in ,

ಸುವರ್ಣ ಗೆಡ್ಡೆಯಿಂದ ಸಾಕಷ್ಟು ಕಾಯಿಲೆಗಳಿಗೆ ರಕ್ಷಣೆ ಸಿಗುತ್ತದೆ

ಸುವರ್ಣ ಗೆಡ್ಡೆ
ಸುವರ್ಣ ಗೆಡ್ಡೆ

ಸುವರ್ಣ ಗೆಡ್ಡೆ  ದಕ್ಷಿಣ ಏಷಿಯಾ, ಆಫ್ರಿಕಾ, ಆಗ್ನೇಯ ಏಷ್ಯಾ ಮತ್ತು ಉಷ್ಣವಲಯದ ಪೆಸಿಫಿಕ್ ದ್ವೀಪಗಳ ಪ್ರದೇಶದಲ್ಲಿ ಕಂಡುಬರುವ ಒಂದು ಸಸ್ಯ. ಇದು ತರಕಾರಿಯಾಗಿ ಬಳಕೆಯಾಗುವುದರಿಂದ ವಾಣಿಜ್ಯ ಬೆಳೆಯಾಗಿಯೂ ಬೆಳೆಸಬಹುದಾಗಿದೆ. ಆಂಗ್ಲ ಭಾಷೆಯಲ್ಲಿ ಇದನ್ನು “ಎಲಿಫೆಂಟ್ ಯಾಮ್” ಎಂದು ಕರೆಯುತ್ತಾರೆ.

ಸಸ್ಯ ಕೊಳೆತಿರುವ ವಾಸನೆಯನ್ನು ನೀಡುತ್ತದೆ. ಪಿಸ್ಟಿಲ್ಲೇಟ್ (ಹೆಣ್ಣು) ಮತ್ತು ಸ್ಟಾಮಿನೇಟ್ (ಗಂಡು) ಹೂಗಳು ಒಂದೇ ಗಿಡದಲ್ಲಿ ಇರುವುದಿಲ್ಲ. ಹೂವುಗಳು ಸಿಲಿಂಡರ್‍ ಆಕಾರದ ಗುಂಪಿನಲ್ಲಿ ಬೆಳೆಯುತ್ತವೆ. ಚಿಕ್ಕ ಕಾಯಿಗಳು ಹಣ್ಣಾದ ನಂತರ ಕೆಂಪು ಬಣ್ಣ ಇರುತ್ತವೆ ಮತ್ತು ಇವು ಗೋಳಾಕಾರ ಅಥವಾ ಅಂಡಾಕಾರದಲ್ಲಿ ಇರುವುದಿಲ್ಲ.

ಸುವರ್ಣ ಗೆಡ್ಡೆಯಿಂದ ಸಾಕಷ್ಟು ಕಾಯಿಲೆಗಳಿಗೆ ರಕ್ಷಣೆ ಸಿಗುತ್ತದೆ
ಸುವರ್ಣ ಗೆಡ್ಡೆ ಬೆಳೆ

ಆಫ್ರಿಕಾದಂತಹ ದೇಶಗಳಲ್ಲಿ ಇದಕ್ಕೆ ಧಾರ್ಮಿಕವಾಗಿಯೂ ಸ್ಥಾನ ನೀಡಲಾಗಿದೆ. ಅಲ್ಲಿ ಸುವರ್ಣ ಗಡ್ಡೆಯ ವಾರ್ಷಿಕ ಹಬ್ಬವನ್ನು ಆಚರಿಸಲಾಗುತ್ತದೆ. ಐವಾಜಿ ಎನ್ನುವ ಹಬ್ಬವನ್ನು ಐಗ್ಬೊ ಎನ್ನುವ ಜನಾಂಗದವರು ಆಚರಿಸುವರು. ಇದನ್ನು ಹೊಸ ಸುವರ್ಣ ಗಡ್ಡೆ ತಿನ್ನುವ ಹಬ್ಬವೆಂದು ಹೇಳಲಾಗುತ್ತದೆ. ಭಾರತದಲ್ಲಿ ಇದನ್ನು ಸಂಪತ್ತಿನ ದೇವರೆಂದು ಪೂಜಿಸಲಾಗುತ್ತದೆ. ಇದು ಯಾವುದೇ ಜಾಗದಲ್ಲಿ ಬೆಳೆಯುವುದು ಮತ್ತು ಸಾಯುವುದು ಕಡಿಮೆ. ಇದನ್ನು ಹೆಚ್ಚಾಗಿ ದೀಪಾವಳಿ ಸಂದರ್ಭದಲ್ಲಿ ತಿನ್ನಲಾಗುತ್ತದೆ.

