in ,

ಹಲಸಿನ ಹಣ್ಣು ತಿಂದು ಅದರ ಬೀಜ ಏನು ಮಾಡುತ್ತೀರಾ?

ಹಲಸಿನ ಹಣ್ಣು
ಹಲಸಿನ ಹಣ್ಣು

ಹಲಸಿನ ಹಣ್ಣು ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ? ಸಾಮನ್ಯವಾಗಿ ಎಲ್ಲರಿಗೂ ಇಷ್ಟ. ಹಲಸಿನ ಹಣ್ಣು ಮಾತ್ರ ಅಲ್ಲ, ಅದರ ಪ್ರತಿಯೊಂದು ಭಾಗನೂ ತಿನ್ನಲು ಯೋಗ್ಯವಾಗಿದೆ.ಅದರಲ್ಲೂ ಹಲಸಿನ ಬೀಜ, ಸುಮ್ಮನೇ ತಿಂದು ಬಿಸಾಡೋ ಬದಲು ಅದರಲ್ಲಿ ಇರುವ ರುಚಿ ನೋಡಿ.ಹಲಸಿನ ಹಣ್ಣಿನ ಸೀಸನ್ ಈಗಾಗಲೇ ಶುರುವಾಗಿ ಬಿಟ್ಟಿದೆ, ಬೇಸಿಗೆ ಕಾಲವನ್ನು ಬರ ಮಾಡಿ ಕೊಳ್ಳುವ ಸಮಯದಲ್ಲಿ, ಕೆಲವೊಂದು ಅನಾರೋಗ್ಯಕಾರಿ ಸಮಸ್ಯೆಗಳಿಂದ, ನಮ್ಮನ್ನು ದೂರ ವಿಡುವ ಸಲುವಾಗಿ, ಪ್ರಕೃತಿ ನಮಗಾಗಿ ಕರುಣಿಸಿರುವ ಇದೊಂದು ಅದ್ಭುತ ಹಣ್ಣು, ಎಂದರೆ ತಪ್ಪಾಗಲಾರದು. ವಿಶೇಷವಾಗಿ ಈ ಹಣ್ಣಿನಲ್ಲಿ ಉಷ್ಣದ ಪ್ರಭಾವ ಹೆಚ್ಚಾಗಿ ಕಂಡು ಬರುವುದರಿಂದ, ದೇಹದ ಶೀತದ ವಾತಾವರಣವನ್ನು ನಿವಾರಣೆ ಮಾಡಿ, ಆರೋಗ್ಯವನ್ನು ಸಮತೋಲನ ದಲ್ಲಿಡಲು ಸಹಾಯ ಮಾಡುತ್ತದೆ.

ಹಲಸಿನ ತೊಳೆಯಿಂದ ಬೇರ್ಪಡಿಸಿದ ಬೀಜಗಳನ್ನು ನೀರಿನಲ್ಲಿ ತೊಳೆದು ಬಿಸಿಲಿನಲ್ಲಿ ಒಣಗಿಸಬೇಕು. ಇದರಿಂದ ಹಲಸಿನ ಬೀಜ ಬೇಗ ಹಾಳಾಗೋದಿಲ್ಲ. ಕುಕ್ಕರ್‍ನಲ್ಲಿ ಹಲಸಿನ ಬೀಜಗಳನ್ನು ಹಾಕಿ ಅವು ಸಂಪೂರ್ಣ ಮುಳುಗುವಷ್ಟು ನೀರು ಹಾಕಿ ಸ್ವಲ್ಪ ಉಪ್ಪು ಸೇರಿಸಿ 2 ಸೀಟಿ ಬರುವ ತನಕ ಬೇಯಿಸಬೇಕು. ಬಳಿಕ ಬೀಜದ ಮೇಲ್ಫಾಗದಲ್ಲಿರುವ ಸಿಪ್ಪೆಯನ್ನು ತೆಗೆದು ಸೇವಿಸಬೇಕು. ಹಲಸಿನ ಬೀಜ ರುಚಿಯಾಗಿರುವ ಕಾರಣ ಮಕ್ಕಳು ಕೂಡ ಇಷ್ಟಪಟ್ಟು ತಿನ್ನುತ್ತಾರೆ.

