in ,

ದಾಳಿಂಬೆ ಸಿಪ್ಪೆಯಲ್ಲಿ ಆರೋಗ್ಯ

ದಾಳಿಂಬೆ ಸಿಪ್ಪೆಯಲ್ಲಿ ಆರೋಗ್ಯ
ದಾಳಿಂಬೆ ಸಿಪ್ಪೆಯಲ್ಲಿ ಆರೋಗ್ಯ

ದಾಳಿಂಬೆ ಹಣ್ಣು ರುಚಿಕರವಾಗಿದ್ದು, ತಿನ್ನಲು ಹಾಗೂ ಪಾನೀಯ ತಯಾರಿಸಲು ಉಪಯೋಗಿಸುತ್ತಾರೆ. ಹಣ್ಣಿನ ಸಿಪ್ಪೆ, ತೊಗಟೆ, ಬೀಜ ಹಾಗೂ ಎಲೆಗಳು ಔಷಧಿಗಳಲ್ಲಿ ಬಳಸಲ್ಪಡುತ್ತವೆ. ದಾರುವು ಸಣ್ಣ ಕಣರಜನೆ ಹೊಂದಿದ್ದು,ಕೈ ಬೆತ್ತ, ಉಪಕರಣಗಳ ಹಿಡಿ ಇತ್ಯಾದಿಗಳ ತಯಾರಿಕೆಯಲ್ಲಿ ಉಪಯೋಗಿಸಲ್ಪಡುತ್ತದೆ.

ದೇಹಕ್ಕೆ ಅಗತ್ಯವಾಗಿ ಬೇಕಾದ ಎಲ್ಲಾ ಪೌಷ್ಟಿಕಾಂಶಗಳು, ವಿಟಮಿನ್‌ಗಳು ಸಾಕಷ್ಟು ಪ್ರಮಾಣದಲ್ಲಿ ಈ ಹಣ್ಣಿನಲ್ಲಿ ಸಿಗುತ್ತಿರುವುದರಿಂದ, ಹಲವಾರು ರೀತಿಯ ರೋಗಗಳನ್ನು ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಪ್ರತಿದಿನ ದಾಳಿಂಬೆ ಸೇವಿಸಿದರೆ, ಇದರಲ್ಲಿರುವ ವಿಟಮಿನ್ ಸಿ, ಆಂಟಿ ಆಕ್ಸಿಡೆಂಟ್ ಮತ್ತು ಉರಿಯೂತದ ಮತ್ತು ಆಂಟಿವೈರಲ್ ಗುಣಗಳು ಅನೇಕ ರೋಗಗಳಿಂದ ರಕ್ಷಿಸುತ್ತದೆ. ತಜ್ಞರ ಪ್ರಕಾರ, ದಾಳಿಂಬೆಯ ಔಷಧೀಯ ಗುಣಗಳಿಂದಾಗಿ, ಇದು ಅಪಾಯಕಾರಿ ರೋಗಗಳು ಬರದಂತೆ ತಡೆಯಬಲ್ಲದು. ದಾಳಿಂಬೆ ನಮ್ಮ ದೇಹವನ್ನು ಆರೋಗ್ಯವಾಗಿರಿಸುವುದಲ್ಲದೆ, ನಮ್ಮ ಕೂದಲು ಮತ್ತು ಚರ್ಮವನ್ನು ಸಹ ಆರೋಗ್ಯವಾಗಿರಿಸುತ್ತದೆ.

ವಿಶೇಷವಾಗಿ ಬೇರೆಲ್ಲಾ ಹಣ್ಣುಗಳಂತೆ ದಾಳಿಂಬೆ ಹಣ್ಣು ಕೂಡ ಹೆಚ್ಚಾಗಿ ವರ್ಷಪೂರ್ತಿ ಸಿಗುವ ಕಾರಣ, ನಾವೆಲ್ಲರು ಹೆಚ್ಚಾಗಿ ಈ ಹಣ್ಣನ್ನು ನಮ್ಮ ಆಹಾರಕ್ರಮದಲ್ಲಿ ಸೇರಿಸಿಕೊಳ್ಳುತ್ತೇವೆ. ಆದರೆ ದಾಳಿಂಬೆ ಹಣ್ಣಿನ ಸಿಪ್ಪೆಯ ಬಗ್ಗೆ ಮರೆತುಬಿಡುತ್ತೇವೆ.