ಜೀರ್ಣಾಂಗ ವ್ಯವಸ್ಥೆಯಲ್ಲಿ ಸಾಕಷ್ಟು ಒಳ್ಳೆಯ ಪ್ರಭಾವ ಬೀರುತ್ತದೆ :

ಸುವರ್ಣಗಡ್ಡೆ ನಮ್ಮ ದೇಹಕ್ಕೆ ಉಷ್ಣದ ಪ್ರಭಾವವನ್ನು ಉಂಟು ಮಾಡುತ್ತದೆ ಎಂದು ಹೇಳುತ್ತಾರೆ. ಜೊತೆಗೆ ಇದರ ರುಚಿಯು ಸಹ ತುಂಬಾ ಗಾಢವಾಗಿ ಇರುವುದರಿಂದ ಜೀರ್ಣ ಪ್ರಕ್ರಿಯೆಯಲ್ಲಿ ಮತ್ತು ಮೆಟಬಾಲಿಸಂ ಪ್ರಕ್ರಿಯೆಯಲ್ಲಿ ಇದರ ಪಾತ್ರವನ್ನು ಮರೆಯುವ ಹಾಗಿಲ್ಲ.

ಮುಖ್ಯವಾಗಿ ಜೀರ್ಣ ನಾಳದ ಭಾಗದಲ್ಲಿ ಕಂಡು ಬರುವ ಸಿಂಬಳವನ್ನು ಇದು ಕಡಿಮೆ ಮಾಡಿ ಬೈಲ್ ಜ್ಯೂಸ್ ಉತ್ಪತ್ತಿಯನ್ನು ಹೆಚ್ಚು ಮಾಡಿ ಜೀರ್ಣ ಪ್ರಕ್ರಿಯೆಗೆ ಅನುಕೂಲ ಮಾಡಿಕೊಡುತ್ತದೆ.

ಆನಂತರದಲ್ಲಿ ದೇಹದಲ್ಲಿ ಹಗುರವಾದ ವಾತಾವರಣವನ್ನು ನಿರ್ಮಾಣ ಮಾಡಿ ನಾವು ಸೇವನೆ ಮಾಡಿದ ಆಹಾರದಲ್ಲಿ ಕಂಡು ಬರುವ ಪೌಷ್ಟಿಕ ಸತ್ವಗಳನ್ನು ಹೀರಿಕೊಂಡು ಮೆಟಬಾಲಿಸಂ ಪ್ರಕ್ರಿಯೆಗೆ ಅಚ್ಚುಕಟ್ಟಾಗಿ ಅನುಕೂಲ ಮಾಡಿಕೊಡುತ್ತದೆ.

ಸುವರ್ಣ ಗೆಡ್ಡೆಯಿಂದ ಸಾಕಷ್ಟು ಕಾಯಿಲೆಗಳಿಗೆ ರಕ್ಷಣೆ ಸಿಗುತ್ತದೆ
ಸುವರ್ಣಗೆಡ್ಡೆ ಹೂವು

ತೂಕ ಇಳಿಸಲು :

ಒಂದು ಕಪ್ ಸುವರ್ಣ ಗಡ್ಡೆಯಲ್ಲಿ ಕೇವಲ 57 ಕ್ಯಾಲರಿ ಮಾತ್ರ ಇದೆ. ಇದರಲ್ಲಿ ವಿಟಮಿನ್ ಬಿ6 ಮತ್ತು ಪೊಟಾಶಿಯಂ, ವಿಟಮಿನ್ ಸಿ ಮತ್ತು ನಾರಿನಾಂಶವಿದೆ. ಇದು ನಮ್ಮನ್ನು ಆರೋಗ್ಯವಾಗಿಡುವುದು ಮತ್ತು ತೂಕ ಇಳಿಸಲು ಬಯಸುವವರಿಗೆ ಇದು ಅತ್ಯುತ್ತಮ ಆಹಾರ. ಇದು ದೇಹಕ್ಕೆ ಶಕ್ತಿ ನೀಡುವುದು ಮತ್ತು ಅದರಲ್ಲಿ ಇರುವಂತಹ ಪೋಷಕಾಂಶಗಳು ಆರೋಗ್ಯವಾಗಿಡಲು ನೆರವಾಗುವುದು.

