in

ಕನ್ನಡ ವ್ಯಾಕರಣ: ಸಂಸ್ಕೃತ ಸಂಧಿಗಳು ಭಾಗ ೨

ಸಂಸ್ಕೃತ ಸಂಧಿಗಳು
ಸಂಸ್ಕೃತ ಸಂಧಿಗಳು

ಸಂಧಿ ಎಂದರೇನು?

ಎರಡು ಅಕ್ಷರಗಳ ನಡುವೆ ಕಾಲ ವಿಳಂಬವಿಲ್ಲದಂತೆ ಮತ್ತು ಅರ್ಥಕ್ಕೆ ವ್ಯತ್ಯಯ ಬಾರದಂತೆ ಸೇರಿಸಿ ಉಚ್ಛರಿಸುವುದು ಸಂಧಿ ಎನಿಸುವುದು.

ಕನ್ನಡ ಭಾಷೆಗೆ ಸಾವಿರಾರು ವರ್ಷಗಳಿಂದ ಸಂಸ್ರೃತದ ಅನೇಕ ಶಬ್ದಗಳು ಬಂದು ಸೇರಿವೆ. ಈ ರೀತಿಯಲ್ಲಿ ಬಂದು ಸೇರಿದ ಸಂಸ್ರೃತ ಶಬ್ದಗಳು ಕಾಲ ವಿಳಂಬವಿಲ್ಲದೆ ಕೂಡಿದಾಗ ಸಂಧಿ ಏರ್ಪಡುತ್ತದೆ.

ಸಂಸ್ಕೃತ ಸಂಧಿಗಳು ಎಂದರೇನು?

ಪೂರ್ವ ಹಾಗೂ ಉತ್ತರ ಪದಗಳಲ್ಲಿ ಎರಡೂ ಸಂಸ್ಕೃತ ಪದಗಳು ಪರಸ್ಪರ ಪರವಾದಾಗ ಆಗುವ ಸಂಧಿಗಳಿಗೆ ಸಂಸ್ಕೃತ ಸಂಧಿಗಳು ಎನ್ನುವರು.

*ಸಂಧಿಗಳಲ್ಲಿ ಮೂಲಭೂತವಾಗಿ ಕನ್ನಡಸಂಧಿ ಮತ್ತು ಸಂಸ್ಕೃತಸಂಧಿ ಎಂದು ಎರಡು ವಿಭಾಗಗಳಿವೆ.

*ಸಂಸ್ಕೃತ ಸಂಧಿಗಳು 

ಕನ್ನಡ ವ್ಯಾಕರಣ: ಸಂಸ್ಕೃತ ಸಂಧಿಗಳು ಭಾಗ ೨

೧.ಸವರ್ಣದೀರ್ಘ ಸಂಧಿ

ಸವರ್ಣಸ್ವರಗಳು ಒಂದರ ಮುಂದೊಂದು ಬಂದಾಗ ಅವೆರಡರ ಸ್ಥಾನದಲ್ಲಿ ಒಂದೇ ದೀರ್ಘಸ್ವರವು ಆದೇಶವಾಗಿ ಬರುವುದು. ಇದಕ್ಕೆ ಸವರ್ಣದೀರ್ಘಸಂಧಿಯೆಂದು ಹೆಸರು.

ಉದಾ :-

ಮಹಾ + ಆತ್ಮ = ಮಹಾತ್ಮ (ಆ+ಆ=ಆ)

ದೇವ + ದೇವಾಲಯ = ದೇವಾಲಯ (ಅ+ಆ=ಆ)

ಗಿರಿ + ಈಶ = ಗಿರೀಶ (ಇ+ಈ= ಈ)

ಗುರು + ಉಪದೇಶ = ಗುರೂಪದೇಶ (ಉ+ಉ=ಊ)

ರವಿ + ಇಂದ್ರ = ರವೀಂದ್ರ (ಇ+ಇ=ಈ)

೨.ಗುಣಸಂಧಿ

ಅ, ಆ ಕಾರಗಳಿಗೆ ಇ, ಈ ಕಾರಗಳು ಪರವಾದರೆ ಅವೆರಡರ ಸ್ಥಾನದಲ್ಲಿ ‘ಏ’ ಕಾರವು, ಉ, ಊ ಕಾರಗಳು ಪರವಾದರೆ ಅವೆರಡರ ಸ್ಥಾನದಲ್ಲಿ ‘ಓ’ ಕಾರವು, ಋ ಕರವು ಪರವಾದರೆ ಅವೆರಡರ ಸ್ಥಾನದಲ್ಲಿ ‘ಆರ್’ ಕಾರವು ಆದೇಶಗಳಾಗಿ ಬರುತ್ತವೆ. ಇದಕ್ಕೆ ‘ಗುಣಸಂಧಿ’ ಎಂದು ಹೆಸರು.