ಹಲಸಿನ ಹಣ್ಣು ತಿಂದು ಅದರ ಬೀಜ ಏನು ಮಾಡುತ್ತೀರಾ?
ಹಲಸಿನ ಹಣ್ಣು

ಸಾಮಾನ್ಯವಾಗಿ ಗ್ರಾಮೀಣ ಭಾಗದಲ್ಲಿ ಯಥೇಚ್ಛವಾಗಿ ಕಂಡುಬರುವ ಈ ಹಣ್ಣು ಕಂಡು ಬರುತ್ತದೆ. ಹೀಗಾಗಿ ಹಳ್ಳಿ ಕಡೆ ಇದರ ತೊಳೆಗಳನ್ನು ಬಳಸಿ, ಖಾದ್ಯಗಳನ್ನು, ಹಪ್ಪಳ, ದೋಸೆ ಹಾಗೂ ಇತ್ಯಾದಿ ತಿಂಡಿ ತಿನಿಸುಗಳನ್ನು ಮಾಡುತ್ತಾರೆ. ಇನ್ನು ಮೊದಲೇ ಹೇಳಿದ ಹಾಗೆ ಪೃಕೃತಿ ದತ್ತವಾಗಿ ಸಿಗುವಂತಹ ಈ ಹಣ್ಣಿನಲ್ಲಿ ವಿಟಮಿನ್ಸ್ ಗಳು ಹಾಗೂ ಖನಿಜಾಂಶಗಳು ಹೇರಳವಾಗಿ ಕಂಡು ಬರುತ್ತದೆ, ಜೊತೆಗೆ, ಪೊಟಾಶಿಯಂ ಮತ್ತು ಪ್ರೋಟೀನ್ ಅಂಶ ಕೂಡ ಸಮೃದ್ಧ ಪ್ರಮಾಣ ದಲ್ಲಿ ಈ ಹಣ್ಣಿನಲ್ಲಿ ಅಡಗಿದೆ.
ಇನ್ನು ನಮಗೆಲ್ಲಾ ಗೊತ್ತೇ ಇರುವ ಹಾಗೆ ಈ ಹಣ್ಣಿನ ಮೇಲ್ಭಾದ ನೋಡಲು ಒರಟು ಹಾಗೂ ಮುಳ್ಳು ಮುಳ್ಳಾಗಿ ಕಂಡು ಬಂದರೂ, ಇದರ ಒಳಭಾಗದ ಪ್ರತಿಯೊಂದು ಭಾಗವೂ ಅಂದರೆ ಈ ಹಣ್ಣಿನ ರಸವತ್ತಾದ ಹಾಗೂ ರುಚಿಯಾದ ತೊಳೆ ಹಾಗೂ ದಷ್ಟಪುಷ್ಟವಾದ ಬೀಜಗಳು, ನಮ್ಮ ಆರೋಗ್ಯವನ್ನ ವೃದ್ಧಿಸುತ್ತದೆ. ಇದರ ತೊಳೆಗಳು ಬಾಯಿಯ ರುಚಿಯನ್ನು ಹೆಚ್ಚಿಸಿದರೆ, ಇದರಲ್ಲಿ ಅಡಗಿರುವ ಬೀಜಗಳು, ತರಕಾರಿ ಸಾಂಬರ್ ಮಾಡುವಾಗ, ಅಥವಾ ಹಾಗೆಯೇ ಬೇಯಿಸಿಕೊಂಡು ಕೂಡ ಸೇವಿಸುವುದರಿಂದ ಸಾಕಷ್ಟು ಆರೋಗ್ಯಕಾರಿ ಪ್ರಯೋಜನಗಳನ್ನು ಪಡೆಯಬಹುದು.

