in

ಕೊರೊನಾ ವೈರಸ್ ನಿಂದ ರಕ್ಷಣೆ..

ವಿಶ್ವವ್ಯಾಪಿ ಕೊರೊನ ಬಗ್ಗೆ ನಮಗೆಲ್ಲ ತಿಳಿದೇ ಇದೆ. ಆದರೂ ವ್ಯಾಪಕವಾಗಿ ಹರಡುತ್ತಲೇ ಇದೆ. ಇದಕ್ಕೆ ಮೂಲ ಕಾರಣ ನಾವುಗಳೇ ,ಮಾಸ್ಕ ಸರಿಯಾಗಿ ದರಿಸದಿರುವುದು,ಕೈ ತೊಳೆಯದೆ ನಮ್ಮ ಕಣ್ಣು,ಕಿವಿ ಮತ್ತು ಬಾಯಿಯನ್ನು ಮುಟ್ಟಿಕೊಳ್ಳುವುದು. ಕೊರೊನ ಬಂದು ಉಸಿರಾಟದ ತೊಂದರೆ ಉಂಟಾದರೆ ನಮ್ಮ ಜೀವಕ್ಕೆ ಸಂಚಕಾರ.ಸರಿಯಾದ ಸಮಯಕ್ಕೆ ಆಕ್ಸಿಜನ್ ಸಿಗದಿದ್ದರೆ ನಮ್ಮ ಜೀವದ ಆಸೆ ಮರೆತುಬಿಡಬೇಕು. ಸ್ವಾಮೀ ನಮ್ಮ ನಿರ್ಲಕ್ಷ್ಯದಿಂದ ಜೀವ ಕಳೆದುಕೊಂಡರೆ ನಮ್ಮನ್ನೇ ನಂಬಿ ಬದುಕುವವರ ಬಗ್ಗೆ ಒಮ್ಮೆ ಯೋಚಿಸಿ. ನಾಳೆ ಅವರ ಜೀವನ ಹೇಗೆ ಎಂದು?

ನಿರ್ಲಕ್ಷ್ಯ ಬೇಡ ಇದನ್ನು ಮರೆಯದೆ ಪಾಲಿಸೋಣ,

1.ಆದಷ್ಟು ಮನೆಯಲ್ಲೇ ಇರೋಣ.ಅವಶ್ಯಕತೆ ಇದ್ದದೆ ಮಾತ್ರ ಹೊರಗಡೆ ಹೋಗಿ.

2.ಆಗಾಗ ನಿಮ್ಮ ಕೈ ತೊಳೆಯುತ್ತಿರಿ. ಕೈ ತೊಳೆಯಲು ನೀರು ಸಿಗದಿದ್ದಾಗ ಸ್ಯಾನಿಟೈಸ್ ಮಾಡಲು ಮರೆಯದಿರಿ.

3.ಕೈ ತೊಳೆಯದೆ ನಿಮ್ಮ ಮುಖವನ್ನು ಮುಟ್ಟಬೇಡಿ(ಕಣ್ಣು, ಕಿವಿ ಮತ್ತು ಮೂಗು).

4.ಮನೆಯಿಂದ ಹೊರಗೆ ಕಾಲಿಡುವಾಗ ಮಾಸ್ಕ ಧರಿಸುವುದು ಕಡ್ಡಾಯ.

5.ಹೊರಗೆ ಇದ್ದಾಗ ನಡುವೆ 6 ಫೀಟ್ ಅಂತರ ಕಾಪಾಡಿಕೊಳ್ಳಿ.

6.ಕೆಮ್ಮುವಾಗ ಮತ್ತು ಸೀನುವಾಗ ನಿಮ್ಮ ಬಾಯಿಯನ್ನು ಕರವಸ್ತ್ರ ಇಲ್ಲವೇ ಟಿಶ್ಯೂ ಇಂದ ಮುಚ್ಚಿಕೊಳ್ಳಿ.

