in

ತುಳಸಿ ಗಿಡ

ತುಳಸಿ ಗಿಡ
ತುಳಸಿ ಗಿಡ

ಹಿಂದೂ ಧರ್ಮದಲ್ಲಿ ತುಳಸಿ ಗಿಡವನ್ನು ಪವಿತ್ರವೆಂದು ಪರಿಗಣಿಸಲಾಗಿದೆ. ನಮ್ಮ ದೇಶದಲ್ಲಿ ತುಳಸಿ ಗಿಡಕ್ಕೆ ಪೂಜಿಸದ ಹಾಗೂ ಪವಿತ್ರ ಸ್ಥಾನ ನೀಡದ ಮನೆ ಇಲ್ಲ.ತುಳಸಿ ಗಿಡ ಪೂಜಿಸಿ ಫಲವನ್ನು ಪಡೆಯುವುದು ಮತ್ತು ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಪುರಾಣದಲ್ಲಿ ತುಳಸಿ ಗಿಡಕ್ಕೆ ವಿಶೇಷವಾದ ಸ್ಥಾನಮಾನವಿದೆ. ಅದಕ್ಕೆ ಮನೆಯಲ್ಲಿ ಮನೆ ಮುಂದೆ ಎಲ್ಲರೂ ಪೂಜಿಸುತ್ತಾರೆ. ತುಳಸಿ ಗಿಡವು ಎಷ್ಟು ಪವಿತ್ರವಾಗಿದೆಯೋ, ಅದು ಅಷ್ಟು ಪ್ರಯೋಜನಕಾರಿಯಾಗಿದೆ. ಶ್ಯಾಮ ತುಳಸಿ, ರಾಮ ತುಳಸಿ, ವಿಷ್ಣು ತುಳಸಿ, ಕೃಷ್ಣ ತುಳಸಿ, ನಿಂಬೆ ತುಳಸಿಯಂತಹ ತುಳಸಿಯಲ್ಲಿ ಹಲವು ವಿಧಗಳಿವೆ. ಎಲ್ಲಾ ವಿಧದ ತುಳಸಿಯು ತನ್ನದೇ ಆದ ಪ್ರಯೋಜನಗಳನ್ನು ಹೊಂದಿದೆ. ಆದರೆ ನಮ್ಮಲ್ಲಿ ಎರಡು ವಿಧದ ತುಳಸಿಯನ್ನು ಕಾಣಬಹುದು.

ಕೃಷ್ಣ ತುಳಸಿಯು ನೇರಳೆ ಬಣ್ಣ ಹೊಂದಿರುತ್ತದೆ. ರಾಮ ತುಳಸಿ ತುಂಬಾ ಬಿಳಿ ಅಥವಾ ಹಸಿರು ಬಣ್ಣದಿಂದ ಕೂಡಿರುತ್ತದೆ.

ಕೃಷ್ಣ ತುಳಸಿಯ ಎಲೆಗಳು ತುಂಬಾ ಪರಿಮಳ ವಿರುತ್ತದೆ. ಆದರೆ ರಾಮ ತುಳಸಿ ಸ್ವಲ್ಪ ಪರಿಮಳ ವಿರುತ್ತದೆ. ಕೃಷ್ಣ ತುಳಸಿಯನ್ನು ತಿಂದಾಗ ನಾಲಿಗೆ ಚುರುಚುರು ಅನಿಸುತ್ತದೆ. ಆದರೆ ರಾಮ ಕಳಿಸಿ ತಿಂದಾಗ ಸ್ವಲ್ಪ ನಾಲಿಗೆ ರುಚಿ ಎನಿಸುತ್ತದೆ .ಕೃಷ್ಣ ತುಳಸಿಯಲ್ಲಿ ಕಡಿಮೆ ತಂಪು ಇರುತ್ತದೆ ರಾಮ ತುಳಸಿಯಲ್ಲಿ ಹೆಚ್ಚಾಗಿ ತಂಪು ಇರುತ್ತದೆ. ಬೇಸಿಗೆ ಕಾಲದಲ್ಲಿ ಕೃಷ್ಣ ತುಳಸಿ ಹೆಚ್ಚು ಉಷ್ಣಾಂಶ ವನ್ನು ಹೊಂದಿದೆ. ತುಳಸಿ ಗಿಡ ದಲ್ಲಿ ರೋಗನಿರೋಧಕ ಶಕ್ತಿಯೂ ಹೆಚ್ಚಾಗಿರುತ್ತದೆ. ತುಳಸಿ ಗಿಡವನ್ನು ಮನೆ ಮುಂದೆ ಹಾಕಿಕೊಳ್ಳುವುದರಿಂದ ಸೊಳ್ಳೆಗಳ ಕಾಟ ಕಡಿಮೆ ಇರುತ್ತದೆ.

