ಕುರು ಎಂದರೆ ಕೀವಿನ ಸ್ಥಳಿಕ ಶೇಖರಣೆಯಿಂದ ಆಗುವ ಗುಳ್ಳೆ. ಗಾತ್ರದಲ್ಲಿ ಸಣ್ಣವಾದ ಕೀವು ಕುರುವಿಗೆ ಕೀವುಗುಳ್ಳೆ ಎನ್ನುತ್ತಾರೆ. ತೀರ ಆಳವಾಗಿ ಹಾಳುಗೆಡಿಸುವ ಹಲಕಡೆ ತೂತುಗಳಾಗಿ ಹರಡಿರುವುದು ರಾಜಕುರು ಎಲ್ಲೆಲ್ಲೂ ಹರಡಿದಂತೆ ಕೀವಾಡುವುದು ವಿಸರ್ಪಿ. ಚರ್ಮದ ವಿಸರ್ಪಿ, ಅಳಿಗೊಳಿಪಿನ ವಿಸರ್ಪಿಗಳು ಉದಾಹರಣೆಗಳು. ಕೊದಲಿನ ಕೋಶಿಕಗಳ ಬೆವರು ಗ್ರಂಥಿಗಳ ಸೋಂಕಿನಿಂದ, ಕೀವುಗುಳ್ಳೆಯಂತಿರುವ ಮಿಟ್ಟೆದದ್ದು ಎದ್ದಿರುವುದಕ್ಕೆ ಮೊಡವೆ ಅಥವಾ ಕಜ್ಜಿ ಎಂದು ಹೆಸರು. ಕುರು ಮೇಲ್ಮೇಲೊ ಆಳವಾಗೋ ಕೂರಾಗೋ ಬೀರೂರಿಯೇ ಇರಬಹುದು.
ಕೆಲವರಿಗೆ ಒಂದು ಕಣ್ಣಿನ ರೆಪ್ಪೆಯಲ್ಲಿ ಒಂದು ಗುಳ್ಳೆ ಕಂಡು ಬಂದರೆ ಇನ್ನು ಕೆಲವರಿಗೆ ಎರಡರಿಂದ ಮೂರು ಗುಳ್ಳೆಗಳು ಕಾಣಿಸುತ್ತವೆ. ವೈದ್ಯಕೀಯ ಭಾಷೆಯಲ್ಲಿ ಈ ಸಮಸ್ಯೆಯನ್ನು “ಚಾಲಾಜಿಯಾ” ಎಂದು ಕರೆಯುತ್ತಾರೆ.
ಸಾಮಾನ್ಯವಾಗು ಬೇಸಿಗೆಯಲ್ಲಿ ವಾತಾವರಣ ತುಂಬಾ ಉಷ್ಣತೆಯಿಂದ ಕೂಡಿರುವ ಕಾರಣ ದೇಹದಲ್ಲಿ ಉಷ್ಣತೆ ಹೆಚ್ಚಾಗಿ ಕೆಲವರು ಕುರು ಸಮಸ್ಯೆಯನ್ನು ಎದುರಿಸುತ್ತಾರೆ. ಇದರಿಂದ ಕಣ‍್ಣಿನಲ್ಲಿ ನೋವು, ಊತ ಕಾಣಿಸಿಕೊಳ್ಳುತ್ತದೆ.
ಕೂರಾದ ಕೀವುಕುರು ಬೇಗನೆ ರೂಪಗೊಂಡು, ಒಂದೆರಡು ದಿನಗಳಲ್ಲಿ ಮೂತಿತೋರಿ ಕೊನೆಗೆ ಒಡೆಯಬಹುದು. ಇಲ್ಲವೇ ಹಾಗೆಯೇ ಇಂಗಿ ಹೋಗಬಹುದು. ಸಾಮಾನ್ಯವಾಗಿ ಇದು ವಾಸಿಯಾಗಲು 7-10 ದಿವಸಗಳು ಹಿಡಿಯುವುವು. ಇದು ಎದ್ದಾಗ ಬಿಸಿ, ನೋವು, ಕೆಂಪೇರಿಕೆ, ಹೊಳಪಿನ ಊದು, ಕೆಲವೇಳೆ ತುಸು ಜ್ವರ ಇರುವುವು.
ಕಣ್ಣಿನ ರೆಪ್ಪೆಯಲ್ಲಿ ಕುರು ಉಂಟಾಗುವುದು. ಕಣ್ಣುಗಳ ರೆಪ್ಪೆಗಳಲ್ಲಿ ಕಂಡು ಬರುವ ಇಂತಹ ಉರಿಯೂತ ಯಾವುದೇ ಚಿಕಿತ್ಸೆ ಇಲ್ಲದೆ ತನ್ನಿಂತಾನೇ ಕೆಲವೇ ದಿನಗಳಲ್ಲಿ ಪರಿಹಾರವಾಗುತ್ತದೆ.