ಕೊರೊನ ವೈರಸ್ ಹೆಚ್ಚಾಗಿ ಹರಡುವುದು ಕೆಮ್ಮಿದಾಗ ಮತ್ತು ಸೀನಿದಾಗ. ನಡುವೆ ಅಂತರ ಕಾಯ್ದುಕೊಳ್ಳುವುದರಿಂದ ಈ ವೈರಸ್ ಗಾಳಿಯಲ್ಲಿ 6ಫೀಟ್ ಗಿಂತ ಹೆಚ್ಚು ಪ್ರಯಾಣಿಸುವುದಿಲ್ಲ. ಸೋಂಕಿತ ವ್ಯಕ್ತಿ ಮುಟ್ಟಿರುವ ವಸ್ತುಗಳನ್ನು ಮುಟ್ಟುವುದರಿಂದ ಕೂಡ ಕೊರೊನ ವೈರಸ್ ಬರುವ ಅವಕಾಶಗಳಿವೆ. ಆದ್ದರಿಂದ ಯಾವುದೇ ವಸ್ತುಗಳನ್ನು ಮುಟ್ಟಿದಾಗ ನಿಮ್ಮ ಮುಖವನ್ನು ಮುಟ್ಟಿಕೊಳ್ಳಬೇಡಿ.ಕೈತೊಳೆದು ಇಲ್ಲವೇ ಸ್ಯಾನಿಟೈಸ್ ಮಾಡಿಕೊಂಡು ನಿಮ್ಮ ಮುಖವನ್ನು ಮುಟ್ಟಬಹುದು.ಕೈತೊಳೆಯುವಾಗ ಕನಿಷ್ಠ ಪಕ್ಷ 20 ಸೆಕೆಂಡ್ ಸ್ಕ್ರಬ್ ಮಾಡಬೇಕು.ಕೈ ಶುಚಿತ್ವ ಕಾಪಾಡಲು ಸೋಪ್ ಮತ್ತು ನೀರು ಒಳ್ಳೆಯ ಮಂತ್ರ.ಕಡಿಮೆ ಅಂದರು 60% ಆಲ್ಕೋಹಾಲ್ ಪ್ರಮಾಣವಿರುವ ಹ್ಯಾಂಡ್ ಸ್ಯಾನಿಟೈಸರ್ ಬಳಸಿ.

ಎರಡು ವರ್ಷಗಳ ಮೇಲ್ಪಟ್ಟಿರುವ ಎಲ್ಲರು ಮರೆಯದೆ ಮಾಸ್ಕ ಧರಿಸಿ.ಇದರ ಜೊತೆಗೆ ಮಾಸ್ಕ ಶುಚಿಯಾಗಿರುವುದು ಬಹಳ ಮುಖ್ಯ.ವಾರಗಟ್ಟಲೆ ಒಂದೇ ಮಾಸ್ಕ ಬಳಸಬೇಡಿ. ನೆನಪಿಡಿ ದಿನಕ್ಕೆ ಒಂದೇ ಮಾಸ್ಕ, ತದನಂತರ ಅದನ್ನು ಒಗೆದು ಶುಚಿಗೊಳಿಸಿ ಬಳಸಬೇಕು.ಬಟ್ಟೆಯಿಂದ ಮಾಡಿದ ಮಾಸ್ಕಗಿಂತ ಮೆಡಿಕಲ್ ಅಂಗಡಿಗಳಲ್ಲಿ ಸಿಗುವ ಸರ್ಜಿಕಲ್ ಮಾಸ್ಕ ಬಳಸಿ.ಹಾಗೆಂದು ಅದನ್ನೇ ವಾರಗಟ್ಟಲೆ ಬಳಸುವುದು ಬೇಡ.ಸರ್ಜಿಕಲ್ ಮಾಸ್ಕ ಮರುಬಳಕೆ ಮಾಡುವಂತಿಲ್ಲ.

ನಿಮಗೆ ಕೆಮ್ಮು, ಶೀತ,ತಲೆನೋವು ಇದು ಯಾವುದೇ ಲಕ್ಷಣಗಳಿದ್ದರು ಮನೆಯಿಂದ ಹೊರಗೆ ಹೋಗಬೇಡಿ.ಈ ಲಕ್ಷಣಗಳಿದ್ದರೆ ನಿಮಗೆ ಕೊರೊನ ಬಂದಿದೆ ಎಂದಲ್ಲ. ಉಸಿರಾಟದ ತೊಂದರೆ ಬಂದರೆ ಕೂಡಲೇ ನಿಮಗೆ ತಿಳಿದ ಡಾಕ್ಟರ್ ಬಳಿ ಸಲಹೆ ಪಡೆಯಿರಿ ಇಲ್ಲವೇ ನಿಮ್ಮ ಹತ್ತಿರದ ಆಸ್ಪತ್ರೆಗೆ ಭೇಟಿನೀಡಿ.

ನಮ್ಮ ಆರೋಗ್ಯದ ರಕ್ಷಣೆ ನಮೆಲ್ಲರ ಜವಾಬ್ಧಾರಿ. ಬನ್ನಿ ಕೊರೊನ ಮಹಾಮಾರಿಯ ವಿರುದ್ಧ ನಾವೆಲ್ಲ ಒಟ್ಟಾಗಿ ಹೊರಡೋಣ.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಬ್ಲಡ್ ಪ್ರೆಷರ್( ಬಿ ಪಿ) ಸರ್ವೇ ಸಾಮಾನ್ಯ ರೋಗ

ಕೊರೊನದಿಂದ ರಕ್ಷಣೆ ಹಾಗೂ ಲಸಿಕೆಯ ಮಾಹಿತಿ ಇಲ್ಲಿದೆ