ತುಳಸಿಯ ಗುಣಗಳ ಬಗ್ಗೆ ಬಹುತೇಕ ಜನರಿಗೆ ತಿಳಿದಿದೆ. ಆಯುರ್ವೇದದಲ್ಲಿಯೂ ತುಳಸಿಯನ್ನು ಔಷಧೀಯ ಗುಣಗಳಿಂದ ಕೂಡಿದ ಸಸ್ಯವೆಂದು ಪರಿಗಣಿಸಲಾಗಿದೆ.

ತುಳಸಿಯನ್ನು ಪ್ರಾಚೀನ ಕಾಲದಿಂದಲೂ ಆಯುರ್ವೇದ ಔಷಧದಲ್ಲಿ ಬಳಸಲಾಗುತ್ತಿದೆ. ಇದು ಅನೇಕ ರೋಗಗಳನ್ನು ಗುಣಪಡಿಸುವ ಸಾಮರ್ಥ್ಯ ಹೊಂದಿದೆ. ಅದಕ್ಕಾಗಿಯೇ ತುಳಸಿಗೆ ಆಯುರ್ವೇದದಲ್ಲಿ ವಿಶೇಷ ಪ್ರಾಮುಖ್ಯತೆ ನೀಡಲಾಗಿದೆ.

ತುಳಸಿ ಗಿಡಕ್ಕೆ ಹೆಚ್ಚು ನೀರುಹಾಕುವುದು ಅಥವಾ ನಿರ್ವಹಣೆ ಅಗತ್ಯವಿಲ್ಲ, ಇದು ಕಡಿಮೆ ನೀರು, ಕಡಿಮೆ ಸೂರ್ಯನ ಬೆಳಕು ಮತ್ತು ಕಡಿಮೆ ಗಾಳಿಯಲ್ಲಿ ಬೆಳೆಯುತ್ತದೆ.

ತುಳಸಿ ಗಿಡ
ಕೃಷ್ಣ ತುಳಸಿ, ರಾಮ ತುಳಸಿ

ತಯಾರಾದ ಅಡುಗೆಯಲ್ಲಿ ತುಳಸಿಯನ್ನು ಸಾಮಾನ್ಯವಾಗಿ ತಾಜಾ ಆಗಿ ಬಳಸಲಾಗುತ್ತದೆ. ಇದನ್ನು ಸಾಧಾರಣವಾಗಿ ಕೊನೆಯ ಕ್ಷಣದಲ್ಲಿ ಸೇರಿಸಲಾಗುತ್ತದೆ, ಏಕೆಂದರೆ ಬೇಯುವಾಗ ಇದನ್ನು ಹಾಕಿದರೆ ಇದು ತಕ್ಷಣವೇ ತನ್ನ ಸ್ವಾದ ಕಳೆದುಕೊಳ್ಳುತ್ತದೆ.


ರೋಗ ಭಾದೆ

ತುಳಸಿಯು ಹಲವಾರು ಸಸ್ಯ ರೋಗಕಾರಕಗಳಿಂದ ನರಳುತ್ತದೆ; ಕೆಲವು ರೋಗಕಾರಕ ಕೀಟಗಳು ಸಸ್ಯವನ್ನು ಹಾಳುಮಾಡುವುದರ ಜೊತೆಗೆ ಇಳುವರಿಯನ್ನು ಕಡಿಮೆ ಮಾಡುತ್ತವೆ. ಫುಸರಿಯಂ ವಿಲ್ಟ್ ಎಂಬುದು ಮಣ್ಣಿನಿಂದ ಉಂಟಾಗುವ ಒಂದು ಶಿಲೀಂಧ್ರ ರೋಗವಾಗಿದೆ, ಇದು ಎಳೆ ತುಳಸಿ ಸಸಿಗಳನ್ನು ಶೀಘ್ರವೇ ನಾಶಮಾಡುತ್ತದೆ. ಎಳೆ ಸಸಿಗಳು ಪೈಥಿಯಂ ನ ನಿರಾರ್ದ್ರತೆಯಿಂದಲೂ ಸಾಯಬಹುದು.

