in

ಪಲ್ಲವ ರಾಜವಂಶ

ಪಲ್ಲವ ಸಾಮ್ರಾಜ್ಯ
ಪಲ್ಲವ ಸಾಮ್ರಾಜ್ಯ

ಪಲ್ಲವ ಪದದ ಮೂಲ ಸಂಸ್ಕೃತದಲ್ಲಿ ಬೆಳ್ಳಿ ಅಥವಾ ಶಾಖೆ ಎಂದಾಗುತ್ತದೆ. ಪಲ್ಲವರು ತಮ್ಮನ್ನು ತೊಂಡೈಯಾರ್ ಎಂದು ಕರೆಯಲಾಗುತ್ತದೆ. ತೊಂಡೈ ಎಂದರೆ ತಮಿಳಿನಲ್ಲಿ ಬಳ್ಳಿ ಎಂದಾಗುತ್ತದೆ

ಪಲ್ಲವ ರಾಜವಂಶವು ತಮಿಳು ರಾಜವಂಶವಾಗಿದ್ದು ,
ಕ್ರಿ. ಶ 275 ನಿಂದ ಕ್ರಿ.ಶ 897 ವರೆಗೆ ಅಸ್ತಿತ್ವದಲ್ಲಿತ್ತು, ದಕ್ಷಿಣ ಭಾರತದ ಗಮನಾರ್ಹ ಭಾಗವನ್ನು ತೊಂಡೈಮಂಡಲಂ ಎಂದೂ ಕರೆಯುತ್ತಾರೆ. ಅವರು ಹಿಂದೆ ಸಾಮಂತರಾಗಿ ಸೇವೆ ಸಲ್ಲಿಸಿದ ಶಾತವಾಹನ ರಾಜವಂಶದ ಪತನದ ನಂತರ ಅವರು ಪ್ರಾಮುಖ್ಯತೆಯನ್ನು ಪಡೆದರು .

ಸ್ಥಾಪಿಸಿದ ಹಲವಾರು ಸಾಮ್ರಾಜ್ಯಗಳ ಪೈಕೆ ಪಲ್ಲವ ಸಾಮ್ರಾಜ್ಯವು ಒಂದು. ಇವರು ಇಂದಿನ ತಮಿಳು ನಾಡನ್ನು ೩ನೆ ಶತಮಾನದಿಂದ ೯ನೆ ಶತಮಾನದವರೆಗೆ ಆಳಿದರು. ಇವರ ರಾಜಧಾನಿ ಕಂಚಿಪುರುಂ ಅಥವಾ ಕಂಚಿ ಪಟ್ಟಣವಾಗಿತ್ತು. ಪಲ್ಲವರು ಮೊದಲು ಕದಂಬರ ಜೊತೆ ಮತ್ತು ನಂತರ ಚಾಲುಕ್ಯರ ಜೊತೆಯಲ್ಲಿ ಸೆಣೆಸುತ್ತ ಬಂದರು. ಪಲ್ಲವ ಸಾಮ್ರಾಜ್ಯ ಪತನವಾದ ನಂತರ ಪಲ್ಲವರು ತಮ್ಮ ವೈರಿಗಳಿಂದ ತಪ್ಪಿಸಿಕೊಳ್ಳಲು ಕಾಡನ್ನು ಸೇರಿದರು, ಇಂದಿನ ಕಾಡು ಕುರುಬರು ಮತ್ತು ಜೇನುಕುರುಬರು ಅಂದು ಕಾಡು ಸೇರಿಕೊಂಡ ಪಲ್ಲವ ವಂಶಸ್ಥರು ಎಂದು ಹೇಳಲಾಗುತ್ತೆ. ಪಲ್ಲವರು ಕಟ್ಟಿದ ಮಹಾಬಲಿಪುರದ ದೇವಸ್ಥಾನಗಳು ವಿಶ್ವ ಪ್ರಸಿದ್ದವಾಗಿವೆ.

