in

ಈ ವರ್ಷದ ದಸರಾ ಸಿದ್ಧತೆ ಹೇಗಿದೆ ನೋಡಿ

ದಸರಾ ಸಿದ್ಧತೆ
ದಸರಾ ಸಿದ್ಧತೆ

ಯುವ ದಸರಾ ಮಹೋತ್ಸವ ವಿಜೃಂಭಣೆ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಮಧ್ಯೆ ಸೆಪ್ಟೆಂಬರ್ 27ರಿಂದ ಅಕ್ಟೋಬರ್ 3ರವರೆಗೆ ಯುವ ದಸರಾ ಮಹೋತ್ಸವವೂ ವಿಜೃಂಭಣೆಯಿಂದ ನಡೆಯಲಿದೆ.

ನಾಡಹಬ್ಬ ದಸರೆಯೆ ಅಂಗವಾಗಿ ಮೈಸೂರಿನಲ್ಲಿ ಸಂಭ್ರಮ ಮನೆ ಮಾಡಿದೆ. ವಿಶ್ವವಿಖ್ಯಾತ ಮೈಸೂರು ಜಂಬೂ ಸವಾರಿ ಇಂದು ನಡೆಯಲಿದ್ದು, ಇದಕ್ಕೆ ಈಗಾಗಲೇ ಸಕಲ ಸಿದ್ದತೆ ಕೈಗೊಳ್ಳಲಾಗಿದೆ. ಈ ಬಾರಿಯೂ ಕ್ಯಾಪ್ಟನ್ ‘ಅರ್ಜುನʼ ವೈಭವೋಪೇತವಾಗಿ ಚಿನ್ನದ ಅಂಬಾರಿಯನ್ನು ಹೊರಲಿದ್ದಾರೆ.

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಆಗಮಿಸುವ ಅಂತಾರಾಜ್ಯ ವಾಹನಗಳಿಗೆ ರಾಜ್ಯ ಸರ್ಕಾರ ತೆರಿಗೆ ವಿನಾಯಿತಿ ಘೋಷಣೆ ಮಾಡಿದೆ.

ವಿಶ್ವವಿಖ್ಯಾತ ಮೈಸೂರು ದಸರಾ ವೀಕ್ಷಣೆಗೆ ಆಗಮಿಸುವ ಅಂತಾರಾಜ್ಯ ವಾಹನಗಳಿಗೆ ಸರ್ಕಾರ ತೆರಿಗೆ ವಿನಾಯಿತಿ ಘೋಷಣೆ ಮಾಡಿದೆ. ಮೈಸೂರು ನಗರ ಹಾಗೂ ಮಂಡ್ಯ ಜಿಲ್ಲೆಯ ಶ್ರೀರಂಗ ಪಟ್ಟಣ ವ್ಯಾಪ್ತಿಯ ಕೆ.ಆರ್.ಎಸ್ ಜಲಾಶಯ ವೀಕ್ಷಿಸಲು ಹೋಗುವ ಪ್ರವಾಸಿ ವಾಹನಗಳಿಗೆ ತೆರಿಗೆ ವಿನಾಯಿತಿ ಮಾಡಿ ಸಾರಿಗೆ ಇಲಾಖೆ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ. ಸೆಪ್ಟೆಂಬರ್ 29 ರಿಂದ ಅಕ್ಟೋಬರ್ 6 ರವರೆಗೆ ಈ ತೆರಿಗೆ ವಿನಾಯಿತಿ ಇರಲಿದೆ.

