in

ಫೆಬ್ರವರಿ 1 ರಂದು, ಭಾರತೀಯ ಮೂಲದ ಗಗನಯಾತ್ರಿ ಕಲ್ಪನಾ ಚಾವ್ಲಾ ಅವರ ನಿಧನರಾದ ದಿನ

ಕಲ್ಪನಾ ಚಾವ್ಲಾ ಅವರ ನಿಧನರಾದ ದಿನ
ಕಲ್ಪನಾ ಚಾವ್ಲಾ ಅವರ ನಿಧನರಾದ ದಿನ

ಕಲ್ಪನಾ ಚಾವ್ಲ ಮೊದಲ ಭಾರತ ಸಂಜಾತ ಮಹಿಳಾ ಗಗನಯಾತ್ರಿ ಹಾಗೂ ಅಮೆರಿಕನ್ ಪ್ರಜೆ. ಅಂತರಿಕ್ಷ ನೌಕೆ ಕೊಲಂಬಿಯಾ ಭೂವಾತಾವರಣದಲ್ಲಿ ಸುಟ್ಟು ಭಸ್ಮವಾದಾಗ ಮಡಿದ ಏಳು ಗಗನಯಾತ್ರಿಗಳಲ್ಲಿ ಒಬ್ಬರು.

೧೯೬೨ ಮಾರ್ಚ್, ೧೭ ರಂದು ಹರಿಯಾಣದಲ್ಲಿನ ಕರ್ನಾಲ್ ಎಂಬ ಊರಿನಲ್ಲಿ ಜನಿಸಿದ ಕಲ್ಪನಾ ಚಾವ್ಲ, ೧೯೮೨ರಲ್ಲಿ ಪಂಜಾಬ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ತಮ್ಮ ಪದವಿಯ ಶಿಕ್ಷಣ ಮುಗಿಸಿದರು. ನಂತರ ಸ್ನಾತಕೋತ್ತರ ಶಿಕ್ಷಣವನ್ನು ಅಮೇರಿಕಾ ದೇಶದಲ್ಲಿ ಅಧ್ಯಯನ ಮಾಡಿದರು. ಅಮೇರಿಕನ್ ಪ್ರಜೆ ಜಾನ್ ಪಿಯರೆ ಹಾರಿಸನ್ ಅವರನ್ನು ವಿವಾಹವಾದರು.

ಫೆಬ್ರವರಿ ೫ ೨೦೦೩ ರಂದು ಭಾರತದ ಪ್ರಧಾನ ಮಂತ್ರಿಗಳು ಉಪಗ್ರಹ “ಮೆಟ್ ಸ್ಯಾಟ್” ಉಪಗ್ರಹ ಸರಣಿಯನ್ನು “ಕಲ್ಪನಾ” ಎಂದು ಮರುನಾಮಕರಣ ಮಾಡುವ ಘೋಷಣೆಯನ್ನು ಮಾಡಿದರು.

ಫೆಬ್ರವರಿ 1 ರಂದು, ಭಾರತೀಯ ಮೂಲದ ಗಗನಯಾತ್ರಿ ಕಲ್ಪನಾ ಚಾವ್ಲಾ ಅವರ ನಿಧನರಾದ ದಿನ
ಕಲ್ಪನಾ ಚಾವ್ಲ ಪತಿ

ಫೆಬ್ರವರಿ 1 ರಂದು ಭಾರತೀಯ ಮೂಲದ ಗಗನಯಾತ್ರಿ ಕಲ್ಪನಾ ಚಾವ್ಲಾ ಅವರ ನಿಧನರಾದ ದಿನ, ಅವರು ಬಾಹ್ಯಾಕಾಶಕ್ಕೆ ಹೋದ ಭಾರತೀಯ ಮೂಲದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದ ಖ್ಯಾತಿಯನ್ನು ಹೊಂದಿದ್ದಾರೆ.

