in ,

ಸಿರಿಧಾನ್ಯದಲ್ಲಿ ನಮ್ಮ ಆರೋಗ್ಯ

ಸಿರಿಧಾನ್ಯ
ಸಿರಿಧಾನ್ಯ

ಸಿರಿಧಾನ್ಯಗಳು ಪ್ರೊಟೀನ್, ನಾರಿನಂಶ, ವಿಟಮಿನ್‌ಗಳು ಮತ್ತು ಮಿನರಲ್‌ಗಳನ್ನು ಒಳಗೊಂಡಿದ್ದು, ಇದು ನಿಮ್ಮ ಆರೋಗ್ಯಕ್ಕೆ ಅತ್ಯುತ್ತಮವಾಗಿದೆ. ನಿಮ್ಮ ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರಹಾಕುವಲ್ಲಿ ಸಿರಿಧಾನ್ಯಗಳು ಅತ್ಯುತ್ತಮವಾಗಿದ್ದು ಇದು ನಿಮ್ಮ ರಕ್ತಕ್ಕೆ ಗ್ಲುಕೋಸ್ ಅನ್ನು ಪೂರೈಸುತ್ತದೆ. ಇದರೊಂದಿಗೆ ದೇಹಕ್ಕೆ ಬೇಕಾಗಿರುವ ವಿಟಮಿನ್‌ಗಳು ಹಾಗೂ ಮಿನರಲ್‌ಗಳನ್ನು ಸಿರಿಧಾನ್ಯಗಳು ಒದಗಿಸುತ್ತವೆ.

ದಕ್ಷಿಣದ ಏಷ್ಯಾದವರಿಗೆ ಸಿರಿಧಾನ್ಯಗಳು ಹೆಚ್ಚಾಗಿ ದೊರೆಯುವುದರಿಂದ ಇಲ್ಲಿನವರು ಇದರ ಸೇವನೆಯನ್ನು ಹೆಚ್ಚು ಮಾಡುತ್ತಾರೆ. ಸಿರಿಧಾನ್ಯಗಳನ್ನು ಬೆಳೆಯಲು ಸಾಕಷ್ಟು ನೀರು ಅಗತ್ಯವಿಲ್ಲ. ಇವು ಮಣ್ಣನ್ನು ನಾಶಪಡಿಸುವುದಿಲ್ಲ.
ಒಣ ಪ್ರದೇಶದಲ್ಲಿ ಕಡಿಮೆ ನೀರಿನಿಂದ ಬೆಳೆಯುವ ಸಿರಿಧಾನ್ಯಗಳನ್ನು ಪ್ರತಿ ನಿತ್ಯ ನಮ್ಮ ಡಯೆಟ್ನಲ್ಲಿ ಸೇರಿಸಿಕೊಂಡರೆ ಆರೋಗ್ಯ ವೃದ್ಧಿಯಾಗುತ್ತದೆ. ನಿಮ್ಮ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಲು ಸಿರಿ ಧಾನ್ಯಗಳು ಸಹಾಯ ಮಾಡುತ್ತವೆ. ಏಕೆಂದರೆ ಇವುಗಳಲ್ಲಿ ಕಡಿಮೆ ಕ್ಯಾಲೋರಿಗಳಿವೆ . ನಮ್ಮ ದೇಹದ ತೂಕವನ್ನು ನಮ್ಮ ಆರೋಗ್ಯಕ್ಕೆ ಯಾವುದೇ ಹಾನಿ ಆಗದಂತೆ ಅಚ್ಚುಕಟ್ಟಾಗಿ ನಿರ್ವಹಣೆ ಮಾಡುತ್ತವೆ. ಪ್ರತಿ ದಿನವೂ ತಾವು ಸೇವಿಸುತ್ತಿರುವ ಕ್ಯಾಲೋರಿಗಳ ಬಗ್ಗೆ ಹೆಚ್ಚು ಗಮನ ಹೊಂದಿದ ಜನರಿಗೆ ಹೇಳಿ ಮಾಡಿಸಿದ ಆಹಾರಗಳು ಎಂದರೆ ಅದು ಸಿರಿ ಧಾನ್ಯಗಳು ಎಂದು ಹೇಳಬಹುದು.