ಕಣ್ಣಿನ ಮೇಲ್ಭಾಗದ ಹಾಗೂ ಕೆಳ ಭಾಗದ ರೆಪ್ಪೆಗಳ ಭಾಗಕ್ಕೆ ಹರಿದಿರುವ ಅತ್ಯಂತ ಸಣ್ಣ ಗ್ರಂಥಿಗಳು ಬ್ಲಾಕ್ ಆದರೆ ಅದರಲ್ಲಿ ಹರಿಯುವ ರಸಗಳು ಕಣ್ಣಿನ ರೆಪ್ಪೆಯ ಅಂಚಿನವರೆಗೆ ತಲುಪಿ ಅಲ್ಲಿ ಗುಳ್ಳೆಯ ಆಕಾರದಲ್ಲಿ ಕಣ್ಣಿನ ರೆಪ್ಪೆಯ ಸೂಕ್ಷ್ಮ ಚರ್ಮವನ್ನು ಊದಿಕೊಳ್ಳುವಂತೆ ಮಾಡುತ್ತದೆ. ಯಾರಿಗೆ ಮುಖದ ಭಾಗದಲ್ಲಿ ಮೊಡವೆಗಳು ಮತ್ತು ಇತ್ಯಾದಿ ಚರ್ಮವ್ಯಾಧಿ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತದೆ ಅಂತಹವರಿಗೆ ಈ ರೀತಿಯ ಸಮಸ್ಯೆ ಮಾಮೂಲಿ ಎಂದು ಹೇಳಬಹುದು. ಕಣ್ಣುಗಳ ಒಳ ಭಾಗದಲ್ಲಿ ಕಂಡು ಬರುವ ಕಣ್ಣುಗಳ ಸೋಂಕು ಹೊರ ಭಾಗದ ರೆಪ್ಪೆಗಳಲ್ಲಿ ಗುಳ್ಳೆಗಳು ಉಂಟಾಗುವಂತೆ ಮಾಡುವ ಸಾಧ್ಯತೆ ಇರುತ್ತದೆ.
ಕಣ್ಣಿನ ರೆಪ್ಪೆಗಳ ಗುಳ್ಳೆಗಳಿಗೆ ಸೂಕ್ತವಾದ ಚಿಕಿತ್ಸೆ ನೀಡಬೇಕು, ಕೆಲವೊಂದು ಸುಲಭ ಪರಿಹಾರಗಳು ಪ್ರಯತ್ನಿಸಿ ನೋಡಬಹುದು :
ಬೇವಿನ ಎಲೆಯ ರಸ ಮತ್ತು ಅರಿಶಿನ ಪುಡಿಯನ್ನು ಸೇರಿಸಿ ಪೇಸ್ಟ್ ತಯಾರಿಸಿ. ನಂತರ ಬಾಧಿತ ಭಾಗಕ್ಕೆ ಲೇಪಿಸಿ.
ಕಣ್ಣಿನ ಕುರುಗಳಿಗೆ ಶ್ರೀಗಂಧದ ಪೇಸ್ಟ್ ಅನ್ನು ಹಚ್ಚಿ. ಇದು ತಂಪಾಗಿಸುತ್ತದೆ ಮತ್ತು 2 ದಿನಗಳಲ್ಲಿ ಕುರು ಸಮಸ್ಯೆ ನಿವಾರಣೆಯಾಗುತ್ತದೆ.
ಉದ್ದಿನ ಬೇಳೆಯನ್ನು ನೀರಿನಲ್ಲಿ ನೆನೆಸಿ ಚೆನ್ನಾಗಿ ಅರೆದು ನುಣ್ಣಗೆ ಮಾಡಿ ಕುರದ ಬಾಯನ್ನು ಬಿಟ್ಟು ಸುತ್ತ ಹಚ್ಚಿ. ಬೆಳಗ್ಗೆ ರಾತ್ರಿ ಪುನರಾವರ್ತಿಸಿ. ಮರುದಿನ ನಿಮ್ಮ ಕುರ ಬೆಳೆದು ಒಡೆದುಬಿಡುತ್ತದೆ. ನಂತರ ಎರಡು ದಿನದಲ್ಲಿ ಮಾಯವಾಗುತ್ತದೆ.
ಕಣ‍್ಣಿಗೆ ಬಾದಾಮಿಯನ್ನು ಹಚ್ಚಿದರೆ ಸಮಸ್ಯೆ ನಿವಾರಣೆಯಾಗುತ್ತದೆ. ಅದಕ್ಕಾಗಿ ಬಾದಾಮಿಯನ್ನು ಹಾಲಿನಲ್ಲಿ ನೆನೆಸಿ ಬಳಿಕ ಪೇಸ್ಟ್ ತಯಾರಿಸಿ ಕುರು ಮೇಲೆ ಹಚ್ಚಿ.
