ಕ್ಕೂ ಹೆಚ್ಚು ಸ್ಟಾರ್ಟ್‍ಅಪ್‍ಗಳೊಂದಿಗೆ ಸಂವಾದದಲ್ಲಿ ಭಾಗವಹಿಸಿದ ಪ್ರಧಾನಿ ಮೋದಿ ಜನವರಿ 16 ಅನ್ನು ರಾಷ್ಟ್ರೀಯ ಸ್ಟಾರ್ಟ್ ಅಪ್ ದಿನವಾಗಿ ಆಚರಿಸಲಾಗುತ್ತದೆ ಎಂದು ಹೇಳಿದರು.
150 ಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳನ್ನು ಬೆಳೆವಣಿಗೆ , ಸ್ಥಳೀಯದಿಂದ ಜಾಗತಿಕ, ಭವಿಷ್ಯದ ತಂತ್ರಜ್ಞಾನ, ಉತ್ಪಾದನೆಯಲ್ಲಿ ಚಾಂಪಿಯನ್‌ಗಳನ್ನು ನಿರ್ಮಿಸುವುದು ಮತ್ತು ಸುಸ್ಥಿರ ಅಭಿವೃದ್ಧಿ ಸೇರಿದಂತೆ ವಿಷಯಗಳ ಆಧಾರದ ಮೇಲೆ ಆರು ಕಾರ್ಯ ಗುಂಪುಗಳಾಗಿ ವಿಂಗಡಿಸಲಾಗಿದೆ
“ರಾಷ್ಟ್ರದ ಬೆಳವಣಿಗೆಗೆ ಗಣನೀಯ ಕೊಡುಗೆ ನೀಡುವ ಸ್ಟಾರ್ಟ್‌ಅಪ್‌ಗಳ ಸಾಮರ್ಥ್ಯದ ಬಗ್ಗೆ ಪ್ರಧಾನಿ ದೃಢನಂಬಿಕೆ ಹೊಂದಿದ್ದಾರೆ. ಇದು 2016 ರಲ್ಲಿ ಸ್ಟಾರ್ಟ್‌ಅಪ್ ಇಂಡಿಯಾದ ಪ್ರಮುಖ ಉಪಕ್ರಮದ ಪ್ರಾರಂಭದಲ್ಲಿ ಪ್ರತಿಬಿಂಬಿತವಾಗಿದೆ. ಸ್ಟಾರ್ಟ್‌ಅಪ್‌ಗಳ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಸರ್ಕಾರವು ಉತ್ತೇಜಕ ವಾತಾವರಣವನ್ನು ಒದಗಿಸಲು ಕೆಲಸ ಮಾಡಿದೆ. ” ಎಂದು ಪ್ರಕಟಣೆ ತಿಳಿಸಿದೆ.
ಆಜಾದಿ ಕಾ ಅಮೃತ್ ಮಹೋತ್ಸವ ಕಾರ್ಯಕ್ರಮವು ಸ್ಟಾರ್ಟ್‍ಅಪ್ ಇಂಡಿಯಾದ 6ನೇ ವಾರ್ಷಿಕೋತ್ಸವವಾಗಿದೆ. ಕೇಂದ್ರ ಸರ್ಕಾರ ಇದರ ನೇತೃತ್ವ ವಹಿಸಿದ್ದು, ಸ್ಟಾರ್ಟ್‍ಅಪ್ ಸಂಸ್ಕೃತಿಯನ್ನು ವೇಗಗೊಳಿಸಲು ಮತ್ತು ಬಲವಾದ ಮತ್ತು ಅಂತರ್ಗತ ಪರಿಸರ ವ್ಯವಸ್ಥೆಯನ್ನು ನಿರ್ಮಿಸಲು ಪ್ರಾರಂಭಿಸಲಾಗಿದೆ.
ಅಮೃತ್ ಮಹೋತ್ಸವವು ಒಂದು ವಾರ ನಡೆಸುವ “ಸೆಲೆಬ್ರೇಟಿಂಗ್ ಇನ್ನೋವೇಶನ್ ಎಕೋಸಿಸ್ಟಮ್” ಸಮಾರಂಭ. ಈ ಕಾರ್ಯಕ್ರಮವನ್ನು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಉದ್ಯಮ ಮತ್ತು ಆಂತರಿಕ ವ್ಯಾಪಾರದ ಉತ್ತೇಜನ ಇಲಾಖೆ ಜನವರಿ 10 ರಿಂದ 16 ರವರೆಗೆ ಆಯೋಜಿಸುತ್ತಿದೆ.