ಗರ್ಭಿಣಿ ಮಹಿಳೆಯರಿಗೆ ಒಳ್ಳೆಯದು : 

ಸುವರ್ಣ ಗಡ್ಡೆಯಲ್ಲಿ ಇರುವಂತಹ ಪೋಷಕಾಂಶಗಳು ಗರ್ಭಿಣಿ ಮಹಿಳೆ ಹಾಗೂ ಗರ್ಭದಲ್ಲಿರುವ ಮಗುವಿಗೆ ತುಂಬಾ ಒಳ್ಳೆಯದು. ಆರಂಭಿಕ ಹಂತದಲ್ಲಿ ಇದು ಭೂಣದಲ್ಲಿರುವ ಮಗುವಿಗೆ ತುಂಬಾ ಒಳ್ಳೆಯದು. ಸುವರ್ಣ ಗಡ್ಡೆಯಲ್ಲಿ ಇರುವಂತಹ ಫಾಲಟೆ ಎನ್ನುವ ಅಂಶವು ಮೆದುಳು ಮತ್ತು ಸಿಎನ್ ಎಸ್ ಗೆ ಅತ್ಯಗತ್ಯ. ಸುವರ್ಣ ಗಡ್ಡೆಯಲ್ಲಿ ಇರುವಂತಹ ಖನಿಜಾಂಶಗಳು ಬೆಳಗ್ಗಿನ ಸಮಸ್ಯೆ ನಿವಾರಣೆ ಮಾಡುವುದು ಮತ್ತು ಗರ್ಭಿಣಿಯರಲ್ಲಿ ಮೂಳೆಗಳನ್ನು ಬಲಗೊಳಿಸುವುದು. ಇದರಿಂದ ಗರ್ಭದಲ್ಲಿರುವ ಮಗು ಒಳ್ಳೆಯ ರೀತಿ ಬೆಳವಣಿಗೆಯಾಗುವುದು. ಕೆಂಪು ರಕ್ತದ ಕಣಗಳು ಕಡಿಮೆಯಾದ ಪರಿಣಾಮದಿಂದಾಗಿ ಮಗುವಿನಲ್ಲಿ ವಿಕಲಾಂಗತೆ ಕಾಣಿಸುವುದು. ಸುವರ್ಣ ಗಡ್ಡೆಯಲ್ಲಿ ಇರುವಂತಹ ಕಬ್ಬಿನಾಂಶವು ಈ ಸಮಸ್ಯೆ ನಿವಾರಣೆ ಮಾಡುವುದು.

ಪ್ರತಿರೋಧಕ ಶಕ್ತಿಗೆ ಒಳ್ಳೆಯದು :

ಸುವರ್ಣ ಗಡ್ಡೆಯಲ್ಲಿ ವಿಟಮಿನ್ ಎ, ಸಿ ಮತ್ತು ಇತರ ಕೆಲವೊಂದು ಖನಿಜಾಂಶಗಳು ಇವೆ. ಇದು ದೇಹದಲ್ಲಿ ಆ್ಯಂಟಿಆಕ್ಸಿಡೆಂಟ್ ನಂತೆ ಕೆಲಸ ಮಾಡಿ ಕೆಂಪು ರಕ್ತದ ಕಣಗಳು ಉತ್ಪತ್ತಿಯಾಗಲು ನೆರವಾಗುವುದು. ಇದು ಪ್ರತಿರೋಧಕ ಶಕ್ತಿ ಸುಧಾರಿಸುವುದು ಮತ್ತು ಆರೋಗ್ಯವಾಗಿಡುವುದು.

ತ್ವಚೆಗೆ ಸಾಕಷ್ಟು ಅನುಕೂಲಕಾರಿ :

ಈಗಿನ ಕಾಲದಲ್ಲಿ ಯುವ ಜನತೆ ಮುಖದ ಮೇಲೆ ಮೊಡವೆಗಳು, ಕಲೆಗಳು, ಸುಕ್ಕುಗಳು, ಗೆರೆಗಳು ಅಥವಾ ದದ್ದುಗಳ ಸಮಸ್ಯೆಗಳನ್ನು ಎದುರಿಸುತ್ತಾರೆ. ಇದಕ್ಕೆ ಬಹುಮುಖ್ಯ ಕಾರಣ ಎಂದರೆ ಅವರ ಆಹಾರ ಪದ್ಧತಿ ಎಂದು ಹೇಳಬಹುದು.