ತುಳಸಿಗೆ ತಗಲುವ ಒಂದು ಸಾಮಾನ್ಯವಾದ ಪರ್ಣೀಯ ರೋಗವೆಂದರೆ ಗ್ರೇ-ಮೋಲ್ಡ್, ಇದು ಬೋಟ್ರೈಟಿಸ್ ಸಿನೇರಿಯ ದಿಂದ ಉಂಟಾಗುತ್ತದೆ; ಇದು ಫಸಲು ಸಂಗ್ರಹದ ನಂತರವೂ ಸಹ ಸೋಂಕನ್ನು ಉಂಟುಮಾಡಬಹುದು, ಹಾಗು ಇದು ಸಂಪೂರ್ಣ ಗಿಡವನ್ನು ನಾಶಮಾಡುವ ಸಾಮರ್ಥ್ಯ ಹೊಂದಿರುತ್ತದೆ. ತುಳಸಿಯ ಪರ್ಣಸಮೂಹದ ಮೇಲೆ ಕಪ್ಪು ಕಲೆಗಳೂ ಸಹ ಕಂಡುಬರುತ್ತವೆ. ಅಲ್ಲದೇ ಇದು ಶಿಲೀಂಧ್ರ ವರ್ಗದ ಕಾಲೇಟೋಟ್ರಿಚುಮ್ ನಿಂದ ಉಂಟಾಗುತ್ತದೆ.

ಆರೋಗ್ಯದ ಮೇಲಾಗುವ ಪರಿಣಾಮ
ಇತ್ತೀಚಿಗೆ, ತುಳಸಿಯಲ್ಲಿ ಪತ್ತೆಯಾಗುವ ಸಾರ ತೈಲಗಳು ಉಂಟುಮಾಡುವ ಆರೋಗ್ಯದ ಅನುಕೂಲಗಳ ಬಗ್ಗೆ ಹೆಚ್ಚಿನ ಸಂಶೋಧನೆಗಳು ನಡೆಯುತ್ತಿವೆ. ವೈಜ್ಞಾನಿಕ ಅಧ್ಯಯನಗಳು ತುಳಸಿ ಎಣ್ಣೆಯಲ್ಲಿರುವ ಸಂಯುಕ್ತಗಳು ತೀಕ್ಷ್ಣವಾದ ವಿಷಕಾರಕಗಳ ವಿರುದ್ದ ಆಕ್ಸಿಡೀಕರಣ ಪ್ರತಿರೋಧಕ, ಕ್ಯಾನ್ಸರ್ ಪ್ರತಿರೋಧಕ, ರೋಗಕಾರಕ ಸೂಕ್ಷ್ಮಜೀವಿ ಪ್ರತಿರೋಧಕ ಹಾಗು ಸೂಕ್ಷ್ಮಜೀವಿ ಪ್ರತಿರೋಧಕ ಅಂಶಗಳನ್ನು ಹೊಂದಿವೆಯೆಂದು ದೃಢಪಡಿಸಿವೆ.
ಇದನ್ನು ಸಾಂಪ್ರದಾಯಿಕವಾಗಿ ಒತ್ತಡ, ಆಸ್ತಮಾ ಹಾಗು ಮಧುಮೇಹಕ್ಕೆ ಪೂರಕ ಚಿಕಿತ್ಸೆಯಾಗಿ ಭಾರತದಲ್ಲಿ ನೀಡಲಾಗುತ್ತದೆ. ಸಿದ್ಧೌಷಧದಲ್ಲಿ, ಇದನ್ನು ಮುಖದಲ್ಲಿ ಉಂಟಾಗುವ ಮೊಡವೆಯನ್ನು ಕಡಿಮೆ ಮಾಡಲು ಬಳಸಲಾಗುತ್ತದೆ.
ಪ್ರತಿಯೊಂದು ಪೂಜೆ ಪುನಸ್ಕಾರಗಳಲ್ಲಿ ಶುದ್ಧತೆಯ ಸಂಕೇತವಾಗಿ ತುಳಸಿಯನ್ನು ಹೆಚ್ಚಾಗಿಯೇ ಬಳಸುತ್ತಾರೆ. ತುಳಸಿ ದೇವಿಯನ್ನು ಮುಟ್ಟಿದೊಡನೆಯೇ ನಾವು ಶುದ್ಧರಾಗುತ್ತೇವೆ ಹಾಗೂ ಪ್ರಾರ್ಥಿಸುವುದರಿಂದ ಎಲ್ಲಾ ಕಾಯಿಲೆಗಳು ಹೇಳಹೆಸರಿಲ್ಲದಂತೆ ಮಾಯವಾಗಿ ನೆಮ್ಮದಿ ಸಿಗುತ್ತದೆ ಹಾಗೆಯೇ ಒಮ್ಮೆ ತುಳಸಿಯನ್ನು ನೀರಿನಿಂದ ತೋಯಿಸಿದರೆ ಯಮರಾಜನ ಭಯವು ಮರೆಯಾಗುತ್ತದೆ ಎಂದು ಸ್ಕಂದ ಪುರಾಣವು ಹೇಳುತ್ತದೆ.