ರಕ್ತಹೀನತೆ ಸಮಸ್ಯೆ
ದೇಹದಲ್ಲಿ ಕಬ್ಬಿಣದಾಂಶದ ಕೊರತೆ ಉಂಟಾದರೆ, ರಕ್ತಹೀನತೆ ಸಮಸ್ಯೆ ಕಂಡು ಬರುತ್ತದೆ. ಹೀಗಾಗಿ ಈ ಸಮಯದಲ್ಲಿ ಅಧಿಕ ಪ್ರಮಾಣದಲ್ಲಿ ಕಬ್ಬಿಣದಂಶ ಇರುವ ಆಹಾರ ಪದಾರ್ಥ ಗಳನ್ನು, ತಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ, ಸೇರಿಸಿ ಸೇವನೆ ಮಾಡುವ ಅಭ್ಯಾಸ ಇಟ್ಟುಕೊಳ್ಳಬೇಕು. ಇದರಿಂದ ರಕ್ತ ಸಂಚಾರ ಸರಿಯಾಗಿ ನಡೆಯುವುದರ ಮೂಲಕ, ಮುಂದಿನ ದಿನಗಳಲ್ಲಿ ಕಬ್ಬಿಣದ ಅಂಶದ ಕೊರತೆ ಉಂಟಾಗಿ ರಕ್ತಹೀನತೆ ಸಮಸ್ಯೆ ಬರದೇ ಇರುವ ಹಾಗೆ ನೋಡಿಕೊಳ್ಳಬಹುದು
ಇನ್ನು ಕಬ್ಬಿಣದಾಂಶ ಯಥೇಚ್ಛವಾಗಿ ಕಂಡುಬರುವ ಹಲಸಿನ ಹಣ್ಣಿನ ಬೀಜಗಳನ್ನು ಮಿತವಾಗಿ ಸಾಂಬರ್ ಅಥವಾ ಪಲ್ಯ ಇಲ್ಲಾಂದ್ರೆ ಹಾಗೆಯೇ ಬೇಯಿಸಿಕೊಂಡು, ಸೇವಿಸುವ ಅಭ್ಯಾಸ ಇಟ್ಟುಕೊಂಡರೆ, ದೇಹದಲ್ಲಿ ಕೆಂಪು ರಕ್ತ ಪ್ರಮಾಣದ ಮಟ್ಟ ಹೆಚ್ಚಾಗುತ್ತಾ ಹೋಗುತ್ತದೆ. ಅಲ್ಲದೇ ಈ ಸಮಯದಲ್ಲಿ ರಕ್ತದಲ್ಲಿ ಕಬ್ಬಿಣದಾಂಶ ಅಧಿಕ ಪ್ರಮಾಣದಲ್ಲಿ ಸೇರುವುದರಿಂದ ಅನಿಮಿಯಾ ಅಥವಾ ರಕ್ತಹೀನತೆ ಸಮಸ್ಯೆ ನಿವಾರಣೆಯಾಗುತ್ತದೆ

ರಕ್ತ ಹೆಪ್ಪುಗಟ್ಟುವಿಕೆಯನ್ನು ತಡೆಯುತ್ತದೆ
ಹಲಸಿನ ಹಣ್ಣಿನ ಬೀಜಗಳಲ್ಲಿ ಮ್ಯಾಂಗನೀಸ್ ಅಂಶ ಹೆಚ್ಚಾಗಿದೆ ಎಂದು ಹೇಳುತ್ತಾರೆ. ಸಾಮಾನ್ಯವಾಗಿ ನಮ್ಮ ದೇಹದಲ್ಲಿ ಮ್ಯಾಂಗನೀಸ್ ಅಂಶ ರಕ್ತದ ಹೆಪ್ಪುಗಟ್ಟುವಿಕೆಯನ್ನು ತಡೆಯುವ ಕೆಲಸ ಮಾಡುತ್ತದೆ.