ದಾಳಿಂಬೆ ಸಿಪ್ಪೆಯಲ್ಲಿ ಆರೋಗ್ಯ
ದಾಳಿಂಬೆ ಸಿಪ್ಪೆ

ದಾಳಿಂಬೆ ಸಿಪ್ಪೆಯನ್ನು ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿ, ಆ ಸಿಪ್ಪೆಯನ್ನು ಮಿಕ್ಸಿಯ ಸಹಾಯದಿಂದ
ಚೆನ್ನಾಗಿ ಪೌಡರ್ ರೀತಿ ಮಾಡಿಕೊಳ್ಳಿ. ಇನ್ನು ಈ ಪೌಡರ್‌ಗೆ ಸ್ವಲ್ಪ ಹಾಲು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ, ನಯವಾದ ಪೇಸ್ಟ್ ರೀತಿ ಮಾಡಿಕೊಳ್ಳಿ. ಒಂದು ವೇಳೆ, ಎಣ್ಣೆಯುಕ್ತ ತ್ವಚೆ ಆಗಿದ್ದರೆ ಈ ಮಿಶ್ರಣಕ್ಕೆ ರೋಸ್ ವಾಟರ್ ಬಳಸಬಹುದು.

ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಈ ದಾಳಿಂಬೆ ಸಿಪ್ಪೆ ಹೆಚ್ಚು ಪ್ರಯೋಜನಕಾರಿಯಾಗಿದೆ. ಅಧ್ಯಯನದ ಪ್ರಕಾರ, ದಾಳಿಂಬೆ ಸಿಪ್ಪೆಯಲ್ಲಿರುವ ಮೆಥನಾಲ್ ಸಾರವು ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದೆ. ಇದು ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಹೊಟ್ಟೆ ನೋವಿನೊಂದಿಗೆ ಮಲ ವಿಸರ್ಜನೆಯಾಗುತ್ತಿದ್ದರೆ, ಬೇಧಿಯಾಗುತ್ತಿದ್ದರೆ, ಮಲ ವಿಸರ್ಜಿಸುವಾಗ ರಕ್ತ ಕಾಣಿಸಿಕೊಳ್ಳುತ್ತಿದ್ದರೆ, ಇದರ ಸಿಪ್ಪೆಯನ್ನು ಒಣಗಿಸಿ ಕಷಾಯ ಮಾಡಿ ಕುಡಿದರೆ ಉತ್ತಮ ಮನೆ ಔಷಧ. ಶುದ್ಧ ನೀರಿಗೆ ಇದರ ಒಣಗಿದ ಸಿಪ್ಪೆಯನ್ನು ಹಾಕಿ ಕುದಿಸಿದರೆ ಕಷಾಯ ರೆಡಿಯಾಗುತ್ತದೆ

ಇನ್ನು ಈ ಪೇಸ್ಟ್‌ನ್ನು ಮುಖದ ಮೇಲೆ ಹಚ್ಚಿ, ಸುಮಾರು ಅರ್ಧ ಗಂಟೆಯವರೆಗೆ ಹಾಗೆಯೇ ಒಣಗಲು ಬಿಡಿ. ನಂತರ ಊಗುರು ಬೆಚ್ಚಗೆ ಇರುವ ನೀರಿನ ಸಹಾಯದಿಂದ ತ್ವಚೆಯನ್ನು ತೊಳೆದುಕೊಳ್ಳಿ. ಒಳ್ಳೆಯ ಫಲಿತಾಂಶಕ್ಕಾಗಿ ವಾರದಲ್ಲಿ ಎರಡು ಬಾರಿ ಈ ರೀತಿ ಮಾಡಬೇಕು.

ಒಂದು ಟೀ ಚಮಚ ದಾಳಿಂಬೆ ಸಿಪ್ಪೆಯ ಪುಡಿಯನ್ನು ಒಂದು ಗ್ಲಾಸ್ ಉಗುರು ಬೆಚ್ಚಗಿನ ನೀರಿಗೆ ಹಾಕಿ, ಮಿಕ್ಸ್ ಮಾಡಿಕೊಂಡು ಕುಡಿಯುವ ಅಭ್ಯಾಸ ಮಾಡಿಕೊಳ್ಳಿ.
ವಾರಕ್ಕೆ ಎರಡು ಬಾರಿ ಈ ರೀತಿ ಮಾಡುವುದರಿಂದ, ಹೃದಯದ ಸಮಸ್ಯೆಗಳಿಂದ ದೂರವಿರಬಹುದು.