ತುಳಸಿ ಗಿಡ
ರಾಮ ತುಳಸಿ

ವಾಸ್ತು ಕೂಡ ತುಳಸಿಗೆ ಪೂಜನೀಯ ಸ್ಥಾನವನ್ನು ನೀಡಿದ ಈ ಗಿಡವನ್ನು ಮನೆಯ ಮುಂದುಗಡೆ ಬೆಳೆಸುವುದರಿಂದ ಮನೆಯವರೆಲ್ಲರಿಗೂ ಒಳಿತಾಗುತ್ತದೆ ಎಂಬುದಾಗಿ ನಮ್ಮ ಹಿರಿಯರು ಮನೆಯ ಮುಂದೆ ತುಳಸಿ ಕಟ್ಟೆಯನ್ನು ಮಾಡಿ ಅದರಲ್ಲಿ ತುಳಸಿಯನ್ನು ನೆಡುತ್ತಾರೆ. ವೈದ್ಯಕೀಯ ಕ್ಷೇತ್ರದಲ್ಲೂ ತುಳಸಿಯು ಹಲವಾರು ಅದ್ಭುತಗಳನ್ನು ಮಾಡಿದೆ. ನಮ್ಮ ಭಾರತೀಯ ಪರಂಪರೆಯು ಸಾವಿರಾರು ವರ್ಷಗಳಿಂದ ತುಳಸಿಯನ್ನು ಬಳಸಿಕೊಂಡು ಬರುತ್ತಿದೆ. ಇದು ರಕ್ತದೊತ್ತಡ ಹಾಗೂ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸುತ್ತದೆ ಎಂಬ ನಂಬಿಕೆಯೂ ಇದೆ.
ತುಳಸಿ ಸಾಮಾನ್ಯ ಎಲ್ಲರ ಮನೆಯಲ್ಲೂ ಬೆಳೆಯುವ ದೈವಿಕ ಸಸ್ಯ. ತುಳಸಿ ಧಾರ್ಮಿಕವಾಗಿ ಮಾತ್ರ ಹೆಸರುಗಳಿಸಿಲ್ಲ, ಅದರಲ್ಲಿ ಹಲವು ಔಷಧೀಯ ಗುಣಗಳೂ ಇದೆ. ಆದರೆ ಈ ಅಂಶ ತುಳಸಿ ಬೆಳೆಸಿದ ಎಷ್ಟೋ ಜನರಿಗೂ ತಿಳಿದಿರುವುದಿಲ್ಲ. ಇದರ ಎಲೆಯ ಗಂಧವೇ ವಾತಾವರಣವನ್ನು ತಂಪು ಮತ್ತು ಕಲ್ಮಶರಹಿತವಾಗಿಸುವ ಶಕ್ತಿ ಹೊಂದಿದೆ. ಹಾಗಾಗಿ ಎಲ್ಲರೂ ತಮ್ಮ ತಮ್ಮ ಮನೆಗಳಲ್ಲಿ ತುಳಸಿಯನ್ನು ಬೆಳೆಸುವುದರ ಜೊತೆಗೆ ವಾತಾವರಣವನ್ನು ಶುದ್ಧವಾಗಿರಿಸಬಹುದು.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಕುರಿಗಳು

ಕುರಿಗಳಿಗೆ ಬರುವ ರೋಗಗಳು

ಸಿರಿಧಾನ್ಯ

ಸಿರಿಧಾನ್ಯದಲ್ಲಿ ನಮ್ಮ ಆರೋಗ್ಯ