ಹಲಸಿನ ಬೀಜಗಳಲ್ಲಿ ಕರಗುವ ನಾರಿನಾಂಶ ಕೂಡ ಹೇರಳವಾಗಿ ಸಿಗುವುದರಿಂದ, ಸೇವಿಸಿದ ಆಹಾರವನ್ನು ಸರಿಯಾಗಿ ಜೀರ್ಣವಾಗುವಂತೆ ಮಾಡಿ, ಅಜೀರ್ಣ ಹಾಗೂ ಮಲಬದ್ಧತೆ ಉಂಟಾಗದಂತೆ ನೋಡಿಕೊಳ್ಳುತ್ತದೆ. ಒಂದು ವೇಳೆ ನಿಮಗೂ ಕೂಡ ಈ ಸಮಸ್ಯೆಗಳಿದ್ದರೆ, ಮಿತವಾಗಿ ಹಲಸಿನ ತೊಳೆ ಮತ್ತು ಬೀಜಗಳು ತಮ್ಮ ಆಹಾರ ಪದ್ಧತಿಯಲ್ಲಿ ಸೇರಿಸಿಕೊಳ್ಳುವುದರಿಂದ, ಈ ಸಮಸ್ಯೆಯಿಂದ ಪಾರಾಗಬಹುದು.

ಕಣ್ಣಿನ ಸಮಸ್ಯೆಗೆ ಒಳ್ಳೆಯದು
ಕಣ್ಣಿನ ಆರೋಗ್ಯವನ್ನು ಕಾಪಾಡುವ ವಿಟಮಿನ್ ಎ ಅಂಶ, ಈ ಹಣ್ಣಿನ ಬೀಜಗಳಲ್ಲಿ ಹೇರಳವಾಗಿ ಕಂಡು ಬರುವು ದರಿಂದ, ಕಣ್ಣುಗಳ ಪೊರೆ ಅಥವಾ ದೃಷ್ಟಿಗೆ ಸಂಬಂಧಪಟ್ಟ ಯಾವುದೇ ಸಮಸ್ಯೆಗಳನ್ನು ನಿವಾರಿಸಿ, ಕಣ್ಣುಗಳ ಆರೋಗ್ಯವನ್ನು ಕಾಪಾಡುತ್ತದೆ. ಮುಖ್ಯವಾಗಿ ವಯಸ್ಸಾದವರಲ್ಲಿ ಈ ಕಣ್ಣಿನ ಸಮಸ್ಯೆಗಳು ಹೆಚ್ಚಾಗಿ ಕಂಡು ಬರುವು ದರಿಂದ, ಮಿತವಾಗಿ ಹಲಸಿನ ಬೀಜಗಳನ್ನು ಸೇವನೆ ಮಾಡಿದರೆ ಒಳ್ಳೆಯ ಫಲಿತಾಂಶವನ್ನು ನಿರೀಕ್ಷಿಸಬಹುದು.

ಲಿಂಗಿಕ ಸಮಸ್ಯೆಗಳು ಇತ್ತೀಚಿನ ಯುವಜನತೆಯರಲ್ಲಿ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ಈ ಬಗ್ಗೆ ಸ್ನೇಹಿತರ ಬಳಿ ಚರ್ಚೆ ಮಾಡಲು ಆಗದೇ, ಕೊನೆಗೆ ವೈದ್ಯರ ಬಳಿಯೂ ಹೋಗದೇ ತಮ್ಮಲ್ಲಿಯೇ ನೋವನ್ನು ಅನುಭವಿ ಸುವವವರ ಸಂಖ್ಯೆ ಜಾಸ್ತಿಯಾಗುತ್ತಿದೆ.
ಆದರೆ ಈ ಸಮಸ್ಯೆಗಳನ್ನು ಕೆಲವೊಮ್ಮೆ ನೈಸರ್ಗಿಕವಾಗಿಯೂ ಕೂಡ ನಿವಾರಿಸಿಕೊಳ್ಳಬಹುದು. ಹೀಗಾಗಿ ಕಬ್ಬಿಣದ ಅಂಶ ಹೆಚ್ಚಾಗಿರುವ ಹಲಸಿನ ಬೀಜಗಳನ್ನು ಮಿತವಾಗಿ ಸೇವನೆ ಮಾಡುವ ಅಭ್ಯಾಸ ಇಟ್ಟುಕೊಂಡರೆ, ಸಂಸಾರದಲ್ಲಿ ಲೈಂಗಿಕ ಜೀವನದ ವಿಷ್ಯದಲ್ಲಿ ಸಂತಸವನ್ನು ಕಾಣಬಹುದಾಗಿದೆ.

