in ,

ದೊಡ್ಡ ಮೆಣಸಿನ ಕಾಯಿ, ವಿಟಮಿನ್ ಸಿ ಅಧಿಕವಾಗಿದೆ ಇದರಲ್ಲಿ

ದೊಡ್ಡ ಮೆಣಸಿನ ಕಾಯಿ
ದೊಡ್ಡ ಮೆಣಸಿನ ಕಾಯಿ

ಕ್ಯಾಪ್ಸಿಕಂ ಎಂಬುದು ಸೊಲನಾಸಿಯ ಎಂದು ಕರೆಯುವ ಸೊಲೇನಮ್ ಕುಟುಂಬದಲ್ಲಿ ಹೂ ಬಿಡುವ ಸಸ್ಯದ ಜಾತಿಯಾಗಿದೆ. ಇದರ ಜಾತಿಗಳು ಅಮೇರಿಕಾ ಮೂಲದ್ದಾಗಿವೆ. ಇವುಗಳನ್ನು ನೂರಾರು ವರ್ಷಗಳ ಕಾಲ ಅಮೇರಿಕಾದ ಉಷ್ಣವಲಯದ ಜನರು ಬೆಳೆದಿದ್ದಾರೆ. ಅಲ್ಲದೇ ಈಗ ಇವುಗಳನ್ನು ಪ್ರಪಂಚದಾದ್ಯಂತ ಬೆಳೆಯಲಾಗುತ್ತಿದೆ. ಇದನ್ನು ದೊಣ ಮೆಣಸಿನಕಾಯಿಯೂ ಎನ್ನಲಾಗುತ್ತದೆ. ದೊಡ್ಡ ಇದರ ತತ್ಭವ ರೂಪ ದೊಣ ಕ್ಯಾಪ್ಸಿಕಂ ನ ಕೆಲವು ಜಾತಿಗಳನ್ನು ಸಂಬಾರ ಪದಾರ್ಥಗಳಾಗಿ, ತರಕಾರಿಗಳಾಗಿ ಮತ್ತು ಔಷಧಿಗಳಾಗಿ ಬಳಸಲಾಗುತ್ತದೆ. ಕ್ಯಾಪ್ಸಿಕಂ ಸಸ್ಯಗಳ ಹಣ್ಣು ಗಳನ್ನು ಅವುಗಳ ವಿಧ ಮತ್ತು ಸ್ಥಳವನ್ನು ಆಧರಿಸಿ ವಿವಿಧ ಹೆಸರುಗಳಿಂದ ಕರೆಯಲಾಗುತ್ತದೆ. ಇವುಗಳನ್ನು ಸಾಮಾನ್ಯವಾಗಿ ಚಿಲಿ ಪೆಪರ್, ದೊಣ್ಣೆ ಮೆಣಸಿನಕಾಯಿ, ಹಣ್ಣು ಮೆಣಸು ಅಥವಾ ಹಸಿ ಮೆಣಸು ಅಥವಾ ಬ್ರಿಟನ್ ನಲ್ಲಿ ಸಿಹಿ ಮೆಣಸು ಹಾಗು ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಮತ್ತು ಭಾರತೀಯ ಇಂಗ್ಲೀಷ್ ನಲ್ಲಿ ಸಾಂಕೇತಿಕವಾಗಿ ಕೇವಲ ಕ್ಯಾಪ್ಸಿಕಂ ಎಂದು ಕರೆಯಲಾಗುತ್ತದೆ. ಇದರ ಮೃದುವಾದ ಅತ್ಯಂತ ದೊಡ್ಡ ರೂಪವನ್ನು ಅಮೇರಿಕ ಸಂಯುಕ್ತ ಸಂಸ್ಥಾನ ಮತ್ತು ಕೆನಡಾ ದಲ್ಲಿ ಬೆಲ್ ಪೆಪರ್, ದೊಡ್ಡ ಮೆಣಸಿನಕಾಯಿ ಎಂದು ಕರೆಯಲಾಗುತ್ತದೆ . ಇವುಗಳನ್ನು ಇತರ ರಾಷ್ಟ್ರಗಳಲ್ಲಿ ಪಪ್ರೀಕ, ಕೆಂಪು ಮೆಣಸು ಎಂದು ಕೂಡ ಕರೆಯಲಾಗುತ್ತದೆ. ಆದರೂ ಪಪ್ರೀಕ ಅನೇಕ ಕ್ಯಾಪ್ಸಿಕಂ ಹಣ್ಣಿನಿಂದ ಮಾಡಲಾದ ಮಸಾಲೆ ಪುಡಿಯನ್ನೂ ಕೂಡ ಸೂಚಿಸಬಲ್ಲದು.