ಉದಾ:

ಸುರ + ಇಂದ್ರ = ಸುರೇಂದ್ರ

ಧರಾ + ಇಂದ್ರ = ಧರೇಂದ್ರ

ಧರಾ + ಇಂದ್ರ = ಧರೇಂದ್ರ

ಮಹಾ + ಈಶ್ವರ = ಮಹೇಶ್ವರ

ಚಂದ್ರ + ಉದಯ = ಚಂದ್ರೋದಯ

ದೇವ + ಋಷಿ = ದೇವರ್ಷಿ

ಮಹಾ + ಋಷಿ = ಮಹರ್ಷಿ

೩.ವೃದ್ಧಿಸಂಧಿ

ಅ, ಆ ಕಾರಗಳಿಗೆ ಏ, ಐ ಕಾರಗಳು ಪರವಾದರೆ ಅವೆರಡರ ಸ್ಥಾನದಲ್ಲಿ ಐ ಕಾರವು, ಓ, ಔ ಕಾರಗಳು ಪರವಾದರೆ ಅವೆರಡರ ಸಾಧನೆದಲ್ಲಿ ಔ ಕಾರವು ಆದೇಶಗಳಾಗಿ ಬರುತ್ತವೆ. ಇದಕ್ಕೆ ವೃದ್ಧಿಸಂಧಿಯೆನ್ನುವರು.

ಉದಾ:

ಏಕ + ಏಕ = ಏಕೈಕ (ಅ+ಏ=ಐ)

ಶಿವ + ಐಕ್ಯ = ಶಿವೈಕ್ಯ (ಅ+ಐ=ಐ)

ಮಹಾ + ಔಚಿತ್ಯ = ಮಹೌಚಿತ್ಯ (ಅ+ಔ=ಔ)

 ವನ + ಔಷಧ = ವನೌಷಧ (ಅ+ಔ=ಔ)

೪.ಯಣ್‌ಸಂಧಿ

ಸಂಧಿ ಮಾಡುವಾಗ ಇ, ಈ, ಉ, ಊ, ಋ ಕಾರಗಳಿಗೆ ಸವರ್ಣವಲ್ಲದ ಸ್ವರ ಪರವಾದರೆ ಇ, ಈ, ಕಾರಗಳಿಗೆ ‘ಯ್’ ಕಾರವು, ಉ, ಊ, ಕಾರಗಳಿಗೆ ‘ವ್’ ಕಾರವು, ಋ ಕಾರಕ್ಕೆ ‘ರ್’ ವು ಆದೇಶವಾಗಿ ಬರುತ್ತವೆ. ಇದಕ್ಕೆ ಯಣ್ ಸಂಧಿಯೆಂದು ಹೆಸರು.

ಉದಾ:

ಅತಿ + ಅವಸರ = ಅತ್ಯವಸರ

ಜಾತಿ + ಅತೀತ = ಜಾತ್ಯಾತೀತ

ಕೋಟಿ + ಅಧೀಶ = ಕೋಟ್ಯಾಧೀಶ

ಗತಿ + ಅಂತರ = ಗತ್ಯಂತರ

ಪ್ರತಿ + ಉತ್ತರ = ಪ್ರತ್ಯುತ್ತರ

ಅತಿ + ಆಸೆ = ಅತ್ಯಾಸೆ

ಗುರು + ಆಜ್ಞೆ = ಗುರ್ವಾಜ್ಞೆ

ಮನು + ಆದಿ = ಮನ್ವಾದಿ

*ವ್ಯಂಜನ ಸಂಧಿ

ಸಂಸ್ಕೃತದಲ್ಲಿ ಸ್ವರಕ್ಕೆ ಸ್ವರ ಪರವಾದರೆ ಸ್ವರಸಂಧಿಗಳೂ, ವ್ಯಂಜನಕ್ಕೆ ವ್ಯಂಜನ ಪರವಾದರೆ ವ್ಯಂಜನ ಸಂಧಿಗಳೆಂದು ಹೆಸರು.