ಪರೋಕ್ಷವಾಗಿ ಇದು ಅವರ ಚರ್ಮದ ಮೇಲಿನ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಹಾಗಾಗಿ ಆಹಾರ ಪದ್ಧತಿಯಲ್ಲಿ ಬದಲಾವಣೆಗಳನ್ನು ತಂದುಕೊಳ್ಳುವುದು ಬಹಳ ಮುಖ್ಯ ಎಂದು ಹೇಳಬಹುದು.

ಸುವರ್ಣ ಗೆಡ್ಡೆಯಿಂದ ಸಾಕಷ್ಟು ಕಾಯಿಲೆಗಳಿಗೆ ರಕ್ಷಣೆ ಸಿಗುತ್ತದೆ
ಪಲ್ಯ ಅಥವಾ ಸಾಂಬಾರುಗೆ ಸಿದ್ದಮಾಡಿರುವ ಸುವರ್ಣಗೆಡ್ಡೆ ತುಂಡುಗಳು

ಚರ್ಮದ ಒರಟುತನಕ್ಕೆ ಸಹ ನಾವು ತಿನ್ನುವ ಆಹಾರ ಕಾರಣವಾಗುತ್ತದೆ ಎಂದರೆ ನಮ್ಮ ಆಹಾರ ಪದ್ಧತಿ ಇಂದು ಎಷ್ಟು ಹದಗೆಟ್ಟಿದೆ ಎಂಬುದನ್ನು ನಾವು ಆಲೋಚನೆ ಮಾಡಬೇಕು.

ದೀರ್ಘಕಾಲದಲ್ಲಿ ನಿರಂತರವಾಗಿ ಸುವರ್ಣ ಗಡ್ಡೆಯನ್ನು ಸೇವನೆ ಮಾಡುವುದರಿಂದ ನಮ್ಮ ತ್ವಚೆ ಸಂಪೂರ್ಣವಾಗಿ ಮೃದುವಾಗುತ್ತದೆ ಮತ್ತು ಕೋಮಲ ಸ್ವಭಾವವನ್ನು ಹೊಂದುತ್ತದೆ.

​ಪಿಎಂಎಸ್ ಮತ್ತು ಋತುಬಂಧಕ್ಕೆ :

ಋತುಚಕ್ರಕ್ಕೆ ಮೊದಲು ಕಾಣಿಸಿಕೊಳ್ಳುವಂತಹ ಸಮಸ್ಯೆಯನ್ನು ಸುವರ್ಣ ಗಡ್ಡೆಯು ನಿವಾರಣೆ ಮಾಡುವುದು. ಋತುಬಂಧ ಎದುರಿಸುವಂತಹ ಮಹಿಳೆಯರಿಗೂ ಇದು ಒಳ್ಳೆಯದು. ಇದು ಹಾರ್ಮೋನು ಸಮತೋಲನ ಕಾಪಾಡುವುದು ಮತ್ತು ದೇಹದಲ್ಲಿ ವಿಟಮಿನ್ ಬಿ6 ಮಟ್ಟವನ್ನು ಕಾಪಾಡುವುದು.

ರಕ್ತಹೀನತೆ ನಿವಾರಣೆ :

ಸುವರ್ಣ ಗಡ್ಡೆಯಲ್ಲಿ ಕಬ್ಬಿಣ ಹಾಗೂ ಇತರ ಕೆಲವೊಂದು ಖನಿಜಾಂಶಗಳು ಇರುವ ಕಾರಣದಿಂದಾಗಿ ಇದು ಕೆಂಪುರಕ್ತದ ಕಣಗಳನ್ನು ಹೆಚ್ಚಿಸುವುದು ಮತ್ತು ರಕ್ತಹೀನತೆ ನಿವಾರಣೆ ಮಾಡುವುದು. ರಕ್ತನಾಳಗಳನ್ನು ಆರೋಗ್ಯವಾಗಿಡುವ ಕಾರಣದಿಂದ ರಕ್ತಸಂಚಾರವು ಸುಗಮವಾಗಿ ಆಗುವುದು.