ಚಿಲಿ ಎಂಬ ಮೂಲ ಮೆಕ್ಸಿಕನ್ ಪದ , ಮೆಕ್ಸಿಕೊದಲ್ಲಿ ಈಗ ಚಿಲೆ ನಹೌತಲ್ ನ ಚಿಲಿ ಅಥವಾ ಕ್ಸಿಲಿ ಎಂಬ ಪದದಿಂದ ಬಂದಿದೆ. ಇದು 3000 BC ಯಲ್ಲಿ ಬೆಳೆದಿರಬಹುದಾದ ಬೃಹತ್ ಪ್ರಮಾಣದ ಕ್ಯಾಪ್ಸಿಕಂ ನ ಉಪಜಾತಿಯನ್ನು ಸೂಚಿಸುತ್ತದೆ. ಇದನ್ನು ಪ್ಯುಬ್ಲಾ ಮತ್ತು ಒಕ್ಸಾಕಾದ ಕುಂಬಾರಿಕೆ ಕೆಲಸ ನಡೆಯುವ ಸ್ಥಳಗಳಲ್ಲಿ ಕಂಡು ಬಂದಿರುವ ಅವಶೇಷಗಳ ಆಧಾರದ ಮೇಲೆ ನಿರ್ಧರಿಸಲಾಗಿದೆ.

ದೊಡ್ಡ ಮೆಣಸಿನ ಕಾಯಿ, ವಿಟಮಿನ್ ಸಿ ಅಧಿಕವಾಗಿದೆ ಇದರಲ್ಲಿ
ಕ್ಯಾಪ್ಸಿಕಂ

ಕ್ಯಾಪ್ಸಿಕಂ ನ ಹಣ್ಣುಗಳನ್ನು ಮತ್ತು ಮೆಣಸನ್ನು ಬೇಯಿಸಿ ಅಥವಾ ಹಸಿಯಾಗಿ ತಿನ್ನಬಹುದು. ಸಾಮಾನ್ಯವಾಗಿ C. ಅನ್ಯುಮ್ ಮತ್ತು C. ಫುರ್ಟೆಸಿನ್ಸ್ ಜಾತಿಗಳ ವಿಧಗಳನ್ನು ಅಡುಗೆಗೆ ಬಳಸಿದರೂ, ಇತರ ಕೆಲವೊಂದು ತಳಿಗಳನ್ನೂ ಕೂಡ ಅಡುಗೆಗೆ ಚೆನ್ನಾಗಿ ಬಳಸಲಾಗುತ್ತದೆ. ‘ಸಿ’ಕ್ಯಾಲ್ಸಿಯಮ್ ಒಳಗೊಂಡ ಇವುಗಳು ಚೀಸ್, ಮಾಂಸ ಅಥವಾ ಅಕ್ಕಿಯಂತಹ ಮಸಾಲೆ ತುಂಬಿ ಅಡುಗೆ ಮಾಡುವ ಪದಾರ್ಥಗಳಿಗೆ ತಕ್ಕದಾಗಿವೆ.