ಸಿರಿಧಾನ್ಯಗಳಲ್ಲಿ ಹಲವು ವೆರೈಟಿಗಳಿವೆ

ಜೋಳ, ರಾಗಿ, ಸಜ್ಜೆ, ಬರಗು, ನವಣೆ, ಅರಕ, ಸಾಮೆ, ಕೊರಲೆ, ಊದಲು, ಮಡಿಕೆ ಇತ್ಯಾದಿಗಳು ಸಿರಿಧಾನ್ಯಗಳಾಗಿ ಗುರುತಿಸಿಕೊಂಡಿವೆ. ಈ ಧಾನ್ಯಗಳ ಬಣ್ಣಗಳಲ್ಲಿ ವ್ಯತ್ಯಾಸವಿದ್ದರೂ ಆಕಾರದಲ್ಲಿ ಸಾಮ್ಯತೆ ಇರುತ್ತವೆ. ಕೆಲವು ಸಿರಿಧಾನ್ಯಗಳಲ್ಲಿ ನಾರಿನಂಶ ಹೆಚ್ಚಿದ್ದರೆ, ಇನ್ನೂ ಕೆಲವು ಧಾನ್ಯಗಳಲ್ಲಿ ಅಕ್ಕಿ ಮತ್ತು ಗೋಧಿಗಿಂತ ಹತ್ತು ಪಟ್ಟು ಹೆಚ್ಚಿನ ಕ್ಯಾಲ್ಸಿಯಂ ಮತ್ತು ಖನಿಜಗಳು ಇರುತ್ತವೆ. ಪ್ರತಿ ಧಾನ್ಯಗಳು ತನ್ನದೇ ಆದ ಆರೋಗ್ಯ ಪ್ರಯೋಜನಗಳನ್ನು ಹೊಂದಿವೆ.
ಸಿರಿಧಾನ್ಯಗಳನ್ನು ನೆನೆಸಿದ ನಂತರ ಅದರಿಂದ ಖಾದ್ಯಗಳನ್ನು ಮಾಡುವುದರಿಂದ ಪೋಷಕಾಂಶಗಳು ದೇಹವನ್ನು ತಲುಪುತ್ತವೆ. ಒಂದು ಕಪ್ ಸಿರಿಧಾನ್ಯಕ್ಕೆ 2 ಕಪ್​ನಷ್ಟು ನೀರನ್ನು ಬಳಸಿ.

ಸಿರಿಧಾನ್ಯದಲ್ಲಿ ನಮ್ಮ ಆರೋಗ್ಯ
ಸಿರಿಧಾನ್ಯಗಳಲ್ಲಿ ಹಲವು ವೆರೈಟಿ

ಸಿರಿಧಾನ್ಯ ಮಧುಮೇಹಿಗಳಿಗೆ ವರದಾನ

ಈ ಆಹಾರ ನಿಧಾನವಾಗಿ ಪಚನವಾಗುವ ಕಾರಣ ದೇಹದಲ್ಲಿ ಸಕ್ಕರೆ ಪ್ರಮಾಣ ಹೆಚ್ಚುವುದಿಲ್ಲ. ಸಕ್ಕರೆ ಕಾಯಿಲೆಯ ಪ್ರಮಾಣ ಹೆಚ್ಚಾದಂತೆ ಸಿರಿಧಾನ್ಯದಿಂದ ಮಾಡಿದ ಆಹಾರಗಳಿಗೆ ಇದಕ್ಕಿದ್ದಂತೆ ಬೇಡಿಕೆ ಕಂಡು ಬಂತು. ಆದ್ದರಿಂದ ಸಿರಿಧಾನ್ಯ ಮಧುಮೇಹಿಗಳ ಪಾಲಿಗೆ ವರದಾನವಾಗಿ ಪರಿಣಮಿಸಿದೆ.

ತೂಕ ಕಡಿಮೆ ಮಾಡಿಕೊಳ್ಳಲು ಸಿರಿ ಧಾನ್ಯಗಳು ಸಹಾಯ ಮಾಡುತ್ತವೆ

ನಮ್ಮ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಲು ಸಿರಿ ಧಾನ್ಯಗಳು ಸಹಾಯ ಮಾಡುತ್ತವೆ. ಏಕೆಂದರೆ ಇವುಗಳಲ್ಲಿ ಕಡಿಮೆ ಕ್ಯಾಲೋರಿಗಳಿವೆ. ನಮ್ಮ ದೇಹದ ತೂಕವನ್ನು ನಮ್ಮ ಆರೋಗ್ಯಕ್ಕೆ ಯಾವುದೇ ಹಾನಿ ಆಗದಂತೆ ಅಚ್ಚುಕಟ್ಟಾಗಿ ನಿರ್ವಹಣೆ ಮಾಡುತ್ತವೆ.

ಪ್ರತಿ ದಿನವೂ ತಾವು ಸೇವಿಸುತ್ತಿರುವ ಕ್ಯಾಲೋರಿಗಳ ಬಗ್ಗೆ ಹೆಚ್ಚು ಗಮನ ಹೊಂದಿದ ಜನರಿಗೆ ಹೇಳಿ ಮಾಡಿಸಿದ ಆಹಾರಗಳು ಎಂದರೆ ಅದು ಸಿರಿ ಧಾನ್ಯಗಳು ಎಂದು ಹೇಳಬಹುದು. ನಮ್ಮ ಇಡೀ ದಿನ ಚುರುಕುತನದಿಂದ ಕೂಡಿರಲು ಮತ್ತು ನಮ್ಮ ದೇಹ ಸದೃಢತೆಯಿಂದ ನಡೆದುಕೊಳ್ಳಲು ಸಿರಿ ಧಾನ್ಯಗಳು ತುಂಬಾ ಸಹಕಾರಿ.