ಸಾಕಷ್ಟು ಕಾಯಿಲೆಗಳಿಂದ ರಕ್ಷಣೆ ಸಿಗುತ್ತದೆ :

ವಿಟಮಿನ್ ಅಂಶಗಳು ಮತ್ತು ಖನಿಜಾಂಶಗಳು ಅಪಾರ ಪ್ರಮಾಣದಲ್ಲಿ ಕಂಡುಬರುವುದರಿಂದ ಜೊತೆಗೆ ಫೈಟೋನ್ಯೂಟ್ರಿಯೆಂಟ್ಸ್ ಅಂಶಗಳು ಸಹ ಸಾಕಷ್ಟು ಪ್ರಮಾಣದಲ್ಲಿ ಇರುವುದರಿಂದ ದೀರ್ಘಕಾಲದಿಂದ ಬಳಲುತ್ತಿರುವ ಸಾಕಷ್ಟು ಆರೋಗ್ಯ ಸಮಸ್ಯೆಗಳು ಇದರಿಂದ ಬಗೆಹರಿಯುತ್ತವೆ.

ಯಾರಿಗೆ ವಿಪರೀತ ಬೊಜ್ಜು, ಹೃದಯದ ಸಮಸ್ಯೆಗಳು, ಮಧುಮೇಹ, ಕ್ಯಾನ್ಸರ್ ಇತ್ಯಾದಿ ಸಮಸ್ಯೆಗಳು ಸುವರ್ಣಗೆಡ್ಡೆ ಸೇವನೆಯಿಂದ ವಾಸಿಯಾಗುತ್ತದೆ ಎಂದು ಹೇಳುತ್ತಾರೆ.

ಹಾರ್ಮೋನುಗಳ ಪ್ರಭಾವ ಹೆಚ್ಚಾಗುತ್ತದೆ :

ಸುವರ್ಣಗೆಡ್ಡೆಯಿಂದ ಯುವ ಜನತೆಗೆ ಸಾಕಷ್ಟು ಅನುಕೂಲವಿದೆ ಎಂದು ಹೇಳುತ್ತಾರೆ. ಏಕೆಂದರೆ ಬೆಳೆಯುತ್ತಿರುವ ಹುಡುಗ-ಹುಡುಗಿಯರಲ್ಲಿ ಹಾರ್ಮೋನುಗಳ ಬದಲಾವಣೆ ಮತ್ತು ಉತ್ಪತ್ತಿ ಹೆಚ್ಚಾಗಿರುತ್ತದೆ.

ಹಾಗಾಗಿ ಇದನ್ನು ಉತ್ತೇಜಿಸುವಂತಹ ಗುಣ ಲಕ್ಷಣಗಳನ್ನು ಒಳಗೊಂಡಿರುವ ಒಂದು ತರಕಾರಿ ಪದಾರ್ಥ ತಿನ್ನಲು ಬೇಕಾಗಿರುತ್ತದೆ. ಹಾಗಾಗಿ ಯುವಜನತೆ ತಮ್ಮ ಆಹಾರ ಪದ್ಧತಿಯಲ್ಲಿ ಇದನ್ನು ಸೇರಿಸಿಕೊಳ್ಳುವುದರಿಂದ ಸದೃಢವಾಗಿ, ಒಳ್ಳೆಯ ಮೈಕಟ್ಟನ್ನು ಹೊಂದುವಂತೆ ಅನುಕೂಲವಾಗುತ್ತದೆ.

ಸುವರ್ಣಗಡ್ಡೆಯನ್ನು ಬೇಯಿಸಿ ನಿಮ್ಮ ಆಹಾರ ಪದ್ಧತಿಯಲ್ಲಿ ಸೇರಿಸಿಕೊಳ್ಳುವ ವಿಧಾನ :

ಸುವರ್ಣ ಗೆಡ್ಡೆಯಿಂದ ಸಾಕಷ್ಟು ಕಾಯಿಲೆಗಳಿಗೆ ರಕ್ಷಣೆ ಸಿಗುತ್ತದೆ
ಪಲ್ಯ ಮಾಡಿ ಸವಿಯಬಹುದು

ಮೊದಲಿಗೆ ಸುವರ್ಣಗಡ್ಡೆಯ ಸಿಪ್ಪೆಯನ್ನು ತೆಗೆದು ಹಾಕಿ ಅದರಲ್ಲಿರುವ ಧೂಳು ಮತ್ತು ಕೊಳೆಯ ಅಂಶವನ್ನು ಚೆನ್ನಾಗಿ ತೊಳೆಯಬೇಕು. ಯಾವುದೇ ಕಾರಣಕ್ಕೂ ಈ ಭಾಗವನ್ನು ತಿನ್ನಬಾರದು.