೧.ಜಶ್ತ್ವ ಸಂಧಿ

ಮೊದಲ ಪದದ ಕೊನೆಯಲ್ಲಿರುವ ಕ, ಚ, ಟ, ತ, ಪ ವ್ಯಂಜನಗಳಿಗೆ ಯಾವ ವರ್ಣ ಪರವಾದರೂ ಪ್ರಾಯಶಃ ಅದೇ ವರ್ಗದ ಮೂರನೆಯ ವ್ಯಂಜನಾಕ್ಷರಗಳು (ಗ, ಜ, ಡ, ದ, ಬ) ಆದೇಶಗಳಾಗಿ ಬರುತ್ತವೆ. ಇದಕ್ಕೆ ‘ಜತ್ವ ಸಂಧಿ’ ಎನ್ನುವರು.

ಉದಾ:

ವಾಕ್ + ಈಶ = ವಾಗೀಶ

ವಾಕ್ + ದಾನ = ವಾಗ್ದಾನ

ದಿಕ್ + ಅಂತ = ದಿಗಂತ

ಅಚ್ + ಆದಿ = ಅಜಾದಿ

ಷಟ್ + ಆನನ = ಷಡಾನನ

ವಿರಾಟ್ + ರೂಪ = ವಿರಾಡ್ರೂಪ

೨.ಶ್ಚುತ್ವಸಂಧಿ

‘ಸ’ ಕಾರ ‘ತ’ ವರ್ಗಾಕ್ಷರಗಳಿಗೆ ‘ಶ’ ಕಾರ ‘ಚ’ ವರ್ಗಾಕ್ಷರಗಳು ಪರವಾದಾಗ ‘ಸ’ ಕಾರಕ್ಕೆ ‘ಶ’ ಕಾರವು, ‘ತ’ ವರ್ಗಕ್ಕೆ ‘ಚ’ ವರ್ಗವು ಆದೇಶಗಳಾಗಿ ಬರುತ್ತವೆ. ಇದಕ್ಕೆ ಶುತ್ವ ಸಂಧಿಯೆಂದು ಹೆಸರು.

ಉದಾ:

ಪಯಸ್ + ಶಯನ = ಪಯಶ್ಯನ

ಮನಸ್ + ಚಂಚಲ = ಮನಶ್ಚಂಚಲ

ಮನಸ್ + ಚಾಪಲ್ಯ = ಮನಶ್ಚಾಪಲ್ಯ

ಶರತ್ + ಚಂದ್ರ = ಶರಚ್ಚಂದ್ರ

ಜಗತ್ + ಜ್ಯೋತಿ = ಜಗಜ್ಯೋತಿ

ಯಶಸ್ + ಶರೀರ = ಯಶಶ್ಯರೀರ

೩.ಅನುನಾಸಿಕಸಂಧಿ

ವರ್ಗದ ಪ್ರಥಮ ವರ್ಣಗಳಿಗೆ ಅನುನಾಸಿಕಾಕ್ಷರ ಪರವಾದರೂ ಅವುಗಳಿಗೆ ಅಂದರೆ ಕಚಟತಪ ವ್ಯಂಜನಗಳಿಗೆ ಕ್ರಮವಾಗಿ ಙ ಞ ಣ ನ ಮ ವ್ಯಂಜನಗಳು ಆದೇಶವಾಗಿ ಬರುತ್ತವೆ.

ಉದಾ:

ದಿಕ್ + ನಾಗ = ದಿಙ್ನಾಗ

ಷಟ್ + ಮಾಸ = ಷಣ್ಮಾಸ

ವಾಕ್ + ಮಾಧುರ್ಯ = ವಾಙ್ಮಾಧುರ್ಯ

ಚಿತ್ + ಮಯ = ಚಿನ್ಮಯ

ಸತ್ + ಮಣಿ = ಸನ್ಮಣಿ

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ದಿನ ಭವಿಷ್ಯ

ದಿನ ಭವಿಷ್ಯ

ಅರ್ಜುನನ ಗಾಂಡೀವದ ಬಗ್ಗೆ ಗೊತ್ತಾ?

ಅರ್ಜುನನ ಗಾಂಡೀವದ ಬಗ್ಗೆ ಗೊತ್ತಾ? ವಿಧುರನ ಮುಂದೆ ಅರ್ಜುನನ ಗಾಂಡೀವ ಏನು ಇರಲಿಲ್ಲವಂತೆ