ಉತ್ತಮ ಜೀರ್ಣಕ್ರಿಯೆಗೆ
ಜೀರ್ಣಕ್ರಿಯೆ ಸರಿಯಾಗದೆ ಇದ್ದಾಗ ದೇಹದ ಸಮತೋಲನ ಹದಗೆಡುತ್ತದೆ. ಮನಸ್ಸಿಗೆ ಕಿರಿಕಿರಿಯಾಗುವ ಜೊತೆಗೆ ದೇಹ ಭಾರವಾದಂತೆ ಭಾಸವಾಗುತ್ತದೆ. ಹೀಗಾಗಿ ಜೀರ್ಣಕ್ರಿಯೆಯಾಗಲು ಹರಸಾಹಸಡುತ್ತಾರೆ. ಈ ಜೀರ್ಣಕ್ರಿಯೆಗೆ ಹಲಸಿನ ಬೀಜ ಹೆಚ್ಚು ಸಹಾಯಕವಾಗಿದೆ. ಇದನ್ನು ಸ್ವತಃ ತಜ್ಞರು ಕೂಡಾ ತಿಳಿಸಿದ್ದಾರೆ. ಅಜೀರ್ಣದಿಂದ ಒದ್ದಾಡುವರಿಗೆ ಹಲಸಿನ ಬೀಜಗಳು ರಾಮಬಾಣದಂತೆ ಕಾರ್ಯನಿರ್ವಹಿಸುತ್ತದೆ. ಹಲಸಿನ ಬೀಜಗಳನ್ನು ಬೇಯಿಸಿ ತಿಂದಾಗ ಉತ್ತಮವಾಗಿ ಜೀರ್ಣಕ್ರಿಯೆ ಆಗುತ್ತದೆ.

ಹಲಸಿನ ಹಣ್ಣು ತಿಂದು ಅದರ ಬೀಜ ಏನು ಮಾಡುತ್ತೀರಾ?
ಹಲಸಿನ ಹಣ್ಣಿನ ಬೀಜ

ಚರ್ಮದ ಹೊಳಪು ಹೆಚ್ಚಾಗುತ್ತದೆ
ಹಾಲಿನಲ್ಲಿ ಮತ್ತು ಜೇನು ತುಪ್ಪದಲ್ಲಿ ಹಲಸಿನ ಹಣ್ಣಿನ ಬೀಜಗಳನ್ನು ಸ್ವಲ್ಪ ಹೊತ್ತು ನೆನೆ ಹಾಕಿ ನಂತರ ಪೇಸ್ಟ್ ತಯಾರಾಗುವ ರೀತಿ ರುಬ್ಬಿಕೊಳ್ಳಬೇಕು. ಇದನ್ನು ಮುಖದ ಮೇಲೆ ಫೇಸ್ ಪ್ಯಾಕ್ ರೀತಿ ಹಚ್ಚಿ ಸ್ವಲ್ಪ ಹೊತ್ತು ಹಾಗೆ ಒಣಗಲು ಬಿಡಬೇಕು. ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ಮುಖ ತೊಳೆದುಕೊಳ್ಳಬೇಕು.