ರೋಗ – ನಿರೋಧಕ ಶಕ್ತಿ ಹೆಚ್ಚಾಗುತ್ತದೆ

ನಿಮಗೆ ರೋಗ – ನಿರೋಧಕ ಶಕ್ತಿ ಕಡಿಮೆ ಇದ್ದಷ್ಟೂ ಹೆಚ್ಚು ಅನಾರೋಗ್ಯಕ್ಕೆ ಗುರಿ ಆಗುವ ಸಾಧ್ಯತೆ ಇರುತ್ತದೆ. ಉದಾಹರಣೆಯಾಗಿ ಹೇಳಬೇಕೆಂದರೆ ದಿನ ಬೆಳಗಾದರೆ ನೀವೇ ನೋಡುತ್ತಿದ್ದೀರಿ. ಯಾರಿಗೆ ರೋಗ – ನಿರೋಧಕ ಶಕ್ತಿ ಕಡಿಮೆ ಇದೆ ಅವರಿಗೆ ಕೊರೋನಾ ಜೀವ ಹಿಂಡುತ್ತಿದೆ. ಹಾಗಾಗಿ ಈ ಸಮಯದಲ್ಲಿ ನಿಮ್ಮ ದೇಹದ ರೋಗ – ನಿರೋಧಕ ಶಕ್ತಿಯನ್ನು ಹೆಚ್ಚು ಮಾಡುವ ಸಿರಿ ಧಾನ್ಯಗಳನ್ನು ನೀವು ಸೇವಿಸುವುದು ಒಳ್ಳೆಯದು.

ಸಿರಿಧಾನ್ಯಗಳಿಂದ ಮಾಡಿದ ಆಹಾರ ಆರೋಗ್ಯಕ್ಕೆ ಉತ್ತಮ

ಇತ್ತೀಚಿನ ಕೆಲವು ಸಂಶೋಧನೆಗಳು ಕೂಡ ಸಿರಿಧಾನ್ಯಗಳಿಂದ ಮಾಡಿದ ಆಹಾರ ಆರೋಗ್ಯಕ್ಕೆ ಉತ್ತಮ ಎಂದು ಹೇಳಿವೆ. ರಾಗಿ ಮಕ್ಕಳ ಮೆದುಳಿನ ಬೆಳವಣಿಗೆಗೆ ಬೆಸ್ಟ್. ಅರ್ಕ ರಕ್ತ ಶುದ್ಧೀಕರಣ ಮತ್ತು ಮಲಬದ್ಧತೆ ನಿವಾರಣೆಗೆ ಒಳ್ಳೆಯದು. ಸಾಮೆ ಫಲವಂತಿಕೆ ಹೆಚ್ಚಿಸುತ್ತದೆ.

ಥೈರಾಯ್ಡ್, ರಕ್ತದೊತ್ತಡ, ಸಂಧಿವಾತ, ಬೊಜ್ಜು ನಿವಾರಣೆಗೆ ಉತ್ತಮ. ಊದಲು ಜಾಂಡೀಸ್, ಲಿವರ್ ಮತ್ತು ಕಿಡ್ನಿ ಸಮಸ್ಯೆಗಳನ್ನು ನಿವಾರಿಸುತ್ತದೆ. ನವಣೆ ನರಗಳಿಗೆ ಶಕ್ತಿ ತುಂಬುತ್ತದೆ. ಸಜ್ಜೆ ಹೃದಯದ ಆರೋಗ್ಯ ಹೆಚ್ಚಿಸುತ್ತದೆ.

ಸಿರಿಧಾನ್ಯದಲ್ಲಿ ನಮ್ಮ ಆರೋಗ್ಯ
ಸಿರಿಧಾನ್ಯಗಳಿಂದ ಮಾಡಿದ ಆಹಾರ

ಬಾಜ್ರಾ

ವಿಷಕಾರಿ ತ್ಯಾಜ್ಯವನ್ನು ತೆಗೆದುಹಾಕುವ ಕರಗಬಲ್ಲ ನಾರಿನಿಂದ ಸಮೃದ್ಧವಾಗಿರುವ ಬ್ರೌನ್ ಟಾಪ್ ರಾಗಿ ನಿಮ್ಮ ದೇಹವನ್ನು ನಿರ್ವಿಷಗೊಳಿಸಲು, ಮಲಬದ್ಧತೆ, ಕರುಳಿನ ಕ್ಯಾನ್ಸರ್, ಚರ್ಮ ಮತ್ತು ಸಂಧಿವಾತದ ಸಮಸ್ಯೆಗಳಿಗೆ ಅತ್ಯುತ್ತಮವಾಗಿದೆ. ಕರಗದ ಫೈಬರ್ ಘಟಕವು ಉತ್ತಮ ಕರುಳಿನ ಬ್ಯಾಕ್ಟೀರಿಯಾದ ಬೆಳವಣಿಗೆಗೆ ಸಹಾಯ ಮಾಡುತ್ತದೆ.