ದಸರಾ ಮಹೋತ್ಸವದಲ್ಲಿ ಈ ಬಾರಿ ಮೂರು ಹೊಸ ಆನೆಗಳು ಭಾಗವಹಿಸುತ್ತಿದ್ದು, ಎರಡು ವರ್ಷದ ನಂತರ ಅರ್ಜುನ ಕೂಡ ಜಂಬೂಸವಾರಿಯಲ್ಲಿ ಹೆಜ್ಜೆ ಹಾಕಲಿದ್ದಾನೆ. ಸದ್ಯ, ದಸರಾ ಗಜಪಡೆ ಪಟ್ಟಿ ಸಿದ್ಧವಾಗಿದ್ದು, ಗಜಪಯಣಕ್ಕೆ ಸಕಲ ಸಿದ್ಧತೆಯೂ ನಡೆಯುತ್ತಿದೆ. ದಸರಾದ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿಯಲ್ಲಿ ಭಾಗವಹಿಸುವ 14 ಆನೆಗಳ ಪಟ್ಟಿಯನ್ನು ಶುಕ್ರವಾರ ಅರಣ್ಯ ಇಲಾಖೆ ಬಿಡುಗಡೆ ಮಾಡಿದೆ. ಈ ಎಲ್ಲಾ ಆನೆಗಳು ನಾಗರಹೊಳೆಯ ಮತ್ತಿಗೋಡು, ಬಳ್ಳೆ, ಮಡಿಕೇರಿಯ ದುಬಾರೆ, ಬಂಡೀಪುರದ ರಾಮಪುರ ಶಿಬಿರದಿಂದ ಅರಮನೆಗೆ ಬರುತ್ತಿವೆ.

ಈ ವರ್ಷದ ದಸರಾ ಸಿದ್ಧತೆ ಹೇಗಿದೆ ನೋಡಿ
ದಸರಾ ಮಹೋತ್ಸವದಲ್ಲಿ ಈ ಬಾರಿ ಮೂರು ಹೊಸ ಆನೆಗಳು

ದಸರಾದ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿಯಲ್ಲಿ ಭಾಗವಹಿಸುವ 14 ಆನೆಗಳ ಪಟ್ಟಿಯನ್ನು ಶುಕ್ರವಾರ ಅರಣ್ಯ ಇಲಾಖೆ ಬಿಡುಗಡೆ ಮಾಡಿದೆ. ಇದರಲ್ಲಿ ಬಂಡೀಪುರದ ರಾಮಪುರ ಆನೆ ಶಿಬಿರದ ಪಾರ್ಥಸಾರಥಿ (18), ಮಡಿಕೇರಿ ವಿಭಾಗದ ದುಬಾರೆ ಆನೆ ಶಿಬಿರದ ಶ್ರೀರಾಮ (40) ಹಾಗೂ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಮತ್ತಿಗೋಡು ಆನೆ ಶಿಬಿರದ ಮಹೇಂದ್ರ (39) ಇದೇ ಮೊದಲ ಬಾರಿಗೆ ದಸರಾದಲ್ಲಿ ಭಾಗವಹಿಸುತ್ತಿವೆ. ಇದರಲ್ಲಿ ಪಾರ್ಥಸಾರಥಿ ಅತಿ ಚಿಕ್ಕ ವಯಸ್ಸಿನ ಆನೆ. ಉಳಿದಂತೆ ಅಂಬಾರಿ ಹೊರುವ ಅಭಿಮನ್ಯು(57), ಭೀಮ (22), ಗೋಪಾಲಸ್ವಾಮಿ (39), ಅರ್ಜುನ (63), ವಿಕ್ರಮ (59), ಧನಂಜಯ (44), ಕಾವೇರಿ (45), ಗೋಪಿ (41), ವಿಜಯ (63), ಚೈತ್ರ (49), ಲಕ್ಷ್ಮೀ (21) ಈ ಬಾರಿ ಭಾಗವಹಿಸುತ್ತಿರುವ ಇತರೆ ಆನೆಗಳು. ಈ ಎಲ್ಲಾ ಆನೆಗಳು ನಾಗರಹೊಳೆಯ ಮತ್ತಿಗೋಡು, ಬಳ್ಳೆ, ಮಡಿಕೇರಿಯ ದುಬಾರೆ, ಬಂಡೀಪುರದ ರಾಮಪುರ ಶಿಬಿರದಿಂದ ಅರಮನೆಗೆ ಬರುತ್ತಿವೆ.