ಪಲ್ಲವರು ತಮ್ಮ ವಾಸ್ತುಶಿಲ್ಪದ ಪ್ರೋತ್ಸಾಹಕ್ಕಾಗಿ ಹೆಚ್ಚು ಹೆಸರುವಾಸಿಯಾಗಿದ್ದಾರೆ, ಮಾಮಲ್ಲಪುರಂನಲ್ಲಿರುವ ಯುನೆಸ್ಕೋ ವಿಶ್ವ ಪರಂಪರೆಯ ತಾಣವಾದ ಶೋರ್ ಟೆಂಪಲ್ ಅತ್ಯುತ್ತಮ ಉದಾಹರಣೆಯಾಗಿದೆ. ಕಾಂಚೀಪುರಂ ಪಲ್ಲವ ಸಾಮ್ರಾಜ್ಯದ ರಾಜಧಾನಿಯಾಗಿ ಕಾರ್ಯನಿರ್ವಹಿಸಿತು. ರಾಜವಂಶವು ಭವ್ಯವಾದ ಶಿಲ್ಪಗಳು ಮತ್ತು ದೇವಾಲಯಗಳನ್ನು ಬಿಟ್ಟುಹೋಗಿದೆ ಮತ್ತು ಮಧ್ಯಕಾಲೀನ ದಕ್ಷಿಣ ಭಾರತೀಯ ವಾಸ್ತುಶಿಲ್ಪದ ಅಡಿಪಾಯವನ್ನು ಸ್ಥಾಪಿಸಿದೆ ಎಂದು ಗುರುತಿಸಲಾಗಿದೆ. ಅವರು ಪಲ್ಲವ ಲಿಪಿಯನ್ನು ಅಭಿವೃದ್ಧಿಪಡಿಸಿದರು, ಇದರಿಂದ ಗ್ರಂಥವು ಅಂತಿಮವಾಗಿ ರೂಪುಗೊಂಡಿತು. ಈ ಲಿಪಿಯು ಅಂತಿಮವಾಗಿ ಖಮೇರ್‌ನಂತಹ ಹಲವಾರು ಇತರ ಆಗ್ನೇಯ ಏಷ್ಯಾದ ಲಿಪಿಗಳಿಗೆ ಕಾರಣವಾಯಿತು. ಚೀನಾದ ಪ್ರವಾಸಿ ಕ್ಸುವಾನ್‌ಜಾಂಗ್ ಕಾಂಚಿಪುರಕ್ಕೆ ಭೇಟಿ ನೀಡಿದ್ದರು. ಪಲ್ಲವರ ಆಳ್ವಿಕೆಯಲ್ಲಿ ಮತ್ತು ಅವರ ಸೌಮ್ಯವಾದ ಆಳ್ವಿಕೆಯನ್ನು ಶ್ಲಾಘಿಸಿದರು.

ಪಲ್ಲವ ರಾಜವಂಶ
ನರಸಿಂಹ ವರ್ಮನ್ 1

ಪಲ್ಲವರ ಸಾಮ್ರಾಜ್ಯ ವು ಮಹೇಂದ್ರವರ್ಮ ಮತ್ತು ನರಸಿಂಹ ವರ್ಮನ್ 1 ಇವರು ಆಳ್ವಿಕೆಯಲ್ಲಿ ಶಕ್ತಿಶಾಲಿ ಸಾಮ್ರಾಜ್ಯ ವಾಗಿ ಹೊರಹೊಮ್ಮಿತು. ಮತ್ತು ತೆಲುಗು, ಉತ್ತರದ ತಮಿಳು ಸಾಮ್ರಾಜ್ಯಗಳ ಮೇಲೆ ತಮ್ಮ ಪ್ರಾಬಲ್ಯವನ್ನು ಸಾಧಿಸಿದ್ದರು. ಸುಮಾರು 600 ವರ್ಷಗಳ ಸುದೀರ್ಘ ಆಳ್ವಿಕೆಯ ನಂತರ 9 ನೇ ಶತಮಾನದ ಆರಂಭದಲ್ಲಿ ಈ ಸಾಮ್ರಾಜ್ಯದ ಅಂತ್ಯವಾಯಿತ್ತು. ಇವರು ಆಳ್ವಿಕೆಯ ಉದ್ದಕ್ಕೂ ಉತ್ತರದಲ್ಲಿ ಬಾದಾಮಿ ಚಾಳುಕ್ಯ ಮತ್ತು ದಕ್ಷಿಣದಲ್ಲಿ ತಮಿಳು ಸಾಮ್ರಾಜ್ಯಗಳಾದ ಚೋಳರು ಮತ್ತು ಪಾಂಡ್ಯರು ರಿಂದ ಸಂಘಷರ್ಷ ನನ್ನು ಎದುರಿಸುತ್ತಲೆ ಸಾಗಬೇಕಾಯಿತು. ಕೊನೆಗೆ ಚೋಳ ರಾಜ ಆದಿತ್ಯ ನಿಂದ ಸೋತು 9 ನೇ ಶತಮಾನದ ಆರಂಭದಲ್ಲಿ ಈ ಸಾಮ್ರಾಜ್ಯ ಪತನ ಗೊಂಡಿತ್ತು.