ಈಗ ಉಳಿದಿರುವ ಸುವರ್ಣ ಗೆಡ್ಡೆಯನ್ನು ನಿಮಗೆ ಬೇಕಾದ ಗಾತ್ರಕ್ಕೆ ಹೆಚ್ಚಿಕೊಂಡು ವಿನೆಗರ್ ನೀರಿನಲ್ಲಿ ಚೆನ್ನಾಗಿ ಕುದಿಸಿ, ನಿಂಬೆಹಣ್ಣು ಅಥವಾ ಹುಣಸೆಹಣ್ಣಿನ ಹುಳಿಯೊಂದಿಗೆ ಮಿಶ್ರಣ ಮಾಡಿ ಬೇರೆ ಬೇರೆ ರೂಪದಲ್ಲಿ ಸವಿಯಬಹುದು.

ಆದರೆ ಜಾಸ್ತಿ ಹೊತ್ತು ಸುವರ್ಣ ಗೆಡ್ಡೆಯನ್ನು ನೀರಿನಲ್ಲಿ ನೆನೆ ಹಾಕಿದರೆ ಒಳ್ಳೆಯದು ಎಂದು ಹೇಳುತ್ತಾರೆ. ಇದರಿಂದ ಅದರಲ್ಲಿರುವ ಬಣ್ಣ ಹೊರಬರುತ್ತದೆ ಮತ್ತು ಒಳ್ಳೆಯ ಅಂಶಗಳು ಮಾತ್ರ ನಮಗೆ ಸಿಗುತ್ತವೆ ಎಂದು ಹೇಳಬಹುದು.

ಕೂದಲಿಗೆ ಒಳ್ಳೆಯದು :

ಕೂದಲು ಸುಂದರವಾಗಿದ್ದರೆ ಆಗ ಅದು ದೇಹದ ಸಂಪೂರ್ಣ ಸೌಂದರ್ಯವನ್ನು ಎದ್ದು ಕಾಣುವಂತೆ ಮಾಡುವುದು. ಇದು ನಿಮ್ಮ ವ್ಯಕ್ತಿತ್ವಕ್ಕೂ ನೆರವಾಗುವುದು. ಬೆಟಾ ಕ್ಯಾರೋಟಿನ್ ಅಧಿಕವಾಗಿರುವಂತಹ ಸುವರ್ಣ ಗಡ್ಡೆಯು ಕೂದಲಿನ ಬೆಳವಣಿಗೆಗೆ ನೆರವಾಗುವುದು. ಬೆಟಾ ಕ್ಯಾರೋಟಿನ್ ಹೊರತಾಗಿ ಕೂದಲು ಒಣ ಹಾಗೂ ನಿಸ್ತೇಜವಾಗಿ ಕಾಣಿಸುವುದು.

ಸುವರ್ಣ ಗಡ್ಡೆಯಿಂದ ಚಿಪ್ಸ್ ಮಾಡಬಹುದು :

ಥೇಟ್ ನೀವು ಬಾಳೆಕಾಯಿ ಚಿಪ್ಸ್ ಮಾಡಿದಂತೆ ಸುವರ್ಣ ಗೆಡ್ಡೆಯನ್ನು ಸಹ ಚೆನ್ನಾಗಿ ತೊಳೆದು ತೆಳ್ಳಗೆ ಕಟ್ ಮಾಡಿ ಪುಟ್ಟ ಮಕ್ಕಳಿಗೆ ಮತ್ತು ಮನೆಯಲ್ಲಿರುವ ವಯಸ್ಸಾದವರಿಗೆ ಚಿಪ್ಸ್ ತಯಾರು ಮಾಡಿ ಸವಿಯಲು ಕೊಡಬಹುದು.