ಸತತ ಎಂಟು ವರ್ಷ ಅರ್ಜುನ ಆನೆ ಯಶಸ್ವಿಯಾಗಿ ಅಂಬಾರಿ ಹೊತ್ತಿದ್ದನು. ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ 60 ವರ್ಷ ದಾಟಿದ ಆನೆಗಳಿಗೆ ಭಾರ ಹೊರೆಸುವಂತಿಲ್ಲ. ಈ ಹಿನ್ನೆಲೆಯಲ್ಲಿ 60 ವರ್ಷ ತುಂಬಿದ ಮೇಲೆ ಅಂಬಾರಿ ಹೊರುವ ಜವಾಬ್ದಾರಿ ಅರ್ಜುನನಿಂದ ಅಭಿಮನ್ಯು ಹೆಗಲಿಗೆ ಬಿತ್ತು. ಹೀಗಾಗಿ ಕಳೆದ 2 ವರ್ಷದಿಂದ ಅರ್ಜುನ, ದಸರಾ ಜಂಬೂಸವಾರಿಯಲ್ಲಿ ಭಾಗವಹಿಸಿರಲಿಲ್ಲ. ಆದರೆ, ಈ ಬಾರಿ ಅರ್ಜುನ ದಸರಾ ಆಯ್ಕೆಯಾಗಿದ್ದು, ಜಂಬೂಸವಾರಿಯಲ್ಲಿ ಹೆಜ್ಜೆ ಹಾಕಲಿದ್ದಾನೆ.

ಅರ್ಜುನ ಈ ಬಾರಿ ಅಂಬಾರಿ ಹೊತ್ತರೆ, ಸತತ ಒಂಭತ್ತನೇ ಬಾರಿಗೆ ಅಂಬಾರಿ ಹೊತ್ತಂತಾಗುತ್ತದೆ. ಕಳೆದ 19 ವರ್ಷಗಳಿಂದ ಅರ್ಜುನ ಮೈಸೂರು ದಸರಾದಲ್ಲಿ ಭಾಗವಹಿಸುತ್ತಿದ್ದು ಇವನಿಗೆ 7 ವರ್ಷಗಳಿಂದ ಚಿನ್ನದ ಅಂಬಾರಿ ಹೊರುವ ಅವಕಾಶ ಸಿಕ್ಕಿತ್ತು. ಸದ್ಯ ಅರ್ಜುನನಿಗೆ 59 ವರ್ಷಗಳಾಗಿದ್ದು, ಕೇಂದ್ರ ಸರ್ಕಾರದ ನಿಯಮದಪ್ರಕಾರ 60 ವರ್ಷ ಮೇಲ್ಪಟ್ಟ ಆನೆಗಳ ಮೇಲೆ ಹೆಚ್ಚಿನ ಒತ್ತಡ ಹೇರುವಂತಿಲ್ಲ.

ಹೀಗಾಗಿ ಮುಂದಿನ ವರ್ಷದ ದಸರಾ ವೇಳೆಗೆ ಅರ್ಜುನನಿಗೆ 60 ವರ್ಷ ತುಂಬಲಿದ್ದು, ನಿಯಮದಂತೆ ದಸರೆಯ ಕ್ಯಾಪ್ಟನ್ ಪಟ್ಟದಿಂದ ನಿವೃತ್ತಿ ಹೊಂದುತ್ತಾನೆ ಎನ್ನಲಾಗುತ್ತಿದೆ. ಹೀಗಾಗಿಯೇ ಅರ್ಜುನನಿಗೆ ಈ ಬಾರಿ ಚಿನ್ನದ ಅಂಬಾರಿ ಹೊರುವ ಕೊನೆಯ ಅವಕಾಶ ಇದು ಎನ್ನಲಾಗುತ್ತಿದೆ.

ಇದೇ ಮೊದಲ ಬಾರಿಗೆ ಮೂರು ಹೊಸ ಆನೆಗಳನ್ನು ದಸರೆಗೆ ಕರೆತರಲಾಗುತ್ತಿದೆ. ಅದರಲ್ಲಿ ಮೊದಲ ಬ್ಯಾಚ್ ನಲ್ಲಿ ಮಹೇಂದ್ರ ಆನೆ ಬರುತ್ತಿದೆ. ಉಳಿದ ಎರಡು ಆನೆ ಎರಡನೇ ಬ್ಯಾಚ್ ನಲ್ಲಿ ಬರಲಿವೆ. ಆ. 7ರಂದು ನಡೆಯುವ ಗಜಪಯಣದಲ್ಲಿ ಒಟ್ಟು 9 ಆನೆಗಳು ಅರಮನೆ ಪ್ರವೇಶಿಸಲಿವೆ ಎಂದು ಡಿಸಿಎಫ್ ಡಾ. ವಿ.ಕರಿಕಾಳನ್ ಹೇಳಿದ್ರು.