ಎರಡು ಮೂರು ತಿಂಗಳಿಗೊಮ್ಮೆ ಮುಟ್ಟಾಗುತ್ತಿದ್ದಾರೆ. ಮುಟ್ಟಾದಾಗ ವಿಪರೀತ ಹೊಟ್ಟೆ ನೋವಾಗುವುದು. ಆ ನೋವಿಗೆ ದಾಳಿಂಬೆ ಸಿಪ್ಪೆ ಮದ್ದಾಗಿದೆ. ಒಂದು ಲೋಟದ ನೀರಿಗೆ ಒಂದು ಚಮಚ ದಾಳಿಂಬೆ ಸಿಪ್ಪೆಯ ಪುಡಿಯನ್ನು ಹಾಕಿ, ಬೆರೆಸಿ ಕುಡಿಯಬೇಕು. ಇದರಿಂದ ಹೊಟ್ಟೆ ನೋವು ಕಡಿಮೆಯಾಗುವ ಜೊತೆಗೆ ಹೆಚ್ಚು ರಕ್ತಸ್ರಾವ ಆಗುತ್ತಿದ್ದರೂ ನಿಯಂತ್ರಣಕ್ಕೆ ತರುವುದು.

ದಾಳಿಂಬೆ ಸಿಪ್ಪೆಯಲ್ಲಿ ಆರೋಗ್ಯ
ದಾಳಿಂಬೆ ಹಣ್ಣಿನ ಉಪಯೋಗ

ಬರೀ ದಾಳಿಂಬೆ ಸಿಪ್ಪೆ ಅಲ್ಲ ಈಡೀ ಹಣ್ಣಿನ ಉಪಯೋಗ :

*ಹೂ ಮತ್ತು ಚಿಗುರಿನ ಕಷಾಯ ರಕ್ತಭೇದಿಗೆ ಒಳ್ಳೆಯದು.
*ಬೇರಿನ ಚಕ್ಕೆಯ ಕಷಾಯದಿಂದ ಲಾಡಿ ಹುಳುವಿನ ಸಮಸ್ಯೆ ನಿವಾರಣೆ ಆಗುತ್ತದೆ.
*ಬೇರನ್ನು ಅರೆದು ಹಣೆಗೆ ಲೇಪಿಸಿದರೆ ಉಷ್ಣದ ತಲೆನೋವು ವಾಸಿಯಾಗುತ್ತದೆ.
*ಮೊಗ್ಗುಗಳನ್ನು ಒಣಗಿಸಿ ದಿನಕ್ಕೆ ಎರಡು ಹೊತ್ತು ಗುಲಗಂಜಿಯಷ್ಟು ಸೇವಿಸುವುದು ಕೆಮ್ಮು ಗುಣವಾಗುವುದಕ್ಕೆ ಸಹಕಾರಿಯಾಗಿದೆ.
*ಚಿಗುರಿನ ಎಲೆಯ ಕಷಾಯವನ್ನು ನಿಯಮಿತವಾಗಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಗ್ಯಾಸ್ಟ್ರಿಕ್‍ಟ್ರಬಲ್ ನಿವಾರಣೆಯಾಗುವುದು.
*ಚಿಗುರು ಎಲೆಗಳ ಕಷಾಯವನ್ನು ಮುಕ್ಕಳಿಸುವುದರಿಂದ ಬಾಯಿಹುಣ್ಣು ಗುಣವಾಗುವುದು.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಜಗತ್ತಿಗೆ ಬೆಳಕು ಕೊಡುವ ಸೂರ್ಯ

ಜಗತ್ತಿಗೆ ಬೆಳಕು ಕೊಡುವ ಸೂರ್ಯ

ದಸರಾ ಸಿದ್ಧತೆ

ಈ ವರ್ಷದ ದಸರಾ ಸಿದ್ಧತೆ ಹೇಗಿದೆ ನೋಡಿ