ಕಲ್ಪನಾ ಭಾರತದಲ್ಲಿದ್ದಾಗ, ಅವರು ಕರ್ನಾಲ್ ಅವರ ಟ್ಯಾಗೋರ್ ಬಾಲ್ ನಿಕೇತನ್ ಶಾಲೆಯಲ್ಲಿ ವಿದ್ಯಾರ್ಥಿಯಾಗಿದ್ದರು. ಕಲ್ಪನಾ ಅವರ ಕೋರಿಕೆಯ ಮೇರೆಗೆ ಬೇಸಿಗೆ ಬಾಹ್ಯಾಕಾಶ ಅನುಭವ ಕಾರ್ಯಕ್ರಮದಲ್ಲಿ ಭಾಗವಹಿಸಲು ನಾಸಾ ಶಾಲೆ ಆಹ್ವಾನಿಸಿತು. 1998 ರಿಂದ, ಪ್ರತಿ ವರ್ಷ ಇಬ್ಬರು ವಿದ್ಯಾರ್ಥಿಗಳು ನಾಸಾಗೆ ಭೇಟಿ ನೀಡುತ್ತಿದ್ದರು. ಕಲ್ಪನಾ ಅವರಿಗೆ ತಮ್ಮ ನಿವಾಸದಲ್ಲಿ ಊಟಕ್ಕೆ ಆತಿಥ್ಯ ನೀಡುತ್ತಿದ್ದರು.

೧೯೯೫ ರಲ್ಲಿ ಕಲ್ಪನಾ, ಅಮೇರಿಕಾದಲ್ಲಿನ ನಾಸಾ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯನ್ನು ಸೇರಿದರು. ೧೯೯೭ ರ ನವೆಂಬರ್ ೧೯ ರಂದು ಇವರ ಮೊದಲ ಬಾಹ್ಯಾಕಾಶಯಾನ ಪ್ರಾರಂಭವಾಯಿತು. ನಂತರ ಬಾಹ್ಯಾಕಾಶ ಸಂಶೋಧನೆಗೆ ಸಂಬಂಧಿಸಿದಂತೆ ಸುಮಾರು ೮೦ ಸಂಶೋಧನೆಗಳಲ್ಲಿ ಕಲ್ಪನಾ ನಿರತರಾಗಿದ್ದರು.

ನ್ಯೂಯಾರ್ಕ್ ನಗರದ ಜಾಕ್ಸನ್ ಹೈಟ್ಸ್ ವಲಯದ “ಲಿಟಲ್ ಇಂಡಿಯಾ” ಪ್ರದೇಶದ ೭೪ನೇ ರಸ್ತೆಯನ್ನು “ಕಲ್ಪನಾ ಚಾವ್ಲಾ ಪಥ” ಎಂದು ಹೆಸರಿಸಲಾಗಿದೆ.

1991ರ ಏಪ್ರಿಲ್ ನಲ್ಲಿ ಅವರಿಗೆ ಅಮೇರಿಕಾದ ಪೌರತ್ವ ದೊರಕಿತು. ಬಳಿಕ ಅವರು ನಾಸಾದಲ್ಲಿಯೇ ಗಗನಯಾತ್ರಿಯಾಗಲು ಅರ್ಜಿ ಸಲ್ಲಿಸಿದರು. ಆದರೆ ಅವರ ಅರ್ಜಿ ಮಂಜೂರಾಗಲು ನಾಲ್ಕು ವರ್ಷ ಕಾಯಬೇಕಾಯಿತು. 1995ರಲ್ಲಿ ಅವರಿಗೆ ಗಗನಯಾತ್ರಿಯಾಗುವ ಅವಕಾಶ ದೊರಕಿತು. ಪ್ರಾಥಮಿಕ ತರಬೇತಿಯ ಬಳಿಕ 1996ರಲ್ಲಿ ಅವರು ಪ್ರಥಮವಾಗಿ ಭೂಮಿಯ ಕಕ್ಷೆಯಿಂದ ಹೊರಹೋಗಲು ಅವಕಾಶ ದಕ್ಕಿತು.

ಕಲ್ಪನಾ ಎಂ ಎಸ್ ಸಿ ಡಿಗ್ರಿ ಪಡೆದ ಟೆಕ್ಸಾಸ್ ವಿಶ್ವವಿದ್ಯಾಲಯ ದ ಒಂದು ಹಾಸ್ಟೆಲ್ ಗೆ ಕಲ್ಪನಾ ಚಾವ್ಲಾ ಹೆಸರಿಡಲಾಗಿದೆ.