ಪಲ್ಲವರ ವಾಸ್ತುಶಿಲ್ಪ ಕುಕ್ಕೆ ಒಂದು ಗಮನಾರ್ಹ ವಾದ ಉದಾಹರಣೆ ಎಂದರೆ ಶೋರೆ ದೇವಸ್ಥಾನ ಇದು ಯುನೆಸ್ಕೊ ದ ವಿಶ್ವ ಪರಂಪರೆಯತಾಣ ವಗಿದೆ ಇದು ಮಾಮಲಪುರದಲ್ಲಿದೆ. ಪಲ್ಲವರ ವಾಸ್ತುಶಿಲ್ಪದ ಹಿಂದೆ ಭವ್ಯವಾದ ಶಿಲ್ಪ, ದೇವಸ್ಥಾನಗಳ ಸ್ಥಾಪನೆಯ ಅಡಿಪಾಯ ಮಧ್ಯಯುಗದ ದಕ್ಷಿಣ ಭಾರತದ ವಾಸ್ತುಶಿಲ್ಪ ದಿಂದ ಪ್ರೇರಿತವಾಗಿತ್ತು. ಪಲ್ಲವರ ವಂಶಸ್ಥರು ತಮ್ಮದೆ ಆದ ಗ್ರಂಥವನ್ನು ರಚಿಸಿದರು. ಈ ಗ್ರಂಥ ಹಲವಾರು ಆಗ್ನೇಯ ಏಷ್ಯಾದ ಲಿಪಿಗಳಿಗೆ ಕಾರಣವಾಯಿತು. ಚೀನಾದ ಪ್ರವಾಸಿಗ ಹ್ಯುಯನತ್ಸಾಂಗ್ ಪಲ್ಲವರ ಆಡಳಿತದ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಗಿದ್ದಾನೆ.