ದಿನಾ ಬೆಳಗ್ಗೆ ಖಾಲಿ ಹೊಟ್ಟೆಗೆ ತುಪ್ಪ ಮತ್ತು ಸಕ್ಕರೆಯನ್ನು ಸಮ ಪ್ರಮಾಣದಲ್ಲಿ ಬೆರೆಸಿ ತಿಂದರೂ ಕುರ ಕಡಿಮೆ ಆಗುತ್ತೆ. ಬಾಳೆ ದಿಂಡಿನ ಪಲ್ಯ ಸೇವನೆಯಿಂದ ಕುರ ಶಮನವಾಗುತ್ತದೆ.
ನೀರು ಕುದಿಯುವಾಗ ಅದಕ್ಕೆ ರಾಗಿಹಿಟ್ಟು, ಮೆಂತೆ ಕಾಳಿನ ಹಿಟ್ಟು ಮತ್ತು ಅರಿಶಿನ ಸೇರಿಸಿ ಕಲೆಸಿ ಗಟ್ಟಿಯಾದ ಕೂಡಲೇ ಅದನ್ನು ಬಟ್ಟೆಯ ಮೇಲೆ ಸವರಿ ಬಿಸಿಯಾಗಿರುವಾಗ ಕುರದ ಮೇಲೆ ಲೇಪಿಸಿ.
ಒಂದು ಒದ್ದೆ ಬಟ್ಟೆಯನ್ನು ಸ್ವಲ್ಪ ಬಿಸಿ ಮಾಡಿ ಕಣ್ಣಿನ ರೆಪ್ಪೆಯಲ್ಲಿ ಗುಳ್ಳೆ ಉಂಟಾಗಿರುವ ಭಾಗಕ್ಕೆ ಒತ್ತಿಕೊಳ್ಳುವ ಮೂಲಕ ನೋವನ್ನು ಮತ್ತು ರೆಪ್ಪೆಯ ಊತವನ್ನು ಕಡಿಮೆ ಮಾಡಿಕೊಳ್ಳಬಹುದು.
ಹರಳೆಣ್ಣೆ ಕೂಡ ಕುರುಗಳ್ನು ಸಂಪೂರ್ಣವಾಗಿ ನಿವಾರಿಸುತ್ತದೆ. ಹಾಗಾಗಿ ಕಣ‍್ಣಿನ ಕುರುಗಳಿಗೆ ಹರಳೆಣ್ಣೆಯನ್ನು ಹಚ್ಚಿದರೆ 2 ದಿನಗಳಲ್ಲಿ ಕುರು ಮಾಯವಾಗುತ್ತದೆ.
ಉಗುರುಬೆಚ್ಚಗಿರುವ ನೀರಿನಲ್ಲಿ ಸ್ವಲ್ಪ ಅರಿಶಿನವನ್ನು ಮಿಕ್ಸ್ ಮಾಡಿ ಹತ್ತಿಯ ಸಹಾಯದಿಂದ ಕಣ್ಣುಗಳನ್ನು ತೊಳೆಯಿರಿ. ಇದನ್ನು 3-4 ಬಾರಿ ಮಾಡಿದರೆ ಸಮಸ್ಯೆ ಪರಿಹಾರವಾಗುತ್ತದೆ.
ಜೀವಿವಿರೋಧಕಗಳನ್ನು ಕೊಡುವುದರಿಂದ ಕೀವುಕುರು ಏಳದಂತೆ ಮಾಡಬಹುದು. ಕೀವುಕರು ಬೇಗನೆ ವಾಸಿಯಾಗುವಂತೆ ಬೆಚ್ಚಾರ ಕೊಡಬೇಕು. ಆಮೇಲೆ ಮೇಲಕ್ಕೆ ಮೂತಿ ಇಡುವೆಡೆಯನ್ನು ಗುರುತಿಸಿ ಕೊಯ್ದು ಕೀವನ್ನು ಹೊರಡಿಸಬಹುದು. ಕೀವು ಸುರಿದುಹೋಗಿ ಮತ್ತೆ ಸೊಂಕು ಹತ್ತದಂತೆ ಮುದ್ದುಗಳನ್ನು ಹಾಕಿ ಗಾಯಪಟ್ಟಿ ಕಟ್ಟಬೇಕು. ಮೊಗ, ಕೀಲಿನ ಬಳಿ, ಎದೆ ಹೊಟ್ಟೆಗಳ ಮೇಲೆ, ಕೊರಳು ಈ ತಾವುಗಳಲ್ಲಿ ಕೀವುಕುರು ಎದ್ದರೆ ಕೂಡಲೇ ಚಿಕಿತ್ಸೆ ಮಾಡಿ ಜೀವಾಳದ ಅಂಗಗಳಿಗೆ ಹರಡುವುದನ್ನು ತಪ್ಪಿಸಬೇಕು.
ಧನ್ಯವಾದಗಳು.
GIPHY App Key not set. Please check settings