ಅಂದು, 2003, ಫೆ 1ರ ಶನಿವಾರ, ಟೀವಿಗಳಲ್ಲಿ ಬ್ರೇಕಿಂಗ್ ನ್ಯೂಸ್ ಎಂದು ಬಿತ್ತರವಾಗಿದ್ದು ನಾಸಾದ ಸ್ಪೇಸ್ ಶಟಲ್ ಗಗನನೌಕೆಯೊಂದು ಹಿಂದಿರುತ್ತಿರುವಾಗ ಆಗಸದಲ್ಲಿಯೇ ಹೊತ್ತಿ ಉರಿದು ಅದರಲ್ಲಿದ್ದ ಒಟ್ಟು ಏಳು ಗಗನಯಾತ್ರಿಗಳು ವಿಧಿವಶರಾದ ವಿಷಯ.

ಬಾಹ್ಯಾಕಾಶ ನೌಕೆ ಕೊಲಂಬಿಯಾ ಭೂಮಿಯ ವಾತಾವರಣಕ್ಕೆ ಪ್ರವೇಶಿಸುತ್ತಿದ್ದಾಗ ಕಲ್ಪನಾ ಚಾವ್ಲಾ ಮತ್ತು ಇತರ ಆರು ಸಿಬ್ಬಂದಿ ಮೃತಪಟ್ಟರು. ಬಾಹ್ಯಾಕಾಶ ನೌಕೆ ಕೊಲಂಬಿಯಾ ಯುಎಸ್ ನಿಗದಿತ ಟೆಕ್ಸಾಸ್ ಮೇಲೆ ತಮ್ಮ ನಿಗದಿತ ಇಳಿಯುವಿಕೆಗೆ 16 ನಿಮಿಷಗಳ ಮೊದಲು ವಿಭಜನೆಯಾಯಿತು. ಕಲ್ಪನಾ ಮತ್ತು ಅವಳ ಸಿಬ್ಬಂದಿ ಸದಸ್ಯರ ಅವಶೇಷಗಳನ್ನು ಗುರುತಿಸಲಾಗಿದೆ. ಕಲ್ಪನಾ ಅವರ ಇಚ್ಚೆಯಂತೆ, ಅವಳ ಅವಶೇಷಗಳು ಉತಾಹ್‌ನ ಜಿಯಾನ್ ರಾಷ್ಟ್ರೀಯ ಉದ್ಯಾನದಲ್ಲಿ ಅಂತ್ಯಕ್ರಿಯೆ ಮಾಡಲಾಗಿದೆ. 

ಫೆಬ್ರವರಿ 1 ರಂದು, ಭಾರತೀಯ ಮೂಲದ ಗಗನಯಾತ್ರಿ ಕಲ್ಪನಾ ಚಾವ್ಲಾ ಅವರ ನಿಧನರಾದ ದಿನ
ಬಾಹ್ಯಾಕಾಶ ನೌಕೆ ಕೊಲಂಬಿಯಾ ಭೂಮಿಯ ವಾತಾವರಣಕ್ಕೆ ಪ್ರವೇಶಿಸುತ್ತಿದ್ದಾಗ ಕಲ್ಪನಾ ಚಾವ್ಲಾ ಮತ್ತು ಇತರ ಆರು ಸಿಬ್ಬಂದಿ ಮೃತಪಟ್ಟರು

ಕಲ್ಪನಾ ಗಗನಯಾತ್ರಿಯಾಗಿರುವ ಎರಡನೆಯ ಭಾರತೀಯರು ಮತ್ತು ಪ್ರಥಮ ಭಾರತೀಯ ಮಹಿಳೆಯಾಗಿದ್ದಾರೆ. ನಾಸಾದ ಉನ್ನತ ಹುದ್ದೆಯಲಂಕರಿಸಿ ಕೆಲವು ಗಗನಯಾತ್ರೆಗಳನ್ನು ಪೂರೈಸಿ ಅಮೇರಿಕಾ ಮತ್ತು ಭಾರತದ ಗೌರವವನ್ನು ಇನ್ನಷ್ಟು ಹೆಚ್ಚಿಸಿದ ಖ್ಯಾತಿ ಪಡೆದಿದ್ದಾರೆ. ತಮ್ಮ ಸ್ವದೇಶದ ಬಗ್ಗೆ ಅಪಾರ ಹೆಮ್ಮೆ ಮತ್ತು ಗೌರವವಿರಿಸಿಕೊಂಡಿದ್ದ ಇವರು ಸಾವಿರಾರು ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾರೆ.