ಇವುಗಳನ್ನು ಹೆಚ್ಚಾಗಿ ಹಸಿಯಾದ ಮತ್ತು ಕತ್ತರಿಸಿರುವ ಎರಡೂ ರೀತಿಯ ಸಲಾಡ್ ನಲ್ಲಿಯೂ ಕೂಡ ಬಳಸಲಾಗುತ್ತದೆ. ಅಥವಾ ಕರಿದು ಮಾಡುವ ಅಡುಗೆಯಲ್ಲಿ ಅಥವಾ ಇತರ ಮಿಶ್ರಣದ ಅಡುಗೆಗಳಲ್ಲಿಯೂ ಬಳಸಲಾಗುತ್ತದೆ. ಅವುಗಳನ್ನು ತುಂಡು ತುಂಡಾಗಿ ಕತ್ತರಿಸಿ ಕರಿಯಬಹುದು, ಪೂರ್ತಿಯಾಗಿ ಅಥವಾ ಸ್ವಲ್ಪ ಭಾಗ ಮಾತ್ರವನ್ನು ಸುಡಬಹುದು; ಅಥವಾ ಅದನ್ನು ಕತ್ತರಿಸಿ ಸಾಲ್ಸಾ ಅಥವಾ ಇತರ ಸಾಸ್ ಗಳಲ್ಲಿ ಸೇರಿಸಬಹುದು.

ಅವುಗಳನ್ನು ಜ್ಯಾಮ್ ರೂಪದಲ್ಲಿ ಸಂರಕ್ಷಿಸಿಡಬಹುದು. ಅಥವಾ ಒಣಗಿಸಿ, ಉಪ್ಪಿನಕಾಯಿ ಹಾಕುವ ಮೂಲಕ ಅಥವಾ ಘನೀಕರಣದ ಮೂಲಕ ಸಂರಕ್ಷಿಸಿಡಬಹುದು. ಒಣಗಿದ ಮೆಣಸಿನಕಾಯಿಯನ್ನು ಸಂಪೂರ್ಣವಾಗಿ ಪೂರ್ವಸ್ಥಿತಿಗೆ ತರಲಾಗುವುದು ಅಥವಾ ಅದನ್ನು ಕುಟ್ಟಿ ಅಥವಾ ಪುಡಿ ಮಾಡಿ ಸಂಸ್ಕರಿಸಿಡಲಾಗುತ್ತದೆ.

ಉರಿಯೂತದಿಂದ ರಕ್ಷಿಸುವ ಪೋಷಕಾಂಶಗಳು ಸಮೃದ್ಧವಾಗಿವೆ. ಇದು ಗ್ಯಾಸ್ಟ್ರಿಕ್ ಸಮಸ್ಯೆ, ಕ್ಯಾನ್ಸರ್ ಅದರಲ್ಲೂ ಮುಖ್ಯವಾಗಿ ಅನ್ನನಾಳದ ಕ್ಯಾನ್ಸರ್, ಪ್ರಾಸ್ಟೇಟ್, ಗುಳ್ಳೆ, ಗರ್ಭ ಮತ್ತು ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತಾರೆ.

ಕ್ಯಾಪ್ಸಿಕಂ ವಿಟಮಿನ್ ಸಿ ಅಂಶಕ್ಕೆ ಅತ್ಯುತ್ತಮ ಮೂಲವಾಗಿದ್ದು ಅದು ಅತ್ಯಂತ ಆಂಟಿ ಆಕ್ಸಿಡೆಂಟ್ ಪರಿಣಾಮಕಾರಿಯಾಗಿದೆ. ಅದರಿಂದ ರಕ್ತನಾಳಗಳ, ಚರ್ಮದ, ಅಂಗಾಂಗಗಳ ಹಾಗೂ ಮೂಳೆಗಳ ಸಮಗ್ರತೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಕ್ಯಾಪ್ಸಿಕಂನ ನಿಯಮಿತ ಬಳಕೆಯಿಂದ ರಕ್ತಪಿತ್ತವ್ಯಾಧಿಯನ್ನು ತಡೆಯುತ್ತದೆ ಮತ್ತು ರೋಗದ ಸೋಂಕಿನಿಂದ ರಕ್ಷಣೆ ದೊರೆಯುತ್ತದೆ.