ವರ್ಷದ ಹಿಂದೆ 500 ರಷ್ಟಿದ್ದ ಭಾರತದ ಸ್ಟಾರ್ಟ್ಅಪ್ ಸಂಖ್ಯೆ ಈಗ 60,000ಕ್ಕೆ ಜಿಗಿದಿದೆ. ಕಳೆದ ವರ್ಷ 42 ಯುನಿಕಾರ್ನ್‌ಗಳು ಆರಂಭವಾಗಿವೆ. ಇದು ಸ್ವಾವಲಂಬಿ ಮತ್ತು ಆತ್ಮವಿಶ್ವಾಸಿ ಭಾರತವನ್ನು ಸಂಕೇತಿಸುತ್ತಿದೆ. ಭಾರತದಲ್ಲಿ ಪ್ರಸ್ತುತ 82 ಯುನಿಕಾರ್ನ್‌ಗಳಿವೆ. ಪ್ರತಿಯೊಂದರ ಮೌಲ್ಯ 1 ಬಿಲಿಯನ್ ಡಾಲರ್ ದಾಟಿದೆ. ಇದು ಜಗತ್ತಿನಲ್ಲಿಯೇ ಮೂರನೇ ಅತ್ಯಧಿಕ ಸಂಖ್ಯೆಯಾಗಿದೆ.
ಸ್ಟಾರ್ಟ್‌ಅಪ್‌ಗಳು ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಬಹುದೊಡ್ಡ ಬೆಳವಣಿಗೆಯ ಅವಕಾಶ ಹೊಂದಿವೆ. ಭಾರತದ ಅರ್ಧದಷ್ಟು ಜನಸಂಖ್ಯೆ ಮಾತ್ರವೇ ಪ್ರಸ್ತುತ ಆನ್‌ಲೈನ್‌ನಲ್ಲಿದೆ. ಉದ್ಯಮಿಗಳು ಹಳ್ಳಿಗಳತ್ತ ಸಾಗಬೇಕು ಎಂದು ಮನವಿ ಮಾಡಿದ್ದಾರೆ. ‘ಮೊಬೈಲ್ ಇಂಟರ್ನೆಟ್ ಇರಬಹುದು, ಬ್ರಾಡ್‌ಬ್ಯಾಂಡ್ ಸಂಪರ್ಕ ಅಥವಾ ದೈಹಿಕ ಸಂಪರ್ಕ ಇರಬಹುದು, ಹಳ್ಳಿಗಳಲ್ಲಿನ ಮಹತ್ವಾಕಾಂಕ್ಷೆ ಹೆಚ್ಚುತ್ತಿವೆ. ಗ್ರಾಮೀಣ ಹಾಗೂ ಪಟ್ಟಣ ಭಾಗಗಳು ವಿಸ್ತರಣೆಯ ಹೊಸ ಅಲೆಗಾಗಿ ಕಾದಿವೆ’.
ಪ್ರಸ್ತುತ ದಶಕದ ಪರಿಕಲ್ಪನೆಯನ್ನು ಭಾರತದ ‘ಟೆಕೇಡ್’ (ತಂತ್ರಜ್ಞಾನ ದಶಕ) ಎಂದು ವ್ಯಾಖ್ಯಾನಿಸಿರುವ ಪ್ರಧಾನಿ, ಆವಿಷ್ಕಾರ, ಸಾಹಸೋದ್ಯಮ ಮತ್ತು ಸ್ಟಾರ್ಟ್‌ಅಪ್ ಪರಿಸರ ವ್ಯವಸ್ಥೆಯನ್ನು ಬಲಪಡಿಸಲು ಸರ್ಕಾರ ಮೂರು ಪ್ರಮುಖ ಬದಲಾವಣೆಗಳನ್ನು ಮಾಡುತ್ತಿದೆ ಎಂದು ತಿಳಿಸಿದ್ದಾರೆ. ಮೊದಲನೆಯದು, ಸರ್ಕಾರದ ಪ್ರಕ್ರಿಯೆಗಳು ಹಾಗೂ ಆಡಳಿತಾತ್ಮಕ ನಿರ್ವಹಣೆಗಳಲ್ಲಿ ಸಾಹಸೋದ್ಯಮ ಮತ್ತು ಆವಿಷ್ಕಾರವನ್ನು ಸ್ವತಂತ್ರಗಿಳಿಸುವುದು. ಎರಡನೆಯದು, ಆವಿಷ್ಕಾರವನ್ನು ಪ್ರಚುರಪಡಿಸಲು ಸಾಂಸ್ಥಿಕ ಯಾಂತ್ರಿಕತೆಯನ್ನು ಸೃಷ್ಟಿಸುದು. ಮೂರನೆಯದು, ಯುವ ಪರಿವರ್ತಕರು ಮತ್ತು ಯುವ ಸಾಹಸೋದ್ಯಮಿಗಳ ಕೈಹಿಡಿಯವುದು ಎಂದು ವಿವರಿಸಿದ್ದಾರೆ.
ಧನ್ಯವಾದಗಳು.
GIPHY App Key not set. Please check settings