ಈ ಯಾತ್ರೆಯಲ್ಲಿ ಸ್ಪಾರ್ಟಾನ್ ಉಪಗ್ರಹ ಎಂಬ ವ್ಯವಸ್ಥೆ ಕೆಟ್ಟು ಹೋಗಿ ಅದನ್ನು ರಿಪೇರಿಗೊಳಿಸಲು ಆರು ಗಗನಯಾತ್ರಿಗಳ ಪೈಕಿ ಇಬ್ಬರಾದ ವಿನ್ಸ್ಟನ್ ಸ್ಕಾಟ್ ಮತ್ತು ಟಾಕಾವೋ ಡೋಯಿ ಯವರು ನೌಕೆಯಿಂದ ಹೊರಹೋಗಬೇಕಾಗಿ ಬಂದಿತ್ತು. ಈ ತೊಂದರೆಗೆ ಕಲ್ಪನಾರವರೇ ಕಾರಣ ಎಂದು ಗೂಬೆ ಕೂರಿಸಲಾಯ್ತು. ಆದರೆ ಹಿಂದಿರುಗಿದ ಬಳಿಕ ಐದು ತಿಂಗಳವರೆಗೆ ನಾಸಾ ಅತ್ಯಂತ ಕಠಿಣವಾದ ತನಿಖೆಯನ್ನು ನಡೆಸಿ ಬಳಿಕ ಈ ತೊಂದರೆಗೆ ಕಲ್ಪನಾರವರು ಕಾರಣರಲ್ಲವೆಂದೂ ನೆಲದಿಂದ ಸಾಫ್ಟ್ ವೇರ್ ಸೂಚನೆಗಳನ್ನು ಗಗನಕ್ಕೆ ಕಳಿಸುವಾಗ ಮತ್ತು ಅದನ್ನು ಸ್ವೀಕರಿಸುವಾಗ ಎಲ್ಲೋ ಕೆಲವು ಸಂಕೇತಗಳು ಬಿಟ್ಟುಹೋಗಿ ತಪ್ಪಾದ ಸಂಕೇತವೆಂದು ಗಗನಯಾತ್ರಿಗಳು ಅರ್ಥೈಸಿಕೊಂಡಿದ್ದ ಆದ ಪ್ರಮಾದ ಎಂದು ತೀರ್ಪು ನೀಡಿತು.

ಕಲ್ಪನಾರವರು ಬಳಸುತ್ತಿದ್ದ ಗಗನಯಾತ್ರಿಯ ಉಡುಪು ಮೊದಲಾದವುಗಳನ್ನು, ಅವರ ಪ್ರಶಸ್ತಿ ಮತ್ತು ಫಲಕಗಳನ್ನು ನಾಸಾದ ಸಂಗ್ರಹಾಲಯದಲ್ಲಿ ಪ್ರದರ್ಶನಕ್ಕಿಡಲಾಗಿದೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಶಿವನ ಭಕ್ತರು ತಮ್ಮ ಇಷ್ಟಾರ್ಥಗಳನ್ನು ಮೊದಲಿಗೆ ನಂದಿಗೆ ಹೇಳಿದರೂ ಸಾಕು

ಶಿವನ ಭಕ್ತರು ತಮ್ಮ ಇಷ್ಟಾರ್ಥಗಳನ್ನು ಮೊದಲಿಗೆ ನಂದಿಗೆ ಹೇಳಿದರೂ ಸಾಕು ಅದು ಪರಶಿವನಿಗೆ ತಲುಪುತ್ತದೆ

ಕಣ್ಣಿನಲ್ಲಿ ಕುರು

ಕಣ್ಣಿನಲ್ಲಿ ಕುರು ಕಂಡುಬಂದರೆ ಸುಲಭ ಪರಿಹಾರಗಳು