ದೊಡ್ಡ ಮೆಣಸಿನ ಕಾಯಿ, ವಿಟಮಿನ್ ಸಿ ಅಧಿಕವಾಗಿದೆ ಇದರಲ್ಲಿ
ಕ್ಯಾಪ್ಸಿಕಂ ಹೃದಯವನ್ನು ಆರೋಗ್ಯವಾಗಿರಿಸುವುದರ ಜತೆಗೆ ರಕ್ತದೊತ್ತಡವನ್ನೂ ನಿಯಂತ್ರಿಸುತ್ತದೆ

ಕ್ಯಾಪ್ಸಿಕಂನಲ್ಲಿ ಲೈಕೋಪೀನ್ ಮತ್ತು ಪೊಟ್ಯಾಸಿಯಮ್ ಸಮೃದ್ಧವಾಗಿದೆ. ಇದು ಹೋಮೋಸಿಸ್ಟೈನ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಕ್ಯಾಪ್ಸಿಕಂ ಹೃದಯವನ್ನು ಆರೋಗ್ಯವಾಗಿರಿಸುವುದರ ಜತೆಗೆ ರಕ್ತದೊತ್ತಡವನ್ನೂ ನಿಯಂತ್ರಿಸುತ್ತದೆ.

ದೇಹದಲ್ಲಿ ನೋವು ಅಥವಾ ಸೆಳೆತವಿದ್ದರೆ ಆಗ ನೀವು ಕ್ಯಾಪ್ಸಿಕಂ ಸೇವಿಸಲೇಬೆಕು. ಕ್ಯಾಪ್ಸಿಕಂ ಚರ್ಮದಲ್ಲಿ ಇರುವ ನೋವನ್ನು ಬೆನ್ನುಹುರಿ ತನಕ ತಲುಪಲು ಬಿಡುವುದಿಲ್ಲ. ದೇಹಕ್ಕೆ ಯಾವುದೇ ಹಾನಿ ಉಂಟು ಮಾಡದೆ ಇದು ನೋವು ನಿವಾರಕದಂತೆ ಕೆಲಸ ಮಾಡುವುದು.

ಕ್ಯಾಪ್ಸಿಕಂ ಜ್ಯೂಸ್ ಜಠರ ಮತ್ತು ಕರುಳಿನ ಕಾಯಿಲೆಗಳಾದ ಡಿಸ್ಪೆಪ್ಸಿಯಾ, ಅತಿಸಾರ ಮತ್ತು ಹುಣ್ಣುಗಳ ಅಪಾಯವನ್ನು ಕಡಿಮೆ ಮಾಡುತ್ತದೆ.

ಬಳಲಿಕೆ ಮತ್ತು ಆಯಾಸದಿಂದ ತೊಂದರೆಯಾಗುತ್ತಲಿದ್ದರೆ ಅವರು ಖಂಡಿತವಾಗಿಯೂ ತಮ್ಮ ಆಹಾರ ಕ್ರಮದಲ್ಲಿ ಕ್ಯಾಪ್ಸಿಕಂನ್ನು ಸೇರಿಸಲೇಬೇಕು. ಯಾಕೆಂದರೆ ಇದರಲ್ಲಿನ ಕೆಲವೊಂದು ಅಂಶಗಳು ಬಳಲಿಕೆ ಕಡಿಮೆ ಮಾಡುವುದು. ಇದು ದೇಹಕ್ಕೆ ಶಕ್ತಿ ನೀಡುವುದು ಮತ್ತು ದೇಹವು ಕ್ರಿಯಾಶೀಲವಾಗಿರುವಂತೆ ಮಾಡುವುದು.

ಕ್ಯಾಪ್ಸಿಕಂ ರಕ್ತದ ಹರಿವನ್ನು ಸುಧಾರಿಸುತ್ತದೆ. ಇದು ಕೂದಲು ಉದುರುವುದನ್ನು ಕಡಿಮೆ ಮಾಡುತ್ತದೆ. ಕ್ಯಾಪ್ಸಿಕಂ ಡೈಹೈಡ್ರೊ ಟೆಸ್ಟೋಸ್ಟೆರಾನ್ ಪರಿಣಾಮಗಳಿಂದ ಕೂದಲಿನ ಉದುರುವಿಕೆಯನ್ನು ನಿಯಂತ್ರಿಸುತ್ತದೆ.