ಮೆದುಳಿನ ಆರೋಗ್ಯಕ್ಕೆ :

ಸುವರ್ಣ ಗಡ್ಡೆಯಲ್ಲಿ ಪೊಟಾಶಿಯಂ ಸಮೃದ್ಧವಾಗಿದೆ. ಇದು ಮೆದುಳಿನ ನರಗಳ ಚಟುವಟಿಕೆ ಉತ್ತಮಪಡಿಸುವುದು. ಇದು ನರ ವ್ಯವಸ್ಥೆಯ ಚಟುವಟಿಕೆಯನ್ನು ಸುಧಾರಿಸುವುದು.

ಪಲ್ಯ ಮಾಡಿ ಸವಿಯಬಹುದು :

ಸುವರ್ಣ ಗೆಡ್ಡೆಯನ್ನು ಸಣ್ಣಗೆ ಹೆಚ್ಚಿ ನೀರಿನಲ್ಲಿ ನೆನೆ ಹಾಕಿ ಸ್ವಲ್ಪ ವಿನಿಗರ್ ಹಾಕಿ ಸ್ವಲ್ಪ ಹೊತ್ತು ಹಾಗೇ ಇಟ್ಟು ನಂತರ ಅದಕ್ಕೆ ಬೇಕಾದಂತಹ ಈರುಳ್ಳಿ ಟೊಮೆಟೊ ಮತ್ತು ಮಿಕ್ ಅಂತಹ ಮಸಾಲೆ ಪದಾರ್ಥಗಳನ್ನು ಹಾಕಿ ಬೇಯಿಸಿ ಪಲ್ಯ ತಯಾರು ಮಾಡಿ ಸವಿಯಬಹುದು.

ಸುವರ್ಣ ಗಡ್ಡೆಯಲ್ಲಿ ಇರುವಂತಹ ಪೋಷಕಾಂಶಗಳು ನಿಮ್ಮ ಹೃದಯ, ನರವ್ಯವಸ್ಥೆ ಮತ್ತು ಜೀರ್ಣಕ್ರಿಯೆ ವ್ಯವಸ್ಥೆಯನ್ನು ಆರೋಗ್ಯವಾಗಿಡುವುದು. ಇದು ತೂಕ ಕಳೆದುಕೊಳ್ಳಲು ನೆರವಾಗುವುದು ಹಾಗೂ ಕಣ್ಣುಗಳನ್ನು ಆರೋಗ್ಯವಾಗಿಡುವುದು. ಇದು ಕೂದಲು ಹಾಗೂ ಚರ್ಮಕ್ಕೂ ಒಳ್ಳೆಯದು. ನೀವು ತೂಕ ಇಳಿಸಿಕೊಳ್ಳುವ ಬಗ್ಗೆ ಆಲೋಚನೆ ಮಾಡುತ್ತಲಿದ್ದರೆ, ಆಗ ನೀವು ಸುವರ್ಣ ಗಡ್ಡೆಯನ್ನು ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳಿ. ಸುವರ್ಣ ಗಡ್ಡೆಯ ಬಾಲಾದಿ ವೃದ್ಧರ ತನಕ ಪ್ರತಿಯೊಬ್ಬರಿಗೂ ತುಂಬಾ ಒಳ್ಳೆಯದು. ಇದರಲ್ಲಿ ಇರುವಂತಹ ಕ್ಯಾಲ್ಸಿಯಂ ಗರ್ಭಿಣಿಯರು ಹಾಗೂ ವಯಸ್ಸಾದವರಿಗೆ ಒಳ್ಳೆಯದು. ಇದು ಅಸ್ಥಿರಂಧ್ರತೆಯನ್ನು ದೂರವಿಡುವುದು. ಇದೆಲ್ಲವನ್ನು ಹೊರತುಪಡಿಸಿ, ಇದು ರುಚಿಯಲ್ಲೂ ಅದ್ಭುತವಾಗಿದೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.

ಹಕ್ಕಿಗಳ ವಲಸೆ

ಹಕ್ಕಿಗಳ ವಲಸೆ ಪ್ರಕ್ರಿಯೆಗಳು

ಡೇವಿಡ್ ವಾರ್ನರ್

ವಾರ್ನರ್ ಮೂರನೇ ಏಕದಿನ ಪಂದ್ಯದಲ್ಲಿ ಶತಕ ಸಿಡಿಸಿ, 20 ವರ್ಷಗಳ ಹಳೆಯ ದಾಖಲೆ ಉಡೀಸ್