ಕೂದಲು ಉದ್ದವಾಗಿ ಬೆಳೆಯುತ್ತದೆ
ಹೆಣ್ಣು ಮಕ್ಕಳು ಲಕ್ಷಣವಾಗಿ ಕಾಣವುದು ಉದ್ದವಾದ ಕೂದಲಿಂದ. ಕೂದಲು ದಟ್ಟವಾಗಿ, ಉದ್ದವಾಗಿ ಬೆಳೆಯಲು ಮಾಡುವ ಪ್ರಯತ್ನಗಳು ಒಂದೆರಡಲ್ಲ. ಯಾರೇ ಏನೇ ಹೇಳಿದರೂ ಆ ಪ್ರಯೋಗವನ್ನು ಮಹಿಳೆಯರು ಮಾಡಲೇಬೇಕು. ಯಾಕೆಂದರೆ ಹುಡುಗಿಯರು ಕೂದಲಿಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ. ಆದರೂ ಕೆಲವೊಮ್ಮೆ ಕೆಲಸದ ಒತ್ತಡ, ಕಿರಿ ಕಿರಿಯಿಂದ ಕೂದಲು ಆರೈಕೆ ಮಾಡಲು ಆಗುವುದಿಲ್ಲ. ಬುಡ ಸಮೇತ ಉದುರವ ಕೂದಲನ್ನು ನೋಡಿ ಭಯಗೊಳ್ಳುವ ಹೆಣ್ಣು ಮಕ್ಕಳ ನೆರವಿಗೆ ಹಲಿಸನ ಬೀಜವಿದೆ. ಹಲಸಿನ ಬೀಜಗಳಲ್ಲಿ ಕಬ್ಬಿಣದ ಅಂಶ ಇರುವುದರಿಂದ ಕೂದಲಿನ ಸಮಸ್ಯೆಗಳನ್ನು ನಿವಾರಿಸುತ್ತದೆ. ದೇಹದ ರಕ್ತ ಸಂಚಾರ ಸರಾಗವಾಗಿ ಆಗುವುದರಿಂದ ಕೂದಲು ಚೆನ್ನಾಗಿ ಬೆಳೆಯುತ್ತದೆ.

ಹಲಸಿನ ಹಣ್ಣಿನ ಬೀಜಗಳಲ್ಲಿ ನಾರಿನ ಅಂಶ ಹೆಚ್ಚಾಗಿದ್ದು, ವಿಶೇಷವಾಗಿ ವಯಸ್ಸಾದವರಿಗೆ ತಮ್ಮ ಜೀರ್ಣ ಕ್ರಿಯೆಯಲ್ಲಿ ಸಾಕಷ್ಟು ಸಹಾಯ ಮಾಡುತ್ತದೆ. ಬೇಧಿ ಸಮಸ್ಯೆಯನ್ನು ಎದುರಿಸುತ್ತಿರುವವರು ಹಲಸಿನ ಬೀಜಗಳನ್ನು ಬೇಯಿಸಿ ತಿನ್ನಬಹುದು.

ಹಲಸಿನ ಹಣ್ಣಿನ ತೊಳೆಗಳು ಸೇರಿದಂತೆ ಹಲಸಿನ ಬೀಜಗಳು ಸಹ ಕಬ್ಬಿಣದ ಅಂಶವನ್ನು ಯಥೇಚ್ಛವಾಗಿ ಹೊಂದಿವೆ. ನಮ್ಮ ದೇಹದಲ್ಲಿ ಹರಿಯುವ ರಕ್ತದಲ್ಲಿ ಹಿಮೋಗ್ಲೋಬಿನ್ ಎಂಬ ಅಂಶ ಇರುತ್ತದೆ. ಕಬ್ಬಿಣದ ಅಂಶ ಅದರ ಮುಖ್ಯ ಭಾಗ ಎಂದು ಹೇಳಬಹುದು.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಗಟ್ಟಿಮೇಳ ನಟಿ ಅದಿತಿ ರಿಯಲ್ ಲೈಫ್ ಬಾಯ್ ಫ್ರೆಂಡ್ ಇವರೇ ನೋಡಿ.

ಪಲ್ಲವ ಸಾಮ್ರಾಜ್ಯ

ಪಲ್ಲವ ರಾಜವಂಶ