ಪಲ್ಲವ ಸಾಮ್ರಾಜ್ಯದ ಮೂಲದ ಬಗ್ಗೆ ವಿದ್ವಾಂಸರಲ್ಲಿ ಬಹಳ ಚರ್ಚೆ ಸಲಪಟಿದ್ದೆ ಲಭ್ಯವಿರುವ ಇತಿಹಾಸದ ಪ್ರಕಾರ ಶೀವಸ್ಕಂದವರ್ಮನ್ನು ಮೂರು ತಾಮ್ರದ ಪಾತ್ರೆಗಳನ್ನು ಕಾಂಚಿಪುರಂ ಗೆ ಕ್ರಿ.ಶಕ 4 ರ ತ್ರೈಮಾಸಿಕದಲ್ಲಿ ಅನುದಾನ ಮಾಡಿದನು. ಆದರೆ ಇದು ಆಂಧ್ರಪ್ರದೇಶದ ವಿವಿಧ ಭಾಗಗಳಲ್ಲಿ ಕಂಡುಬಂದಿದೆ. ಮತ್ತು ಮತ್ತೊಂದು ಶಾಸನ ಸಿಂಹವರ್ಮನದ್ದು. ಹಿಂದಿನ ಪಲನಾಡು ಈಗೀನ ಪಶ್ಚಿಮ ಗುಂಟೊರು ಆರಂಭಿಕವಾಗಿ ದೊರೆತ ಎಲ್ಲಾ ದಾಖಲೆಗಳು ಪ್ರಾಕೃತ ಭಾಷೆಯಲ್ಲಿದೆ. ವಿಧ್ವಾಂಸರು ಭಾಷೆಗಳಲ್ಲಿನ ಸಾಮ್ಯತೆಯನ್ನು ಕಂಡುಕೊಳ್ಳುತ್ತಿದ್ದಾರೆ ಶಾತವಾಹನರು, ಮತ್ತು ಮೌಲ್ಯರೊಂದಿಗೆ. ಪಲ್ಲವರ ಆರಂಭಿಕ ನಾಣ್ಯಗಳು ಶಾತವಾಹನರೊಂದಿಗೆ ಹೋಲಿಕೆ ಕಂಡುಬರುತ್ತದೆ. ಮತ್ತು ಎರಡು ಪ್ರಮುಖ ಸಿದ್ದಾಂತಗಳು ಇವರು ಮೂಲಗಳು ಬಗ್ಗೆ ತಿಳಿಯಲು ಈ ಮಾಹಿತಿ ಗಳು ಮೂಲಕ ಹೊರ ಹೊಮ್ಮುತ್ತದೆ. ಅದ್ದೆಂದರೆ ಪಲ್ಲವರು ಆಂಧ್ರಪ್ರದೇಶ ದಲ್ಲಿ ಶಾತವಾಹನರು ಮಾಜಿ ಅಂಗಸಂಸ್ಥೆ ಮಾಡಿರಬೇಕು. ನಂತರ ಸಾಮ್ರಾಜ್ಯ ನನ್ನು ದಕ್ಷಿಣದ ಕಡೆಗೆ ವಿಸ್ತರಿಸಿದರು. ಮತ್ತು ಇತರೆ ಪ್ರದೇಶಗಳನ್ನು ಆರಂಭದಲ್ಲಿ ಅವರು ಕಂಚಿ ಯಿಂದ ಅಧಿಕಾರಕ್ಕೆ ಬಂದು ಉತ್ತರದ ಕೃಷ್ಣಾ ನದಿಯವರೆಗೆ ತಮ್ಮ ಸಾಮ್ರಾಜ್ಯನನ್ನು ವಿಸ್ತರಿಸಿದ್ದರು.

ಪಲ್ಲವ ರಾಜವಂಶ
ಪಲ್ಲವರ ಆರಂಭಿಕ ನಾಣ್ಯಗಳು

ಈ ಸಿದ್ಧಾಂತದಲ್ಲಿ ಆಂಧ್ರಪ್ರದೇಶ ಮೂಲದ ಪ್ರತಿಪಾದಕರು ಸೇರಿದ್ದಾರೆ ಅವರೆಂದರೆ ಕೃಷ್ಣಮೂರ್ತಿ ಅಂಯ್ಯಗಾರ್, ಮತ್ತು ಕೆ.ಎ ನಿಲಕಂಠ ಶಾಸ್ತ್ರಿ ಇವರು ಪ್ರಕಾರ ಪಲ್ಲವರು ಶಾತವಾಹನರ ದಕ್ಷಿಣಪೂರ್ವ ಸಾಮ್ರಾಜ್ಯದ ಸಾಮಂತರಾಗಿದ್ದರು. ಶಾತವಾಹನರ ಪ್ರಾಬಲ್ಯ ಕೊನೆಗೊಂಡತೆ ಪಲ್ಲವರು ಸ್ವತಂತ್ರ ರಾದರು. ಅವರು ತಮಿಳು ಸಾಮ್ರಾಜ್ಯ ಗಳಿಗೆ ಅಪರಿಚಿತರಂತೆ ಕಂಡುಬರುತ್ತದೆ. ಪ್ರಾಚೀನ ಸಾಲುಗಳು ಸಾಮ್ರಾಜ್ಯಗಳಾದ ಪಾಂಡ್ಯರು,ಚೋಳರು,ಚೇಳರು ಸಂಬಂಧವಿಲ್ಲದಂತೆ ಕಂಡುಬರುತ್ತದೆ. ಸಿಂಹವರ್ಮನ್ನು ಅವರು ಯಾವುದೆ ಅಧಿಕೃತ ಚಿನ್ಹೆ ಅಥವಾ ಲಾಂಛನವನ್ನು ಹೊಂದಿರದಿದ್ದರು ಇವರು ಪ್ರಕಾರ ಆಗ ಆಳ್ವಿಕೆಯಲ್ಲಿದ ಆಂಧ್ರ ಇಸ್ಕವಾಕುಸ್ ರಿಗೆ ಅಂಗಸಂಸ್ಥೆ ಮಾಡಿರಬೇಕು ಎಂದು ನಂಬುತ್ತಾರೆ.