ಇದು ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತದೆ. ಇವು ಸ್ವತಂತ್ರ ರಾಡಿಕಲ್ ವಿರುದ್ಧ ಹೋರಾಡುತ್ತವೆ. ಚರ್ಮದ ಸಮಸ್ಯೆಗಳನ್ನು ಕಡಿಮೆ ಮಾಡುವುದರ ಜತೆಗೆ. ವಯಸ್ಸಾದ ಚಿಹ್ನೆಗಳನ್ನು ಅಥವಾ ಚರ್ಮದ ಮೇಲಿನ ಸುಕ್ಕನ್ನು ಕಡಿಮೆ ಮಾಡುತ್ತದೆ.

ಬೊಜ್ಜು ಎನ್ನುವುದು ದೇಹದ ವಿನ್ಯಾಸವನ್ನೇ ಹಾಳು ಮಾಡಿ ಬಿಡುತ್ತದೆ. ಇಂತಹ ಬೊಜ್ಜು ದೇಹದವರು ಕ್ಯಾಪ್ಸಿಕಂ ತಿಂದರೆ ಒಳ್ಳೆಯದು. ಯಾಕೆಂದರೆ ಇದು ಚಯಾಪಚಯ ಹೆಚ್ಚಿಸುವುದು. ಇದರಲ್ಲಿ ಕ್ಯಾಲರಿ ಕಡಿಮೆ ಇರುವ ಕಾರಣದಿಂದಾಗಿ ತೂಕ ಇಳಿಸಲು ತುಂಬಾ ಸಹಕಾರಿ ಆಗುವುದು. ಇದರ ಜತೆಗೆ ಇದು ಕ್ಯಾಲರಿ ದಹಿಸಲು ನೆರವಾಗುತ್ತದೆ. ಹೃದಯಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಯಿದ್ದರೆ ಆಗ ನೀವು ಕ್ಯಾಪ್ಸಿಕಂ ಸೇವಿಸಲೇಬೇಕು.

ಕ್ಯಾಪ್ಸಿಕಂನಲ್ಲಿ ಬೀಟಾ ಕ್ಯಾರೋಟಿನ್ ಮತ್ತು ವಿಟಮಿನ್ ಸಿ ಅಧಿಕವಾಗಿರುತ್ತದೆ. ಇದು ಕಣ್ಣುಗಳ ದೃಷ್ಟಿ ಹೀನತೆಯನ್ನು ಕಡಿಮೆ ಮಾಡುತ್ತದೆ. ಅಲ್ಲದೆ ವಯಸ್ಸಾದಂತೆ ಉಂಟಾಗುವ ದೇಹಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಸಹನಿಯಂತ್ರಿಸುತ್ತದೆ.

ಕ್ಯಾಪ್ಸಿಕಂನಲ್ಲಿರುವ ಕೇನ್ ಎಂಬ ಪ್ರಮುಖ ಅಂಶವು ನೋವು ತಗ್ಗಿಸುವ ಗುಣಗಳನ್ನು ಹೊಂದಿದೆ ಮತ್ತು ಸಂಧಿವಾತ ಮತ್ತು ವಾಯುನೋವು ಇವುಗಳನ್ನು ತಡೆಯುವ ಶಕ್ತಿಯನ್ನು ಹೊಂದಿದೆ. ಅದರಿಂದ ಮಾಡಿಕೊಂಡ ಕ್ರೀಮ್ ಅಥವ ಮುಲಾಮಿನಿಂದ ನೋವು ಪೀಡಿತ ಸ್ಥಳಗಳಲ್ಲಿ ಲೇಪಿಸಿ ನೋವು ಕಡಿಮೆಮಾಡಬಹುದು.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

52 Comments

ಶ್ರೀ ರಾಘವೇಂದ್ರ ಸ್ವಾಮಿ ನೆಲೆಸಿರುವ ಪ್ರಸಿದ್ದ ಸ್ಥಳ

ಶ್ರೀ ರಾಘವೇಂದ್ರ ಸ್ವಾಮಿ ನೆಲೆಸಿರುವ ಪ್ರಸಿದ್ದ ಸ್ಥಳ ಮಂತ್ರಾಲಯ

ಹಿಂಗು

ಅಡುಗೆ ಘಮಕ್ಕೆ ಮಾತ್ರ ಅಲ್ಲ ಹಿಂಗು