ಇನ್ನು ಸಿರಿಧಾನ್ಯಗಳಲ್ಲಿ ಕೂಡ ಹಲವಾರು ಬಗೆಯಿದ್ದು ರಾಗಿ ಮಾತ್ರವಲ್ಲದೆ ಇನ್ನಿತರ ಧಾನ್ಯಗಳು ಕೂಡ ಆರೋಗ್ಯದ ದೃಷ್ಟಿಯಿಂದ ಉತ್ತಮವಾಗಿವೆ.

ರಾಗಿ

ಕ್ಯಾಲ್ಸಿಯಂ, ಮಿನರಲ್ಸ್ ಹಾಗೂ ಉತ್ಕರ್ಷಣ ನಿರೋಧಿ ಅಂಶಗಳಿಂದ ಸಮೃದ್ಧವಾಗಿರುವ ರಾಗಿ ಕಡಿಮೆ ಕೊಬ್ಬು ಹೊಂದಿದೆ. ಇದು ಪ್ರೊಟೀನ್ ಸಮೃದ್ಧವಾಗಿದ್ದು ಅಮಿನೊ ಆ್ಯಸಿಡ್ ಅನ್ನು ಒಳಗೊಂಡಿದೆ.

ಕೋರಾ

ಮಧುಮೇಹಿಗಳಿಗೆ ಇದು ಅತ್ಯುತ್ತಮವಾಗಿದ್ದು ರಕ್ತದ ಸಕ್ಕರೆಯನ್ನು ನಿಯಂತ್ರಿಸುತ್ತದೆ. ಕಬ್ಬಿಣದ ಅಂಶ ಇದರಲ್ಲಿದ್ದು ವಿಟಮಿನ್ ಇ, ಆರೋಗ್ಯಕ್ಕೆ ಮುಖ್ಯವಾಗಿದೆ.

ಸಾಮೆ

ಪಿತ್ತಜನಕಾಂಗ, ಮೇದೋಜ್ಜೀರಕ ಗ್ರಂಥಿ, ಗುಲ್ಮ ಮತ್ತು ಸಣ್ಣ ಕರುಳು ಸೇರಿದಂತೆ ದೇಹದ ಮೃದು ಅಂಗಗಳನ್ನು ಸ್ವಚ್ಛಗೊಳಿಸುತ್ತದೆ. ಹೆಚ್ಚು ಜೀರ್ಣವಾಗುವ ಮತ್ತು ಕಡಿಮೆ ಕ್ಯಾಲೊರಿಗಳನ್ನು ಹೊಂದಿರುತ್ತದೆ. ಮಧುಮೇಹ ಮತ್ತು ಹೃದಯರಕ್ತನಾಳದ ಕಾಯಿಲೆಗಳನ್ನು ಕಡಿಮೆ ಮಾಡಲು ಪರಿಣಾಮಕಾರಿ.

ಕುಟ್ಕಿ

ಅಂತಃಸ್ರಾವಕ ಗ್ರಂಥಿಗಳು ಮತ್ತು ಸಂತಾನೋತ್ಪತ್ತಿ ವ್ಯವಸ್ಥೆಯನ್ನು ಉತ್ತಮಗೊಳಿಸುತ್ತದೆ. ಪಿಸಿಒಡಿ, ಗಂಡು ಮತ್ತು ಹೆಣ್ಣು ಬಂಜೆತನದಿಂದ ಬಳಲುತ್ತಿರುವವರಿಗೆ ಅತ್ಯುತ್ತಮವಾಗಿದೆ.

ಅರ್ಕ

ಬಿ ವಿಟಮಿನ್ ಈ ಧಾನ್ಯದಲ್ಲಿದ್ದು ಫಾಲಿಕ್ ಆ್ಯಸಿಡ್‌ನಿಂದ ಸಮೃದ್ಧವಾಗಿದೆ. ಸಲಾಡ್ ರೂಪದಲ್ಲಿ ಸೇವಿಸಬಹುದಾಗಿದೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ತುಳಸಿ ಗಿಡ

ತುಳಸಿ ಗಿಡ

ಸೌತೆಕಾಯಿ

ಸೌತೆಕಾಯಿಯ ಔಷಧಿ ಗುಣಗಳು ಹಾಗೂ ಅಡುಗೆಯಲ್ಲೂ ಉಪಯೋಗ