ಮತ್ತೊಂದು ಸಿದ್ಧಾಂತವನ್ನು ಇತಿಹಾಸಕಾರ ಆರ್. ಸಾಥಿನಾಥೈರ್ ಮತ್ತು ಡಿ.ಸಿ ಸರರ್ಕಾರ ಜೊತೆ ಒಂಡಬಂಡಿಕೆಗಳ ಮೂಲಕ ಹರಮನ್ ಕುಲಕೆ, ಡೈಟಮರ್ ರೊದರಮುಂಡೆ, ಮತ್ತು ಬರಟೋನ್ ಸ್ಟೈನ್, ಪಟೋಲೆಮಯ ಪ್ರಕಾರ ಅರುವನಾಡು ಪ್ರದೇಶವು ಉತ್ತರ ಹಾಗೊ ದಕ್ಷಿಣ ಕ್ಕೆ ಮಧ್ಯದಲ್ಲಿರುವಪನ್ನೇರ ಸಮುದ್ರ ದಿಲ್ಲಿ ಬರುತ್ತದೆ. ಕ್ರಿ.ಶಕ 140 ce ಯಲ್ಲಿ ಈ ಪ್ರದೇಶದ ನಾಗಾ ರಾಣಿಯನ್ನು ರಾಜ ಬಸರೋನಾಗ ಮದುವೆಯಾದನ್ನು. ಮುಂದೆ ಪಲ್ಲವರು ಈ ಪ್ರದೇಶವನ್ನು ಸ್ವಾಧೀನಪಡಿಸಿಕೊಂಡು ನಿಯಂತ್ರಣಕ್ಕೆ ತೆಗೆದುಕೊಂಡರು ಇದು ಕಂಚಿ ಗೆ ಹತ್ತಿರದಲ್ಲಿತ್ತು.ಪಲ್ಲವರು ಶಾತವಾಹನರು ಪ್ರಾಂತಿಯ ಆಡಳಿತಗಾರರಾಗಿ ರಬಹುದು ಎಂದು ಅಭಿಪ್ರಾಯ. ಭಾಗಶಃ ಉತ್ತರ ವಂಶಾವಳಿಯೊಂದಿಗೆ, ಶಾತವಾಹನರು ಅವರನ್ನು ತೊಂಡೈಮನದಲಮ ಸ್ಥಳೀಯರಂತೆ ನೋಡಿರಬೇಕು. ನಂತರ ಪಲ್ಲವರು ಅಶೋಕನ ನಿಯಮಗಳಿಂದ ಉತ್ತರ ಭಾರತದ ಆಚರಣೆಗಳನ್ನು ಅಳವಡಿಸಿಕೊಂಡರು.

ಕೀಲಿಕೈ ಆಕಾರದ ಆನೆಯ ನೆತ್ತಿಯ ಕೆಲವು ಶಿಲ್ಪಗಳನ್ನು ಚಿತ್ರಿಸಲಾಗಿದೆ ಇದು ಡೆಮಿಟ್ರಿಯಸ್ ರಾಜನ ಕೀರಿಟವನ್ನು ಹೋಲುತ್ತದೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಹಲಸಿನ ಹಣ್ಣು

ಹಲಸಿನ ಹಣ್ಣು ತಿಂದು ಅದರ ಬೀಜ ಏನು ಮಾಡುತ್ತೀರಾ?

ಕೊಂದೆ

ಕೊಂದೆ : ಕಕ್ಕೆ, ಸ್ವರ್ಣಪುಷ್ಪ ಕೇಳಿದ್ದೀರಾ?