ಈ ವರ್ಷದ ದಸರಾ ಸಿದ್ಧತೆ ಹೇಗಿದೆ ನೋಡಿ
ಯುವ ದಸರಾ ಸಂಗೀತ ಕಾರ್ಯಕ್ರಮ ಸಿದ್ಧತೆ

ಯುವ ದಸರಾ ಸಂಗೀತಕ್ಕೆ ಮಂಗ್ಲಿ ಕಾರ್ಯಕ್ರಮ :

ಯುವ ದಸರಾ ವಿಶೇಷ ಅತಿಥಿಯಾಗಿ ನಟ ಸುದೀಪ್​ ಅವರನ್ನು ಆಹ್ವಾನಿಸಲಾಗಿದೆ. ಸೆ. 27ರಂದು ಯುವ ದಸರಾ ಉತ್ಸವದಲ್ಲಿ ಸಂಗೀತ ಕಾರ್ಯಕ್ರಮವಿರುತ್ತದೆ. ಸಂಗೀತ ಕಾರ್ಯಕ್ರಮದಲ್ಲಿ ರಘು ದೀಕ್ಷಿತ್​, ಮಂಗ್ಲಿ ಭಾಗಿಯಾಗಲಿದ್ದಾರೆ. ಸೆ. 28 ರಂದು ಪುನೀತ್ ರಾಜಕುಮಾರ್​​ ನೆನಪಿಗಾಗಿ ಅಪ್ಪು ನಮನ ನೆರವೇರಲಿದೆ. ಗುರುಕಿರಣ್, ವಿಜಯಪ್ರಕಾಶ್, ಕುನಾಲ್ ಗಾಂಜಾವಾಲ್ ಅವರಿಂದ ಕಾರ್ಯಕ್ರಮಗಳು ನಡೆಯಲಿವೆ.

29ಕ್ಕೆ ಕನ್ನಿಕಾ ಕಪೂರ್ ಸಂಗೀತ ಕಾರ್ಯಕ್ರಮ. 30ಕ್ಕೆ ಸ್ಯಾಂಡಲ್‌ವುಡ್ ನೈಟ್ ಕಾರ್ಯಕ್ರಮ. ಕನ್ನಡದ ಬಹುತೇಕ ನಟ ನಟಿಯರ ಕಾರ್ಯಕ್ರಮ. 1ಕ್ಕೆ ಶಮಿತಾ ಮಲ್ನಾಡ್ ಸಂಗೀತ ಕಾರ್ಯಕ್ರಮ. 2‌ರಂದು ಹರ್ಷಿಕಾ ಪೂಣ್ಣಚ್ಚ ಮತ್ತು ವಿಜಯ ರಾಘವೇಂದ್ರ ಕಾರ್ಯಕ್ರಮ. ಅಮಿತ್ ತ್ರಿವೇದಿಯಿಂದ ಸಂಗೀತ ಕಾರ್ಯಕ್ರಮ. ಅ. 3 ರಂದು 6.30 ಸುಪ್ರಿಯಾ ರಾಮ್ ಮಹಿಳಾ ಬ್ಯಾಂಡ್ ತಂಡದಿಂದ ಕಾರ್ಯಕ್ರಮ. ಸುನಿಧಿ ಚೌಹನ್ ರಿಂದ ಕಾರ್ಯಕ್ರಮ. ನಟ ಸುದೀಪ್ ಯಾವುದೇ ಸಂಭಾವನೆ ಪಡೆಯದೆ ಯುವ ದಸರಾ ಕಾರ್ಯಕ್ಕೆ ವಿಶೇಷ ಅತಿಥಿಯಾಗಿ ಬರುತ್ತಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಆರ್ ಚೇತನ್ ವಿವರಿಸಿದ್ದಾರೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ದಾಳಿಂಬೆ ಸಿಪ್ಪೆಯಲ್ಲಿ ಆರೋಗ್ಯ

ದಾಳಿಂಬೆ ಸಿಪ್ಪೆಯಲ್ಲಿ ಆರೋಗ್ಯ

ಚುಂಚನಕಟ್ಟೆ ಜಲಪಾತ

ಚುಂಚನಕಟ್ಟೆ ಜಲಪಾತ